ಇದುನ್ನ ನಾಡಹಬ್ಬದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಿದ್ರೆ ಅಲ್ಲಿ ನಡೆಯೋ ನಾಡಹಬ್ಬ ಕಳೆ ಕಟ್ಟೋದ್ರಲ್ಲಿ ಅನುಮಾನಾನೇ ಇಲ್ಲ ಗುರು!
ಬಲುರೋಚಕ ಈ ನಮ್ಮ ಇತಿಹಾಸ!
ಬ್ರಿಟಿಷರ ಆಳ್ವಿಕೆಯಲ್ಲಿ 20ಕ್ಕೂ ಹೆಚ್ಚು ಆಡಳಿತ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ನಾಡನ್ನು ಒಂದಾಗಿಸಲು ನಡೆದ ಕರ್ನಾಟಕ ಏಕೀಕರಣಕ್ಕೆ ಕಮ್ಮಿ ಅಂದ್ರೂ ನೂರು ವರ್ಷಗಳ ಕಾಲದ ಇತಿಹಾಸವಿದೆ. ಶ್ರೀಯುತರುಗಳಾದ ಮುದವೀಡು ಕೃಷ್ಣರಾಯರು, ಸಿದ್ಧಪ್ಪ ಕಂಬಳಿ, ಏಕೀಕರಣಾ ಶಿಲ್ಪಿ ಎಂದೇ ಖ್ಯಾತರಾದ ಎಸ್.ನಿಜಲಿಂಗಪ್ಪ, ಕೌಜಲಗಿ ಶ್ರೀನಿವಾಸರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್... ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕ ಕುಲ ಪುರೋಹಿತರೆಂದೇ ಖ್ಯಾತಿಯಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಹಲವು ವರ್ಷಗಳ ಕಾಲ ನಡೆದ ನಿರಂತರ ಹೋರಾಟ ರೋಮಾಂಚಕಾರಿ. ಹುಬ್ಬಳ್ಳಿಯ ಹೋರಾಟ, ಅದರಗುಂಚಿ ಶಂಕರಗೌಡ ಪಾಟೀಲರ ದಾಖಲೆಯ 23 ದಿನಗಳ ಅಮರಣಾಂತ ಸತ್ಯಾಗ್ರಹ, ಜೀವ ತೆತ್ತ ಬಳ್ಳಾರಿಯ ರಂಜಾನ್ಸಾಬ್ ಕಥನಗಳು ರೋಚಕವಾಗಿವೆ. ಒಂದು ದೊಡ್ಡ ಜನಾಂದೋಲನದ ಫಲವಾಗಿ ಹಲವು ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದ ನಮ್ಮ ಈ ನಾಡು ನವೆಂಬರ್ 1, 1956ರಲ್ಲಿ ಒಂದಾದ ದಿನವೇ ಕನ್ನಡ ರಾಜ್ಯೋತ್ಸವ. CIIL ನ ಈ ಡಿ.ವಿ.ಡಿ ಒಮ್ಮೆ ನಮ್ಮನ್ನೆಲ್ಲ ಆ ದಿನಗಳತ್ತ ಕರೆದೊಯ್ದು, ಕನ್ನಡ ನಾಡಿನ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿರುವ ಆ ದಿನಗಳ ಬಗ್ಗೆ ನಮ್ಮ ಅರಿವು ಹೆಚ್ಚಿಸುವುದ್ರಲ್ಲಿ ಸಂದೇಹಾ ಇಲ್ಲ ಗುರು. ನಮ್ಮ ನಮ್ಮ ಮನೇಲಿ ಮಕ್ಕಳು ಮರಿಗಳಿಗೆ ಈ ವಿಡಿಯೋ ತೋರಿಸುವುದರ ಮೂಲಕ ಅವರಲ್ಲಿ ನಾಡಿನ ಇತಿಹಾಸದ ಬಗ್ಗೆ ಅರಿವು ಮೂಡಿಸೋಣ್ವಾ?
ಎಲ್ಲ ಸರಿ, ಈ ಡಿ.ವಿ.ಡಿ ಎಲ್ಲಿ ಸಿಗುತ್ತೆ ಅನ್ನೋದು ನಿಮ್ಮ ಪ್ರಶ್ನೆನಾ? ಬೆಂಗಳೂರಿನ ಜಯನಗರದಲ್ಲಿರುವ "ಟೋಟಲ್ ಕನ್ನಡ" ಅಂಗಡಿಯಲ್ಲಿ ಸಿಗುತ್ತೆ. ನೀವು ಹೊರ ದೇಶದಲ್ಲಿದ್ದರೆ ಟೋಟಲ್ ಕನ್ನಡದ ಮೂಲಕ ಅಲ್ಲಿಗೆಯೇ ತರಿಸಿಕೊಳ್ಳಬಹುದು. ಈ ಡಿ.ವಿ.ಡೀನಾ ತಪ್ಪದೇ ನೋಡಿ, ನಿಮ್ಮ ಗೆಳೆಯರಿಗೂ ಪರಿಚಯಿಸಿ. ಆಗುತ್ತಲ್ವಾ ಗುರುಗಳೇ?
ನಾಡೊಂದಾದ ಕತೆ ಹೇಳೋ ಡಿ.ವಿ.ಡಿ!
1.11.09
ನಾಡಹಬ್ಬದ ಆಚರಣೆ ಎಲ್ಲೆಡೆ ಆಚರಣೆಯಾಗ್ತಾ ಇರೋದೂ, ದಿನಾ ದಿನಾ ಹೆಚ್ತಾ ಇರೋದೂ ನಿಜಕ್ಕೂ ಸಕತ್ ಸಂತೋಷದ ವಿಷ್ಯ. ಹರಿದು ಹಂಚಿ ಹೋಗಿದ್ದ ಕರ್ನಾಟಕ ಒಂದಾದ ಈ ದಿನ ಕನ್ನಡಿಗರೆಲ್ಲರ ಪಾಲಿಗೆ ಸುದಿನ. ನಾವೂ ನೀವೆಲ್ಲಾ ನಾಡಹಬ್ಬದ ಆಚರಣೆಗೆ ತಯಾರಿ ಮಾಡಿಕೊಳ್ತಾ ಇರೋ ಈ ಸಂದರ್ಭದಲ್ಲಿ ಮೈಸೂರಿನ CIIL ಕರ್ನಾಟಕ ಏಕೀಕರಣದ ಬಗ್ಗೆ, ಅದಕ್ಕಾಗಿ ಪಾಡು ಪಟ್ಟವರ ಬಗ್ಗೆ, ಕನ್ನಡ ನಾಡು ಒಂದಾಗಲು ಆ ದಿನಗಳಲ್ಲಿ ಎದುರಾದ ಸವಾಲುಗಳ ಬಗ್ಗೆ, ಆದ ಹೋರಾಟ. ತ್ಯಾಗ ಬಲಿದಾನಗಳ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲುವ " ಕರ್ನಾಟಕ ಏಕೀಕರಣ ಇತಿಹಾಸ" ಅನ್ನುವ ಡಿ.ವಿ.ಡಿಯನ್ನು (ಬೆಲೆ ರೂ 100) ಹೊರ ತಂದಿರೋದು ಸಕಾಲಿಕವಾಗಿದೆ.
7 ಅನಿಸಿಕೆಗಳು:
super guru
Namma annavar bagge blog bariri guru namma annavarna mart bttra...????
nam kannadada Rajyothsavakke olle koduge ee DVD, thumba dhanyavadagalu , mahithi neediddakke.
valle suddi :)
ellaru must and should kannada da ella pustakagallannu oduvantagabeku...
-Asha
ಅದ್ಬುತ! ಡಿ.ವಿ.ಡಿ ಎಲ್ಲಾ ಕಡೆ ಲಭ್ಯನಾ?
ಅತ್ಯುತ್ತಮ ಯೋಜನೆ. ಇದನ್ನು ನಮ್ಮ ವಿದ್ಯಾರ್ಥಿಗಳಿಗೆ ಹಂಚಬೇಕು. ಹಿಂದೆ ಕನ್ನದ ನಾಡು ನುಡಿಗಾಗಿ ದುಡಿದವರ ಬಗ್ಗೆ ಅರಿಯುವುದರ ಜೊತೆಗೇ ಈಗ, ವರ್ತಮಾನದಲ್ಲಿ ದುಡಿಯುತ್ತಿರುವವರ ಬಗ್ಗೆಯೂ ಜನರಲ್ಲಿ ತಿಳುವಳಿಕೆ ಬಂದರೆ ಇನ್ನೂ ಚನ್ನಾಗಿರುತ್ತದೆ
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!