"Hindi is foreign" ಎಂದ ಗುಜರಾತ್ ಉಚ್ಚನ್ಯಾಯಾಲಯ!

ಗುಜರಾತಿನ ಉಚ್ಚನ್ಯಾಯಾಲಯ ಕೇಂದ್ರಸರ್ಕಾರದ ಭಾಷಾನೀತಿಯ ಹುಳುಕನ್ನು ಎತ್ತಿ ತೋರಿಸಿ ಗುಜರಾತಿಗಳಿಗೆ ಹಿಂದೀ ಪರಕೀಯ ಭಾಷೆ ಎಂದಿರೋ ಸುದ್ದಿ ಪತ್ರಿಕೆಗಳಲ್ಲಿ (ಟೈಮ್ಸ್ ಆಫ್ ಇಂಡಿಯಾ - ಅಹ್ಮದಾಬಾದ್ - ೨೪.೧೨.೨೦೧೧) ಪ್ರಕಟವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಛೀಮಾರಿ!


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುಜರಾತಿನಲ್ಲಿ ೨೦೦೬ರಲ್ಲಿ, ಅಲ್ಲಿನ  ರಾಷ್ಟ್ರೀಯ ಹೆದ್ದಾರಿ(೮ಡಿ)ಯನ್ನು ದೊಡ್ಡದು ಮಾಡುವ ಸಲುವಾಗಿ, ಅದು ಹಾದು ಹೋಗುವ ದಾರಿಬದಿಯ ಹಳ್ಳಿಗರಿಗೆ ಭೂಮಿ ವಶಪಡಿಕೊಳ್ಳುವ ನೋಟೀಸೊಂದನ್ನು ನೀಡಿತ್ತು. ಜುನಾಗಢದ ಸರಘ್‍ವಾಡಾ ಹಳ್ಳಿಯ ಜನರು ಪ್ರಾಧಿಕಾರದ ನೋಟೀಸು ಹಿಂದೀಯಲ್ಲಿತ್ತು, ಅದು ನಮಗೆ ಅರ್ಥವಾಗಿಲ್ಲ, ಹಾಗಾಗಿ ಭೂಸ್ವಾಧೀನದ ಆ ನೋಟೀಸು ಸಿಂಧುವಲ್ಲ ಎಂದು ವಾದಿಸಿ ನ್ಯಾಯಲಯದ ಮೊರೆ ಹೋಗಿದ್ದರು.

ಈ ಮೊಕದ್ದಮೆಯನ್ನು ವಿಚಾರಣೆ ಮಾಡಿದ ಗುಜರಾತ್ ಹೈಕೋರ್ಟು, ಮಹತ್ವದ ತೀರ್ಪನ್ನು ನೀಡಿ ಗುಜರಾತಿ ನುಡಿಯಲ್ಲಿರದ ಕಾರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೋಟೀಸು ಅಸಿಂಧು ಎಂದು ಹೇಳಿತು. ಹೀಗೆ ಹೇಳುವ ಸಂದರ್ಭದಲ್ಲಿ ಗುಜರಾತಿಗಳು ಕಲಿಕೆಯಲ್ಲೂ, ಮಾತಿನಲ್ಲೂ, ಬಳಕೆಯಲ್ಲೂ ಗುಜರಾತಿಯನ್ನೇ ಬಳಸುತ್ತಿದ್ದಾರೆ. ಈ ಪರಿಸರದಲ್ಲಿ ಹಿಂದೀ ಭಾಷೆ ಇಲ್ಲಾ. ಹಾಗಾಗಿ ಹಿಂದೀ ಇಲ್ಲಿನವರಿಗೆ ಪರಕೀಯ ಭಾಷೆಯೇ... ಎಂದು ಹೇಳಿತು.

ತಮಾಶೆ ಅಂದ್ರೆ ಹಿಂದೀ ಮತ್ತು ಗುಜರಾತಿಗಳ ಲಿಪಿಗಳು ಹೆಚ್ಚು ಕಮ್ಮಿ ಒಂದೇ ಹೋಲಿಕೆ ಹೊಂದಿವೆ. ಹೀಗಿರುವಾಗ ಗುಜರಾತಿಗಳಿಗೇ ಹಿಂದೀ ಪರಕೀಯ ಅಂದ್ರೆ, ಕನ್ನಡಿಗರಿಗೆ ಹಿಂದೀ ಏನಾಗಬೇಕು ಹೇಳಿ. ಪತ್ರಿಕೇಲಿ "ಹಿಂದೀ ಫಾರಿನ್" ಅಂದ ತಕ್ಷಣ, ಭಾರತ ದೇಶವೇ ಒಡೆದು ಹೋಯಿತು ಅನ್ನೋ ಹಾಗೆ ಗಾಬರಿಯಾದವರಿಗೇನೂ ಕೊರತೆಯಿಲ್ಲ! ನಮ್ಮದಲ್ಲದ್ದೆಲ್ಲಾ ನಮಗೆ ಪರಕೀಯವೇ ಅಲ್ವಾ ಗುರೂ!

ನಮ್ಮೂರಲ್ಲಿ ಹೆಂಗಿದೆ ಪರಿಸ್ಥಿತಿ?

ಈ ಸುದ್ದಿ ಓದಿದಾಗ ಕರ್ನಾಟಕದಲ್ಲಿ ಹೇಗಿದೆ ಪರಿಸ್ಥಿತಿ ಅಂತಾ ಯೋಚನೆ ಮಾಡೋ ಹಾಗಾಗಿದೆ ಗುರೂ! ನೈರುತ್ಯ ರೈಲ್ವೇ ಇಲಾಖೆಯವರು ಜನರಿಗೆ ಬೇಕಿರೋ ಮಾಹಿತಿಗಳನ್ನೆಲ್ಲಾ ಹಾಕೋದೇ ಹಿಂದೀಲಿ ಅನ್ನೋಕೆ ಕೆಳಗಿನ ಜಾಹೀರಾತುಗಳೇ ಸಾಕ್ಷಿ.

(ಪ್ರಜಾವಾಣಿಯಲ್ಲಿ ದಿನಾಂಕ ೨೪.೧೨.೨೦೧೧ರಂದು ಪ್ರಕಟವಾದದ್ದು)

(ವಿಜಯ ಕರ್ನಾಟಕದಲ್ಲಿ ದಿನಾಂಕ ೦೯.೦೯.೨೦೧೦ರಂದು ಪ್ರಕಟವಾದದ್ದು)
ಇನ್ನು ಕನ್ನಡನಾಡಿನ ನಮ್ಮದೇ ಸಂಸ್ಥೆಗಳ ಅಂತರ್ಜಾಲ ತಾಣಗಳ ಬಗ್ಗೆ ಏನೂ ಅಂತಾ ಹೇಳೋದು? ನೋಡಿ.. .ನಮ್ಮ ಬೆಂಗಳೂರಿನ ಮೆಟ್ರೋ ರೈಲು ನಿಗಮದ ಈ ತಾಣವನ್ನು.

(ನಮ್ಮ ಮೆಟ್ರೋದ ಅಂತರ್ಜಾಲ ತಾಣ)

ನಮ್ಮದೇ ರಾಜ್ಯಸರ್ಕಾರದ ಅಂತರ್ಜಾಲ ತಾಣಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಅನ್ನೋದಕ್ಕೆ ಇನ್ನೊಂದು ತಾಣವನ್ನು ನೋಡಿಬಿಡೋಣ.

(www.kar.nic.inನ ಮುಖಪುಟ)
ಅಲ್ಲಾ... ನಮ್ಮದಲ್ಲದ್ದೆಲ್ಲಾ ನಮಗೆ ಪರಕೀಯ ಮತ್ತು ಜನರನ್ನು ಮುಟ್ಟೋಕೆ ನಮ್ಮ ನುಡಿಯೇ ಆಗಬೇಕು ಎನ್ನೋ ಸರಳ ಸತ್ಯಾನಾ ಕೋರ್ಟು ಹೇಳಬೇಕಾ? ನಮ್ಮ ನಾಡಲ್ಲಿ ಇವೆಲ್ಲಾ ಸರಿಹೋಗೋಕೆ ಕನ್ನಡಿಗರು ಯಾವ ಯಾವ ಕೋರ್ಟಿಗೆ ಹೋಗಬೇಕು? ಎಷ್ಟೆಷ್ಟು ಕೇಸು ಬಡಿದಾಡಬೇಕು? ಅಂತಾ ಸ್ವಲ್ಪ ಯೋಚಿಸಬೇಕಾಗಿದೆ ಗುರೂ!

5 ಅನಿಸಿಕೆಗಳು:

generalsagar ಅಂತಾರೆ...

ಗುಜರಾತಿ ಲಿಪಿಯನ್ನ ಹಿಂದಿ ಲಿಪಿಗೆ ಹೋಲಿಕೆ ಮಾಡುವುದು ಬಹುಷಃ ತಪ್ಪಾಗುತ್ತದೆ. ಹಿಂದಿಗೆ ತನ್ನದೇ ಲಿಪಿ ಇಲ್ಲ.

ashok ಅಂತಾರೆ...

ಇತ್ತೀಚೆಗೆ ಗಮನಿಸಿದಂತೆ ಅಂ‍ಚೆ ಕಛೇರಿಯ ಖಾತೆ ಕಛೇರಿಗಳಲ್ಲಿ ಇರುವ ಸಂಪೂರ್ಣ ಮಾಹಿತಿ ಇಂಗ್ಲೀ‍ಷ್ ಮತ್ತು ಹಿಂದಿಯಲ್ಲಿ ಮಾತ್ರ ಇದೆ. ನಮ್ಮದೇ ಕರ್ನಾಟಕದ ಸಿಂಡಿಕೇಟ್, ಕೆನರಾ ಮತ್ತಿತರ ಬ್ಯಾಂಕುಗಳು ಕೂಡ ಇಂಗ್ಲೀಷಿನೊಡನೆ ಹಿಂದಿಗೆ ಮಾತ್ರ ಮಣೆ ಹಾಕುತ್ತಿವೆ. ಬದಲಾಯಿಸುವುದೇಗೆ ಎಂಬುದೇ ದೊಡ್ದ ಸಮಸ್ಯೆಯಾಗಿದೆ. ಶೀಘ್ರದಲ್ಲೇ ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಳ್ಳಲೇಬೇಕು. ಇಲ್ಲವಾದ್ರೆ ಕಷ್ಟ ಕಷ್ಟ....
ಇಂತಿ,
ಅಶೋಕ್. ಕೆ. ಆರ್

Anonymous ಅಂತಾರೆ...

ಹಿಂದಿಲಿ: एन गुरु ? काफी आयता...
ಗುಜರಾತೀಲಿ: એન ગુરુ? કાફી આય્તા?

Prashanth Ragavendra ಅಂತಾರೆ...

"A Committee has been constituted under the Chairmanship of Shri Sita Kant Mohapatra to make recommendation, inter-alia on the feasibility of treating all languages in the Eighth Schedule to the Constitution, as Official Languages of the Union. The Government will consider the recommendations of the Committee and take a suitable decision in the matter. Indian parliament" This is comment from some one on the Times of India related to the above article
Sitakant mohapatra has his facebook id he can be contacted of the progress

ಗುಡುಗು ಮಿಂಚು ಅಂತಾರೆ...

ಗುಜರಾಥಿ ಲಿಪಿಗೂ ಹಿಂದಿ (ದೇವನಾಗರಿ) ಲಿಪಿಗೂ ಬಹಳ ವ್ಯತ್ಯಾಸವಿದೆ. ಆದರೆ ನಮಗೆ ಅವು ಹೆಚ್ಚು ಕಡಿಮೆ ಒಂದೇ ತರ ಕಾಣಿಸುತ್ತವೆ. ಅದೇ ರೀತಿ ಹಿಂದಿಯವರಿಗೆ ದಕ್ಷಿಣ ಭಾರತೀಯ ಭಾಷೆಗಳೆಲ್ಲ ಒಂದೇ ರೀತಿ ಅನ್ನಿಸುತ್ತವೆ.
ಗುಜರಾಥ್ ಹೈಕೋರ್ಟ್‌‌ನ ತೀಪು ಸಮಯೋಚಿತ ಮತ್ತು ಭಾರತದ ಇತರ ಭಾಷಿಕರು ಹಿಂದಿಯ ವಿರುದ್ಧ ಹೋರಾಡಲು ಈ ತೀರ್ಪನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದಾಗಿದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails