ಮುಖ್ಯಮಂತ್ರಿ ಚಂದ್ರು ಪ್ರಾಧಿಕಾರಕ್ಕೆ ಹುಣ್ಣಿಮೆ ಬೆಳಕು ತರಲಿ!

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ "ಮುಖ್ಯಮಂತ್ರಿ" ಚಂದ್ರು ಅವರನ್ನು ನೇಮಕ ಮಾಡಲಾಗಿದೆ. ಅಭಿವೃದ್ಧಿ ಪ್ರಾಧಿಕಾರದ ಕೆಲಸ ನಿಭಾಯ್ಸಕ್ಕೆ ಚಂದ್ರು ಅವ್ರು ಸೂಕ್ತ ಆಯ್ಕೆ ಅಂತ್ಲೇ ಹೇಳ್ಬೋದು ಗುರು.
ಚಲನಚಿತ್ರ ನಟರೂ, ರಂಗಭೂಮಿ ಕಲಾವಿದರೂ ಆಗಿರುವ ಇವರು ತಮ್ಮ ನಟನಾ ಕೌಶಲ್ಯದಿಂದ ಜನಮನ ಗೆದ್ದಿರೋದಷ್ಟೆ ಅಲ್ಲದೆ ನಾಡು ನುಡಿಗಾಗಿ ತುಡಿಯುವ ಮನಸ್ಸು ಹೊಂದಿದ್ದು ಸದಾ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ನಾಡಪರ ಕಾಳಜಿ ತೋರುತ್ತಲೇ ಬಂದಿದ್ದಾರೆ.
ಇಪ್ಪತ್ತೆಂಟು ದಿನಗಳ ಕಾಲದ ಜಾಥವನ್ನು ನಡೆಸಿದ ಇವರು ನಾಡಿನ ಎಲ್ಲ ಗಡಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕನ್ನಡ ಅಭಿಮಾನ ತುಂಬುವ ಕೆಲಸ ಮಾಡಿ ತಮ್ಮ ಕನ್ನಡ ಕಾಳಜಿಯನ್ನು ಮೆರೆದಿದ್ದಾರೆ. ಇದೀಗ ಇವರ ಹೆಗಲೇರಿರುವ ಹೊಸ ಜವಾಬ್ದಾರಿ ನಾಡಪರ ಕೆಲಸಗಳನ್ನು ನಡೆಸಲು ದೊರೆತ ಸುವರ್ಣಾವಕಾಶವೇ ಆಗಿದ್ದು ಇದರಲ್ಲಿ ಶ್ರೀಯುತರು ಯಶಸ್ವಿಯಾಗಲಿ ಅಂತಾ ಹಾರೈಸೋಣ ಗುರು.
ಪ್ರಾಧಿಕಾರ ತುಸು ಇತ್ತಲೂ ಗಮನ ಹರಿಸಲಿ

ಈಗಾಗಲೇ ನಾಡಪರವಾದ ಎಲ್ಲ ವರದಿಗಳ ಜಾರಿಯ ಬಗ್ಗೆ ಗಮನ ಹರಿಸುವುದಾಗಿ ಚಂದ್ರು ಅವರು ಭರವಸೆ ನೀಡಿದ್ದಾರೆ. ಇದರ ಜೊತೆಯಲ್ಲೇ ಆದ್ಯತೆ ಮೇರೆಗೆ ನಾಮಫಲಕ ಕಾಯ್ದೆಯ ಕಟ್ಟುನಿಟ್ಟಿನ ಜಾರಿಗೆ ಮುಂದಾಗ ಬೇಕು. ಆಡಳಿತದಲ್ಲಿ ಕನ್ನಡದ ಸಂಪೂರ್ಣ ಜಾರಿಗೆ ಮಹತ್ವ ನೀಡಬೇಕು. ನಾಡಿನಲ್ಲಿ ಸಾರ್ವಜನಿಕರ ಬಳಕೆಗೆ/ ಸೇವೆಗೆ ಇರುವ ಎಲ್ಲ ವ್ಯಾಪಾರ, ವಹಿವಾಟು, ಸೇವಾಕೇಂದ್ರ, ರೈಲು, ಬಸ್ಸು, ವಿಮಾನ ನಿಲ್ದಾಣಗಳಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ಮುಂದಾಗಬೇಕು.
ಕನ್ನಡ ನಾಡಿನ ಹಳ್ಳಿಗಾಡಿನ, ಕನ್ನಡವನ್ನಷ್ಟೇ ಬಲ್ಲ, ಅತಿ ಸಾಮಾನ್ಯನಿಗೂ ಯಾವ ಸ್ಥಳದಲ್ಲೂ ಹಿಂಜರಿಕೆ, ಮುಜುಗರ, ಕೀಳರಿಮೆ ಉಂಟಾಗದೆ ಸರಳವಾಗಿ ಕನ್ನಡದಲ್ಲೇ ವ್ಯವಹರಿಸಿಯೂ ಬೇಕಾದ ಸೌಕರ್ಯ ಪಡೆದುಕೊಳ್ಳಲು ಅನುವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಲು ಕಾರ್ಯೋನ್ಮುಖರಾಗಬೇಕು.
ಮುಖ್ಯಮಂತ್ರಿ ಚಂದ್ರು ಅವರಿಗೆ ಈ ಎಲ್ಲ ಕೆಲಸ ಮಾಡುವ ಮನಸ್ಸು, ಶಕ್ತಿಯನ್ನು ತಾಯಿ ರಾಜರಾಜೇಶ್ವರಿ ಕೊಡಲಿ ಅಂತ ಆಶಿಸೋಣ. ಅವರ ಕನ್ನಡ ಪರ ಕೆಲಸಗಳನ್ನು ಬೆಂಬಲಿಸೋಣ. ಬಾ ಗುರು.

6 ಅನಿಸಿಕೆಗಳು:

Anonymous ಅಂತಾರೆ...

ಬಹಳ ಸಂತಸ ತರುವಂತಹ ಸುದ್ದಿ. ಅವರ ಕೆಲಸಕ್ಕೆ ಅಡ್ಡಿಯಾಗದಂತೆ ಬೀಕಾಗುವ ಎಲ್ಲಾ ತರಹದ ಸೌಕರ್ಯಗಳನ್ನ ಅವರ ಇಲಾಖೆ ಮತ್ತು ಸರ್ಕಾರ ನೆರವೇವಿರಸಲೆಂದು ಆಶಿಸುತ್ತೇನೆ.

ಉಉನಾಶೆ ಅಂತಾರೆ...

ನಾನು ನಿನ್ನೆ ಉದಯ ಟಿವಿಯಲ್ಲಿ ನೋಡಿದಾಗ ಅಂದು ಕೊಳ್ತಾ ಇದ್ದೆ, ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲಿ ಚಂದ್ರು ಗಿಂತ ಒಳ್ಳೆಯ ಜನ ಇಲ್ಲ ಈ ಹುದ್ದೆಗೆ, ಇದಕ್ಕಿಂತ ಒಳ್ಳೆ ಹುದ್ದೆ ಇಲ್ಲ ಚಂದ್ರುಗೆ ಅಂತ.
ಚಂದ್ರು ಈ ಅಧಿಕಾರದಲ್ಲಿರುವುದು ಖಂಡಿತವಾಗಿ ಒಳ್ಳೆಯ ಸೂಚನೆ...
ಬಳಗದ ವತಿಯಿಂದ ಅವರನ್ನು ಭೇಟಿಯಾಗುವ ಉದ್ದೇಶವಿದೆಯೇ?
ಚಂದ್ರು - ಕನ್ನಡ ಬೋರ್ಡ್ - ಗಿಂತ ಹೆಚ್ಚಿನದನ್ನು ಸಾಧಿಸುವರೆಂದು ಆಶಿಸುತ್ತೇನೆ.
ಇತೀ,
ಉಉನಾಶೆ

Unknown ಅಂತಾರೆ...

Cahndru avanta dheemantarige avakaasha kottirodu sookta vishaya guru, avaru bhaashaa abhivruddigagi khandita dudiyuttare, kannadakke innoo olle sthanamaana tandu koduttaremba nambike namagide. avara sadhaneya haadi sugamavaagirali.

ಪುಟ್ಟ PUTTA ಅಂತಾರೆ...

ಮು.ಮ ಚಂದ್ರು ಈ ಕೆಲಸಕ್ಕೆ ಬಹಳ ಸೂಕ್ತವಾದ ಆಯ್ಕೆ.

Anonymous ಅಂತಾರೆ...

ಮು.ಮ. ಚಂದ್ರು ಅವರಿಗೆ ಅಭಿನಂದನೆಗಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅವರಿಗೆ ಹೆಚ್ಚಿನ ಕೆಲಸ ಮಾಡುವ ಅವಕಾಶ ದೊರಕಿದೆ. ಆ ಕೆಲಸದಲ್ಲಿ ಅವರಿಗೆ ಆಸಕ್ತಿಯೂ ಇದೆ. ಅವರು ಪಟ್ಟು ಹಿಡಿದು ಕೆಲಸ ಮಾಡಲು ನಾವೆಲ್ಲಾ ಸಹಕಾರ ನೀಡಬೇಕು.

-ರಾಮ್

Anonymous ಅಂತಾರೆ...

ಬನವಾಸಿ ಬಳಗದ ಕನ್ನಡದ ಅಭಿವ್ರುದ್ದಿಯ ಬಗ್ಗೆ ಇರುವ ಕನಸುಗಳನ್ನು ಚಂದ್ರು ಅವರಲ್ಲಿ ಹೇಳಿಕೊಂಡರೆ ಸೂಕ್ತ. ಖಂಡಿತ ಭೆಟ್ಟಿಯಾಗಿ.

ಬೃಂದ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails