ದೇಶವ್ಯಾಪಿ ಅಕ್ಕಿ ಉತ್ಪಾದನೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಭತ್ತದ ಬೆಳೆಯುವ ಪ್ರಮಾಣ ನಿಧಾನಗತಿಯಲ್ಲಿ ಕಡಮೆ ಆಗುತ್ತಿದೆ. ಲೆವಿ ಸಂಗ್ರಹದ ಪ್ರಮಾಣವೂ ಕಡಮೆ ಆಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಭತ್ತದ ಧಾರಣೆ ಭಾರಿ ಪ್ರಮಾಣದಲ್ಲಿ ಏರಿದೆ. ಹೀಗಾಗಿ ಅಕ್ಕಿ ಹೆಚ್ಚು ಬಳಸುವ ದಕ್ಷಿಣದ ರಾಜ್ಯಗಳಿಗೆ ಆಗಾಗ್ಗೆ ಅಕ್ಕಿಯ ಕೊರತೆಯಾಗುತ್ತಿದೆ. ಆದರೆ, ಭತ್ತಕ್ಕೆ ಹೋಲಿಸಿದರೆ ಗೋಧಿ ಉತ್ಪಾದನೆ ಪ್ರಮಾಣ ಹೆಚ್ಚುತ್ತಿದೆ. ಹೆಚ್ಚು ಗೋಧಿ ಪೂರೈಕೆ ಮಾಡಲು ಇದು ಮುಖ್ಯ ಕಾರಣ ಎನ್ನುತ್ತವೆ ಆಹಾರ ಇಲಾಖೆ ಉನ್ನತ ಮೂಲಗಳು.ಕನ್ನಡದ ಮಣ್ಣಲ್ಲಿ ಮುಖ್ಯವಾಗಿ ಅಕ್ಕಿ ಮತ್ತು ರಾಗಿಯೇ ಬೆಳ್ಯೋದು. ಇದು ತಲತಲಾಂತರಗಳಿಂದ ಕಂಡುಬಂದಿರೋ ನೈಸರ್ಗಿಕ ಸತ್ಯ. ಈ ಧಾನ್ಯಗಳಿಂದಲೇ ಹೆಚ್ಚು-ಕಡಿಮೆ ಇಲ್ಲಿಯ ಜನರ ಆಹಾರ ಸೇವಿಸುವ ರೀತಿ ರೂಪುಗೊಂಡಿದೆ. ಕನ್ನಡಿಗರು ಅಕ್ಕಿ (ಅನ್ನ), ರಾಗಿ ಮತ್ತು ಜೋಳಗಳ್ನೇ ಹೆಚ್ಚಾಗಿ ಸೇವಿಸೋದು ಅಂತ ಇಡೀ ಭಾರತಕ್ಕೆ ಗೊತ್ತಿದೆ. ಹಾಗೇ, ಭಾರತದ ಉತ್ತರ ಭಾಗಗಳಲ್ಲಿ ಹೆಚ್ಚಾಗಿ ಬೆಳ್ಯೋ ಧಾನ್ಯವೆಂದ್ರೆ ಗೋಧಿ. ಹಾಗಾಗಿ ಅಲ್ಲಿಯ ಜನರ ಊಟದಲ್ಲಿ ಗೋಧಿಯಡುಗೆಗಳೇ ಹೆಚ್ಚಿರುತ್ತೆ. ಈ ಎರಡೂ ಪ್ರವೃತ್ತಿಗಳು ಪ್ರಕೃತಿಯ ನಿಯಮದಂತೆ ನಡೆದು ಬಂದಿರುವಾಗ, ಏಕಾಏಕಿ ಅನ್ನ ಉಣ್ಣುವ ಕನ್ನಡಿಗರಿಗೆ ಗೋಧಿ ಉಣಿಸಿ ಕೈತೊಳ್ಕೊಂಬುಡಣ ಅಂತ ಹೊರ್ಟಿದ್ಯಲ್ಲ ಗುರು ನಮ್ಮ ಘನ ಭಾರತ ಸರ್ಕಾರ! ಇದನ್ನ ಕೇಳೇ ಕನ್ನಡಿಗನ ಹೊಟ್ಟೆ ತಣ್ಣಗಾಗ್ಬೇಕು!
ರಾಷ್ಟ್ರಭಾಷೆ ಆದಮೇಲೆ ಈಗ ರಾಷ್ಟ್ರಧಾನ್ಯದ ಕಾಲ!
ಅಲ್ಲ ಗುರು, ಕರ್ನಾಟಕದಲ್ಲಿ ಅಕ್ಕಿ ಬೆಳೆ ಕಡಿಮೆ ಆಗ್ತಾ ಇದೆ ಅನ್ನೋದು ನಿಜವೇ ಆಗಿದ್ರೆ ಅಕ್ಕಿ ಪೂರೈಕೆಗೆ ಏನಾದ್ರೂ ದಾರಿ ಹುಡುಕೋ ಬದ್ಲು ಗೋಧಿ ತಿನ್ನಿ ಅನ್ನೋ ಮೂರ್ಖತನ ಕೇಂದ್ರಸರ್ಕಾರಕ್ಕೆ ಎಲ್ಲಿಂದ ಬಂತು ಅನ್ನೋ ಪ್ರಶ್ನೇನಾ? ಕೇಂದ್ರಸರ್ಕಾರಕ್ಕೇನು ಗೊತ್ತು ಕನ್ನಡಿಗನ ಹೊಟ್ಟೆಗೆ ಏನ್ಬೇಕು, ಏನ್ಬೇಡ ಅಂತ? ಕೇಂದ್ರಕ್ಕೆ ಈ ಗೋಧಿ-ಅಕ್ಕಿ-ರಾಗಿ-ಜೋಳ ಇವೆಲ್ಲ ತಲೆನೋವು ತರೋ "ವಿವಿಧತೆ". ಈ ವಿವಿಧತೆ ಇದ್ರೆ ತಾನೆ ತಲೆನೋವು? ಎಲ್ಲಾ ಗೋಧೀಮಯ ಮಾಡ್ಬುಡಮ ಅಂತ ಒಂಟ್ರೆ ತಲೆನೋವೇ ಇರಕ್ಕಿಲ್ಲವಲ್ಲ?! ಎಷ್ಟೇ ಆದ್ರೂ ಗೋಧಿ ತಾನೆ "ರಾಷ್ಟ್ರಭಾಷೆ" ಆಡೋರ ಧಾನ್ಯ? ಆದ್ರಿಂದ ಗೋಧೀನೇ ತಾನೆ "ರಾಷ್ಟ್ರಧಾನ್ಯ"?! ಇನ್ನು ರಾಷ್ಟ್ರಧಾನ್ಯ ಪ್ರಸಾರ ಪರಿಷತ್ತುಗಳು, ರಾಷ್ಟ್ರಧಾನ್ಯ ಇಲಾಖೆಗಳು ಇವೆಲ್ಲಾ ಉಟ್ಕೋತವೋ ಏನೋ!
ಕೇಂದ್ರಸರ್ಕಾರದ ಈ ನಡವಳಿಕೆಯೂ ಒಂದೇ, ಕರ್ನಾಟಕದಲ್ಲಿ ಡಿ-ಗುಂಪಿನ ರೈಲ್ವೇ ಹುದ್ದೆಗಳು ಖಾಲಿ ಇವೆ, ಇದಕ್ಕೆ ಬಿಹಾರಿಗಳ್ನ ಕಳಿಸೋಣ ಅನ್ನೋ ನಡವಳಿಕೇನೂ ಒಂದೇ! ಇದು ಗೋಧಿ ಕಾಳಿನ ವಲಸೆ, ಅದು ಗೋಧಿ ಉಣ್ಣೋರ ವಲಸೆ, ಅಷ್ಟೆ! ಒಟ್ನಲ್ಲಿ ಕರ್ನಾಟಕದಲ್ಲಿ ಖಾಲಿ ಜಾಗಗಳ್ನ ತುಂಬಬೇಕು ಅನ್ನೋದಷ್ಟೇ ಕೇಂದ್ರಸರ್ಕಾರದ ಉದ್ದೇಶ ಇದ್ದಂಗಿದೆ! ಅದ್ನ ಬಿಹಾರಿಗಳಿಂದ ತುಂಬುದ್ರೇನು ಗೋಧಿಯಿಂದ ತುಂಬುದ್ರೇನು? ಎಲ್ಲಾ ನಮ್ಮ ಹಣೇಬರ! ಸರಿ ಬನ್ನಿ, ಮೊದ್ಲು ಕನ್ನಡ ಮರೆತು ಹಿಂದಿ ಮಾತಾಡೋಣ, ಆಮೇಕೆ ಅನ್ನ ಮರೆತು ಗೋಧಿ ತಿನ್ನಮ. ಏನ್ ಗುರು?
ಇದ್ನೂ ಒಸಿ ಓದಿ: ಹೊಟ್ಟೆ! ಕನ್ನಡವಿಲ್ಲದೆ ನೀ ಕೆಟ್ಟೆ!
2 ಅನಿಸಿಕೆಗಳು:
kannada marethu hindi maatadoke aagalla . Anna marethu godhi tinnoke aagalla .
iam living in rajasthan,& eating thi0se dry chapathis with no alternative,,,when ever i Am coming back to bengaluru,by train,,i will wait for secundarabad station to come,get down there and enjoy plenty of idli,vaada,pulav,,,taste buds come back to life,,and now we hav to see those hard,,chapathis on our menu back home,,,,,,let there be a war,,let us leave indian union but we accept those wheat chapathis,,B'COZ FOR WE KANNADIGAS 'ANNA DEVARA SAMAANA',
THESE WHEAT BAIYYAS ARE LESS INTELIGENT,MALNOURISHED,IDIOTS ,,,SO CENTRAL gOVT,WANT KANNADIGAS TO "IMPROOVE" LIKE THOSE nORTH"BAIYYAS"BUT,,,
NOOOOOOO,,,CHANCE,,,,,,,,
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!