ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲೇ ನೋಡಿ ಅನ್ನೋದು ಕನ್ನಡಪರಾನಾ?


ಕರ್ನಾಟಕದಲ್ಲಿ ಕನ್ನಡಪರವಾಗಿ ದೊಡ್ಡದನಿಯಲ್ಲಿ ಹೋರಾಟ ಮಾಡುವವರಲ್ಲಿ ಶ್ರೀಯುತ ವಾಟಾಳ್ ನಾಗರಾಜ್ ಅವರದ್ದು ಪ್ರಮುಖವಾದ ಹೆಸರು. ಅರವತ್ತರ ದಶಕದಿಂದಲೇ ಕನ್ನಡಪರವಾಗಿ ಹೋರಾಟ ಮಾಡಿದ್ದಲ್ಲದೇ, ವಿಧಾನಸಭೆಯಲ್ಲೂ ಕನ್ನಡದ ಪರವಾಗಿ ಕೊರಳೆತ್ತಿದವರು ಅವರು. ಇವರು ಮೊನ್ನೆ ನೀಡಿರೋ ಡಬ್ಬಿಂಗ್ ವಿರುದ್ಧವಾಗಿ ರಾಜ್ಯಾದ್ಯಂತ ಹೋರಾಡುತ್ತೇವೆ ಅನ್ನೋ ಹೇಳಿಕೆ ಮಾತ್ರಾ ವಿಷಯದ ಪೂರ್ಣ ಅರಿವಿಲ್ಲದೆ, ತಪ್ಪು ಮಾಹಿತಿಯಿಂದ ಪ್ರೇರಿತವಾದಂತಿದೆ.

ಡಬ್ಬಿಂಗ್ ವಿರೋಧಿಗಳಿಗೆ ಈ ಪ್ರಶ್ನೆ!

ಹೀಗೆ ಆವೇಶದಲ್ಲಿ ಹೇಳಿಕೆ ಕೊಡೊ ಮುನ್ನ ಕನ್ನಡಪರವಾದದ್ದು ಯಾವುದು? ಕನ್ನಡಕ್ಕೆ ಮಾರಕವಾದದ್ದು ಯಾವುದು? ಅನ್ನೋದ್ರು ಬಗ್ಗೆ ತಾವೇ ಆಲೋಚಿಸಬೇಕಿತ್ತು. ಅಥವಾ ಡಬ್ಬಿಂಗ್ ಪರ ಮತ್ತು ವಿರೋಧದ ಬಗ್ಗೆ ಇರೋ ನಿಲುವುಗಳನ್ನು ಅರ್ಥ ಮಾಡ್ಕೊಂಡು ಮಾತಾಡಬೇಕಿತ್ತು. ಇರಲಿ, ಆದರೂ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಟ್ಕೊಂಡ್ರೆ ಒಳ್ಳೇದು...

- ಕನ್ನಡಿಗರಿಗೆ ಕನ್ನಡದಲ್ಲೇ ತಮ್ಮ ಮನರಂಜನೆಯನ್ನು ಪಡೆದುಕೊಳ್ಳೋ ಹಕ್ಕಿಲ್ವಾ? ಈ ಹಕ್ಕನ್ನು ನಿರಾಕರಿಸೋದು ಕನ್ನಡಪರಾನಾ?

- ಕನ್ನಡಿಗರು ಕನ್ನಡನಾಡಲ್ಲೇ ಪರಭಾಷಾ ಚಿತ್ರಗಳನ್ನು ಬೇರೆಭಾಷೇಲೇ ನೋಡಬೇಕಾ? ಇದು ಕನ್ನಡ ಪರಾನಾ?

- ಕರ್ನಾಟಕದ ಟಾಕೀಸುಗಳಲ್ಲಿ ಎಗ್ಗುಸಿಗ್ಗಿಲ್ದೇ ಪರಭಾಷಾ ಚಿತ್ರಗಳು ಓಡಬೇಕಾ? ಇದು ಕನ್ನಡ ಪರಾನಾ?

- ಕನ್ನಡಿಗರೆಲ್ಲಾ ನಿಧಾನವಾಗಿ ಸಿನಿಮಾ ನೋಡಕ್ಕೇ ಬೇರೆ ಬೇರೆ ಭಾಷೆಗಳನ್ನು ಕಲಿತು ಕೊಳ್ಳಬೇಕಾ? ಇದು ಕನ್ನಡ ಪರವಾದ ನಿಲುವಾ?

- ಹೀಗೆ ಕನ್ನಡನಾಡಲ್ಲಿ ಬೇರೆ ಬೇರೆ ಭಾಷೆಗಳ ಚಿತ್ರಗಳೆಲ್ಲಾ ಅವವೇ ಭಾಷೇಲಿ ಓಡ್ತಾ, ಅವುನ್ನೆಲ್ಲಾ ಆಯಾ ನಾಡಿಂದ ಬಂದವರು ನಮ್ಮ ನಾಡಲ್ಲಿ ಅವರ ಭಾಷೇಲೆ ನೋಡಿ ಮನರಂಜನೆ ಪಡ್ಕೋತಾ, ಕನ್ನಡ ಕಲಿಯೋ ಹಂಗಿಲ್ಲದೇ ಇರಬೇಕೇನು? ಇದು ಕನ್ನಡ ಪರವಾದ ನಿಲುವಾ?

- ಇದರಿಂದಾಗಿ ಕರ್ನಾಟಕದಲ್ಲಿ ಕನ್ನಡದ ವಾತಾವರಣ ಇಲ್ಲದಂತಾಗುವುದಿಲ್ಲವೇ?

ಕನ್ನಡಿಗರು ಕನ್ನಡದಲ್ಲಿ ಮನರಂಜನೆ ಪಡ್ಕೋತೀನಿ ಅನ್ನೋದ್ರು ವಿರುದ್ಧವಾಗೇ ದನಿಯೆತ್ತೋದು ಹೇಗೆ ಕನ್ನಡಪರ ಅಂತಾ ವಾಟಾಳರು ಆತ್ಮಾವಲೋಕನ ಮಾಡ್ಕೊಳ್ಳೋದು ಒಳ್ಳೇದು... ಅಲ್ವಾ ಗುರೂ!

15 ಅನಿಸಿಕೆಗಳು:

ಪ್ರಶಾಂತ ಸೊರಟೂರ ಅಂತಾರೆ...

ಬೇರೆ ಭಾಷೆಯ ಚಿತ್ರಗಳು ಕನ್ನಡನಾಡಿನಲ್ಲಿ ಯಾವುದೇ ತಡೆಯಿಲ್ಲದೇ ಓಡತಾ ಇರೋದು ನೋವಿನ ಸಂಗತಿ.
ಡಬ್ಬಿಂಗ ಬಂದರೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡದಲ್ಲಿ ನೋಡಬಹುದು, ಅಷ್ಟರಮಟ್ಟಿಗೆ ಕನ್ನಡಕ್ಕೆ ಒಳ್ಳೆಯದಾಗಬಹುದು.
ಆದರೆ ಡಬ್ಬಿಂಗ್ ಬೆಂಬಲಿಸುವಾಗ ತುಸು ಎಚ್ಚರಿಕೆಯೆವಹಿಸಿದರೆ ಒಳಿತು.
೧) ಡಬ್ಬಿಂಗ್ ಅತೀಯಾದರೇ, ಇತ್ತಿಚೀನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡ ಕನ್ನಡ ಚಿತ್ರಸಂಗೀತ ಮತ್ತೇ ತೆರೆಮರೆಗೆ ಸರಿಯಬಹುದು
೨) ನಮ್ಮದೇ ಕಲಾವಿದರ ಬೆಳವಣಿಗೆಗೆ ನಮ್ಮದೇ ನೆಲದಲ್ಲಿ ಬೇರೆ ಭಾಷೆಯ ನಟ-ನಟಿಯರು ಮುಳುವಾಗಬಹುದು
೩) ಮೊದಲೇ ರಿಮೇಕ ಚಿತ್ರಗಳಿಂದಾಗಿ ಚಿತ್ರರಂಗದಲ್ಲಿ "ಕನ್ನಡತನ" ಮರೆಯಾಗಿರುವಾಗ ಡಬ್ಬಿಂಗನಿಂದ ಇದಕ್ಕೆ ಬೆಂಕಿಗೆ ತುಪ್ಪ ಸುರಿದ ಹಾಗೆ ಆಗಬಹುದು

ಈಗ ಮುಖ್ಯವಾಗಿ ಆಗಬೇಕಾಗಿರುವುದು ರಿಮೇಕ್ ಎಂಬ ಕದ್ದ ಸರಕನ್ನು ದೂರ ಸರಿಸಿ ಕನ್ನಡದ್ದೇ "ಮುಂಗಾರು ಮಳೆ" ಗಳು ಸುರಿಯಬೇಕು.
ಚಿತ್ರರಂಗದವರು ರಿಮೇಕನಿಂದ ದೂರ ಸರಿದರೆ, ಡಬ್ಬಿಂಗ್ ಬೆಂಬಲಿಸುವ ಅನಿವಾರ್ಯತೆಯು ಕಡಿಮೆಯಾಗಬಹುದು.
"ಕನ್ನಡ ಚಿತ್ರರಂಗ"ದವರಿಗೆ, ಚಿತ್ರರಂಗವಷ್ಟೇ ಮುಖ್ಯ, ಇನ್ನುಳಿದವರಿಗೆ "ಕನ್ನಡ" ಮುಖ್ಯ

shashank ಅಂತಾರೆ...

Super guru...ಕನ್ನಡಿಗರು ಇಷ್ಟು ದಿನ ಸುಮ್ನೆ ಇದ್ದದ್ದು ಸಾಕು...ಇನ್ನಾದರೂ ಡಬ್ಬಿಂಗ್ ಪರವಾಗಿ ಹೋರಾಡಬೇಕು...ಇವತ್ತು ಡಬ್ಬಿಂಗ್ ಇದ್ದಿದ್ರೆ ಕನ್ನಡ ಸಿನಮಾ ಇಂಡಸ್ಟ್ರಿ ಇಷ್ಟು ಕೆಟ್ಟದಾಗಿ ಇರ್ತಿರ್ಲಿಲ್ಲ ಅಂತ ನನ್ನ ಅನಿಸಿಕೆ...ಡಬ್ಬಿಂಗ್ ಪರವಾಗಿ "ನಾವು" ಅಂದರೆ ಸಾಮಾನ್ಯ ಜನ ನಿಂತರೆ ಮಾತ್ರ ಅದನ್ನು ಅನುಷ್ಟಾನ ಮಾಡುವುದಕ್ಕೆ ಸಾಧ್ಯ...ಡಬ್ಬಿಂಗ್ ವಿರೋಧಿಗಳು ಕನ್ನಡದ ಬಗ್ಗೆ ಯೋಚನೆ ಮಾಡದೆ ಕೇವಲ ಅವರ ಸ್ವಾರ್ಥ ನೋಡಿಕೊಳ್ಳುತ್ತಾರೆ...ಕನ್ನಡ ಬಿಟ್ಟರೆ ಈರೀತಿಯ ವಿರೋಧ ಬೇರೆ ಯಾವ ಭಾಷೆಯಲ್ಲೂ ಇಲ್ಲ...ಇವತ್ತು ತಮಿಳು, ತೆಲುಗು, ಡಬ್ಬಿಂಗ್ ಇದ್ದರೂ ಸಹ ಚೆನ್ನಾಗೆ ನಡೀತಾ ಇಲ್ಲವೇ?...ಕನ್ನಡಿಗರು ಡಬ್ಬಿಂಗ್ ಪರ ಹೋರಾಡುವುದನ್ನು ಬಿಟ್ಟು, ಅವರದೇ ಭಾಷೆಲ್ಲೇ ಸಿನಿಮಾ ನೋಡ್ತಾರೆ...ಇನ್ನಾದರೂ ನಾವು ಎದ್ದು ನಿಲ್ಲ ಬೇಕು...

Vasumathi ಅಂತಾರೆ...

ELLA SUPER QUESTIONS GURU... DUBBING BEKE BEKU..
I HAVE TRAVELELD EXTENSIVELY IN ANDHRA AND KERALA. DUBBING ALLOWED THERE. PEOPLE THERE WATCH THE MOVIES MADE IN MALAYALAM.

ULTIMATELY GOOD MOVIES RUN IN ANY LANGUAGE.. WE WANT TO SEE MOVIES IN KANNADA ONLY.

Vivek ಅಂತಾರೆ...

naavu kannada para irona... kannada chalachitrada para alla. Kannada andre Kannada chalana chitra matra alla...

1990s nalli prasaravada Mahabharata & Ramayana Hindiya badalu Kannadalle prasavagiddre (like in TN) ivattu hindige istondu mahatva sigta irlilla.

Anonymous ಅಂತಾರೆ...

ಡಬ್ಬಿಂಗ್ ಮಾಡಲು ಬಿಟ್ಟರೆ, ಮೂಲ ಚಿತ್ರದ ರೆಮೇಕ್ ಹಕ್ಕು ಖರೀದಿಸಿ ಮತ್ತೆ ಕನ್ನಡದಲ್ಲಿ frame to frame ನಿರ್ಮಿಸಿ ದುಡ್ಡು ಮಾಡುವುದು ಹೇಗೆ? ಅದಕ್ಕೇ ಡಬ್ಬಿಂಗ್ ಅಂದ್ರೆ ಕೆಲವರಿಗೆ ಭಯ! - ರಮೇಶ್ ನಾಡಿಗ

Anonymous ಅಂತಾರೆ...

One point need to be strictly implemented if dubbing is allowed. It is that only the dubbed movie should be allowed to be released in the stated and not the original language movie.
My personal opinion is that we should take this point (allowing dubbing) in a phased manner. In the first phase we should allow the dubbing of only the English language movies and the cartoon serials (of any language) of Television.
On seeing the response from first phase, we can plan for allowing dubbing of /from other langauges (indian and non-Indian) movies and TV serials.

Anonymous ಅಂತಾರೆ...

1. One point need to be strictly implemented if dubbing is allowed. It is that only the dubbed movie should be allowed to be released in the stated and not the original language movie.
2. My personal opinion is that we should take this point (allowing dubbing) in a phased manner. In the first phase we should allow the dubbing of only the English language movies and the cartoon serials (of any language) of Television.
On seeing the response from first phase, we can plan for allowing dubbing of /from other langauges (indian and non-Indian) movies and TV serials.

3. I fully agree with this point (by Vivek):
"1990s nalli prasaravada Mahabharata & Ramayana Hindiya badalu Kannadalle prasavagiddre (like in TN) ivattu hindige istondu mahatva sigta irlilla."

4.

Anonymous ಅಂತಾರೆ...

I can't think of any protest by Vatal in recent years which made any sense to me. This is going to be one of them.
BTW, when was the last time he won an election? 1994 or 1999? He has contested countless elections afterwards from corporation to MP and has lost every single election. Which tells me that he is no longer good at knowing peoples pulse and aspirations any more.
He should take a rest now.

Anonymous ಅಂತಾರೆ...

ನಿಮ್ಮ ಪ್ರಶ್ನೆಗೆ ಉತ್ತರಗಳು:

೧. ಕನ್ನಡಿಗರಿಗೆ ತಮ್ಮ ಭಾಷೆಯಲ್ಲೇ ಮನರಂಜನೇ ಪಡೆಯೋ ಹಕ್ಕಿದೆ. ನೀವು ಒಬ್ಬ ಪ್ರೇಕ್ಷಕನಾಗಿ ಈ ಪ್ರಶ್ನೆ ಕೇಳೋದು ಸರಿ. ಆದರೆ ನಾಡು-ನುಡಿಯ-ಸಂಸ್ಕೃತಿಯ ಕುರಿತಾಗಿ ಹಲವಾರು ಲೇಖನಗಳನ್ನ ಬರೆದು ಜನ ಜಾಗೃತಿಗೆ ಕಾರಣವಾಗಿರುವ ವ್ಯಕ್ತಿಯಾಗಿ ಯೋಚಿಸಿ. ಸಿನೆಮಾ ಮಾಡಬೇಕಾದ ಕೆಲಸ ಏನು? ಕೇವಲ ಮನೋರಂಜನೆ ಅಲ್ಲ ಅಲ್ವಾ? ನಮ್ಮತನ ಬಿಂಬಿಸುವ ಚಿತ್ರಗಳನ್ನ ಮಾಡುವಲ್ಲಿ ನಮ್ಮ ಪ್ರಯತ್ನ ಸಾಗಬೇಕೆ ಹೊರೆತು ಬೇರೆ ಭಾಷೆಯ ಸಂಸ್ಕ್ರುತಿಯನ್ನು ಯಥಾವತ್ತಾಗಿ ತಂದು ನಮ್ಮ ಭಾಷೆಯಲ್ಲಿ ಪ್ರಸರಿಸೋದು ಯಾವ ರೀತೀಲಿ ಸರಿ?
ಬೇರೆ ಭಾಷೆಯ ಒಳ್ಳೆಯ ಕಥೆಗಳನ್ನ ನಮ್ಮ ರೀತಿಯಲ್ಲಿ ಜನರಿಗೆ ಹೇಳೋದು ಸೂಕ್ತ ಅಲ್ವಾ?


೨. ಕನ್ನಡಿಗರು ಬೇರೆ ಭಾಷೆಯ ಚಿತ್ರಗಳನ್ನ ನೋಡೋ ಪ್ರವೃತ್ತಿ ಹೇಗೇ ಬೆಳೆಸಿಕೊಂಡಿದ್ದಾರೆ ಅಂತ ಯೋಚಿಸಿ.
ಒಂದು: ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಚಿತ್ರಗಳು ಬರದೆ ಇರುವುದು.
ಎರಡು: ಬೇರೆ ಭಾಷೆಯ ಚಿತ್ರಗಳು ತಮ್ಮನ್ನು ತಾವು ವೈಭವೀಕರಿಸುವುದು.
ಮೂರು: ಕರ್ನಾಟಕದಲ್ಲಿ ಅನ್ಯ ಭಾಷಿಗರು ಹೆಚ್ಚಾಗಿ ವಾಸಿಸುತ್ತಿರುವುದು, ಅದರಿಂದ ನಮ್ಮವರ ಮೇಲೆ ಪರಿಣಾಮ ಬೀರುವುದು.

ಇವುಗಳಲ್ಲಿ ಎರಡು ಮತ್ತು ಮೂರನೇ ಅಂಶ ನಮ್ಮ ಕೈಯಲ್ಲಿಲ್ಲ: ಮೊದಲನೆಯದರ ಬಗ್ಗೆ ಗಮನ ಹರಿಸೋಣ. ನಮ್ಮ ಕನ್ನಡದಲ್ಲೇ ಇನ್ನೂ ಉತ್ತಮ ಚಿತ್ರಗಳನ್ನ ಮಾಡಬೇಕು. ಅವುಗಳ ಗುಣಮಟ್ಟ ಮತ್ತು ಪ್ರಚಾರ ಉತ್ತಮ ಗೊಳಿಸಬೇಕು.

೩. ಯಾವುದೇ ಭಾಷೆಯ ಚಿತ್ರ ಬೇರೊಂದು ರಾಜ್ಯದಲ್ಲಿ ಬಿಡುಗಡೆ ಮಾಡೋಕ್ಕೆ ನಿಷೇದ ಇಲ್ಲ. ನಮ್ಮ ಕನ್ನಡದ "ಮುಂಗಾರು ಮಳೆ" ಚಿತ್ರ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಂಡಾಗ ಯಾವ ರಾಜ್ಯವೂ ಅದನ್ನು ಬಹಿಷ್ಕರಿಸಿ ತೆಗೆಸಲಿಲ್ಲ. ಪುಣೆ ನಗರದಲ್ಲಿ ಅಲ್ಲಿಯ ಚಿತ್ರಮಂದಿರದಲ್ಲಿ ಓಡುತ್ತಿದ್ದ "ಮುಂಗಾರು ಮಳೆ" ತೆಗೆಯೋಕ್ಕೆ ಆಗದೆ ಸ್ಥಳೀಯ ಸಿನೆಮ ಒಂದು ಕಾದು ಕುಳಿತಿತ್ತು ಅಂತ ಪತ್ರಿಕೆಯಲ್ಲಿ ಓದಿದ ನೆನಪು. ಸಿನೆಮಾಗೆ ಅಷ್ಟು ಶಕ್ತಿ ಇರಬೇಕು. ನಾವು ಅನ್ಯ ರಾಜ್ಯಗಳಲ್ಲಿ ನಮ್ಮ ಸಿನೆಮಗಳನ್ನು ಪ್ರಚಾರ ಮಾಡದೇ ಹೋದರೆ ಅದು ನಮ್ಮ ತಪ್ಪು. ಇಲ್ಲಿ ಬಿಡುಗಡೆ ಆಗುವ ಅನ್ಯ ಭಾಷೆಯ ಸಿನೆಮಾಗಳ ಬಗ್ಗೆ ಅಸೂಯೆ ಪಟ್ಟು ಯಾವ ಉಪಯೋಗವೂ ಆಗುವುದಿಲ್ಲ.

೪. ಕನ್ನಡಿಗರು ಬೇರೆ ಭಾಷೆ ಸಿನೆಮ ನೋಡೋಕ್ಕೆ ಆ ಭಾಷೆ ಕಲಿತಾರೆ ಅನ್ನೋದು ಸುಳ್ಳು. "ಜುರಸ್ಸಿಕ್ ಪಾರ್ಕ" ನಂತಹ ಅಭೂತ ಪೂರ್ವ ಸಿನೆಮ ಮತ್ತೆ ತೆಗೆಯೋ ಅವಿವೇಕಕ್ಕೆ ಹೋಗದೆ ಡಬ್ ಮಾಡೋದು ಉತ್ತಮ. ಹಾಗೆಯೇ "ರಾಮಾಯಣ - ಮಹಾಭಾರತ" ಕನ್ನಡದಲ್ಲೇ ಪ್ರಸಾರ ಮಾಡೋದು ಉಚಿತ. ಆದರೆ ಎಲ್ಲ ಸಿನೆಮಗಳನ್ನು ಯಥಾವತ್ತಾಗಿ ಕನ್ನಡಕ್ಕೆ ತರೋದು ಸರಿನಾ ಗುರು?


ನಿಮಗೀ ಪ್ರಶ್ನೆಗಳು:

೧. ಕನ್ನಡದಲ್ಲಿ ಡಬ್ ಮಾಡಿದರೆ ಬೇರೆ ಭಾಷೆಯ ಸಿನೆಮ ಕರ್ನಾಟಕದಲ್ಲಿ ಬಿಡುಗಡೆ ಆಗೋದಿಲ್ವಾ?

೨. ಆಯಾ ಭಾಷೆ ಸಿನೆಮಾ ಜೊತೆ ಜೊತೆಗೆ ಅದೇ ಸಿನೆಮಾ ಕನ್ನಡದಲ್ಲೂ ಬಿಡುಗಡೆ ಮಾಡಿ ಇನ್ನಷ್ಟು ಚಿತ್ರಮಂದಿರಗಳ ಕೊರತೆ ಹೆಚ್ಚೋದಿಲ್ಲ್ವ?

೩. ಕನ್ನಡದಲ್ಲಿ ಈಗ ವರ್ಷಕ್ಕೆ ಸುಮಾರು ೧೨೦-೧೫೦ ಸಿನೆಮಾಗಳು ಬರ್ತಿವೆ, ಅದರಲ್ಲಿ ಶೇಕಡಾ ೮೦ ರಿಮೇಕ್. ಡಬ್ಬಿಂಗ್ ಇಲ್ಲದ ಕಾರಣ ಇಷ್ಟೊಂದು ರಿಮೇಕ್ ಚಿತ್ರಗಳು ಬರ್ತಿವೆ. ಈಗ ಡಬ್ಬಿಂಗ್ ಮಾಡೋಕ್ಕೆ ಅವಕಾಶ ಕೊಟ್ರೆ ಕನ್ನಡದಲ್ಲಿ ಬಾರೋ ಚಿತ್ರಗಳು ಕೇವಲ ೨೫-೩೦! ಇದು ನಮ್ಮ ಚಿತ್ರರಂಗಕ್ಕೆ ಒಳ್ಳೆಯದಾ?

ಕನ್ನಡತನಕ್ಕೆ ಒಳಿತಾಗಬೇಕಾದರೆ ಡಬ್ಬಿಂಗ್ ನಿಷೇದ ಮುಂದುವರೆಯಬೇಕು. ಆದರೆ "ಸೀಮಿತ ಮಾದರಿಯಲ್ಲಿ" ಡಬ್ಬಿಂಗ್ ಮಾಡುವ ಅವಕಾಶ ಇರಬೇಕು. ಇಲ್ಲದಿದ್ದರೆ ಎಷ್ಟೋ ಜನರು ಹಾಲಿವುಡ್ ಸಿನೆಮಾಗಳಿಂದ ವಂಚಿತರಾಗುತ್ತಾರೆ.

- ವಲ್ಲೀಶ್ ಕುಮಾರ್ ಎಸ್

Priyank ಅಂತಾರೆ...

ವಲ್ಲೀಶ್ ಕುಮಾರ್ ಅವರೇ,

ನಿಮ್ಮ ಪ್ರಶ್ನೆಗಳನ್ನು ನೋಡಿದೆ, ನಿಮ್ಮ ಅನಿಸಿಕೆಗಳನ್ನೂ ನೋಡಿದೆ.
ನನ್ನ ಕೆಲ ಅನಿಸಿಕೆಗಳನ್ನು ನಿಮ್ಮೊಡನೆ ಹಂಚಿಕೋಬೇಕೆನಿಸಿತು.

ನಿಮ್ಮ ಒಂದು ಪ್ರಶ್ನೆ ಹೀಗಿದೆ.
"ನಮ್ಮತನ ಬಿಂಬಿಸುವ ಚಿತ್ರಗಳನ್ನ ಮಾಡುವಲ್ಲಿ ನಮ್ಮ ಪ್ರಯತ್ನ ಸಾಗಬೇಕೆ ಹೊರೆತು ಬೇರೆ ಭಾಷೆಯ ಸಂಸ್ಕ್ರುತಿಯನ್ನು ಯಥಾವತ್ತಾಗಿ ತಂದು ನಮ್ಮ ಭಾಷೆಯಲ್ಲಿ ಪ್ರಸರಿಸೋದು ಯಾವ ರೀತೀಲಿ ಸರಿ?
ಬೇರೆ ಭಾಷೆಯ ಒಳ್ಳೆಯ ಕಥೆಗಳನ್ನ ನಮ್ಮ ರೀತಿಯಲ್ಲಿ ಜನರಿಗೆ ಹೇಳೋದು ಸೂಕ್ತ ಅಲ್ವಾ?"
- ರೀಮೇಕು ಚಿತ್ರಗಳೂ ಬೇರೆ ನುಡಿಯ ಸಂಸ್ಕೃತಿಯನ್ನು ತಂದು ನಮ್ಮ ನುಡಿಯಲ್ಲಿ ಪ್ರಸರಿಸುತ್ತವೆ.
- ಡಬ್ ಮಾಡಲಾದ ಚಿತ್ರಗಳು 'ಬೇರೆ ನುಡಿಯ ಒಳ್ಳೆಯ ಚಿತ್ರಗಳನ್ನು' ನಮ್ಮ ರೀತಿಯಲ್ಲಿ ಅಂದರೆ ನಮ್ಮ ನುಡಿಯಲ್ಲಿ ಜನರಿಗೆ ಹೇಳುತ್ತವೆ.
- ನಮ್ಮಲ್ಲೇ ಹುಟ್ಟಿದ ಎಷ್ಟೋ ಚಿತ್ರಗಳಲ್ಲಿ ತೋರಿಸುವ ಎಲ್ಲವೂ ನಮ್ಮ ಸಂಸ್ಕೃತಿಯೇ ಆಗಿರುತ್ತೆ ಎಂದು ತಾವು ಯಾಕೆ ಅಂದುಕೊಂಡಿದೀರ? ಮಚ್ಚು, ಲಾಂಗು, ಹೊಡೆದಾಟ, ಇವುಗಳೆಲ್ಲಾ ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿವೆ ಎಂದು ತಿಳಿದಿರುವಿರಾ ತಾವು?

ನಿಮ್ಮ ಇನ್ನೊಂದು ಪ್ರಶ್ನೆ:
ಕನ್ನಡದಲ್ಲಿ ಡಬ್ ಮಾಡಿದರೆ ಬೇರೆ ಭಾಷೆಯ ಸಿನೆಮ ಕರ್ನಾಟಕದಲ್ಲಿ ಬಿಡುಗಡೆ ಆಗೋದಿಲ್ವಾ?
- ಆಗುತ್ತೆ.
- ಕನ್ನಡದಲ್ಲಿ ಡಬ್ ಮಾಡಲು ಅವಕಾಶ ಇದ್ದಾರೆ, ಬೇರೆ ಭಾಷೆ ಬಾರದ ಜನರು, ಕನ್ನಡದಲ್ಲೇ ಆ ಸಿನೆಮಾ ನೋಡುತ್ತಾರೆ.
- ಕನ್ನಡಿಗರಿಗೆ ತಮ್ಮ ನುಡಿಯಲ್ಲಿ ಮನೋರಂಜನೆ ಪಡೆದುಕೊಳ್ಳುವ ಹಕ್ಕಿದೆ. ಆ ಹಕ್ಕನ್ನು ಅಲ್ಲಗಳೆಯಲು ನಾವ್ಯಾರು, ಆಲ್ವಾ?

ನಿಮ್ಮ ಇನ್ನೊಂದು ಪ್ರಶ್ನೆ:
"ಆಯಾ ಭಾಷೆ ಸಿನೆಮಾ ಜೊತೆ ಜೊತೆಗೆ ಅದೇ ಸಿನೆಮಾ ಕನ್ನಡದಲ್ಲೂ ಬಿಡುಗಡೆ ಮಾಡಿ ಇನ್ನಷ್ಟು ಚಿತ್ರಮಂದಿರಗಳ ಕೊರತೆ ಹೆಚ್ಚೋದಿಲ್ಲ್ವ?"
- ಚಿತ್ರಮಂದಿರಗಳ ಕೊರತೆ ಹೆಚ್ಚ'ಬಹುದು'. ಹೆಚ್ಚುತ್ತೆ ಅಂತ ಗ್ಯಾರಂಟಿಯಾಗಿ ಹೇಳಲಾರೆ.
- ಡಬ್ಬಿಂಗ್ ಮೂಲಕ ಹೆಚ್ಚು ಜನರು ಚಿತ್ರ ನೋಡಲು ಶುರು ಮಾಡಿದರೆ, ಚಿತ್ರಮಂದಿರಗಳ ಕೊರತೆ ಹೆಚ್ಚಿದರೆ, ಮಾರುಕಟ್ಟೆಯಲ್ಲಿ ಹೆಚ್ಚಿನ ಚಿತ್ರಮಂದಿರಗಳಿಗೆ ಬೇಡಿಕೆ ಬರುತ್ತೆ.
- ಆಗ, ಹೆಚ್ಚಿನ ಚಿತ್ರಮಂದಿರಗಳು ಕಟ್ಟಲ್ಪಡುತ್ತವೆ. ನೀವು ಹೇಳಿದ ತೊಂದರೆ ನಿವಾರಣೆ ಆಯ್ತಲ್ಲ.

ನಿಮ್ಮ ಇನ್ನೊಂದು ಪ್ರಶ್ನೆ:
"ಕನ್ನಡದಲ್ಲಿ ಈಗ ವರ್ಷಕ್ಕೆ ಸುಮಾರು ೧೨೦-೧೫೦ ಸಿನೆಮಾಗಳು ಬರ್ತಿವೆ, ಅದರಲ್ಲಿ ಶೇಕಡಾ ೮೦ ರಿಮೇಕ್. ಡಬ್ಬಿಂಗ್ ಇಲ್ಲದ ಕಾರಣ ಇಷ್ಟೊಂದು ರಿಮೇಕ್ ಚಿತ್ರಗಳು ಬರ್ತಿವೆ. ಈಗ ಡಬ್ಬಿಂಗ್ ಮಾಡೋಕ್ಕೆ ಅವಕಾಶ ಕೊಟ್ರೆ ಕನ್ನಡದಲ್ಲಿ ಬಾರೋ ಚಿತ್ರಗಳು ಕೇವಲ ೨೫-೩೦! ಇದು ನಮ್ಮ ಚಿತ್ರರಂಗಕ್ಕೆ ಒಳ್ಳೆಯದಾ?"
- ಕನ್ನಡದ ಸ್ವಮೇಕ್ ಚಿತ್ರಗಳ ಸಂಖ್ಯೆ ಕಮ್ಮಿ 'ಆಗಬಹುದು'. 'ಇಷ್ಟೇ ಕಮ್ಮಿ ಆಗುತ್ತೆ' ಅಂತ ಗ್ಯಾರಂಟಿಯಾಗಿ ಹೇಳಲಾರೆ.
- ಡಬ್ಬಿಂಗ್ ಬಿಟ್ಟುಕೊಂಡಿರೋ ಚಿತ್ರರಂಗಗಳಲ್ಲಿ ಸ್ವಮೇಕ್ ಚಿತ್ರಗಳು ಕಮ್ಮಿಯೇನ್ ಆಗಿಲ್ಲ. ಹಾಗಾಗಿ, ನೀವು ಕೊಟ್ಟಂತಹ ಸಂಖೆಯನ್ನು ನಾನು ನಂಬೋದಿಲ್ಲ.

ನಿಮ್ಮ ಅನಿಸಿಕೆ:
"ಕನ್ನಡತನಕ್ಕೆ ಒಳಿತಾಗಬೇಕಾದರೆ ಡಬ್ಬಿಂಗ್ ನಿಷೇದ ಮುಂದುವರೆಯಬೇಕು. ಆದರೆ "ಸೀಮಿತ ಮಾದರಿಯಲ್ಲಿ" ಡಬ್ಬಿಂಗ್ ಮಾಡುವ ಅವಕಾಶ ಇರಬೇಕು. ಇಲ್ಲದಿದ್ದರೆ ಎಷ್ಟೋ ಜನರು ಹಾಲಿವುಡ್ ಸಿನೆಮಾಗಳಿಂದ ವಂಚಿತರಾಗುತ್ತಾರೆ."
- "ಸೀಮಿತ ಮಾದರಿ"ಯನ್ನು ತೀರ್ಮಾನ ಮಾಡಬೇಕಾದೊರು ಮಾರ್ಕೆಟ್.
- ಯಾರೇ ಒಬ್ಬ ಮನುಷ್ಯನಿಗಾಗಲೀ, ಯಾವುದೇ ಒಂದು ಗುಮ್ಪಿಗಾಗಲೀ, "ಸೀಮಿತ ಮಾದರಿ" ಏನು ಎಂಬುದನ್ನು ತೀರ್ಮಾನಿಸೋ ಅದಿಕಾರ 'ಮಂದಿಯಾಳ್ವಿಕೆ'ಯಲ್ಲಿ (ಡೆಮಾಕ್ರಸಿ) ಇರೋದಿಲ್ಲ.

ಅರುಣ್ ಜಾವಗಲ್ ಅಂತಾರೆ...

ವಲ್ಲೇಶ್ ಕುಮಾರ್ ರವರೇ, ನಿಮ್ಮ ಮೇಲಿನ ಕಮೆಂಟ್ ಬಗ್ಗೆ ನನ್ನ ಅಬಿಪ್ರಾಯ-
ಜಗತ್ತಿನ ಎಲ್ಲಾ ನಾಡಿನಲ್ಲೂ ಡಬ್ಬಿಂಗ್ ಗೆ ಸ್ವಾಗತವಿದೆ. ಎಲ್ಲಾ ತಮ್ಮ ಸಂಸ್ಕ್ರುತಿ ಹಾಳಾಗುತ್ತೆ ಡಬ್ಬಿಂಗ್ ಬೇಡ ಅಂತ ಯಾರು ಹೇಳಿಲ್ಲ. ಯಾಕಂದ್ರೆ ಸಿನೆಮಾ ಒಂದು ಮನರಂಜನೆಗೆ ಮಾದ್ಯಮವೇ ಹೊರೆತು ಯಾವ ಸಂಸ್ಕ್ರುತಿಯನ್ನು ಅದು ಪ್ರತಿನಿದಿಸುವುದಿಲ್ಲ. ಕನ್ನಡ ಸಿನೆಮಾದವರ ಪ್ರಕಾರ ಸಿನೆಮಾಗಳು ಸಂಸ್ಕ್ರುತಿಯನ್ನ ಪ್ರತಿನಿದಿಸುತ್ತವೆ ಎನ್ನೋದಾದ್ರೆ ಲಾಂಗು ಮಚ್ಚು ನಮ್ಮ ಸಂಸ್ಕ್ರುತಿ ಎನ್ನಬೇಕಾಗುತ್ತೆ.

ತನಗೆ ಇಶ್ಟ ಬಂದ ಸಿನೆಮಾವನ್ನ ನೋಡುವುದು ನೋಡುಗನ ಸ್ವಾತಂತ್ರಕ್ಕೆ ಬಿಡಬೇಕೆ ಹೊರೆತು ನೋಡುಗನು ಯಾವ ಸಿನೆಮಾ ನೋಡಬೇಕು ಎನ್ನುವುದನ್ನ ಚಿತ್ರರಂಗದ ಕೆಲವರು ನಿರ್ದರಿಸುವುದು ಹೇಗೆ ಸರಿಯೆನ್ನಲಾಗುತ್ತದೆ? ಹಲವಾರು ಡಬ್ಬಿಂಗ್ ವಿರೋದಿ ಜನರ ಪ್ರಕಾರ ಪರಬಾಶೆಯ ಸಿನೆಮಾವನ್ನ ಅವವೇ ಬಾಶೆಯಲ್ಲಿ ನೋಡಿದ್ರೆ ತಪ್ಪಲ್ವಂತೆ ಅದೇ ಕನ್ನಡದಲ್ಲಿ ನೋಡಿದ್ರೆ ತಪ್ಪಂತೆ ಎಂತಹ ಜೋಕ್ ಅಲ್ವ? ಅವವೇ ಬಾಶೆಲಿ ನೋಡಿದ್ರೆ ಇವರು ಹೇಳೋ ಹಾಗೆ ಸಂಸ್ಕ್ರುತಿ ಹಾಳಾಗಲ್ವ? ಕನ್ನಡದಲ್ಲಿ ನೋಡಿದ್ರೆ ಮಾತ್ರ ಹೇಗೆ ಹಾಳಾಗುತ್ತೆ? ಸಿನೆಮಾ ನೋಡಿ ಜನ ಬೇರೆ ಬಾಶೆಗಳನ್ನ ಕಲಿತು, ಕನ್ನಡ ಚಿತ್ರಗಳಿಗಿಂತ ಬೇರೆ ಬಾಶೆಯ ಸಿನೆಮಾವನ್ನ ನೋಡುವ ಹವ್ಯಾಸ ಇತ್ತೀಚೆಗೆ ಕರ್ನಾಟಕದಾದ್ಯಂತ ಶುರುವಾಗಿದೆ. ಅದಕ್ಕೆ ಇಂದ ತಮಿಳು ತೆಲುಗು ಸಿನೆಮಾಗಳು ಕರ್ನಾಟಕದ ತಾಲೂಕು ಹೋಬಳಿ ಮಟ್ಟಕ್ಕೆ ತಮ್ಮ ಮಾರುಕಟ್ಟೆಯನ್ನ ವಿಸ್ತರಿಸಿಕೊಂಡಿವೆ. ಇಶ್ಟೆ ಏಕೆ ಸ್ವಾಮಿ, ನಾನು ಹುಟ್ಟಿ ಬೆಳೆದ ಹಾಸನದ ಹತ್ತಿರದ ನಮ್ಮ ಹಳ್ಳಿಯಲ್ಲಿ ಸಹ ತೆಲುಗು ತಮಿಳು ಚಿತ್ರಗಳ ಅಬಿಮಾನಿಗಳು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ. ನಮ್ಮ ಹಳ್ಳಿಯ ನನ್ನ ಶಾಲೆಯ ಗೆಳೆಯರಿಗೆ ಕರೆ ಮಾಡಿದ್ರೆ ಆರ್ಯ ಸಿನೆಮಾ ಅತವಾ ಕೊಲವರಿ ರಿಂಗ್ ಟೋನ್ ಗಳು ಕೇಳ್ತಿದೆ, ಮನೆಯಲ್ಲಿ ತರವಾರಿ ತೆಲುಗು ತಮಿಳು ಸಿನೆಮಾ ಡಿವಿಡಿ ತಂದು ನೊಡ್ತಾರೆ... ಇವರ್ಯಾರು ಆಂದ್ರಕ್ಕೊ ತಮಿಳು ನಾಡಿಗೋ ಹೋಗಿ ತೆಲುಗು ತಮಿಳು ಕಲಿತವರಲ್ಲ, ಹಾಸನ ಸೇರಿದಂತೆ ಹಲವಾರು ಕಡೆಗಳಲ್ಲಿ ಇಂದು ತಮಿಳು ತೆಲುಗು ಸಿನೆಮಾಗಳಿಗೆ ಅಂತನೇ ಒಂದೋ ಎರಡೋ ಚಿತ್ರಮಂದಿರ ರಿಸರ್ವ್ ಆಗಿದೆ... ಇದರ ಬಗ್ಗೆ ನನಗೆ ಅಸೂಹೆ ಇಲ್ಲ ಆದರೆ ಅಪ್ಪಟ ಕನ್ನಡ ಪ್ರದೇಶಗಳಲ್ಲೇ ಕನ್ನಡ ಮಾಯವಾಗುತ್ತಿರುವುದರ ಬಗ್ಗೆ ಆತಂಕವುಂಟಾಗುತ್ತಿದೆ. ಮತ್ತು ಕನ್ನಡಿಗ ಒಳ್ಳೆಯ ಮನೊರಂಜನೆ ಪಡೆಯಲು ಪರಬಾಶೆಯನ್ನ ಕಲಿಯಬೇಕಾದ ಪರಿಸ್ತಿತಿಯ ಬಗ್ಗೆ ಪ್ರಶ್ನೆಗಳು ಮೂಡುತ್ತಿದೆ.

ಇನ್ನು ಜುರಾಸಿಕ್ ಪಾರ್ಕ್ ಅತವಾ ಅವತಾರ್ ಸಿನೆಮಾ ನೋಡೋದ್ರಿಂದ ಏನು ಉಪಯೋಗ ಎಂದು ಕೇಳುವವರ ಮದ್ಯೆ ತಾವು ಜುರಾಸಿಕ್ ಪಾರ್ಕ್ ತರಹದ ಸಿನೆಮಾವನ್ನ ಡಬ್ ಮಾಡಬೇಕೆಂದು ಹೇಳಿದ್ದಿರಿ ಒಳ್ಳೆಯದು ಆದರೆ ಯಾವ ಆದಾರದ ಮೇಲೆ ಈ ಸಿನೆಮಾ ಡಬ್ ಆಗಬೇಕು ಈ ಸಿನೆಮಾ ಡಬ್ ಆಗಬಾರದು ಎನ್ನುವುದನ್ನ ನಿರ್ದರಿಸುತ್ತೀರ ಸ್ವಾಮಿ? ಅದನ್ನ ನಿರ್ದರಿಸಬೇಕಾದ್ದು ನೋಡುಗನೇ ಹೊರೆತು ಚಿತ್ರರಂಗದವರಲ್ಲ. ನೋಡುಗ ಡಬ್ ಆದ ಸಿನೆಮಾ ಚೆನ್ನಾಗಿದೆ ಎಂದಾದ್ರೆ ನೋಡ್ತಾನೆ ಇಲ್ಲ ಅಂದ್ರೆ ಇಲ್ಲ. ಜೊತೆಗೆ ಒಬ್ಬರಿಗೆ ಜುರಾಸಿಕ್ ಪಾರ್ಕ್ ಇಶ್ಟಾ ಆದ್ರೆ ಇನ್ನೊಬ್ಬರಿಗೆ ತೆಲುಗು ಆರ್ಯ ಇಶ್ಟ ಆಗುತ್ತೆ, ಇನ್ನೊಬ್ಬರಿಗೆ ತಮಿಳಿನ ಅನ್ನಿಯನ್ ಇಶ್ಟ ಆಗುತ್ತೆ.ಇನ್ನೊಬ್ಬರಿಗೆ ಪುಟ್ಟಕ್ಕನ ಹೈವೆ ಇಶ್ಟ ಆಗುತ್ತೆ ಎಲ್ಲರಿಗೆ ತಮಗೆ ಇಶ್ಟ ಆಗುವ ಸಿನೆಮಾವನ್ನ ತನ್ನ ಬಾಶೆಯಲ್ಲೇ ನೋಡುವ ಸ್ವಾತಂತ್ರ ಸಿಗಬೇಕಾಲ್ಲವೇ? ಜುರಾಸಿಕ್ ಪಾರ್ಕ್ ರಾಮಾಯಣ ಮಹಾಬಾರತ ಡಬ್ ಮಾಡಬೇಕು ಬೇರೆಲ್ಲ ಬೇಡ ಅನ್ನೊಕ್ಕೆ ನಾನು ನೀವು ಯಾರು ಸ್ವಾಮಿ? ಎಲ್ಲಾ ಸಿನೆಮಾಗಳು ಡಬ್ ಆಗುವಂತೆ ಆಗಲಿ ನೋಡುಗ ತನಗೆ ಬೇಕಾದ ಸಿನೆಮಾ ನೋಡುವ ಹಾಗಾಗಲಿ ಅಲ್ವ?
ಇನ್ನು ತಾವು ಕೇಳಿರುವ ಪ್ರಶ್ನೆಗಳ ಬಗ್ಗೆ- ಡಬ್ ಆದರೆ ಬೇರೆ ಬಾಶೆಯ ಸಿನೆಮಾ ಬಿಡುಗಡೆ ಆಗುವುದೇ ಇಲ್ಲ ಅಂತ ಹೇಳೋಕ್ಕೆ ಆಗಲ್ಲ ಆದ್ರೆ ಈಗಿನ ಮಟ್ಟಕ್ಕೆ ಆಗುವುದಿಲ್ಲ ಎಂದಂತೂ ಹೇಳಬಹುದು. ಚಿತ್ರಮಂದಿರಗಳ ಕೊರತೆ ಉಂಟಾಗುತ್ತೆ ಎನ್ನುವುದಾದರೆ ಅದನ್ನ ಹೇಗೆ ಸರಿ ಮಾಡಬೇಕೆನ್ನುವುದನ್ನ ಚಿತ್ರರಂಗದವರು ನಿರ್ದರಿಸಬೇಕೆ ಹೊರೆತು ಚಿತ್ರಮಂದಿರದ ಕೊರತೆ ಆಗುತ್ತೆ ಅಂತ ಡಬ್ಬಿಂಗ್ ಗೆ ವಿರೋದಿಸೋದು ಸರಿಯಲ್ಲ. ಚಿತ್ರರಂಗವೂ ಬೇರೆಲ್ಲ ಉದ್ಯಮದಂತೆ ಒಂದು ಉದ್ಯಮ. ತಮ್ಮ ಉದ್ಯಮ ಹೇಗೆ ಮುಂದಕ್ಕೆ ತರಬೇಕು ಎನ್ನುವುದನ್ನ ಚಿತ್ರರಂಗದ ಸಂಗ ಸಂಸ್ತೆಗಳು ಕೂತು ಚರ್ಚೆ ನಡೆಸಬೇಕೆ ಹೊರೆತು ಕಾಪಿಟೇಶನ್ ಕಡಿಮೆಯಾಗುವಂತೆ ಡಬ್ಬಿಂಗ್ ಗೆ ನಿಶೇದ ಹೇರಿ ನೋಡುಗನ ಸ್ವಾತಂತ್ರ ಕಿತ್ತುಕೊಳ್ಳಬಾರದು. ಇನ್ನು ಮೊದಲೆ ನಾನು ಹೇಳಿದಂತೆ ಕೆಲವರಿಗೆ ಹಾಲಿವುಡ್ ಸಿನೆಮಾ ಇಶ್ಟವಾದರೆ ಇನ್ನು ಕೆಲವರಿಗೆ ಟಾಲಿವುಟ್ ಸಿನೆಮಾ ಇಶ್ಟ ಆಗಬಹುದೇನೊ ಮತ್ತು ಕೆಲವರಿಗೆ ಕಾಲಿವುಡ್ ಬಾಲಿವುಡ್ ಸಿನೆಮಾಗಳು ಇಶ್ಟವಾಗುವುದೇನೊ, ಬಹುಶಯ ತಮಗೆ ಹಾಲಿವುಡ್ ಸಿನೆಮಾ ಇಶ್ಟ ಇರಬೇಕು ಅದಕ್ಕೆ ತಾವು ಹಾಲಿವುಡ್ ಸಿನೆಮಾದಿಂದ ಜನ ವಂಚಿತರಾಗಬಾರದೆಂದು ಹೇಳಿದ್ದೀರಿ ತಮಗಿರುವ ಸ್ವಾತಂತ್ರ ಬೇರೆ ವುಡ್ ಗಳನ್ನ ಇಶ್ಟ ಪಡುವ ಜನರಿಗೆ ಇರಬೇಕಲ್ಲವೇ-

ಅರುಣ್ ಜಾವಗಲ್

Amarnath Shivashankar ಅಂತಾರೆ...

ಕಮರ್ಶಿಯಲ್ ಚಿತ್ರಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾಲ ಪುಟ್ಟಣ್ಣ, ಅಣ್ಣವ್ರ ಕಾಲಕ್ಕೆ ಮುಗೀತು. ಈಗ ಚಿತ್ರಗಳು ಏನಿದ್ದರು ಮನರಂಜನೆಯ ಸರಕು ಅಷ್ಟೇ.
ಡಬ್ಬಿಂಗ್ ಚಿತ್ರಗಳನ್ನು ಬಿಟ್ಟರೆ ಕನ್ನಡ ಸಂಸ್ಕೃತಿ ಹಳಾಗುತ್ತದ್ದೆ ಅನ್ನುವ ವಾದಕ್ಕೆ ನನ್ನದೊಂದು ಪ್ರಶ್ನೆ: ಈಗ ಬರುತ್ತಿರುವ ಕನ್ನಡ ಚಿತ್ರಗಳು ನಿಜಕ್ಕೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿದೆಯೇ? ಹೀರೋ ಇನ್ ಕೆನ್ನೆಯ ಮೇಲೆ ಪಾಯಸ ಚೆಲ್ಲಿ ಅದನ್ನ ನಮ್ಮ ನಾಯಕ ನಟ ನೆಕ್ಕುವುದು ಕನ್ನಡ ಸಂಸ್ಕೃತಿಯೇ? ಸುತ್ತಿಗೆ ತಗೊಂಡು ನಾಯಕ ನಟ ಖಳನಾಯಕ ತಲೆಯನ್ನು ಜಜ್ಜಿ ಹಾಕುವುದು ಕನ್ನಡ ಸಂಸೃತಿಯೇ?ನಾಯಕ ನಟಿಯ ಎದೆಯೊಳಗಿಂದ ಮೀರು ಹೊರತೆಗೆಯುವುದು ಕನ್ನಡ ಸಂಸೃತಿಯೇ?

ಇನ್ನು ಡಬ್ಬಿಂಗ್ ಚಿತ್ರಗಳು ಬಂದ್ರೆ, ಕನ್ನಡದಲ್ಲಿ ತಯಾರಾಗುವ ಚಿತ್ರಗಳ ಸಂಖ್ಯೆ ಕಡಿಮೆ ಆಗುತ್ತದೆ ಅನ್ನುವ ವಾದ. ಕನ್ನಡ ಚಿತ್ರ ಅಂದ್ರೆ ಏನು ಅನ್ನೋದನ್ನ ಮೊದಲಿಗೆ ಯೋಚನೆ ಮಾಡಬೇಕು. ನನ್ನ ಪ್ರಕಾರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಕನ್ನಡದಲ್ಲಿ ನೋಡುವ ಚಿತ್ರಗಳೆಲ್ಲವೂ ಕನ್ನಡ ಚಿತ್ರಗಳೇ. ಅದು ಸ್ವಂತ ಚಿತ್ರವಿರಲಿ, ರೀಮೇಕ್ ಇರಲಿ ಅಥವಾ ಡಬ್ಬಿಂಗ್ ಚಿತ್ರವಿರಲಿ.

ಇನ್ನು ಉಳಿದಂತೆ ಗೆಳೆಯರು ಹೇಳೀದ ಹಾಗೆ ಇವತ್ತು ಕನ್ನಡ ಚಿತ್ರರಂಗದ ಸ್ಥಿತಿ-ಗತಿ ಹಾಲಿವುಡ್ಡಿಗೆ ಹೋಲಿಸುವಂತೆಯೂ ಇಲ್ಲ. ಹಾಗಾಗಿ ಇಂಗ್ಲಿಶ್ನಲ್ಲಾಗಲೀ, ಬೇರೆ ಭಾಷೆಗಳಲ್ಲಿ ಆಗಲೀ ತಯಾರಾಗುವ ಒಳ್ಳೆಯ ಚಿತ್ರಗಳನ್ನ ಕನ್ನಡಿಗರು ಕನ್ನಡದಲ್ಲಿ ನೋಡುವುದರಲ್ಲಿ ತಪ್ಪೇನಿದೆ?
ಅದೇ ರೀತಿ ಇವತ್ತು ಮಕ್ಕಳು ಮನರಂಜಗೆ, ವಿಜ್ಞಾನ, ತಂತ್ರಜ್ಞಾನ ಕಾರ್ಯಕ್ರಮಗಳನ್ನು ನೋಡಲು ಪೋಗೊ, ಕಾರ್ಟೂನ್ ನೆಟ್ವರ್ಕ್, ಡಿಸ್ಕವರಿ, ನ್ಯಾಟನಲ್ ಜಿಯೋಗ್ರಾಫಿಕ್ ವಾಹಿನಿಗಳನ್ನ ಇಂಗ್ಲೀಶಿನಲ್ಲೇ ನೋಡುವುದರಿಂದ ಕನ್ನಡದ ಬಗ್ಗೆ ಸಹಜವಾಗಿ ಕೀಳರಿಮೆ ಮೂಡುತ್ತದೆ. ಈ ವಾಹಿನಿಗಳು ಕನ್ನಡಕ್ಕೆ ಡಬ್ ಆಗಬೇಕು. ನಮ್ಮ ಮಕ್ಕಳನ್ನು ಆಗ ಮಾತ್ರ ಚಿಕ್ಕ ವಯಸ್ಸಿನಿಂದ ಕನ್ನಡದ ವಾತಾವರಣಕ್ಕೆ ಹಿಡಿದಿಟ್ಟುಕೊಳ್ಳಲು ಸಾಧ್ಯ.

ಅನ್ನದಾನೇಶ ಸಂಕದಾಳ ಅಂತಾರೆ...

ವಲ್ಲೀಶ ಅವರೇ ನಿಮ್ಮ ಪ್ರಶ್ನೆಗಳಿಗೆ ನನ್ನ ಅನಿಸಿಕೆಗಳು ಹೀಗಿವೆ ಓದಿ:

೧. * ಡಬ್ಬಿಂಗ್ ಗೆ ಅನುವು ಮಾಡಿಕೊಟ್ರೆ 'ನಮ್ಮತನ' ಬಿಂಬಿಸೋ ಚಿತ್ರಗಳನ್ನ ತೆಗೀಬೇಡಿ ಅಂತ ಅಲ್ಲ. ಡಬ್ಬಿಂಗ್ಗೆ ಅನುವು ಮಾಡಿಕೊಟ್ಟಿರೊ ಕೇರಳ,ತಮಿಳ್ನಾಡು, ಆಂಧ್ರದಲ್ಲಿ ಅವರ ಸಂಸ್ಕೃತಿಗೆ ಧಕ್ಕೆ ಆಗಿದೆಯೇ? ರೀಮೇಕೋ ಸ್ವಮೇಕೋ ಡಬ್ ಚಿತ್ರಾನೋ - ಸಿನೆಮಾದಿಂದ ಸಂಸ್ಕೃತಿಗೆ ಧಕ್ಕೆ ಬರುತ್ತೆ ಅಂದ್ರೆ 2000 ವರ್ಷಕ್ಕೂ ಮೇಲ್ಪಟ್ಟು ಇತಿಹಾಸ ಹೊಂದಿರೋ ನಮ್ಮ ಸಂಸ್ಕೃತಿ ತುಂಬಾ ಅಶಕ್ತ ಅಂದ ಹಾಗಾಯ್ತು.ಅಲ್ವಾ ? ಚಿತ್ರ ನೋಡೋ ಪ್ರೇಕ್ಷಕನಿಗೂ ಬುದ್ಧಿ ಇದೆ ಅನ್ನೋದನ್ನ ಮರೀಬಾರ್ದು. ಸ್ವಮೇಕೋ ರೀಮೇಕೋ ಡಬ್ ಚಿತ್ರಾನೋ ಅದು ಚೆನ್ನಾಗಿದ್ರೆ ಪ್ರೇಕ್ಷಕ ಮೆಚ್ಕೊತಾನೆ ಇಲ್ಲ ಅಂದ್ರೆ ಚಿತ್ರಾನ ಮಕಾಡೆ ಮಲಗಿಸ್ತಾನೆ. ಚಿತ್ರ ನೋಡಲು ಕಾಸು ಕೊಡೋ ಪ್ರೇಕ್ಷಕ ಕಾಸು ಕಳೆದುಕೊಳ್ತಾನೆ ಹೊರತು ಚಿತ್ರ ನೋಡಿ ಕಾಸು ಪಡೆಯೋಲ್ಲ. ಆದ್ದರಿಂದ ಸ್ವಮೇಕೂ ಇರ್ಲಿ ರೀಮೆಕೂ ಇರ್ಲಿ ಡಬ್ಬಿನ್ಗೂ ಇರ್ಲಿ..

೨. * ಡಬ್ಬಿಂಗ್ ಗೆ ಅನುವು ಮಾಡಿಕೊಟ್ರೆ 'ನಮ್ಮತನ' ಬಿಂಬಿಸೋ ಚಿತ್ರಗಳನ್ನ ಅಥವಾ ಒಳ್ಳೆಯ ಚಿತ್ರಗಳನ್ನ ತೆಗೀಬೇಡಿ ಅಂತ ಅಲ್ಲ. ಎಲ್ಲಾ ಭಾಷೆಯಲ್ಲೂ ಹೆಚ್ಚು ಕಮ್ಮಿ 10 % ಚಿತ್ರಗಳಷ್ಟೇ ಯಶ ಕಾಣೋದು. ಈ ವರ್ಷ15 % ಕನ್ನಡ ಚಿತ್ರಗಳು ಯಶ ಕಂಡಿವೆ ( http://www.indiaglitz.com/channels/kannada/article/75989.html ). ಎಲ್ಲಾ ಭಾಷೆ ಚಿತ್ರಗಳಲ್ಲೂ ಹೆಚ್ಚು ಜೊಳ್ಳು ಕಮ್ಮಿ ಕಾಳು ಇರುತ್ತೆ.. ಕನ್ನಡಿಗರು ಇದನ್ನು ಮೊದಲು ಅರ್ಥ ಮಾಡ್ಕೊಬೇಕು. ಕನ್ನಡಿಗರು ಹೆಚ್ಚಿಗೆ ಪರಭಾಷೆ ಚಿತ್ರ ಯಾಕೆ ನೋಡ್ತಿದಾರೆ ಅಂದ್ರೆ ಬೇರೆ ರಾಜ್ಯಗಳಲ್ಲಿರೋ ಹಾಗೆ ಡಬ್ಬಿಂಗ್ ಗೆ ಅನುಮತಿ ಇಲ್ಲಿಲ್ಲದೆ ಆ ಚಿತ್ರಗಳನ್ನ ಮೂಲಭಾಷೆಯಲ್ಲೇ ನೋಡೋ ಪರಿಸ್ತಿತಿ ಇಲ್ಲಿದೆ. ಡಬ್ಬಿಂಗ್ ಬೇಕು ಬೇಡ ಅನ್ನೋದನ್ನ ನಿರ್ಧರಿಸಬೇಕಾದುದು ಪ್ರೇಕ್ಷಕ ಚಿತ್ರರಂಗದವರು ಅಲ್ಲ. ಡಬ್ಬಿಂಗ್ ಇಲ್ಲದೆ ಇರೋದ್ರಿಂದ ಕನ್ನಡ, ಕನ್ನಡದವರಿಂದ ಹಾಗು ಕನ್ನಡಿಗರು, ಕನ್ನಡದಿಂದ ನಿಧಾನವಾಗಿ ದೂರ ಸರಿಯುವಂತಾಗಿದೆ. ಕರ್ನಾಟಕದಲ್ಲಿ ಅನ್ಯ್ಯಭಾಶಿಕರು ಕರ್ನಾಟಕದ ಮುಖ್ಯವಾಹಿನಿಗೆ ಸೇರದೇ ಇರಲೂ ಇಲ್ಲಿ ಡಬ್ಬಿಂಗ್ ಇಲ್ದೆ ಇರೋದೂ ಒಂದು ಕಾರಣ ಅಲ್ವಾ?

೩. * ಮತ್ತದೇ ಹೇಳ್ತೀನಿ - ಡಬ್ಬಿಂಗ್ ಗೆ ಅನುವು ಮಾಡಿಕೊಟ್ರೆ 'ನಮ್ಮತನ' ಬಿಂಬಿಸೋ ಚಿತ್ರಗಳನ್ನ ಅಥವಾ ಒಳ್ಳೆಯ ಚಿತ್ರಗಳನ್ನ ತೆಗೀಬೇಡಿ ಅಂತ ಅಲ್ಲ. ಜಾಕಿ, ಸೂಪರ್, ಮೈಲಾರಿ, ಆಪ್ತರಕ್ಷಕ, ಆಪ್ತಮಿತ್ರ ದುನಿಯಾ, ಮುಂಗಾರುಮಳೆ ಇತ್ಯಾದಿ - ಇವೆಲ್ಲ ಸಿನೆಮಾಗಳಿಂದ ಕೋಟಿ ಕೋಟಿ ಬಾಚಿ, ಒಳ್ಳೆ ಕನ್ನಡ ಚಿತ್ರಕ್ಕೆ ಕನ್ನಡಿಗರ ಉತ್ತರ ಏನು ಕನ್ನಡ ಚಿತ್ರಗಳ ಮಾರುಕಟ್ಟೆ ಏನು ಎಂದು ಮನಗೊಂಡಿರುವ ನಿರ್ಮಾಪಕರು ಕನ್ನಡ ಚಿತ್ರ ತೆಗೀಬಾರ್ದು ಅಂತಲ್ಲ. ಹಾಗೆ ನಮ್ಮ ಮಾರುಕಟ್ಟೆಯನ್ನ ಬೆಳೆಸುವ ಪ್ರಯತ್ನವನ್ನೂ ಖಂಡಿತವಾಗಿಯೂ ಮಾಡಬೇಕು.

೪. * ಪ್ರೇಕ್ಷಕನಿಗೆ ಸರಿ ಕಂಡದ್ದು ಓಡುತ್ತೆ..ಅವನಿಗೆ ಸರಿ ಅನಿಸದೆ ಇದ್ದದ್ದು ಸೋಲುತ್ತೆ. ಪ್ರೇಕ್ಷಕರ ತೀರ್ಮಾನ ಗಮನಿಸಿ ಡಬ್ ಮಾಡೋರು ಯಾವುದನ್ನು ಡಬ್ ಮಾಡ್ಬೇಕು ಅಂತ ಯೋಚನೆ ಮಾಡ್ತಾರೆ ಅಂತ ಹೇಳಬಹುದು. ಇನ್ನೊಂದ್ ದಿಕ್ಕಿನಿಂದ ನೋಡಿದ್ರೆ ಪ್ರೇಕ್ಷಕನಿಗೆ ಇಂತ ಆಯ್ಕೆಯ ಅವಕಾಶ ತಪ್ಪಿಸೋದು ಸರಿ ಅಲ್ಲ.

ನಿಮಗೀ ಪ್ರಶ್ನೆಗಳು:

೧. ಕನ್ನಡದಲ್ಲಿ ಡಬ್ ಮಾಡಿದರೆ ಬೇರೆ ಭಾಷೆಯ ಸಿನೆಮ ಕರ್ನಾಟಕದಲ್ಲಿ ಬಿಡುಗಡೆ ಆಗೋದಿಲ್ವಾ?

- ಆಗೋದೇ ಇಲ್ಲ ಅಂತಲ್ಲ..ಆಗಬಹುದು ಆದರೆ ಖಂಡಿತವಾಗಿಯೂ ಈಗಿರೋ ಮಟ್ಟದಲ್ಲಿ ಆಗೋದಿಲ್ಲ. ಆದರೆ ಒಂದು ಮಾತು - ಎಲ್ಲಾ ಬದಲಾವಣೆ ಒಂದೆರಡು ದಿನದಲ್ಲಿ ಆಗುತ್ತೆ ಅಂತ ಅಂದುಕೊಂಡರೆ ಅದು ತಪ್ಪಾಗುತ್ತದೆ.

೨. ಆಯಾ ಭಾಷೆ ಸಿನೆಮಾ ಜೊತೆ ಜೊತೆಗೆ ಅದೇ ಸಿನೆಮಾ ಕನ್ನಡದಲ್ಲೂ ಬಿಡುಗಡೆ ಮಾಡಿ ಇನ್ನಷ್ಟು ಚಿತ್ರಮಂದಿರಗಳ ಕೊರತೆ ಹೆಚ್ಚೋದಿಲ್ಲ್ವ?

ಇದಕ್ಕೆ ಚಿತ್ರರಂಗದವರು ಚರ್ಚಿಸಿ ತೀರ್ಮಾನ ತೊಗೊಂಡು ನೋಡುಗನಿಗೆ ಅನುಕೂಲ ಮಾಡಿಕೊಡೋ ಯೋಚನೆ ಮಾಡ್ಬೇಕು. ಅದು ಬಿಟ್ಟು ತಮ್ಮ ಸ್ವಾರ್ಥಕ್ಕೆ, ಕಾಸು ಕೊಟ್ಟು ಚಿತ್ರ ನೋಡೋ ಪ್ರೇಕ್ಷಕನಿಂದ ಕನ್ನಡದಲ್ಲೇ ಪರಭಾಷೆಯ ಸರಕು ನೋಡೋ ಹಕ್ಕನ್ನು ಕಿತ್ಕೊಳ್ಳೋದು ಖಂಡಿತ ತಪ್ಪು.

೩. ಕನ್ನಡದಲ್ಲಿ ಈಗ ವರ್ಷಕ್ಕೆ ಸುಮಾರು ೧೨೦-೧೫೦ ಸಿನೆಮಾಗಳು ಬರ್ತಿವೆ, ಅದರಲ್ಲಿ ಶೇಕಡಾ ೮೦ ರಿಮೇಕ್. ಡಬ್ಬಿಂಗ್ ಇಲ್ಲದ ಕಾರಣ ಇಷ್ಟೊಂದು ರಿಮೇಕ್ ಚಿತ್ರಗಳು ಬರ್ತಿವೆ. ಈಗ ಡಬ್ಬಿಂಗ್ ಮಾಡೋಕ್ಕೆ ಅವಕಾಶ ಕೊಟ್ರೆ ಕನ್ನಡದಲ್ಲಿ ಬಾರೋ ಚಿತ್ರಗಳು ಕೇವಲ ೨೫-೩೦! ಇದು ನಮ್ಮ ಚಿತ್ರರಂಗಕ್ಕೆ ಒಳ್ಳೆಯದಾ? ಕನ್ನಡತನಕ್ಕೆ ಒಳಿತಾಗಬೇಕಾದರೆ ಡಬ್ಬಿಂಗ್ ನಿಷೇದ ಮುಂದುವರೆಯಬೇಕು. ಆದರೆ "ಸೀಮಿತ ಮಾದರಿಯಲ್ಲಿ" ಡಬ್ಬಿಂಗ್ ಮಾಡುವ ಅವಕಾಶ ಇರಬೇಕು. ಇಲ್ಲದಿದ್ದರೆ ಎಷ್ಟೋ ಜನರು ಹಾಲಿವುಡ್ ಸಿನೆಮಾಗಳಿಂದ ವಂಚಿತರಾಗುತ್ತಾರೆ.

- ಬೇರೆ ಭಾಷೆಯಲ್ಲೂ ಹೆಚ್ಚು ಕಮ್ಮಿ ಇದೇ ಸ್ತಿತಿ ಇದೆ. ನಿಮ್ಮ ಮೂರನೆ ಪ್ರಶ್ನೆಗೆ ನೀಡಿದ ಉತ್ತರವೇ ಈ ಪ್ರಶ್ನೆಗೂ ಉತ್ತರ. ಚಿತ್ರರಂಗದವರ ಅಸಂಬಧ್ಹ ತರ್ಕಕ್ಕೆ ದುಡ್ಡು ಕೊಟ್ಟು ಸಿನಿಮಾ ನೋಡೋ ಕನ್ನಡ ಪ್ರೇಕ್ಷಕನಿಗೆ ಯಾಕೆ ಅನ್ಯಾಯ ಆಗಬೇಕು..ಅಲ್ವಾ? 'ಸೀಮಿತ ಮಾದರಿ' ಅನ್ನೋದು ಒಬ್ಬೊಬ್ಬರಿಗೂ ಒಂದೊಂದು ತರ ಕಾಣುತ್ತೆ. ಯಾವುದೊ ಒಂದು ಮಾದರಿ 'ಸೀಮಿತ' ಅಂತ ಕಾಣೋದಿಲ್ಲ. ಕನ್ನಡ ಬಿಟ್ಟು ಬೇರೆ ಭಾಷೆಯೇ ಬರದ ಒಬ್ಬರಿಗೆ ಹಾಲಿವುಡ್ ಚಿತ್ರ ಕನ್ನಡದ ದನಿಯಲ್ಲಿ ನೋಡಬೇಕಂದರೆ ಮತ್ತೊಬ್ಬರಿಗೆ ಬಾಲಿವುಡ್ ಸಿನಿಮಾ ಕನ್ನಡದ ದನಿಯಲ್ಲಿ ನೋಡ ಬೇಕಂತ ಅನ್ಸುತ್ತೆ. ಆದ್ದರಿಂದ ಸೀಮಿತ ಮಾದರಿಯ ಆಯ್ಕೆ ಮಾರುಕಟ್ಟೆ ಮತ್ತು ಪ್ರೇಕ್ಷಕರು ನಿರ್ಧರಿಸಿದ ಹಾಗಿರುತ್ತೆ.

ಕೊನೆದಾಗಿ :
ಡಬ್ಬಿಂಗ್ ಅನ್ನೋದು ಕನ್ನಡದ ಚಿತ್ರರಂಗದ ಪ್ರಶ್ನೆ ಆಗಬೇಕೆ ಅಥವಾ ಕನ್ನಡದ ಪ್ರಶ್ನೆ ಆಗಬೇಕೆ?
"ಕನ್ನಡ ಚಿತ್ರರಂಗ" ದಿಂದ ಕನ್ನಡನಾ? "ಕನ್ನಡ ಚಿತ್ರರಂಗ" ದಿಂದ ಕನ್ನಡ ಸಂಸ್ಕ್ರುತಿನಾ? ಅಥವಾ "ಕನ್ನಡ" ದಿಂದ/"ಕನ್ನಡಿ"ಗರಿಂದ ಚಿತ್ರರಂಗಾನಾ?

Anonymous ಅಂತಾರೆ...

ಬಹಳ ವರ್ಷಗಳಿಂದ ಡಬ್ಬಿಂಗ್ ಒಪ್ಪಿಕೊಂಡು ಬಂದ ಚಿತ್ರರಂಗಗಳಲ್ಲಿ ಈಗಿನ ಪರಿಸ್ಥಿತಿ:

http://www.telugupeople.com/news/News.asp?newsID=70279&catID=79

- ವಲ್ಲೀಶ್

arjunshetty ಅಂತಾರೆ...

hi snehithare sihi suddi dubbing bandide cci varadi odiri ta 07 01 2014 ne udayavani puta 1 puta 13 dubbing mukth !! mukth kannadakke jai

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails