ಮೊನ್ನೆ ಮೊನ್ನೆ ನಂ ರಾಜ್ಯೋತ್ಸವ ಆಯ್ತಲ್ಲಾ, ಅದರ ಆಚರಣೆ ಮಾಡ್ತಾ ಅಣ್ಣಾವ್ರ ಹಾಡಿಗೆ ಅಲ್ಲಿದ್ದವ್ರು ಕುಣಿದು ಕುಪ್ಪಳಿಸುತ್ತ ಇರೋ ಈ ವಿಡಿಯೋ ನೋಡಿ. ಇದು ಜಪಾನಿನಲ್ಲಿ ಇಕಾಕು ಅಂತ ಒಂದು ಊರಲ್ಲಿ ಅಲ್ಲಿರೋ ಕನ್ನಡಿಗರು ಸೇರಿ ರಾಜ್ಯೋತ್ಸವ ಮಾಡಿದಾಗ ತೆಗೆದದ್ದು. ಅದೇನ್ ಗುರು? ಅಲ್ಲಿ ಆ ಪಾಟಿ ಕನ್ನಡ ಮಂದಿ ಇದಾರಾ ಅಂತ ಅಚ್ಚರಿ ಪಡಬೇಡಿ. ಅಲ್ಲಿ ಇಷ್ಟು ಜನ ಕನ್ನಡಿಗರು ಇರೋದೂ ನಿಜ, ಸೇರಿದ್ದೂ ನಿಜ, ನಾಡಹಬ್ಬಕ್ಕೆ ಬಾವುಟ ಹಾರಿಸಿದ್ದೂ ನಿಜ. ಇದರಲ್ಲೇನು ವಿಶೇಷ? ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಕನ್ನಡದ ಜನ ಇಲ್ವಾ? ಅವರೂ ರಾಜ್ಯೋತ್ಸವ ಮಾಡ್ತಿಲ್ವಾ? ಅಂತ ಹುಬ್ಬು ಹಾರುಸ್ಬೇಡಿ. ವಿಷಯ ಅಲ್ಲಿ ಕನ್ನಡದ ಜನ ಇದಾರೆ ಅನ್ನೋದೂ ಅಲ್ಲ, ಅವರು ರಾಜ್ಯೋತ್ಸವ ಮಾಡುದ್ರು ಅನ್ನೋದೂ ಅಲ್ಲ. ಮತ್ತೇನಪ್ಪಾ ಸಮಾಚಾರಾ ಅಂತೀರಾ?
ಕುಶಲ ಕನ್ನಡಿಗ ರೂಪುಗೊಳ್ಳುತ್ತಿದ್ದಾನೆ!
ಇವರೆಲ್ಲಾ ಬೆಂಗಳೂರಿನ ಟಯೋಟಾ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇರೋ ಇಂಜಿನಿಯರುಗಳು. ಬೆಂಗಳೂರಿಂದ ವರ್ಷ, ಎರಡು ವರ್ಷ, ಮೂರು ವರ್ಷ ಅಂತ ಜಪಾನಿಗೆ ತರಬೇತಿಗಾಗಿ ಅಂತ ಸಂಸ್ಥೆಯೋರು ಇವರನ್ನು ಕಳಿಸಿದ್ದಾರೆ. ಇವರು ತರಬೇತಿ ಮುಗಿಸಿದ ಮೇಲೆ ಮತ್ತೆ ಕರುನಾಡಿಗೆ ಮರಳಿ ಬರ್ತಾರೆ... ಹಾಂ! ಬರಿ ಇಂಜಿನಿಯರ್ ಗಳಾಗಿ ಅಲ್ಲ! ಕಾರು ತಯಾರಿಕೆಯ ಪ್ರಮುಖ ವಿಷಯಗಳಲ್ಲಿ ತರಬೇತಿ ಪಡೆದು ಪರಿಣಿತರಾಗಿ ಬರ್ತಾರೆ. ಹೌದು ಗುರು! ನಮ್ಮ ಕನ್ನಡಿಗರು ಎಲ್ಲ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಬೇಕು. ಇವತ್ತಿನ ದಿನ ನಮ್ಮಲ್ಲಿ ಅಂತಹ ತಂತ್ರಜ್ಞಾನ ಇಲ್ಲ ಅನ್ನೋದು ನಿಜ ಇರಬಹುದು. ಆದರೆ ನಾಳೆಗಳಿಗೆ ಆ ಯೋಗ್ಯತೇನ ಸಂಪಾದಿಸಿಕೋ ಬೇಕು ತಾನೆ? ಅಂತಹ ತರಬೇತಿಯನ್ನು ಇವತ್ತು ಜಗತ್ತಿನ ಮುಂಚೂಣಿಯ ಪರಿಣಿತರಿಂದ ಪಡೆದುಕೊಂಡೆ ಮುಂದೆ ಸಾಗಬೇಕಾಗಿದೆ! ಇವತ್ತು ಜಪಾನಿನಲ್ಲಿ ಇಂತಹ ತರಬೇತಿಯನ್ನು ಪಡೀತಾ ಇರೋ ಕನ್ನಡಿಗರ ಸಂಖ್ಯೆ ಸುಮಾರು ಐವತ್ತರಷ್ಟು ಇದೆ ಅನ್ನೋದು ನಮ್ಮ ನಾಡಿನ ಕಾರು ತಯಾರಿಕೆಯ ಸಾಮರ್ಥ್ಯ ಅಷ್ಟರ ಮಟ್ಟಿಗೆ ಹೆಚ್ಚಲು ನೆರವುಂಟು ಮಾಡ್ತಿದೆ ಅಂದ ಹಾಗಲ್ವಾ? ಗುರು! ಪ್ರಪಂಚದ ಅತ್ಯುತ್ತಮವಾದದ್ದನ್ನೆಲ್ಲಾ ಇವತ್ತು ನಾವು ಕಲಿತು ನಮ್ಮದಾಗಿಸಿಕೋ ಬೇಕು. ನಾಳಿನ ದಿನಗಳಲ್ಲಿ ಕನ್ನಡಿಗರೇ ಕಾರು ತಯಾರಿಸಬೇಕು. ಕಾರೊಂದೇ ಏಕೆ? ಎಲ್ಲ ಕ್ಷೇತ್ರಗಳ ಪರಿಣಿತರಾಗಿ ಕನ್ನಡಿಗರು ಜಗತ್ತಿನ ತುಂಬಾ ಮಾನ್ಯತೆ ಪಡೆಯಬೇಕು ಗುರು!
6 ಅನಿಸಿಕೆಗಳು:
sakat guru !!
kannada techies ella serine kannada ondu anna kodo bhashe maadaballaru,,,
we make software for the entire world,, can't we make something for our own selves,, definately we can,,
bekirodu,, kannadigaralli oggattu ashte..
ಅದೇನಾದರು ಒ೦ದು ಚಮತ್ಕಾರ ಮಾಡಿ ಕನ್ನಡಿಗರನ್ನು ಭಯ೦ಕರ ಉದ್ಯಮಶೀಲರನ್ನಾಗಿ ಒ೦ದೇ ರಾತ್ರಿಯಲ್ಲಿ ಮಾಡಿಬಿಡಬೇಕು. ಆಗ ಜಪಾನ್ ಜರ್ಮನಿಗಳಿಗೆ ಹೋಗಿ ನಮ್ಮಲ್ಲಿ ಇಲ್ಲದೆ ಇರುವ ತ೦ತ್ರಜ್ಞಾನದ ವಿಷಯಗಳನ್ನು ಸ೦ಪಾದಿಸಿಕೊ೦ಡುಬ೦ದು, ಇಲ್ಲಿ ತಮ್ಮದೇ ಆದ ಕ೦ಪನಿಗಳನ್ನು ತೆರೆದು ನೂರಾರು, ಸಾವಿರಾರು ಕನ್ನಡಿಗರಿಗೆ ಕೆಲಸ ಕೊಡಬೇಕು. ಕನ್ನಡ ಒ೦ದು ಅನ್ನ ಕೊಡೋ ಭಾಷೆ ಜೊತೆಗೆ ಚಿನ್ನ ಕೊಡೋ ಭಾಷೇನೂ ಆಗಬೇಕು.
ಕನ್ನಡದವರು ಜಪಾನಿನಲ್ಲಿ ಕನ್ನಡ ಕಾರ್ಯಕ್ರಮ ನಡೆಸಿದ್ದು ಖುಷಿಯಾಯಿತು. ಇಲ್ಲಿನ ಲಿಂಕು http://jp.youtube.com/watch?v=6YhmCchJr74 ನೋಡಿ, ಜಪಾನಿನವನೊಬ್ಬ ಕನ್ನಡ ಹಾಡನ್ನು ಎಷ್ಟು ಚೆನ್ನಾಗಿ ಹಾಡಿದ್ದಾನೆ.
iden dodd vishya alla ...
it's common these days, anyways inspirational.
u can c one more
http://www.orkut.com/Main#Album.aspx?uid=10473735709273290940&aid=1225638134
ನಮಸ್ಕಾರ,
ವಿಶ್ಯ ಕೆಳಿ ಬಹಳ ಸನ್ತೋಶವಾಯಿತು !!!!
ಕ್ಲಾನ್ಗೋರಸ್
@ Hussain,
iddu dodda vishaya ne.. germany nalli nivu Kannada Rajyotsava madtira, hange Japan nalli madidare ;) ?
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!