ಕನ್ನಡನಾಡಿನ ಪ್ರತಿಭಾ ಪಲಾಯನ ನಿಲ್ಲಲಿ!

ಇತ್ತೀಚೆಗೆ ಮದುರೈನಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಹಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕದ ಆಟಗಾರರದ್ದೇ ದರ್ಬಾರಂತೆ. ಚಿನ್ನ, ಬೆಳ್ಳಿ ಕಂಚು ಎಲ್ಲಾ ಬಗೆಯ ಪದಕಗಳ್ನ ನಮ್ಮವರು ಗೆದ್ದದ್ದೇ ಗೆದ್ದದ್ದು. ಆದ್ರೆ ಖುಷಿ ಪಟ್ಟಿದ್ದು ಮಾತ್ರಾ ಆಂಧ್ರ, ಜಾರ್ಖಂಡ್ ಥರದ ಬೇರೆ ಬೇರೆ ರಾಜ್ಯಗಳು ಅನ್ನೋ ಸುದ್ದಿ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ. ನಿಜಾಂಶ ಕೆದಕಿ ನೋಡಿದ್ರೆ ಕರ್ನಾಟಕದ ಕ್ರೀಡಾ ವ್ಯವಸ್ಥೆಯೊಳಗಿನ ದುರಂತ ಕಾಣತ್ತೆ ಗುರು! ಯಾಕಂದ್ರೆ ಇವರೆಲ್ಲಾ ಪ್ರತಿನಿಧಿಸಿದ್ದು ನಮ್ಮ ನಾಡನ್ನಲ್ಲ, ಬದಲಾಗಿ ಆ ರಾಜ್ಯಗಳನ್ನು. ಅರೆ! ನಮ್ಮೊರನ್ನು ಹೊರರಾಜ್ಯದೋರು ಆದರುಸ್ತಾರೆ ಅಂತಾ ಖುಷಿ ಪಡೋದು ಬಿಟ್ಟು ಕ್ಯಾತೆ ತೆಗೀತೀರಾ ಅನ್ನಬೇಡಿ. ಇವರೆಲ್ಲಾ ಅಲ್ಲಿಗೆ ಹೋಗಿದ್ದು, ನಮ್ಮ ನಾಡಲ್ಲಿ ಆ ಪ್ರತಿಭೆಗಳಿಗೆ ಅವಕಾಶ ಸಿಕ್ತಿಲ್ಲ ಅನ್ನೋ ಕಾರಣಕ್ಕೆ. ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ ಆಲ್ವಾ ಗುರು?

ಈ ಪ್ರತಿಭೆಯ ಪಲಾಯನ ಏಕೆ?
ನಿಜವಾಗ್ಲೂ ನಮ್ಮ ರಾಜ್ಯದ ಆಟಗಾರರು ಯಾಕೆ ಬೇರೆ ಬೇರೆ ರಾಜ್ಯಗಳಿಗೆ ಹೋಗುವ ಪರಿಸ್ಥಿತಿ ಹುಟ್ಟುತ್ತಿದೆ ಅಂತ ನೋಡಿದ್ರೆ ಇಲ್ಲಿ ಆವರಿಗೆ ಸಾಕಷ್ಟು ಸೌಕರ್ಯ, ಹಣ ಸಹಾಯ ಮತ್ತು ಪ್ರೋತ್ಸಾಹಗಳು ಸಿಗದ ಕೊರತೆ ಇದೆಯೇನೋ ಅನ್ಸುತ್ತೆ. ಇಂಥಾ ಕೊರತೆಗಳ ಕಾರಣಗಳಿಂದಲೇ ನಮ್ಮ ನಾಡಿನ ಪ್ರತಿಭೆಗಳು ಅವಕಾಶವನ್ನು ಅರಸಿ ಹೊರರಾಜ್ಯಕ್ಕೆ ಹೋಗ್ತಿರೋದು.
ಇದು ಹೀಗಾಗಬಾರದು.
ಹೇಗಿರ್ಬೇಕು ಪರಿಸ್ಥಿತಿ?
ತಮ್ಮಲ್ಲಿರೋ ಕ್ರೀಡಾ ಪ್ರತಿಭೆಯನ್ನೇ ನಂಬಿರೋ ಹಲವಾರು ಆಟಗಾರರಿಗೆ ನಾಡಿನ ಸರ್ಕಾರ ಸಾಕಷ್ಟು ಉತ್ತೇಜನ ಕೊಡಬೇಕು. ಒಂದು ರಾಜ್ಯದಲ್ಲಿ ಹುಟ್ಟಿ ತಮ್ಮ ಪ್ರತಿಭೆ ಪ್ರದರ್ಶಿಸೊಕ್ಕೆ ಮಾತ್ರ ಮತ್ತೊಂದು ರಾಜ್ಯದ ಮೋರೆ ಹೋಗಿ ಅಲ್ಲೇ ನೆಲೆಸಿ, ಅಲ್ಲಿಯವರಾಗೋದು ಆಟಗಾರರಿಗೂ ಮನಸ್ಸಿಗೆ ಕಷ್ಟವಾಗೋ ವಿಷಯಾನೇ ಆಗಿರಬಹುದು ಮತ್ತು ಅನಿವಾರ್ಯವಾಗಿ ಅವ್ರು ಹಾಗೆ ನಡ್ಕೊತಿರಬಹುದು. ಹೀಗಾಗದಂತೆ ಸರ್ಕಾರದ ಕ್ರೀಡಾ ಇಲಾಖೆ, ಕ್ರಮ ಕೈಗೊಂಡು ಪಟುಗಳಿಗೆ ಪ್ರೋತ್ಸಾಹ ನೀಡಲು ಎಲ್ಲಾ ಬಗೆಯ ಯೋಜನೆಗಳ್ನೂ ಕೈಗೆತ್ತಿಕೊಳ್ಳಬೇಕು. ಒಳ್ಳೊಳ್ಳೆ ಪ್ರಾಯೋಜಕರನ್ನು ಹುಡುಕಿ, ಆಟಗಾರರಿಗೂ ಪ್ರಾಯೋಜಕರಿಗೂ ನಡುವಿನ ಸೇತುವೆಯಾಗಿ ಕ್ರೀಡಾ ಪ್ರಾಧಿಕಾರಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿ ನಮ್ಮವರ ಏಳಿಗೆಗೆ ಕಾರಣವಾಗಬೇಕು. ಒಟ್ಟಿನಲ್ಲಿ ಕನ್ನಡಿಗರ ಪಾಲಿಗೆ ಕನ್ನಡ ನಾಡು ಎಲ್ಲ ಕ್ಷೇತ್ರಗಳಲ್ಲಿನ ಸಾಧನೆಗೆ ಫಲವತ್ತಾದ ನೆಲವಾಗಬೇಕು.

2 ಅನಿಸಿಕೆಗಳು:

ಪುಟ್ಟ PUTTA ಅಂತಾರೆ...

ನನ್ನ ಅನಿಸಿಕೆ ಈ ಲೇಖನಕ್ಕೆ ಸಂಬಂಡಿಸಿದ್ದಲ್ಲ. ಇವತ್ತು ಪ್ರಜಾವಾಣಿಯಲ್ಲಿ ಕೃಷ್ಣೈಯ್ಯ ಶೆಟ್ಟಿ ಎಂಬ ಮೂರ್ಖ ಮಂತ್ರಿ ತಿರುಪತಿಯಲ್ಲಿ 1000 ಕೊಠಡಿಯ ಬಿಲ್ಡಿಂಗ್ ಕಟ್ಟುತನಂತೆ. ಅದು ಕರ್ನಾಟಕದ ಹಣದಲ್ಲಿ. ಇವನೊಬ್ಬ ತೆಲುಗು ಗುಳ್ಡು. ಇವನನ್ನುಗೆಳ್ಲಿಸಿ ಕರ್ನಾಟಕದ ಜನ ಮಣ್ಣು ತಿನ್ನುವಂಥ ಕೆಲಸ ಮಾಡಿದ್ದಾರೆ. ಇನ್ನಾದರೂ ಬುಧಿ ಕಲಿಯಬೇಕಾಗಿದೆ.

Anonymous ಅಂತಾರೆ...

Today I saw in News that Sports minister Goolishetty Shekat is taking action and he has even released 100 Crs to support local sportsmen. Thats a reat news!!!

Thanks Enguru for sucn a Wonderful report.

As above Putta is saying if Krishnaiah sheetty is really using Karnataka's moeny to Improve facility in AP then its such a SAD news we need to make sure that its not going to happen.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails