ನಮ್ಮದಾಗಿದೆ ನಮ್ಮೂರ ಬಸ್ಸು!

ಅಡ್ಬಿದ್ದೆ ಕಣ್ರಣ್ಣೋ, ನಾನು ಎಂಕ. ಮೊನ್ನೆ ನಮ್ ಬಾಮೈದ ಸೀನನ್ ನೋಡಿಕ್ಯಂಡ್ ಬಂದು ಬುಡ್ಮಾ ಅಂತ ಎಂಡ್ರುನ್ನೂ ಮಕ್ಕೂಳ್ನೂ ಕರ್ಕೊಂಡು ಒಸಿ ಊರ ಕಡೆಗೆ ಓಗಿದ್ದೆ. ಅದೇ ನಮ್ ಸೀನ ಇರೋ ಊರು ಮಂಡ್ಯದ್ ತಾವ್ ಇರದು. ಅದ್ಕೆಯಾ ಅಂಗೆ ಮೈಸೂರಿಂದ ಮಂಡ್ಯಕ್ ಬಸ್ ಅತ್ಕೊಂಡ್ವಿ. ಆ ಕಂಡಕ್ಟರಪ್ಪ ಬಂದು ತಿಕೀಟು ತಕ್ಕಳ್ಳೀ ಅಂದಿದ್ಕೆ "ಊ ಕಣಣ್ಣಾ ಮಂಡ್ಯಕ್ ಎಲ್ಡು ಪುಲ್ಲು, ಎಲ್ಡು ಆಪು ತಿಕೀಟು ಅರಿ" ಅಂದೆ.

ಆ ವಯ್ಯನೂ ಅದೆಂಥದೋ ಮೆಸಿನ್ ಕುತ್ತಿಗ್ಗೆ ನೇತ್ ಆಕ್ಕೊಂಡಿದ್ದ. ಕಾಸು ಇಸ್ಕೊಂಡಿದ್ದೇ ಅದ್ನ ಕುಟು ಕುಟು ಒತ್ತುದಾ. ನಾನೂನುವೆ ಬಾಯ್ ಬುಟ್ಕೊಂಡು ನೋಡ್ತಿವ್ನಿ, ಮ್ಯಾಗಿಂದ ಕುರ್ರ್ ರ್‍ ರ್‍ ಅಂತ ಆಳೆ ಒರಗ್ ಬಂದೇ ಬುಡದಾ! ಇದೇನಪ್ಪಾ ನಾಕೋ ಆರೋ ಚೀಟಿ ಕಯ್ಯಾಗೆ ಮಡುಗ್ತಾನೆ ಅಂತ ಕಾಯ್ತಿದ್ರೆ ಆ ವಯ್ಯ ಒಂದೇ ಚೀಟಿ ಕೊಡದಾ? ಬೊಂಬಾಟಾಗ್ ಐತಲ್ಲಪ್ಪೋ ಇದು ಅನ್ಕತಾ ಅಂಗೆ ತಿಕಿಟ್ಟಿನ್ ಕಡಿಕ್ ನೋಡ್ತೀನಿ... ಮೈ ಝುಮ್ ಅಂದ್ ಬುಡದಾ? ಅಲ್ಲಾ ಈ ಕೆಎಸ್ಸಾರ್ಟೀಸಿ ಬಡ್ಡೆತ್ತವು ಈ ಪಾಟಿ ಸುಧಾರುಸ್ ಬುಟ್ಟವ್ರಲ್ಲಪ್ಪೋ ಅಂತ ಬೋ ಕುಸ್ಯಾಗೋತು ಗುರು!

ಆ ತಿಕಿಟ್ಟಲ್ಲಿ ಎಲ್ಲಿಂದ ಎಲ್ಲಿಗ್ ಓಯ್ತಿದೀವಿ, ಎಸ್ಟು ಜನ ದೊಡ್ಡೋರು, ಎಸ್ಟು ಚಿಕ್ಕವು, ಎಸ್ಟು ಕಾಸ್ ಕೊಡ್ಬೇಕು ಅಂತೆಲ್ಲಾ ನಂಗ್ ಅರ್ಥ ಆಗೋಂಗೆ ಕನ್ನಡದಾಗೇ ಪಿರಿಂಟ್ ಮಾಡ್ ಬುಟ್ಟವ್ರೇ. "ಅಲ್ಲಾ ಕಣಣ್ಣಾ, ಈ ಇಂಗ್ಲಿಸ್ ಮೆಸಿನ್ನು ಅದೆಂಗ್ಲಾ ಕನ್ನಡದಾಗ್ ಬರೀತುದೆ" ಅಂದುದ್ಕೆ ಆ ಕಂಡಕ್ಟ್ರಣ್ಣ "ಏ, ಬರೀ ತಿಕೇಟ್ ಏನ್ಲಾ, ಬೇಕಂದ್ರೆ ಇಡೀ ಸರ್ಕಾರಾನೇ ಕನ್ನಡದಲ್ ಮಾಡ್ಬೌದು" ಅಂದ. ಅದೂ ಸರೀನೇಯೆ, ನಮ್ ಕನ್ನಡದ್ ಐಕ್ಳು ಕಂಪ್ಯುಟರ್ರು, ಐಟಿ, ಇಪ್ರೊ, ಇನ್ಪೋಸಿಸ್ಸು ಅಂತ ಸಿಟಿಗ್ ಓಗಿ ಇನ್ನೇನ್ ತಾನೆ ಗೆಯ್ಮೆ ಮಾಡ್ಯಾವು, ಕನ್ನಡದಲ್ಲೇ ಬಸ್ಸಿನ್ ತಿಕೀಟು, ರೈಲಿನ್ ತಿಕೀಟು, ಅಂಗಡಿ ಬಿಲ್ಲು, ಕರೆಂಟು, ನೀರಿನ್ ಬಿಲ್ಲು... ಇಂಗೇ ಎಲ್ಲಾನೂವೆ ಕನ್ನಡದಲ್ಲಿ ಬರೋ ಅಂಗ್ ಮಾಡದ್ ಬುಟ್ಟು!! ಅಲ್ವುರಾ ಗುರುಗಳೇ?

8 ಅನಿಸಿಕೆಗಳು:

hamsanandi ಅಂತಾರೆ...

ಸೆಂದಾಗೈತ್ರಿ :)

Anonymous ಅಂತಾರೆ...

ಬೋ ಕುಸಿ ಆಯ್ತು ಕನ್ರಪ್ಪೊ. ಹಿಂಗೆಯ ಎಲ್ಲಾ ರಸೀದಿಗಳನ್ನ ಕನ್ನಡದಲ್ಲೂ ಒಸಿ ಬರೋಹಾಂಗ್ ಮಾಡ್ರಪ್ಪೊ. ಈ ಇಂಗ್ಲಿಸ್ಸು, ಹಿಂದಿಯ ತಲೆ ಮ್ಯಾಕೆ ಕೂರುಸ್ಕಂಡ್ ಮೆರೆಯೋರ್ ನಡುವೆ ಸಿಕ್ಕ್ ಹಾಕಂಡ್ ಉಸ್ರು ಕಟ್ಟೈತೆ.

ದೇವ್ರ್ ಚೆನ್ನಾಗ್ ಇಟ್ಟಿರ್ಲಿ ನಿಮ್ಮನ್ನ.

ತಿಳಿಗಣ್ಣ ಅಂತಾರೆ...

ಸುಮಾರು ಒಂದು ವರುಶದಿಂದ ಇದೆ ಅನ್ನಿಸ್ತದ ಇದು...

ಇನ್ನೊಂದು ಗಮನಿಸಿರಿ.. ಟಿಕೇಟಲ್ಲಿ ಬರೀ ಎರಡು ಸಾಲು ಮತ್ತು ಮೊತ್ತು ಇಂಗಲೀಸಲ್ಲಿ ಇದೆ.

ಡೇಟು, ಟಯಿಮು ಕೂಡ ಇದೆ...

ನಂನಿ

Unknown ಅಂತಾರೆ...

ಯೆಂಕಣ್ಣ ನಮಸ್ಕಾರಣ್ಣೋ, ವಿಷ್ಯ ತಿಳ್ದು ಭೋ ಖುಷಿ ಆತಪ್ಪೋ. ಹಿಂಗೆಯಾ ಎಲ್ಲಾ ಕಡೆ ಸುಧಾರಿಸಿಬಿಟ್ರೆ ನಮ್ಮ ಐಕ್ಳೆಲ್ಲ ನೆಮ್ಮದಿಯಿಂದ ಜೀವ್ನ ಮಾಡ್ಬೋದು. ನಿನ್ನ ಕನ್ನಡ ಪಿರೂತಿಗೆ ಶಾನೆ ಧನ್ಯವಾದ. - ಅಂಜನ್

Anonymous ಅಂತಾರೆ...

ಯೆಂಕಣ್ಣೋ ಭಾಳ್ ಛಂದ ಬರ್ದಿದ್ದಿಯಣ್ಣೋ.. ಈಗ ಕನ್ನಡ್ದಾಗೆ ತಿಕೀಟು ಪಿರಿಂಟ್ ಮಾಡೋಕೂ ನಮ್ಮ ಕನ್ನಡ ಜನ (ಕರವೇ)ಸಾರಿಗೆ ಇಲಾಖೇಯೋರಿಗೆ ಶಾನೆ ಬಿಸಿಮುಟ್ಟಿಸಿರೋದೂ ಸತ್ಯ. ಆದರೂ ಪಕ್ಕದ್ ರಾಜ್ಯಕ್ಕೆ ಹೋಲಿಸಿದ್ರೆ ನಮ್ಮ್ ಕೆಎಸ್ಸಾರ್ಟಿಸಿ ಶ್ಯಾನೆ ಮುಂದಿದೆ. ತಿಕೀಟು ಮಿಸಿನಲ್ಲಿ ಪಿರಿಂಟ್ ಮಾಡೋಕ್ ಸುರು ಮಾಡ್ದೋರೆ ಅವ್ರು.. ಈಗ ಕನ್ನಡ ಬಂದು ಮತ್ತೂ ಸೆಂದಾಗೈತೆ..ಏನ್ ಗುರೂ?

Anonymous ಅಂತಾರೆ...

ಹೂಂ ಕಣ್ಣಣ್ಣೋ, ಭಲ್ ಪಸಂದಾಗದೆ...ಆದ್ರೆ ಅದ್ಯಾಕಣ್ಣೊ ನಂಬರ್ಗಳು ಇಂಗ್ಲೀಸ್ನಾಗವೆ? ಈಟ್ ಮಾಡ್ದೋರಿಗೆ ಅದನ್ನು ಮಾಡೋಕ್ ಏನ್ ಬ್ಯಾನಿ ಅನ್ತಿನಿ?

Anonymous ಅಂತಾರೆ...

sakhat maga ..

ನಾನವನಲ್ಲ ಅಂತಾರೆ...

ಯಾವ ಹುಟ್ಟಿದ ಮಗು ತಾನೆ ನಾನು ಒದಿದರೆ ಕಾನ್ವೆಂಟಲ್ಲೆ ಒದೊದು..ಇಲ್ಲಾಂದ್ರೆ ನಾನು ಸ್ಕೊಲ್ ಗೆ ಹೊಗೊಲ್ಲ ಅಂಥ ಹೇಳ್ತಾವಾ? ಇದು ಯಾರ ಜವಬ್ದಾರಿ? ಯಾಕೆ ಕನ್ನಡದಲ್ಲಿ ಒದಿದೊರು ಯೇನು ಸಾಧನೆನೆ ಮಾಡಿಲ್ವಾ? ನಮ್ಮಲ್ಲೇ ಆ ಭಾವನೆ ಇಲ್ಲಾಂದಮೆಲೆ ನಮ್ಮ ಮಕ್ಕಳಲ್ಲಿ ಅದನ್ನ ಹೇಗೆ ಮೂಡಿಸೊಕೆ ಸಾಧ್ಯಾ? ಇದು ನಿಜವಾಗ್ಲು ತುಂಬಾ ವಿಚಾರ ಮಾಡೊ ವಿಶ್ಯಾನೆ... ನಮ್ಮ ಜನ ವಿಚಾರ ಯೆನೊ ಮಾಡ್ತಾರೆ..ಹೆಳ್ತಾರೆ..ಬರಿತಾರೆ ..ಮತ್ತೆ ಅದೆ ತಮ್ಮ ಮಕ್ಕಳ ವಿಶ್ಯ ಬಂದಾಗ್ ಅದೆಕೊ ಯೆನೊ ಯೆಲ್ಲಾ ಮರ್ತು ಬಿಡ್ತಾರೆ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails