"ಭಾರತೀಯ ಓದುಗರ ಸಂಖ್ಯೆಯ ಸಮೀಕ್ಷೆ" [IRS] ನಿಯಮಿತವಾಗಿ ಪತ್ರಿಕೆಗಳ ಪ್ರಸಾರ ಸಂಖ್ಯೆಯ ಬಗ್ಗೆ ಸಮೀಕ್ಷೆ ಮಾಡ್ತಾ ವರದಿಗಳನ್ನು ಹೊರತರುತ್ತಿರುತ್ತೆ. ಇದೀಗ 2010ರ ಮೊದಲ ಮೂರು ತಿಂಗಳ ವರದಿ ಪ್ರಕಟವಾಗಿದ್ದು ನಮ್ಮ ಕರ್ನಾಟಕ ಮತ್ತು ಬೆಂಗಳೂರಿಗೆ ಸಂಬಂಧಿಸಿದ ವರದಿ ಸಕ್ಕತ್ ಆಸಕ್ತಿ ಹುಟ್ಟಿಸುತ್ತಿದೆ ಗುರೂ! ಈ ವರದೀ ಆಧಾರದ ಮೇಲೆ ಏನ್ ತೀರ್ಮಾನಕ್ ಬರ್ಬೋದಪ್ಪಾ ಅಂದ್ರೆ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ನೂರಕ್ಕೆ ಮೂವತ್ತು ಮಾತ್ರಾ ಅನ್ನೋದು ಹಸೀಸುಳ್ಳು ಅಂತಾ. ಅದೆಂಗೇ ಅಂತೀರಾ?
ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ...
ಈ ವರದಿಯಂತೆ, ಕರ್ನಾಟಕದಲ್ಲಿ ಮಾರಾಟವಾಗೋ ಒಟ್ಟು ದಿನಪತ್ರಿಕೆಗಳಲ್ಲಿ ಮೊದಲ ಹತ್ತು ದಿನಪತ್ರಿಕೆಗಳ
ಓದುಗರ ಸಂಖ್ಯೆ ಸುಮಾರು 2.33 ಕೋಟಿಯಂತೆ. ಇದರಲ್ಲಿ ಕನ್ನಡ ಪತ್ರಿಕೆಗಳ ಸಂಖ್ಯೆ 2.03 ಕೋಟಿ... ಅಂದ್ರೆ ನೂರಕ್ಕೆ 89.80%.
ಹಾಗೇ ಬೆಂಗಳೂರಲ್ಲಿ ಮಾರಾಟವಾಗೋ ಪತ್ರಿಕೆಗಳ ಓದುಗರ ಸಂಖ್ಯೆ 44.46 ಲಕ್ಷಗಳು. ಇದ್ರಲ್ಲಿ ಕನ್ನಡದ ಪತ್ರಿಕೆಗಳನ್ನು ಓದೋರ ಸಂಖ್ಯೆ 30.79 ಲಕ್ಷ ಗುರೂ! ಇದರರ್ಥ ನೂರಕ್ಕೆ 69.25% ಜನ ಓದುಗರು ಕನ್ನಡ ಪತ್ರಿಕೇನೆ ಓದೋದು. ಇನ್ನು ಡೆಕ್ಕನ್ ಹೆರಾಲ್ಡ್, ಟೈಮ್ಸ್, ಹಿಂದೂ ಪತ್ರಿಕೆಗಳನ್ನು ಓದೋ ಕನ್ನಡಿಗರ ಲೆಕ್ಕಾನೂ ತೊಗೊಂಡ್ರೆ... ಬೆಂಗಳೂರಲ್ಲಿ ಕನ್ನಡದವರ ಸಂಖ್ಯೆ ನೂರಕ್ಕೆ ಏನಿಲ್ಲಾ ಅಂದ್ರೂ 80ಕ್ಕಿಂತ ಖಂಡಿತಾ ಹೆಚ್ಚು ಗುರೂ!
ಬೆಂಗಳೂರಲ್ಲಿ ಕನ್ನಡದೋರು ಕಮ್ಮೀ ಅನ್ನೋ ಹುನ್ನಾರ!
"ಬೆಂಗಳೂರಲ್ಲಿ ಕನ್ನಡದೋರು ನೂರಕ್ಕೆ ಮೂವತ್ತು ಜನದಷ್ಟಿದಾರೆ. ಇಲ್ಲಿ ಬೇರೆ ಭಾಷೆಯೋರೇ ಜಾಸ್ತಿ. ಹಾಗಾಗಿ ಇಲ್ಲಿನ ವ್ಯವಸ್ಥೆಗಳಲ್ಲಿ ಕನ್ನಡ ಇರಬೇಕು ಅಂತಾ ಒತ್ತಾಯಿಸಬೇಡಿ. ಬಸ್ಸುಗಳ ಬೋರ್ಡು, ಅಂಗಡಿಗಳ ಬೋರ್ಡು ಎಲ್ಲಾದ್ರಲ್ಲೂ ಕನ್ನಡ ಇರಬೇಕು ಅನ್ನಬೇಡಿ. ಇದು ಕಾಸ್ಮೋಪಾಲಿಟಿನ್ ಸಿಟಿ" ಅಂತೆಲ್ಲಾ ಪದೇ ಪದೇ ಎಗರಾಡೋರ ಕಣ್ಣು ಈಗಾದ್ರೂ ತೆರೆದೀತಾ? ಹಾಗೇನಾದ್ರೂ ಬೆಂಗಳೂರಲ್ಲಿ ಕನ್ನಡದೋರು ಕಮ್ಮಿ ಇದ್ದಿದ್ರೆ ಈ ಪಾಟಿ ಓದುಗರು ಇರಕ್ ಆಗ್ತಿತ್ತಾ? ನಮ್ಮ ಸರ್ಕಾರ, ಆಡಳಿತ ಯಂತ್ರಗಳೆಲ್ಲಾ ‘ಬೆಂಗಳೂರಲ್ಲಿ ಕನ್ನಡದೋರು ಅಲ್ಪಸಂಖ್ಯಾತರು’ ಅನ್ನೋ ಹುಸಿಯನ್ನು ನಂಬೋದು ಬಿಡ್ಲಿ. ನಮ್ಮ ನಾಡಲ್ಲಿ ಇನ್ನಾದ್ರೂ ವಲಸಿಗರಿಗಾಗಿ ವ್ಯವಸ್ಥೆ ಕಟ್ಟೋದ್ನ ನಿಲ್ಸಿ ಕನ್ನಡಿಗರಿಗಾಗಿ ವ್ಯವಸ್ಥೆ ಕಟ್ಟೊ ಕೆಲಸಕ್ಕೆ ಮುಂದಾಗಬೇಕಾಗಿದೆ. ಏನಂತೀರಾ ಗುರೂ?

13 ಅನಿಸಿಕೆಗಳು:
ಇದರಲ್ಲಿ ನನ್ನಂತಹ ಮಿಂಬಲೆಯಲ್ಲೇ ಕನ್ನಡದ ಸುದ್ದಿಹಾಳೆಗಳನ್ನೋದುವ ಮಂದಿಯನ್ನು ಎಣಿಸಿಕೊಂಡಿಹರ?
ಹೆಚ್ಚಿನ ಹೊರನಾಡ ಕನ್ನಡಿಗರು ಮಿಂಬಲೆಯಲ್ಲೇ ಕನ್ನಡದ ಸುದ್ದಿಹಾಳೆಗಳನ್ನೋದುವರು, ಹಾಗೆ ಬೆಂಗಳೂರಲ್ಲಿರುವ ಸಾವಿರಾರು ಕನ್ನಡ-ಐಟಿಗರು ಕೂಡ ಮಿಂಬಲೆಯಲ್ಲೇ ಸುದ್ದಿಯೋದುವರು.
ಇಂತಹ ಓದುಗರನ್ನು ಸೇರಿಸಿಕೊಂಡರೆ, ಕನ್ನಡದ ಸುದ್ದಿಹಾಳೆಗಳನ್ನೋದುವ ಮಂದಿಯ ಏಣಿಕೆಯು ಇನ್ನೂ ಹೆಚ್ಚು.
ಒಳ್ಳೆಯ ಸುದ್ದಿಯೆಡೆಗೊಯ್ದಿರಿ. ನನ್ನಿ.
ಸಂಖ್ಯೆ ಜಾಸ್ತಿಯಿದ್ದರೂ ಬೆಂಗಳೂರಿನಲ್ಲಿ ಮೂಕ ಪಶುಗಳಂತೆ ಬದುಕುತ್ತಿರುವ ಕನ್ನಡಿಗರನ್ನು ಎಚ್ಚೆರಿಸುವ ಒಳ್ಳೆಯ ಲೇಖನ ಇದು.
ದಟ್ಸ್‌ಕನ್ನಡದ ಶಾಮ್ ಅವರು ಈ ಸುದ್ದಿಯನ್ನು ಹಾಕಬೇಕಾಗಿ ವಿನಂತಿ.
-ಭಾಸ್ಕರ್
ಇದೊಂದು ಉತ್ತಮೋತ್ತಮ ಬೆಳವಣಿಗೆ. ಕನ್ನಡಿಗರಲ್ಲ್ಲಿ ಅಕ್ಷರ ಪ್ರೀತಿಯನ್ನುಂಟು ಮಾಡುತ್ತಿರುವ ವಿಶ್ವೇಶ್ವರ ಭಟ್ಟರ ವಿಜಯ ಕರ್ನಾಟಕ, ರವಿ ಬೆಳೆಗೆರೆಯ ಹಾಯ್ ಬೆಂಗಳೂರು, ಪ್ರಜಾವಾಣಿ ಮತ್ತು ಕನ್ನಡಪ್ರಭ ಉತ್ತಮ ಪತ್ರಿಕೆಗಳು.
ನೆನ್ನೆ ದಿ ಹಿಂದೂ ಪತ್ರಿಕೆಯಲ್ಲಿ ಒಂದು ಪುಟದಷ್ಟು ಜಾಹೀರಾತಿನಲ್ಲಿ ತಮಿಳುನಾಡಿನ ಕರುಣಾನಿಧಿಯವರು ಕಳೆದ ನಾಲ್ಕು ವರ್ಷಗಳ ತಮ್ಮ ಸಾಧನೆಯನ್ನು ನಮೂದಿಸಿಕೊಂಡಿದ್ದಾರೆ. ಅದರಲ್ಲಿ ೧೦ನೇ ತರಗತಿಯವರೆಗೂ ತಮಿಳು ಕಡ್ಡಾಯ ವೂ ಒಂದು. ನಮ್ಮಲ್ಲೂ ಹಾಗೆ ಕನ್ನಡವನ್ನು ಕಡ್ಡಾಯ ಮಾಡಲಿ.
ಕಣ್ತೆರೆಸುವ ವರದಿ.
ascharya kara suddi .. kannadigaru kannada mathadokke hinde munde nodo samayadalli...
karnataka reddy gala rajya aagiro samayadalli .. ascharyakara suddi
ಹೌದು ಗುರು ಅವರೇಳೋದು ಸರಿಯಾಗಿದೆ.
ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇದೆ ಅಂತ ಹೇಳೋದು ಬರಿ ಸುಳ್ಳು.
ಕನ್ನಡ ನಾಡಿನಲ್ಲಿ ಕನ್ನಡ ಭಾಷಿಕರ ಸಂಖ್ಯೆ ಹೆಚ್ಚಿರದೆ ಇನ್ಯಾರು ಇರೋಕಾಗ್ತದೆ?
ಕನ್ನಡಿಗರೇ ಇಲ್ಲದಿದ್ದ ಪಕ್ಷದಲ್ಲಿ ಖಾಸಗಿ ವಾಹಿನಿಯವರು ಹಿಂದಿ ಹಾಡುಗಳ ಕಡೆಯಿಂದ ಕನ್ನಡ ಹಾಡುಗಳ ಹಾಗೂ ಜಾಹೀರಾತುಗಳ ಕಡೆಗೆ ಏಕೆ ಮುಖ ಮಾಡುತ್ತಿದ್ದರು?
ಬಹಳ ಒಳ್ಳೆ ವರದಿ, ನಮ್ಮ ಕರ್ನಾಟಕ ಘನ ಸರ್ಕಾರ ಎಚ್ಚೆತ್ತುಕೊಂಡು ಕನ್ನಡ ರಕ್ಷಣೆ ಮತ್ತು ಅಭಿವೃದ್ದಿಗೆ ಹೆಚ್ಚಿನ ಮಹತ್ವ ಕೊಡಬೇಕು....
ಪೂರ್ಣಾನಂದ
Keli bahala khushi aaythu. Ellarallu ondu manavi, dayavittu innu munde yavude 'application form' athava pathrada vilasa (address) athava yavude bank and government form gallannu thumbuvaga Kannada balasi. Idarindagi Kannada gothiruva janakke kelasa siguthe, gothilladavaru Kannada kaliyuthare, haage Kannada gothilladavarige, Kannada barade illi badukalu kasta antha thiliyuthe.
Yella Kannadigaroo maneyalloo kaddayavagi ondu kannada pathrikege chandadaragabeku, maneyalli doddavarinda hididu sanna makkaLavaregoo kannada pathrikegaLannu prathinithya odabeku haagadalli kannada pathrikegala odugara sankhye innashtu hechchagutthe. Malayali Pathrike Malayala Manorama, Tamilu Pathrike Dina Thanthi, ivella odugara sankhyeyalli daakhaleyanne madive kannadada pathrikegeLu ee daakhaleyannu muriyabeku, adakke kannadigaru hechchagi kannada pathrikegaLannu oduvudu abhyasa madikoLLabeku.
sarkara nammanu bakra maduthide, nanu inalu Bmtc busnalli odaduthini, alli kanista enila andru 90 percent jana kannada mathaduthare, idu nanna 5 varushadha anubhava, andha beli bus gala nama palaka yake english nalli iruthade,
vijaya karnataka 11th position in all over INDIA!! Hurrah:
http://en.wikipedia.org/wiki/Print_media_in_India
Kannadigas reason to smile:
http://www.exchange4media.com/IRS2010Q1/FullstoryHT.asp?section_id=5&news_id=38084&tag=3713
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!