೬. ಭಾಷಾನೀತಿ: ಬದಲಾಗದೆ ಉಳಿಗಾಲವಿಲ್ಲ!

ಭಾರತದ ಭಾಷಾನೀತಿಯನ್ನು ಜಾರಿ ಮಾಡಲೊಂದು ಇಲಾಖೆ, ಅದು ನೇಮಿಸಿದ ಸಮಿತಿ, ಅದರ ವರದಿ ಮತ್ತು ಶಿಫಾರಸ್ಸುಗಳನ್ನು ನೋಡಿದಾಗ “ಅನೇಕತೆಯಲ್ಲಿ ಏಕತೆ” ಎಂಬುದು ಬರೀ ಬಾಯಲ್ಲಿ ಆಡುವ ತೋರಿಕೆಯ ಮಾತುಗಳು ಅನ್ನಿಸುವುದು ಸಹಜ. ಒಂದು ನುಡಿಯ ಬಳಕೆಯ ವ್ಯಾಪ್ತಿಯನ್ನು ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿಸುತ್ತೇವೆ ಎನ್ನುವ ಮಹತ್ವಾಕಾಂಕ್ಷೆಯು ಉಳಿದ ನುಡಿಗಳ ಅಸ್ತಿತ್ವಕ್ಕೇ ಕೊಡಲಿ ಪೆಟ್ಟಾಗುವ ಪರಿಯನ್ನು ನಮ್ಮ ನಾಡಲ್ಲಿ ಕಾಣಬಹುದಾಗಿದೆ. ಸಂಸತ್ ಸಮಿತಿಯು ನೀಡಿದ ವರದಿಯ ಎಂಟನೇ ಭಾಗದಲ್ಲಿ ಒಟ್ಟು ೭೫ ಶಿಫಾರಸ್ಸುಗಳಿವೆ. ಅವುಗಳಲ್ಲಿ ರಾಷ್ಟ್ರಪತಿಗಳು ಒಪ್ಪಿ ಆದೇಶ ಹೊರಡಿಸಿ ಹಾಗೆ ಒಪ್ಪಿರುವುದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿರುವುದು ಸುಮಾರು ೬೫ ಶಿಫಾರಸ್ಸುಗಳನ್ನು. ಉಳಿದ ಹತ್ತನ್ನು ತಿರಸ್ಕರಿಸಲಾಗಿದೆ. ಆ ಹತ್ತು ಶಿಫಾರಸ್ಸುಗಳು ಇಂತಿವೆ.


7. A minimum percentage of entries in Hindi in the Registers may be fixed for the offices located in Region ‘C’ and the provision of making entries in Hindi “as far as possible” in the registers may be deleted.

19. Some special schemes may be introduced to encourage publication of Hindi news papers/Hindi magazines and for those Hindi Journalists associated with them in the non-Hindi speaking areas especially in states like Tamilnadu, Kerala and Karnataka.

46. In the competitive exams conducted for recruitment in the Central Govt. a compulsory question paper of Hindi of the level of Matriculation or equivalent may be prescribed. A candidate not passing this paper may be disqualified.

47. In the Central Secretariat Official Language service, status-quo may be maintained in respect of the posts of Director (OL) in all the big Ministries/Departments and simultaneously the creation of higher posts of Joint Secretary (OL) may also be considered.

49. Special allowance as an incentive may be given for posting of Hindi personnel in Region ‘C’ and at the same time the posting should be for a limited period only so that candidates from Region ‘A’ accept postings in Region ‘C’ without hesitation.

51. In all the Kendriya Vidyalaya/Navodaya Vidyalaya alongwith the Government Schools controlled by the State Government situated in Region ‘A’ & ‘B’, study of all subjects upto the level of 10th Standard, should immediately be started in Hindi medium. Regional language and English can be taught as a separate subject. After a stipulated interval the situation may be reviewed and this may be extended to Region ‘C’.

52. Matric level knowledge of Hindi may be made compulsory in the recruitment of Lecturers in Universities/Colleges, Research & Professional Educational Institutes, so that after assuming duties, they do not have any difficulty in teaching their subject in Hindi medium.

54. In the national education programmes like Sarv Shiksha Abhiyan provision of study should be made only through Hindi medium.

69. Advertisement in Hindi can be given in English newpapers and similarly advertisement in English can be given in Hindi Newspapers. Therefore, all the offices should give advertisement in bi-lingual form to Hindi/English newspapers.

75. Details of Hindi knowledge and Hindi work done by the employees should also be reflected in their service books and ACRs respectively. Additionally, the Departmental Promotion Committees constituted for considering the promotions of the different cadres, except Official Language cadre, should award bonus marks for the officer/employee, being considered for promotion, on the basis of Hindi work done by him/her.

ಇಂದಲ್ಲಾ ನಾಳೆ ಇವು ಜಾರಿ ಆಗುವುದು ಖಚಿತ!

ಈ ಮೇಲ್ಕಾಣಿಸಿದ ಶಿಫಾರಸ್ಸುಗಳೂ ಒಂದಲ್ಲ ಒಂದು ದಿನ ಜಾರಿಯಾಗಿಬಿಡಬಹುದು ಎನ್ನುವ ಆತಂಕ ಹಿಂದಿಯೇತರ ಭಾಷಿಕರಿಗೆ ಇರುವುದಕ್ಕಿಂತಲೂ “ಹೀಗಾಗಬೇಕು, ಹೀಗೇ ಆಗುತ್ತದೆ” ಎನ್ನುವ ಭರವಸೆ ಭಾರತ ಸರ್ಕಾರಕ್ಕೇ ಹೆಚ್ಚಾಗಿದೆ. ಇಂದು ತಿರಸ್ಕೃತಗೊಂಡಿರುವ ಈ ಸಲಹೆಗಳನ್ನು ಮುಂದೆ ಮತ್ತೆ ಒಪ್ಪಿ ಜಾರಿಗೊಳಿಸುವುದಿಲ್ಲ ಎನ್ನಲಾಗುವುದಿಲ್ಲ. ಈಗಲೂ ಕೂಡಾ ತಿರಸ್ಕರಿಸಲು ಇರುವ ಕಾರಣವು ಬಹುಶಃ “ಜಾರಿಗೆ ಕಾಲ ಪಕ್ವವಾಗಿಲ್ಲ” ಎನ್ನುವುದಾಗಿದೆ. ಕಾಲ ಪಕ್ವವಾಗುವುದು ಎಂದರೆ, ಈ ಬದಲಾವಣೆಗಳನ್ನು ಭಾರತದ ಸಂಸತ್ತು ಒಪ್ಪುವುದೇ ಆಗಿದೆ. ಹಿಂದಿಪ್ರಚಾರವನ್ನು ಪ್ರಾಥಮಿಕ ಸದಸ್ಯತ್ವದ ಒಂದು ಅಂಶವಾಗಿಸಿಕೊಂಡಿರುವ ಒಂದು, ಹಿಂದೀಯೆನ್ನುವುದನ್ನು ಮಾತ್ರಾ ಭಾರತೀಯತೆಯ ಸಂಕೇತ ಎಂದುಕೊಂಡಿರುವ ಮತ್ತೊಂದು ರಾಷ್ಟ್ರೀಯ ಪಕ್ಷಗಳೇ ಸಂಸತ್ತಿನಲ್ಲಿ ಬಹುಸಂಖ್ಯಾತರಾದಲ್ಲಿ ಆ ಕಾಲವೂ ದೂರವೇನಿಲ್ಲ.

ಭಾರತದ ಒಗ್ಗಟ್ಟಿಗಾಗಿ ಹಿಂದಿ, ದೇಶಕ್ಕೊಂದು ಭಾಷೆ ಬೇಕು ಅನ್ನುವುದಕ್ಕಾಗಿ ಹಿಂದಿ, ದೇಶಪ್ರೇಮದ ಸಂಕೇತಕ್ಕಾಗಿ ಹಿಂದಿ, ಮನರಂಜನೆಗಾಗಿ ಹಿಂದಿ, ಬಹುಮಾನಕ್ಕಾಗಿ ಹಿಂದಿ, ಕೆಲಸದಲ್ಲಿ ಬಡ್ತಿಗಾಗಿ ಹಿಂದಿ, ರೈಲ್ವೇ ಬ್ಯಾಂಕುಗಳಲ್ಲಿ ಕೆಲಸ ಬೇಕಾಗಿ ಹಿಂದಿ, ರಾಜ್ಯಸರ್ಕಾರಗಳ ಮೇಲೆ ಹೇರಿರುವ ತ್ರಿಭಾಷಾ ಸೂತ್ರದ ಸಲುವಾಗಿ ಹಿಂದಿ… ಹೀಗೆ ನಿಧಾನವಾಗಿ ಹಿಂದಿಯನ್ನು ದೇಶದ ಜನರೆಲ್ಲಾ ಕಲಿಯುವ ದಿನಗಳ ನಿರೀಕ್ಷೆಯಲ್ಲಿ ಭಾರತ ಸರ್ಕಾರವಿದೆ. ಆದರೆ ಇಂತಹ ಪ್ರಯತ್ನಗಳ, ಕಲಿಸುವಿಕೆಯ ಪರಿಣಾಮ ಏನಾದೀತು? ಭಾರತದ ಉಳಿದೆಲ್ಲಾ ಭಾಷೆಗಳ ಬಳಕೆಯ ಸಾಧ್ಯತೆಯನ್ನು ಈ ಭಾಷಾನೀತಿ ಕುಂಠಿತಗೊಳಿಸುತ್ತಿಲ್ಲವೇ? ನಮ್ಮದಲ್ಲದ ನುಡಿಯಲ್ಲಿ ನಮ್ಮ ಆಡಳಿತ ನಡೆಯಬೇಕೆನ್ನುವುದು “ಅದ್ಯಾವ ಕಾರಣಕ್ಕೆ ಆಗಿದ್ದರೂ” ಅದು ಪ್ರಜಾಪ್ರಭುತ್ವ ಎಂದು ಹೇಗೆ ಅನ್ನಿಸಿಕೊಳ್ಳುತ್ತದೆ? ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತವೆ.

ಭಾರತದೇಶವು ಒಪ್ಪಿ ಅನುಸರಿಸುತ್ತಿರುವ ಭಾಷಾನೀತಿಯ ಕಾರಣದಿಂದಾಗಿ ಇಂದು ಕೇಂದ್ರಸರ್ಕಾರ ನೇಮಿಸಿರೋ ಸಂಸತ್ ಸಮಿತಿಯು ಇಡೀ ಭಾರತದ ಎಲ್ಲ ರಾಜ್ಯಗಳಲ್ಲಿ ಆಗಬೇಕಾದ ಸುಧಾರಣೆಗಳನ್ನು ಕೊಟ್ಟಿದೆ. ಅವುನ್ನೆಲ್ಲಾ ಜಾರಿ ಮಾಡಿದರೆ ಕರ್ನಾಟಕದಲ್ಲಿ ಕನ್ನಡದ ಗತಿ ಏನಾದೀತು? ಕನ್ನಡಿಗರ ಬದುಕಿನ ಪರಿಸ್ಥಿತಿ ಏನಾದೀತು? ಎಂದೆಲ್ಲಾ ಯೋಚಿಸಿದರೆ ಮೈನಡುಕವುಂಟಾಗುತ್ತದೆ. ಇಂಥಾ ಸಲಹೆಗಳನ್ನು ನೀಡೋ ಸಮಿತಿಗಳು, ಇಂಥಾ ಸಮಿತಿಗಳನ್ನು ನೇಮಿಸುವ ಸದನಗಳು, ಇವುಗಳಿಗೆ ದಿಕ್ಕು ತೋರಿಸೋ ಭಾರತದ ಭಾಷಾನೀತಿ ಮತ್ತು ಭಾರತದ ಆಡಳಿತ ಭಾಷಾ ಕಾಯ್ದೆಗಳು... ಇವೆಲ್ಲಕ್ಕೂ ತಾಯಿಯಂತಿರೋ ಭಾರತದ ಸಂವಿಧಾನ ನಿಜಕ್ಕೂ ಭಾರತದ ವೈವಿಧ್ಯತೆಗಳನ್ನು ಉಳಿಸಿಕೊಳ್ಳಲು ಬದ್ಧವಾಗಿವೆ ಎನ್ನುವುದನ್ನು ಒಪ್ಪಲಾಗುವುದಾ ಗುರೂ!

ಭಾರತದಲ್ಲಿ ಬದುಕಬೇಕೆಂದರೆ ಹಿಂದೀಯನ್ನು ಕಲಿತಿರಲೇಬೇಕು ಎನ್ನುವುದಕ್ಕೆಂದೇ ರೂಪಿಸುವ ಹತ್ತಾರು ಯೋಜನೆಗಳನ್ನು, ಅದಕ್ಕಾಗಿ ಹಾಕಿ ಕೊಳ್ಳೋ ಗುರಿಗಳನ್ನು, ಖರ್ಚು ಮಾಡುವ ಹಣವನ್ನು, ಹುಟ್ಟುಹಾಕುವ ಅನಿವಾರ್ಯತೆಯನ್ನು ಕಂಡಾಗ ಧರೆ ಹತ್ತಿ ಉರಿದಂತೆ, ಏರಿ ನೀರುಂಡಂತೆ, ಬೇಲಿ ಹೊಲ ಮೆಯ್ದಂತೆ, ದೇಶದ ಐಕ್ಯತೆಗಾಗಿ ಹಿಂದಿ-ದೇಶಪ್ರೇಮದ ಪ್ರತೀಕ ಹಿಂದಿ ಎಂದು ನಮ್ಮವರು ಕುಡಿಯುತ್ತಿರುವ ಭಾರತಾಂಬೆಯ ಮೊಲೆವಾಲು ನಂಜಾದಂತೆ ಅನ್ನಿಸುವುದಿಲ್ಲವಾ ಗುರೂ? ಇಂತಹ ವಿಷದ ಹಾಲನ್ನೇ ಅಮೃತವೆಂದು ಭ್ರಮಿಸುತ್ತಿರುವ ಕನ್ನಡದ ಕಂದಮ್ಮಗಳ ಕಣ್ತೆರೆಸುವವರಾರು? ನನ್ನಪ್ಪಾ...

1 ಅನಿಸಿಕೆ:

Unknown ಅಂತಾರೆ...

ಭಾರತದಲ್ಲಿ ರಾಷ್ಟ್ರಭಾಷೆ ಅನ್ನೋದೇ ಇಲ್ಲ ಅನ್ನೋ ಸತ್ಯಾನ ನನ್ನ ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ನಾನು ಆಗಾಗ ಹೇಳ್ತಾ ಇರ್ತೀನಿ. ಬಹಳ ಜನ ಹಿಂದಿನೇ ನಮ್ಮ ರಾಷ್ಟ್ರಭಾಷೆ, ಕನ್ನಡ ಕೀಳು ಭಾಷೆ ಅನ್ನೋ ಭಾವನೆ ಇನ್ನೂ ಇದೆ. ನಮ್ಮ ಭಾಷೆಲೇ ವ್ಯವಹಾರ, ಸಂವಹನ ಮಾಡಿದ್ರೆ ಖಂಡಿತ ಪರಭಾಷೆ (ಹಿಂದಿ) ನಮ್ಮ ಮೇಲೆ ಸವಾರಿ ಮಾಡಲ್ಲ. ಅದಕ್ಕೆ ನಾವು ಮಾಡಬೇಕಾಗಿರೋದು ಇಷ್ಟೇ, ಯಾರು ಯಾವುದೇ ಭಾಷೇಲಿ ಮಾತಾಡಿದ್ರೂ ನಾವು ಕನ್ನಡದಲ್ಲೇ ಉತ್ತರ ಕೊಟ್ಟರೆ ಅಲ್ಲಿಗೆ ನಮ್ಮ ಕೆಲಸ ಮುಕ್ಕಾಲು ಪಾಲು ಮುಗಿದಂತೆ. ಮಿಕ್ಕ ಕೆಲಸ ನಮ್ಮ ಸರ್ಕಾರ ನೋಡ್ಕೋಬೇಕು. ಕನ್ನಡ ಬಂದವರಿಗೆ ಮಾತ್ರ ಕೆಲಸ, ಕನ್ನಡಕ್ಕೆ(ರಂಗಭೂಮಿ, ಚಿತ್ರರಂಗ, ಸಾಹಿತ್ಯ ಇತ್ಯಾದಿ) ಪ್ರೋತ್ಸಾಹ ಕೊಡುವಂಥ ಕೆಲಸ ಆಗಬೇಕು. ತಮಿಳುನಾಡಿನಲ್ಲಿ ಇಂಥಹ ಪದ್ಧತಿ ಇರುವುದರಿಂದಲೇ ತಮಿಳು ಇಂದು ಶ್ರೀಲಂಕ, ಸಿಂಗಾಪೂರ, ಮಲೆಶಿಯಾದಲ್ಲಿ ಅಧಿಕೃತ ಭಾಷೆಯಾಗಿ ಮೆರೀತಾ ಇದೆ. ಇಲ್ಲಿ ನಾವು ಅನ್ನೋದಕ್ಕಿಂತ ಮೊದಲು ನಾನು ಈ ಕೆಲಸ ಮಾಡ್ತೀನಿ ಅನ್ನೋ ಛಲ ಇರಬೇಕು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails