ಈ ಪ್ಯಾಕಿನಲ್ಲಿ ವ್ಯಾಲ್ಯೂ ಇಲ್ಲ!

ಫೋನು ಇಂಟರ್ನೆಟ್ಟು ಅಂತ ಮಾರ್ಕೊಂಡು ಕುಂತಿದ್ದ ಏರ್ಟೆಲ್ ನೋರು ಇತ್ತೀಚೆಗೆ ಮನೆಯೊಳ್ಗಿನ ಟೀವಿಗೂ ಹೊಕ್ಕೋಣ ಅಂತ ಗುರಿ ಇಟ್ಕೊಂಡು ಡಿಜಿಟಲ್-ಟಿವಿ ಅಂತ ಹೊಸದೊಂದು ಯೋಜ್ನೆ ಹಾಕಿದಾರೆ. ಇದರ ಬಗ್ಗೆ ಮಾಹಿತಿಯನ್ನ ಮನ್-ಮನೆಗೂ ಸುತ್ತೋಲೆ ಹಂಚ್ತಿದಾರೆ. ಇದ್ರಲ್ಲಿ ಒಂದು ಬಾಳ ಒಳ್ಳೇ ವಿಷ್ಯ ಏನಂದ್ರೆ ನಾಡಲ್ಲೆಲ್ಲಾ ಈ ಯೋಜ್ನೆ ಬಗ್ಗೆ ಮಾಹಿತಿ ಕೊಡೋ ಸುತ್ತೋಲೆ ಪೂರ್ತಿ ಕನ್ನಡದಾಗೇ ಇದೆ. ಯೋಜ್ನೆ ವಿವರ, ಯಾವ್ಯಾವ ವಾಹಿನಿಗಳಿಗೆ ಎಷ್ಟೆಷ್ಟು ದುಡ್ಡು ಅಂತೆಲ್ಲಾ ಕನ್ನಡದಲ್ಲೇ ಅಚ್ಚ್ ಹಾಕ್ಸಿ, ಕರ್ನಾಟಕದಲ್ಲಿ ಗ್ರಾಹಕರ ನಾಡಿ ಮಿಡಿತ ಅರ್ಥ ಮಾಡ್ಕೊಂಡಿದೀವಿ ಅಂತ ಹೇಳ್ತಿರೋ ಹಾಗಿದೆ ಇವ್ರು. ಇದು ಕನ್ನಡ ನಾಡಿನ ಗ್ರಾಹಕರಿಗೆ ಖಂಡಿತವಾಗ್ಲೂ ಒಳ್ಳೇ ಸುದ್ದಿ!

ಯೋಜ್ನೆ ಬಗ್ಗೆ ಮಾಹಿತಿಯೇನೋ ಚೆನ್ನಾಗಿ ನೀಡಿದಾರೆ, ಯೋಜ್ನೆ ಹೆಂಗೋ? ಅಂತ ನೋಡಿದ್ರೆ ಯಾಕೋ ಇಲ್ಲಿ ಇವ್ರು ಎಡ್ವಿರೋ ಹಾಗೆ ಕಾಣ್ತಿದೆ ಗುರು! ಬೆಂಗ್ಳೂರಲ್ಲಿ ಈ ಹಿಂದೆ ಎಫ್.ಎಮ್ ವಿಷ್ಯದಲ್ಲೂ ತಡವಾಗಿ ಆದಂತೆ, ಇವ್ರೂ ಯಾಕೋ ಕರ್ನಾಟಕದ ಗ್ರಾಹಕರ ನಿಜವಾದ ಅವಶ್ಯಕಥೆಯನ್ನೇ ತಿಳ್ಕೊಳೋ ಪ್ರಯತ್ನ ಮಾಡಿಲ್ಲ ಅಂತ ಎದ್ದು ಕಾಣ್ತಿದೆ. ಉದಾಹರ್ಣೆಗೆ ಸೌತ್-ವ್ಯಾಲ್ಯೂ-ಪ್ಯಾಕ್ ಅಂತ ಹೆಸರಿನಡಿ ಕರ್ನಾಟಕದಲ್ಲಿ ಮಾರ್ತಿರೋ ವಾಹಿನಿಗಳನ್ನ ನೋಡಿದರೆ, ಕರ್ನಾಟಕದಲ್ಲಿ ಟಿವಿ ನೋಡುಗರಿಗೆ ಏನು ಬೇಕು, ಏನು ಬೇಡ ಅನ್ನೋದೇ ಇವ್ರಿಗೆ ಅರ್ಥ ಆಗಿಲ್ಲ ಅನ್ಸತ್ತೆ ಗುರು! ಒಟ್ಟು ಇರೋ ಕನ್ನಡ ವಾಹಿನಿಗಳಲ್ಲಿ ಶೇಕಡ ೫೦ ರಷ್ಟು ಮಾತ್ರ ಕಾಣ್ತಿವೆ ಈ ಪ್ಯಾಕಿನಲ್ಲಿ! ಕನ್ನಡ ನಾಡಿನ ಗ್ರಾಹಕರಿಗೆ ಇರೋ ಎಲ್ಲಾ ವಾಹಿನಿಗಳನ್ನೂ ನೋಡುವ ಅಸೆಯನ್ನ ಏರ್ಟೆಲ್ಲಾಗ್ಲಿ, ಡಿಶ್, ಟಾಟಾ-ಸ್ಕೈ ಅಥವಾ ರಿಲಯನ್ಸಾಗ್ಲಿ ಪೂರೈಸಿದಾಗ್ಲೇ ಈ ಪ್ಯಾಕಿನಲ್ಲಿ ವ್ಯಾಲ್ಯೂ ಕಾಣೋದು.

ಇದು ಸರಿ ಹೋಗಬೇಕು. ಒಂದು ಭಾಷೆಯ ಜನರಿಗೆ ಅಂತ ಹೇಗೆ ಅವರ ಭಾಷೆಯಲ್ಲೇ ಸುತ್ತೋಲೆ ಮುದ್ರಿಸಿದಾರೋ, ಒಂದು ನಾಡಿನ ಎಫ್.ಎಮ್ ವಾಹಿನಿಯಲ್ಲಿ ಹೇಗೆ ಅಲ್ಲಿಯ ಭಾಷೆಯ ಹಾಡುಗಳೇ ಕೇಳುತ್ತವೆಯೋ, ಹಾಗೆಯೇ ಅವರ ಭಾಷೆಯಲ್ಲಿ ದೊರೆಯೋ ಎಲ್ಲಾ ಟಿ.ವಿ ವಾಹಿನಿಗಳೂ ಆ ಜನರಿಗೆ ಸಿಗುವಂತೆ ಮಾಡೋದೇ ಈ ಏರ್ಟೆಲ್ ಮತ್ತಿತರರ ಬಿಜ್ನೆಸ್ ತಂತ್ರವಾಗಬೇಕು. ಇದನ್ನ ಸೇವಾದಾರರು ಅರಿಯೋದಲ್ದೆ, ನಾವೆಲ್ರೂ ಗ್ರಾಹಕರಾಗಿ ಬೇಡಿಕೆಯ ಮೂಲಕ ಒತ್ತಾಯ ಮಾಡಬೇಕು ಗುರು.

2 ಅನಿಸಿಕೆಗಳು:

Anonymous ಅಂತಾರೆ...

ತುಂಬಾ ಒಳ್ಳೆಯ ವಿಷಯದ ಬಗ್ಗೆ ಚರ್ಚೆ ಮಾಡಿದೀರ . ಏರ್ ಟೇಲ್ನೋರು ಕೊಡ್ತಾ ಇರೋ ಸೌತ್ ಪ್ಯಾಕೆಜ್ನಲ್ಲಿ ಕನ್ನಡದ ಹಲವು ಚನ್ನೇಲ್‌ಗಳು ಇಲ್ಲ. ಇದೆ ರೀತಿ ಟಾಟಾ ಸ್ಕೈ ನಲ್ಲೂ ಹಲವು ಕನ್ನಡ ಚನ್ನೆಲ್ಗಳಿಲ್ಲ. ಕನ್ನಡದ ಮಾರುಕಟ್ಟೆಯನ್ನ ಆರ್ಟ ಮಾಡಿಕೊಂಡ ಟಾಟಾ ಸ್ಕೈ ೨ ವರದಿಂದ ""ಸುವರ್ಣ" ವಾಹಿನಿ ಕೊಡ್ತಾ ಇದೆ.ಇನ್ನೂ ಜೀ ಕನ್ನಡ,ಕಸ್ತೂರಿ,ಸುವರ್ಣ ವಾರ್ತೆ ಇವುಗಳು ಇನ್ನೂ ಬರ್ತಾ ಇಲ್ಲ.ಏರ್ ಟೆಲ್‌ನಲ್ಲಿ ಇನ್ನೂ ಕಸ್ತೂರಿ,ಸುವರ್ಣ,ಸುವರ್ಣ ವಾರ್ತೆ,ಟಿ ವಿ ೯, ಇವೆಲ್ಲ ಬರ್ತಾ ಇಲ್ಲ. ಇದರ ಬಗ್ಗೆ ಒಂದು ಈ ಪ್ರತಿಭಟನೆ ಮಾಡ್ಬೇಕು ಗೆಳೆಯರೇ.

ಚಂದ್ರು

ಕನ್ನಡಿಗ ಅಂತಾರೆ...

ಏರ್ಟೆಲ್ ಕಸ್ಟಮರ್ ಕೇರ್ ಸರ್ವಿಸ್ ನಲ್ಲಿ, ಕನ್ನಡ ಒಪಶನ್ ಇಲ್ಲ ಎಲ್ಲರು ಪ್ಲೀಸ್ ಕರೆ ಮಡಿ.....ರಿಕ್ವೆಸ್ಟ್ ಮಡಿ
ಕನ್ನಡ ಬೇಕು ಅಂಥ
೧೮೦೦೧೮೦೮೦೮೦

Airtel Customer Care Service nalli, KannaDa option ella ellaru dhavittu karay madi.....request madi
KannaDa beku antha
18001808080

SORRY FOR MY POOR KANNADA
http://www.ilovekannada.ourtoolbar.com/

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails