ಮುಂಬೈ: ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ

ನಿನ್ನೆ ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ನೂರಾರು ಜನ ಜೀವ ಕಳೆದುಕೊಂಡಿದ್ದಾರೆ ಎಂಬ ಸುದ್ದಿಯನ್ನು ನಾವೆಲ್ಲ ಕೇಳೇ ಇದ್ದೇವೆ, ಈಗಲೂ ಕೇಳುತ್ತಿದ್ದೇವೆ. ಇದೊಂದು ರೀತಿಯ ಯುದ್ಧವೇ ಸರಿ. ಹಿಂದೆ ಕನ್ನಡನಾಡೇ ಆಗಿದ್ದ, ಈಗ ಮಹಾರಾಷ್ಟ್ರವಾಗಿರುವ ನಾಡಿನಲ್ಲಿ ನಡೆಯುತ್ತಿರುವ ಈ ದಾಳಿಗಳನ್ನು ನೋಡಿದರೆ ನಮ್ಮ ಕರುಳು ಕಿವುಚಿದಂತಾಗುತ್ತದೆ. ಹಾಗೆಯೇ ಇಂಥದ್ದೇ ದಾಳಿಯು ನಾಳೆ ಬೆಂಗಳೂರಿನಲ್ಲೋ ಧಾರವಾಡದಲ್ಲೋ ಆಗುವುದಿಲ್ಲ ಎನ್ನುವುದಕ್ಕಾದರೂ ಏನು ಗ್ಯಾರಂಟಿ? ನಮ್ಮ ವ್ಯವಸ್ಥೆ ಅಂಥದ್ದೇನಾದರೂ ನಡೆದರೆ ಅದನ್ನು ತಡೆಗಟ್ಟುತ್ತದೆ ಎಂಬ ನಂಬಿಕೆಯೇನಾದರೂ ನಮಗಿದೆಯೆ?

ಮೇಲಿಂದಮೇಲೆ ಭಾರತದಲ್ಲೆಲ್ಲ ಆಗುತ್ತಿರುವ ಈ ರೀತಿಯ ದಾಳಿಗಳನ್ನು ಎದುರಿಸುವ ಶಕ್ತಿಯೇ ನಮಗೆ ಇಲ್ಲವೋ ಏನೋ ಎಂದು ಜನರಿಗೆ ಅನ್ನಿಸಿಬಿಟ್ಟಿದೆ. ಆದರೆ ಹಾಗಲ್ಲ. ಇವತ್ತಿನ ದಿನ ಮರಾಠಿ ಯುವಕರೆಲ್ಲ ಒಂದಾಗಿ, ತಮ್ಮ ನಾಡು-ನುಡಿಗಳ ಬಗೆಗಿನ ಒಲವು ಮತ್ತು ಕಾಳಜಿಗಳನ್ನು ಕೈಬಿಡದೆ ಸರಿಯಾದ ವ್ಯವಸ್ಥೆಯನ್ನು ಕಟ್ಟಿದ್ದರೆ, ತಮ್ಮ ನಾಡನ್ನು ಭದ್ರಮಾಡಿದ್ದರೆ ಈ ಪಾಡು ಮಹಾರಾಷ್ಟ್ರಕ್ಕೆ ಆಗುತ್ತಿರಲಿಲ್ಲ. ಹಾಗೆಯೇ ಕನ್ನಡದ ಯುವಕರೂ ಒಗ್ಗೂಡಿ ನಮ್ಮ ನಾಡು-ನುಡಿಗಳ ಬಗೆಗಿನ ಒಲವು-ಕಾಳಜಿಗಳನ್ನು ಕೈಬಿಡದೆ ನಾಡನ್ನು ರಕ್ಷಿಸುವ ಪಣ ತೊಟ್ಟರೆ ಈ ಭಯೋತ್ಪಾದಕರಷ್ಟನ್ನೇ ಏಕೆ, ಪ್ರಪಂಚದ ಯಾವುದೇ ದುಷ್ಟಶಕ್ತಿಯನ್ನೂ ತಡೆಯಲಾಗದೆಯೇನಿಲ್ಲ.

ಮಂಕುತಿಮ್ಮನ ಕಗ್ಗದಲ್ಲಿ ನಮ್ಮ ಡಿ.ವಿ.ಜಿ. ಹೇಳುವ ಹಾಗೆ -

ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ|
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ||
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕೊಡದಿಹುದೆ|
ಬಿದ್ದ ಮನೆಯನು ಕಟ್ಟೊ ಮಂಕುತಿಮ್ಮ||

ಹೌದು, ಬಿದ್ದಿರುವ ಶಾಂತಿಯೆಂಬ ಮನೆಯನ್ನು ಮತ್ತೆ ನಿಲ್ಲಿಸುತ್ತೇವೆ. ಶುದ್ಧಿಸುತ್ತೇವೆ ಈ ಧರೆಯನ್ನು ಮರಳಿ ಯುವಶಕ್ತಿಯ ಮಳೆಯಿಂದ. ನಮ್ಮ ಕೊಯ್ಲನ್ನು ಕದಿಯುವ ನಾಯಿಗಳನ್ನು ಕೊಂದು ಮತ್ತೆ ಬೆಳೆಯನ್ನು ಬೆಳೆಯುತ್ತೇವೆ. ಸರಿಪಡಿಸುತ್ತೇವೆ ನಮ್ಮ ಹದಗೆಟ್ಟ ವ್ಯವಸ್ಥೆಯನ್ನು. ಹೊಡೆದೋಡಿಸುತ್ತೇವೆ ಭ್ರಷ್ಟ ರಾಜಕಾರಣಿಗಳನ್ನು, ತರುತ್ತೇವೆ ಹೊಸ ಚೇತನವನ್ನು. ನಿಲ್ಲಿಸುತ್ತೇವೆ ನರಸತ್ತವರ ಹಾವಳಿಯನ್ನು. ಬನ್ನಿ, ಭಾರತವನ್ನು ಕಾಪಾಡುವ ಬಗೆಯೇನೆಂಬುದನ್ನು ಎಲ್ಲರಿಗೂ ತೋರಿಸೋಣ! ಎಚ್ಚೆತ್ತುಕೊಳ್ಳಿ! ಏಳಿ! ಎದ್ದೇಳಿ ಕನ್ನಡಿಗರೆ!

KARNATIQUEನಲ್ಲಿ ಓದಿ: State-level NSG Is the Need of the Hour: Deshmukh

3 ಅನಿಸಿಕೆಗಳು:

Anonymous ಅಂತಾರೆ...

Three things :
1 Stop this freaking pseudo-secularism, get the f...g UPA out of India by 2009.
2 Create Mussad kinda force in all states and at fed.
3 Ask anyone who wants to be Non-Inidan to leave the country of their choice. If anyone wants to live in Hindustan, let them be Indians.
No bullshitting,and most importanlty get this Italian Cult of India along with kicking b...less PM out of India.

Drushya ಅಂತಾರೆ...

ಸ್ವಾಮಿ ವಿವೇಕಾನಂದರು ಹೇಳಿದ್ದಾರೆ "ಒಂದು ನೂರು ಸಿಂಹದ ಹಿಂಡಿಗೆ ಒಂದು ಕುರಿ ನಾಯಕತ್ವ ವಹಿಸಿದ್ರೆ ಸಿಂಹಗಳೆಲ್ಲಾ ಕುರಿ ಥರಾನೇ ಆಗುತ್ತಂತೆ. ಅದೇ ಒಂದು ನೂರು ಕುರಿಗಳ ಹಿಂಡಿಗೆ ಒಂದು ಸಿಂಹ ನಾಯಕತ್ವ ವಹಿಸಿದ್ರೆ ಕುರಿಗಳು ತಮ್ಮನ್ನು ತಾವೇ ಸಿಂಹಗಳು ಅಂದುಕೊಂಡು ಹೋರಾಟ ಮಾಡುತ್ತಂತೆ"

ಆದ್ದರಿಂದ ನಮ್ಮಲ್ಲೆ ಒಬ್ಬ ಸಿಂಹ ಹುಟ್ಟಿ ಬಂದರೆ... ಕರ್ನಾಟಕ ಮಾತ್ರವಲ್ಲ ಇಡೀ ಭಾರತ ವನ್ನೇ ರಕ್ಷಿಸಬಹುದು...... ಸಿಂಹ ಎಲ್ಲಿ ಮಲಗಿದ್ಯೋ ಗೊತ್ತಿಲ್ಲಾ...

Holalkere rangarao laxmivenkatesh ಅಂತಾರೆ...

ನಾನು ನನ್ನಹೆಂಡತಿ, ಮಗ, ಚಿಕಾಗೋದಲ್ಲಿ ನಡೇದ, ಅಕ್ಕ ಸಮ್ಮೇಳನಕ್ಕೆ ಬಂದಿದ್ವಿ. ಕರ್ಣಾಟಕ ಭಾಗವತದ ಸಂಪಾದಕ, ಡಾ. ಚಂದ್ರರವರ ಅತಿಧಿಯಾಗಿ ನಾವು ಕಾರ್ಯಕ್ರಮದ ಬಳಿಕ, ಅವರ ಊರಿಗೆ ಹೋಗಿದ್ದೆವು. ಕರ್ಣಾಟಕ ಭಾಗವತ, ನಮಗೆ ಬಹಳವಾಗಿ ಹಿಡಿಸಿತು. ನನ್ನ ಮಗ, ಕಾಸ್ಟಾಮೆಸದಲ್ಲಿಯೇ ಇದ್ದಿದ್ದು. ಎಚ್. ಎಲ್. ಪ್ರಕಾಶ್ ಅಂತ !

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails