ಬೆಳಗಾವಿ ಚುನಾವಣೆಯಾಗ ಕನ್ನಡದ ಬಾವುಟ ಮತ್ತ ಪಟಪಟಿಸಲಿಕ್ಕ ಹತ್ತೇತ್ರಿ!

ಇಡೀ ಕರ್ನಾಟಕದಾಗ ಎಲ್ಲ ಕಡೀ ಮೊನ್ನಿ ಆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಂದೈತ್ರಿ. ಇದರ ಫಲಿತಾಂಶಕ್ಕ ಮಂದಿ ಉಸಿರ ಹಿಡ್ದು ಕಾಯಾಕ್ ಹತ್ತಿದ್ರೋ ಇಲ್ಲೋ ತಿಳೀವಲ್ದು. ಆದ್ರ ನಮ್ ಬೆಳಗಾವಿ ನಗರದಾಗ್ ಏನಾಗ್ತದಾ ಅಂತ ಚಾಮರಾಜ ನಗರದಿಂದ ಕಲ್ಬುರ್ಗಿ ಮಟ, ಬಳ್ಳಾರಿಯಿಂದ ಕಾರವಾರದ ಮಟ ನಮ್ ಕನ್ನಡ್ ಮಂದಿ ಭಾಳ ಕಾಯಾಕ್ ಹತ್ತಿದ್ ಮಾತ್ರಾ ಖರೆ ಐತಿ.

ಇಡೀ ಬೆಳಗಾವ್ಯಾಗ ಇರೋ 58 ಸ್ಥಾನದಾಗ, 27 ಕನ್ನಡ ಮಂದಿ ಪಾಲಾಗೈತಿ. ಎಮ್.ಇ.ಎಸ್. ಮಂದಿಗ 18 ಸಿಕ್ಕೈತಿ. ಬೆಳಗಾವೀನ್ ಮಾರಾಷ್ಟ್ರಕ್ ಸೇರ್ಸೋಣು ಅಂತ ಠರಾವ್ ಪಾಸ್ ಮಾಡಿದ್ದ ಮಾಜಿ ಮೇಯರ್ ವಿಜಯ್ ಮೋರೆ, ಶಿವಾಜಿ ಸುಂಠೇಕರ್, ಪ್ರಕಾಶ್ ಶಿರೋಳಗಿ...ಮುಸುಡಿಗೆ ಮತ್ ಮಸಿ ಬಳ್ದಿರೋದ್ ಅಂತೂ ಖರೇ ಐತಿ. ಹ್ಞಾಂ...ಈ ಸರ್ತಿ ಮಸಿ ಬಳ್ದಿರೋರು ಮಾತ್ರಾ ರಕ್ಷಣಾ ವೇದಿಕಿ ಮಂದಿ ಅಲ್ಲಾ ಮತ್ತಾ...

ವಾರ್ಡ್ ನಂ.15ರಾಗ ವಿಜಯ್ ಮೋರೆ ಮಣ್ ಮುಕ್ಕಿದ್ರಾ ಉಳಿದ್ ಕಡೀಗೆ ಶಿವಾಜಿ ಸುಂಠಕರ್, ಎಂ.ಇ.ಎಸ್. ನ ಬೆನ್ ಹಿಂದ ನಿಂತಿರೋ ಶಿವಸೇನಾದ ಪ್ರಕಾಶ್ ಶಿರೋಳ್ಕರ್, ಕನ್ನಡದವ್ರೇ ಆಗಿದ್ರೂ ಅಧಿಕಾರದ್ ಹಪಾಹಪಿಗ್ ಬಿದ್ದು ಎಂ.ಇ.ಎಸ್. ಮಂದೀನ್ ಒಳ್ಗೊಳ್ಗೇ ಬೆಂಬಲ ಕೊಟ್ಟು ಕನ್ನಡದ ಹಿತ ಕಡೆಗಣಿಸಿದ್ದ ಸುನಿಲ್ ಕುಡಚಿ... ಈ ಮಂದೀಗೆಲ್ಲಾ ನಮ್ ಬೆಳಗಾವಿ ಜನಾ ಛಲೋ ನೀರ್ ಇಳ್ಸಿದಾರ್ರೀ... ಯಪ್ಪಾ. ಮಸ್ತ್ ಅಂದ್ರ ಇದ್ರಾಗ್ ನಮ್ ಕನ್ನಡಾ ಮಂದಿ ಕೂಡ ಮರಾಠಿ ಮಂದೀನೂ ಅದಾರ ಮತ್ತಾ... ಮುಂದ ಬೆಳಗಾವೀನಾಗ್ ಯಾರೇ ಮೇಯರ್ ಆದ್ರೂ ಕನ್ನಡ ವಿರೋಧಿ ನಿರ್ಣಯ ಮಂಡ್ಸಕ್ ಆಗಂಗಿಲ್ಲ ಅನ್ನೋದೆ ನಮ್ ಜಯಾ ಕಣ್ರೀಪಾ...

ಈ ಸ್ಥಿತಿ ಎದುಕ್ ಬಂತಪಾ? ಇದಕ್ಕ ಪರಿಹಾರ ಏನಪಾ?

ಏನಾರ ಆಗ್ಲಿ, ಈಗ್ ನಮಗಾ ಇಂಥಾ 'ಹೋರಾಡ್ ಗೆಲ್ಲೋ' ಸ್ಥಿತಿ ಎದುಕ್ ಬಂತ್ ಅಂತ ಗೊತ್ತೇನು? ನಮ್ ಚೆನ್ನವ್ವ, ನಮ್ ರಾಯಣ್ಣ ಹುಟ್ಟಿದ್ ನಾಡಿನಾಗ ಇಂಥ ಸ್ಥಿತಿ ಎದುಕ್ ಬಂತಪಾ ಅಂತ ತುಸಾ ಚಿಂತಿ ಮಾಡೀರೇನು?

ವಲಸಿ ಕಣ್ರೀಯಪ್ಪಾ... ತಡೀ ಇಲ್ಲದ್ ವಲ್ಸಿ. ಹಾಂಗ್ ನಮ್ ಊರುಗಳಿಗೆ ಗುಳೆ ಬರೋ ಮಂದೀಗ ಭಾಳ ಕಾಳಜಿ ಮಾಡಿ ಅವರ ಭಾಷ್ಯಾಗೆ ಮಾತಾಡೊ ನಮ್ ಸೌಜನ್ಯ, ವಲ್ಸಿ ಬಂದ್ ಮಂದಿ ನಮ್ ನಮ್ ಕೂಡಾ ಬೆರೀಬೇಕು ಅನ್ನೋ ಅನಿವಾರ್ಯ ಹುಟ್ ಹಾಕ್ದೆ ಇರೋ ನಮ್ ದೊಡ್ ತನ... (ದಡ್ ತನಾ ಅಂತ ಓದ್ಕೊಳ್ರೀ ಯಪ್ಪಾ..) ಇದಾ ನೋಡ್ರಿ ಮೂಲ. ಒಂದ್ ಛಲೋ ಊರ್ ಐತಿ ಅಂದ್ರಾ ಬಾಜೂಕಿನ್ ಮಂದಿ ಹೊಟ್ಟೀಪಾಡ್ ಹುಡುಕ್ಕೊಂತಾ ಅಲ್ಲಿಗ್ ಬರೋದೈತಲ್ರೀ, ಹಾಂಗಾ ನಮ್ ಬೆಳಗಾವೀಗೂ ಮರಾಠಿ ಮಂದಿ ವಲಸಿ ಬಂದಾರ್ರೀ... ಬಂದ್ ಮಂದಿ ಇಡೀ ಬೆಳಗಾವೀನೆ ನಮ್ದ್ ಮಾಡ್ಕೋ ಬೇಕಂತಾ ಎಂ.ಇ.ಎಸ್ ಕಟಗೊಂಡ್, ಕನ್ನಡದವ್ರ ತಲೀನ ಧರ್ಮ ಅಂತ ಕೆಡ್ಸಿ ನಮ್ಮೋಲ್ಲೇ ಒಡುಕ್ ಹುಟ್ಸಿ ಬ್ಯಾಳೀ ಬೇಯ್ಸ್ಕೊಂತಿದ್ರು. ಇದಾ ಮೊದಲ್ರೀ.. ನಮ್ ಕನ್ನಡ್ ಮಂದಿ ಜಾತಿ, ಧರ್ಮ ಅನ್ನೂದ್ನೆಲ್ಲಾ ದೂರಾ ತಳ್ಳಿ ಕೆಂಪು ಹಳ್ದಿ ಬಾವುಟಾನ ಎತ್ ಹಿಡ್ದಿದ್ದು. ನೀವಾ ನೋಡ್ಲಿಕ್ ಹತ್ತೀರಲ್ಲಾ...ಹ್ಯಾಂಗ್ ಆತೂ ಅಂತಾ?

ನಾಳಿ ನಮ್ ಬೆಂಗಳೂರಿನಾಗ್ ನಗರ ಪಾಲಿಕೆ ಚುನಾವಣಿ ನಡೀಲಿಕ್ ಐತಿ. ವಲಸಿ ಬಂದ ಬ್ಯಾರೀ ಭಾಷೀ ಮಂದೀನ ಯಾವ್ ಪಾರ್ಟೀನು ನಿಲ್ಸಕ್ ಕೊಡೋದನ್ನು ನಾವೂ ನೀವೂ ಕೂಡಿ ತಡೀಬೇಕಾಗೈತಿ. ಹಾಗೂ ಯಾರಾನ ನಿಂತ್ರಂದ್ರ ಅಂಥ ಮಂದೀಗ್ ಮತ ಹಾಕೋಣಿಲ್ಲ ಅಂತ ಒಂದ್ ಛಲೋ ತೀರ್ಮಾನ ಮಾಡೋಣು... ಏನಂತೀ ಗುರೂ?

19 ಅನಿಸಿಕೆಗಳು:

Anonymous ಅಂತಾರೆ...

ವಿಜಯ್ ಮೋರೆ ಮಣ್ಣು ತಿಂದದ್ದ ಕೇಳಿ ಖುಷಿ ಆತ್ರೀ!! ಮಸಿ ಬಳದಿದ್ದ ಫೋಟೋ ಹಕ್ಕೊಂಡು ವೋಟ್ ಕೇಳಾಕ್ ಹೊಂಟಿದ್ದಾ ಈ ಮನಷ್ಯಾ...

ನಮ್ಮ ಬೆಳಗಾವಿಯೊಳಗ ಕನ್ನಡ ಅಭ್ಯರ್ಥಿಗಳ ಹಾಂಗ ಬೆಂಗಳೂರಿನ್ಯಾಗೂ ನಮ್ಮ ಜನಾ ಛಲೋ ಪ್ರದರ್ಶನಾ ಕೊಡ್ಲಿ ಅಂತ ಹಾರೈಸ್ತೇನಿ.

Anonymous ಅಂತಾರೆ...

ಅಬ್ಬಾಬ್ಬಾ... ಏನ್ ಛಲೋ ಕನ್ನಡ್ ದಾಗ್ ಬರ್ದೀರೀ ಯಪ್ಪಾ.. ಯಪ್ಪಾ... ನಮ್ಮೂರ್ ಭಾಷಾದಾಗ್ ನೀವ್ ಬರ್ದಿದ್ ಕಂಡ್ ಧಾರವಾಡ್ ಫೇಡಾ ತಿಂದ್ ಹಾಂಗ್ ಆತ್ರೀಪಾ...

Anonymous ಅಂತಾರೆ...

ನಮ್ಮೂರ್ ಭಾಷೆ ನಿಮ್ಮೂರ್ ಭಾಷೆ ಅಂತಿಲ್ಲ ಎಲ್ಲಾನು ಕನ್ನಡ ಅಷ್ಟೇ. ಮತ್ತೆ ಸುದ್ದಿ ತಿಳಿದು ಬಹಳ ಖುಶಿ ಆಯಿತು. ಇದೇ ರೀತಿ ನಮ್ಮ ಪ್ರಾದೇಶಿಕ ಜನರನ್ನ ಯಾವಾಗಲು ಬೆಂಬಲಿಸೋಣ.

Anonymous ಅಂತಾರೆ...

ನಮ್ಮೂರಿನ ಭಾಷೆ ನಿಮ್ಮೂರಿನ ಭಾಷೆ ಅಲ್ಲ. ನಮ್ಮ ನಿಮ್ಮ ಶೈಲಿ ಮತ್ತು ಧಾಟಿಗಳು. ನಮ್ಮ ನುಡಿ/ಭಾಷೆ ಒಂದೆ.

Unknown ಅಂತಾರೆ...

Chalo suddi,Odi bhala khushi aythu nodralaa

Anonymous ಅಂತಾರೆ...

ಶರಣ್ರಿ ಗುರುಗಳೇ,
ಅಗದಿ ಭೇಷ್ ವರದಿ ಹಾಕಿರಿ. ಇತ್ತಿಚಿನ ದಿನದಾಗ್ ನಮ್ಮ ಕನ್ನಡ ಮಂದಿಗ್ ಸಿಕ್ಕ ದೊಡ್ಡ ಗೆಲುವು ಇದು ಅಂತ ನನ್ನ ಅನಿಸಿಕೆ. ಎಲ್ಲಾ ಕಡೆ ಬರೇ ನಮ್ಮನ್ನ ತುಳಿಯು ಪ್ರಯತ್ನಗಳ ನಡಿತಿರೊ ಇಗಿನ ದಿನದಾಗ್ ನಾವೆಲ್ಲ ಕೂಡಿದ್ರ ಅದರ ಪರಿಣಾಮ್ ಎನ್ ಅನ್ನುದ ಅಗದಿ ಸ್ಪಷ್ಟವಾಗಿ ನಮ್ಮ ಮಂದಿ ಮುಂದ ಇಟ್ಟೆತಿ ಇ ಫಲಿತಾಂಶ. ಬೆಳಗಾವಿ ನಂತರ ಅಷ್ಟೆ ಮುಖ್ಯವಾಗಿ ಇ ಕೆಲ್ಸ ಆಗಬೇಕಾಗಿರುದು ನಮ್ಮ ಬೆಂಗಳೂರಾಗ್. ಬೆಂಗಳೂರಾಗ್ ನಡಿಯು ಎಲೆಕ್ಷನ್ ನಾಗ್ ನಮ್ಮ ಮಂದಿ ಹಿಂಗ ಕನ್ನಡದವರನ್ನ ಆರಸಿ ತಂದ್ರ ನಮ್ಮೂರಿನ ಸುಮಾರ್ ಸಮಸ್ಯೆ ದೂರ ಆಗತೇತಿ. ಇವತ್ತಿನ ಬರಹ ಓದಿ ಮನಸ್ಸು ಹಂಗ ದೀಪಾವಳಿ ಹಬ್ಬ ಮಾಡದಷ್ಟು ಖುಶಿ ಆಗೆತ್ರಿ ಸರ್..

Unknown ಅಂತಾರೆ...

ಮಸ್ತ್ ಸುದ್ದಿ ಕೊಟ್ಟಿರೀ ಯಾಪ್ಪ...

ಅಮೃತ ಅಂತಾರೆ...

Aa nan maklige m.... mele jhadisi oddankantu nodri!

Anonymous ಅಂತಾರೆ...

ಸಖತ್ ಹಾಟು ಮಗಾ

Anonymous ಅಂತಾರೆ...

ಹೌದ್ರಿ ಬಾಳ್ ಚಲೊ ಐತ್ರಿ .. ಅಲಲಾ .. ಹಿಂಗ ಎಲ್ಲ ಕಡ್ಯಾಗು ನಮ್ ಕನ್ನಡ ಜನ ಸಂಘಟಿತರಾದ್ರ ಅದ್ರ ಕೀಮತ್ ಬ್ಯಾರೆ ಇರ್ತದ್ರಿ ..
ಇದಕ್ಕ ಕ.ರಾ.ವೇ ಗ ಎಷ್ಟ್ ನಮಸ್ಕ್ರಾರ್ ಹೇಳಿದ್ರು ಸಾಲೊದಿಲ್ರಿ ..

-ಕರುಣಾ

Anonymous ಅಂತಾರೆ...

ಮೊನ್ನೆ ೧೭,೫೦೦ ಹಕ್ಕು ಪತ್ರಗಳನ್ನು ಸ್ಲಂ ನಿವಾಸಿಗಳಿಗೆ ಹಂಚಲಾಗಿದೆ. ನಂತರ ಹೊರಬಿದ್ದ ಪ್ರಕಟಣೆಯ ಪ್ರಕಾರ ೨ ಲಕ್ಶ ನಿವೇಷನಗಳನ್ನು ಹಾಗೂ ೫೦,೦೦೦ ಮನೆಗಳನ್ನೂ ವಿತರಿಸುವ ಯೋಜನೆ ಇದೆಯಂತೆ. ಇದಕ್ಕೆ ಸುಮಾರು ೪೦-೫೦ ಹಳ್ಳಿಗಳು ಹಳ್ಳ ಹಿಡಿಯಬಹುದು. ಸ್ಲಂ ನಿವಾಸಿಗಳು ಹಾಗೂ ಕಾರ್ಮಿಕವರ್ಗದಲ್ಲಿ ೮೦% ಕ್ಕೂ ಹೆಚ್ಚು ಜನ ವಲಸಿಗರು,ಕನ್ನಡೇತರರು. ಫಲಾನುಭವಿಗಳು ಯಾರು, ಅವರಿಂದ ಮುಂದಾಗುವ ಪರಿಣಾಮಗಳೇನು ಎಂಬುದನ್ನು ವಿವೇಚಿಸದೆ ಹೀಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಫಲವತ್ತಾದ ನೀರಾವರಿ ಜಮೀನುಗಳನ್ನು ಬಲಿಕೊಟ್ಟರೆ ಮುಂದಿನ ಪರಿಣಾಮಗಳೇನು?. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿ ಪ್ರಯೋಜನವೇನು? ಕನ್ನಡಿಗರು ಎಚ್ಚೆತ್ತು ಕೊಳ್ಳಲು ಎಷ್ಟು ಶತಮಾನಗಳು ಬೇಕು?

Anonymous ಅಂತಾರೆ...

ಹೀಗೆ ನಮ್ಮ ಹಳ್ಳಿಗಳನ್ನು ಹರಿದು ಹಂಚುತ್ತಾರೆ ಎಂದಿಟ್ಟ್ಟುಕೊಳ್ಳಿ. ಆಗ ಮುಂದೆ ಈ ಸ್ಲಂಗಳೇ ಬಿಹಾರಿ ಕಾಲೋನಿ, ಬೆಂಗಾಳಿ ಕಾಲೋನಿ, ಮರಾಠಿ ಕಾಲೋನಿ ಇತ್ಯಾದಿಗಳಾಗಿ ಮಾರ್ಪಡುತ್ತವೆ. (ಈಗ ಮುಂಬ್ಯ್ ನಲ್ಲಿ ಸಿಂಧಿ ಕಾಲೊನಿ, ಬಿಹಾರಿ ಕಾಲೊನಿ ಗಳಿರುವಂತೆ). ಕ್ರಮೇಣ ಈ ಪ್ರದೇಶಗಳಿಂದ ವೋಟು ಪಡೆಯಲು ಅದೇ ಭಾಷೆಯ ನಾಯಕರನ್ನಾರಿಸಲಾಗುತ್ತದೆ. ಅವರೇ ನಮ್ಮ ಮುಂದಿನ ಎಮ್.ಎಲ್.ಎ ಗಳು, ಎಮ್.ಪಿ ಗಳು, ಮಂತ್ರಿಗಳು ಹಾಗೂ ನಮ್ಮ ಮುಂದಿನ ನಾಯಕರುಗಳಾಗುತ್ತಾರೆ. ಮುಂದಿನ ದಿನಗಳ ಈ ಅನಾಹುತಗಳನ್ನರಿತು ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟುವ/ಬೆಂಬಲಿಸುವ ಅಗತ್ಯವಿದೆ.

Unknown ಅಂತಾರೆ...

ತುಂಬಾ ಖುಷಿಯಾಗಿದೆ ಕನ್ನಡಿಗರು ಬೆಳಗಾವಿಯನ್ನು ಮತ್ತೆ ವಶಕ್ಕೆ ತೆಗೆದುಕೊಂಡ ಸುದ್ದಿ ಕೇಳಿ.

Chetan ಅಂತಾರೆ...

ಸರ್ ವರದಿ ನೋಡಿ ಖುಷಿಯಾಯಿತು,
ಬಹಳ ವರುಷಗಳ ನಂತರ ಕನ್ನಡಿಗರಿಗೆ ಜಯ ಸಂದಿದೆ. ಇಷ್ಟು ವರುಷಗಳಲ್ಲಿ ಮರಾಠಿಗರಿಗೆ ಅದರಲ್ಲೂ ಬೆಳಗಾವಿಯನ್ನು ಮಹರಾಷ್ತ್ರಕ್ಕೆ ಸೇರಿಸಬೇಕೆಂದು ಹಾರಾಡುತ್ತಿರುವವರಿಗೆ
ಜನತೆ ತಕ್ಕ ಉತ್ತರ ನೀಡಿದ್ದಾರೆ. ಇಲ್ಲಿ ಒಂದು ವಿಷಯವನ್ನು ನಿಮಗೆ ಹೇಳಲು ಇಚ್ಛಿಸುತ್ತೇನೆ. ನಮ್ಮ ಬೆಳಗಾವಿಯಲ್ಲಿ ಮರಠಿಗರ ಸಂಖ್ಯಾ ಏರಲು ಕಾರಣ ವಲಸೆಯೂ ಒಂದಾದರೆ ಇನ್ನೊಂದು ಬ್ರಿಟಿಷರು ಮಾಡಿದ ಅಚಾತುರ್ಯದಿಂದ.
ಅಂದಿನ ಕಾಲದಲ್ಲಿ ಬ್ರಿಟಿಷರು ತಮ್ಮ ಶಿಕ್ಷಣವನ್ನು ವಿಸ್ತರಿಸುವಾಗ ಭಾಷವಾರು ವಿಂಗಡನೆ ಮಾಡಿದರು.
ನೀವು ಹೇಳಿದಂತೆ ಚನ್ನಮ್ಮನ ಆಳ್ವಿಕೆಯ ನಂತರ ಶಿವಾಜಿಯ ಪ್ರಭಾವ ಆ ಪ್ರದೇಶದ ಮೇಲೆ ಬಹಳನೆ ಇತ್ತು.
ಹಾಗಾಗಿ ಬ್ರಿಟಿಷರು ಬೆಳಗಾವಿಯನ್ನು ಮರಾಠಿ ಪ್ರಭಾವವಿರುವ ಪ್ರದೇಶವೆಂದು ಘೋಷಿಸಿದರು. ಹಾಗಾಗಿ ಇವತ್ತಿಗೂ ನಾವು ಅಲ್ಲಿ ಬಹಳ ಮರಾಠಿ ಶಾಲೆಗಳು ಬಹಳ ಇವೆ. Anyways ಕನ್ನಡಕ್ಕೆ ಜಯ ಸಿಕ್ಕಿದೆ ಅದನ್ನು ಸ್ವಗತಿಸೊಣ. ಕನ್ನಡವನ್ನು ಕಾಪಾದೋಣ. ಜೈ ಕರ್ನಾಟಕ ಮಾತೆ..............

Anonymous ಅಂತಾರೆ...

Wow .. bengaLoorina saadhu kannaDigaru idarinda kaliya beku .. namma belagaaviya janarinda ..

Amarnath Shivashankar ಅಂತಾರೆ...

A movement was started by Karnataka Rakshana Vedike.
More Masi incident was the injuction to all this..
Shameless MES and its creators are not able to protect Mumbai which is being dominated by Gujarati's and Bihari's.
The people have belgaum have atleast now realised the importance of getting a kannadiga leader.
Crucked MES have show the "Kesari dhwaja" flying high during their canvasses just to provoke the Hindu crowd and grab their votes.
No matter which cast you belong to, be a kannadiga in karnataka is the formula which people need to follow.
Nayarana Gowdare, dhanyavaadagaLu..

Anonymous ಅಂತಾರೆ...

Thumba time naavu ankolta idvi, Belagavi nalli KRV yen maadithu antha. alli sattu hogidda swabimanavannu yebbisi, Belagavi nammadu anno kicchu hattiside. nijakku avarige abinandane sallisalebeku. hige yella kade kannadigarannu sangatane maadi, kannadavaru geddu barali.

-Deepu

Anonymous ಅಂತಾರೆ...

Enguru blogige nanna ShathakoTi namaskaragaLu.
Neevu Kannadadavarannu jagrutharannagi maduththiruva pari nijakku amogha. Nimma ee oLLeya kelsakke thayi Bhuvaneshwariya aashirvaada sadaa iruththade.

Madhu ಅಂತಾರೆ...

Sharanri, nanna hesaru Madhu. Naanu Bengaloorinavalu. Eega Belagaaviyavaranna maduve aagideeni. Belagaavi Bhashe kaliyalu tumba ishta, aadare Bengalooru bhashe mareyalu ishta illa. Belagaavi aadarenu, Bengalooru aadarenu, beribeku naavu modalu maataadalu. Eee website ge ide modalane sala bheti kotteenri. Tumba khushi aaitu. Idee karnataka mandiyella ottige kootare nammanna yaaru enu maadakke aagalla. Yaavude kaaranakku Belagaaviyalle aagali, athave karnatakada itare yaava chunavaneyalle aagali, Kannadigarige jaya sigali endu Thayi Bhuvaneshwariyallli bedikolluttene.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails