ಬಿಬಿಎಂಪಿ: ರಾಷ್ಟ್ರೀಯ ಪಕ್ಷಗಳಿಂದ ಕನ್ನಡೇತರರ ಓಲೈಕೆ!


ಕೇಳ್ರಪ್ಪೋ ಕೇಳಿ! ಕನ್ನಡಿಗರ ಹೆಮ್ಮೆಯ, ಅಂದಿನ ಕೆಂಪೇಗೌಡರು ಕಟ್ಟಿದ, ಇಂದಿನ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ ಆಗೈತೆ. ಈ ಚುನಾವಣೆಯಲ್ಲಿ ಗೆದ್ದೋರು ಈ ಬೆಂಗಳೂರನ್ನು ಆಳ್ತಾರೆ ಅನ್ನೋದು ಗೊತ್ತಿರೋ ಇಚಾರಾನೆ. ಈ ಬೆಂಗಳೂರೆಂಬ ಕನ್ನಡಿಗರ ಕೋಟೆಯನ್ನು ಗೆಲ್ಲೋಕೆ ಯಾವ್ಯಾವ ದಂಡನಾಯಕರು ಬತ್ತಾ ಔರೆ, ಯಾವ್ಯಾವ ದೊಣೆನಾಯಕರು ಹೊಂಚು ಹಾಕ್ತಾ ಔರೆ ಗೊತ್ತಾ?

ನಾವು ಯಾರಿಗೇನು ಕಮ್ಮಿ?

ಇಂಗಂತಿರೋದು ನಮ್ಮ ರಾಷ್ಟ್ರೀಯ ಪಕ್ಷಗಳು. ಭಾರತೀಯ ಜನತಾ ಪಕ್ಷ ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ನಿಲ್ಸಿದ್ ನಾವೇ, ಅದ್ಕೆ ತಮಿಳ್ರೆಲ್ಲಾ ನಮಗೇ ಓಟ್ ಹಾಕಿ ಅನ್ನೋಕ್ ಒಂಟವ್ರಂತೆ. ಅವ್ರು ನಿಲ್ಲುಸ್ವಾಗಾ ನಾವೂ ಸುಮ್ಕೆ ತೆಪ್ಪುಗಿದ್ವಿ ಅದ್ಕೆ ನಮ್ಗ್ ಓಟ್ ಹಾಕಿ ಅಂತಾ ಕಾಂಗ್ರೆಸ್ಸು ಅಂದೀತಂತೆ. ಇನ್ನು ದಳದೋರು ಓದ್ಸಲಾ ಶಾಂತಿನಗರದಲ್ಲಿ ತಮಿಳಿನಾಗೇ ನಾವು ಪ್ರಚಾರಾ ಮಾಡಿದ್ದು ಈಗ್ಲೂ ಬೇಜಾನ್ ತಮಿಳ್ರುಗೆ ಟಿಕೆಟ್ ಕೊಟ್ಟಿದೀವಿ ನಮಗ್ ಓಟ್ ಹಾಕಿ ಅಂದಾರಂತೆ. ಅಯ್ಯಾ! ನೀವು ಬೆಂಗಳೂರಲ್ ಕುಂತ್ಕೊಂಡು ತಮಿಳ್ರುಗ್ ಸೀಟು ಕೊಟ್ಟೆ ಸೀಟು ಕೊಟ್ಟೆ ಅಂದ್ರೆ ಆಯ್ತುದಾ? ನಾವು ಇಲ್ಲಿ... ಚೆನ್ನೈಯಿಂದಾನೆ ನಮ್ ದಂಡು ಕಳುಸ್ತೀವಿ ಅಂತಾ ಅಣ್ಣಾ ಡಿ.ಎಂ.ಕೆ ಮತ್ತು ಡಿ.ಎಂ.ಕೆ ಪಕ್ಷದೋರು ಕ್ಯಾಂಡಿಡೇಟ್ ಹಾಕ್ತಾ ಔರಂತೆ. ಇಲ್ಲಿ ಕನ್ನಡದ್ ಐಕ್ಳುಗಳು ಮಾತ್ರಾ ಬಾರತಾನ ಕಾಪಾಡಕ್ಕೆ ಈ ರಾಷ್ಟ್ರೀಯ ಪಕ್ಷದೋರಿಂದಾನೇ ಸಾಧ್ಯಾ, ಇದು ಬಾರತಾ, ಯಾರು ಎಲ್ಲಾದ್ರೂ ಚುನಾವಣೆಗ್ ನಿಂತ್ಕೋಬೌದು, ನಾವ್ ಕಣ್ಮುಚ್ಕೊಂಡು ಓಟ್ ಹಾಕುದ್ರಾಯ್ತು ಅನ್ನೋ ಹಂಗೇ ಕುಂಬಕರ್ಣನ್ ಜಪಾ ಮಾಡ್ಕೊಂಡು ಮಲುಕ್ಕೊಂಡವ್ರಂತೆ. ಅಷ್ಟುಕ್ಕೂ ಕಾರ್ಪೋರೇಷನ್ ಆಪೀಸಿನ ಬಾಗ್ಲಾಗೆ ಕನ್ನಡದಲ್ಲಿ ಬರೆದವ್ರೇ, ಅಷ್ಟು ಸಾಲ್ದಾ ಅಂತಾ ರಗ್ ಎಳ್ಕಂಡವ್ರೇ ಗುರೂ!

1 ಅನಿಸಿಕೆ:

ನಂದನ್ ಅಂತಾರೆ...

ನಾಚಿಕೆ ಕೇಡು ಗುರು. ನಮ್ ಮನೆಗೆ ಬಿಟ್ಕೊಂಡಿದ್ ಅಲ್ದೆ ಅವ್ರುನ್ನ ರಾಜರ್ನಾಗಿ ಮಾಡಕ್ಕೆ ಹೊಂಟಿದೀವಿ. ಇವ್ರುನ್ನ ಹಿಂಗೆ ಬುಟ್ರೆ ನಾಳೆ ನಮ್ ಮನೆಯಾಗ್ ನಾವೇ ಗುಲಾಮ್ ಗಿರಿ ಮಾಡ್ಕೊಂಡು ಇರಬೇಕಾಗತ್ತೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails