ಕಾರವಾರದಲ್ಲಿ ಬಹಳ ಹಿಂದೆ ಬಂಗಾಳದ ರಬೀಂದ್ರನಾಥ ಠಾಗೋರ್ ಅವರು 1882-83ರ ನಡುವೆ ನೆಲೆಸಿದ್ದದ್ದು ಗೊತ್ತಾ ನಿಮ್ಗೆ? ಹೌದು, ಇದು ನಿಜ. ಇವರು ಕಾರವಾರದಲ್ಲಿ ಒಂದಿಷ್ಟು ಕಾಲ ನೆಲೆಸಿದ್ದೂ ಉಂಟು, ಇಲ್ಲಿಯ ಪ್ರಕೃತಿಯ ಸೌಂದರ್ಯವನ್ನ ಸವಿದದ್ದೂ ಉಂಟು, ಅದನ್ನು ಹೊಗಳಿ, ಅದನ್ನುಲ್ಲೇಖಿಸಿ ಬರೆದು, ಹಾಡಿ, ಎಲ್ಲಾ ಮಾಡಿದ್ದೂ ಉಂಟು. ನಂತರ ನೊಬೆಲ್ ಬಹುಮಾನ ಪಡೆದ ಅವರ ಬರಹಕ್ಕೆ ಈ ನಮ್ಮ ನೆಲವೇ ಸ್ಪೂರ್ತಿ ನೀಡಿತ್ತು ಅಂತ ಠಾಗೋರರೇ ಒಂದು ಕಡೆ ಹೇಳಿಕೊಂಡಿರೋದು ನೋಡಿದ್ರೆ ಯಾವುದೇ ಕನ್ನಡಿಗನ ಮನಸ್ಸಿನಲ್ಲಿ ಉಲ್ಲಾಸ ಹುಟ್ಟೇ ಹುಟ್ತತ್ತೆ ಗುರು! ಕೋಟ್ಯಂತರ ಜನ ಹಾಡುವ ಗೀತೆಗಳ ರಚನಕಾರನಿಗೆ ಈ ನಮ್ಮ ಭೂಮಿ ಸ್ಪೂರ್ತಿ ಕೊಟ್ಟಿತ್ತು ಅಂದ್ರೆ ದೊಡ್ಡ ಸೊಗಸಾದ ಅನುಭವ ಗುರು!
ಇದು ನಮ್ಮ ಕಾರವಾರಕ್ಕೆ ಮತ್ತು ಕರ್ನಾಟಕಕ್ಕೇ ಬಹಳ ಹೆಮ್ಮೆಯ ವಿಷಯ. ಕಾರವಾರದಲ್ಲಿಯ ಅದ್ಭುತ ಶಕ್ತಿ ಎಂತಹದು ಅಂತ ಇದ್ರಿಂದ ವ್ಯಕ್ತವಾಗ್ತಿದೆ ಗುರು! 1882-83ರ ನಡುವೆ ಕಾರವಾರಕ್ಕೆ ತನ್ನ ಅಣ್ಣನೊಡನೆ ಬಂದ ರಬೀಂದ್ರನಾಥ ಠಾಗೋರ್ ಅವರು ಇಲ್ಲಿಯ ನೈಸರ್ಗಿಕ ಸೌಂದರ್ಯದಿಂದ ಅದೆಷ್ಟು ಪ್ರಭಾವಿತರಾಗಿದ್ದರು ಅಂದ್ರೆ ಅದರಿಂದ ತಮ್ಮ ಸಾಹಿತ್ಯ ಜೀವನದ ಮೊದಲ ನಾಟಕವನ್ನ (ಪ್ರಾಕೃತಿರ್ ಪ್ರತಿಶೂತ) ಇಲ್ಲಿದ್ದಾಗಿಯೇ ಬರೆದುಬಿಟ್ಟರು.
ಇದಲ್ಲದೆ ನಂತರ ಇನ್ನೆಲ್ಲೋ ಒಂದು ಕಡೆ ತಮ್ಮ ಇಡೀ ಸಾಹಿತ್ಯದ ಬೀಜವಾಗಿತ್ತು ಕಾರವಾರದ ಆ ದಿನಗಳು ಅಂತಲೂ ಹೇಳಿದಾರೆ. ನಿಜಕ್ಕೂ ಕನ್ನಡಿಗರು ಇದರಿಂದ ಅನುಭವಿಸುವ ಆಹ್ಲಾದಕ್ಕೆ ಮಿತಿಯೇ ಇರಲಾರದು. ಎಂತವರಿಗೆಲ್ಲಾ ಸ್ಪೂರ್ತಿ ನೀಡಿರುವ ಇಂಥಾ ಮಣ್ಣಲ್ಲಿ ಹುಟ್ಟಿರೋ ನಾವೇ ಧನ್ಯರು ಗುರು!
8 ಅನಿಸಿಕೆಗಳು:
Thumbha kushi aguthitede e vishaya keli.
Bahushya yesto janarige idhu gothiralikilla....
E mahithi nididhakagi Dhanyavadhagalu.
JAI KARNATAKA
kelavu bengaligalu ("sen"aru) karnatakadindale hogiddu anno itihaasa kooda ide.
intaha dhanya vishaya tilidukoltaa, pakkada column alle Alura, Sir MV, intahavara chitra ellaa nodtiddre, nijavaaglu Karnataka entaha dhanya bhoomi, naavidralli huttiruvudakkoo naave nijakkoo eshtu dhanyaru antale anisuttide..
olle mahithi kottiddira, dhanyavadagalu....
Feel very proud to know about this. This brought back the nostalgic memories of the song by P.B.Srinivas 'naanOdi naliyuva kaaravaara...', penned by C.V.Shivshankar from the movie namooru. ooh...feel like going back to that golden times....
ಒಳ್ಳೆಯ ಮಾಹಿತಿ. ಕರ್ನಾಟಕ ಅಷ್ಟು ಸುಂದರವಾಗಿರುವಕ್ಕೆ ಇಲ್ಲಿ ಬರಹಗಾರರು ಹೆಚ್ಚು ಅನಿಸುತ್ತೆ. ೭ ಜ್ಗ್ಯಾನಪೀಠ ಪ್ರಶಸ್ಥಿಗಳನ್ನು ಗಳಿಸಿದ ಕವಿಗಳು ಹುಟ್ಟಿದ ನಾಡು ಅಂದರೆ ಕಮ್ಮಿಯೆ?
-ಶ್ವೇತ
There was a writer, director and actor from coastal Karataka called Vishukumar. He produced and acted in a Kannada film called Karavali where he refers Karavara in his song Naa Noodi Naliyuva Karavara. I think such small efforts too needs tobe remembered
There was a Writer, Producer, Director and Actor called Vishukumar who hails from coastal Karnataka. He in one of his film called Karavali has hailed Karavara with his song 'Naa Nodi Naliyuva Karavara'I think such enthusiasts too should be remembered
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!