ಮಹಾರಾಷ್ಟ್ರದಾಗ ಮರಾಠಾ ಮಂದಿಗಾ ಕೆಲಸಾ ಕೊಡ್ಬೇಕನ್ನೋ ಹೊಸ ಕಾಯ್ದೆ ಮಾಡ್ತೀವಿ ಅಂತ ಅಲ್ಲಿನ ಸರ್ಕಾರ ಅನ್ನೂದ್ರಾಗೇ ಬಾಜೂಕಿನ ಒರಿಸ್ಸಾದ ಪಾಳಿ ಚಾಲೂ ಆಯ್ತು ನೋಡ್ರಲಾ ಗುರುಗೋಳಾ... ಒರಿಸ್ಸಾದಾಗ್ ಇನ್ನ ಮ್ಯಾಲೆ ಶುರು ಆಗು ಎಲ್ಲಾ ಹೊಸಾ ಉದ್ಯಮದಾಗೂ ಅಲ್ಲಿನ ಸ್ಥಳೀಯರಿಗ ಅಂದ್ರ ಒರಿಯಾ ಮಂದಿಗೆ ಕೆಲಸದಾಗ್ ಮೀಸಲಾತಿ ಕೊಡಬೇಕು ಅಂತ ಅಲ್ಲಿನ ಸರ್ಕಾರ ಆಜ್ಞೆ ಮಾಡೇತಂತ. ಖರೇನು, ತಡದ್ ಮಳಿ ಜಡದ್ ಬಂತು ಅನ್ನು ಹಂಗಾ ಅಗದಿ ಚಲೋ ಹೆಜ್ಜಿ ಇದು.
ಇದು ಎಂತಾ ವಿಪರ್ಯಾಸ!
ಖರೆ ಹೇಳ್ಬೇಕು ಅಂದ್ರ ಒರಿಸ್ಸಾದಾಗ್ ಶುರು ಆಗು ಉದ್ಯಮದಾಗ್ ಒರಿಯಾ ಮಂದಿಗ್ ಕೆಲಸಕ್ಕೆ ತಗೋಬೇಕು ಅಂತ ಅಲ್ಲಿನ ಸರ್ಕಾರ ಕಾನೂನು ಮಾಡು ಹಂಗ ಆಗಿರು ಪರಿಸ್ಥಿತಿ ಭಾಳ ಚಿಂತಿ ಮಾಡೂ ವಿಷ್ಯ ಅಲ್ಲೇನು? ನೀವಾ ಹೇಳ್ರಲಾ.. ಒಂದು ನಾಡಿನ ಮಂದಿ ಎಲ್ಲಾ ಕೂಡಿ ಒಂದು ಸರ್ಕಾರ ಅಂತ ಆರಸಿ ಕಳಸುದ್ ಎದಕ್ಕ? ಅಲ್ಲಿ ಮಂದಿಗೆ ನೌಕರಿ ಸಿಗಲಿ, ಆ ರಾಜ್ಯದ ಮಕ್ಕಳ ಜೀವನಾ ಚಲೋತಂಗ್ ನಡಿಲಿ, ಆ ರಾಜ್ಯ ಉದ್ಧಾರ ಆಗಲಿ ಅಂತಲ್ಲೇನು? ಆ ರಾಜ್ಯದಾಗ್ ಹುಟ್ಗೊಳ್ಳೋ ನೌಕರೀಗೊಳು ಅಲ್ಲಿ ಮಂದಿಗ ಸಿಕ್ರೆ ತಾನೇ ಅವರು ಉದ್ಧಾರ ಆಗುದು? ಆದ್ರಾ ಎಂತಾ ಕೆಟ್ಟ ಪರಿಸ್ಥಿತಿ ನೋಡ್ರಿ ನಮದು, ನಮ್ಮ ನಮ್ಮ ನೆಲದಾಗ್ ಹುಟ್ಕೊಳೋ ಕೆಲಸದ ಅವಕಾಶ ನಮ್ಮ ಮಂದಿಗಾ ಕೊಡಸ್ರಲಾ... ಅಂತ ದುಂಬಾಲು ಬೀಳು ಪರಿಸ್ಥಿತಿ ಭಾರತದಾಗಿನ ಭಾಳ ರಾಜ್ಯಗಳಾಗ ಐತ್ರೀಪಾ... ಕರ್ನಾಟಕಾನು ಅಂತಾ ಒಂದ್ ರಾಜ್ಯ ಅಂತ ಸ್ಪೇಶಲ್ ಆಗಿ ಏನ್ ಹೇಳಬೇಕಾಗಿಲ್ರಿ.
ಮುಂದಾರಾ ಏನಾಗಬೇಕೈತಿ?
ಈ ಪರಿಸ್ಥಿತಿ ಒತ್ತಟ್ಟಿಗಿರಲಿ, ಕರ್ನಾಟಕದಾಗ್ ಏನೇನ್ ಆಗೇತಿ ಹಿಂದೆ, ಮುಂದೇನ್ ಆಗಬೇಕು ಅಂತ ತುಸಾ ನೋಡುಣ್ ಬರ್ರೀ. ಇವತ್ತೇನ್ ಆಗಬೇಕಾಗೇತಿ? ಕರ್ನಾಟಕದಾಗಿನ ಕೆಲ್ಸದಾಗ್ ಕನ್ನಡಿಗರಿಗೆ ಆದ್ಯತೆ ಕೊಡಬೇಕು ಅನ್ನು ಸರೋಜಿನಿ ಮಹಿಷಿ ವರದಿ ಬಂದು ಬಾಳ್ ಅಂದ್ರ ಬಾಳ್ ವರ್ಷಾನೇ ಆತ್ರಿ. ಎಲ್ಲ ಕಡೀಗೂ ಇಂತಿಷ್ಟು ಕೆಲ್ಸಾ ಕನ್ನಡ ಮಂದಿಗ ಕೊಡಬೇಕು ಅಂತ ಆ ವರದಿನಾಗ್ ಹೇಳಿದ್ರು ರೀ. ಆ ವರದಿ, ಇವತ್ತಿಗಾಗಲೇ ಬಾಳ್ ಹಳೇದ್ ಆಗೇತಿ. ಇವತ್ತು ಅಗದಿ ಅರ್ಜಂಟ್ ಆಗಿ ಆಗಬೇಕಾಗಿರು ಕೆಲ್ಸ ಅಂದ್ರ ಒಂದು ಹೊಸ ಸಮೀಕ್ಷೆ ಮಾಡಿ, ಇವತ್ತಿನ ಜಾಗತೀಕರಣದ ವ್ಯವಸ್ಥೆಯಾಗ್ ಎಲ್ಲೆಲ್ಲಿ ಏನಾಗಾತೇತಿ, ಪ್ರಪಂಚದ ಬೆಳವಣಗಿ ಹೆಂಗ್ ಹೊಂಟೇತಿ, ಅಲ್ಲಿ ಕನ್ನಡಿಗ ಸ್ಪರ್ಧಾ ಮಾಡಬೇಕು ಅಂದ್ರ ಏನೇನ್ ಆಗಬೇಕು, ಅವನಿಗೆ ಕೆಲಸ ಸಿಗಬೇಕು ಅಂದ್ರ ಕಾನೂನು ಸೇರಿದಂತೆ ಯಾವ ಯಾವ ರೀತಿ ವ್ಯವಸ್ಥೆಲೀ ಬದಲಾವಣೆ ತರಬೇಕಾಗೇತಿ, ಅದರಾಗ ನಮ್ಮ ಸರ್ಕಾರ, ಉದ್ಯಮಿಗಳು, ಶಿಕ್ಷಣ ತಜ್ಞರ ಪಾತ್ರ ಏನು ಅನ್ನು ಬಗ್ಗ ಚರ್ಚೆ ಆಗಬೇಕು. ಹೊಸ ಹೊಸ ಉದ್ಯಮಗಳು ಬಂದಾಗ್ ಅವರಿಗೆ ಎಲ್ಲ ಅನುಕೂಲಾ ಮಾಡುಕಿನ್ನ ಮೊದಲು ನಮ್ಮ ಮಂದಿಗ ಕೆಲ್ಸ ಸಿಗತೇತಿ ಅನ್ನು ಖಾತ್ರಿ ತಗೋಬೇಕು. ಇದೆಲ್ಲ ವಿಷ್ಯದ ಬಗ್ಗೆ ತಜ್ಞರ ನೇಮಕಾ ಮಾಡಿ ಒಂದು ಹೊಸ ವರದಿ ಮಾಡಿ, ಅದರ ಜಾರಿ ಬಗ್ಗೆ ಸರ್ಕಾರ ತಲಿ ಕೆಡಸ್ಕೊಬೇಕಾಗೆತಿ. ಇಲ್ಲಾ ಅಂದ್ರ ನಾವು ಹಿಂಗೆ ಬಾಯ್ ಬಡಕೊಂತ್ ಕೂಡುದ್ ಆಗತೇತಿ. ಏನಂತೀರ್ರೀ ಗುರುಗಳಾ?
6 ಅನಿಸಿಕೆಗಳು:
karnataka sarkara enu maadodu kaaNistilla .. haagu heegu namma KRV horaaTa nadestaa irodu keLi khushi agetri ..
namma sarkara nammavrige kelsa kodsodralli bhaLa hinde biddaite .. boLimaklu MLA gaLu en maadtavre ..
naanu yaarigadru kelsa koDo avkaasha bandaage .. arha kannadiganige adu ..
ಖರೆ ಹೇಳಿರಿ
haudu namma rajya dalli nagage hecchu aadyate sigabeku..illandre...swalpa dinagala nantara nammadu maharashtra rajyada paristiti barutade...
namma sarakarakke idu yavaga manavarike agutee?
ಬರಹದ ಜೊತೆಗೆ ಒ೦ದು ಒಳ್ಳಿ ಚಿತ್ರ ಹಾಕ್ರಿ ಮತ್ತ! ನೋಡಾಕ್ಕೆ ಚಲೋ ಇರ್ತದ.
ನಿಮ್ಮ ಲೇಖನ ನೋಡಿ ಸಂತೋಷ ಆಯಿತು. ನೀವು ಹೇಳಿರೊ ಪರಿಸ್ತಿತಿಯನ್ನು ನಾನು ನೋಡಿದ್ದೀನಿ. ಅನ್ಯ ಭಾಷಿಗರು.... (ಯಾವ ಭಾಷೆಯವರು ಅಂತ ಬೆರೆಳು ತೋರಿಸುವುದು ಬೇಡ) ಇಲ್ಲಿಗೆ ಬಂದು ತಮಗೆ ಕೆಲಸವನ್ನು ಹುದುಕಿಕೊಳ್ಳುವುದಶ್ಟೆ ಅಲ್ಲದೇ, ಯೋಗ್ಯರಾದ ಯಾರಿಗೂ ಅವಕಾಶವನ್ನು ಕೊಡದೇ ಸ್ವ-ಜನ ಪಕ್ಷಪಾತವನ್ನು ಮಾಡುತ್ತಾರೆ. ಇದು ನಾನು ನೋಡಿರುವ ಹಾಗೆ ನಾನು ಕೆಲಸ ಮಾಡುವ ಮಾಹಿತಿ ತಂತ್ರಜ್ಞಾನದ ಉದ್ಯಮದಲ್ಲಿ ಅತಿ ಹೆಚ್ಚು. ಇದರಿಂದ ಹಲವು ಬಾರಿ ನಾನು ಸಹ ಅವಕಾಶ ವಂಚಿತನಾಗಿದ್ದೀನಿ. ದುರ್ದೈವದ ಸಂಗತಿ ಎಂದರೆ, ನಮ್ಮ ಕನ್ನಡದ ಜನರೇ ಅವರಿಗೆ ಬೆಂಬಲ ವ್ಯಕ್ತ ಪಡಿಸಿ, ಆ ಅಭ್ಯರ್ಥಿಗಳು ನಮ್ಮಷ್ಟು ಉತ್ತಮ ಕೆಲಸಗಾರರು ಆಗಿಲ್ಲದಿದ್ದರೂ, ನಮಗಿಂತ ಉತ್ತಮರೆಂದು ನಮಗೆಯೇ ತಿಳಿಹೇಳಲೂ ಬರುತ್ತಾರೆ. ಉತ್ತಮ ಮಾನವ ಸಂಪನ್ಮೂಲ(ಕನ್ನಡಿಗರು) ಇಲ್ಲಿ ದೊರಕುವಾಗ, ಬೇರೆಯವರ ಅವಶ್ಯಕತೆ ಇದೆಯೇ?
ನಮ್ಮೂರಾಗೆ ಕನ್ನಡದ ಉದ್ಯಮಿಗಳು ಹೆಚ್ಚಬೇಕು.. ಅವರುಗಳು ಕನ್ನಡಿಗರನ್ನು ಕೆಲಸಕ್ಕೆ ತೆಗೆದುಕೊಳ್ಳುವುದನ್ನು ಕಲಿಯಬೇಕು.
ನಮ್ಮ ನೆಲನೂ ನಮದಲ್ಲ ಅನ್ನೋ ಕಾಲ ಬ೦ದಾಗ, ಇದನ್ನು ಕರ್ನಾಟಕ ಅ೦ತ ಹೇಳೋದೇ ಕಷ್ಟವಾಗುತ್ತೆ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!