ಎಂಕನ ಕನಸಲ್ಲಿ ನಾಣಿ!

ಇತ್ತೀಚೆಗೆ ಕನ್ನಡಿಗ ನಾರಾಯಣ ಮೂರ್ತಿಗಳಿಗೆ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ನಾರಾಯಣ ಮೂರ್ತಿಗಳ ಉದ್ಯಮ ಕ್ಷೇತ್ರದಲ್ಲಿನ ಅಪಾರವಾದ ಸಾಧನೆಗೆ ಸಂದ ಗೌರವವಾಗಿದೆ.
ಸಾಧಾರಣ ಶಾಲಾಮಾಸ್ತರರ ಮಗನಾಗಿ ಮಧ್ಯಮ ವರ್ಗದ ಎಲ್ಲ ಬವಣೆಗಳನ್ನು ದಾಟಿ ತಮ್ಮ ಉದ್ಯಮಶೀಲತೆಯಿಂದಾಗಿ ವಿಶ್ವದೆಲ್ಲೆಡೆ ಮಾನ್ಯತೆ ಪಡೆದ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ ಇವರ ಸಾಧನೆ ಎಲ್ಲ ಕನ್ನಡಿಗರಿಗೆ ಪ್ರೇರಣಾದಾಯಕ.
ಈ ಪ್ರಶಸ್ತಿ ಶ್ರೀಯುತರಿಗೆ ದೊರೆತಿರುವುದು ಅವರ ಉದ್ಯಮಶೀಲತೆ ಮತ್ತು ಜಾಗತೀಕರಣದ ಉಪಯೋಗ ಪಡೆದುಕೊಂಡು ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟು ಮಾಡಿದ ಕ್ರಾಂತಿಗಾಗಿ.

ಇವೆಲ್ಲದರ ನಡುವೆ ನಮ್ಮ ಎಂಕ ಕಣ್ಮುಚ್ಕೊಂಡು ಅದೇನೇನೇನೋ ಕನಸ್ ಕಾಣ್ತಾವ್ನೆ. ಔನ್ ಕನಸು ಅಂಥಿಂಥದ್ದಲ್ಲ, ಇಪ್ಪತ್ತು ವರ್ಷ ಮುಂದಿನ್ದು. ಎಂಕನ್ ಕನಸಿಗೆ ಒಂದು ಬಾಲ್ಕನಿ ಟಿಕೆಟ್ ತಗಂಡ್ ಒಳಗ್ ಓಗ್ಮ ಬನ್ನಿ!

ಅಬ್ಬಬ್ಬಬ್ಬಾ ಏನ್ ಗುರು ಇದು? ಕನ್ನಡದ ಶಾಲೆ ಇಂಗೆಲ್ಲಾ ಇರ್ತುದಾ? ಅದೇನು ಎಕರೆಗಟ್ಟಲೆ ಮೈದಾನ, ತೋಟ, ಆಟದ ಮೈದಾನ, ಲಾನು... ಎಷ್ಟು ಸಖತ್ತಾಗ್ ಐತಲ್ಲಪ್ಪೋ ನಮ್ ಐಕ್ಳು ಹಾಕಿರೋ ಯೂನಿಫಾರ್ಮು? ಆ ಪ್ರೊಜೆಕ್ಟರ್ ಏನು? ಆ ಮಕ್ಳು ಬಳುಸ್ತಿರೋ ಸೌಕರ್ಯಗಳೇನು? ಇದ್ಯಾವ ಇಂಟರ್ ನ್ಯಾಸನಲ್ ಶಾಲೆಗೂ ಕಮ್ಮಿ ಇಲ್ದಂಗ್ ಐತಲ್ಲಪ್ಪೋ?
ಶಿಕ್ಷಣ ಕ್ರಾಂತಿ!
ಇಪ್ಪತ್ತು ವರ್ಷಗಳ ಹಿಂದೆ ಎಕ್ಕುಟ್ ಹೋಗಿದ್ದ ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೆಗೆ ದೊಡ್ ತಿರುವು ಕೊಟ್ರು ನಮ್ ಮೂರ್ತಿಗಳು. ಕನ್ನಡ ಶಾಲೆಗಳು, ಮಾಧ್ಯಮ ಇವುಗಳ ಸ್ವರೂಪವನ್ನು ಜಿಲ್ಲೆಗೊಂದು ಮಾದರಿ ಶಾಲೆಗಳನ್ನು ಕಟ್ಟೋ ಮೂಲಕ ಬುಡಸಮೇತ ಬದ್ಲಾಯ್ಸುದ್ರು. ಕನ್ನಡದ ಮಕ್ಕಳ ಕಲಿಕೇನ ಸರಳ ಮಾಡಿ, ಜಗತ್ತಿನ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಸಾಲಿನಲ್ಲಿ ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೇನ ನಿಲ್ಸಿ ತೋರುಸ್ಕೊಟ್ರು. ಅಂಥಾ ನಾರಾಯಣ ಮೂರ್ತಿಗಳು ಕನ್ನಡದೋರು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ಈ ಎಲ್ಲ ಜ್ಞಾನ ಸಂಪತ್ತು ಕನ್ನಡದಲ್ಲಿ ಇರಬೇಕಾದ ಅಗತ್ಯ ಅರ್ಥಮಾಡ್ಕೊಂಡು, ಕನ್ನಡ ತಂತ್ರಜ್ಞಾನ ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದಾರೆ. ಇಲ್ಲಿ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಮೆಕಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ನ್ಯಾನೋ, ಬಯೋ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿನ ಪ್ರಪಂಚದ ಅತ್ಯುನ್ನತ ಅರಿವನ್ನು ಕನ್ನಡಕ್ಕೆ ತರುವ ಮೂಲಕ ಹೊಸ ಹೊಸ ಅವಿಷ್ಕಾರಗಳಿಗೆ ಕಾರಣವಾಗುವ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈಗಾಗ್ಲೆ ಇದುಕ್ಕೆ ಬೇಜಾನ್ ಪೇಟೆಂಟ್ಗಳು ಸಿಕ್ಕವೆ ಗುರು!
ಉದ್ದಿಮೆಗಾರಿಕೆ!
ಕನ್ನಡಿಗರಲ್ಲಿ ಉದ್ದಿಮೆಗಾರಿಕೆ ಹೆಚ್ಚಿಸಲು ಮಾರ್ಗದರ್ಶನ/ ಅನುಭವ ಹಂಚಿಕೊಳ್ಳುವ ವ್ಯವಸ್ಥೆ ಕಟ್ಟಿದಾರೆ. ಇದ್ರಾಗೆ ಯಶಸ್ವಿ ಉದ್ದಿಮೆಗಾರಿಕೆಯ ಬಗ್ಗೆ ತರಬೇತಿ ಕೊಡೋದ್ರು ಜೊತೆಗೆ ಕನ್ನಡ ನಾಡಿನ ಅನೇಕ ವಿಶ್ವವಿದ್ಯಾಲಯಗಳಲ್ಲೂ ಉದ್ದಿಮೆಗಾರಿಕೆ ಹೆಚ್ಚಿಸಲು ಅಗತ್ಯವಿರುವ ಕೋರ್ಸುಗಳನ್ನು ಆರಂಭಿಸಲು ಉತ್ತೇಜಿಸಲಾಗಿದೆ. ಶ್ರೀಯುತರು ಇಂತಹ ಕಡೆ ಅತಿಥಿ ಉಪನ್ಯಾಸಕರಾಗಿ ಮುನ್ನಡೆಸ್ತಿರೋದು ವಿಶೇಷವಾಗಿದೆ. ಇವರು ಇಪ್ಪತ್ ವರ್ಷದಿಂದ ಹೊಸ ಉದ್ದಿಮೆಗಾರರನ್ನು ಪ್ರೋತ್ಸಾಹಿಸ್ತಾ, ನಾಡಿಗೆ ಬಂಡವಾಳ ಹರಿದು ಬರಕ್ಕೆ ಕನ್ನಡಿಗರ ಬ್ರಾಂಡ್ ಅಂಬಾಸಿಡರ್ ಆಗಿಯೂ ಕೆಲಸ ಮಾಡಿ ಗೆದ್ದಿದ್ದಾರೆ. ಇದೀಗ ಉದ್ದಿಮೆಗಾರಿಕೆಗೆ ದಾರಿ ತೋರ್ಸಕ್ಕೆ ಇವರೇ ಹುಟ್ಟು ಹಾಕಿದ ಏಜೆನ್ಸಿಯೊಂದು ಕಾರ್ಯನಿರ್ವಹಿಸುತ್ತಿದ್ದು ಇಡೀ ಭಾರತ ಈ ಮಾದರಿಯನ್ನು ಅನುಸರಿಸತೊಡಗಿದೆ.
ಅಸ್ತು ದೇವತೆಗಳಿರ್ತಾರಂತೆ!
ಎಂಕನ್ನ ಸುಮ್ನೆ ಎಬ್ಬಿಸಿ, ಲೇ ಕನಸು ಕಾಣ್ಬೇಡ ಅನ್ನಬ್ಯಾಡ್ರಿ. ಒಳ್ಳೇ ಕನಸುಗಳು ನನಸಾಗಲಿ ಅನ್ನೋ ಅಸ್ತು ದೇವತೆಗಳು ಇರ್ತಾರಂತೆ ಗುರು!

15 ಅನಿಸಿಕೆಗಳು:

Anonymous ಅಂತಾರೆ...

ತಿರುಕನ ಕನಸು...ಕನ್ನಡ ಶಾಲೆಯ ಕಥೆ ಬಿಡಿ ಗುರು.. ಈ ಮೂರ್ತಿಗಳು ತಮಗೂ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವ ರಸ್ತೆನಾದ್ರು ಮಾಡಬಹುದಿತ್ತಲ್ಲ, ಅದಕ್ಕು ಸರ್ಕಾರಕ್ಕೆ ದುಂಬಾಲು ಬೀಳ್ತಾರೆ. ಮೈಸೂರಿನ ಆಫೀಸ್ ನೋಡಿ ಗುರೂ ಹೆಂಗೆ ಕಟ್ಟಿದ್ದಾರೆ ಅಂತ. ಅದೇನು ಆಫೀಸೋ ಇಲ್ಲಾ ರೆಸಾರ್ಟ್ ಅಂತ ಗೊತ್ತಾಗೊಲ್ಲ. ಅವ್ರ ದುಡ್ಡು ಅವ್ರು ಕಟ್ಕೋತಾರೆ ಅಂತ ಸುಮ್ನೆ ಇರ್ಲಿಕ್ಕೆ ಬರೋಲ್ಲ. ಯಾಕೆಂದರೆ ಅದು ನಮ್ಮ ಸರ್ಕಾರ ರಿಯಾಯಿತಿಯಲ್ಲಿ ಆಫೀಸ್ ಕಟ್ಟಿ ಅಂತ ಕೊಟ್ಟಿದ್ದು. ರೆಸಾರ್ಟ್ ಗೆ ಅಲ್ಲ. ಅದರ ಹಿಂದೆ ಸಾವಿರಾರು ರೈತರ ಕಣ್ಣೀರು ಇದೆ
ಹೋಗ್ಲಿ ಕನ್ನಡಿಗರಿಗೆ ಕೆಲ್ಸಾನಾದ್ರು ಕೊಡಬಹುದಿತ್ತು, ಆದ್ರೆ ಇನ್ಫೋಸಿಸ್ ನಲ್ಲಿ ಇರೋವ್ರಲ್ಲಿ ಹೆಚ್ಚಿನವ್ರು ತಮಿಳು, ಆಂದ್ರ, ಮತ್ತು ಉತ್ತರ ಭಾರತದವ್ರು.

Anonymous ಅಂತಾರೆ...

bari kanasina bagge maataaDOdaadre, Enguruge Engurune saaTi :)...idu bEga nijavaagli amta haaraisteeni...haage avra companyli heccu kannaDigarige udyOga sigO haage aagli..

ee kanasanna moortigaLige artha aagO haage hELOvamta ErpaaDu maaDbEku :)

-putta

Anonymous ಅಂತಾರೆ...

kanasu chennagide.. vaastavakke barona.. bari bere rajyadorige kelsa kottiro naani kandre swalpa hesige moodutte.. yake andre merit mele maatra kannadigarige kelso kodo infosys, ade tamil telgu malayaligalige yaake merti use madolla? HR nalli nan maklu bere rajyadoru tumbirodrinda bere rajyadavaranne recruit madtare.. campus interview ge tamil nad ge yaake hogbeku? nam naadalli collegegalu ilva? adella bidi guru.. kade paksha kannada naadina ondu dodda habba andre UGADI . Idakke holiday kododbittu nan maklu ONAM ge holiday kodtare adu Bengaloorinalli..
kannadatana meryo Naani hege anta eegadru prove aytalla!!!
inta enterprenuers idre nam ge enu laabha illa guru... hogi SATYAM nalli nodi.. shekhada 90rashtu Gulti iddare.. infosys chennai ge hogi 90rashtu tamils iddare..infosys bengaloorge banni.. 20rashtu idre ade kushi...
uddara aadhange
nimma
lakki

Lohith ಅಂತಾರೆ...

Houdu Narayan Murthy oba sadakaru opkotene.....Adre ee punyatma tanag bekagednela padkolotanaka karnataka sarkaradinda padkond amel kannadigarege misalati kodok agola anda......Heg ide nodu guru belsotanaka kannadigaru bek agithu adre Company beled nent mel kannadigaru beda........yen madidare e murthy....al al toilet kads idare...adu taxs inda bachav agoke aste..........nang ansidu yen andre ivr kannada maninda patkond bagya ke compare madidare evr e manige madirod astrale ide......Sudha murthy gala nam college ge band idru avr jothe discussion ithu.NEV north karnataka davar age yak e kade business establish madtela andre no comments andru..........Ala guru correct ag count hak nodidre evr madirodu astarale ide e mannige...

Unknown ಅಂತಾರೆ...

Aa YENKANA kanasu nanasagalli....
Ayooooo a kanasu nanasago kanasu nanu kanuthidene......
Jai Karnataka

Unknown ಅಂತಾರೆ...

Aa YENKANA Kanasu Nanasagalli.....
Ayoo aa Yenkana Kanasu Nanasaguva Kanasu Nanu Kanuthidhene.....
Jai Karnataka

anisikegalu ಅಂತಾರೆ...

Software companies are capitalising on facilities provided to them on concession. A share in their profit should be utilised for developmentl work here. Their arguement that merited technical people here and their lack of English knowledge is incorrect. They give employment to other state people who cannot speak other than their mother tongue. How they are justified. The Government should insisit on preference to localities before giving permission to these czars.

Mahesh Shastry ಅಂತಾರೆ...

En guru,

In the 1950s many Public Sector Union companies made Bangalore and other parts of Karnataka their home. These included ITI, HAL, BHEL, NAL, BEL, BEML, HMT, etc. These were huge industries which brought considerable revenue for Karnataka. Yet, the main difference between them what is happening today is that, the PSU's brought along with them, a development in the infrastructure and education of the region where they were established. For example, when you had KIOCL in Kudremukh, the industry helped in the development of the areas around it by providing employment, education and improving the infrastructure. In Bangalore, there were ITI, HAL, etc. These companies started their own layouts, developed the infrastructure of their layouts, built schools and colleges and were beneficial to the society. They did this partly because of philanthropy and mainly because it was in their interest that these aspects of their location develop.

The software companies of today and their leaders, even the visionaries like Azim Premji and Narayan Murthy have not so far done anything directly to aid the development of the state. There is no Narayan Murthy Endowment College of Engineering, I am sure there is not even one primary school out there which has Narayan Murthy sponsored scholarship. It is the same case with many other industrialists of information technology. We only hope that the leaders of the industry wake up to help the society where our government failed to. The government directed resources from other developmental activities to provide tax sops and many such benefits for the IT industry. The least the IT industry can do is to do the same to the government- i.e to step in where the government has trouble and do their bit for the state.

anisikegalu ಅಂತಾರೆ...

Now the townships developed by the Central PSU's are drifting away. Take for example of HMT land. The vast land has been practically handed over to builders to build huge private housing complexes. The concept of factory township is no more. Present industry giants are breeding a different culture which is alien to our concept of a family.

Anonymous ಅಂತಾರೆ...

KANASU tumba chennagide, AADRE....itis disgusting to see this person NOT supporting Kannadigas and KArnataka and the worst thing is he doesn't sing National Anthem in our country just because there were foreign nationals in the campus. We did the similar function in US, we sang our national anthem and I saw all american audience stood up to respect that and we did the same when American Anthem was played ! My american friends told me that they respect who respects their country !!! WOW, I wish that was told to this Padma Vibhushan.

Coming to what he has done to KArnataka, after utilizing our talent, he has created Mysore campus whihc is commendable. But at the same time, fraction of money could have been spent on Bengaluru. He was asked to invest in Hubli/Dharwad, reason given was - no flight connection to Hubli/Dharwad. Atleast Capt Gopinath did good job, he started daily flights to Hubli. Now also this Padma Ebhushan has not invested, if I were in his place and had that kinda of free money (stock money I'm talking about...if anyone wants I can send complete calculation of money he has), I would 've created gorgeous campus between Hubli and Dharwad, would have created new economy. HE JUST HAS TOO MUCH OF ARROGANCE ! Shame !!!

Anonymous ಅಂತಾರೆ...

ದೂರುವುದಕ್ಕಾಗಿಯೇ ಯಾರನ್ನೂ ದೂರಬಾರದು.. ನಮ್ಮ ರಾಜಕೀಯದವರ ಹಾಗೆ.. ಅವರ ಪಕ್ಷದವರು ಏನು ಮಾಡಿದ್ರೂ ಅವರಿಗೆ ಸರಿ, ವಿರೋಧ ಪಕ್ಷದವರು ಏನು ಮಾಡಿದ್ರೂ ಅದು ತಪ್ಪು.. ಇಂತಹುದನ್ನು ನಾವು ಮಾಡೋದು ಬೇಡ ಬಿಡಿ. ನಾ.ಮೂರ್ತಿಯವರು ಇನ್ಪೋಸಿಸ್ ಮೂಲಕ ಕನ್ನಡಿಗನಿಗೆ/ ಬೆಂಗಳೂರಿಗೆ ಹೊಸ ಗರಿ ಮೂಡಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ನಮ್ಮ ರಾಷ್ಟ್ರಗೀತೆ ಅವಮಾನ ಮಾಡಿದ್ದಾರೆ ಎನ್ನುವ ಮಾತೂ ಸತ್ಯವೇ. ಹಾಗೆಂದು ಅವರು ಸಾಮಾಜಿಕವಾಗಿ ಏನೂ ಕೊಡುಗೆ ನೀಡಿಲ್ಲ ಎಂಬುದು ಮಾತ್ರಾ ಶುದ್ಢ ತಪ್ಪು. ಇನ್ಫೋಸಿಸ್ ಪ್ರತಿಷ್ಟಾನದ ಹೆಸರಿನಲ್ಲಿ ಶ್ರೀಮತಿ ಸುಧಾ ಮೂರ್ತಿಯವರು ಅನೇಕ ಸಮಾಜ ಸೇವಾಕೆಲಸಗಳನ್ನು ಮಾಡುತ್ತಿದ್ದಾರೆ. ಅದನ್ನು ಜಾಸ್ತಿ ಪ್ರಚಾರ ಮಾಡುತ್ತಿಲ್ಲ ಅಷ್ಟೆ. ಅನಾಥಾಶ್ರಮ, ಆಸ್ಪತ್ರೆ, ರಸ್ತೆ ಇವುಗಳಿಗೆಲ್ಲಾ ಪ್ರತಿಷ್ಠಾನದ ವತಿಯಿಂದ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.. ಹಾಗೆ ನೋಡಿದರೆ, ಪ್ರತಿಯೊಬ್ಬ ಯಶಸ್ವಿ ಉದ್ಯಮಿಯೂ ಸಮಾಜ ಸೇವಾ ಮನೋಭಾವ ಹೊಂದಿದ್ದರೆ ನಮ್ಮಲ್ಲಿ ಯಾವ ಸಮಸ್ಯೆಗಳೂ ಉಳಿದಿರುತ್ತಿರಲಿಲ್ಲ.. ಏನು ಗುರೂ?

Anonymous ಅಂತಾರೆ...

Avaru enu kotiddare ivaru enu madiddare anta yake samaya kalitira. Nimma kelasa neevu nodikondu mundebanni adu bahala uttama koduge.

Gani ಅಂತಾರೆ...

Narayana Murthy ge aa Narayana olle buddi kodali..

kannaDati ಅಂತಾರೆ...

idu bari eMkana kanasalla ella kannaDigaraddu. idu tirukana kanasu eMdu hELi kannaDigara swaabhimaanavannu keraLisabeDi. ivattu obba naaNi kaaNisutiddaane naaLe nUraaru naaNigaLu kaaNisuttaare eMdu hELuvashTu aatmavishvaasa kannaDigarigide. eMkana oMdu kanasannalla iMtaha nUru kanasugalannu nanasaagisONa eMdu hELi.kannaDigarige kannaDigare saaTi eMdu tOrisONa.

Anonymous ಅಂತಾರೆ...

ಭಾರತದಲ್ಲಿ ಕನ್ನಡ ಶ್ರೀಮಂತ ಉದ್ಯಮಿಗಳು ಸಾಕಸ್ಟಿದ್ದಾರೆ ಆದರೆ ನಮ್ಮ ಭಾಷೆಗೆ ಹಾಗೂ ನಮ್ಮ ನಾಡಿಗೆ ಅವರ ಕೊಡುಗೆ ತುಂಬ ನಗಣ್ಯ. ಇನ್ನು ಮುಂದಾದರು ಅವರು ತಮ್ಮ ಕೊಡುಗೆ ಅರಿತು ಮುಂದೆ ಸಾಗಲಿ. "ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails