ಶಂಕರಭಟ್ಟರ ಹೊಸ ಹೊತ್ತಿಗೆ ಮಾರುಕಟ್ಟೆಗೆ!

ಕನ್ನಡ ನುಡಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಭಾಷಾ ವಿಜ್ಞಾನಿ ಶ್ರೀ ಶಂಕರ ಭಟ್ ಅವರ, ನಾಡಿನ ಜನರಲ್ಲಿ ಬಹಳ ಕುತೂಹಲ ಮೂಡಿಸಿದ್ದ ಹೊಸ ಹೊತ್ತಿಗೆ ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಇದೀಗ ಮಾರುಕಟ್ಟೆಗೆ ಬಂದಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಈ ಸಂದರ್ಭದಲ್ಲೇ ಭಟ್ಟರ ಹೊಸ ಪುಸ್ತಕ ಬಿಡುಗಡೆಯಾಗಿರುವುದು ನಮ್ಮ ನುಡಿ ಎತ್ತ ಕಡೆಗೆ ಸಾಗಬೇಕೆಂಬ ದಾರಿತೋರುಕವಾಗಿದೆ.
ಕನ್ನಡದ್ದೇ ಹೊಸಪದಗಳನ್ನು ಹುಟ್ಟಿಸುವ ಬಗೆ!
ಈ ಹೊತ್ತಿಗೆ ಭಟ್ಟರೇ ಹೇಳುವಂತೆ ಇಂಗ್ಲಿಷ್ ಭಾಷೆಯ ಪದಗಳನ್ನು ಬಲ್ಲ ಕನ್ನಡಿಗರು, ಅದಕ್ಕೆ ಸಮಾನವಾದ ಕನ್ನಡದ್ದೇ ಆದ ಪದಗಳನ್ನು ಹುಡುಕಲು ಸಹಕಾರಿಯಾಗಿದೆ. ಇದರ ಮೊದಲಲ್ಲೇ ಕನ್ನಡದ ಪದಗಳನ್ನು ಕಟ್ಟುವ ಬಗೆಯನ್ನು ವಿವರಿಸಲಾಗಿದೆ. ಕನ್ನಡದ ನಾಮಪದ (ಹೆಸರುಪದ), ಕ್ರಿಯಾಪದ(ಎಸಗುಪದ), ಗುಣವಾಚಕ (ಪರಿಚೆಪದ), ಪ್ರತ್ಯಯ (ಒಟ್ಟು)ಗಳನ್ನು ಬಳಸಲು ಕನ್ನಡದಲ್ಲೇ ಇರುವ ರೀತಿ ನೀತಿಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನು ನೀಡಿದ್ದಾರೆ. ಇಂದಿನ ದಿನ ಕನ್ನಡದ ಅನೇಕ ಪಂಡಿತರೂ, ಬರಹಗಾರರೂ ಸಾಕಷ್ಟು ಪದಗಳನ್ನು ಹುಟ್ಟು ಹಾಕಿದ್ದು ಅವು ಕನ್ನಡದ್ದೂ ಆಗಿಲ್ಲದೆ, ಸಂಸ್ಕೃತದ್ದೂ ಆಗಿಲ್ಲದೆ ತ್ರಿಶಂಕು ಪದಗಳಾಗಿವೆ. ಕನ್ನಡದ ಬರಹಗಳೆಲ್ಲಾ ಇಂತಹ ತ್ರಿಶಂಕು ಪದಗಳಿಂದಲೇ ತುಂಬಿ ತುಳುಕುತ್ತಿವೆ ಎನ್ನುವ ಭಟ್ಟರು ಈ ಪದಕೋಶದ ಬಗ್ಗೆ ಬರೆಯುತ್ತಾ ಹೀಗೆನ್ನುತ್ತಾರೆ :

ಕನ್ನಡದವೆಂದು ಹೇಳಿಕೊಳ್ಳುತ್ತಿರುವ ಪಾರಿಬಾಶಿಕ ಪದಕೋಶವೊಂದನ್ನು ಬಿಡಿಸಿ ನೋಡಿದೆವಾದರೆ ಅದರಲ್ಲಿ ನೂರಕ್ಕೆ ಎಂಬತ್ತರಶ್ಟು (ಇಲ್ಲವೇ ಅದಕ್ಕಿಂತಲೂ ಹೆಚ್ಚು) ತ್ರಿಶಂಕು ಪದಗಳಿರುವುದನ್ನು ಕಾಣಬಹುದು. ಅವುಗಳಿಂದಾಗಿ ಇವತ್ತು ಕನ್ನಡದಲ್ಲಿ ಬರೆದ ವಿಜ್ನಾನದ ಬರಹಗಳನ್ನು ಅರ್‍ತ ಮಾಡಿಕೊಳ್ಳುವುದು ಹೆಚ್ಚಿನ ಕನ್ನಡಿಗರಿಗೂ ತುಂಬಾ ಕಶ್ಟವೆಂದೆನಿಸುತ್ತದೆ. ಹೊಸ ಪದಗಳನ್ನುಂಟುಮಾಡಲು ಬೇಕಾಗುವ ಪದಗಳು ಮತ್ತು ಒಟ್ಟುಗಳು ಕನ್ನಡದಲ್ಲಿಲ್ಲ ಎಂಬ ಅನಿಸಿಕೆ ಹಲವು ಪಂಡಿತರಲ್ಲಿರುವುದು ಈ ರೀತಿ ಸಂಸ್ಕ್ರುತದ ಮೊರೆಹೊಕ್ಕು ತ್ರಿಶಂಕು ಪದಗಳನ್ನು ಉಂಟುಮಾಡುತ್ತಿರುವುದಕ್ಕೆ ಒಂದು ಕಾರಣ. ಸಂಸ್ಕ್ರುತ ಪದಗಳಿಗಿರುವ ಮರ್ಯಾದೆ ಕನ್ನಡ ಪದಗಳಿಗಿಲ್ಲ ಎನ್ನುವಂತಹ ಕನ್ನಡದ ಮೇಲಿರುವ ಕೀಳರಿಮೆ ಇನ್ನೊಂದು ಕಾರಣ.
ಇವೆರಡೂ ತಪ್ಪು ಅನಿಸಿಕೆಗಳು. ಆದರೆ ಇವುಗಳಿಂದಾಗಿ ಇವತ್ತು ಕನ್ನಡದ ಮೇಲೆ ಸಂಸ್ಕ್ರುತದ ಹೊರೆ ಹೆಚ್ಚುತ್ತಿದ್ದು, ಕನ್ನಡ ಬರಹಗಳು ಹೆಚ್ಚಿನ ಕನ್ನಡಿಗರಿಗೂ ಅರ್‍ತವಾಗದ ಕಗ್ಗಂಟುಗಳಾಗುತ್ತಿವೆ. ಹೆಚ್ಚು ಹೆಚ್ಚು ತ್ರಿಶಂಕು ಪದಗಳನ್ನು ಬಳಸಿರುವ ಬರಹಗಳು ತಮ್ಮ ಓದುಗರನ್ನು ಬರೇ ’ಮಂತ್ರಮುಗ್ದ’ರನ್ನಾಗಿ ಮಾಡುತ್ತವಲ್ಲದೆ ಅವರಲ್ಲಿ ಹೊಸ ಅರಿವನ್ನೇನೂ ಹುಟ್ಟಿಸುವುದಿಲ್ಲ. ಅಂತಹ ಬರಹಗಳು ತಮ್ಮ ಮೂಲಗುರಿಯನ್ನು ತಲುಪುವುದೇ ಇಲ್ಲ.
ಒಂದು ಹೊಸ ಮನೆಗೆ, ಹೊಸ ಅಂಗಡಿಗೆ ಇಲ್ಲವೇ ಹೊಸ ಉತ್ಪಾದನೆಗೆ ಹೆಸರು ಕೊಡಬೇಕಾದಾಗ ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಬೀಳುವುದೇ ಇಲ್ಲ ಎಂಬುದನ್ನು ಗಮನಿಸಿದೆವಾದರೆ ನಿಜಕ್ಕೂ ಕನ್ನಡಕ್ಕೆ ಎಂತಹ ಹೀನಾಯ ಸ್ತಿತಿ ಬಂದೊದಗಿದೆಯೆಂಬುದನ್ನು ಊಹಿಸಬಹುದು. ನಮಗೆ ಬೇಕಾಗಿಬರುವ ಎಂತಹ ಪದಗಳನ್ನು ಬೇಕಿದ್ದರೂ ಸಂಸ್ಕ್ರುತದ ಸಹಾಯವಿಲ್ಲದೆ ಕನ್ನಡದಲ್ಲೇನೆ ಉಂಟುಮಾಡಬಲ್ಲೆವು. ಅಂತಹ ಕಸುವು ಕನ್ನಡಕ್ಕಿದೆ. ಇದನ್ನು ತೋರಿಸಿಕೊಡುವುದಕ್ಕಾಗಿಯೇ ನಾನು ಈ ಪದಕೋಶವನ್ನು ತಯಾರಿಸಲು ಹೊರಟಿದ್ದೇನೆ.
ಶಂಕರ ಭಟ್ ಅವರ ಈ ಹೊಸ ಹೊತ್ತಿಗೆ ಕನ್ನಡ ಭಾಷಾ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಇದು ಕನ್ನಡ ನುಡಿ ಸಾಗಬೇಕಾದ ದಾರಿಯನ್ನು ನಿಚ್ಚಳವಾಗಿ ತೋರುತ್ತಿದೆ. ಇಂತಹ ಹೊತ್ತಿಗೆ ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿರಲಿ ಅನ್ನೋದು ನಮ್ಮಾಸೆ. ಬಾಶಾ ಪ್ರಕಾಶನದೋರು ಹೊರತಂದಿರೋ ಈ ಹೊತ್ತಿಗೆ ಎಲ್ಲ ದೊಡ್ಡ ಪುಸ್ತಕದಂಗಡಿಗಳಲ್ಲಿ ದೊರೆಯುತ್ತಿದೆ ಗುರು!

13 ಅನಿಸಿಕೆಗಳು:

Anonymous ಅಂತಾರೆ...

monne book festival alli, ee pustaka sakat aagi sale aagta ittu guru..

DNS avara pustakakke yuvakarinda bedike nodi nanage sakat aashcharya aaytu..

Anonymous ಅಂತಾರೆ...

gamanisi nodi, yella mahaprana bittidarre Bhattaru. bahala olleya belavanige.

Anonymous ಅಂತಾರೆ...

ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಹುಟ್ಟಿಸಿದಮೇಲೆ. ಇದೇ ನುಡಿಯಲ್ಲಿ ತ೦ತ್ರಜ್ಞಾನ, ವಿಜ್ಞಾನವನ್ನು, software ಎಲ್ಲಾ ತ೦ದರೆ ಎಶ್ಟು ಚೆನ್ನಾಗಿರುತ್ತದೆ. ಈ ಹೊಸ ಕನ್ನಡದ ವರ್ಣಮಾಲೆಯಲ್ಲಿ ಎಶ್ಟು ಅಕ್ಷರಗಳಿವೆ? ಅವು ಯಾವುವು?

ಕುಕೂಊ.. ಅಂತಾರೆ...

ನಾನಂತು ಶಂಕ್ರಣ್ಣನವರ ಎಲ್ಲಾ ಹೊತ್ತಿಗೆಗಳನ್ನು ಒಂದಕ್ಕರ ಬಿಡದೆ ಓದಿರುವೆ. ಈ ಹೊತ್ತಿಗೆಯನ್ನೂ ಇಂದೇ ಕೊಂಡು ಓದುವೆ. ತುಂಬಾ ಒಳ್ಳೆಯ ವಿಚಾರ ಬರೆದು ಬೆಳಕಿಗೆ ತಂದಿದದ್ದಕ್ಕೆ ನನ್ನಿ ಗುರು.

" ನಾನು ಕನ್ನಡಿಗ" ಇದಕ್ಕಿಂತ ಹಿರಿಯ ಹೆಮ್ಮೆ ಬೇರೇನುಂಟೆನಗೆ? ...ಕುಕೂಊ
ಪುಣೆ

Kishore ಅಂತಾರೆ...

ಇನ್ನು ಕೆಲವು ವರ್ಶಗಳಲ್ಲಿ ಶಾಲೆಗಳಲ್ಲಿ ಮಕ್ಕಳು ಬಟ್ಟರು ಹುಟ್ಟಿಹಾಕಿರುವ ಹೊಸ ಕನ್ನಡದಲ್ಲೇ ಓದುತ್ತಾರೆ. ಇನ್ನು ಕೆಲವೇ ವರ್ಶಗಳಲ್ಲಿ ಬಟ್ಟರ ಈ ಹೊತ್ತಿಗೆಯು ಕನ್ನಡಿಗರಲ್ಲಿ ಭಗವದ್ಗೀತೆಯ ಸ್ಥಾನ ಪಡೆಯುತ್ತದೆ.

ಈ ಹೊತ್ತಿಗೆಯನ್ನೂ ಇ೦ದೇ ಕೊ೦ಡು ಓದುವೆ. :)
ಜೈ ಕರ್ನಾಟಕ ಮಾತೆ!

Hussain ಅಂತಾರೆ...

idanna padiyodi haege?? davayavittu Hyderabadanalli siguva vivara tilisi.

Thanks

Anonymous ಅಂತಾರೆ...

mahapraaNagaLannu bittiruvudakke kaaraNavEnu?? yaaraadaroo vivirisi hELaballira??

-Munchitavaagi DhanyavaadagaLu
Guruprasad

Anonymous ಅಂತಾರೆ...

hussain sir,,
sapnaonline.com nalli try maadi

ವಿವೇಕ್ ಶಂಕರ್ ಅಂತಾರೆ...

tumba channagidde. nenne sapna nalli siktu. awaru naanu kelidakke tandidaru. yarigadaru bekendare alli keli.

ವಿವೇಕ್ ಶಂಕರ್ ಅಂತಾರೆ...

tumba channagidee idu. sapna nalli siguvudu. alli keli iddanu, kelavu sari tarisabekaguvudu.

Anonymous ಅಂತಾರೆ...

guruprasad avare,

mahapranagalannu bittiruvudu yaakendare adu kannadigara naaligeyalli horaluvudilla. idannu shankarabattaru barahadalloo bimbisabeku endu heluttaare.

Bantwal Venkatraya Baliga ಅಂತಾರೆ...

ಇಲ್ಲಿ ಪ್ರತಿಕ್ರಿಯಿಸಿದ ೧೧ ರಲ್ಲಿ ಒಂಬತ್ತು ಜನ ಇಂಗ್ಲೀಷ್ ನಲ್ಲಿ ಕನ್ನಡ ಬರೆದಿದ್ದಾರೆ. ಕಾರಣ ಏನು? ಅವರಿಗೆ Unicode ಉಪಯೋಗಿಸಲು ಬರಲ್ಲವೆಂದೋ ಅಥವಾ......

ಬಿ.ವೆಂಕಟ್ರಾಯ

Rajesh ಅಂತಾರೆ...

ಜಗತ್ತಿನಲ್ಲಿ ವೈಚಿತ್ರ್ಯ (diversity) ಮುಂದುವರಿಯ ಬೇಕೆಂದರೆ ಇದು ಅತ್ಯಗತ್ಯ. ಫ್ರಾನ್ಸ್ ದೇಶದಲ್ಲಿ ಇದು ಸುಮಾರು ಶತಮಾನಗಳ ಹಿಂದೆಯೇ ಶುರು ಆಗಿದೆ, ಮತ್ತೆ ಈ ದಿನಕ್ಕೂ ಅವರು ತಮ್ಮ ಭಾಷೆಯನ್ನೂ ಉಳಿಸಿಕೊಂಡು, ಬೆಳಸಿಕೊಂಡು ಬಂದಿದ್ದಾರೆ.

http://en.wikipedia.org/wiki/Acad%C3%A9mie_fran%C3%A7aise

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails