ವಲಸೆ ನಿಯಂತ್ರಣ ಕಾಯ್ದೆ ಜಾರಿಗೊಳ್ಳಲಿ!

ನಮ್ಮ ರಾಜ್ಯದ ಕಾರ್ಮಿಕ ಮಂತ್ರಿಗಳಾದ ಶ್ರೀ ಬಚ್ಚೇಗೌಡರು ವಲಸೆ ಬಂದಿರೋ ಜನರ ಸುರಕ್ಷತೆ ಬಗ್ಗೆ ಗಮನ ಕೊಡೋಕೆ, ಅವರ ಚಟುವಟಿಕೆಗಳ ಮೇಲೆ ನಿಗಾ ಇಡೋಕೆ, ಎಲ್ಲ ವಲಸಿಗರಿಗೂ ವಲಸೆ ಪ್ರಮಾಣ ಪತ್ರ ಕೊಡಬೇಕು ಅನ್ನೋ ಸಲಹೆ ಕೊಟ್ಟಿದ್ದಾರೆ ಗುರು. ವಲಸೆ ಬಂದು ಪುಂಡಾಟಿಕೆ ಮಾಡೋರನ್ನು ಕಂಡಾಗ ರಕ್ಷಣೆ ಯಾರಿಗೆ ಬೇಕು ಅನ್ನೋ ವಾದಾನ ಪಕ್ಕಕ್ಕಿಟ್ಟು ನೋಡುದ್ರೆ ವಲಸಿಗರ ಮೇಲೊಂದು ಕಣ್ಣಿಡಬೇಕು ಅನ್ನೋ ಅವರ ಮಾತೆನೋ ಸರಿಯಾಗೇ ಇದೆ, ಆದ್ರೆ ನಿಜವಾಗಿಯೂ ಆಗಬೇಕಾಗಿರೋ ಕೆಲ್ಸ ಇನ್ನೂ ದೊಡ್ಡದಿದೆ ಗುರು!
ಅಂತರರಾಜ್ಯ ವಲಸೆ ನಿಯಂತ್ರಣ ಕಾಯಿದೆ ಬೇಕು
ಕರ್ನಾಟಕಕ್ಕೆ ಬೀಸಿದ ಆರ್ಥಿಕ ಬದಲಾವಣೆಯ ಗಾಳಿಯಲ್ಲಿ ಎಲ್ಲೆಲ್ಲಿಂದಲೋ ಜನ ದಂಡಿಯಾಗಿ ಕರ್ನಾಟಕಕ್ಕೆ ವಲಸೆ ಬಂದ್ರು. ನಮ್ಮ ರಾಜ್ಯದ ಸರ್ಕಾರಾನೂ ನಮ್ಮ ನೆಲ, ಜಲ, ವಿದ್ಯುತ್ ಹೀಗೆ ಇರೋ ಬರೋ ಸಂಪತ್ತನ್ನೆಲ್ಲ ಎಗ್ಗಿಲ್ಲದೆ ಅಗ್ಗದ ದರಕ್ಕೆ ನೀಡಿತು. ಹಾಗೆ ನೀಡೋವಾಗ ಈ ನೆಲದ ಮಕ್ಕಳಿಗೆ ಕೆಲಸ ಸಿಗುತ್ತಾ? ಕರ್ನಾಟಕ-ಕನ್ನಡಿಗನ ಉದ್ಧಾರ ಆಗುತ್ತಾ ? ಅಂತ ಒಂದು ನೋಡದೆ ಕಣ್ಣು ಮುಚ್ಚಿ ನಿದ್ದೆಗೆ ಹೋಗಬಿಡ್ತು. ಹೊರರಾಜ್ಯಗಳಿಂದ ಅನಿಯಂತ್ರಿತವಾಗಿ ಹರಿದು ಬಂದ ಕನ್ನಡೇತರರ ವಲಸೆನಾ ಕಂಡು ಕಾಣದಂತೆ ಸುಮ್ಮನಾಗ್ ಬಿಡ್ತು. ಅದರಿಂದಾ ಆಗಿದ್ದೇನು? ಅವ್ಯಾವಹತ ವಲಸೆಯಿಂದ ನಮ್ಮ ಬೆಂಗಳೂರಿನ ಮೂಲಭೂತ ಸೌಕರ್ಯ ಕುಸಿದೋಗಿದೆ, ಅಪರಾಧ ಪ್ರಕರಣಗಳು ಯದ್ವಾ ತದ್ವಾ ಏರಿವೆ, ಕನ್ನಡಿಗನಿಗೆ ತನ್ನ ನೆಲದಲ್ಲಿ ಕೆಲಸ ಸಿಗದೇ ಪರದಾಡೋ ಸ್ಥಿತಿ ಬಂದಿದೆ. ಕನ್ನಡಿಗರು ಸೌಜನ್ಯಶೀಲರು, ವಿಶಾಲ ಮನೋಭಾವದವರು, ಶಾಂತಿಪ್ರಿಯರು ಅಂತಾ ತಾನೇ ಇಲ್ಲಿಗೆ ಬರೋ ಪ್ರತಿಯೊಬ್ಬ ವಲಸಿಗನೂ ನಮ್ಮ ಮೇಲೆ ಸವಾರಿ ಮಾಡಕ್ಕೆ ಹೋಗೋದು? ಹಾಗಿದ್ದಲ್ಲಿ, ಇದಕ್ಕಿರೋ ಪರಿಹಾರ ಏನ್ ಗುರು? ಅನಿಯಂತ್ರಿತ ಅಂತರ ರಾಜ್ಯ ವಲಸೆ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರಾಜ್ಯದವರ ಜೊತೆ ಸೇರಿ ಕೆಲಸ ಮಾಡಬೇಕು, ಕೇಂದ್ರದ ಮೇಲೆ ಒತ್ತಾಯ ತಂದು ಅನಿಯಂತ್ರಿತ ಅಂತರ್ ರಾಜ್ಯ ವಲಸೆಗೆ ಕಡಿವಾಣ ಹಾಕಬೇಕು. ಈ ಸಮಸ್ಯೆಯಿಂದ ನರಳ್ತಿರೋ ಎಲ್ಲಾ ರಾಜ್ಯಕ್ಕೂ ನ್ಯಾಯ ದೊರಕಿಸಬೇಕು.
ವಲಸೆ ಬೇಡ್ವೇ ಬೇಡ್ವಾ?
ಹಾಗಿದ್ರೆ ವಲಸೆ ಬೇಡ್ವೇ ಬೇಡ್ವಾ ಅನ್ನೋ ಪ್ರಶ್ನೆ ಬರುತ್ತೆ. ವಲಸಿಗರು ಒಂದು ನಾಡು ಕಟ್ಟಲು ಎಷ್ಟು ಅಗತ್ಯ ಅನ್ನೋ ಅರಿವು ಎಲ್ಲರಿಗೂ ಇದೆ. ಆದರೆ ಬೇಕಿರೋದು ಅನಿಯಂತ್ರಿತ ವಲಸೆಗೆ ಕಡಿವಾಣ. ಹೀಗೆ ಕಡಿವಾಣ ಹಾಕಿದರೆ ಆಗುವುದು ಅನಿಯಂತ್ರಿತ ಅಂತರ ರಾಜ್ಯ ವಲಸೆಯ ನಿಯಂತ್ರಣ. ನಮ್ಮ ಜನರ ಅವಕಾಶ, ಬದುಕನ್ನು ಕಿತ್ತುಕೊಳ್ಳೂವ ವಲಸೆ ನಮಗೆ ಬೇಡ. ನಮ್ಮವರ ಬದುಕನ್ನು ಹಸನು ಮಾಡುವ ವಲಸೆ ಬೇಕು. ನಮ್ಮೂರಲ್ಲಿ ನಮ್ಮೋರ ಮೇಲೆ ಸವಾರಿ ಮಾಡೋ ವಲಸೆ ನಮಗೆ ಬೇಡ, ನಮ್ಮ ಊರಲ್ಲಿ ನಮ್ಮ ಜನರ ಉದ್ಧಾರಕ್ಕೆ ಪೂರಕವಾದ ವಲಸೆ ನಮಗೆ ಬೇಕು. ಇದೇ ರೀತಿ ಅನಿಯಂತ್ರಿತ ವಲಸೆ ಮುಂದುವರೀತಿದ್ರೆ, ಜನಸಂಖ್ಯೆನಾ ನಿಯಂತ್ರಣದಲ್ಲಿಟ್ಟು, ವ್ಯಾಪಾರ-ವ್ಯವಹಾರಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿ, ಅತ್ಯುತ್ತಮ ವಿದ್ಯಾ ಕೇಂದ್ರಗಳನ್ನ ಸ್ಥಾಪಿಸಿ ತಮ್ಮ ತಮ್ಮ ರಾಜ್ಯಾನಾ ಮುಂದೆ ತರಬೇಕು ಅಂತ ಶ್ರಮ ಪಡೋ ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಗಳು ಯಾವತ್ತು ಉದ್ಧಾರ ಆಗಲ್ಲ. ಕಡೆಗೆ ಒಂದಿನ ಮಿತಿ ಮೀರಿದ ವಲಸಿಗರಿಂದ ನಮ್ಮ ನಾಡಲ್ಲಿ ನಾವೇ ಮೂಲೆಗುಂಪಾಗೋಗ್ತೀವಿ! ಇನ್ನಾದರೂ ಕರ್ನಾಟಕ ಸರ್ಕಾರ, ಅನಿಯಂತ್ರಿತ ವಲಸೆ ನಿಯಂತ್ರಣ ಕಾನೂನಿನ ಬಗ್ಗೆ ಯೋಚಿಸಬೇಕಾಗಿದೆ ಗುರು!

6 ಅನಿಸಿಕೆಗಳು:

Anonymous ಅಂತಾರೆ...

ಪೇಪರ್ ನಲ್ಲಿ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಮೂಲ ನಿವಾಸಿಗಳಿಗೆ ಖಾಸಗಿ ವಲಯದಲ್ಲೂ ಶೇ ೮೫% ಕೆಲಸ ಕಾಯ್ದಿರಿಸಬೀಕು ಅಂತ ಹೇಳಿದೆ.. ನಮ್ಮ ರಾಜ್ಯದಲ್ಲೂ ಇದೆ ರೀತಿ ಸರೋಜಿನಿ ಮಹಿಷಿ ವರದಿ ಜಾರಿಯಾಗೋ ಕಾಲ ಯಾವಾಗ ಬರತ್ತೋ ಗೊತ್ತಿಲ್ಲ...
ಮೊನ್ನೆ ಮೊನ್ನೆ ನಾನು ಬಸ್ ನಲ್ಲಿ ಕೆಲವರು ಕಟ್ಟಡ ಕೆಲಸದೌರ ಮಾತು ಕೇಳ್ಸ್ಕೊಂಡೆ. ಅವರಲ್ಲಿ ಇಬ್ಬರು ಕನ್ನಡಿಗರು, ಒಬ್ಬ ಬಿಹಾರಿಯಿರಬೇಕು.. ಬಿಹಾರಿಗೆ ಕನ್ನಡ ಸರಿಯಾಗಿ ಗೊತ್ತಿಲ್ಲ. ಕನ್ನಡಿಗರು ಇಬ್ಬರೂ ಬಿಹಾರಿಗಳನ್ನು ಚೆನ್ನಾಗಿ ಬೈಕೊತಿದ್ರು.. "ಇವರುಗಳು ಬಂದು ನಮ್ಮ ಜನ ನಮ್ಮನ್ನೇ ಕೆಲ್ಸಕ್ಕೆ ಕರಿಯಲ್ಲ.. ನಾವು ೬೦ ರುಪಾಯಿ ತಗೊಂಡು ಮಾಡೋ ಕೆಲ್ಸನ ಇವ್ರು ೩೦ ಕ್ಕೆ ಮಾಡ್ತಾರೆ.. ಆದ್ರೆ ಇವ್ರು ಚೆನ್ನಾಗಿ ಕೆಲಸ ಮಾಡಲ್ಲ.. ಆದರೂ ನಮ್ ಜನ ಹಿಂದಿಔರು ಎಲ್ಲ ಮಾಡ್ತಾರೆ ಅಂತ ಆರನೆ ಕರೀತಾರೆ.. ಎನ್ನದ್ರೂ ತಪ್ಪಾದರೆ ನಮ್ಮಿಂದ ಆಯಿತು ಅಂತಾರೆ.. ಇವ್ರ್ಗಳಿಂದ ನಮಗೆಲ್ಲ ತುಂಬ lossu" ....
ದಯವಿಟ್ಟು ಯಾರಾದರೂ ಮನೆ ಕತ್ತುಸ್ಥ ಇದ್ರೆ ಕನ್ನದದೌರ್ನೆ ಕೆಲ್ಸಕ್ಕೆ ತೊಗೊಳ್ಳಿ..

Anonymous ಅಂತಾರೆ...

houdu, nija, kaanuunu barbeeku.. nam officienalli hr gaLalli mallu-gaLu tumbkonDu, intha recession timenalli kooDa kevala trivandrum collegeinda 10-11 janana tartaare, nam raajyadalli yaav collegeguu hogalla... aa maLLugaLella ill serkonD ond mini keraLane maaDbiDtaare.. idra virudhdha en maaDodu anthanee tiLitilla

ಗುರು [Guru] ಅಂತಾರೆ...

ಈ ಐಟಿ-ಬಿಟಿ ಕಂಪೆನಿಗಳನ್ನು ಮೊದಲು ಮುಚ್ಚಿಸಿದರೆ ಮಾತ್ರ ನಮ್ಮ ಕನ್ನಡಿಗರಿಗೆ, ಕರ್ನಾಟಕಕ್ಕೆ ಲಾಭವಾಗಲು ಸಾಧ್ಯ. ಈ ಮಂದಿ ಹೊರಗಿನಿಂದ ಬಂದು ಅವರ ದರಿದ್ರ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುವುದಲ್ಲದೆ, ಅನ್ನ ತಿಂದ ಮನೆಗೇ ಕನ್ನ ಹಾಕುವ ಹೀನ ಬುದ್ಧಿ ತೋರಿಸುತ್ತಾರೆ.ಎಲ್ಲ ತಮಿಳರನ್ನು, ತೆಲುಗಿನವರನ್ನು ಇಲ್ಲಿಂದ ಓಡಿಸುವ ಕೆಲಸ ಮೊದಲು ಮಾಡಬೇಕು.
http://kannadaputhra.blogspot.com

Anonymous ಅಂತಾರೆ...

Namma Mantriya salaheyannu maarpaatu madabeku.

Karnatakada ella janathege guruthu cheeti ( Ration card thara )kodabeku. Guruthu cheeti illadavarannu horaginavarendu pariganisalu sulabha vagi guruthisabahudu.
Hagallade manthri mahashayara salaheyannu karyagatha golisidare,
horaginavaru thamma horginathanavannu sulabha vagi muchi, nammavara soulabhya galannu kasidukolluthare.

E nelada ellasoulabya galannu upagisikondu, swathantrya poorva bharathada Brtisharanthe namma sampathannu looti hodedu meke moothige mosaru savari haguthare.

Innondu salahe . Rajyada ella kannadiga Manavasampanmoola adhikarigalannu ondu goodisi kannadigarige adyathe koduvathe manavi madikollabeku hagu adu karagatha vaguvanthe shrmisabeku.

Haau Karnatakadalliruva ella kendra sarkarada samsthegalalli kannadigaranne Manava sampnmoola adikarigalannagi nemisabeku.


Hagada mathra namage swalpamattina nyaya dorakithu.

Subbaramu,
Bangalore

Anonymous ಅಂತಾರೆ...

dayavittu idannu odi:

http://www.bangaloremirror.com/index.aspx?page=article&sectid=18&contentid=2008112220081122211113703387a44a6&sectxslt=

Anonymous ಅಂತಾರೆ...

ಮೇಲಿನ Bangalore-mirror link ನಲ್ಲಿ ಕನ್ನಡಿಗರೆಲ್ಲ ಬರೆದಿರುವ ತಮ್ಮ ತಮ್ಮ ಅನಿಸಿಕೆಗಳನ್ನ ಬ್ಯಾಂಗಲೋರ್ ಮಿರರ್ ತನ್ನ ನವೆಂಬರ್ ೨೭ರ ಆವೃತ್ತಿಯಲ್ಲಿ ಪ್ರಕಟಿಸಿದೆ.. ಈಗಲಾದರೂ ಹೊರಗಿನವರಿಗೆ ಗೊತ್ತಾಗಲಿ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails