ಮಹಾರಾಷ್ಟ್ರದಾಗಿನ್ ಯಾವ್ದಾನಾ ಶಾಲೀ ಇರಲಿ, ಅದರಾಗ ಒಂದರಿಂದ ನಾಕನೇ ಇಯತ್ತೆ ಮಟ ಮರಾಠಿ ಕಡ್ಡಾಯ ಮಾಡಿ ಅಲ್ಲಿನ ಸರ್ಕಾರದಿಂದ ಒಂದ್ ಆದೇಶಾ ಹೊಂಟೇತ್ರಿ ಅನ್ನೋ ಸುದ್ದಿ ಬೆಂಗಳೂರಾಗಿನ ಡಿ.ಎನ್.ಎ ಅನ್ನೂ ಪತ್ರಿಕಾದಾಗ 27.05.2009ರಂದು ಬಂದೈತ್ರಿ ಸರಾ! ಹೀಂಗಾ ಮಾಡು ಮುನ್ನಾ ಅಲ್ಲೊಂದು ಸಮಿತಿ ಮಾಡ್ಯಾರಂತಾ, ಅದು ಇಂಥಾ ಎಲ್ಲಾ ಶಾಲಿಗಳ ಬಗ್ಗಿ ನಿಗಾ ಇಡ್ತೈತಂತ್ರೀಪಾ!!
ಕಾಗೇರಿ ಸಾಹೇಬ್ರಾ ತುಸಾ ಧೈರ್ಯ ಮಾಡ್ರೀಪಾ...
ನಮ್ಮ ನಾಡಿನ ಕಲಿಕಾ ಮಂತ್ರಿಗೊಳಾದ ವಿಶ್ವೇಶ್ವರ ಹೆಗ್ಡೆ ಕಾಗೇರಿಯೋರು ಮಾರಾಷ್ಟ್ರಾ ಸರ್ಕಾರದ ಕಡಿ ನೋಡಾರ ಹೀಂಗಾ ನಮ್ ಕರ್ನಾಟಕದಾಗಿನ ಶಾಲಿಗಳೊಳಗ ಕನ್ನಡ ಕಲ್ಸಾಕ ಬೇಕು ಅಂತ ನಮ್ಮೂರಾಗಿನ ಶಾಲಿಗಳೊಳಗ ಕನ್ನಡ ಕಲ್ಸೋಕ್ ಮುಂದಾಗ್ತಾರಾ ಅಂತ ನೋಡೋಣು. ಕಾಗೇರಿ ಸರಾ... ನಮ್ಮೂರಾಗಿನ ಶಾಲಿಗಳೊಳಗಾ ನಾವು ನಮ್ಮದಾ ನುಡಿ ಕಲುಸ್ರೀ ಅನ್ನೋ ಕಾಯ್ದಿ ಮಾಡೋ ಹಾಂಗಾ ಇಂದಿನ ವ್ಯವಸ್ಥಿ ಐತಿ ಅಂತಾ ಭಾಳ ಚಿಂತಿ ಮಾಡ್ಕೊಂತಾ ಕೂಡಬ್ಯಾಡ್ರೀ ಸಾಹೇಬ್ರಾ? ಇಕಾ, ಬರ್ರಲಾ ಹೊರಕ್ಕಾ... ಮುಂದಿನ ವಿಧಾನಸಭಾ ಅಧಿವೇಶನದಾಗಾ, ಇಂಥದ್ದಾ ಒಂದು ನಿಯಮಾ ಮಾಡ್ರಲಾ. ಇದು ನಮ್ಮೂರಾಗಿನ ಕನ್ನಡ ಮಾಧ್ಯಮವಲ್ಲದ ಶಾಲಿಗಳಗ ಅನ್ವಯಿಸ್ತದ ಅಂದ್ರ ಆ ಪಟ್ಯಾಗ ಈ ಸ್ಟೇಟು, ಸೆಂಟ್ರಲ್ಲು, ಇಂಟರ್ ನ್ಯಾಶನಲ್ಲು ಎಲ್ಲಾ ಶಾಲೀ ಬರಬೇಕದಾ ಮತ್ತಾ! ಏನರಾ ಅನ್ರೀ, ಒಟ್ನಾಗ ಈ ಮರಾಠ ಸರ್ಕಾರ ಏನೈತಿ, ಅದು ಛಲೋ ಕೆಲ್ಸಾ ಮಾಡೈತಿ, ಹಾಂಗಾ ಇಲ್ಲೂ ಆಗ್ಲಿ ಅನ್ನೋಣು ಗುರುಗಳಾ!
4 ಅನಿಸಿಕೆಗಳು:
ಒಳ್ಳೆ ಕೆಲಸ ಮಾಡಿದಾರೆ ಗುರು.
ನಮ್ಮವರು ಕಲುತ್ಕೊಬೇಕು.
aata oota Ota Kannada ondane pata.
ಗುರು ಮಹಾರಾಷ್ಟ್ರ ಶಾಲೆಗಳಲ್ಲಿ ಮರಾಠಿಯನ್ನು ಒಂದು ಭಾಷೆಯಾಗಿ ಕಡ್ಡಾಯ ಮಾಡಿದ್ದರೆ ಅಷ್ಟೇ. ಮರಾಠಿ ಮಾಧ್ಯಮವನ್ನು ಕಡ್ಡಾಯ ಮಾಡಿಲ್ಲ.
ಈ ವಿಷಯದಲ್ಲಿ ಬೇರೆ ರಾಜ್ಯವನ್ನು ಉದಾಹರಣೆ ತೆಗೆದುಕೊಳ್ಳುವುದಕ್ಕಿಂತ ನಮ್ಮ ರಾಜ್ಯದ ಪ್ರತಿನಿದಿಗಳಾದ ಮಂತ್ರಿ ಮಹೋದಯರು ತಮ್ಮ ಇಚ್ಛಾಶಕ್ತಿಯಿಂದ ಈ ಕೆಲಸವನ್ನು ಮಾಡಬೇಕಾಗಿದೆ. ಮಾತೃಭಾಷೆಯಲ್ಲಿ ಪಾಠ ಮಾಡುವುದರಿಂದ ಮಕ್ಕಳಿಗೆ ಪಠ್ಯಪುಸ್ತಕದಲ್ಲಿರುವ ವಿಷಯಗಳು ಬೇಗನೆ ಮನದಟ್ಟಾಗುತ್ತದೆ. ಇದರಿಂದ ಮಕ್ಕಳಿಗೆ ತಮ್ಮ ವ್ಯಾಸಂಗದ ಅವದಿಯಲ್ಲಿಯೇ ಹೆಚ್ಹು ವಿಷಯಗಳನ್ನು ತಿಳಿಯುತ್ತಾರೆ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!