RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!!

(ಫೋಟೊ: http://newshopper.sulekha.com/india-hindu-nationalism_photo_1064066.htm )

ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಒಂದು ದೊಡ್ಡ ಶಿಬಿರ ಹುಬ್ಬಳ್ಳಿಯಲ್ಲಿ ನಡೀತಿದೆ. ಈ ಶಿಬಿರದಲ್ಲಿ ಸಾವಿರಾರು ಆರೆಸ್ಸೆಸ್ಸಿಗರು ಪಾಲ್ಗೊಂಡಿದ್ದಾರೆ. ಸಮವಸ್ತ್ರ ಧರಿಸಿ, ಶಿಸ್ತಿನ ಸಿಪಾಯಿಗಳಾಗಿ ನಿನ್ನೆ ಇವರು ನಡೆಸಿದ ಪಥಸಂಚಲನವಂತೂ ನೋಡಿದವರ ಮೆಚ್ಚುಗೆಗೆ ಕಾರಣವಾಗುವಂತಿತ್ತು. ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ನಾಯಕರು ಪಾಲ್ಗೊಂಡಿದ್ದಾರೆ. ರಾಜ್ಯ ರಾಜಕಾರಣ, ಭಾರತೀಯ ಜನತಾ ಪಕ್ಷದ ಆಂತರಿಕ ಶಿಸ್ತು, ಭ್ರಷ್ಟಾಚಾರಗಳ ಬಗ್ಗೆಯೆಲ್ಲಾ ಅಲ್ಲಿ ಮಾತುಕತೆಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದವು. ಕನ್ನಡ - ಕನ್ನಡಿಗ- ಕರ್ನಾಟಕಗಳ ಬಗ್ಗೆಯಾಗಲೀ, ಭಾರತದ ಸಂವಿಧಾನದ ಬಗ್ಗೆಯಾಗಲೀ, ಒಕ್ಕೂಟ ವ್ಯವಸ್ಥೆಯ ಬಗ್ಗೆಯಾಗಲೀ, ಜಾತ್ಯಾತೀತತೆಯ ಬಗ್ಗೆಯಾಗಲೀ ಆರೆಸ್ಸೆಸ್ಸಿಗೆ ಇರುವ ನಿಲುವುಗಳನ್ನು ಅರಿತಾಗ ಈ ಸಂಭ್ರಮ ಆತಂಕವಾಗಿ ಬದಲಾಗುವುದರಲ್ಲಿ ಅಚ್ಚರಿಯಿಲ್ಲ!

ಸಂಘದ ಹೊರಮುಖ!

ಆರೆಸ್ಸೆಸ್ ಎನ್ನುವುದು ದೇಶದ ಅತ್ಯಂತ ಶಿಸ್ತುಬದ್ಧ ಸಾಮಾಜಿಕ ಸಂಘಟನೆ ಎಂದೇ ಗುರುತಾಗಿದೆ. ಇಲ್ಲಿನ ಕಾರ್ಯಕರ್ತರು ಸ್ವಾರ್ಥ ಮರೆತು ನೆರೆ ಬರ ಮೊದಲಾದ ಸಂದರ್ಭಗಳಲ್ಲಿ ಜನತೆಯ ರಕ್ಷಣೆಗೆ, ಸಹಾಯಕ್ಕೆ ಧಾವಿಸಿ ಬಂದದ್ದಿದೆ. ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಈ ಸಂಸ್ಥೆಯ ಒಳರಚನೆ ಹಾಗೂ ಹರವುಗಳು ಹೆಸರುವಾಸಿಯಾಗಿದೆ. ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ, ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಇದೆಂಬ ಹೆಸರೂ ಸಂಘಕ್ಕಿದೆ. ಮನೆ ಮಠ ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇದರಲ್ಲಿದೆ. ಸಂಘದ ಅನೇಕ ಕಾರ್ಯಕರ್ತರು ಅಕ್ಷರಶಃ ಸಂತರಂತೆ ತಮ್ಮದೆಲ್ಲವನ್ನೂ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವುದೂ ಕೂಡಾ ಸತ್ಯ. ಆದರೆ ವೈಯುಕ್ತಿಕ ಹಿರಿಮೆಗಳು, ಅನೇಕರ ನಿಸ್ವಾರ್ಥತೆ, ತ್ಯಾಗ, ಗಟ್ಟಿತನಗಳು ಬಳಕೆಯಾಗುತ್ತಿರುವ ಉದ್ದೇಶ ಮಾತ್ರಾ ದುರದೃಷ್ಟಕರವಾದುದ್ದಾಗಿದೆ.

ಸಂಘದ ಬೋಧನೆಯನ್ನು ಪ್ರಶ್ನಾತೀತವಾಗಿ ಒಪ್ಪುವ ಕಾರ್ಯಕರ್ತರ ಸೈನ್ಯವನ್ನೇ ಹೊಂದಿರುವ ಸಂಘವು, ಮೂಲತಃ ತಾನು ನಂಬಿರುವ ಸಿದ್ಧಾಂತಗಳಲ್ಲೇ ಪ್ರಜಾಪ್ರಭುತ್ವ ವಿರೋಧಿ, ವೈವಿಧ್ಯತಾ ವಿರೋಧಿ ನಿಲುವುಗಳನ್ನು ಹೊಂದಿರುವ ಪುರಾವೆಗಳನ್ನು, ಸಂಸ್ಥೆಯ ಪೂಜನೀಯ ಆದರ್ಶವಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ಚಿಂತನಗಂಗಾ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧, ಪ್ರಕಾಶಕರು: ಸಾಹಿತ್ಯ ಸಂಗಮ ಪ್ರಕಾಶನ) ಪುಸ್ತಕದಲ್ಲಿ  ಕಾಣಬಹುದಾಗಿದೆ. ಚಿಂತನಗಂಗಾ ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಪುಸ್ತಕದ ಮೊದಲಲ್ಲೇ ಬರೆಯಲಾಗಿರುವುದರಿಂದ ಇದನ್ನು ಸಂಘದ ಅಧಿಕೃತವಾದ ನಿಲುವು ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿಲುವಿನ ಸರಿತಪ್ಪುಗಳನ್ನು ವಿಶ್ಲೇಷಿಸದೆ, ರಾಷ್ಟ್ರೀಯ ಸ್ವಂಯಂಸೇವಕ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು!

ಭಾಷೆಗಳ ಬಗ್ಗೆ!

ವೈವಿಧ್ಯತೆಯನ್ನು ಹಳಿಯಲಾಗದ, ಆದರೆ ಒಪ್ಪಲಾಗದ ಮನಸ್ಥಿತಿಯನ್ನು, ಇಂತಹ ವೈವಿಧ್ಯತೆ ಇರುವುದರಿಂದಾಗಿಯೇ ಚಡಪಡಿಕೆ ಹೊಂದಿರುವುದನ್ನೂ ಈ ಕೆಳಗಿನ ಮಾತುಗಳು ಧ್ವನಿಸುತ್ತಿವೆ.
ನಮ್ಮ ರಾಷ್ಟ್ರೀಯ ಪರಂಪರೆಯ ವೈವಿಧ್ಯವು ಭಾಷೆಗಳ ಕ್ಷೇತ್ರಗಳಲ್ಲೂ ವ್ಯಕ್ತಗೊಂಡಿದೆ.. ಎಲ್ಲಾ ಭಾಷೆಗಳೂ ಮೂಲತಃ ಒಂದೇ. ವಾಸ್ತವವಾಗಿ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಸಂಸ್ಕೃತಿಯ ದಿವ್ಯ ಪರಿಮಳವನ್ನು ಹರಡುವ ನವವಿಕಸಿತ ಕುಸುಮಗಳಂತೆ. ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದರೆ ಭಾಷೆಗಳ ಆ ಸಾಮ್ರಾಜ್ಞಿ ದೇವವಾಣಿ ಸಂಸ್ಕೃತ. ಅದರ ಸಂಪನ್ನತೆ ಮತ್ತು ಪರಂಪರಾಗತ ಪಾವನ ಸಂಬಂಧಗಳಿಂದಾಗಿ ಅದೊಂದೇ ನಮ್ಮ ರಾಷ್ಟ್ರೀಯ ಏಕತೆಗೆ ಬಲನೀಡುತ್ತಿರುವ ಒಂದು ಮುಖ್ಯ ಅಂಶ. ಆದರೆ ದುರದೃಷ್ಟವಶಾತ್ ಅದು ಇಂದು ಸಾಮಾನ್ಯ ಬಳಕೆಯಲ್ಲಿಲ್ಲ. ಅದನ್ನು ಬಳಕೆಗೆ ತರುವ ನೈತಿಕ ಅಭಿಮಾನವಾಗಲೀ, ಕೆಚ್ಚೆದೆಯಾಗಲೀ ನಮ್ಮ ಇಂದಿನ ಆಡಳಿತಗಾರರಿಗಿಲ್ಲ.
 (ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು ಏಕೆ ತಲೆ ಎತ್ತುತ್ತಿವೆ ಗೊತ್ತಾಯ್ತಲ್ಲಾ?)
ಇಂಗ್ಲೀಶ್ ನಮ್ಮ ಮೇಲೆ ಹೇರಲ್ಪಟ್ಟ ಕೃತಕ ಹೊರೆ. ಇದನ್ನು ಕಿತ್ತೆಸೆಯಬೇಕು. ಇಂಗ್ಲೀಶ್ ಮುಂದುವರಿಕೆ ಮಾನಸಿಕ ದಾಸ್ಯದ ಲಕ್ಷಣ. ಸಂಪರ್ಕ ಭಾಷೆಯ ಸಮಸ್ಯೆಗೆ ಪರಿಹಾರವೇನು? ಸಂಸ್ಕೃತವು ಆ ಸ್ಥಾನವನ್ನು ಪಡೆಯುವವರೆಗೆ ಅನುಕೂಲದ ದೃಷ್ಟಿಯಿಂದ ಹಿಂದಿಗೆ ಆದ್ಯತೆ ನೀಡಬೇಕು. ಯಾಕೆಂದರೆ ದೇಶದ ಬಹುಭಾಗದ ಜನರು ಬಳಸುವುದು ಹಿಂದಿಯನ್ನೇ. ಕಲಿಯುವುದಕ್ಕೆ ಮತ್ತು ಆಡುವುದಕ್ಕೆ ಅತ್ಯಂತ ಸುಲಭವಾದ ಭಾಷೆಯೂ ಅದೇ. ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಲು ಕುಂಭ ಅಥವಾ ಬೇರಾವುದಾದರೂ ಮೇಳಕ್ಕೆ ಕಾಶಿಗಾಗಲೀ, ಪ್ರಯಾಗಕ್ಕಾಗಲೀ ಹೋದರೆ, ದೂರದ ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳಿಂದ ಅಲ್ಲಿ ಕಿಕ್ಕಿರಿದು ನೆರೆಯುವ ಅಗಾಧ ಜನಸ್ತೋಮ ಹಿಂದಿಯನ್ನೇ, ಅದೆಷ್ಟೇ ಅಪಕ್ವವಾಗಿರಲೀ, ಬಳಸುವುದನ್ನು ಕಾಣುತ್ತೇವೆ.
ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು. ವಾಸ್ತವವಾಗಿ ಬ್ರಿಟೀಷರ ಆಳ್ವಿಕೆಯಲ್ಲೂ ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಒಂದೇ ಭಾಷೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಇವೆಲ್ಲಾ ಭಾಷೆಗಳನ್ನೂ ನಾಶಮಾಡುವುದನ್ನು ಯಾವನೂ ಸಹಿಸಲಾರ. ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಶಂಕೆ, ಭೀತಿಗಳು ಕೇವಲ ಕಟ್ಟುಕತೆ, ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

ಒಟ್ಟು ಸಾರವೆಂದರೆ "ಹಿಂದೀಯನ್ನು ನೀವೆಲ್ಲಾ ಒಪ್ಪಿ. ಬ್ರಿಟೀಷರು ಆಳುವಾಗಲೇ ಭಾರತೀಯ ಭಾಷೆಗಳು ಉದ್ಧಾರವಾಗಿದ್ದವು, ಹಿಂದೀಲಿ ಆಳಿದರೆ ಏನಾಗುತ್ತದೆ?" ಎನ್ನುವ ನಿಲುವು ಕಾಣುತ್ತದೆ. ಇಂದು ಹಿಂದೀ ಬರದಿದ್ದರೆ ಕೆಲಸ ಕೊಡಲ್ಲಾ ಎಂದು ನಮ್ಮಲ್ಲಿ ಹುಟ್ಟಿಕೊಂಡಿರುವ ಪರಿಸ್ಥಿತಿ ಆಕ್ರಮಣವಲ್ಲವೇ? ಹಿಂದೀ ಯಜಮಾನಿಕೆಯಲ್ಲವೇ?

ಒಕ್ಕೂಟದ ಬಗ್ಗೆ!


ಸ್ವಯಂನಿರ್ಣಯಾಧಿಕಾರದ ಘೋಷಣೆಯ ಈ ತಪ್ಪು ಅನ್ವಯವನ್ನು ಕಾಶ್ಮೀರಕ್ಕೆ ಮತ್ತು ಈಗ ಗೋವಾಕ್ಕೆ ವಿಸ್ತರಿಸಲಾಗಿದೆ. ಕಾಶ್ಮೀರಿಗಳೇ ತಮ್ಮ ಭವಿಷ್ಯವನ್ನು ತೀರ್ಮಾನಿಸಬೇಕು ಎಂದರೆ ದೇಶದ ಏಕತ್ವವನ್ನೂ ಭಾರತದ ಜನರ ಏಕತ್ವವನ್ನೂ ತಿರಸ್ಕರಿಸಿದಂತೆ.
ಆನಂತರ ಬಂತು ನಮ್ಮ ಸಂವಿಧಾನ. ಇದು ನಮ್ಮ ದೇಶವನ್ನು ಸ್ವಲ್ಪ ಹೆಚ್ಚು ಕಡಿಮೆ ಪ್ರತ್ಯೇಕವೇ ಆದ ಘಟಕಗಳಾಗಿ ಒಡೆದು ಪ್ರತಿಯೊಂದಕ್ಕೂ ಒಂದು ‘ರಾಜ್ಯ’ವನ್ನು ಕೊಟ್ಟು ಎಲ್ಲವನ್ನೂ ಒಂದು ‘ಒಕ್ಕೂಟ’ವಾಗಿ ‘ಸಂಯುಕ್ತ’ಗೊಳಿಸಿತು. ಪ್ರತಿಭಾಷೆಯ ಗುಂಪು ‘ಒಂದು ಜನಾಂಗ’ವಾಗಿ ತನ್ನದೇ ಪ್ರತ್ಯೇಕ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿ‘ಸಮೃದ್ಧವಾಗಿ ಸ್ವಯಮಾಧಿಕಾರ’ವನ್ನು ಪಡೆದ ‘’ರಾಜ್ಯಗಳ ಒಕ್ಕೂಟ’ದ ಗೀಳು ನಮ್ಮ ನಾಯಕರ ಮನಸ್ಸನ್ನೂ ವಿಚಾರಶಕ್ತಿಯನ್ನೂ ಆಕ್ರಮಿಸಿಬಿಟ್ಟಿತ್ತು.
ಇವು ನಿರಾಸೆಗೊಳಿಸುವ ಯೋಚನೆಗಳೇ. ಆದರೆ ನಾವು ನಿರಾಸೆಯಿಂದ ಕೈಕಾಲು ಸೋಲಬೇಕಾಗಿಲ್ಲ: ಏಕೆಂದರೆ ಇದಕ್ಕೆ ಒಂದು ಮದ್ದುಂಟು.
ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೇ ‘ಸ್ವಯಮಾಧಿಕಾರ’ವುಳ್ಳ ಅಥವಾ ಭಾಗಶಃ ಸ್ವಯಮಾಧಿಕಾರವುಳ್ಳ ‘ರಾಜ್ಯಗಳ’ ಅಸ್ತಿತ್ವವನ್ನೇ ಅಳಿಸಿಹಾಕಬೇಕು.

ಸಮಾಜಿಕ ಸಮಸ್ಯೆಯ ಸರಳೀಕರಣ!


ಮೀಸಲಾತಿ ವ್ಯವಸ್ಥೆಯ ಬಗ್ಗೆ ಗುರೂಜಿಯವವರ ಅನಿಸಿಕೆ:
ನಮ್ಮ ಜನರಲ್ಲಿ ವಿವಿಧ ವಿಭಾಗಗಳವರಿಗೆ ಹರಿಜನರು, ನಿಮ್ನ ಜಾತಿಯವರು, ನಿಮ್ನ ಬುಡಕಟ್ಟಿನವರು ಹೀಗೆಲ್ಲಾ ಹೆಸರುಗಳನ್ನು ಕೊಡಾಲಾಗುತ್ತಿದೆ. ಹಣದಾಸೆ ತೋರಿಸಿ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿರುವುದು.
ಇದನ್ನು ಓದಿದಾಗ ಆರೆಸ್ಸೆಸ್ ಮೀಸಲಾತಿ ಬಗ್ಗೆ ಎಂತಹ ನಿಲುವನ್ನು ಹೊಂದಿದೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆಯೆನ್ನಲಾದ, ಇಂದಿಗೂ ಬಹುಸಂಖ್ಯಾತರನ್ನು ತಾರತಮ್ಯಕ್ಕೀಡುಮಾಡುತ್ತಿರುವ ಸಮಾಜಿಕ ಅಸಮಾನತೆಯೇ ಇರಲಿಲ್ಲ ಎನ್ನುವಂತಹ ಅನಿಸಿಕೆಯನ್ನು ಗುರೂಜಿ ಮಾತುಗಳು ಧ್ವನಿಸುತ್ತಿರುವುದು ಸಂಘ ಇಡೀ ಸಮಾಜದ ಸಮಸ್ಯೆಗಳನ್ನು ಸರಳೀಕರಿಸುತ್ತಿರುವುದನ್ನು ತೋರುತ್ತದೆ. ಜಾತೀಯತೆ ತೊಲಗಬೇಕು ಅನ್ನುವ ನಿಲುವು ಸಂಘಕ್ಕಿದೆ ಎನ್ನಲಾಗುತ್ತದೆ, ಆದರೆ ಜಾತಿಯ ಕಾರಣದಿಂದಲೇ ತುಳಿತಕ್ಕೊಳಗಾದವರನ್ನು ಮೇಲೆತ್ತುವುದಕ್ಕೆ ಸಂಘವು ದೇವಸ್ಥಾನಕ್ಕೆ ಪ್ರವೇಶ, ಬಾವಿನೀರು ಬಳಸಲು ಅನುಮತಿಯಂತಹ ಮೇಲ್ಮೇಲಿನ ಪರಿಹಾರಗಳಿಗಿಂತಲೂ ಮಿಗಿಲಾದ ಪರಿಹಾರವನ್ನು ನೀಡಲಾರದಾಗಿದೆ.

ಸಂಘದ ಧರ್ಮದೃಷ್ಟಿ!

ಈ ನಾಡಿನಲ್ಲಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೋಭಾವವೇನು? ಅವರು ಈ ನಾಡಿನಲ್ಲಿ ಹುಟ್ಟಿದರು, ಸಂದೇಹವೇ ಇಲ್ಲ. ಆದರೆ ಈ ನೆಲದ ಉಪ್ಪಿಗೆ ನಿಷ್ಠೆಯಿಂದ ಇದ್ದಾರೆಯೇ ಅವರು!? ಅವರನ್ನು ಬೆಳೆಸಿದ ಈ ನಾಡಿಗೆ ಕೃತಜ್ಞರಾಗಿದ್ದಾರೆಯೇ? ಈ ನಾಡು ಮತ್ತು ಇಲ್ಲಿನ ಪರಂಪರೆಯ ಮಕ್ಕಳು ತಾವು ಮತ್ತು ಇದಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಮಹಾಭಾಗ್ಯ ಎಂದು ಅವರು ಭಾವಿಸಿದ್ದಾರೆಯೇ? ಖಂಡಿತಾ ಇಲ್ಲ! ಮತಾಂತರದೊಂದಿಗೇ ರಾಷ್ಟ್ರದಲ್ಲಿ ಅವರ ಪ್ರೇಮ ಮತ್ತು ನಿಷ್ಠೆಗಳು ಹೊರಟೇ ಹೋಗಿವೆ.
ಇದು ಇಲ್ಲಿಗೇ ಮುಗಿಯಲಿಲ್ಲ. ಈ ನಾಡಿನ ಶತ್ರುಗಳೊಂದಿಗೆ ಅವರು ಮಾನಸಿಕವಾಗಿ ಏಕತೆಯನ್ನು ಬೆಳೆಸಿಕೊಂಡಿದ್ದಾರೆ.
ಕೆಲವು ಸಮಾಜ ಬಂಧುಗಳು ನಮ್ಮ ಜೊತೆ ಬಿಟ್ಟು ಕಳೆದ ಕೆಲವು ಶತಮಾನಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಿದ್ದವರು ಈಗ ಮರಳಿ ನಮ್ಮ ಬಳಿಗೆ ಬಂದಲ್ಲಿ ಅವರಿಗೆ ನಮ್ಮ ಪ್ರೀತಿ ಗೌರವಗಳನ್ನು ತೋರಿಸದೆ, ಸಂತೋಷ ಪಡದೆ ಹೇಗಿದ್ದೇವು? ಇಲ್ಲಿ ಬಲಾತ್ಕಾರವೇನೂ ಇಲ್ಲ. ವಿಷಯವನ್ನು ಸರಿಯಾಗಿ ತಿಳಿದುಕೊಂಡು ಅವರು ಹಿಂದಕ್ಕೆ ಬರಲಿ. ಉಡುಪು, ಸಂಪ್ರದಾಯ, ವಿವಾಹ ಪದ್ಧತಿ, ಅಂತ್ಯಸಂಸ್ಕಾರ ಇಂತಹವುಗಳಲ್ಲೆಲ್ಲ ಅವರು ತಮ್ಮ ಪೂರ್ವಿಕರ ಹಿಂದುಜೀವನ ವಿಧಾನವನ್ನು ಸ್ವೀಕರಿಸಲಿ ಎಂಬುದಷ್ಟೇ ನಮ್ಮ ಕರೆ, ಪ್ರಾರ್ಥನೆ.
ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!

ಈ ನಾಡಿನ ಒಳಗಿನ ಅಪಾಯಗಳೆಂದು ಇವರು ಬಗೆದಿರುವುದು ಮೂರನ್ನು. ಮೊದಲನೆಯದು ಮುಸ್ಲಿಮರು, ಎರಡನೆಯದು ಕ್ರೈಸ್ತರು ಮತ್ತು ಮೂರನೆಯದು ಕಮ್ಯುನಿಸ್ಟರು! ಹೀಗೆಂಬ ಮೂರು ಬೇರೆಬೇರೆ ಅಧ್ಯಾಯಗಳೇ ಈ ಪುಸ್ತಕದಲ್ಲಿದೆ. ಇದೇ ಇಂದಿಗೂ ಸಂಘದ ನಿಲುವಾಗಿದೆಯೇ?

ಆರೆಸ್ಸೆಸ್ ಮತ್ತು ಕರ್ನಾಟಕ 

ಇಂತಹ ನಿಲುವುಗಳ ಸಂಘವು ಕರ್ನಾಟಕದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಷ್ಟೂ ಕನ್ನಡ ಕನ್ನಡಿಗ ಕರ್ನಾಟಕಗಳ ಅಸ್ತಿತ್ವಕ್ಕೇ ಎರವಾದೀತು. ಏಕೆಂದರೆ ನಾಡಿನ ಆಡಳಿತದಲ್ಲಿ ಭಾಷೆಯಾಗಿ ಕನ್ನಡಕ್ಕಿಂತಾ ಹಿಂದೀಗೆ ಪ್ರಾಮುಖ್ಯತೆ. ನಾಡಾಗಿ ಒಗ್ಗೂಡಿದ ಕರ್ನಾಟಕಕ್ಕಿಂತಾ ಕನ್ನಡನಾಡನ್ನು ಪುಟ್ಟ ಪುಟ್ಟ ರಾಜ್ಯಗಳಾಗಿ ಒಡೆಯುವುದಕ್ಕೇ ಪ್ರಾಮುಖ್ಯತೆ ಮತ್ತು ಕನ್ನಡಿಗನಿಗಿಂತಾ ಕನ್ನಡಿಗರ ನಿಷ್ಠೆಯನ್ನೆಲ್ಲಾ ಧರ್ಮದ ಹೆಸರಲ್ಲಿ ಪುಟಕ್ಕಿಟ್ಟು ನೋಡುವುದಕ್ಕೆ ಪ್ರಾಮುಖ್ಯತೆ. ಕನ್ನಡಿಗ ಮುಸಲ್ಮಾನ, ಕನ್ನಡಿಗ ಕ್ರೈಸ್ತನಿಗಿಂತಾ ನಮಗೆ ಸಂಬಂಧವೇ ಇರದ ಹೊರನಾಡಿನ ಹಿಂದುವಿಗೆ ಪ್ರಾಮುಖ್ಯತೆ!

ಸಂಘ ರಾಜಕೀಯಕ್ಕಿಳಿಯಲಿ!

ಇದೇ ಸಂಘದವರಿಗೆ ಬಿಜೆಪಿಯೆನ್ನುವ ಇನ್ನೊಂದು ಮುಖವಿದೆ. ಬಿಜೆಪಿಯೂ ಆರೆಸ್ಸೆಸ್ಸೂ ಒಂದೇ ಎನ್ನುವುದಕ್ಕೆ ಗಣವೇಶ ಧರಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಫೋಟೋಗಳಿರುವುದೇ ಸಾಕು! ಈ ಮುಖವಾಡ ಧರಿಸಿದ ಪಕ್ಷದ ಸಿದ್ಧಾಂತ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತಾಡುತ್ತದೆ, ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತಾಡುತ್ತದೆ. ಮೀಸಲಾತಿಯ ಪರವಾಗಿ ಮಾತಾಡುತ್ತದೆ, ಚುನಾವಣೆ ಹತ್ತಿರ ಬಂದಾಗ, ಮುಸ್ಲಿಂರ ಮತಕ್ಕಾಗಿ ‘ಗೆದ್ದ ಮೇಲೆ ಮುಸ್ಲಿಂವೊಬ್ಬರನ್ನು ಮಂತ್ರಿ ಮಾಡುತ್ತೇನೆ’ ಎನ್ನುತ್ತಾ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತದೆ... ಸಂಘವೇನೂ ಕಮ್ಮಿಯಿಲ್ಲ, ಬಿಜೆಪಿ ನಾಯಕರುಗಳಿಗೆ ಶಿಸ್ತಿನ ಪಾಠ ಹೇಳುತ್ತೆ, ಕೇಶವಶಿಲ್ಪಕ್ಕೆ ಕರೆಸಿ ಬುದ್ಧಿ ಹೇಳುತ್ತೆ. ತೆಪ್ಪಗಿರಲು ಆಜ್ಞೆ ಮಾಡುತ್ತದೆ...ವಿಪರ್ಯಾಸವೆಂದರೆ ಹೀಗೆ ಕೈಗೊಂಬೆಯಂತೆ ಆಡಾಡಿಸುತ್ತಲೇ ‘ಸೋನಿಯಾ ಗಾಂಧಿಯ ಕೈಗೊಂಬೆ ಕಾಂಗ್ರೆಸ್’ ಎನ್ನುವ ಆರೋಪವನ್ನೂ ಮಾಡುತ್ತದೆ. ಸಂಘ ಹೀಗೆ ಬಿಜೆಪಿಯ ಮೂಲಕ ತನ್ನ ಸಿದ್ಧಾಂತಗಳಿಗೆ ವಿರುದ್ಧವಾದುದನ್ನು ಹೇಳಿಸಿ, ಸೀಟು ಗೆಲ್ಲಿಸಿ, ಸರ್ಕಾರ ಮಾಡಿಸಿ, ಆಮೇಲೆ ತಮ್ಮ ಸಿದ್ಧಾಂತದ ಜಾರಿ ಮಾಡುವ ಮೋಸಗಾರಿಕೆಗಿಂತಾ ನೇರವಾಗಿ ತಾನೇ, ತನ್ನ ಸಿದ್ಧಾಂತಗಳನ್ನು ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ರಾಜಕಾರಣಕ್ಕೆ ಇಳಿಯುವುದು ಪ್ರಾಮಾಣಿಕತೆಯೆನ್ನಿಸುತ್ತದೆ!

170 ಅನಿಸಿಕೆಗಳು:

Anonymous ಅಂತಾರೆ...

correct

Vikas ಅಂತಾರೆ...

the one who see RSS only in media,can write this type of article....grow up dude

ಆನಂದ್ ಅಂತಾರೆ...

ವಿಕಾಸ್ ಅವರೇ,

ಈ ಲೇಖನವನ್ನು ಯಾವುದೇ ಮಾಧ್ಯಮದ ಸುದ್ದಿಯ ಆಧಾರದ ಮೇಲೆ ಬರೆದಿಲ್ಲಾ. ಆರೆಸ್ಸಿಸ್ಸಿನ ಎರಡನೇ ಸರಸಂಘಚಾಲಕರಾಗಿದ್ದ ಶ್ರೀ ಮಾಧವ ಸದಾಶಿವ ಗೋಲವಾಲ್ಕರ್ (ಶ್ರೀ ಗುರೂಜಿ) ಅವರ ಚಿಂತನ ಗಂಗಾ ಎನ್ನುವ ಹೊತ್ತಗೆಯಲ್ಲಿ ಬರೆದಿರುವುದನ್ನು ಆರಿಸಿ ಬರೆದಿರುವುದು. ಒಮ್ಮೆ ಓದಿ ನೋಡಿ.

ಆನಂದ್

CHETAN ಅಂತಾರೆ...

ಏನ್ ಗುರು... "ರಾಜಕೀಯ ಮಾಡ್ತಿದ್ದೀರ" ?
ದಿನೇಶ್ ಅಮಿನ್ ಮೆಟ್ಟು ಹಾಗೆ ನೀವೂ Negative Publicity ಗಿಟ್ಟಿಸಿಕೊಳ್ಳೊಕ್ಕೆ ಶುರು ಮಾಡಿದ್ದೀರಾ.
ಯಾವುದೊ ಒಂದು ಪಾಕ್ಷ ಅಥವಾ ಸಂಘಟನೆಯನ್ನ ಟೀಕಿಸೊ ಮೊದಲು ಕನ್ನಡಕ್ಕಾಗಿ ನೀವು ಏನು ಮಾಡುತ್ತಿದ್ದೀರಾ ಅಂತ ಮೊದಲು ಒಂದು ಲೇಖನ ಬರೆದು ತಿಳಿಸಿ. RSS ನಿಮ್ಮ ಹಾಗೆ ದುಡ್ಡಿಗೊಸ್ಕರಾ ಪುಸ್ತಕ ಮಾರುತ್ತಿಲ್ಲಾ,,, ಕನ್ನಡದ ಬಗ್ಗೆ ಅಷ್ಟು ಕಾಳಜಿಯಿರೊ ನೀವು ನಿಮ್ಮ ಪುಸ್ತಕಗಳನ್ನ ಬಿಟ್ಟಿಯಾಗಿ ಜನರಿಗೆ ಹಂಚೀ. RSS-ನವರ ವನವಾಸೀ ಕಳ್ಯಾಣ ಮತ್ತು ಏಕಲ್ ವಿಧ್ಯಾಲಯದ ಬಗ್ಗೆ ಒಮ್ಮೆ ತಿಳಿದು ಕೊಳ್ಳಿ. ಹಿಂದೆ ಯಾವುದೇ ಸರ್ಕಾರ ಮಾಡದ ಕೆಲಸವನ್ನು ಬಡ ಹಾಗು ಆದಿವಾಸಿ ಮಕ್ಕಳಿಗೆ ಸಂಪೂರ್ಣವಾಗಿ ಕನ್ನಡದಲ್ಲೇ ವಿದ್ಯಾಭ್ಯಾಸ ನೀಡುತ್ತಿದ್ದಾರೇ. ಕುಡುಕರು,,, ಮೇಲು ಜಾತಿ - ಕೆಳ ಜಾತಿ ಅಂತ ಹೇಳಿಕೊಳ್ಳೊ ಡೋಂಗಿ ಪ್ರಗತಿಪರರ ಬೆಂಬಲ ಗಿಟ್ಟಿಸಿಕೊಳ್ಳೊಕ್ಕೆ ಈ ರೀತಿ ದೇಶ ಒಡೆಯೊ ಕೆಲಸ ಮಾಡಬೇಡಿ. ಹಾಗೆ "ಬನವಾಸಿ ಬಳಗ" ಅಂತ ಹೆಸರಿಟ್ಟುಕೊಳ್ಳೊ ಬದಲು ಕನ್ನಡ ಬಳಗಾ ಅಂತ ಹೆಸರು ಬದಲಾಯಿಸಿಕೊಳ್ಳೀ.

"Anonymous" ಲೇಖಕರಾಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಲೇಖಕರ ಗೌರವ ಉಳಿಸಿ!

|| ಜೈ ಹಿಂದ್ ||
|| ಜೈ ಕರ್ನಾಟಕ ಮಾತೆ ||

CHETAN ಅಂತಾರೆ...

ಏನ್ ಗುರು... "ರಾಜಕೀಯ ಮಾಡ್ತಿದ್ದೀರ" ?
ನಿಮ್ಮ ಬ್ಲಾಗ್ ಬಗ್ಗೆ ಅಪಾರ ಗೌರವ ಇತ್ತೂ... ಆದರೆ...
ದಿನೇಶ್ ಅಮಿನ್ ಮೆಟ್ಟು ಹಾಗೆ ನೀವೂ Negative Publicity ಗಿಟ್ಟಿಸಿಕೊಳ್ಳೊಕ್ಕೆ ಶುರು ಮಾಡಿದ್ದೀರಾ.
ಯಾವುದೊ ಒಂದು ಪಾಕ್ಷ ಅಥವಾ ಸಂಘಟನೆಯನ್ನ ಟೀಕಿಸೊ ಮೊದಲು ಕನ್ನಡಕ್ಕಾಗಿ ನೀವು ಏನು ಮಾಡುತ್ತಿದ್ದೀರಾ ಅಂತ ಮೊದಲು ಒಂದು ಲೇಖನ ಬರೆದು ತಿಳಿಸಿ. RSS ನಿಮ್ಮ ಹಾಗೆ ದುಡ್ಡಿಗೊಸ್ಕರಾ ಪುಸ್ತಕ ಮಾರುತ್ತಿಲ್ಲಾ,,, ಕನ್ನಡದ ಬಗ್ಗೆ ಅಷ್ಟು ಕಾಳಜಿಯಿರೊ ನೀವು ನಿಮ್ಮ ಪುಸ್ತಕಗಳನ್ನ ಬಿಟ್ಟಿಯಾಗಿ ಜನರಿಗೆ ಹಂಚೀ. RSS-ನವರ ವನವಾಸೀ ಕಳ್ಯಾಣ ಮತ್ತು ಏಕಲ್ ವಿಧ್ಯಾಲಯದ ಬಗ್ಗೆ ಒಮ್ಮೆ ತಿಳಿದು ಕೊಳ್ಳಿ. ಹಿಂದೆ ಯಾವುದೇ ಸರ್ಕಾರ ಮಾಡದ ಕೆಲಸವನ್ನು ಬಡ ಹಾಗು ಆದಿವಾಸಿ ಮಕ್ಕಳಿಗೆ ಸಂಪೂರ್ಣವಾಗಿ ಕನ್ನಡದಲ್ಲೇ ವಿದ್ಯಾಭ್ಯಾಸ ನೀಡುತ್ತಿದ್ದಾರೇ. ಕುಡುಕರು,,, ಮೇಲು ಜಾತಿ - ಕೆಳ ಜಾತಿ ಅಂತ ಹೇಳಿಕೊಳ್ಳೊ ಡೋಂಗಿ ಪ್ರಗತಿಪರರ ಬೆಂಬಲ ಗಿಟ್ಟಿಸಿಕೊಳ್ಳೊಕ್ಕೆ ಈ ರೀತಿ ದೇಶ ಒಡೆಯೊ ಕೆಲಸ ಮಾಡಬೇಡಿ. ಹಾಗೆ "ಬನವಾಸಿ ಬಳಗ" ಅಂತ ಹೆಸರಿಟ್ಟುಕೊಳ್ಳೊ ಬದಲು ಕನ್ನಡ ಬಳಗಾ ಅಂತ ಹೆಸರು ಬದಲಾಯಿಸಿಕೊಳ್ಳೀ.

(ನಮ್ಮ ಪ್ರತಿಕ್ರಿಯ ಪ್ರಕಟ ಮಾಡದಿದ್ದಲ್ಲಿ: ನಿಮಗೆ ಹೇಗೆ ನಮ್ಮ ಅನಿಸಿಕೆ ಬೇಡವೊ ನಿಮ್ಮ ಈ ಲೇಖನದ ಅವಶ್ಯಕಥೆಯಾದರೂ ಏನಿದೆ ಹೇಳಿ...)

"Anonymous" ಲೇಖಕರಾಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಲೇಖಕರ ಗೌರವ ಉಳಿಸಿ!


|| ಜೈ ಹಿಂದ್ ||
|| ಜೈ ಕರ್ನಾಟಕ ಮಾತೆ ||

KRISHNA ಅಂತಾರೆ...

ಏನ್ ಗುರು... POLITICS ಮಾಡ್ತಿದ್ದೀರಾ?
RSS ಬಗ್ಗೆ ಯಾರೊ ಬರೆದ ಲೇಖನವನ್ನ ಓದಿ ಬರೆಯೊಬದಲು ಮೊದಲು RSS ಬಗ್ಗೆ ಸರಿಯಾಗಿ ತಿಳಿದುಕೊಂಡು ಆಮೇಲೆ ಬರೆಯಿರಿ.

ಪ್ರದ್ಯುಮ್ನ ಬೆಳವಾಡಿ ಅಂತಾರೆ...

ಈ ಲೇಖನವು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ರಾಷ್ಟ್ರಪ್ರೇಮಿ ಸಂಘಟನೆಯೆಂದು ಬಲ್ಲ ಎಲ್ಲ ಸಜ್ಜನರಿಗೂ ಹಾಸ್ಯಾಸ್ಪದವೆಂದು ಅನಿಸುವುದರಲ್ಲಿ ಸಂದೇಹವಿಲ್ಲ. ಈ ಲೇಖನವನ್ನು ಬರೆದವರಾರೋ ತಿಳಿಯುತ್ತಿಲ್ಲವಾದರೂ, ಇದು ಬಹುಶಃ ದೇಶ, ಸಂಘ ಮತ್ತು ಹಿಂದೂ ಧರ್ಮದ ಬಗ್ಗೆ ಅಂಧತೆಯನ್ನು ಬೆಳೆಸಿಕೊಂಡ ಕೆಂಪು ಬಣ್ಣದ ಭೂತ ಇರಬಹುದೆಂದು ನನ್ನ ಅನಿಸಿಕೆ.

೧. ಭಾಷೆ

ಲೇಖಕರೇ ತಿಳಿಸಿರುವಂತೆ ಸಂಘವು ಆಂಗ್ಲ ಭಾಷೆಯನ್ನು ದೇಶದ ಸಂಪರ್ಕ ಭಾಷೆಯೆಂದು ಹೇರಿರುವುದನ್ನು ವಿರೋಧಿಸುತ್ತದೆ ಮತ್ತು ಆ ಜಾಗವನ್ನು ಸಂಸ್ಕೃತ ಭಾಷೆ ತುಂಬಬೇಕು ಎಂದು ಆಗ್ರಹ ಪಡಿಸುತ್ತದೆ. ಸಂಸ್ಕೃತ ಭಾಷೆಯನ್ನು ಮೊಗಲರು ಮತ್ತು ಅದಕ್ಕಿಂತಲೂ ಮಿಗಿಲಾಗಿ ಆಂಗ್ಲರು ಹೇಗೆ ದಮನ ಮಾಡಿ ನಮ್ಮ ದೇಶದ ಜನಸಾಮಾನ್ಯರಿಂದ ದೂರ ಮಾಡಿದರೆಂದು ನಮಗೆ ತಿಳಿದೇ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಸಂಸ್ಕೃತ ಭಾಷೆಯು ಸಂಪರ್ಕ ಭಾಷೆಯ ಸ್ಥಾನವನ್ನು ತುಂಬಲು ತಕ್ಕ ವಾತಾವರಣ ಇಲ್ಲದಿರುವುದು ನಮಗೆ ವೇದ್ಯ. ದೇಶದ ಬೇರೆಲ್ಲಾ ಭಾಷೆಗಳಿಗೆ ಹೋಲಿಸಿದರೆ ಹಿಂದಿ ಭಾಷೆಯು ಸಂಪರ್ಕ ಭಾಷೆಯಾಗಲು ತಕ್ಕುದಾದುದು ಎಂಬುದು (ನಮಗೆ ಇಷ್ಟವಿಲ್ಲದಿದ್ದರೂ) ಒಪ್ಪಬೇಕಾಗುತ್ತದೆ.

ಇಲ್ಲಿ ಲೇಖಕರು ವಿನಾಕಾರಣ ಉಪೇಕ್ಷಿಸುತ್ತಿದ್ದಾರೋ ಅಥವಾ ಓದುಗರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೋ ತಿಳಿಯದಾಗಿದೆ. ಏಕೆಂದರೆ, ಸಂಘವು ಹಿಂದಿಯನ್ನು (ಅಥವಾ ಸಂದರ್ಭಾನುಕೂಲಿತವಾದಾಗ, ಸಂಸ್ಕೃತವನ್ನು) ಕೇವಲ ಸಂಪರ್ಕ ಭಾಷೆಯನ್ನಾಗಿ ಜಾರಿಗೆ ತರಲು ಬಯಸುತ್ತದೆಯೇ ವಿನಃ ಸ್ಥಳೀಯ ಭಾಷೆಗಳನ್ನು ಅಥವಾ ಆಡುಭಾಷೆಯನ್ನು ನಿರ್ಮೂಲನಗೊಳಿಸಬೇಕೆಂದು ಎಲ್ಲಿಯೂ ಹೇಳಿಲ್ಲ. ಲೇಖಕರಿಗೆ ಆಂಗ್ಲ ಭಾಷೆಯ ದಾಸ್ಯವು ನಮ್ಮದೇ ಭಾಷೆಯಾದ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕಿಂತ ಪ್ರಿಯವೆಂದು ತೋರುತ್ತದೆ.

ಈ ಲೇಖನದಿಂದ ಇನ್ನೊಂದು ಅಂಶ ತಿಳಿಯುವುದೇನೆಂದರೆ, ಲೇಖಕರು ಒಮ್ಮೆಯೂ ಕೂಡ ಸಂಘದ ಶಾಖೆಗಾಗಲೀ, ಉತ್ಸವಕ್ಕಾಗಲೀ ಅಥವಾ ಕಾರ್ಯಕ್ರಮಕ್ಕಾಗಲೀ ಹೋಗಿಲ್ಲವೆಂಬುದು. ಅಥವಾ ಹೋಗಿಯೂ ಕೂಡ ಈ ರೀತಿ ಬರೆದಿದ್ದಾರೆಂದರೆ, ಅದು ಕೇವಲ ದುರಾಗ್ರಹ ಪೀಡಿತವೆಂದೇ ಹೇಳಬಹುದು. ಸಂಘದ ಯಾವುದೇ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟ ಯಾರಿಗೇ ಆಗಲಿ ಸ್ಪಷ್ಟವಾಗಿ ಅರಿವಾಗುವುದು ಅಲ್ಲಿಯ ವಾತಾವರಣದಲ್ಲಿರುವ ಸ್ಥಳೀಯತೆಯನ್ನು. ಅಲ್ಲಿ ಪ್ರತಿಯೊಂದೂ ಸ್ಥಳೀಯ ಭಾಷೆಯಲ್ಲಿ ಮತ್ತು ಸ್ಥಳೀಯ ಸಂಪ್ರದಾಯದಲ್ಲಿ ಇರುವುದು ತಟ್ಟನೆ ತಿಳಿಯುತ್ತದೆ. ಶಾಖೆಯಲ್ಲಿ ಕೇಳಿಬರುವ ಎಲ್ಲ ಆಜ್ಞೆಗಳು ಸಂಸ್ಕೃತದಲ್ಲಿ ಇರುತ್ತದೆ ಮತ್ತು ಅಂಕತಾಳಗಳು ಹಿಂದಿಯಲ್ಲಿ ಇರುತ್ತದೆ. ಅದಕ್ಕೆ ಕಾರಣ ಒಂದು ರಾಷ್ಟ್ರೀಯತೆಯಾದರೆ ಇನ್ನೊಂದು ಸಂಘದ ಸ್ವಯಂಸೇವಕರು ದೇಶದ (ಆಷ್ಟೇಕೆ ಪ್ರಪಂಚದ) ಯಾವುದೇ ಶಾಖೆಗೆ ಹೋದರೂ ಅಲ್ಲಿಯ ಶಾಖೆಯಲ್ಲಿ ಪಾಲ್ಗೊಳ್ಳಬಹುದು ಎಂದು. ಅದರೆ ಎಲ್ಲ ಮಾತುಗಳೂ, ಸಂವಾದಗಳೂ, ವ್ಯವಹಾರಗಳೂ ಕನ್ನಡದಲ್ಲೇ ಇರುತ್ತದೆ ಎಂದು ಒಮ್ಮೆ ಶಾಖೆಗೆ ಹೋದರೂ ವಿದಿತವಾಗುತ್ತದೆ. ಮತ್ತೆ ಇನ್ನೊಂದು ಹೃದಯ ತುಂಬಿ ಬರುವ ಅಂಶವೆಂದರೆ, ಕರ್ನಾಟಕಕ್ಕೆ ನೇಮಕವಾಗಿ ಬಂದ ಮೇಲೆ ಪ್ರತಿಯೊಬ್ಬ ಅಧಿಕಾರಿಯೂ ಸುಲಲಿತವಾಗಿ ಕನ್ನಡ ಭಾಷೆಯಲ್ಲಿ ಮಾತನಾಡುವುದು ಮಾತ್ರವಲ್ಲದೆ, ಓದುವುದು ಮತ್ತು ಬರೆಯುವುದನ್ನು ಕೂಡಾ ಕಲಿತಿರುತ್ತಾನೆಂಬುದು.

ಲೇಖಕರು ಇತಿಹಾಸದ ಕೆಂಪು ಆವೃತ್ತಿಯನ್ನು ತುಂಬಾ ಓದಿದ್ದಾರೆಂದು ಅನಿಸುತ್ತದೆ. ಇತಿಹಾಸದ ಕಪ್ಪು ಬೆಳಕು ಆವೃತ್ತಿಯನ್ನು ಒಮ್ಮೆ ಓದಿದರೆ ತಿಳಿಯುವುದೇನೆಂದರೆ, ಲಾರ್ಡ್ ಮೆಕಾಲೆಯಂತಹ ಆಂಗ್ಲರು ಭಾರತದಿಂದ ಸಂಸ್ಕೃತದ ನಿರ್ಮೂಲನವನ್ನು ತಮ್ಮ ಸಾಮ್ರಾಜ್ಯ ಧೃಡಿಕರಣದ ಮುಖ್ಯ ನೀತಿಯನ್ನಾಗಿಸಿ ಯಶಸ್ವಿಯಾದದ್ದು. ಸಂಸ್ಕೃತವು ದೇಶವನ್ನು ಒಗ್ಗೂಡಿಸುತ್ತಲೇ ಎಂದೂ ಸ್ಥಳೀಯ ಭಾಷೆಯ ಪ್ರತಿಸ್ಪರ್ಧಿಯಾಗದೇ ಉಳಿದು ಬಂದಿದೆ. ಕಳೆದ ೨೦೦೦ ವರ್ಷದ ಕನ್ನಡ ಭಾಷೆಯ ಇತಿಹಾಸದ ಸಮಯದಲ್ಲಿ, ಸಂಸ್ಕೃತವು ದೇಶದಲ್ಲಿ ಪ್ರತಿಯೊಂದು ಹಂತದಲ್ಲಿ ಉಪಯೋಗಿಸಲ್ಪಡುತ್ತಿದ್ದರೂ, ಕನ್ನಡ ಭಾಷೆಯ ಸಾವಿರಾರು ಕೃತಿಗಳ ರಚನೆಯಾಗಿದೆ. ಕನ್ನಡ ಭಾಷೆಗೆ ಬಂದಿರುವ ಕುತ್ತು ನಮ್ಮ ಸಮಾಜವು ಆಂಗ್ಲ ಭಾಷೆಯ ಗುಲಾಮರಾದ ನಂತರವೇ ಹೊರತು ಸಂಸ್ಕೃತದ ಉಚ್ಛ್ರಾಯದ ಸ್ಥಿತಿಯಲ್ಲಿದ್ದಾಗ ಅಲ್ಲ.

೨. ಒಕ್ಕೂಟ

ಭಾರತದ ಇತಿಹಾಸದಲ್ಲಿ ಯಾವುದೇ ರಾಜ್ಯವು ಭಾಷೆಯ ಆಧಾರದಲ್ಲಿ ಅಸ್ತಿತ್ತ್ವಕ್ಕೆ ಬಂದ ಉದಾಹರಣೆಗಳಿಲ್ಲ. ಅಥವಾ ಭಾಷೆಯ ವೈಮನಸ್ಸಿನ್ನಿಂದ ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ದಾಳಿಯಿಟ್ಟ ನಿದರ್ಶನಗಳಿಲ್ಲ. ವಿವಿಧ ಭಾಷೆಗಳು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಇದ್ದವಲ್ಲ? ಆದರೂ ಏಕೆ ಭಾಷಾ ವಿವಾದ ಒಮ್ಮೆಯೂ ನಮಗೆ ಇತಿಹಾಸದಲ್ಲಿ ಕಾಣಬರುವುದಿಲ್ಲ?

ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದ ನಂತರ ಭಾರತ ದೇಶವನ್ನು ಭಾಷಾ ಆಧಾರದಲ್ಲಲ್ಲದೆ ಭೌಗೋಳಿಕವಾಗಿಯೋ ಅಥವಾ ಇನ್ನಾವುದೋ ಆಧಾರದಲ್ಲಿ ವಿಂಗಡಿಸಿದ್ದರೆ, ಈಗಿನ ಭಾಷಾ ವೈಮನಸ್ಯಕ್ಕೆ ಎಡೆಯಾಗುತ್ತಿರಲ್ಲಿಲ್ಲವೆಂದು ಅನಿಸುತ್ತದೆ.

ಇಷ್ಟಕ್ಕೂ ಸಂಘದ ದೃಷ್ಟಿಯಲ್ಲಿ ಆಖಂಡ ರಾಷ್ಟ್ರದ ಕಲ್ಪನೆಯೆಂದರೆ ಜಾತಿ, ಮತ, ವರ್ಗ, ಪ್ರಾಂತ ಇತ್ಯಾದಿಗಳ ಭೇದವಿಲ್ಲದ ಒಂದು ವ್ಯವಸ್ಥೆ. ಅಂಥ ಒಂದು ವ್ಯವಸ್ಥೆಯಲ್ಲಿ ಪ್ರತಿಯೊಂದು ಭಾಷೆಗೂ ಉಳಿಯುವ, ಬೆಳೆಯುವ ಅವಕಾಶ ಇರುತ್ತದೆ. ಅದರ ಬದಲು ಕರ್ನಾಟಕ, ಆಂಧ್ರ ಇತ್ಯಾದಿ ಭಾಷಾವಾರು ಪ್ರಾಂತಗಳ ವಿಂಗಡನೆ ರಾಷ್ಟ್ರದ ಜನರನ್ನು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ದೂರ ಮಾಡಿವೆ ಎಂಬುದು ಸ್ಪಷ್ಟ.

ನಮ್ಮ ವ್ಯವಸ್ಥೆಯಲ್ಲಿರುವ ಈ ಕೊರತೆಯೇ ಕಾಶ್ಮೀರ, ತಮಿಳುನಾಡು, ಪಂಜಾಬ, ಆಸ್ಸಾಂನಂತಹ ರಾಜ್ಯಗಳಲ್ಲಿ ದೇಶವನ್ನು ವಿಚ್ಛಿದ್ರಗೊಳಿಸುವ ಶಕ್ತಿಗಳು ಸಕ್ರಿಯವಾಗಲು ಕಾರಣ. ಭಾಷಾವಾರು ವಿಂಗಡನೆಯ ಇನ್ನೊಂದು ಫಲವೇ ನಮ್ಮ ದೇಶದ ಪ್ರಾದೇಶಿಕ ಅಸಮಾನತೆ. ಭಾಷೆಯು ಸಾಂಸ್ಕೃತಿಕ ಉನ್ನತಿಯ ಮತ್ತು ರಾಷ್ಟ್ರ ಭಾವೈಕ್ಯತೆಯ ಸಾಧನವಾಗುವ ಬದಲು ರಾಜಕೀಯ ವೈಷಮ್ಯತೆಯ ಆಧಾರವಾಗಿದೆ. ರಾಷ್ಟ್ರದ ಪ್ರತಿಯೊಂದು ಭಾಗವೂ ರೈಲಿನ ಚಕ್ರದಂತೆ. ಸ್ವಯಮಾಧಿಕಾರವೆಂಬ ಸಿದ್ಧಾಂತವು ಈ ರೈಲು ಹಳಿತಪ್ಪುವುದಕ್ಕೆ ಕಾರಣ ಎಂಬ ಚಿಕ್ಕ ಯೋಚನೆಯೂ ನಮಗೆ ತಿಳಿಯಲಿಲ್ಲವೆಂದರೆ ಆಶ್ಚರ್ಯವೇ ಸರಿ!

ಪ್ರದ್ಯುಮ್ನ ಬೆಳವಾಡಿ ಅಂತಾರೆ...

(ಮುಂದುವರೆದು...)

೩. ಮೀಸಲಾತಿ

ಮೀಸಲಾತಿಯೆಂಬುದು ಒಂದು ವರ್ಗದ ಉನ್ನತಿಗೋಸ್ಕರ ಎಂಬ ವಿಚಾರ ಪ್ರಾರಂಭದಲ್ಲಿ ಉಚಿತವೆನಿಸಿದರೂ, ೬೫ ವರ್ಷಗಳ ಅನುಭವ ಬೇರೆಯೇ ಕಥೆಯನ್ನು ಹೇಳುತ್ತದೆ. ಯಾವ ವರ್ಗವನ್ನು ಮೇಲೆತ್ತುವ ಮಾರ್ಗವೆಂದು ನಾವೆಲ್ಲಾ ತಿಳಿದಿದ್ದೆವೋ ಅದು ಕೇವಲ ಮತ ಗಳಿಕೆಯ ಸಾಧನವಾಗಿರುವುದನ್ನು ವಿವರಿಸಬೇಕಿಲ್ಲವಷ್ಟೇ? ಕೊನೆಗೆ, ಯಾವ ಮೀಸಲಾತಿಯನ್ನು ಜಾರಿಗೊಳಿಸಿ ವರ್ಗಭೇದವನ್ನು ಸಮಾಜದಿಂದ ಕಿತ್ತೊಗೆಯುವ ಸಂಕಲ್ಪ ಮಾಡಿದ್ದೆವೋ, ಅದೇ ಮೀಸಲಾತಿಯು ಇನ್ನಷ್ಟು ಭೇದಗಳಿಗೆ ಕಾರಣವಾಗಿರುವುದು ದುರದೃಷ್ಟವಲ್ಲದೆ ಮತ್ತೇನು? ಜಾತಿಭೇದವಿಲ್ಲದ ಸಮಾಜ ಮಾಡಹೊರಟವರು ಮೀಸಲಾತಿಯನ್ನು ಬಿಟ್ಟು ಮುಂದೆ ಯೋಚನೆ ಮಾಡಲಾರದೇ ಹೋದರಲ್ಲ?

(ಬರುವ ಉತ್ತರಪ್ರದೇಶದ ಚುನಾವಣೆಯಲ್ಲಿ ಮತ ಪಡೆಯಲು ಸಮಾಜವಾದಿಗಳು, ರಾಷ್ಟ್ರೋದ್ಧಾರಕರು ಎನಿಸಿಕೊಂಡವರು ನಾಮುಂದು, ತಾಮುಂದು ಎಂದು ಅಲ್ಪಸಂಖ್ಯಾತರ ಮನವೊಲಿಸಲು ಇದೇ ಮೀಸಲಾತಿಯ ಮೊರೆ ಹೋಗುತ್ತಿರುವುದು ನಮ್ಮ ಲೇಖಕರ ಗಮನಕ್ಕೆ ಬಂದಿದೆಯಷ್ಟೆ. ದೇಶದ ಪ್ರತಿಯೊಬ್ಬ ತಿಳುವಳಿಕೆಯುಳ್ಳವರೂ ಇದನ್ನು ಕೇಳಿ ಅಸಹ್ಯಿಸುತ್ತಿದ್ದಾರಲ್ಲಾ?)

ಇನ್ನು ಸಂಘದ ಮೇಲೆ ಇನ್ನೊಂದು ಅಪವಾದವನ್ನು ಲೇಖಕರು ಬಹಳ ನೇರವಾಗಿ ಮತ್ತು ಯಾವುದೇ ವಿವರಗಳಿಲ್ಲದೆ ಮಾಡಿದ್ದಾರೆ. ಅದೆಂದರೆ, ಸಂಘವು ತುಳಿತಕ್ಕೊಳಗಾದವರಿಗೆ ಕೇವಲ ’ಮೇಲ್ಮೇಲಿನ’ ಪರಿಹಾರವನ್ನು ನೀಡಿದೆ ಎಂದು. ಕನ್ನಡ ಭಾಷೆ ಮತ್ತದರ ಉನ್ನತಿಗಾಗಿ ಶ್ರಮಿಸುವ ಈ ಬ್ಲಾಗ್‍ನಲ್ಲಿ ಈ ವಿಚಾರ ಬಂದಿದೆಯೆಂದರೆ, ಖಂಡಿತವಾಗಿಯೂ ಇದು ಕೇವಲ ಭಾಷಾಪ್ರೇಮದ ತಲೆಯಿಂದ ಬಂದದ್ದಲ್ಲವೆಂದು ನಾನು ಖಂಡತುಂಡವಾಗಿ ಹೇಳಬಲ್ಲೆ. ಇದು ಬಹುಶಃ ಚೀನಾ ಕಡೆ ತಲೆಹಾಕಿ ಮಲಗುವ ’ಜಾತಿ’ಯದ್ದು ಎಂದೇ ನನ್ನ ಗುಮಾನಿ.

ಲಕ್ಷಾಂತರ ಮಂದಿ ವನವಾಸಿಗಳ ಜೀವನ ಸುಧಾರಣೆಯ ಕೆಲಸಗಳು ಲೇಖಕರಿಗೆ ಕಾಣಿಸಲಿಲ್ಲವೋ? ಬೆಂಗಳೂರಿನ ನೂರಾರು ಕೊಳಚೆ ಪ್ರದೇಶದಲ್ಲಿ (ಸಂಘದವರು ಅದನ್ನು ಸೇವಾವಸತಿ ಎನ್ನುತ್ತಾರೆ!) ನಿತ್ಯ ನಡೆಯುವ ಮನೆಪಾಠದ ತರಗತಿಗಳು ಹಾಗಾದರೆ ಏನು ಮಾಡುತ್ತಿವೆ? ಜೀತಪದ್ಧತಿಯನ್ನು ಗುರುತಿಸಿ, ಜೀತದಾಳುಗಳ ಪುನರ್ವಸತಿಗಾಗಿ ಹೋರಾಡಿದ ಸಂಘ ಸ್ವಯಂಸೇವಕರ ಕಾರ್ಯ ಇವರಿಗೆ ಗೊತ್ತಿಲ್ಲವೋ ಹೇಗೆ? ಸಾವಿರಾರು ದಲಿತ ಮತ್ತು ಶೋಷಿತ ವರ್ಗದ ವಿದ್ಯಾರ್ಥಿಗಳು, ಸಂಘದ ಸ್ವಯಂಸೇವಕರು ನಡೆಸುವ ಪ್ರಕಲ್ಪಗಳಿಂದ ಪ್ರಯೋಜನ ಪಡೆದು ಸಮಾಜದಲ್ಲಿ ನ್ಯಾಯಯುತವಾದ ಮತ್ತು ಗೌರವಾನ್ವಿತ ಸ್ಥಾನದಲ್ಲಿರುವುದು ಇವರಿಗೆ ತಿಳಿದಿಲ್ಲವೋ? ಅಥವಾ ಇವೂ ಕೂಡ ಮೇಲ್ಮೇಲಿನ ಪರಿಹಾರವೋ?

೪. ಮತಾಂತರ

ಕನ್ನಡದ ಒಲವಿನ ಈ ಬ್ಲಾಗಿನಲ್ಲಿ ಮತಾಂತರದ ಪ್ರಸ್ತಾಪ ಬಹಳ ವಿಷೇಶ! ದೇಶಕ್ಕೆ ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯೂನಿಸ್ಟರಿಂದ ಅಪಾಯವೆಂದು ಸಂಘ ತಿಳಿದಿದೆ ಎಂದು ಬರೆದಿದ್ದಾರೆ. ಸಂಘವನ್ನು ಶತಾಯ ಗತಾಯ ದೂಷಿಸಿ ಬಡಿಯಬೇಕೆಂಬ ಹಂಬಲವುಳ್ಳ ಲೇಖಕರಿಗೆ ಸಂಘ ಏನೂ ಅರ್ಥವಾಗಿಲ್ಲ ಎನ್ನುವುದು ಸ್ಪಷ್ಟ. ಸಂಘವು ಒಬ್ಬ ದೇಶದ್ರೋಹಿಯು ಮುಸಲ್ಮಾನನಾಗಿದ್ದರೆ ಎಷ್ಟು ವಿರೋಧಿಸುತ್ತದೆಯೋ ಅಷ್ಟೇ ವಿರೋಧ ಒಬ್ಬ ದೇಶದ್ರೋಹಿ ಹಿಂದುವಿಗೂ ತೋರಿಸುತ್ತದೆ. ಸಂಘದ ಅನೇಕ ಸ್ವಯಂಸೇವಕರು ಮುಸಲ್ಮಾನರು ಮತ್ತು ಕ್ರೈಸ್ತರು ಎಂಬುದನ್ನು ಲೇಖಕರು ಏಕೆ ಪ್ರಸ್ತಾಪಿಸಿಲ್ಲ? ಸಂಘದ ಸ್ವಯಂಸೇವಕರು ತಾವು ನಡೆಸುವ ಅಂಗಡಿ, ಕಾರ್ಖಾನೆ ಮತ್ತು ಸಂಸ್ಥೆಗಳಲ್ಲಿ ಮುಸಲ್ಮಾನರಿಗೆ ಹಾಗೂ ಕ್ರೈಸ್ತರಿಗೆ ಉದ್ಯೋಗ ಕೊಟ್ಟಿರುವುದನ್ನು ಯಾಕೆ ಪ್ರಸ್ತಾಪಿಸಿಲ್ಲ. ಸಂಘದವರು ಎಂದು ಕರೆಯುವ ಬಿಜೆಪಿಯು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಒಬ್ಬ ಮುಸಲ್ಮಾನರನ್ನು ಮಂತ್ರಿಗಳನ್ನಾಗಿ ಮಾಡಿದ್ದು ನಿಜ ತಾನೇ? ಇಂದಿಗೂ ಸಂಘದ ಸ್ವಯಂಸೇವಕರು ನಡೆಸುವ ಅನೇಕ ಕಾರ್ಯಕ್ರಮಗಳಲ್ಲಿ ಮುಸಲ್ಮಾನರಾದ ಶ್ರೀ. ಅಬ್ದುಲ್ ಕಲಾಂ ರವರು ಭಾಗವಹಿಸುವುದು ನಾವು ನೋಡುತ್ತಲೇ ಇದ್ದೇವೆ.

ಬಹುಶಃ ನಮ್ಮ ’ಕನ್ನಡ ಪ್ರೇಮಿ’ ಲೇಖಕರು ಯಾವುದೇ ಮಸೀದಿಗೆ ಮತ್ತು ಮುಸಲ್ಮಾನರ ಸಭೆಗಳಿಗೆ ಹೋಗಿಲ್ಲವೆಂದು ಅನಿಸುತ್ತದೆ. ಅಲ್ಲಿ ಉರ್ದು ಬಿಟ್ಟು ಬೇರೆ ಕೇಳಸಿಕ್ಕರೆ ಕೇಳಿ. ಇಬ್ಬರು ಮುಸಲ್ಮಾನರ ನಡುವೆ ಮಾತುಕತೆಯಾಗುತ್ತಿದ್ದಲ್ಲಿ ಹೋಗಿ ನೋಡಲಿ. ಅಲ್ಲಿ ಕನ್ನಡ ಕೇಳಿದರೆ ಕನ್ನಡದ ಮೇಲಾಣೆ! ಇಸ್ಲಾಂಗೆ ಮತಾಂತರಗೊಂಡ ಒಬ್ಬ ಹಿಂದು ಕನ್ನಡಿಗನನ್ನು ಒಂದು ವರ್ಷ ಬಿಟ್ಟು ಮಾತನಾಡಿಸಿ ನೋಡಿ. ಅವನು ಶುರು ಮಾಡೋದೆ ’ಅಸ್ಸಲಾಂ..’ ಅಂತ! ಅವನು ಬಿಡಿ, ನೀವು ಅವನನ್ನು ನೋಡಿದ ಕೂಡಲೇ ’ಕೈಸಾ ಹೈ?’ ಅಂತ ಕೇಳ್ತೀರಾ! ಅವನು ’ನಮ್ದೂಕೆ ಚೆನ್ನಾಗಿದ್ದಾರೆ’ ಅಂದರೆ ಧನ್ಯರಾದಿರಿ ಅಂತ ಅರ್ಥ.

ಇನ್ನು ಕ್ರೈಸ್ತರ ವಿಷಯ ಹೆಚ್ಚು ಹೇಳದಿದ್ದರೆ ಮೇಲು! ಸಾಮಾನ್ಯವಾಗಿ ಇಬ್ಬರು ಕನ್ನಡಿಗರು ಸೇರಿದರೆ ಮಾತಾಡುವುದು ಕನ್ನಡದಲ್ಲಿ ಎನ್ನುವುದು ನಾವು ಬಲ್ಲೆವು. ಮಧ್ಯೆ ಮಧ್ಯೆ ಆಂಗ್ಲ ಬಂದು ಹೋದರೂ, ಹೆಚ್ಚು ಕಡಿಮೆ ಮಾತುಕತೆಯನ್ನು ಕನ್ನಡವೇ ಆವರಿಸಿರುತ್ತದೆ. ಆದರೆ ನನ್ನ ಅನುಭವದಲ್ಲಿ ಕಳೆದ ೫-೬ ವರ್ಷಗಳಲ್ಲಿ ಕ್ರೈಸ್ತರ ಧೋರಣೆ ಬದಲಾಗಿದೆ. ಕ್ರೈಸ್ತರ ಕನ್ನಡ ಪ್ರೇಮ ಏನಿದ್ದರೂ ಮತಾಂತರದ ತನಕ ಮಾತ್ರ. ಒಮ್ಮೆ ಮತಾಂತರಗೊಂಡ ಕನ್ನಡಿಗನನ್ನು ಈ ದೇಶದ ಭಾಷೆ, ಸಂಸ್ಕೃತಿಯಿಂದ ಬೇರ್ಪಡಿಸಲು ಮಿಷನರಿಗಳು ಎಲ್ಲ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಅವರಿಗೆ ಗೊತ್ತು, ಒಬ್ಬ ಮತಾಂತರಿಯ ಕನ್ನಡ ಭಾಷಾ ಪ್ರೇಮವನ್ನು ಕೊಂದರೆ ಈ ನೆಲದ ಸಂಸ್ಕೃತಿಯಿಂದ ಕೂಡ ಅವನನ್ನು ಸುಲಭವಾಗಿ ಬೇರ್ಪಡಿಸಬಹುದು ಎಂದು. ಇನ್ನೂ ಅರ್ಥವಾಗದಿದ್ದರೆ, ಕ್ರೈಸ್ತ ಮತಾಂತರಗೊಂಡ ನಾಗಾಲ್ಯಾಂಡ್ ಅಥವಾ ಮಣಿಪುರಕ್ಕೆ ಹೋಗಿ ನೋಡಿ. ’ಭಾರತೀಯ ನಾಯಿಗಳೇ, ನಮ್ಮ ರಾಜ್ಯ ಬಿಟ್ಟು ತೊಲಗಿ’ ಎನ್ನುವ ಫಲಕ ಕಾಣಿಸುತ್ತದೆ!!

ಸ್ವಾಮಿ, ತಿಳಿದುಕೊಳ್ಳಿ. ಈ ನೆಲದ ಭಾಷೆ, ಸಂಸ್ಕೃತಿ ಮತ್ತು ಗಡಿಯನ್ನು ಉಳಿಸಲು ಕೇವಲ ಕನ್ನಡ ಪ್ರೇಮಿಯಾಗಿದ್ದರೆ ಸಾಲದು. ರಾಷ್ಟ್ರಪ್ರೇಮಿಯೂ ಆಗಿರಬೇಕು. ಅಷ್ಟಿಲ್ಲದೆ ಕುವೆಂಪು ಬರೆದರೆ... ’ಭಾರತ ಜನನಿಯ ತನುಜಾತೆ...’ ಎಂದು.

ಕೊನೆಯದಾಗಿ, ಭಾಷೆಯನ್ನು ಉಳಿಸಿ ಬೆಳಸಲು ಹೊರಟಿರುವ ಈ ಬ್ಲಾಗ್ ಇಂಥ ಕೆಂಪು ಲೇಖಕರ ಹಿಡಿತಕ್ಕೆ ಸಿಕ್ಕಿ ನಲುಗಿ ಮಲಗದಿರಲಿ.

KARUNA ಅಂತಾರೆ...

RSS bagge baredu Neevu Shahabbas giri padibahudu... KFD-PFI bagge kuuda barithira..???
Maklu maadoke shariyaa beeku anthare...
Jail hogoke 'Bharatha'da savindhana....
Edara bagge neevu thilkondirodanna namgu thilisi kodi..

generalsagar ಅಂತಾರೆ...

ಆನಂದ್, ಇಲ್ಲಿ ಕಾಮೆಂಟ್ ಮಾಡಿರೋ ಬಹಳಷ್ಟು ಜನ ಇನ್ನೂ ತಮ್ಮ ಅಜ್ಜ-ಅಜ್ಜಿ ಕಾಲದ 'date-bar' ಆಗಿರೋ, 'expired' ಸಿಧ್ಧಾಂತಗಳನ್ನ ನಂಬಿರುವವರು. ಭಾರತದ ಏಕತೆಗೆ ಒಂದೇ ಭಾಷೆ ಇದ್ದರೆ ಚನ್ನ, ಹಿಂದಿಯನ್ನ ರಾಷ್ಟ್ರಭಾಷೆ ಎಂದು ಒಪ್ಪಿಕೊಂಡರೆ ಮಾತ್ರ ಏಕತೆ ಸಾಧಿಸಲು ಸಾಧ್ಯ ಎಂದು ನಂಬಿರೋ ಜನ ಇವರು. ಇಂತಹ ನಂಬಿಕೆಗಳು ಕನ್ನಡಕ್ಕೆ, ಕನ್ನಡಿಗರಿಗೆ ವಿಷವಾಗಿ ಪರಿಣಮಿಸುವುದಾದರೆ, ಅಂತಹ "ಏಕತೆ" ನಮಗೆ ಬೇಡವೇ ಬೇಡ. ಇಷ್ಟು ದಿನ "ಭಾರತ" "ಭಾರತ" ಎಂದುಕೊಂಡು ಬೇಡದ 'ಭಾರ'ವನ್ನೆಲ್ಲಾ ನಮ್ಮ ತಲೆ ಮೇಲೆ ಹೊತ್ತುಕೊಂಡು ಕರ್ನಾಟಕವನ್ನ ಹಾಳು ಮಾಡಿಕೊಂಡೆವು. ಸಾಕಿನ್ನು. ಇನ್ನು ಕೇವಲ ಕನ್ನಡ-ಕರ್ನಾಟಕದ ಬಗ್ಗೆ ಮಾತ್ರ ಚಿಂತಿಸೋಣ.

ಆನಂದ್ ಅಂತಾರೆ...

ಶ್ರೀ ಪ್ರದ್ಯುಮ್ನ ಬೆಳವಾಡಿಯವವರೇ,

ನಿಮ್ಮ ಅನಿಸಿಕೆಗಳಿಗೆ ವಂದನೆಗಳು. ಸಂಘದ ಬಗ್ಗೆ ಬರೆದಿರುವ ಲೇಖನಕ್ಕೆ ಆಧಾರ "ಚಿಂತನ ಗಂಗಾ" ಎಂದು ಹೇಳಿದ್ದೇನೆ. ನೀವು ಸಂಘದ "ಚಿಂತನ ಗಂಗಾ" ನಿಲುವುಗಳನ್ನು ಸಮರ್ಥಿಸಿ ಮಾತಾಡಿದ್ದೀರಾ ಎಂದರೆ ಅವನ್ನು ಒಪ್ಪಿದ್ದೀರಾ ಎಂದು ಭಾವಿಸಬಹುದೇ? ತಿಳಿಸಿ.
ಎಂದರೆ ಸಾರದಲ್ಲಿ "ಹಿಂದೀ ಭಾರತದ ಸಂಪರ್ಕ ಭಾಷೆಯಾಗಬೇಕು, ಭಾರತ ಒಕ್ಕೂಟ ವ್ಯವಸ್ಥೆಯಿಂದ ಹಿಂದೆ ಸರಿಯಬೇಕು, ಮೀಸಲಾತಿ ಕೈಬಿಡಬೇಕು ಮತ್ತು ಮುಸ್ಲಿಮ್, ಕ್ರೈಸ್ತರು ದೇಶದ್ರೋಹಿಗಳು".
ಹೌದಾ? ಈ ನಾಲ್ಕು ನಿಲುವುಗಳನ್ನು ನೀವು ಒಪ್ಪುತ್ತಿದ್ದೀರಾ? ಎನ್ನುವುದು ನನ್ನ ಪ್ರಶ್ನೆ. ಸಂಸ್ಕೃತ/ ಹಿಂದೀ ಒಪ್ಪುವುದರ ಬಗ್ಗೆ ಈಗಾಗಲೇ ಸಾಕಷ್ಟು ಬರಹ ಏನ್ ಗುರುವಿನಲ್ಲಿ ಬರೆಯಲಾಗಿದೆ. ಓದಿಕೊಳ್ಳಿ. ಒಪ್ಪುವುದು ಬಿಡುವುದು ನಿಮ್ಮ ಆಯ್ಕೆಗೆ ಬಿಟ್ಟದ್ದು.
ಈ ನಾಲ್ಕು ನಿಲುವುಗಳನ್ನು ಪ್ರತಿಪಾದಿಸುವ ಸಂಘ ಇದರಕ್ಕೆ ವ್ಯತಿರಿಕ್ತವಾದ ಧ್ಯೇಯಗಳನ್ನು ಹೊಂದಿರುವ ಬಿ.ಜೆ.ಪಿಯನ್ನೂ ತನ್ನ ರಾಜಕೀಯ ಅಂಗವಾಗಿ ಹೊಂದಿದೆ ಎನ್ನುವುದನ್ನು ಇಲ್ಲಿ ಹೇಳಿದ್ದೇನೆ. ತನ್ನ ನಿಲುವುಗಳನ್ನು ಜನರ ಮುಂದಿಟ್ಟು ಸಂಘವೇ ರಾಜಕಾರಣಕ್ಕೆ ಬರುವುದು ನೇರವಂತಿಕೆ ಎಂದಿದ್ದೇನೆ. ಇನ್ನು ಸಂಘದ ನಿಲುವುಗಳು ಇಂಥವೇ ಎಂದು, ಸಂಘದ್ದೇ ಪುಸ್ತಕದಲ್ಲಿರುವುದನ್ನು ಬರೆಯಲಾಗಿದೆ ಎನ್ನುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ ಅಷ್ಟೆ.
ಆನಂದ್

Anonymous ಅಂತಾರೆ...

correct

Anonymous ಅಂತಾರೆ...

Anand avare, palaayanavaada beda.Pradyumna baredaddakke uttarisi.Kannada thalegerisikondu hege bekaadaroo maathaadabahudu, thaanu maadidde baredadde sari anno udaaphe bidi.Chinthana Ganga naanoo odiddene. naduvinda vaakya egarisi thandu aa vaakya yaava sanniveshada lekhana da naduve bareyalpattide annodannu thiliyiri. Kannada kannada antha bobbiriyadiri. ellaroo kannadakke seve maadore. kempu-haladi shaalu hoddaakshana kannada sevaka nalla.Ishtakkoo kannada ulidirodu yaava banavaasi galinda alla, halli gala, pete gala sahrudayee janarinda.Nimminda kaliyabekaadddoo illa.
Bye,
Dayanand Gowda

ಮುರಳಿ ಅಂತಾರೆ...

ಕನ್ನಡದ ಬಾವುಟ ಕೆಂಪು ಹಳದಿ ಅಂತ ಇರುವುದು ಅರಿಶಿನ ಕುಂಕುಮದ ಸಂಕೇತ. ಆದರೆ ಇದು ಈಗ ಕಮ್ಯುನಿಸ್ಟ್ - ಚೀನೀಯರ ಸಂಕೇತವಾಗ ಹೊರಟಂತಿದೆ ?

Priyank ಅಂತಾರೆ...

ದಿಟ ಗುರು.
ಇಲ್ಲಿ ಕೆಲವರು ತಪ್ಪು ಆಪಾದನೆ ಮಾಡಿದಾರೆ. ಅವರಿಗೆ ಉತ್ತರ ಕೊಡಲು,ಈ ನನ್ನ ಅನಿಸಿಕೆ ಬರೀತಿದೀನಿ.
- ಆರ್.ಎಸ್.ಎಸ್ ಸಂಘಟನೆ ಒಳಗೆ ಇರದೇ ಇರೋರಿಗೆ ಈ ರೀತಿ ಕಾಣುತ್ತೆ. ಒಳಗೆ ಬಂದು ನೋಡಿದರೆ, ನಿಮಗೆ ಬೇರೆನೇ ಕಾಣುತ್ತೆ ಅಂತ ಪ್ರದ್ಯುಮ್ನ ಅವರು ಹೇಳ್ತಿದಾರೆ.
ಸಂಘದ ನಿಲುವುಗಳನ್ನು ಎತ್ತಿ ಹೇಳುವ ಗೋಳ್ವಾಲ್ಕರ್ ಅವರ ಬರಹಗಳಿಗಿಂತಾ ಬೇರೆಯ ಪುರಾವೆಗಳೇನು ಬೇಡ. ಸಂಘದ ನಿಲುವುಗಳು ಇದಕ್ಕಿಂತಾ ಬೇರೆದಾಗಿಲ್ಲ. ಅಕಸ್ಮಾತ್ ಆಗಿದ್ದರೆ, ಅದನ್ನು ಜನತೆಯ ಮುಂದಿಡುವ ಕೆಲಸ ಸಂಘ ಮಾಡುತ್ತಿತ್ತು.
- ಆರ್.ಎಸ್.ಎಸ್ ಒಳಗೆ ಇರದೇ ಸಂಘದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಕೆಲವರು ಹೇಳಿದ್ದಾರೆ. ಡೆಮಾಕ್ರಸಿಯಲ್ಲಿ ಮಾತನಾಡುವ, ನಿಲುವುಗಳನ್ನು ಪ್ರಶ್ನಿಸುವ ಹಕ್ಕಿದೆ ಎಂಬುದನ್ನೇ ಮರೆತಂತಿದೆ ಇವರುಗಳು.
- ವನವಾಸಿ ಕಲ್ಯಾಣ ಮುಂತಾದ ಒಳ್ಳೆಯ ಕೆಲಸಗಳ ಬಗೆಗೆ ಯಾಕೆ ಬರೆದಿಲ್ಲ? ಅಂತ ಕೇಳುತ್ತಾ, "ನೀವು ರಾಜಕೀಯ ಮಾಡ್ತೀರ" ಎಂಬ ಆಪಾದನೆ ಕೆಲವರದು. ಸಂಘ ಮಾಡುವ ಒಳ್ಳೆಯ ಕೆಲಸಗಳ ಬಗೆಗೆ ಮೊದಲ ಪ್ಯಾರಾದಲ್ಲೇ ಬರೆದುದನ್ನು ಇವರುಗಳು ಓದಿಯೂ ಓದದಂತೆ ಇದಾರೆ. ಸಂಘದ ನಿಲುವುಗಳನ್ನು ಪ್ರಶ್ನಿಸಿದ ತಕ್ಷಣ, ಅಂತವರನ್ನು ’ಸಿಕ್ಯುಲರ್’ ಅಂತಲೋ, ’ಬುದ್ದಿಜೀವಿ’ ಅಂತಲೋ, ’ಕಮ್ಯುನಿಸ್ಟ್’ ಅಂತಲೋ ಕರೆಯುವವರು ನಿಜಕ್ಕೂ ಡೆಮಾಕ್ರಸಿಯಲ್ಲಿ ನಂಬಿಕೆ ಇಟ್ಟುಕೊಂಡಿರೊಲ್ಲ. ಬೇರೆಯವರನ್ನು ಹೀಯಾಳಿಸೋದೇ ಡೆಮಾಕ್ರಸಿಯ ಚರ್ಚೆಯಲ್ಲಿ ಗೆಲ್ಲುವ ಹಾದಿ ಎಂದು ಇವರುಗಳು ನಂಬಿರುತ್ತಾರೆ.
- ಹಿಂದಿಯನ್ನು ಒಂದು ಸಂಪರ್ಕ ಬಾಶೆಯಾಗಿ ಬಳಸಲಷ್ಟೇ ಸಂಘ ಹೇಳುತ್ತಿರೋದು. ಇದರಿಂದಾ ಕನ್ನಡಕ್ಕೇನು ತೊಂದರೆ? ಎಂಬ ಮಾತುಗಳು ಪ್ರದ್ಯುಮ್ನ ಅವರದು. ಜನರ ಸಂಪರ್ಕ ಬಾಶೆ ಯಾವುದಿರಬೇಕು ಎಂಬುದನ್ನು ತೀರ್ಮಾನಿಸಲು ಯಾರಿಗಿದೆ ಹಕ್ಕು? ಅದನ್ನು ಜನರ ಆಯ್ಕೆಗೆ ಬಿಡುವಂತಹ ’ಲಿಬೆರಲ್’ ಮನಸ್ತಿತಿ ಇವರಿಗಿದ್ದಂತಿಲ್ಲ.
ಹಿಂದಿಯನ್ನು ಸಂಪರ್ಕ ಬಾಶೆಯಾಗಿ ಮಾಡಲು, ಅದನ್ನು ’ರಾಷ್ಟ್ರಬಾಶೆ’ ಎಂದು ಸುಳ್ಳಾಗಿ ಕರೆಯುವ ಕೆಲಸ ನಡೆದುದರಿಂದಲೇ, ಇವತ್ತಿನ ದಿನ ನಮ್ಮಲ್ಲಿ ಬರುವ ವಲಸಿಗರು "ಕನ್ನಡ ಯಾಕೆ ಕಲಿಯಬೇಕು?" ಎಂಬ ಮನಸ್ತಿತಿ ಹೊಂದಿರೋದು. ಈ ಸುದ್ದಿಗೆ ಬಂದಿರುವ ಕಾಮೆಂಟುಗಳನ್ನು ನೋಡಿದರೆ ತಿಳಿಯುತ್ತೆ ಎಂತಹ ಮನಸ್ತತಿ ನಮ್ಮಲ್ಲಿಗೆ ಬಂದ ವಲಸಿಗರದು ಅಂತ. http://timesofindia.indiatimes.com/city/bangalore/Make-Kannada-mandatory-for-all-NRN/articleshow/11668848.cms
- ಎಲ್ಲಾ ನುಡಿಗಳೂ ಈ ನೆಲದ್ದೇ, ಇದರಲ್ಲಿ ಒಂದು ಮೇಲು, ಒಂದು ಕೀಳು ಎಂಬುದಿಲ್ಲ ಅನ್ನೋದನ್ನ ಸಂಘವೂ ಸೇರಿದಂತೆ ಎಲ್ಲರಿಗೂ ಮನವರಿಕೆಯಾಗಿದ್ದಲ್ಲಿ, ಇಂತಹ ಒಂದು ಮನಸ್ತಿತಿ ಜನರಲ್ಲಿ ಹುಟ್ಟುತ್ತಿರಲಿಲ್ಲ.
- ಸಮಾನ ಗೌರವ, ಸಮಾನ ಅವಕಾಶದ ಮೂಲಕವೇ ಒಗ್ಗಟ್ಟು ಸಾಧಿಸಲಾಗೋದು. ಜನರ ನಡುವೆ ಮೇಲು/ಕೀಳು (ನುಡಿಗೆ ಸಂಬಂದಿಸಿದಂತೆ) ಮಾಡಲು ಹೊರಟರೆ, ಒಗ್ಗಟ್ಟು ಸಾಧಿಸೋದು ಕಷ್ಟ. ಇದನ್ನು ಆದಷ್ಟು ಬೇಗ ಸಂಘವು ಅರಿತರೆ ನಾಡಿಗೆ, ಸಂಘಕ್ಕೆ ಒಳಿತು.
- ಮೊನ್ನೆ ಕೊನೆಗೊಂಡ ಸಮಾವೇಶದಲ್ಲಿ ಮೋಹನ್ ಭಾಗವತ್ ಅವರು ಯಡಿಯೂರಪ್ಪನವರಿಗೆ "ಯಾರಿಗೆ ಯಾವಾಗ ಅಧಿಕಾರ ಕೊಡಬೇಕು ನಮಗೆ ಗೊತ್ತಿದೆ. ನೀವು ಸುಮ್ಮನಿರಿ" ಎಂಬರ್ಥದ ಮಾತುಗಳನ್ನು ಹೇಳಿದರಂತೆ. ಹೀಗೆ, ಇವತ್ತಿನ ವಿಜಯ ಕರ್ನಾಟಕ ವರದಿ ಮಾಡಿದೆ. ಕರ್ನಾಟಕದ ಜನರು ಆರಿಸಿರುವ ಯಡಿಯೂರಪ್ಪನವರನ್ನು, ಕರ್ನಾಟಕದ ಜನರಿಂದ ಆರಿಸಲ್ಪಡದ ಮೋಹನ್ ಭಾಗವತ್ ಅವರು ಕಂಟ್ರೋಲ್ ಮಾಡೋದು, ಡೆಮಾಕ್ರಸಿಯಲ್ಲಿ ನಂಬಿಕೆಯಿರೋರು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಆರ್.ಎಸ್.ಎಸ್ ನವರು ತೆರೆಮರೆಯಲ್ಲಿ ನಿಂತು ಸರ್ಕಾರವನ್ನು ಆಡಿಸೋದು ಅಂದ್ರೆ ಇದೇ ತಾನೇ? ನಿಜಕ್ಕೂ, ಆರ್.ಎಸ್.ಎಸ್ ನವರು ಎಲೆಕ್ಶನ್ನಿಗೆ ನಿಲ್ಲೋದು ಪ್ರಾಮಾಣಿಕವಾದ ಹಾದಿಯಾಗಿದೆ.

Priyank ಅಂತಾರೆ...

ಪ್ರದ್ಯುಮ್ನ ಅವರು ಕುವೆಂಪು ಅವರು ಬರೆದ "ಭಾರತ ಜನನಿಯ ತನುಜಾತೆ" ನಾಡಹಾಡಿನ ಬಗೆಗೆ ಮಾತೆತ್ತಿದಾರೆ. "ನಾವೆಲ್ಲರೂ ಭಾರತ ಜನನಿಗೆ ಸೇರಿದವರು, ಹಾಗಾಗಿ ಮೊದಲು ಭಾರತ, ಆಮೇಲೆ ಕರ್ನಾಟಕ", ಎಂಬರ್ಥದಲ್ಲಿ ಅವರು ಬರೆದಿದಾರೆ ಎಂದು ತಿಳಿದುಕೊಂಡೇ ನಾನು ನನ್ನ ಈ ಅನಿಸಿಕೆ ಬರೆದಿದೀನಿ.
ನಾಡ ಹಾಡಿನ ಮುಂದಿನ ಸಾಲನ್ನು ಬಹುಶ ಪ್ರದುಮ್ನ ಅವರು ಗಮನಿಸಿರಲಿಕ್ಕಿಲ್ಲ, ಅದು "ಜಯಹೇ ಕರ್ನಾಟಕ ಮಾತೆ" ಎಂಬುದು. ಅಂದತೆ ಕರ್ನಾಟಕವು ನಮಗೆ ತಾಯಿ. ಹೇಗೆ ಒಬ್ಬರಿಗೆ ಒಬ್ಬಳೆ ತಾಯಿಯೋ, ಹಾಗೆ, ಕನ್ನಡಿಗರಿಗೆ ಕರ್ನಾಟಕವೇ ತಾಯಿ. ನಾನು ನನ್ನ ತಾಯಿಯನ್ನು ಪ್ರೀತಿಸಿದರೆ ಹೇಗೆ ನನ್ನ ದೊಡ್ಡಮ್ಮನ ಮೇಲೋ ಅಜ್ಜಿಯ ಮೇಲೋ ಪ್ರೀತಿ ಕಮ್ಮಿಯಾಗುವುದಿಲ್ಲವೋ, ಅದೇ ರೀತಿ ಇದು. ಆದರೆ, ಸಂಘದ ಒಳಗೆ ಕೆಲಸ ಮಾಡುವವರಿಗೆ, "ಕನ್ನಡಿಗರಿಗೆ ಕರ್ನಾಟಕವೇ ತಾಯಿ" ಎಂದು ಹೇಳೋದು ಸರಿಯೆನಿಸೊಲ್ಲ. ಅದಕ್ಕೇ "ನಮ್ಮೆಲ್ಲರಿಗೂ ಭಾರತ ಮಾತೆಯೇ ತಾಯಿ" ಎಂಬಂತೆ ಹೇಳುತ್ತಾರೆ. ಅದು ಸರಿಯಲ್ಲ.
ಭಾರತ ದೇಶವನ್ನು ಹೇಗೆ ಆಗುಮಾಡಲಾಯಿತು, ಆನಂತರ ಕನ್ನಡ ನುಡಿಯಾಡುಗರೆಲ್ಲಾ ಒಂದೇ ರಾಜ್ಯದ ಕೆಳಗೆ ಹೇಗೆ ಬರುವಂತಾಯಿತು ಎಂಬುದನ್ನು ಕುವೆಂಪುರವರು ತಿಳಿದಿದ್ದರು. ಅವರಿಗೆ ವಿಚಾರಗಳೆಲ್ಲಾ ತಕ್ಕಾಗಿ ತಿಳಿದಿದ್ದರಿಂದಲೇ, ಇಂತಹ ನಾಡಹಾಡನ್ನು ಬರೆಯಲು ಸಾಧ್ಯವಾಯಿತು.

ಅರುಣ್ ಜಾವಗಲ್ ಅಂತಾರೆ...

@Chetanರವರೇ, ಮೊದಲಿಗೆ RSS ಬಗ್ಗೆ ಮಾತನಾಡಲು ಕನ್ನಡಕ್ಕಾಗಿ ವರ್ಶಾನುಗಟ್ಟಲೆ ಜೈಲಿಗೆ ಹೋಗಿರಬೇಕಾಗಿ ಏನು ಇಲ್ಲ. ಒಬ್ಬ ಸಾಮಾನ್ಯ ಕನ್ನಡಿಗ ತನ್ನ ನಾಡು ನುಡಿ ಬಗ್ಗೆ ಕಾಳಜಿ ಹೊಂದಿದ್ದರೆ ಸಾಕು! ತನ್ನ ಕಾಳಜಿಯ ಕಣ್ಣಿಂದ RSS ಸಿದ್ದಾಂತವನ್ನು ನೊಡಿದಾಗ ತನಗೆ ಕಾಣುವುದೇ ಮೇಲಿನ ಲೇಕನದ ಸಾಲುಗಳು. ಈಗ ಉಚಿತವಾಗಿ ಪುಸ್ತಕ ಹಂಚುವ ವಿಶಯಕ್ಕೆ ಬಂದರೆ, ಆನಂದ್ ರವರೇಕೆ ಉಚಿತವಾಗಿ ಪುಸ್ತಕ ವಿತರಿಸಬೇಕು ಸ್ವಾಮಿ, ಕನ್ನಡ ಪರ ನಿಲುವು ಹೊಂದಿದ್ದಾರೆ ಎಂದ ಮಾತ್ರಕ್ಕೆ ಅವರ ಕೈಯಲ್ಲಿರುವ ಹಣವನ್ನ ಹಾಕಿ ಪುಸ್ತಕ ಹಂಚಬೇಕು ಎನ್ನುವುದು ಯಾವ ನ್ಯಾಯ? ಇನ್ನು ಬಾರತದಾದ್ಯಂತ ಹಿಂದಿಯನ್ನು ಒಪ್ಪಿ ಎಲ್ಲೆಡೆ ಹಿಂದಿಯಲ್ಲೆ ವ್ಯವಹರ ನಡೆಸಬೇಕೆಂಬ ಸಿದ್ದಾಂತವನ್ನು ಇಟ್ಟುಕೊಂಡು ಆದಿವಾಸಿ ಮಕ್ಕಳಿಗೆ ಕನ್ನಡದಲ್ಲಿ ಪಾಟಹೇಳಿಕೊಡುವುದರಲ್ಲಿ ಹುನ್ನಾರವಿದೆ ಎಂದು ತಿಳಿಯುವುದಿಲ್ಲವೇ? ಸಂವಿದಾನದ ಪ್ರಕಾರ ಒಬ್ಬ ಬಾರತೀಯನಿಗೆ ತನಗೆ ಬೇಕಾದ ದರ್ಮವನ್ನು ಪಾಲಿಸುವ ಹಕ್ಕಿದೆ. ಒಬ್ಬ ಬಾರತೀಯ ತನಗೆ ಇಶ್ಟವಾದ ದರ್ಮವನ್ನು(ಹಿಂದೂ ದರ್ಮವನ್ನ ಬಿಟ್ಟು) ಪಲಿಸಿದರೆ ಅವನಿಗೆ ಈ ದೇಶದ ಮೇಲಿನ ಪ್ರೀತಿ ಹೊರಟು ಹೋಗುತ್ತದೆಯೇ? ಬಾರತದ ಬಗ್ಗೆ ಪ್ರೀತಿ ಇರಲು ಹಿಂದೂ ದರ್ಮವನ್ನ ಮಾತ್ರ ಪಾಲಿಸಬೇಕೆ? ಇದ್ಯಾವ ಸಿದ್ದಾಂತ? ಇನ್ನು ಮೀಸಲಾತಿ ಬಗೆಗಿನ ನಿಲುವನ್ನ ನೋಡಿದ್ರೆ ಗೊತ್ತಾಗುತ್ತೆ RSS ಗೆ ಸಮಾಜದ ಎಲ್ಲಾ ವರ್ಗದ ಜನರ ಬಗ್ಗೆ ಯಾವ ಮಟ್ಟದ ಕಳಕಳಿ ಇದೆಯೆಂದು.

Amarnath Shivashankar ಅಂತಾರೆ...

ಈ ಲೇಖನದಲ್ಲಿ ಆರ್.ಎಸ್.ಎಸ್ ಬಲಪಂಥೀಯ ವಾದ ಪ್ರಾದೇಶಿಕ ನಿಲುವುಗಳಿಗೆ ಹೇಗೆ ಮಾರಕ್ಕ ಅನ್ನೋದನ್ನ ಬಹಳ ಚೆನ್ನಾಗಿ ಬರೆದಿದ್ದೀರ..
ಇವರ ಸಂಘಟನೆಯ ಆಡಳಿತ ಭಾಷೆಯಾಗಿ ಸಂಸ್ಕೃತ ಅಥವಾ ಹಿಂದಿಯನ್ನು ಬೇಕಾದರೆ ಇಟ್ಟುಕೊಳ್ಳಲಿ..ಅದರ ಬಗ್ಗೆ ನಮಗೇನು ಆಕ್ಷೇಪವಿಲ್ಲ. ಆದರೆ ಇಡೀ ದೇಶದ ಭಾಷೆಯಾಗಿ ಹಿಂದಿ ಅಥವಾ ಸಂಸ್ಕೃತ ಬೇಕು ಅನ್ನುವ ವಾದ ಬಾಲಿಶವಾಗಿದೆ. ಭಾರತ ವಿವಿಧತೆಯಲ್ಲಿ ಏಕತೆಗೆ ಹೆಸರುವಾಸಿಯಾಗಿರುವ ದೇಶ. ಇಲ್ಲಿ ಬೇರೆ ಬೇರೆ ಭಾಷೆಗಳು, ಧರ್ಮಗಳು, ಆಚರಣೆಗಳು ಇವೆ. ಎಲ್ಲವನ್ನು ಸಮಾನವಾಗಿ ನೋಡುವ ಹಿರಿಮೆ ಮೆರೆಯಬೇಕು ಹೊರತು ಒಂದು ಮಾತ್ರ ಕೀಳು, ಮತ್ತೊಂದು ಮೇಲು ಅನ್ನುವ racist ಮನಸ್ಥಿತಿ ದೇಶದ ಭದ್ರತೆಗೆ, ಏಕತೆಗೆ ಮಾರಕ.
ಎಲ್ಲ ರಾಜ್ಯಗಳಲ್ಲಿನ ಆಯಾ ರಾಜ್ಯ ಭಾಷೆಗಳಿಗೆ, ಎಲ್ಲ ಧರ್ಮಗಳಿಗೆ ಸಮಾನ ಸ್ಥಾನಮಾನ ಸಿಗಲಿ ಅನ್ನುವ ಮಾನವತಾವಾದ ನಮ್ಮದು.
ನಮಗೆ ಕನ್ನಡ ಮೇಲು, ಇತರೆ ಭಾಷೆಗಳು ಕೀಳು ಅನ್ನುವ ಕೀಳು ಮನಸ್ಥಿತಿ ಇಲ್ಲ. ಕರ್ನಾಟಕದಲ್ಲಿ ಕನ್ನಡವೇ ಮೇಲು. ತಮಿಳುನಾಡಿನಲ್ಲಿ ತಮಿಳೇ ಮೇಲು, ಅಸ್ಸಾಮಿನಲ್ಲಿ ಅಸ್ಸಮೀಸ್ ಮೇಲು. ನಿಜವಾದ ದೇಶಪ್ರೇಮ ಅಂದ್ರೆ ಇದು...ಒಂದು ಜನಾಂಗದವರೇ ಮೇಲು, ಒಂದು ಭಾಷೆ ಮೇಲು, ಉಳಿದೆಲ್ಲಾ ಜನ ಸಮುದಾಯಗಳು, ಭಾಷೆಗಳು ಕೀಳು ಅನ್ನುವ ಕೀಳು ಮನಸ್ಥಿತಿ ನಿಜಕ್ಕೂ ಮಾರಕ..

ಇದುವರೆಗೂ ಏನ್ಗುರು ಬ್ಲಾಗಿನಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಚೌಕಟ್ಟಿನಲ್ಲಿ ಲೇಖನಗಳು ಮೂಡಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಪೆಟ್ಟು ಬೀಳುತ್ತವೆಯೆಂದು ಅನ್ನಿಸಿದ ರಾಜಕೀಯ ಪಕ್ಷಗಳು, ಸಂಘಟನೆಗಳು, ಜನರು ಎಲ್ಲರನ್ನೂ ಕನ್ನಡದ ಕಣ್ಣಿಂದ ನೋಡಿ ಅವರು ನಿಲುವುಗಳಲ್ಲಿನ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಏನ್ಗುರು ಬ್ಲಾಗು ಅವಿರತವಾಗಿ ಮಾಡುತ್ತಿದೆ.

ಕನ್ನಡ ಭಾಷೆಗೆ ಮಾರಕವಾಗುವಂತಹ ಯಾವುದೇ ಸಿದ್ಧಾಂತಗಳು ನಮಗೆ ಇಷ್ಟವಾಗುವುದಿಲ್ಲ. ಅದನ್ನು ಪ್ರಶ್ನೆ ಮಾಡಿವ ಹಕ್ಕು ಪ್ರಜಾಪ್ರಭುತ್ವದಲ್ಲಿದೆ.

ಮತ್ತೊಮ್ಮೆ ಏನ್ಗುರು ಸಂಪಾದಕರಿಗೆ ಇಂತಹ ಲೇಖನ ಪ್ರಕಟಿಸಿದಕ್ಕಾಗಿ ನನ್ನಿ..

Amarnath Shivashankar ಅಂತಾರೆ...

ಈ ಲೇಖನದ ಕೊನೇ ಪ್ಯಾರ "ಸಂಘ ರಾಜಕೀಯಕ್ಕಿಳಿಯಲಿ!" ನೇರವಾಗಿದೆ. ಹೌದು ಸಂಘ ಪರಿವಾರ ಇದನ್ನೇಕೆ ಮಾಡಬಾರದು?
ದೇಶ ಕಾಪಾಡೋಕ್ಕೆ ನಮ್ಮದು ಇವೆಲ್ಲಾ ವಿಷಯಗಳಿವೆ ಅನ್ನುವುದನ್ನು ಚುನಾವಣಾ ಪ್ರಣಾಲಿಕೆಯಲ್ಲಿ ಇಡಲಿ. ಜನ ಅದನ್ನು ನಿರ್ಧರಿಸಲಿ..
ಕನ್ನಡಕ್ಕಿಂತ ಹಿಂದಿ ಮೇಲು, ತಮಿಳಿಗಿಂತ ಹಿಂದಿ ಮೇಲು, ಗುಜರಾತಿಗಿಂತ ಹಿಂದಿ ಮೇಳು ಅನ್ನುವ ವಿಷಯಗಳ ಜೊತೆಗೆ ಅವರ ಎಲ್ಲ ಸಿದ್ಧಾಂತಗಳನ್ನು ಪ್ರಣಾಳಿಕೆಯಲ್ಲಿ ಹೊರತರಲಿ. ದೇಶದ ಜನ ಸರಿಯಾದ ಪ್ರತಿಕ್ರಿಯೆಯನ್ನೇ ಕೊಡುತ್ತಾರೆ.

Kannada ಅಂತಾರೆ...

ಕೆಂಪು ಲೇಖಕರು ಅಂತ ಪ್ರಸ್ತಾಪ ಮಾಡಿರುವ ಗೆಳೆಯರ ಮಾತು ಹಾಸ್ಯಾಸ್ಪದವಾಗಿದೆ.
ಇವರ ಕೇಸರೀಕರಣದ ಭರಾಟೆಯಲ್ಲಿ ಎಲ್ಲರಿಗೂ ಒಂದೊಂದು ಬಣ್ಣವನ್ನ assign ಮಾಡುತ್ತಿರೋ ಹಾಗಿದೆ.
ಈ ಬ್ಲಾಗಿನಲ್ಲಿ ಇವರ ಪೊಳ್ಳೂ ರಾಷ್ಟ್ರವಾದವನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಅದಕ್ಕೆ ಮೈ ಎಲ್ಲ ಪರಚಿಕೊಳ್ಳುವ ಹಾಗೆ ಆಗಿದೆ ಪಾಪ

Kannada ಅಂತಾರೆ...

ಚಿಂತನ ಗಂಗಾ ದಲ್ಲಿ ಹೇಳಿರುವ ಮಾತುಗಳನ್ನು ಬ್ಲಾಗ್ ಲೇಖಕರು ಪ್ರಸ್ತಾಪಿಸಿದ್ದಾರೆ..
ಆದರೆ ಇಲ್ಲಿ ವಾದ ಮಾಡುತ್ತಿರುವ ಆರ್.ಎಸ್.ಎಸ್ ಕಟ್ಟಾಳುಗಳು ಅದನ್ನು ಒಪ್ಪಲು ತಯಾರಿಲ್ಲ. ಇದ್ಯಾಕೋ ವಿಚಿತ್ರವಾಗಿದೆ.
ಒಂದು ಇವರಿಗೆ ಚಿಂತನ ಗಂಗಾ ಪುಸ್ತಕದ ಬಗ್ಗೆ ಅರಿವಿಲ್ಲದಿರಬಹುದು..
ಅಥವಾ ಚಿಂತನ ಗಂಗಾ ಪುಸ್ತಕ ಇವರ ಸಿದ್ಧಾಂತದ ಭಗವದ್ಗೀತೆ ಅನ್ನುವುದನ್ನು ಇವರು ಅಲ್ಲಗಳೆಯುತ್ತಿರಬಹುದು..
ಅಥವಾ ಚಿಂತನ ಗಂಗಾದಲ್ಲಿ ಹೇಳಿರುವ ನೇರ ವಿಷಯಗಳಿಗೆ ಬಣ್ಣ ಬಳೆದು ಜನರನ್ನು ಮರಳು ಮಾಡುವ ಪ್ರಯತ್ನ ಮುಂದುವರೆಸುತ್ತಿದ್ದಾರೇನೋ ತಿಳಿಯೆ..

Anonymous ಅಂತಾರೆ...

The blog has come out fantastically dissecting RSS's flawed ideologies.
Just because the right wing agenda has been questioned here, people are branding the blog and writeup as a left wing oriented article.
The fact is, this blog is an eye opener for all broad minded people.
As a kannadiga and as someone who would love to see Kannada flag flying high all the time, I neither believe in Right wing ideologies nor in the left wing one.
pro Kannada ideology is the correct ideology and thats the ultimate one. Enguru Blog has successfully thrown light on whats good and whats bad for Kannada-Kannadiga-Karnataka..

Great Job Editor..Kudos......

Chetan ಅಂತಾರೆ...

ಪ್ರದ್ಯುಮ್ನ ಅವರೇ,

ನನ್ನಂತ ಸಾಮಾನ್ಯ ಕನ್ನಡಿಗನಿಗೆ ಸಂಸ್ಕೃತದಿಂದ ಆಗಬೇಕಾದದ್ದು ಏನು ಇಲ್ಲಾ. ನನ್ನಂತ ಕೋಟ್ಯಾಂತರ ಜನರು ಹಳ್ಳಿಯಲ್ಲಿ ಬದುಕುತ್ತಿದ್ದೇವೆ ಹಾಗೂ ನಮಗೆ ಕನ್ನಡ ಭಾಷೆಯೊಂದೇ ಸಾಕು. ಸಂಘದವರಿಗೆ ಹೇಗೆ ಇಂಗ್ಲಿಶ್ ಭಾಷೆ ಹೇರಿಕೆಯಂದು ಅನ್ನಿಸುತ್ತದೆಯೋ ಹಾಗೆ ನನಗೂ ಕೂಡ ಸಂಸ್ಕ್ಟುತ ಭಾಷೆ ಹೇರಿಕೆ ಖಂಡಿತ ಹೌದು. ಇನ್ನು ಸಂಪರ್ಕ ಭಾಷೆಗೆ ಬರುವುದಾದದರೆ ನನಗೆ ಹಿಂದಿ ಬೇಕಾಗಿಲ್ಲ. ಎರಡು ರಾಜ್ಯಗಳು ತಮಗೆ ಬೇಕಾಗಿರುವ ಭಾಷೆಯಲ್ಲಿ ಸಂಪರ್ಕ ಸಾಧಿಸಿಕೊಳ್ಳಲು ಅವಕಾಶ ನೀಡಿದರೆ ಸಾಕು. ಹಿಂದಿಯನ್ನ ನಿಮಗೆ ಇಷ್ಟವಿಲ್ಲದಿದ್ದರೂ ಯಾಕೆ ಒಪ್ಪಿಕೊಳ್ಳುತ್ತೀರಿ ಸಂಘವು ಹೇಳಿದೆಯಂದೇ?

ಇಂದು ಹಿಂದಿಯನ್ನ ಕೇಂದ್ರದ ಆಡಳಿತ ಭಾಶೆಯಂದು ಒಪ್ಪಿಕೊಂಡಿರುವುದರಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಏನ್ ಗುರು ಹಾಗೂ ಇತರೆ ಜನರು ಬರಿದಿರುವ ಲೇಖನಗಳನ್ನ ತಾವು ಗಮನಿಸಬೇಕು. ಹೊರಗಡೆ ಹಿಂದಿ ಉಪಯೋಗಿಸಿ ಹಾಗು ಮನೆಯಲ್ಲಿ ಕನ್ನಡ ಬಳಸಿ ಅನ್ನುವಷ್ಟರ ಮಟ್ಟಿಗೆ ಹೇಳಿಕೆಗಳನ್ನು ಸಹ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ನೀಡಲಾಗಿದೆ. ಇದಕ್ಕೆ ತಮ್ಮ ಉತ್ತರವೇನು? ಕನ್ನಡತನವನ್ನ ಒಪ್ಪದ ರಾಷ್ಟ್ರೀಯತೆ ನನಗೆ ಹುಸಿ ರಾಷ್ಟ್ರೀಯತೆಯಾಗಿ ಕಾಣುತ್ತದೆ.

India is Union of States ಅಂತ ಭಾರತವನ್ನ ಕರೆದಿದ್ದಾರೆ. ಭಾಷಾವಾರು ಪ್ರಾಂತ್ಯಗಳ ರಚನೆ ಆಗದೇ ಹೋಗಿದ್ದರೆ ನಮಗೆ ಒಂದು ಭಾರತವನ್ನು ಕಾಣಲು ಕಷ್ಟವಾಗುತ್ತಿತ್ತು. ಹಾಗಾದ್ರೆ ನಮ್ಮ ಸಂವಿಧಾನ ಹೇಳುವಂತೆ ವಿವಿಧತೆಯಲ್ಲಿ ಏಕತೆಯ ಸ್ವರೂಪವನ್ನು ಸಂಘವು ಒಪ್ಪಿಕೊಳ್ಳುವುದಿಲ್ಲವೇ?

ಇನ್ನು ಧರ್ಮದ ಆಧಾರದ ಮೇಲೆ ಜನರನ್ನು ಮೇಲು ಕೀಳು ಎಂದು ನೋಡುವುದು ಅಸಹ್ಯ. ಕನ್ನಡ ಮಾತಾಡದ ಮುಸ್ಲಿಮ ಹಾಗೂ ಕ್ರಿಶ್ಚಿಯನ್ ರ ಮೇಲುರುವ ಸಿಟ್ಟನ್ನು ಹೊರರಾಜ್ಯದಿಂದ ಇಲ್ಲಿಗೆ ಅನ್ನ ಹುಡುಕಿಕೊಂಡು ಬಂದು ಕನ್ನಡ ಕಲಿಯದ, ಕೀಳಾಗಿ ನೋಡುವ ಹಿಂದೂಗಳ ಮೇಲೂ ತೋರಿಸಿ ಸ್ವಾಮಿ.

Ajay ಅಂತಾರೆ...

Dear Banavasi BaLaga, I think 'Balaga' is going in a politically incorrect way. This article unnecessarily takes some matters like reservation which should be outofscope of 'Balaga' ideology. Be careful. You will endup in losing your popularity and will get branded as an organisation where nobody want to associate with. Donot write directly against any popular person or organisation even though their ideologies are different. Tackle the matters with techniques.

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

1. ಪಂಡೀತರಾದ ಪ್ರದ್ಯುಮ್ನ ಅವರು ಸಂಸ್ಕೃತ ಭಾಷೆಯನ್ನು ಮೊಗಲರು ಮತ್ತು ಅದಕ್ಕಿಂತಲೂ ಮಿಗಿಲಾಗಿ ಆಂಗ್ಲರು ಹೇಗೆ ದಮನ ಮಾಡಿ ನಮ್ಮ ದೇಶದ ಜನಸಾಮಾನ್ಯರಿಂದ ದೂರ ಮಾಡಿದರೆಂದು ನಮಗೆ ತಿಳಿದೇ ಇದೆ ಅಂದಿದ್ದಾರೆ. ಅಂದರೆ ಇವರ ಮಾತಿನ ಅರ್ಥ ಬ್ರಿಟಿಷರು ಬರುವ ಮುಂಚೆ ಎಲ್ಲೆಡೆ ಸಂಸ್ಕ್ರುತ ಮಾತನಾಡುತ್ತಾ ಇದ್ದರು. ಸ್ವಲ್ಪ ಯಾವ ಯಾವ ಊರಿನಲ್ಲಿ ಸಂಸ್ಕ್ರುತ ಮಾತನಾಡುತ್ತಿದ್ದರು ಎಂದು ತಿಳಿಸಿದರೆ ಒಳ್ಳೆಯದು.
2. ದೇಶಕ್ಕೊಂದು ಭಾಷೆ ಬೇಕು, ಅದು ತಮ್ಮ ನೆಚ್ಚಿನ ಸಂಸ್ಕ್ರುತ ಆಗಲಿಲ್ಲ ಅಂದರೆ ಸಂಸ್ಕ್ರುತ ಭೂಯಿಷ್ಟ ಹಿಂದಿ ಆಗಲಿ ಅನ್ನುವ ಇವರು, ಹಿಂದಿ ಹೇರಿಕೆಯಿಂದ ಕರ್ನಾಟಕದಲ್ಲಿ ಈಗಾಗಲೇ ಕನ್ನಡ ಹೇಗೆ ಕಣ್ಮರೆಯಾಗುತ್ತಿದೆ ಅನ್ನುವುದನ್ನು ತಿಳಿದೂ ಜಾಣ ಕುರುಡು ತೋರಿಸುತ್ತಾರೆ. ಮತ್ತದೇ ಟಪಿಕಲ್ ರಿಯಾಲಿಟಿ ಅವಾಯ್ಡನ್ಸ್ ಕಾಯಿಲೆ.
3. ಆಂಗ್ಲ ಭಾಷೆ ದಾಸ್ಯದ ಸಂಕೇತ ಅನ್ನುವ ಇವರು ಸೈಬರ್ ಅನ್ನುವ ಕಂಪನಿಯಲ್ಲಿ ಲಕ್ಷ ಲಕ್ಷವನ್ನು ಏನು ಸಂಸ್ಕೃತ ಮಂತ್ರ ಹೇಳಿ ಎಣಿಸುತ್ತಿದ್ದಾರೋ? ಇಂಗ್ಲಿಶ್ ಯಿಂದ ಅನ್ನ ತಿಂದ ಮೇಲೆ ಅದಕ್ಕಾದರೂ ಚೂರು ಕೃತಜ್ಞತೆ ಇರಲಿ ಸ್ವಾಮಿ..
4. ಸಂಸ್ಕೃತ ಕರ್ನಾಟಕದಲ್ಲಿ ಎಂದಿಗೂ ಆಡದ ನುಡಿ. ರಾಜರ ಪ್ರೋತ್ಸಾಹದಿಂದ, ಆಗಿನ ರಾಜಾಶ್ರಯ ಪಡೆದ ಬ್ರಾಹ್ಮಣರ ನೆಚ್ಚಿಗೆಯಿಂದ ಅದು ಬರಹದ ಮೂಲಕ ಕರ್ನಾಟಕಕ್ಕೆ ಬಂದಿದ್ದೇ ಹೊರತು ಮಾತಿನಿಂದಲ್ಲ. ಇಲ್ಲೇ ಬೆಂಗಳೂರು ದಾಟಿ ಹಳ್ಳಿಗೆ ಹೋಗಿ ಅಲ್ಲಿನ ಜನರ ಬಾಯಲ್ಲಿ ಎಷ್ಟು ಸಂಸ್ಕೃತ ಪದ ಇದೆ ಎಂದು ತಿಳಿಯಲಿ, ಆಮೇಲೆ ಮಂತ್ರದ ಉಗುಳು ಎಲ್ಲರ ಮೇಲೆ ಎರಚಲಿ.

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಪಂಡೀತರಾದ ಪ್ರದ್ಯುಮ್ನ ಅವರು ಭಾರತದ ಇತಿಹಾಸದಲ್ಲಿ ಯಾವುದೇ ರಾಜ್ಯವು ಭಾಷೆಯ ಆಧಾರದಲ್ಲಿ ಅಸ್ತಿತ್ತ್ವಕ್ಕೆ ಬಂದ ಉದಾಹರಣೆಗಳಿಲ್ಲ ಅನ್ನುತ್ತಾರೆ. ಇವರು ಇತಿಹಾಸವನ್ನು ಎಷ್ಟು ಸೆಲೆಕ್ಟಿವ್ ಆಗಿ ಹಳದಿ ಕಣ್ಣಿಂದ ಓದುತ್ತಾರೆ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ಆಧಾರವಿಲ್ಲ. ಪಲ್ಲವರ ಕಾಂಚಿಯಲ್ಲಿ ಕನ್ನಡದ ದೊರೆ ಮಯೂರವರ್ಮನಿಗಾದ ಅವಮಾನವೇ ಮುಂದೆ ಕನ್ನಡದ ಮೊದಲ ಸಾಮ್ರಾಜ್ಯ ಕದಂಬರ ಆಳ್ವಿಕೆಗೆ ಮುನ್ನುಡಿ ಬರೆಯಿತು ಅನ್ನುವುದು ಇವರಿಗೆ ಯಾಕೆ ಕಾಣಿಸಲ್ಲ? ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಕರ್ನಾಟಕ ಸಾಮ್ರಾಜ್ಯದ ವಿಜಯನಗರದರಸರು, ಕೊನೆಯಲ್ಲಿ ಮೈಸೂರು ಒಡೆಯರ್ ಇವರೆಲ್ಲ ಏನು ಸಂಸ್ಕೃತದರಸರೇ? ಕನ್ನಡಿಗರನ್ನು ಆಳುತ್ತಿದ್ದ ಕನ್ನಡದರಸರಲ್ಲವೇ? ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದ ನಂತರ ಭಾರತ ದೇಶವನ್ನು ಭಾಷಾ ಆಧಾರದಲ್ಲಲ್ಲದೆ ಭೌಗೋಳಿಕವಾಗಿಯೋ ಅಥವಾ ಇನ್ನಾವುದೋ ಆಧಾರದಲ್ಲಿ ವಿಂಗಡಿಸಿದ್ದರೆ ಭಾರತ ಇಷ್ಟೊತ್ತಿಗೆ ಚೂರು ಚೂರಾಗಿರುತ್ತಿತ್ತು. ಪ್ರದ್ಯುಮ್ನನಂತಹ ಮೂಲಭೂತವಾದಿಗಳು ನಮ್ಮ ಸಂವಿಧಾನ ರಚಿಸದ ಕಾರಣ ನಮ್ಮ ಭಾರತ ಇವತ್ತಿಗೂ ಒಂದಾಗಿ ಉಳಿದಿದೆ. ಭಾಷೆ ಮುಖ್ಯವಲ್ಲ, ಧರ್ಮ ಮುಖ್ಯ ಅನ್ನುವವರು ಪಾಕಿಸ್ತಾನ ಒಡೆದು ಬಾಂಗ್ಲಾ ದೇಶವಾದುದ್ದನ್ನು ಸ್ವಲ್ಪ ಓದಿದರೆ ಮಂಕು ಕವಿದ ಅವರ ಬುದ್ದಿ ಚೂರಾದರೂ ಚುರುಕಾದೀತು. ಏನ್ ಮಾಡ್ತಿರಾ ಕೇಸರಿ ಬಣ್ಣ ತುಂಬಿಕೊಂಡಿರುವ ಕಣ್ಣುಗಳಿಗೆ ಹಲ ಬಣ್ಣಗಳು, ವೈವಿಧ್ಯತೆಗಳು ಶಾಪದಂತೆ ಕಾಣುವುದರಲ್ಲಿ ಏನು ತಪ್ಪಿಲ್ಲ.

Manu ಅಂತಾರೆ...

This is purely politically motivated article, baseless allegation. 'En guru..' lost my respect today.

Manu ಅಂತಾರೆ...

Also, there are many minority organizations in Karnataka which use URDU as primary mode of communication.

EN GURU.. Do you have GUTS to question them???? I don't think so.

Anonymous ಅಂತಾರೆ...

ಏನ್ಗುರು, ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸತ್ಯವನ್ನು ನೇರವಾಗಿ ಹೇಳಿದ್ದಿರಿ. ನಿಮ್ಮ ಲೇಖನ ಹಾಗು ಇಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳನ್ನ ನೋಡಿದರೆ, ಭಾರತ ದೇಶದಲ್ಲಿ ಇಂಗ್ಲಿಶ್ ಭಾಷೆಯನ್ನು ಅಳಿಸಿ ಅದರ ಬದಲು ಸಂಸ್ಕೃತ ಹಾಗು ಹಿಂದಿ ಭಾಷೆಗಳನ್ನು ಮೆರೆಸುವ/ಹೇರುವ ಹುನ್ನಾರ ನಡೆಯುತ್ತಿದೆ ಅನ್ನಿಸ್ತಿದೆ. ಕೆಲವರು ಹಿಂದಿ/ಸಂಸ್ಕೃತ ಕಲಿಯುವುದು ಹೇರಿಕೆ ಅಲ್ಲ ಅಂತಾರೆ ಆದ್ರೆ ಅವರೇ ಇಂಗ್ಲಿಶ್ ನಮಗೆ ಮಾರಿ ಅಂತಾರೆ. ಕನ್ನಡಿಗರಿಗೆ ಕನ್ನಡ ಬಿಟ್ಟರೆ ಬೇರೆಲ್ಲ ಭಾಷೆಯು ಪರಕಿಯವೆ ಎಂಬುದು ಇವರು ಒಪ್ಪುವುದಿಲ್ಲ. ಇದನ್ನ ಒಪ್ಪದವರು ಇನ್ನು ಮುಂದೆ ಕನ್ನಡ ನಾಡಿನಲ್ಲಿ ಇಂಗ್ಲಿಶ್ ಜೊತೆಯಲ್ಲೇ ಸಂಸ್ಕೃತ, ಹಿಂದಿ, ಕಲಿಯಿರಿ ಎನ್ನುವಂತಿದೆ.... ಯಾಕಂದ್ರೆ ಇಂಗ್ಲಿಶ್ ಇವತ್ತಿನ ದಿನ ಅನ್ನ ನೀಡುತ್ತಿರುವ ಭಾಷೆ... ನೀವು ಬೇಡ ಅಂದ್ರು ಜನ ಅದನ್ನ ಕಲ್ತೆ ಕಲಿತಾರೆ.

Tulasi ಅಂತಾರೆ...

Enguru, Nice write up and an eye opener for many of us here. I believe the fact that you are getting some negative comments are purely emotional. You have gone beyond that in your article and quoted what is good and what is bad for us(kannadigas). After going thro' this article I am interested in looking at many more articles in your blog. Keep going enguru......
I remember someone saying the following sentence during some seminar
IF YOU WANT TO CHANGE THE WORLD YOU HAVE TO BE WILLING TO BE MISUNDERSTOOD FOR A WHILE…

Priyank ಅಂತಾರೆ...

ಮನು ಅವರಿಗೆ ಈ ಬರಹ ಎಳ್ಳಷ್ಟೂ ಅರ್ಥವಾದಂತಿಲ್ಲ.
ಮೈನಾರಿಟಿ ಸಂಸ್ಥೆಗಳು ಉರ್ದುವನ್ನು ಬಳಸುತ್ತಿರೋದು ಗೊತ್ತಿರೋ ವಿಷಯವೇ. ಅವರ್ಯಾರೂ, "ನೀವೆಲ್ಲಾ ಉರ್ದು ಕಲಿಯಿರಿ" ಎಂದು ಹೇಳಿಲ್ಲವಲ್ಲ. ಕನ್ನಡಿಗರನ್ನು ತಮ್ಮ ಪಾಡಿಗೆ ಇರಲು ಬಿಡದೇ, "ನೀವು ಸಂಸ್ಕ್ರುತ ಕಲಿಯಿರಿ, ಹಿಂದಿ ಕಲಿಯಿರಿ" ಎನ್ನುವವರನ್ನು ಮತ್ತು ತಮ್ಮ ಪಾಡಿಗೆ ತಮ್ಮ ನುಡಿ ಬಳಸುವವರನ್ನು ಒಂದೇ ತಕ್ಕಡಿಯಲ್ಲಿ ಹಾಕಹೊರಟಿದಾರೆ ಮನು ಅವರು.
ಇಂತಹ ಅನಿಸಿಕೆಗಳಿಗೆ ಉತ್ತರ ಕೊಡುವ ಕಷ್ಟ ತಗೊಬೇಡಿ ಗುರು.

Amarnath Shivashankar ಅಂತಾರೆ...

ಏನ್ಗುರು ರಾಜಕೀಯ ಮಾಡ್ತಿದ್ದೀರ ಅಂತ ಚೇತನ್ ಅವರು ಕಮ್ಮೆಂಟ್ ಬರೆದಿದ್ದಾರೆ.
ಅವರ ಮಾತಿನಲ್ಲೊಂದು ಸಾಲಿದೆ..ಅದನ್ನ ನೋಡಿ ಖುರ್ಚಿಯಿಂದ ಕೆಳಗೆ ಬಿದ್ದು ನಕ್ಕುಬಿಟ್ಟೆ.
"ಆರ್.ಎಸ್.ಎಸ್ ನಿಮ್ಮ ಹಾಗೆ ದುಡ್ಡಿಗಾಗಿ ಪುಸ್ತಕ ಮಾರುತ್ತಿಲ್ಲ" ಅಂತೆ..ಹಾಗಾದರೆ ರಾಷ್ಟ್ರೋತನ ಪರಿಶತ್ತು ಎನ್ ಪುಕಸಟ್ಟೆ ಕೊಡ್ತಾರಾ ಪುಸ್ತಕಗಳನ್ನ? ಸಾಹಿತ್ಯ ಸಮ್ಮೇಳನದಲ್ಲಿ, ಮೊನ್ನೆ ಅರಮನೆ ಮೈದಾನದಲ್ಲಿ ನಡೆದ ಪುಸ್ತಕ ಮಳಿಗೆಗಳ ಸಂತೆಯಲ್ಲಿ ಭಗವಹಿಸಿದ್ದ್ರು.ಅಲ್ಲಿ ಕೂಡ ಒಂದು ಡಬ್ಬವನ್ನು ಇಟ್ಟುಕೊಂಡು ಅದರಲ್ಲಿ ದುಡ್ಡು ಹಾಕಿಕೊಳ್ತಾ ಇದ್ದ್ರು.
ದುಡ್ಡೂ ಕೊಟ್ಟು ಕೊಂಡಾಗಲೇ ಅದರ ಬೆಲೆ ತಿಳಿಯುವುದು. ಅದರಲ್ಲಿ ತಪ್ಪೇನಿಲ್ಲ. ಬನವಾಸಿ ಬಳಗದ ಬಗ್ಗೆ ಸುಮ್ಮನೆ ಕೊಂಕು ಮಾತನಾಡಿದ ಗೆಳೆಯನಿಗೆ ವಸ್ತುಸ್ಥಿತಿಯನ್ನು ತಿಳಿಸುವುದಕ್ಕೆ ಈ ಕಮ್ಮೆಂಟ್ ಹಾಕಲೇ ಬೇಕಾಯಿತು.

Vijaya kumar. A ಅಂತಾರೆ...

Dead Sanskrit was Always Dead

The reason Sanskrit never became people's language is that the original spoken Sanskrit was not a very good language with perfect grammar. So people had no need to converse in this language. The present Sanskrit grammar was compiled later, and this is why it is logical. But then any language created artificially would have easy logical grammar, like Esperanto.
So while Sanskrit was being spoken and manipulated by chosen few, the common folks Subcontinent continued to speak in their local dravidian languages like kannada, tamil,telugu,malayali,gonda,tulu,kodava,toda etc. These popular languages were the descendants of one language spoken earlier, probably at the time of Indus Valley Civilization (Harrappa).

And since all these languages evolved from a single source, therefore their vocabulary and grammar are similar to each other, showing their local origin. On the other hand, Sanskrit's vocabulary and grammar are actually similar to European and Iranian languages, showing Sanskrit's foreign origin.

People here who are hating muslims to the core should remember one thing that your Hindi language was born only after muslims invasion to india. Hindi is the bastard child of Sanskrit and persian.

There was a stricture that ShUdra(90% of the indian population) should not study Sanskrit and stipulation that if he listens to anyone reciting it, punish him with 'pour molten lead into his ears'. A few educated ignorants here are saying sanskrit was widely spoken in india. What a joke!

Anonymous ಅಂತಾರೆ...

I am not sure as to what political Motivation Mr Manu is talking about..
Some one who is inclined towards right wing politics would surely find this article wrong as it gives them a pain in the wrong area..
Enguru - Don't worry about all this. Keep up your great job..You don't need any fake supporters.And am sure, you are doing this selfless social service for the sake of Kannada and not to appease any narrow minded fake fans..

"ಕನ್ನಡದ ವಿಷಯದಲ್ಲಿ ನಾನು ಬುಲ್ಲ್ ಡೋಸರ್ ಇದ್ದಂಗೆ. ಅಡ್ಡ ಬರಬೇಡಿ..ಅಪ್ಪಚ್ಚಿ ಆಗಿಬಿಡ್ತೀರಾ" ಅಂತ ಕುವೆಂಪು ಅವರು ಹೇಳಿದ್ದರು.
ಈ ವಿಷಯ ಬನವಾಸಿ ಬಳಗದ ಕಾರ್ಯ ವೈಖರಿಗೆ ಸಕ್ಕತ್ ಹೊಂದುತ್ತೆ...

ಮಧುಕರ ಅಂತಾರೆ...

ಅಣ್ಣಪ್ಪ ಗೌಡರು ಪ್ರದ್ಯುಮ್ನರವರ ಬಗ್ಗೆ ಆಪಾದನೆ ಮಾಡುತ್ತಾ, ಅವರು ಕೆಲಸ ಮಾಡುವ ಕಂಪನಿಯಲ್ಲಿ ಲಕ್ಷ ಲಕ್ಷ ತೆಗೆದುಕೊಳ್ಳುತ್ತಾ ಹಾಗೆ ಹೀಗೆ ಅಂತ ಬರೆದಿದ್ದಾರೆ.

ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಹೇಳಬಯಸುವುದೇನೆಂದರೆ, ಕಳೆದ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಇದೇ ಸೈಬರ್‌ನಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಲು ಅವರೇ ಕಾರಣಭೂತರು.

Kannada ಅಂತಾರೆ...

ಕರ್ನಾಟಕ ರಾಜ್ಯೊತ್ಸವ ನಡೆಸಿದ್ದು ಸಂತೋಷ. ಆದರೆ ಕನ್ನಡಕ್ಕೆ ಮಾರಕವಾದರೂ ಅದೇ ಆರ್.ಎಸ್.ಎಸ್ ಸಿದ್ಧಂತವನ್ನು ಪ್ರತಿಪಾದನೆ ಮಾಡುವುದು ಸರಿಯಲ್ಲ. ಖುದ್ದಾಗಿ ಆರ್.ಎಸ್.ಎಸ್ ಘಟಾನುಘಟಿಗಳೇ ಒಕ್ಕೂಟ ವ್ಯವಸ್ಥೆಯ ಬಗ್ಗೆ ತಮಗಿರುವ ನಿಲುವನ್ನು ತಮ್ಮ ಬರಹಗಳಲ್ಲಿ ಹೇಳಿದ್ದಾರೆ. ಅದನ್ನ ಏನ್ಗುರುವಿನಲ್ಲಿ ಕೋಟ್ ಮಾಡಿದಕ್ಕೆ ಯಾಕೆ ಅಷ್ಟೊಂದು ವಿಚಲಿತರಾಗಬೇಕು.
ಸುಮ್ಮನೆ ಒಪ್ಪಿಕೊಂಡು ಬಿಟ್ಟರೆ ಒಳಿತು. ಹೌದು ನಮಗೆ ಕನ್ನಡಕ್ಕಿಂತ ಆರ್.ಎಸ್.ಎಸ್ ನಿಲುವುಗಳೇ ಮೇಲು ಅಂತ. ಚರ್ಚೆಯೇ ಬೇದವಾಗುತ್ತದೆ. ಕನ್ನಡಾಭಿಮಾನಿಗಳ ಮುಖವಾಡ ಧರಿಸಿ ಕನ್ನಡಕ್ಕೆ ಕುತ್ತು ಬಂದರೂ ಸೈ, ತಮ್ಮ ಹಿಂದುತ್ವವಾದವೇ ಸರಿ ಅನ್ನುವ ಶಕುನಿಯಾಟ ಬೇಡ.

Priyank ಅಂತಾರೆ...

ರಾಜ್ಯೋತ್ಸವ ಆಚರಿಸಲು ಮುಂದಾದೋರಿಗೆ ಕನ್ನಡ ಪ್ರೇಮ ಇಲ್ಲ ಅಂತ ಯಾರೂ ಹೇಳ್ತಿಲ್ಲ ಮಧುಕರ ಅವರೇ.
"ಎಲ್ಲರೂ ಸಂಸ್ಕ್ರುತ ಕಲಿಯಬೇಕು" ಎಂಬಂತಹ ಹೇರಿಕೆಯ ಮನಸ್ತಿತಿಯನ್ನು ಪ್ರಶ್ನಿಸ್ತಿರೋದು.
ಯಾಕೋ ಗೊತ್ತಿಲ್ಲ, ಕನ್ನಡಿಗರಿಗೆ, "ಇಂತಾ ಬಾಶೆ ನೀವೆಲ್ಲರೂ ಕಲೀರಿ" ಅಂತ ಹೇಳೋ ಹಕ್ಕು ತಮಗಿದೆ ಅಂತ ಕೆಲವರು ಅಂದುಕೊಂಡುಬಿಡ್ತಾರೆ.

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಮೀಸಲಾತಿಯ ಬಗ್ಗೆ ಪ್ರದ್ಯುಮ್ನ ಸಾಹೇಬರು (ಓಹ್ ಕ್ಷಮಿಸಿ ಸಾಹೇಬ ಅನ್ನುವುದು ಉರ್ದು ಮೂಲದ್ದು, ಅದನ್ನು ಬಳಸಿ ತಮ್ಮ ಮಡಿ ಕೆಡಿಸಿಬಿಟ್ಟೆ..ಮನ್ನಿಸಿ) ಮೀಸಲಾತಿಯ ಕೆಡುಕಿನ ಬಗ್ಗೆ ಮಾತನಾಡುವ ಮೊದಲು ಜಾತಿಗಳಿಗೆ ಮೀಸಲಾತಿ ಕೊಡುತ್ತ, ಜಾತಿಗಳ ಆಟದಲ್ಲೇ ಮುಳುಗಿರುವ ಕರ್ನಾಟಕದ ಬಿಜೆಪಿಯ ಮಂತ್ರಿಮಹೋದಯರಿಗೆ ಬುದ್ದಿವಾದ ಹೇಳಿದರೆ ಚೆನ್ನಾಗಿತ್ತು. ಮೀಸಲಾತಿಯಿರದೇ ಹೋಗಿದ್ದರೆ ಎರಡು ಸಾವಿರ ವರ್ಷದಿಂದ ಸಮಾಜದ ಕೆಳವರ್ಗವನ್ನು ಕಾಲಿಗಂಟಿದ ಹೇಸಿಗೆಯಂತೆ ಕಂಡಿದ್ದ ಮೇಲ್ಜಾತಿಯ ಥ್ರೆಡ್ಡುಗಳ ಹಿಡಿತದಿಂದ ಅವರಿಗೆ ಬಿಡುಗಡೆ ಸಿಗುತ್ತಿತ್ತೇ? ಇವತ್ತಿಗೂ ಮೀಸಲಾತಿಯ ಅನುಷ್ಟಾನದಲ್ಲಿ ಆಗಿರುವ ತೊಡಕು, ಅದನ್ನು ಮತಬ್ಯಾಂಕಾಗಿಸುವ ಪ್ರಯತ್ನಗಳನ್ನು ಆರ್.ಎಸ್.ಎಸ್ ನ ಕೂಸು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಮಾಡಿಕೊಂಡು ಬಂದಿವೆ. ಮೀಸಲಾತಿಯ ಲಾಭ ಸರಿಯಾಗಿ ದೊರಕದ ತುಳಿತಕ್ಕೊಳಗಾದವರಿಗೆ ದೊರಕದೇ ಇರುವುದನ್ನು ಸರಿಪಡಿಸುವ, ಅದರ ದುರ್ಬಳಕೆ ತಡೆಯುವ ಕೆಲಸ ಆಗಬೇಕಿದೆ, ಜಾತಿಯ ತಾರತಮ್ಯ ಇರಲೇ ಇಲ್ಲ, ಈಗಲೇ ಬಂದಿದ್ದು ಅಂತಾದರೆ ಐದು ನೂರು ವರ್ಷಗಳಿಂದ ಸುಬ್ರಮಣ್ಯದ ದೇಗುಲದಲ್ಲಿ ಬ್ರಾಹ್ಮಣರು ಉಂಡೆಸೆದ ಎಲೆಯ ಮೇಲೆ ಮಲೆಕುಡಿಗರು ಬಿದ್ದು ಹೋರಳಾಡುವುದನ್ನು ಮಾನ್ಯ ಮಂತ್ರಿಗಳಾದ ಆಚಾರ್ಯರು ಬೆಂಬಲಿಸಿದ್ದು ಯಾಕೋ? ಇಂತಹ ಸಾಮಾಜಿಕ ಕ್ರಾಂತಿಯ ಪ್ರಯತ್ನ ಬಿಟ್ಟು ಕಾಡಲ್ಲಿ, ಸ್ಲಂ ಅಲ್ಲಿ ಒಂದಿಷ್ಟು ಮಕ್ಕಳಿಗೆ ಪಾಠ ಹೇಳಿ ಕೊಟ್ಟು (ಅದು ಕೂಡಾ ಯಾವುದೇ ಸೌಲಭ್ಯವಿಲ್ಲದ ಅವರು ಕ್ರಿಶ್ಚಿಯನ್ ಇಲ್ಲವೇ ಇನ್ನಾವುದೇ ಧರ್ಮಕ್ಕೆ ಮತಾಂತರ ಹೊಂದಿಯಾರೂ ಅನ್ನುವ ಭಯದಲ್ಲಿ) ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಅದರ ಕುರುಡು ಅಭಿಮಾನಿಗಳ ಬ್ರೈನ್ ಯಾವ ಮಟ್ಟಿಗೆ ವಾಶ್ ಆಗಿದೆ ಅನ್ನುವುದಷ್ಟೇ ತೋರಿಸುತ್ತೆ. ತೋರಿಸಲಿ ಎಷ್ಟು ಹರಿಜನ, ದಲಿತ, ಹೊಲೆಯ, ಮಲೆಕುಡಿಗ, ಚಮ್ಮಾರ, ಕಮ್ಮಾರ, ಕುಂಬಾರ, ಭಜಂತ್ರಿಗಳಿಗೆ ಆರ್.ಎಸ್.ಎಸ್ ನಲ್ಲಿ ಗೌರವಾನ್ವಿತ, ಮೇಲ್ಮಟ್ಟಿನ ಸ್ಥಾನ ಸಿಕ್ಕಿದೆಯೆಂದು. ಈ ಪ್ರಶ್ನೆ ಕೇಳಿ ಹಾಕಿರುವ ಥ್ರೆಡ್ಡು ಉದುರಿ ಹೋಗದಿದ್ದರೆ ಸಾಕು.
ಇನ್ನು ಕೆಂಪು ಸಿದ್ಧಾಂತ, ಚೈನಾದ ಪ್ರಭಾವ ಅಂತೆಲ್ಲ ಅನ್ನುವ ಬಾಲಿಶವಾದಕ್ಕೆ ಉತ್ತರ ಕೊಡುವುದು ಏನ್ ಗುರು ಓದುಗನಾಗಿ ನನಗಂತೂ ಅಗತ್ಯ ಅನ್ನಿಸುತ್ತಿಲ್ಲ.

Praveen ಅಂತಾರೆ...

Bhashe, jaati, varga, prantya ee bhedagale namma deshavu 1200 varsha daasyakkeedada kaarana. yaaru yaavude bhasheyannu innobbara mele heralu bidabaaradu.

aadare balagada snehitarige nannadondu prashne. nimmalli eshtu jana tamma makkalannu kannada shalege kalisuttiddeera?

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಕೇಸರಿ ಪ್ರದ್ಯುಮ್ನ ಅವರು ಕ್ರೈಸ್ತ, ಮುಸಲ್ಮಾನರ ಬಗ್ಗೆ ಗೋಲವಲ್ಕರ್ ಅವರ ಮಾತನ್ನು ಪ್ರಸ್ತಾಪಿಸಿದ ಲೇಖಕರ ಮೇಲೆ ಹರಿ ಹಾಯುವುದಕ್ಕಿಂತ ಗೋಲವಲ್ಕರ್ ಅವರ ಮಾತೆಷ್ಟು ಸರಿ ಎಂದಷ್ಟೇ ನೋಡಿದರೆ ಒಳಿತು. ಸಂಘದವರು ಎಂದು ಕರೆಯುವ ಬಿಜೆಪಿಯವರು ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರಿಗೆ ಗೃಹ ಖಾತೆ, ಸಾರಿಗೆ, ಶಿಕ್ಷಣದಂತಹ ಖಾತೆ ಕೊಟ್ಟಿದ್ದೇ? ಇಲ್ಲವೇ ಕೆಲಸಕ್ಕೆ ಬಾರದ ಅಲ್ಪಸಂಖ್ಯಾತರ ಖಾತೆ ಕೊಟ್ಟಿದ್ದೋ ಸ್ವಲ್ಪ ಪಂಡೀತರು ತಿಳಿದರೆ ಒಳಿತು. ಕಲಾಂ ಸಾಹೇಬರು ಕಾರ್ಯಕ್ರಮಕ್ಕೆ ಬಂದ ತಕ್ಷಣ ಇವರು ಮುಸ್ಲಿಂ ಪರ ಅಂತಲಾ? ಕಲಾಂ ಸಾಹೇಬರು ಎಲ್ಲ ಜನಾಂಗದ ಕಾರ್ಯಕ್ರಮಕ್ಕೂ ಬರುತ್ತಾರೆ. ಬರೀ ಇಂತಹ ತೋರಿಕೆಯ ಮೇಲ್ಮೆಲಿನ ಕ್ರಮ ಬಿಟ್ಟು ಮುಸ್ಲಿಂ ಸಮುದಾಯದಲ್ಲಿರುವ ಶಿಕ್ಷಣದ ಕೊರತೆ ನೀಗಿಸಲು, ಅವರಿಗೆ ಉದ್ಯೋಗ, ಬದುಕು, ಅರಿವು ತುಂಬುವಲ್ಲಿ ಆ ಮೂಲಕ ನಿಜವಾದ ಸುಧಾರಣೆ ತರುವತ್ತ ಸಂಘ ಏನು ಮಾಡಿದೆ ಎಂದು ಪಂಡಿತರಾದ ಪ್ರದ್ಯುಮ್ನ ಅವರು ತಿಳಿಸಿದರೆ ಕೇಳಿ ಮದ್ದೂರಿನಿಂದ ನಾನು ಕಿವಿ ತಂಪು ಮಾಡ್ಕೊತ್ತಿದ್ದೆ. ಮುಸ್ಲಿಂರು ಕನ್ನಡ ಮಾತನಾಡುವುದಿಲ್ಲ ಅನ್ನುವ ಮೂಲಕ ಇವರು ತಮ್ಮ ಮೇಲ್ಜಾತಿಯ ನಾಲ್ಕು ಜನರನ್ನು ಬಿಟ್ಟು ಸಮಾಜದ ಇನ್ನಾರನ್ನೂ ಎಂದಿಗೂ ಮಾತನಾಡಿಸಿಯೂ ಇಲ್ಲ ಅನ್ನುವುದನ್ನು ತೋರಿಸಿಕೊಂಡಿದ್ದಾರೆ. ಕ್ರೈಸ್ತರ ಬಗ್ಗೆಯೂ ಇವರ ಕೇಸರಿ ಕಣ್ಣೇ ಮಾತನಾಡಿದೆ ಅನ್ನುವುದು ಬಾಲವಾಡಿಯ ಮಕ್ಕಳು ಹೇಳಿಯಾವು. ಮುಸ್ಲಿಂ, ಕ್ರೈಸ್ತರೆಲ್ಲ ಉಗ್ರರು, ಪಾತಕಿಗಳು ಅನ್ನುವ ಧೋರಣೆ ಇವರ ಮಾತಲ್ಲೇ ಇದೆ. ಇಂತಹ ಗ್ರಾಸ್ ಜನರಲೈಸ್ ಮಾಡುವ ಉಗ್ರವಾದಿಗಳಿಂದಲೇ ಅಲ್ಲವೇ ಭಯೋತ್ಪಾದನೆಯ ಸಮಸ್ಯೆ ಹೆಚ್ಚಿರುವುದು.

ಕರ್ನಾಟಕತ್ವದ ಮೂಲಕವೇ ಕನ್ನಡಿಗರು ಭಾರತ ಮಾತೆಯನ್ನು ಸಾಕ್ಷಾತ್ಕರಿಕೊಳ್ಳಬಲ್ಲರು ಅನ್ನುವ ದೇಶಪ್ರೇಮಿ ಆಲೂರು ವೆಂಕಟರಾಯರ ಮಾತು ಇಂತಹ ಅವಿವೇಕಿಗಳ ಕಿವಿಗೆ ಬಿದ್ದಿಲ್ಲ ಅನ್ನಿಸುತ್ತೆ. ಬೀಳುವುದಾದರೂ ಹೇಗೆ ಹೇಳಿ, ಆ ಕಿವಿಯ ತುಂಬಾ ಬರೀ ತನ್ನ ಗುರುತನ್ನೇ ಮರೆತ ಪೊಳ್ಳು ರಾಶ್ಟ್ರೀಯತೆ, ಅನ್ಯ ಧರ್ಮದ ದ್ವೇಷವೇ ತುಂಬಿರುವಾಗ..

ಏನ್ಗುರು, ಕಳೆದ ಐದು ವರ್ಷದಿಂದಲೂ ನಾನು ಬ್ಲಾಗ್ ಓದುತ್ತಾ ಬಂದಿದ್ದೇನೆ. ಇಂತಹ ಕನ್ನಡ ಪ್ರೇಮದ ನಾಟಕವಾಡುವ ಡೊಂಗಿ ಕನ್ನಡಿಗರ ಬಗ್ಗ ತಲೆ ಕೆಡಿಸಿಕೊಳ್ಳದೇ ಸತ್ಯ ಮುಂದಿಡುವ, ಚರ್ಚೆಗೆ ಅನುವಾಗುವ ಎಲ್ಲ ಕೆಲಸವನ್ನು ಮುಂದುವರೆಸಿ.

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಮದುಕರ, ಅವರ ಕನ್ನಡದ ಕಾಳಜಿಯೇ ಇಶ್ಟು ಟೊಳ್ಳಾಗಿರುವಾಗ ಜುಟ್ಟಿನ ಮಲ್ಲಿಗೆಯ ಇಂತಹ ಆಚರಣೆಗಳಿಂದೇನು ಬಂತು ???

Praveen ಅಂತಾರೆ...

annappa, idolle kathe aithalla. enadru madidru tappu. madadidroo tappu. nimage muslimara bagge ashtu nambike iddare avarannella kannada shalege kare tanni. avara madrasagalalli kannada madhyamavannu tanni. summane helide. neevenadaru avara balige hogi kelidre tale tegedaaru, husharu.

Praveen ಅಂತಾರೆ...

ondantoo satya. karnatakadalli muslimara adalita bandare, marane dinave kannada dhooli patavagtade. indu kannadadalli ishtondu urdu serali karana tippu sultana antha gottiddare olitu.

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಪ್ರವೀಣ್,, ಯಾರೋ ಗುಮ್ಮ ತೋರಿಸಿದರು ಎಂದು ಚಿಕ್ಕ ಮಕ್ಕಳ ತರಹ ಆಡಬೇಡಯ್ಯ. ನಾನು ಮುಸ್ಲಿಂ ಹುಡುಗರ ಜೊತೆ ಒಡನಾಡಿಯೇ ಬೆಳೆದಿದ್ದೇನೆ. ನಾನು ಓದಿದ ಸರ್ಕಾರಿ ಶಾಲೆಯಲ್ಲಿ ನನ್ನ ಜೊತೆ ಕಡಿಮೆ ಎಂದರೂ ೫ ಮುಸ್ಲಿಂ ಹುಡುಗರಿದ್ದರು. ನನಗಿಂತ ಸೊಗಸಾದ ಕನ್ನಡ ಮಾತನಾಡುತ್ತಿದ್ದರು. ನನಗೆ ಕನ್ನಡ ಹೇಳಿಕೊಟ್ಟವರೇ ಒಬ್ಬ ಮುಸ್ಲಿಂ ಶಿಕ್ಷಕ. ಭಯೋತ್ಪಾದನೆಗೆ ಧರ್ಮವಿಲ್ಲ. ಅದು ಮುಸ್ಲಿಂರು ಮಾಡಲಿ, ಹಿಂದುಗಳು ಮಾಡಲಿ, ಇಲ್ಲ ಕ್ರೈಸ್ತರು ಮಾಡಲಿ. ಯಾರು ಮಾಡಿದರೂ ಒಂದೇ. ಅದಕ್ಕೆ ತಕ್ಕ ಕಾನೂನು, ಶಿಕ್ಷೆ ಕೊಡಬೇಕೇ ಹೊರತು ಮುಸ್ಲಿಂರೆಲ್ಲ ದೇಶದ್ರೋಹಿಗಳು, ಹಿಂದೂಗಳೆಲ್ಲ (ಅವನು ಅದೆಷ್ಟೇ ಮನೆಹಾಳು ಕೆಲಸ ಮಾಡಿದರೂ) ದೇಶಭಕ್ತರು ಅನ್ನುವುದಾದರೇ ನಿಮ್ಮ ಸ್ವಂತ ಬುದ್ದಿ ಕೆಲಸ ಮಾಡುವುದು ನಿಂತಿದೆ ಅಂತಲೇ ಅರ್ಥ. ನೂರಾರು ಜನರನ್ನು ಕೊಂದ ಕಸಬ್, ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಕಾಂಗ್ರೆಸಿಗೆ ಅಲ್ಪಸಂಖ್ಯಾತರ ಮತದ ಭಯ ಅನ್ನೋಣ, ಈ ವಿಷ್ಯದಲ್ಲಿ ಬಿಜೆಪಿಯವರು ಎಷ್ಟು ಹೋರಾಡಿದ್ದಾರೆ? ಎಷ್ಟು ಪ್ರತಿಭಟನೆ, ಚಳುವಳಿ, ಅಭಿಯಾನ ಮಾಡಿದ್ದಾರೆ? ಚುನಾವಣೆ ಬಂದಾಗ ಮಾತಾಡೋಕೆ ಒಂದು ವಿಷಯ ಬೇಕಲ್ಲ, ಹಾಗಂತಲೇ ಯತಾಸ್ಥಿತಿಯನ್ನು ಉಳಿಸಿಕೊಳ್ಳುವುದರಲ್ಲೇ ಇಬ್ಬರ ಹಿತವಿರುವುದು. ಅದನ್ನು ಅರ್ಥ ಮಾಡಿಕೊಳ್ಳಿ.

Praveen ಅಂತಾರೆ...

pradyumna ravare neevu tale kedisi kolla bedi. Eega tilidiruva satya andre, Enguru nijavagiyu kempu-haladiyavara palagide. rollcall maduva chaluvaligararannu bittare rastege bandu janarodane kelsa maduvavaru yaru illa. internetnetnalli blog bareyodu, comment madoddrashtu sulabha alla samajadalli kelsa madodu. Kuvempu helida hage: moorkha prashnege uttara koduvadakkinta summaniruvudu lesu.

Priyank ಅಂತಾರೆ...

ಬೇರೊಂದು ಗುಮ್ಮ ತೋರಿಸಿ, ಕನ್ನಡಿಗರನ್ನೇ ಮಂಗ ಮಾಡುವ ಕೆಲಸಾನ ಪ್ರವೀಣ್ ಅವರೂ ಮಾಡ್ತಿದಾರೆ.
ಪ್ರವೀಣ್ ಅವರ ನಿಲುವಿನಲ್ಲಿರೋ ದ್ವಂದ್ವ ನೋಡಿ, ಮುಸ್ಲಿಮರ ಆಡಳಿತ ಬಂದು ಉರ್ದುವನ್ನು ಎಲ್ಲರ ಮೇಲೆ ಹೇರಿದರೆ ತಪ್ಪು, ಇವರುಗಳು ಆಡಳಿತದಲ್ಲಿದ್ದು ಸಂಸ್ಕ್ರುತವನ್ನ ಅತವಾ ಹಿಂದಿಯನ್ನ ಎಲ್ಲಾರ ಮೇಲೂ ಹೇರಹೊರಟಿರೋದು ಸರಿ.
ಕನ್ನಡಿಗರು ತಮ್ಮದಲ್ಲದ ಹಿಂದಿಯನ್ನೂ, ಸಂಸ್ಕ್ರುತವನ್ನೂ ಮರುಮಾತಿಲ್ಲದೇ ಒಪ್ಪಿಕೊಳ್ಳಬೇಕು ಎಂಬಂತಿದೆ ಇವರ ವಿಚಾರ.

ಅರುಣ್ ಜಾವಗಲ್ ಅಂತಾರೆ...

RSS ನ ಸಿದ್ದಾಂತ/ನಿಲುವುಗಳು ಪ್ರಜಾಪ್ರಬುತ್ವ ವಿರೋದಿಯಾಗಿ ಇರುವುದನ್ನ ತುಂಬ ಚೆನ್ನಾಗಿ ವಿವರಿಸಿದ್ದಾರೆ. ಪ್ರಜಾಪ್ರಬುತ್ವದಲ್ಲಿ ನಂಬಿಕೆಯಿಲ್ಲದ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು! ಎಂಬುದು ನಿಜವಾದ ಮಾತು.

Ganesh ಅಂತಾರೆ...

The problem with the people who are in / with RSS is that they almost stop thinking once they get into the organization. I have found many such people from RSS background who have great intellect per se but when it comes to debating various issues close to their heart, they are just plain emotional and parrot what they have been trained in their camps (ITC / OTC). I do not know for what reason they stop thinking. They become close minded, they brand people who do not agree to their viewpoint as anti-nationals, anti-hindu, leftists, as people on the payroll of china or pakistan, etc, etc. It is very surprising to see people who are generally normal become close minded, undemocratic, anti-diversity once they get into the RSS fold.

Amarnath Shivashankar ಅಂತಾರೆ...

Excellent comment Ganesh. Why don't people sit and introspect as what is good and what is bad for Kannada?
RSS's stance about federal system and democracy has been clearly mentioned in their own book..
For any rational, sensible and open minded person who is concerned about safeguarding Kannada from the Hindi imposition or from Sanskritization, repercussions of their flawed ideology is very much visible.
They are absolutely scared as their flawed ideology is being exposed.Its naturally frustrating for them to see that the water-bubble which was projected as a real one has been burst through this though provoking article..

maaysa ಅಂತಾರೆ...

I was surprised by this article. I sincerely believed that Enguru is a wing of RSS.

As many argued from many years, Sanskrit is the main enemy of Kannada. Sanskrit is a parasite to Dravidian languages.

Is Enguru following Periyar? Karunanithi? Atheism? Communism? Anti-India? :D

Enguru, has anyone already sent you an email accusing you for working with the Vatican or Saudis? Wait.. you will get it.

Welcome to the club of Blasphemy :)

Anonymous ಅಂತಾರೆ...

Great writeup this. The penchant for an ideology has made people blind. They despise the very thought of people rising voice against racism, they despise the very thought of people questioning their reduction to second grade citizens, they despise the very thought of people going against them while they enjoy sitting somewhere in the universe controlling the existing democratic setup in Karnataka.

Who are these people?
What right have they got over us Kannadigas?
Who has given them those rights (if they are given any)?
Are they democratically elected?

I see no difference between British ruling us Kannadigas and RSS ruling us Kannadigas. Then it was Queen through East India Company, now it is RSS through BJP.

- Pramod

desimaatu ಅಂತಾರೆ...

ಕರ್ನಾಟಕದ ಸಂದರ್ಭದಲ್ಲಿ ಅತ್ಯಂತ ಅತ್ಯಗತ್ಯವಾಗಿದ್ದ ಲೇಖನ ಇದು. ಕನ್ನಡ-ಕನ್ನಡಿಗ-ಕರ್ನಾಟಕ ಕುರಿತು ಚಿಂತಿಸುತ್ತಿರುವ ಎಲ್ಲ ಕನ್ನಡಿಗರೂ ಓದಲೇಬೇಕಾದ ಲೇಖನ. ಬನವಾಸಿ ಬಳಗ ತೆಗೆದುಕೊಂಡ ಈ ನಿಲುವಿಗೆ ಅಭಿನಂದನೆಗಳು. ಆರ್ಎಸ್ಎಸ್ ಮತ್ತದರ ಘಟಕಗಳು ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಯನ್ನು ಧಿಕ್ಕರಿಸುತ್ತವೆ. ದೇಶವನ್ನು ಒಂದುಗೂಡಿಸುವರು ಇನ್ ಕ್ಲೂಸಿವ್ ಆಗಿ ಯೋಚಿಸಬೇಕೇ ಹೊರತು ಹೀಗೆ ಫ್ಯಾಸಿಸ್ಟ್ ಧೋರಣೆ ತಳೆಯಲಾರರು. ಈ ಅರ್ಥದಲ್ಲಿ ಆರ್ಎಸ್ಎಸ್ ನ ದೇಶಪ್ರೇಮವೂ ಲೊಳಲೊಟ್ಟೆಯೇ. ಏಕಸಂಸ್ಕೃತಿಯ ಹೇರಿಕೆಯ ಭಾರ ತಡೆಯಲಾಗದೆ ಈಶಾನ್ಯ ರಾಜ್ಯಗಳಲ್ಲಿನ ನೆಮ್ಮದಿಯೇ ಛಿದ್ರವಾಗಿದೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ತಳಮಳವನ್ನು ಎದುರಿಸುತ್ತಿವೆ. ಭಾರತ ಯಾವತ್ತಿಗೂ ಒಂದು ದೇಶವಾಗಿರಲಿಲ್ಲ. ಅದು ಹಲವು ರಾಜ್ಯಗಳ ಒಕ್ಕೂಟ. ರಾಜ್ಯಗಳನ್ನು (ಭಾಷಾವಾರು ಪ್ರಾಂತ್ಯಗಳನ್ನು) ನಿರಾಕರಿಸುವ ಚಿಂತನೆಗಳು ವಿಘಟನೆಗೆ ದಾರಿ ಮಾಡಿಕೊಡುತ್ತವೆಯಷ್ಟೆ. ಈ ಲೇಖನದಲ್ಲಿ ಎತ್ತಿರುವ ಎಲ್ಲ ಪ್ರಶ್ನೆಗಳೂ ಅತ್ಯಂತ ಸಮಂಜಸವಾಗಿವೆ. ಬಹುಶಃ ಇದಕ್ಕೆ ಸೋ ಕಾಲ್ಡ್ ಸಂಘದ ಬಳಿಯೂ ಯಾವ ಉತ್ತರವೂ ಇದ್ದಂತಿಲ್ಲ. (ಮೇಲಿನ ಕಮೆಂಟುಗಳನ್ನು ಗಮನಿಸಿದರೆ). ಒಂದೆಡೆ ಬಿಜೆಪಿ ಮುಖ್ಯಮಂತ್ರಿಗಳು ನಮ್ಮದು ಕನ್ನಡ ಸರ್ಕಾರ ಎಂದು ಘೋಷಿಸುತ್ತಾರೆ. ಮತ್ತೊಂದೆಡೆ ಸಂಘದ ಹಿಡನ್ ಅಜೆಂಡಾಗಳಿಗೆ ತಕ್ಕಂತೆ ಸಂಸ್ಕೃತ ವಿಶ್ವವಿದ್ಯಾಲಯದಂಥವು ಕನ್ನಡಿಗರ ಮೇಲೆ ಹೇರಿಕೆಯಾಗುತ್ತವೆ. ಹೀಗಾಗಿ ಪಕ್ಷವೂ, ಸಂಘವೂ ಅಪ್ರಾಮಾಣಿಕತೆಯಲ್ಲೇ ಮುಳುಗಿ ಹೋಗಿವೆ. ಲೇಖಕರು ಅಭಿಪ್ರಾಯಪಟ್ಟಂತೆ ಆರ್ಎಸ್ಎಸ್ ತನ್ನ ಸ್ವಂತ ರೂಪದಿಂದಲೇ ರಾಜಕಾರಣಕ್ಕೆ ಇಳಿಯುವುದು ಒಳ್ಳೆಯದು. ಈ ಅಂದರ್ ಬಾಹರ್ ಆಟಗಳನ್ನಾದರೂ ನಿಲ್ಲಿಸುವುದು ಒಳ್ಳೆಯದು. ಸದ್ಯಕ್ಕಂತೂ ಇಂಥ ಸಂಘವನ್ನು ಕನ್ನಡಪರರು ತಿರಸ್ಕರಿಸುವುದು ಎಲ್ಲ ರೀತಿಯಲ್ಲೂ ಶ್ರೇಯಸ್ಕರ. ಮತ್ತೊಮ್ಮೆ ಬಳಗಕ್ಕೆ ಅಭಿನಂದನೆಗಳು.

Chetan ಅಂತಾರೆ...

I commend Enguru for coming up with such a eye opening article. Whatever could be the argument of RSS supporters, I'm in tandem with Enguru's view. I think even after decades, RSS has not revisited its Ideology, to check whether it still holds good or makes any sense to the people. The misplaced priority given to language like Sanskrit & Hindi, does not make any good to hold Integrity of the Nation. Even hating people, based on religion is foolishness... As a Kannadiga, I would ask my RSS friends to come up with a program to make the Hindians to learn Kannada and show some respect towards the State. Instead my RSS friends are busy in hating Muslims and Christians for not speaking Kannada. I think its time we take this message to the society, to evolve a new system, where Kannada, Kannadiga and Karnataka are the first priority things.

Subhash Hathwar ಅಂತಾರೆ...

http://www.dnaindia.com/india/report_new-research-debunks-aryan-invasion-theory_1623744

1stu enguru arthamaadkobekaagiddu vignaana..!! aryan invasion theory sullu ... antha saari saari helo antaha samshodhanegalive...!!

-subhash hathwar

Subhash Hathwar ಅಂತಾರೆ...

naanu RSS nalli office bearer..!! shaakheyondara Mukhya.shikshak... kannadakke eshtra mattige ottu naavu kodtivi gotta??
market na maarwaadigalu ella kannada kalitidare..!!
IT industry awrge kannada kalistidivi...!!

see : http://emsreenu.blogspot.com/2011/11/kannada-parichay-varg-2012.html

idi benglurallli 1000 kade aa kannada varga maadtidivi..!

ee reeti field work nimkade inda aagtidya?? enguru.. enanteera??

Unknown ಅಂತಾರೆ...

"India holds incredible cultural diversity within its own borders that shapes the mindsets of Indain partners, vendors, employees and other key stakeholders. Foreign companies that understand and know how to work with India's internal dive...rsity are **more likely to be successful** in leveraging the country's economic potential" --- Bidhan Chandra in the book "Global diversity - Winning Customers and Engaging Employees within world markets" .......I hope RSS realises this sooner than later if it is genuinely interested in progress and prosperity of all Indians

karunadu ಅಂತಾರೆ...

enguru, avare sakathag bardidira bidi. illi yaaro eno heLudre, tale kedskobedi. namma kannadakke enu oLitho adanna maatra itkoLana, beredu beda. rss/hindu galanna kaapaduvikege bhaaratadalli bekadashtu mandi idare, aadre, karnataka mattu kannadada bagge bari naav maatra horadakke aagodu, bere yaaru baralla. nimma olle kelsa mundvarisi.
kannada taayige jai !

Unknown ಅಂತಾರೆ...

ಪ್ರದ್ಯುಮ್ನ ತಾವು ಹಿನ್ನಡವಳಿ(ಚರಿತ್ರೆ) ಮತ್ತೆ ಓದಬೇಕು ಅಂತ ಅನಿಸುತ್ತೆ.

"ಭಾರತದ ಇತಿಹಾಸದಲ್ಲಿ ಯಾವುದೇ ರಾಜ್ಯವು ಭಾಷೆಯ ಆಧಾರದಲ್ಲಿ ಅಸ್ತಿತ್ತ್ವಕ್ಕೆ ಬಂದ ಉದಾಹರಣೆಗಳಿಲ್ಲ. ಅಥವಾ ಭಾಷೆಯ ವೈಮನಸ್ಸಿನ್ನಿಂದ ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ದಾಳಿಯಿಟ್ಟ ನಿದರ್ಶನಗಳಿಲ್ಲ. ವಿವಿಧ ಭಾಷೆಗಳು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಇದ್ದವಲ್ಲ? ಆದರೂ ಏಕೆ ಭಾಷಾ ವಿವಾದ ಒಮ್ಮೆಯೂ ನಮಗೆ ಇತಿಹಾಸದಲ್ಲಿ ಕಾಣಬರುವುದಿಲ್ಲ"

’ಕವಿರಾಜಮಾರ್ಗ’ ದಿಂದ

ಕಾವೇರಿಯಿಂದಂ ಗೋದಾವರಿವರಂ
ಇರ್ಪ ನಾಡಾದ ಕನ್ನದದೊಳ್ ಭಾವಿಸಿದ
ಜನಪದ ಇದು ವಸುಧಾವಲಯ ವಿಶೇಶ ವಿಷಯ ವಿಶದಂ

ಅಂದರೆ ನಾಡು,ನುಡಿ, ಜನಪದ(ಜನಾಂಗ) ಇವೆಲ್ಲವೊ ಕನ್ನಡವೆ ..ಇದು ಕಾವೇರಿಯಿಂದ ಗೋದಾವರಿಯವರೆಗೆ ಇತ್ತು... ಇದು ಬಾಶೆ ಆದರಿತ ರಾಜಕಾರಣ ಅಲ್ಲವೆ.

ರಾಶ್ಟ್ರಕೂಟ, ಕದಂಬ, ಚಾಲುಕ್ಯ - ಇವೆಲ್ಲವೂ ಕನ್ನಡ ಅರಸು ಮನೆತನಗಳಲ್ಲವೆ?


ಚೋಳ, ಪಾಂಡ್ಯ, ಪಲ್ಲವ = ಇವು ತಮಿಳು ಮನೆತನಗಳಲ್ಲವೆ?

Anonymous ಅಂತಾರೆ...

ಮೈಸೂರು ಪಾಕ ಬಗ್ಗೆ ನೂರಾರು ಪುಸ್ತಕ ಓದಿ ಅದು ಹಾಗಿದೆ! ಇದು ಹೀಗಿದೆ! ಎಂದು ಬರೆಯುವದಕ್ಕಿಂತ ಒಂದು ತುಣುಕು ಬಾಯಲ್ಲಿ ಹಾಕಿಕೊಂಡರೆ ಎಷ್ಟು ಉತ್ತಮ!

ಆನಂದರವರೇ ದಯವಿಟ್ಟು ಸಂಘದ ಶಾಖೆಗೆ ಒಮ್ಮೆ ಬನ್ನಿ. ಬೆಂಗಳೂರು ಊರಲ್ಲಿ ಸುಮಾರು 80 ಕಡೆ ವಾರಾಂತ್ಯದಲ್ಲಿ ಶಾಖೆಗಳು ನಡೆಯುತ್ತವೆ. ಯಾವುದಾದರೂ ಒಂದಕ್ಕೆ ಭೆಟ್ಟಿ ಕೊಡಿ. ಸಂಘದಲ್ಲಿ ಯಾವುದೇ ರೀತಿಯ ಸದಸ್ಯತ್ವ ಅಥವಾ ನಿರ್ಬಂಧನೆ ಇಲ್ಲ. ಯಾರಾದರೂ ಕೂಡ ಬಂದು ಸಂಘದ ಶಾಖೆ ಸೇರಬಹುದು, ಮನಸಿಲ್ಲವೋ ಬಿಡಬಹುದು. ನಿಮಗೆ ಯಾವ ಒತ್ತಾಯವೂ ಇಲ್ಲ!

ಅದೇ ರೀತಿ ಬರುವ ಫೇಬ್ರುವರಿ 11 ಮತ್ತು 12ರಂದು ಬೆಂಗಳೂರಿನಲ್ಲಿ ನೂರಾರು ಕಡೆ ಕನ್ನಡ ಪರಿಚಯ ವರ್ಗಗಳನ್ನು ಪರಭಾಷಿಕರಿಗಾಗಿ ಆರ್.ಎಸ್.ಎಸ್. ನಡೆಸುತ್ತಿದೆ. ಸಾಧ್ಯವಾದಲ್ಲಿ, ಸಮಯವಿದ್ದಲ್ಲಿ, ಮನಸ್ಸಿದ್ದಲ್ಲಿ ಸಹಾಯ ಮಾಡಿ.

ನಿಮ್ಮ ಪ್ರೀತಿಯ,
ಗುರು, jaiguruji@gmail.com

Priyank ಅಂತಾರೆ...

ಇವರುಗಳು ಕನ್ನಡಿಗರ ಮೇಲೆ ಬೇರೆ ಬೇರೆ ನುಡಿಗಳನ್ನ ಹೇರಕ್ಕೆ ಸುಳ್ಳುಗಳ ಮೇಲೆ ಸುಳ್ಳು ಕಥೆ ಕಟ್ಟುತಾರೆ.
- ಹಿಂದಿ ಹೇರಕ್ಕೆ, ಹಿಂದಿ ನಮ್ಮ ರಾಷ್ಟ್ರಬಾಶೆ ಹಂಗಾಗಿ ಎಲ್ಲರೂ ಹಿಂದೀನ ಕಲೀರಿ ಅಂತಾರೆ. ಇದೊಂದು ಸುಳ್ಳು.
- ಎರಡನೇದು, ಸಂಸ್ಕ್ರುತ ಕನ್ನಡದ ತಾಯಿ. ಹಂಗಾಗಿ ಎಲ್ಲರೂ ಸಂಸ್ಕ್ರುತ ಕಲೀರಿ ಅಂತಾರೆ. ಇನ್ನೊಂದು ಸುಳ್ಳು.
ಕನ್ನಡಿಗರು ತಮ್ಮ ನುಡಿಯಲ್ಲೇ ಬದುಕೋದನ್ನ ಸಹಿಸಿಕೊಳ್ಳದು ಯಾಕೆ ಕಷ್ಟ ಆಗುತ್ತೆ ಇವರಿಗೆ?

maaysa ಅಂತಾರೆ...

"Also, there are many minority organizations in Karnataka which use URDU as primary mode of communication. "

They are minority. And they have right to use the language of their wish in their private organisations. Same benefits are enjoyed by Jains, Tulus, Konkanis, Sankethis, Telugus etc etc.. However they cannot demand to make that language as a official language of the state.

Now."ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು." people of which minority language of the state have made such a untruthful and insulting statement towards Kannada?
Does this imply people who do not accept Hindi have no self-respect or want integrity of the Indian union? Are we Kannada people not equal citizens?

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಹತ್ವಾರ ಅವರೇ,, ಕೊನೆ ಪಕ್ಷ ೬೪ ವರ್ಷ ಆದ ಮೇಲಾದರೂ ವಲಸಿಗರಿಗೆ ಕನ್ನಡ ಕಲಿಸಿ ಅವರನ್ನು ಕನ್ನಡದ ಮುಖ್ಯವಾಹಿನಿಗೆ ಸೇರಿಸಬೇಕು ಎಂದು ಆರ್.ಎಸ್.ಎಸ್ ಗೆ ಅನ್ನಿಸಿದೆಯಲ್ಲ, ಅದು ಕನ್ನಡಿಗರ ಪುಣ್ಯ ಮತ್ತು ಆ ವಿಷಯಕ್ಕೆ ಆರ್.ಎಸ್.ಎಸ್ ಗೆ ಅಭಿನಂದನೆಗಳು. ಇರಲಿ,ಈಗ ನೀವು ಮಾಡ್ತಿರೋ ಕನ್ನಡ ಕಲಿಸುವ ತರಬೇತಿ ಬಗ್ಗೆ ನೋಡಿದ ಮೇಲೆ ತಿಳಿದಿದ್ದು ಎರಡು ದಿನ ಹೇಳಿ ಕೊಡುವ ಯೋಚನೆ ಎಂದು. ಎರಡು ದಿನದಲ್ಲಿ ಯಾರಾದರೂ ಕನ್ನಡ ಕಲಿಯಬಲ್ಲರಾ ಅನ್ನುವ ಅನುಮಾನ ನನಗಿದೆ. ಅದರ ಬದಲು ವಿವೇಕಾನಂದ ಇಂಗ್ಲಿಶ್ ಕ್ಲಾಸಿನ ತರಹ ವರ್ಷವೆಲ್ಲವೂ ನಡೆಯುವ, ಫ್ರೆಂಚ್, ಜರ್ಮನ್ ಭಾಷಾ ತರಗತಿಗಳನ್ನು ಕಲಿಸುವ ಮಟ್ಟದ ವ್ಯವಸ್ಥೆಯುಳ್ಳ ವ್ಯವಸ್ಥೆಯನ್ನು ಕಲ್ಪಿಸಿರಿ. ಆಗ ಆ ಯೋಜನೆ ಫಲ ಕಂಡೀತು. ಇಲ್ಲದಿದ್ದರೆ ಬರೀ ಎರಡು ದಿನದ ಕಾರ್ಯಕ್ರಮ ಆರ್.ಎಸ್.ಎಸ್ ನ ಹಲ ಬೇರೆ ಕಾರ್ಯಕ್ರಮಗಳಂತೆ ಬರೀ ತೋರಿಕೆಯದ್ದಾಗಿ ಉಳಿಯಲಿದೆ.

ಗಣೇಶ್ ಅಂತಾರೆ...

ಮೊದಲನೆಯದಾಗಿ ನಾನು ಕನ್ನಡಿಗನಲ್ಲ, ನನ್ನ ಮಾತೃಭಾಷೆ ತುಳು. ಕರ್ನಾಟಕದಲ್ಲಿ ಕೊಡವ, ಕೊಂಕಣಿ, ತುಳು ಸೇರಿದಂತೆ ಹಲವು ಭಾಷೆಗಳ ಮೇಲೆ ಕನ್ನಡದ ದೌರ್ಜನ್ಯ, ತುಳುನಾಡಿನಲ್ಲಿ ಕನ್ನಡದ ಹೇರಿಕೆ ಇತ್ಯಾದಿ ಕಾರಣವಿಟ್ತು ನಾವೂ ಪ್ರತೇಕ ರಾಜ್ಯ ಕೇಳಬಹುದಿತ್ತು. ನಿಮ್ಮ ವಾದದಂತೆ ಭಾಷೆಯೊಂದೇ ರಾಜ್ಯಗಳ ವಿಂಗಡನೆಗೆ ಆಧಾರವಾದರೆ ತುಳುನಾಡು ಪ್ರತ್ಯೇಕವಾಗಬೇಕಿತ್ತು. ಅದೇ ರೀತಿ ಹಿಂದಿಯಾಡುವ ರಾಜ್ಯಗಳೆಲ್ಲಾ ಒಂದೇ ಆಗಬೇಕಿತ್ತು. ರಾಜ್ಯ ವಿಂಗಡನೆಗೆ ಭಾಷೆಯನ್ನೂ ಪರಿಗಣಿಸಿರುವುದು ಸರಿಯಿದೆ. ಆದರೆ ಸರಳ ಆಡಳಿತವೇ ಮುಖ್ಯ ಕಾರಣ.

ಹಿಂದಿನಿಂದಲೂ ಏನ್ ಗುರು ಓದುತ್ತಿರುವ ನನಗೆ ಇಂಗ್ಲಿಷ್ ದುಡ್ಡು ಕೊಡೋ ಭಾಷೆ, ಇಂಗ್ಲಿಷ್ ಮಾಧ್ಯಮ ಸರಿ; ಆದರೆ ಹಿಂದಿಯನ್ನು ಹೆಚ್ಚುವರಿ ಭಾಷೆಯಾಗಿ ಕಲಿಸುವುದು ತಪ್ಪು ಎನ್ನುವ ವಾದ ಸರಿಯೆನಿಸುತ್ತಿಲ್ಲ. ಹಿಂದಿ ಬಲ್ಲವರಿಗಷ್ಟೇ ಉದ್ಯೋಗ ಎನ್ನುವ ಹೇರಿಕೆ ತಪ್ಪು ಎಂಬುದನ್ನು ಒಪ್ಪುತ್ತೇನೆ. ಹಿಂದಿಯನ್ನು ಕಲಿಕಾ ಮಾಧ್ಯಮವಾಗಿ ಕಲಿಸುತ್ತಿಲ್ಲ, ಆದರೆ ಕರ್ನಾಟಕದಲ್ಲಿ ಇಲ್ಲಿಯೇ ಹುಟ್ಟಿದರೂ ಇಂಗ್ಲಿಷ್ ಮಾತ್ರವೇ ಬಲ್ಲವರಿದ್ದಾರೆ, ಅದು ಹೆಚ್ಚು ಮಾರಕ ಎಂಬುದು ನನ್ನ ಅನಿಸಿಕೆ. ಕನ್ನಡಿಗರು ಇಂಗ್ಲಿಶ್ ಪತ್ರಿಕೆ ಓದುತ್ತಾರೆ, ಹಿಂದಿ ಓದಲ್ಲ ಅಂತ ನೆನಪಿಡಿ.

ಕನ್ನಡ ಸಂಸ್ಕೃತದಿಂದ ಉಗಮವಾಗದಿದ್ದರೂ ಸಂಸ್ಕೃತರ ಪರಿಣಾಮ ಅಕ್ಷರಮಾಲೆ, ವ್ಯಾಕರಣ, ಶಬ್ಧಗಳಲ್ಲಿ ಸೇರಿಕೊಂಡಿರುವುದು ಸ್ಫಷ್ಟ. ಇದರಿಂದಾಗಿಯೇ ನನಗೆ ಮಲಯಾಳಂ, ತೆಲುಗು ಅರ್ಥ ಮಾಡಿಕೊಳ್ಳಲು ಸುಲಭವಾಯಿತು. ಸಂಸ್ಕೃತದಲ್ಲಿ ಅಪಾರ ಜ್ಜ್ಞಾನಭಂಡಾರವಿದ್ದು, ಅದನ್ನು ಉಳಿಸುವುದು, ಬೆಳೆಸುವುದು ಉತ್ತಮವೆಂದು ನನಗನಿಸಿದ್ದರಿಂದಲೇ ನನಗೆ ಸಂಸ್ಕೃತ ಇಷ್ಟವಾಗುತ್ತದೆ. ಕಲಿಕಾ ಮಾಧ್ಯಮವೇ ಸಂಸ್ಕೃತದಲ್ಲಿರುವುದನ್ನು ನಾನು ವಿರೋಧಿಸುತ್ತೇನೆ. ಆದರೆ ಕನ್ನಡ ಕಲಿತ ಮೇಲೆ ಅದನ್ನು ಕಲಿಯುವುದು ಖಂಡಿತಾ ತಪ್ಪಲ್ಲ. ಸಂಸ್ಕೃತ ವಿಶ್ವವಿದ್ಯಾಲಯ ಖಂಡಿತಾ ಬೇಕು.

ಗುರೂಜಿಯವರ ಸಾಹಿತ್ಯಗಳನ್ನು ನಾನು ಓದಿರಲಿಲ್ಲ. ನನಗಂತೂ ಇಲ್ಲಿ ಉಲ್ಲೇಖಿಸಿರುವ ಅಂಶಗಳು ಇಷ್ಟವಾಯಿತು.

ಅನ್ಯ ಭಾಷೆಯ ಸ್ವಯಂಸೇವಕರು ಕನ್ನಡ ಕಲಿಯಲು ಆರೆಸ್ಸೆಸ್ ಕನ್ನಡ ಪರಿಚಯ ವರ್ಗಗಳನ್ನು ಉಚಿತವಾಗಿ ನಡೆಸುತ್ತಿದೆ ಎಂಬುದು ತಿಳಿದಿರಲಿ.

ಇನ್ನು ಬಿಜೆಪಿ-ಆರೆಸ್ಸೆಸ್ ಬಗ್ಗೆ;

ಆರೆಸ್ಸೆಸ್ ಸಿದ್ಧಾಂತವನ್ನಾಧರಿಸಿ ಬಿಜೆಪಿಯೊಂದೇ ಅಲ್ಲ, ನೂರಾರು ಸಂಘಟನೆಗಳಿವೆ. ಆರೆಸ್ಸೆಸ್ ಸ್ವಯಂಸೇವಕರು ಸ್ಥಾಪಿಸಿದ ಸಂಘಟನೆ ಎಂಬುದೇ ಸಂಘ-ಬಿಜೆಪಿ ಸಂಬಂಧ. ಬಿಜೆಪಿಯಲ್ಲಿರುವ ಸ್ವಯಂಸೇವಕರಿಗೆ ಆರೆಸ್ಸೆಸ್ ಮಾರ್ಗದರ್ಶನ ಮಾಡುತ್ತದೆ, ಅವರು ಸಲಹೆ ಕೇಳಿದಾಗ ನೀಡುತ್ತದೆ. ಹಾಗಂತ ಎಲ್ಲಾ ಸಂಘಟನೆಗಳ ಕೆಲಸವನ್ನೂ ಸಂಘವೇ ಮಾಡಲಾಗುವುದಿಲ್ಲ ಎಂಬುದು ತಿಳಿದಿರಲಿ. ಸಂಘ ರಾಜಕೀಯಕ್ಕಿಳಿದರೆ ಈಗ ಸಂಘ, ಇನ್ನಿತರ ಸಂಘಟನೆಗಳು ಮಾಡುವ ಕೆಲಸವನ್ನು ಯಾರು ಮಾಡಬೇಕು?

ಅಂದ ಹಾಗೇ ಏನ್ ಗುರು ಯಾಕೆ ರಾಜಕೀಯಕ್ಕಿಳಿಯಬಾರದು?
ಗುರು ಶಬ್ಧ ಸಂಸ್ಕೃತದ್ದು, ದಯವಿಟ್ಟು ಬದಲಾಯಿಸಿ.

Subhash Hathwar ಅಂತಾರೆ...

http://emsreenu.blogspot.com/2011/11/kannada-parichay-varg-2012.html

iDi bengluralli 1000 kade ee kannada varga RSS maadtide..!

idakke kannada kalisuvavru beku...!!
neev yaaraadru horadteera???
idakke tayyarilla...!! illi kootkondu pollu abhimaana torsakke enoo kadme illa..!!

:P

1000 kade kannada shibiragalu.. ondondu kadenu kevala 10 mandi anya bhashikaru bandu kannada kaltru antitkoli...! minimum 10,000 jana kannada barderowru kannada kalta haagaagatte...!!!!!!

entha kannadaabhimanigaloo mechbeku..! "enguru" enanteera??

-subhash

Anonymous ಅಂತಾರೆ...

ಅಣ್ಣಪ್ಪಗೌಡರೇ, ಅಭಿನಂದನೆಗಾಗಿ ಧನ್ಯವಾದಗಳು!

ಕನ್ನಡ ಪರಿಚಯ ವರ್ಗ ಹೆಸರೇ ಹೇಳುವಂತೆ ಕನ್ನಡವನ್ನು ಬೇರೆಯವರಿಗೆ ಪರಿಚಯಿಸುವ ಉದ್ದೇಶ ಹೊಂದಿದೆ. ಎರಡು ದಿನದಲಿ ಕಲಿಸುವದು ಅಸಾಧ್ಯ ಎಂಬ ಮಿತಿ ಎಲ್ಲರಿಗೂ ತಿಳಿದಿರುವ ವಿಷಯ, ಇದನ್ನ ಮೊದಲೇ ಅರುಹಿಯೇ ವರ್ಗ ಹಮ್ಮಿಕೊಂಡಿದೆ.

ಹೆಚ್ಚಿನ ಆಸಕ್ತಿ ಇದ್ದವರಿಗೆ ಬೇರೆ ಕನ್ನಡ ಕಲಿಕಾ ಅವಕಾಶಗಳಿರುವಲ್ಲಿ ಜೋಡಿಸುವ ವಿಚಾರವಿದೆ. ತಾವೇನಾದರೂ ಈ ವಿಷಯದಲ್ಲಿ ಆಸಕ್ತಿ ಇದ್ದಲ್ಲಿ, ಬೇರೆಯವರಿಗೆ ಕನ್ನಡ ಕಲಿಸುವ ಅಭಿಲಾಷೆ ಇದ್ದಲ್ಲಿ ತಿಳಿಸಿ. ಒಟ್ಟಿಗೆ ಕೆಲಸ ಮಾಡೋಣ.

ನಿಮ್ಮ, ಗುರು, ಜೈಗುರುಜಿ@ಜಿಮೇಲ್.ಕಾಮ್

maaysa ಅಂತಾರೆ...

"ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!"

I agree with RSS in this case. A nation by definition is "A nation may refer to a community of people who share a common language, culture, ethnicity, and descent".

That is why India Union is often called a Supranation. As the constitution states. India is a union of states.

http://en.wikipedia.org/wiki/Supranational_union

However "ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು," is too personal, hence we have freedom things.

ಗಣೇಶ್ ಅಂತಾರೆ...

@ಗುರು ಅಣ್ಣಪ್ಪ ಗೌಡರಂತಹ ಅನೇಕ ಮಂದಿ ಇರ್ತಾರೆ. "ಅದರ ಬದಲು ವಿವೇಕಾನಂದ ಇಂಗ್ಲಿಶ್ ಕ್ಲಾಸಿನ ತರಹ ವರ್ಷವೆಲ್ಲವೂ ನಡೆಯುವ, ಫ್ರೆಂಚ್, ಜರ್ಮನ್ ಭಾಷಾ ತರಗತಿಗಳನ್ನು ಕಲಿಸುವ ಮಟ್ಟದ ವ್ಯವಸ್ಥೆಯುಳ್ಳ ವ್ಯವಸ್ಥೆಯನ್ನು ಕಲ್ಪಿಸಿರಿ." ಅಂತೆಲ್ಲ ಹೇಳಿದ್ರೆ ದೊಡ್ಡ ಕೆಲಸ ಆಯ್ತು ಅಂದ್ಕೊಳ್ತಾರೆ. ಸಂಘದ ಸ್ವಯಂಸೇವಕರು ತಮ್ಮ ಇತರೆಲ್ಲ ಟುವಟಿಕೆಗಳ ಜೊತೆ ಎರಡು ದಿನ ಇದಕ್ಕಾಗಿ ನೀಡುವುದು ಎಷ್ಟು ಕಷ್ಟ ಅಂತ ನನಗೊತ್ತು. ಬಹತೇಕ ಪ್ರತಿ ವಾರಾಂತ್ಯವೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುತ್ತಾರೆ. ನೀವೆಷ್ಟು ಜನರಿಗೆ ಹೇಳಿಕೊಟ್ರಿ ಅಂತ ಕೇಳಿದ್ರೆ ಉತ್ತರ ಇರಲ್ಲ.
ಯವುದೇ ಒಳ್ಳೆ ಕೆಲಸ ಮಾಡಿದ್ರೂ ಸರಿಯಾಗಿಲ್ಲ ಅನ್ನೋರು ತುಂಬಾ ಜನ ಇರ್ತಾರೆ. ಅಷ್ಟು ಮಾಡಿದ್ರಲ್ಲ ಅಂತ ಬೆನ್ನು ತಟ್ಟುವವರು ಕಡಿಮೆ.

KASHYAP ಅಂತಾರೆ...

ನೀವುಗಳು ಕಮ್ಮಿnisTರಿಗೂ ನಮಗೂ ಇರುವ ವ್ಯತ್ಯಾಸ ಇರುವುದೇನೆಂದರೆ,,, ನಾವು ದೇಶ ಹಾಗು ನಮ್ಮ ನಾಡು ಎರಡನ್ನೂ ಪ್ರೀತಿಸುತ್ತೇವೆ. ನೀವು ಬರೀ ನಮ್ಮ ನಾಡನ್ನೂ ಪ್ರೀತಿಸುತ್ತೀರಾ ಅಷ್ಟೆ. ಹಿಂದೆ ಮಹಾರಾಷ್ಟ್ರದ "ಬಾಲ್ ಠಾಕರೆ-ಗೆ" ಬಯ್ಯುವ ನೀವೂ ಅದೇ ರೀತಿ ವರ್ತಿಸುತ್ತಿದ್ದೀರಾ ಅನ್ನೊದನ್ನ ಮರೆಯಬೇಡಿ. (ಬಾಲ್ ಠಾಕರೆ-ಗೆ ಇರೊ ದೇಶಪ್ರೇಮ ನಿಮಗಿಲ್ಲಾ ಬಿಡೀ).
As,
'SACHIN TENDULKAR says he has a proud Maharashtrian but an Indian first, and that Mumbai belongs to everyone.'
http://ibnlive.in.com/news/talking-point-sena-vs-sachin-the-national-icon/105373-37.html
ನಮ್ಮದೂ SACHIN ರಂತೆಯೇ ತತ್ವ....

@Amarnath Shivashankar,,,
http://kpv2012.blogspot.com/
"Kannada Parichay Varg - 2012" ಬೇಜಾರು ಮಾಡಿಕೊಳ್ಳದೇ ಈ ಲಿಂಕ್-ಗೆ ಹೋಗಿ ಸ್ವಲ್ಪ ಓದಿ.

ನನ್ನ ಮಾತನ್ನು ನೋಡಿ ಖುರ್ಚಿಯಿಂದ ಕೆಳಗೆ ಬಿದ್ದು ನಕ್ಕುಬಿಟ್ಟ.... Amarnath Shivashankar "Kannada Parichay Varg" ಏನು ಕನ್ನಡ ವಿರೋದಿ ಚ್ಟುವಟಿಕೆಯೊ.... ನಮ್ಮ ಶಿಬಿರಕ್ಕೆ ಬನ್ನಿ. ಅಲ್ಲಿ ನಿಮ್ಮ ಕನ್ನಡ ಪ್ರೇಮವನ್ನು ತೋರಿಸಿ.
ಕಷ್ಟಪಟ್ಟವರ ದುಡ್ಡು ಕಷ್ಟದಲ್ಲಿರುವವರಿಗೆ ಸೇರೊ ತನಕ ನಾವು ಡಬ್ಬದಲ್ಲೇ ದುಡ್ಡಿಡೊದು ಸ್ವಾಮಿ.
ರಾಷ್ಟ್ರೋತನ ಪರಿಶತ್ತು ಸಂಗ್ರಹವಾದ ದುಡ್ಡನ್ನು ಯಾವುದಕ್ಕೆ ಬಳಕೆ ಮಾಡುತ್ತದೇ... ನಿಮ್ಮ ಪುಸ್ತಕಗಳ ಮಾರಾಟದಿಂದ ಬಂದ ಹಣವನ್ನ ನೀವು ಯಾವುದಕ್ಕೆ ಬಳಕೆಮಾಡುತ್ತೀರಾ! ಹೋಗಲಿಬಿಡಿ ಹೇಳೊದೇನು ಬೇಡ. ರಾಷ್ಟ್ರೋತನ ಪರಿಶತ್ತಿನಿಂದಲೂ ನಿಮ್ಮ ಕನ್ನಡ ಪ್ರೇಮ ಬೆಳೆಯಲು ಕಾರಣವಿರಬಹುದು ಅನ್ನೊದು ಮರೆಯಬೇಡಿ. ರಾಷ್ಟ್ರೋತನ ಪರಿಶತ್ತು ನಿಮ್ಮಹಾಗೆ marketing ಮಾಡ್ತಿಲ್ಲಾ ಯಾವ ಬ್ಲಾಗಲ್ಲೂ ಬರೆಯುತ್ತಿಲ್ಲಾ.

@ಅರುಣ್ ಜಾವಗಲ್:: JAILಗೆ ಹೋಗೊದೇನು ಬೇಡ,,, ಅಂತ ಕೆಲಸಕ್ಕೆ ಕೈ ಹಾಕಬೇಡಿ.

PRIYANK: ದೇಶ.. ಹಿಂದುತ್ವದ ಬಗ್ಗೆ ಮಾತಾಡೊರನೆಲ್ಲಾ ಕನ್ನಡ ವಿರೋದಿ ಅನ್ನೂರು ನೀವೆಲ್ಲಾ. EUROPE-ನಂತೆ ನಮ್ಮ ದೇಶ ಒಡೆದುಹೋದರೆ ನಿಮಗೆಲ್ಲಾ ಸಂತೋಷ. ಮೊದಲು ಕರ್ನಾಟಕದ ಕೇಂದ್ರ ಸರ್ಕಾರ ಸಂಸ್ಥೆಗಳಲ್ಲಿ ರೊಲ್-ಕಾಲ್ ಮಾಡುತ್ತಿರುವ ನಮ್ಮ ನಾಡಲ್ಲಿರುವ ಡೋಂಗಿ ಕನ್ನಡ ಚ್ಳುವಳಿಗಾರರ ಬಗ್ಗೆ ಬರೆಯಿರಿ. ಜನ ಸ್ವಲ್ಪ ಅದರ ಬಗ್ಗೆನೂ ತಿಳಿದುಕೊಳ್ಳಲೀ.


"ತಲೆ ಇದ್ದರೆ ಪೇಟ... ದೇಶ ಇದ್ದರೇ ನಮ್ಮ ನಾಡು"
|| ಜೈ ಹಿಂದ್ ||
|| ಜೈ ಕರ್ನಾಟಕ ಮಾತೆ ||

Anonymous ಅಂತಾರೆ...

ಮೈಸೂರು ಪಾಕ ಬಗ್ಗೆ ನೂರಾರು ಪುಸ್ತಕ ಓದಿ.......(anonymous)
kannada kalisOdu oLLEdu...
Adre avara siddhaantave okkUTakke viruddhavaagideyalla?
mysore paar maaDuvavarE sariyaagi maadadiddare adara ruchi hegiratte?

Bhaskara ಅಂತಾರೆ...

ನನ್ನ ಸಣ್ಣ ಪ್ರಶ್ನೆ: ಇಲ್ಲಿ ಬಾಯಿಗೆ ಬಂದ ಹಾಗೆ ಮಾತಾಡುವ ಜನ ಕನ್ನಡಕ್ಕಾಗಿ ಏನು ಮಾಡಿದ್ದಾರೆ ಮತ್ತು ಏನು ಮಾಡುತ್ತಾ ಇದ್ದಾರೆ? ದಿನಕ್ಕೆ ೨೪ ಗಂಟೆ ಕಂಪ್ಯೂಟರ್ ಮುಂದೆ ಕೂತು ಬ್ಲಾಗ್ ಮಾಡಿದರೆ ಸಾಕಾ? ಅಥವಾ ಕರವೇ ತರಹ ನವೆಂಬರ್‌ನಲ್ಲಿ ರೋಲ್‍ಕಾಲ್ ಮಾಡಿ ರಾಜ್ಯೋತ್ಸವ ಮಾಡಿದರೆ ಸಾಕಾ? ಯಾಕೆ ಕರವೇಯು ಸ್ಥಾಪನೆಗೊಂಡ ೩-೪ ವರ್ಷದಲ್ಲೇ ೫-೬ ಭಾಗಗಳಾಗಿ ರಸ್ತೆಯಲ್ಲಿ ಕಿತ್ತಾಡುತ್ತಿದ್ದಾರೆ? ಕನ್ನಡಕ್ಕಾಗಿ ಕಿರುಚಾಡುವ ಬ್ಲಾಗ್ ವೀರರು ಯಾಕೆ ರಸ್ತೆಯಲ್ಲಿ ಇಳಿಯುತ್ತಿಲ್ಲ. ಕನ್ನಡ ಕಲಿಸುವ ಕೆಲಸ ಸುಲಭವಲ್ಲ. ಅದನ್ನು ಆರ್.ಎಸ್.ಎಸ್ ಮಾಡುತ್ತಿರುವುದು ಕನ್ನಡಾಭಿಮಾನಿಯಾದ ನನಗೆ ತುಂಬ ಸಂತೋಷವಾಗುತ್ತಿದೆ.

ಯಾರಾದರಾಗಲೀ, ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದ ಮೇಲೆ ಏಕೆ ಇವರು ಸಹಕಾರ ಮತ್ತು ಉಪಕಾರ ಮಾಡುತ್ತಿಲ್ಲಾ? ದೇಶ, ರಾಜ್ಯ, ರಾಷ್ಟ್ರ ಇವುಗಳ ಸಂಬಂಧ ಮತ್ತು ವ್ಯತ್ಯಾಸಗಳನ್ನು ಅರಿಯದ ಮೂರ್ಖರ ಕಾರಣಗಳಿಂದಾಗಿಯೇ ನಾವು ೧೦೦೦ ವರ್ಷ ದಾಸರಾಗಿದ್ದೆವೆಂಬುದು ತಿಳಿಯಬೇಕು.

ಸುಭಾಷ್ ಹತ್ವಾರ್ ಮಾತ್ತು ಇತರರು ಸರಿಯಾಗಿಯೇ ಹೇಳಿದ್ದಾರೆ. ನಾನೂ ಕೂಡಾ ಮೊದಲು ಆರ್.ಎಸ್.ಎಸ್. ಬಗ್ಗೆ ಅಣ್ಣಪ್ಪ ನಂತಹವರು ಬರೆದಿದ್ದನ್ನು ಓದಿ ತಪ್ಪು ತಿಳಿದಿದ್ದೆ. ನನ್ನ ಅಪಾರ್ಟ್‍ಮೆಂಟಿಗೂ ಆರ್.ಎಸ್.ಎಸ್. ಸ್ವಯಂಸೇವಕರು ಬಂದಿದ್ದರು. ಅವರ ಕಾರ್ಯ ನೋಡಿ ನಾನು ಬಹಳ ಆಸಕ್ತಿಯಿಂದ ಅವರ ಜೊತೆ ಈ ಕಾರ್ಯದಲ್ಲಿ ಸೇರಲು ನಿರ್ಧರಿಸಿದ್ದೇನೆ.

ಅವರ ಶಾಖೆಗೆ ಹೋಗುವುದು ಬಿಡುವುದು ನನಗೆ ಬಿಟ್ಟದ್ದು. ಆದರೆ ಕನ್ನಡ ಕಲಿಸುವ ಈ ಯಜ್ಞಕ್ಕೆ ನನ್ನ ಸಹಕಾರ ಇದೆ.

ಅಣ್ಣಪ್ಪ, ನೀವು ಯಾಕೆ ಫೆಬ್ರವರಿ ೧೧ ಮತ್ತು ೧೨ ರಂದು ಬಂದು ಈ ಕಾರ್ಯದಲ್ಲಿ ಕೈಜೋಡಿಸಬಾರದು?

http://emsreenu.blogspot.in/2011/11/kannada-parichay-varg-2012.html

Kindly mail with headline: Kannada Parichaya to sreenu.m@gmail.com

Bhaskara ಅಂತಾರೆ...

ಇನ್ನೊಂದು ಮಾತು. ಆರ್.ಎಸ್.ಎಸ್. ನವರು ನಮ್ಮ ಮನೆಗೆ ಬಂದು ಹೋದ ನಂತರ ನಾನು ರಾಷ್ಟ್ರೋತ್ಥಾನ ಪರಿಷತ್‍ಗೆ ಭೇಟಿ ಕೊಟ್ಟಿದ್ದೆ. ಚಾಮರಾಜಪೇಟೆಯ ಉಮಾ ಟಾಕೀಸಿನ ಪಕ್ಕದ ರಸ್ತೆಯಲ್ಲೇ ಇದೆ. ಕನ್ನಡಾಭಿಮಾನಿಗಳೆಲ್ಲರೂ ಅಲ್ಲಿಗೆ ಹೋಗಲೇಬೇಕು. ಎಂಥ ವಾತಾವರಣ! ಶೇ. ೯೫% ಪುಸ್ತಕಗಳು ಕನ್ನಡದಲ್ಲೇ ಇವೆ. ಕನ್ನಡ, ಭಾರತಕ್ಕಾಗಿ ಹೋರಾಡಿದ ಮಹನೀಯರ ಪುಸ್ತಕಗಳು ಇವೆ. ನಾವು ಸಣ್ಣವರಾಗಿದ್ದಾಗ ಓದಿದ ಭಾರತ ಭಾರತಿ ಪುಸ್ತಕಗಳನ್ನು ಕೊಂಡು ತಂದಿದ್ದೇನೆ. ನನ್ನ ಮಾಕ್ಕಳಿಗಾಗಿ. ಹೋಗಿ ಬನ್ನಿ. ಸಂತೋಷ ಪಡುತ್ತೀರ!

Keshava ಅಂತಾರೆ...

ಫೆಬ್ರುವರಿ ತಿಂಗಳ ಮೊದಲ ತ್ರಿದಿನಗಳ ಕಾಲ ( ೧, ೨, ೩) ಪ್ರತಿದಿನ ಸಂಜೆ ೬.೪೫ ರಿ0ದ ಒಂದು ಗಂಟೆ "ಸ್ವಾಮಿ ವಿವೇಕಾನಂದರ ಜೀವನ ಸಾಧನೆ" ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾ. ಸ್ವ. ಸಂಘದ ಹಿರಿಯ ಪ್ರಚಾರಕರಾದ ಮಾ|| ಕೃ. ಸೂರ್ಯನಾರಾಯಣ ರಾವ್ ಅವರು ಈ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಸಹೃದಯಿಗಳು ಬಂದು ನೋಡಿ. ಸಂಘವನ್ನು ಕನ್ನಡದ ವಿರೋಧಿ ಎಂದು ಬಿಂಬಿಸಿರುವ ಅಣ್ಣಪ್ಪರಂತಹ ಸಂಕುಚಿತ ಮನೋಭಾವದವರು ನಾಚಬೇಕಾದಾಂತಹ ಸ್ಥಿತಿ ಬಂದೀತು!

Ravi Savkar ಅಂತಾರೆ...

RSS ನವರ ನಿಲುವಿನಲ್ಲಿರುವ ದೋಷಗಳನ್ನು ಈ ಬರಹ ಚೆನ್ನಾಗಿ ತೋರಿಸಿ ಕೊಡುತ್ತದೆ.
@ಸುಭಾಷ್ ಹತ್ವಾರ್: ಕನ್ನಡ ವರ್ಗ ೧೦೦೦ ಕಡೆ ಮಾಡ್ತಾ ಇದೀವಿ ಅಂತ ಹೇಳ್ತೀರಾ. ಒಳ್ಳೆಯದು. ನಿಮಗೆ ಅಭಿನಂದನೆಗಳು. ಹಾಗಂತ ಬೇರೆಯವರು ಮಾಡುವ ಚಿಂತನೆಗಳನ್ನು/ಕೆಲಸಗಳನ್ನು ಪೊಳ್ಳುತನ ಎಂದು ಕರೆಯುವ ಹಕ್ಕು ನಿಮಗಿಲ್ಲ. ಇಲ್ಲಿ ಹೇಳಿರುವ ವಿಚಾರದ ಬಗ್ಗೆ ಚರ್ಚೆ ಮಾಡದೆ ವೈಯ್ಯಕ್ತಿಕವಾದ ಟೀಕೆ ತರವಲ್ಲ.

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ರಾಷ್ಟ್ರೋತ್ತಾನ ಪರಿಷತ್ತಿನ ಪ್ರಾಮಾಣಿಕತೆ ಬಗ್ಗೆ ಪುಂಗ್ತಾ ಇರುವ ಕಶ್ಯಪ್ ಅವರು ಒಮ್ಮೆ ಈ ಕೊಂಡಿ ನೋಡಿದ್ರೆ ಒಳ್ಳೆಯದು:
How Sangh Parivar benefitted from Yeddyurappa's land largesse
http://indiatoday.intoday.in/story/karnataka-land-scam-b.-s.-yeddyurappa-rss-bjp/1/158133.html

ಪ್ರದ್ಯುಮ್ನ ಬೆಳವಾಡಿ ಅಂತಾರೆ...

ಸಂಘದ ಕೆಲವು ವಿಚಾರಗಳು ಅನೇಕರಿಗೆ ಇಷ್ಟವಾಗದಿರಬಹುದು. ಹಾಗೆಯೇ ಎನ್‍ಗುರುವಿನ ಕೆಲವು ವಿಚಾರಗಳು ಅನೇಕರಿಗೆ (ನನ್ನನ್ನೂ ಸೇರಿ) ಸರಿ ಕಾಣಿಸದಿರಬಹುದು. ಹಾಗಂತ ನಾವು ಒಬ್ಬೊಬ್ಬರನ್ನು ದೂರವಿಡುವ ಬದಲು, ಭೇದಗಳ ಮಧ್ಯೆಯೂ ಒಗ್ಗಟ್ಟಿನಿಂದ ಯಾವ ವಿಷಯದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬಹುದೋ ನೋಡೋಣ. ಕರ್ನಾಟಕದಲ್ಲಿ ಸಂಘ ಮತ್ತು ಏನ್‍ಗುರುವಿನ ಅಭಿಮಾನಿಗಳಿಗೆ ಇರುವ ಆ ಸಾಮ್ಯತೆ ’ಕನ್ನಡ’. (ಇದೇ ಸಂಘ ತಮಿಳು ನಾಡಿನಲ್ಲಿ ತಮಿಳಿಗಾಗಿ, ಆಂಧ್ರದಲ್ಲಿ ತೆಲುಗಿಗಾಗಿ ಕೆಲಸ ಮಾಡುತ್ತದೆ, ನೆನಪಿರಲಿ!) ಹಾಗಾಗಿ ಆ ಕೆಲಸಕ್ಕೆ ಒಟ್ಟಾಗಿ ಕೆಲಸ ಮಾಡೋಣ. ಭಿನ್ನತೆಯಲ್ಲಿಯೇ ಸಾಮ್ಯತೆಯನ್ನು ಕಂಡು ಕೆಲಸ ಮಾಡುವುದೇ ನಮ್ಮ ಉದ್ದೇಶ. ಆಸಕ್ತಿ ಇರುವವರು ಸಂಪರ್ಕಿಸಿ.

ಗಣೇಶ್ ಅಂತಾರೆ...

@ಅಣ್ಣಪ್ಪ ಗೌಡ. ಸೇವಾ ಸಂಸ್ಥೆಗಳಿಗೆ ಕಡಿಮೆ ದರದಲ್ಲಿ ಜಾಗ ನೀಡುವುದು ತಪ್ಪೇನಲ್ಲ. ರಾಷ್ಟ್ರೋತ್ಥಾನದವರು ನಡೆಸುವ ಅರೋಗ್ಯ, ಶಿಕ್ಷಣ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತವೆ. ಇಂತಹ ಕಾರ್ಯಗಳಿಗೆ ದೇಣಿಗೆ ಮೂಲಕ ಹಣ ಸಂಗ್ರಹ ಮಾಡಬೇಕಾಗುತ್ತದೆ. ಸರಕಾರ ಅವರಿಗೂ ಸಹಾಯ ಮಾಡಬಾರದೆಂಬ ಇಂಡಿಯಾ ಟುಡೆಯವರ ಲಾಜಿಕ್ ಅರ್ಥಹೀನ. ಅಥವಾ ಅಣ್ಣಪ್ಪ ಗೌಡರು/ಅರವಿಂದ ಗೌಡರು ಸಾಹಷ್ಟು ದೇಣಿಗೆ ನೀಡಿ ಸರಕಾರದ ಸಹಕಾರವಿಲ್ಲದೇ ನಡೆಸುವಂತೆ ಮಾಡಿದರೆ ಗ್ರೇಟ್. "Though there is no illegality in allotting prime land to these organisations..." ಅಂತ ಆ ಲೇಖನದಲ್ಲೇ ಹೇಳಿದ್ದಾರೆ ಗಮನಿಸಿ. ಸರಕಾರದಿಂದ ಸ್ವಲ್ಪವೂ ಜಾಗ ಪಡೆಯದ ಹಿಂದು ಜಾಗರಣ ವೇದಿಕೆಯವರ ಹೆಸರು ಸೇರಿಸಿದ್ದಕ್ಕಾಗಿ ಆ ಲೇಖನ ವಿರುದ್ಧ ಈಗಾಗಲೇ ಕೇಸು ದಾಖಲಾಗಿದೆ. ಅದರಲ್ಲಿ ಉಲ್ಲೇಖಿಸಿದ ಅನೇಕ ಹೆಸರುಗಳು ಸಂಘದವರೇ ಅಲ್ಲ. ಮಲ್ಲಿಕಾ ಪ್ರಸಾದ್ ಗಂಡ ಪ್ರಚಾರಕ್ ಅಂತ ಬರೆದಿದ್ದಾರೆ. ಪ್ರಚಾರಕರು ಮದುವೆಯೇ ಆಗುವುದಿಲ್ಲ. ಮಲ್ಲಿಕಾ ಪ್ರಸಾದ್ MLA ಆಗಿರುವುದರಿಂದ ಮಂಜೂರು ಆದ ಜಾಗವನ್ನು ಅವರ ಗಂಡ ಪ್ರಚಾರಕ್ ಆಗಿದ್ದಕ್ಕೆ ನೀಡುತ್ತಾರೆ ಅಂತ ಬರೆದಿದ್ದಾರೆ!
ಅಂತ ಲೇಖನಗಳನ್ನು ಬರೆದು ಸಂಘದ ವಿರುದ್ಧ ದ್ವೇಷ ಸಾಧಿಸುವವರು ಒಂದೆಡೆ, ಅದರ ಲಿಂಕ್ ನೀಡಿ ನಮ್ಮನ್ನು ಯಾಮಾರಿಸುವವರು ಒಂದೆಡೆ. ಇವರಿಕೆ ಒಳ್ಳೆ ಕೆಲಸ ಮಾಡುವವರನ್ನು ನೋಡಿದ್ರೆ ಆಗಲ್ಲ.
ರಾಷ್ಟೋತ್ಥಾನಕ್ಕೆ ಜಾಗ ನೀಡಿದ್ದು ನಂಗಂತೂ ಸಂತೋಷವಾಗಿದೆ. ಬಿಜೆಪಿ ಬಗ್ಗೆಈ ವಿಷಯದಲ್ಲಿ ಹೆಮ್ಮೆಯಿದೆ.

Priyank ಅಂತಾರೆ...

ಕಶ್ಯಪ್ ಅವರೇ,
ಹಿಂದುತ್ವದ ಬಗ್ಗೆ ಮಾತಾಡೋರೆಲ್ಲಾ ಕನ್ನಡ ವಿರೋದಿ ಅಂತ ನಾನು ಎಲ್ಲಿ ಹೇಳಿದ್ದು? ನನ್ನ ಬಾಯಿಗೆ ನಿಮ್ಮ ಮನಸ್ಸಿನಲ್ಲಿರೋ ಮಾತನ್ನು ತುರುಕ್ತಿದೀರಲ್ಲಾ !!
ಕನ್ನಡಿಗರ ಮೇಲೆ ಇತರೆ ಬಾಶೆಗಳ ಹೇರಿಕೆ ಮಾಡಬಯಸುವವರು ಹೇಳುವ ಸುಳ್ಳುಗಳನ್ನು ತೋರಿಸಿದೀನಿ.
ಸುಳ್ಳುಗಳನ್ನ ಸುಳ್ಳು ಎಂದು ಒಪ್ಪಿಕೊಳ್ಳಲು ನಿಮಗೆ ಸಾದ್ಯವಾಗಲಿಲ್ಲವಾ?

Chethan ಅಂತಾರೆ...

en guru, sakattage gimic madiddeera...

RSS bagge baredre pukkate prachara alva...

tumba jana ee prayatna madidare adre RSS na prabhava kuggisodakke yarindanu agilla, nimma vyatha prayatnakke shubha kamane galu...

Jai hind,
Jai Karnataka...

Priyank ಅಂತಾರೆ...

ಭಾಸ್ಕರ, ಗಣೇಶ ಮತ್ತು ಜೈಗುರುಜಿ ಅವರು ಆರ್.ಎಸ್.ಎಸ್. ಮಾಡುತ್ತಿರುವ ಕನ್ನಡಪರ ಕೆಲಸಗಳನ್ನ ಎತ್ತಿ ಹೇಳುತ್ತಿದಾರೆ.
ಮೊದಲೇ ಹೇಳಿಬಿಡ್ತೀನಿ "ಈ ಎಲ್ಲಾ ಕೆಲಸಗಳನ್ನು ನಾನು ಗೌರವದಿಂದಲೇ ನೋಡ್ತಿದೀನಿ".

ಈ ವಿಷಯಗಳ ಬಗ್ಗೆ, ಆರ್.ಎಸ್.ಎಸ್ಸಿನ ಕಾರ್ಯಕರ್ತರಾದ ಭಾಸ್ಕರ, ಗಣೇಶ ಮತ್ತು ಜೈಗುರುಜಿ ಅವರು ಒಮ್ಮೆ ಆಲೋಚಿಸಿದರೆ ಒಳಿತು.
೧. ಜನರು ತಮ್ಮನ್ನು ತಾವು ಆಳಿಕೊಳ್ಳುವುದೇ ಸಂಪೂರ್ಣ ಸ್ವಾತಂತ್ರ್ಯ. ಹಾಗಿದ್ದರೂ, ಆರ್.ಎಸ್.ಎಸ್. ವಿಕೇಂದ್ರೀಕರಣದ ವಿರುದ್ಧ ಯಾಕಿದೆ? ನಮ್ಮಲ್ಲಿ ಇರುವ ಫೆಡೆರಲ್ (ಒಕ್ಕೂಟದ) ಏರ್ಪಾಡನ್ನು ಸಡಿಲಗೊಳಿಸುವ ಕೆಲಸ ಆರ್.ಎಸ್.ಎಸ್. ಯಾಕೆ ಮಾಡುತ್ತಿದೆ?
೨. ಎಲ್ಲರೂ ಸಮಾನರು ಎಂದು ಹೇಳಿಕೊಳ್ಳುವಾಗ, ಹಿಂದಿಗೆ (ಮುಂದೊಂದು ದಿನ ಸಂಸ್ಕ್ರುತಕ್ಕೆ) ರಾಷ್ಟ್ರಬಾಶೆಯೆಂಬ ಕಿರೀಟ ಕೂರಿಸಬೇಕು ಎಂಬ ಮನಸ್ತಿತಿ ಆರ್.ಎಸ್.ಎಸ್ಸಿನಲ್ಲಿ ಯಾಕಿದೆ?
೩. ಕೇಂದ್ರ ಸರಕಾರ ನಡೆಸುವ ಹಲವಾರು ಸಂಸ್ಥೆಗಳಲ್ಲಿ, ಹಿಂದಿ ಗೊತ್ತಿದ್ದರೆ ಮಾತ್ರ ಕೆಲಸ ಎನ್ನಲಾಗುತ್ತಿದೆ. ನಿಜಕ್ಕೂ ನಾಡಿನ ಎಲ್ಲಾ ಬಾಷೆಗಳ ಪರ (ಕನ್ನಡ, ತಮಿಳು, ತೆಲುಗು, ಮಲಯಾಳ,...) ಆಗಿದ್ದರೆ, ಇಷ್ಟೊತ್ತಿಗೆ ಈ ವಿಷಯದ ವಿರುದ್ದ ಒಂದಾದರೂ ಅಬಿಯಾನ ನಡೆಯಬೇಕಿತ್ತು. ಯಾಕೆ ನಡೆದಿಲ್ಲ?

ಭಾಸ್ಕರ ಅವರು ಆರ್.ಎಸ್.ಎಸ್ಸಿನ ಕೆಲಸಗಳ ಬಗ್ಗೆ ಹೇಳಿಕೊಳ್ಳುವ ಭರದಲ್ಲಿ, ಇತರೆ ಸಂಸ್ಥೆಗಳು "ಏನೂ ಮಾಡಿಲ್ಲ" ಎಂಬ ತೀರ್ಪನ್ನಿತ್ತಿದಾರೆ. ನಾನು ಮೇಲೆ ಹೇಳಿದ ಮೂರು ಮುಖ್ಯ ವಿಷಯಗಳ ಬಗೆಗೆ, ಕಳೆದ ಕೆಲವು ವರ್ಷಗಳಿಂದಾ ಹೋರಾಟ ನಡೆಸಿಕೊಂಡು ಬಂದಿರುವ ಸಂಸ್ಥೆ ಕ.ರ.ವೇ ಎಂಬುದು ಭಾಸ್ಕರ ಅವರಿಗೆ ಗೊತ್ತಿರುತ್ತೆ ಎಂದು ನಂಬಿದೀನಿ.

ಮಧು ಭಟ್ ಅಂತಾರೆ...

ಮೊದಲಿಗೆ ಇಲ್ಲಿ ಕಟ್ಟಾ ಬೆಂಬಲಿಗರು ತಮ್ಮ ಸಂಸ್ಥೆಯ ಕೆಲಸ ಕಾರ್ಯಗಳನ್ನು ಬೆಂಬಲಿಸುತ್ತ , ಮತ್ತೆ ಮತ್ತೆ ತರುತ್ತ ಇಲ್ಲ ವಾದ ಮಾಡುವ ಪರಿ ೨ ರೀತಿಯಲ್ಲಿ ಇದೆ
೧. ಬ್ರಾಂಡ್ ಮಾಡು - ಜಗತ್ತಿನಲ್ಲಿ ಯಾರೇ ನಮ್ಮ ವಿರುದ್ಧ ಬರೆದರೂ ಅವರೂ ಎಡವರ್ಗದವರು , ಕೆಂಪಿನ ಗುಲಾಮರು. ಇದಕ್ಕೆ ಹಿಂದಿನಿಂದಲೂ ಬಂದಿರುವ ಕಾರಣಗಳು ಇರಬಹುದು, ಆದರೆ ಈ ಕುರುಡು ಕಣ್ಣಿನಿಂದ ನೋಡಿದಾಗ ಯಾರು ಎನು ಹೇಳುತ್ತ ಇದ್ದಾರೆ, ತಪ್ಪು ತಿದ್ದುವರನ್ನು ಹತ್ತಿಕ್ಕುವ ಪ್ರಯತ್ನ ಕಾಣುತ್ತದೆ. ಎಡವರ್ಗವನ್ನು ಅವಹೇಳನ ಮಾಡುವ ಅನೇಕ ಸರಕು ಇಗಾಗಲೇ ದೊರಕಿರುವ ಕಾರಣ, ಎಲ್ಲರನ್ನು ಹಾಗೇ ಬ್ರಾಂಡ್ ಮಾಡಿ ವ್ಯಯಕ್ತಿಕ ಹಲ್ಲೆ ಮಾಡುವ ಇದು ಶಿಸ್ತಿನ ಸಂಘಟನೆಯ ಸಿಪಾಯಿಗಳ್ಖ ಕೆಲಸ ಶೋಭಾಮಾನವಲ್ಲ.

೨. ವಿಶ್ಯ ಪಲ್ಲಟ ;- ಇನ್ನೂ ಆರ್ ಎಸ್ ಎಸ್ ಇದು ಮಾಡಿದೆ, ಅದು ಮಾಡಿದೆ ಎಂದು ಹೇಳಿದ ಮಾತ್ರಕ್ಕೆ ಅವರೇನು ಮಡಿಹಸು(holy cow) ಅಲ್ಲ. ಯಾರು ಅವರನ್ನು ಪ್ರಶ್ನೆ ಮಾಡಬಾರದು, ಮಾಡಿದರೆ ಮೊದಲು ಬೇರೆ ಅಂದರೆ KFD, Benny Hin Missionary ಇಂತವರನ್ನು ಮಾಡಿ ಆಮೇಲೆ RSS ವಿಶಯಕ್ಕೆ ಬರಬೇಕು. ಆ ಕೆಲ್ಸ ನೋಡಿ, ಈ ಕೆಲ್ಸ ನೋಡಿ ಅಲ್ಲಿ ಬನ್ನಿ, ಇಲ್ಲಿ ಬನ್ನಿ , ಆರ್. ಎಸ್ ಎಸ್ ಬಗ್ಗೆ ಆ ಭಾವನೆ ಬರುತ್ತದೆ ಎನ್ನುವ ಕಾರ್ಯಕರ್ತರು ಗುರೂಜೀ ಬರೆದ ಚಿಂತನಾಗಂಗವನ್ನು ಮುಂದಿನ ಸಾರಿ ಅವರು ಹೇಳಿದ ಕಚೇರಿಗೆ ಹೋಗಿ, ಕೊಂಡುಕೊಂಡು ಓದಿದರೆ ಇಲ್ಲಿ ಚರ್ಚೆ ಉತ್ತಮ ಆಗುತ್ತದೆ.

ಇಲ್ಲಿ ಚರ್ಚೆ ಮಾಡುವ ಅನೇಕರಿಗೆ RSS,ಬೈಟಕ್,ಶಾಖೆ ಹೊಸತಲ್ಲ.ಅದ್ದರಿಂದ ಅದರ ಬಗ್ಗೆ ಚರ್ಚೆ ಅನವಶ್ಯ.

ಇವತ್ತು ಗುರೂಜೀ ಇದ್ದಿದ್ದರೆ ಕಂಡಿತಾ ಇಂತಹ ಬಾಲಿಶ ಉತ್ತರಗಳನ್ನು ಕೊಡುತ್ತ ಇರಲಿಲ್ಲ, ಒಳ್ಲೆಯ ಚರ್ಚೆ ಆಗುತ್ತಿತ್ತು ಎಂದು ನಮ್ಮ ಭಾವನೆ. ಮೇಲಿನ ಉತ್ತರಗಳನ್ನು ನೋಡಿದರೆ, ವಿಶಯ ಗೊತ್ತಿಲ್ಲದೆ ಎನೇನೋ ಹೇಳುವ ಪರಿ ಕಾಣುತ್ತದೆ ಮತ್ತು ಸಂಘದ ಕಾರ್ಯಕರ್ತರಲ್ಲೇ ಗುರೂಜಿ ವಿಚಾರಧಾರೆಗಳ ಗೊತ್ತಿಲ್ಲದೇ ಇರುವುದು ಆಶ್ಚರ್ಯ.

ಇದು ಒಳ್ಳೆ ಚರ್ಚೆ ಆಗಬೇಕಾದರೆ, ಸಂಘದ ಕಾರ್ಯಕರ್ತರು ಆ ಪುಸ್ತಕವನ್ನು ಓದಿ, ಯಾವ ನಿಟ್ಟಿನಲ್ಲಿ ಆ ವಿಚಾರಧಾರೆಗಳು ಬಂದವು, ಅದನ್ನು ಅವರು ಒಪ್ಪುತ್ತಾರೆಯೇ, ಇವತ್ತಿಗೆ ಅದು ಎಷ್ಟು ಪ್ರಸ್ತುತ. ಆ ವಿಚಾರಧಾರೆಗಳ್ನ್ನು ಇಟ್ಟುಕೊಂಡು ಆಪಾರ್ಟಮೆಂಟಿನಲ್ಲಿ ಕನ್ನಡ ಹೇಳಿಕೊಟ್ಟರು ಅಷ್ಟೆ, ಹಿಬ್ರೂ ಹೇಳಿಕೊಟ್ಟರು ಅಶ್ಟೆ.

ಶಿಸ್ತು, ಸಂಘಟನೆಗೆ ಹೆಸರು ಮಾಡಿರುವ RSS ನಲ್ಲಿ ಅನೇಕರ ಕೊಡುಗೆ ಇದೆ, ಅದನ್ನು ಹೊಸತಾಗಿ ಧರ್ಮದ ಕಣ್ಣಿನಲ್ಲಿ ನೋಡಿ ಪುಳಕಿತರಾಗಿರುವ ಕಾರ್ಯಕರ್ತರು ಸುಮ್ಮನೆ defend ಮಾಡಿಕೊಳ್ಳುವ ನಿಟ್ಟಿನಲ್ಲಿ ಎನೇನೋ , ಯಾರ ಯಾರದೋ ಹೆಸರಲ್ಲಿ ಬರೆದು ಅಪಪ್ರಚಾರ ಮಾಡುವುದು ಬೇಡ.

Priyank ಅಂತಾರೆ...

ಗಣೇಶ್ ಅವರು ಕೆಲವು ಪ್ರಶ್ನೆಗಳನ್ನು ಎತ್ತಿದಾರೆ.
ಅವಕ್ಕೆ ನನ್ನ ಉತ್ತರ ಹೀಗಿದೆ.
೧. ತುಳುವರ ಮೇಲೆ, ಕೊಡವರ ಮೇಲೆ ಕನ್ನಡ ಹೇರಿಕೆ ನಡೆಯುತ್ತಿದೆ.
- ಕನ್ನಡವನ್ನೂ ಯಾರ ಮೇಲೂ ಹೇರಿಕೆ ಮಾಡುವ ’ವಸಾಹತುಶಾಹಿ’ ಮನಸ್ತಿತಿ ನನಗಿಲ್ಲ. ’ಏನ್ ಗುರು’ವಿನಲ್ಲೂ, ತುಳು, ಕೊಡವ ನುಡಿಗರ "ಸಾರ್ವಭೌಮತ್ವ"ದ ಬಗೆಗೆ ಈ ಮುಂಚೆಯೂ ಮೂಡಿ ಬಂದಿದೆ. ನಿಮಗೆ ಟೈಮ್ ಆದಾಗ ಓದಿಕೊಳ್ಳಿ.
ಆದರೆ, ಕನ್ನಡಿಗರ ಮೇಲೆ ಹಿಂದಿಯನ್ನೋ, ಸಂಸ್ಕ್ರುತವನ್ನೋ ಹೇರುವ ’ವಸಾಹತುಶಾಹಿ’ ಮನಸ್ತಿತಿ ಇರುವವರ ಸಾಲಿಗೆ ಆರ್.ಎಸ್.ಎಸ್ ಕೂಡ ಸೇರಿದೆ ಎಂಬುದು ನನಗೆ ಮನವರಿಕೆ ಆಗಿದೆ.
೨. ’ತುಳುನಾಡು ಒಂದು ಬೇರೆಯ ರಾಜ್ಯವಾಗಬಹುದಿತ್ತು’.
- ತುಳುವರಿಗೆ ಒಂದು ಬೇರೆಯ ರಾಜ್ಯ ಮಾಡಿಕೊಳ್ಳಬೇಕು ಎಂಬ ಆಸೆ ಇದ್ದಲ್ಲಿ, ಅದನ್ನು ತುಳಿಯುವ ಮನಸ್ತಿತಿ ಸರಿಯಲ್ಲ. ತುಳುವರಿಗೆ, ಕರ್ನಾಟಕದಲ್ಲೇ ಚೆನ್ನ ಎಂದನಿಸಿದರೆ, ಅದನ್ನೂ ಗೌರವಿಸಬೇಕಾಗುತ್ತದೆ. ಆದರೆ, ಕರ್ನಾಟಕದಲ್ಲಿರುವ ತುಳುವರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣಬಾರದು.
ಕನ್ನಡಿಗರ ಮೇಲೆ ಹಿಂದಿ ಹೇರಬೇಕು ಎಂದು ನಿಂತವರಲ್ಲಿ ಈ ರೀತಿಯ ಲಿಬೆರಲ್ ಮನಸ್ತಿತಿ ನನಗೆ ಕಾಣುತ್ತಿಲ್ಲ. ಕನ್ನಡಿಗರ ಮೇಲೆ, ಒತ್ತಡ ತಂದೋ, ಒತ್ತಾಯ ಮಾಡಿಯೋ, ಮನವೊಲಿಸಿಯೋ, ಕಡ್ಡಾಯ ಮಾಡಿಯೋ, ಒಟ್ಟಿನಲ್ಲಿ ಹಿಂದಿ ಹೇರಲೇಬೇಕು ಎಂದು ನಿಂತಿರುವುದು ಸರಿಯೇ? ಈ ನಿಟ್ಟಿನಲ್ಲಿ ಆರ್.ಎಸ್.ಎಸ್ಸಿನ ಕುರುಡುಮೌನ ಸರಿಯೇ?
೩. ಸಂಸ್ಕ್ರುತ ಕಲಿಯುವುದು ಖಂಡಿತಾ ತಪ್ಪಲ್ಲ
- ಯಾರೇ ಆಗಲಿ, ತಮ್ಮ ಇಶ್ಟದಿಂದ ಸಂಸ್ಕ್ರುತ ಕಲಿತರೆ ತಪ್ಪಲ್ಲ. "ಎಲ್ಲರೂ ಸಂಸ್ಕ್ರುತ ಕಲಿಯಬೇಕು" ಎಂಬುದು ತಪ್ಪು. ಸಂಸ್ಕ್ರುತದಲ್ಲಿ ಇರುವ ಗ್ನಾನದ ಬಗೆಗೆ ಎರಡು ಮಾತಿಲ್ಲ. ಆದರೆ, "ಅದನ್ನು ಅರಿಯಲು ಎಲ್ಲಾ ಕನ್ನಡಿಗರೂ ಸಂಸ್ಕ್ರುತ ಕಲಿಯಬೇಕು" ಎನ್ನುವುದು ತಪ್ಪು. ಕನ್ನಡಿಗರಿಗೆ, ಕನ್ನಡದಲ್ಲೇ ಆ ಗ್ನಾನವು ದಕ್ಕುವಂತೆ ಮಾಡಬಹುದಾಗಿದೆ.
೪. ’ಗುರು ಶಬ್ದ ಸಂಸ್ಕ್ರುತದ್ದು ದಯವಿಟ್ಟು ಬದಲಾಯಿಸಿ’.
- ಎಶ್ಟೋ ಸಂಸ್ಕ್ರುತ ಪದಗಳು ಕನ್ನಡಕ್ಕೆ ಬಂದು ಕನ್ನಡ ಆಡುಮಾತಿನಲ್ಲಿ ಸೇರಿಹೋಗಿವೆ. ಇವನ್ನು ತೆಗೆಯಿರಿ ಎಂದು ಯಾರೂ ಹೇಳುತ್ತಿಲ್ಲ. ಏನ್ ಗುರುವು ಹಾಗೆ ಹೇಳುತ್ತಿದಾರೆ ಅಂತ ತಾವು ತಪ್ಪಾಗಿ ತಿಳಿದುಕೊಂಡಿದೀರ.
"ಆಡುಮಾತಿನಲ್ಲಿ ಸಂಸ್ಕ್ರುತ ಪದಗಳು ಸುಮಾರಿವೆ, ಹಂಗಾಗಿ ಎಲ್ಲರೂ ಸಂಸ್ಕ್ರುತ ಕಲಿಯಿರಿ" ಎಂದು ಕನ್ನಡಿಗರ ಮೇಲೆ ಸಂಸ್ಕ್ರುತ ಹೇರಿಕೆಯ ಪ್ರಯತ್ನ ಮಾಡೋದು ತಪ್ಪು.

ವಸಂತ ಅಂತಾರೆ...

ಇಲ್ಲಿ ತಿಳಿಯಬೇಕಾಗಿರುವ ಬಹು ಸರಳವಾದ ಪ್ರಶ್ನೆ ಒಂದೇ.. ಬಹು ಭಾಷಾ, ಬಹು ಜನಾಂಗೀಯ, ಬಹು ಧರ್ಮೀಯ ಭಾರತದಲ್ಲಿ " ಜಾತ್ಯಾತೀತತೆ(Secular democracy), ಒಕ್ಕೂಟ ವ್ಯವಸ್ಥೆ(Federalism), ಭಾಷಾ ನೀತಿ(Language policy), ಸಾಮಾಜಿಕ ನ್ಯಾಯ (Social Justice)"ಗಳ ಬಗ್ಗೆ ಆರ್.ಎಸ್.ಎಸ್ ನ ಸೈದ್ಧಾಂತಿಕ ನಿಲುವೇನು? ಚಿಂತನಗಂಗಾದಲ್ಲಿ ಇದೇ ನಾಲ್ಕು ವಿಷಯಗಳ ಬಗ್ಗೆ ಕಂಡು ಬಂದ ಗೋಲವಲ್ಕರ್ ಅವರ ನಿಲುವನ್ನು ಈ ಅಂಕಣ ಎತ್ತಿ ತೋರಿಸಿದೆ ಮತ್ತು ಅಲ್ಲಿ ಗೋಲವಲ್ಕರ್ ಅವರ ನಿಲುವು ನನಗಂತೂ ವೈವಿಧ್ಯತೆ (ಜಾತಿ, ಧರ್ಮ, ಭಾಷೆ, ಜನಾಂಗ ಎಲ್ಲ ರೀತಿಯ) ವಿರೋಧಿಯಾಗಿ ಕಾಣಿಸುತ್ತೆ. ಈಗ ಒಂದೋ ಅವರು ಹೇಳಿದ್ದೇ ಸರಿ ಅಥವಾ ಅದು ತಪ್ಪು ಅನ್ನುವ ಆಯ್ಕೆಯೆರಡೇ ಅಲ್ಲವೇ ನಾವು ನೋಡಬೇಕಾಗಿರುವುದು.

Amarnath Shivashankar ಅಂತಾರೆ...

ಒಕ್ಕೂಟ ವ್ಯವಸ್ಥೆಯ ಬಗ್ಗೆ ಆರ್.ಎಸ್.ಎಸ್ ಗೆ ಏನು ನಿಲುವಿದೆ ಮತ್ತು ಭಾಷಾ ನೀತಿಯ ಬಗ್ಗೆ ಏನು ನಿಲುವಿದೆ ಅನ್ನುವ ವಿಚಾರ ಈ ಬ್ಲಾಗಿನಲ್ಲಿದೆ. ಆರ್.ಎಸ್.ಎಸ್ ಸ್ವಯಂಸೇವಕರು ಇಲ್ಲಿ ಕೆಲಸಕ್ಕೆ ಬಾರದ ಚರ್ಚೆ ಮಾಡುವ ಬದಲು
ಗೋಳ್ವಾಲ್ಕರ್ ಅವರು ತಮ್ಮ ಪುಸ್ತಕದಲ್ಲಿ ಬರೆದಿರುವ ನಿಲುವನ್ನು ಇವತ್ತಿಗೂ ಆರ್.ಎಸ್.ಎಸ್ ಒಪ್ಪುತ್ತದಾ ಇಲ್ವಾ ಅನ್ನೋದು ಹೇಳ್ರಪ್ಪಾ..
ನೀವು ಆ ಪುಸ್ತಕವನ್ನು ಒಪ್ಪುವಿರಾದರೆ, ನಿಮಗೆ ಒಕ್ಕೂಟ ವ್ಯವಸ್ಥೆ, ದೇಶದಲ್ಲಿನ ಸಮಾನತೆಯ ಬಗ್ಗೆ ಅಸಮಾಧಾನ ಇದೆ ಅನ್ನೋದು ಖಾತ್ರಿಯಾಗತ್ತೆ.
ಒಪ್ಪುವುದಿಲ್ಲ ಅಂದ್ರೆ, ಆ ಪುಸ್ತಕ ನಮ್ಮ ಬೈಬಲ್ ಅಲ್ಲ ಅಲ್ಲಾ ಭಗವದ್ಗೀತ ಅಲ್ಲ ಅನ್ನೋದು ಹೇಳ್ರಿ.

ಸುಮ್ನೆ ಅದೆ ಹಳೇ ಟೇಪ್ರೆಕಾರ್ಡರ್ ಯಾಕೆ ಹಾಕ್ತೀರಾ.

Anonymous ಅಂತಾರೆ...

ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂಬ (ಸುಮಾರು ೬೦ ಲಕ್ಷ ಸದಸ್ಯ ಬಲ) ಬಿರುದು ಹೊಂದಿರುವ ಆರ್.ಎಸ್. ಎಸ್. ದೇಶದ ಪ್ರಧಾನ ಸಮಸ್ಯೆಗಳ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ದೇಶದ ಖನಿಜ ಸಂಪತ್ತನ್ನು ಅಕ್ರಮವಾಗಿ ಹಾಗೂ ಸಕ್ರಮವಾಗಿ ವಿದೇಶಗಳಿಗೆ ಕೊಳ್ಳೆ ಹೊಡೆದು ವಿದೇಶಗಳಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿ ಹಾಕಿರುವ ರೆಡ್ಡಿ ಸಹೋದರರು ಇದೇ ಆರ್. ಎಸ್. ಎಸ್. ನ ರಾಜಕೀಯ ಅಂಗವಾದ ಬಿ.ಜೆ.ಪಿ. ಪಕ್ಷದವರೇ ಅಲ್ಲವೇ? ಇವರ ವಿರುದ್ಧ ಇಷ್ಟು ದೊಡ್ಡ ಸಂಘಟನೆಯಾದ ಆರ್.ಎಸ್. ಎಸ್. ಎಂದಾದರೂ ಧ್ವನಿ ಎತ್ತಿದ್ದು ಯಾರಾದರೂ ಕಂಡಿದ್ದಾರೆಯೇ? ಕಾಂಗ್ರೆಸ್ಸ್ನಲ್ಲೂ ಗಣಿ ಲೂಟಿಕೋರರು ಇದ್ದಾರೆ ಎಂದುಕೊಂಡರೂ ಅವರಿಗೆ ದೇಶ ಪ್ರೇಮದ ಸಂಸ್ಕಾರ ಇಲ್ಲ, ಬಿ.ಜೆ.ಪಿ. ಯಂತೆ ದೇಶ ಪ್ರೇಮದ ಪಾಠ ಅವರಿಗೆ ದೊರಕಿಲ್ಲ ಎಂದುಕೊಳ್ಳಬಹುದು, ಆದರೆ ದೇಶಪ್ರೇಮದ ಪಾಠ ಕಲಿತ ಬಿ.ಜೆ.ಪಿ.ಯವರು ಇಂಥ ಲೂಟಿಗೆ ಹೇಗೆ ಸಮ್ಮತಿ ಕೊಟ್ಟರು? ಇಂಥ ಮಹಾ ಗಣಿ ಲೂಟಿಯನ್ನು ತಡೆಗಟ್ಟಲು ಹೋರಾಡಿದ್ದು ಎಸ್. ಆರ್. ಹಿರೇಮಟ ಅವರಲ್ಲವೆ. ಯಾವ ದೇಶಭಕ್ತ ಸಂಘಟನೆಯವರೂ ಅವರಿಗೆ ಸಾಥ್ ನೀಡಿಲ್ಲ. ಅವರು ಏಕಾಂಗಿಯಾಗಿ ಸುಪ್ರೀಂ ಕೋರ್ಟಿನಲ್ಲಿ ಕೇಸ್ ದಾಖಲಿಸಿ ಗಣಿಗಾರಿಕೆಯ ಲೂಟಿಯನ್ನು ತಡೆಯುವಲ್ಲಿ ಮುಂದಾಗಿದ್ದಾರೆ. - ಆನಂದ ಪ್ರಸಾದ್

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ನನ್ನ ಬಗ್ಗೆ ಇಲ್ಲಿ ಕೆಲವರು ದೂರಿದ್ದಾರೆ. ತಪ್ಪಿಲ್ಲ, ಅವರಿಗೆ ಆ ಅಧಿಕಾರ ಇದೆ. ನನ್ನ ಕೆಲವು ಪ್ರಶ್ನೆಗಳು:

1> ಬೆಂಗಳೂರಿಗೆ ೧೫ ವರ್ಷದಿಂದ ನಿರಂತರ ವಲಸೆಯಾಗುತ್ತಿದೆ. ವಲಸಿಗರಿಗೆ ಕನ್ನಡ ಕಲಿಸುವ ಪ್ರಯತ್ನ ಆರ್.ಎಸ್.ಎಸ್ ಈಗಷ್ಟೇ ಮಾಡುತ್ತಿದೆ (ಅದರ ಬಗ್ಗೆ ನನಗೆ ಮೆಚ್ಚುಗೆಯಿದೆ), ಆದರೆ ಪ್ರಶ್ನೆ ಹದಿನೈದು ವರ್ಷ ಯಾಕೆ ಈ ಪ್ರಯತ್ನ ಮಾಡಲಿಲ್ಲ? ಸಂಸ್ಕೃತ ಶಿಬಿರ ಅಂತ ಮಾಡಿಕೊಂಡು, ಅದು ವಿಫಲವಾದಗಲೇ ಅಲ್ಲವೇ ಕನ್ನಡ ಕಲಿಸಲು ಮುಂದಾಗಿದ್ದು? ಅದಕ್ಕಿಂತ ಹೆಚ್ಚಾಗಿ ಈ ವಿಷಯದಲ್ಲಿ ಆರ್.ಎಸ್.ಎಸ್ ನ ಡುಪ್ಲಿಸಿಟಿಯನ್ನು ಹೆಚ್ಚೆಚ್ಚು ಜನರು ಪ್ರಶ್ನಿಸಿದಾಗಲೇ ತಾನೇ ಕನ್ನಡ ಕಲಿಸಲು ಮುಂದಾಗಿದ್ದು?
2> ಆರ್.ಎಸ್.ಎಸ್ ನ ಕಾರ್ಯಕರ್ತರಲ್ಲಿ ಬಹು ಜನರು ಮುಗ್ಧರು. ಅವರಿಗೇನೊ ಒಳ್ಳೆಯದು ಮಾಡಬೇಕು ಅನ್ನುವ ಹಂಬಲವಿರುವವರು. ಅವರು ಒಕ್ಕೂಟ ವ್ಯವಸ್ಥೆ, ಭಾಷಾ ನೀತಿಯ ಬಗ್ಗೆ ಸಂಘಕ್ಕಿರುವ ನಿಲುವನ್ನು ಪ್ರಶ್ನಿಸುವ ಪ್ರಾಮಾಣಿಕತೆ ಯಾಕಿಲ್ಲ? ಒಕ್ಕೂಟ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದಲೇ ರಾಜ್ಯಗಳು ಹಲ್ಲು ಕಿತ್ತ ಹಾವಿನಂತೆ ಯಾವುದೇ ಅಧಿಕಾರವಿಲ್ಲದ ಘಟಕಗಳಾಗಿವೆ. ಆರೋಗ್ಯ ಸೇವೆ, ಆಡಳಿತ, ಶಿಕ್ಷಣ, ನದಿ, ಗಡಿ ವಿಷಯ ಹೀಗೆ ಯಾವ ವಿಷಯದಲ್ಲಿ ರಾಜ್ಯಕ್ಕೆ ಸ್ವಾಯತ್ತತೆ ಇದೆ ಇಂದು? ಹುಳುಕಿನ ಭಾಷಾ ನೀತಿಯಿಂದಾಗಿ ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲೆಲ್ಲ ಕನ್ನಡ ಈಗಾಗಲೇ ಮಾಯವಾಗಿದೆ. ಇದೇ ತೊಡಕಿನ ನೀತಿಯಿಂದಾಗಿ ಕರ್ನಾಟಕದಲ್ಲಿ ವಲಸಿಗರು ಕನ್ನಡ ಕಲಿಯದಂತಾಗಿರುವುದು. ಇದನ್ನು ಪ್ರಶ್ನಿಸಿ ನ್ಯಾಯವಾದ ಒಕ್ಕೂಟ ವ್ಯವಸ್ಥೆ ತಂದುಕೊಳ್ಳಲು ಧ್ವನಿ ಎತ್ತಬೇಕಿದೆಯಲ್ಲವೇ? ಒಕ್ಕೂಟ ವ್ಯವಸ್ಥೆಯ ವಿರೋಧಿ ನಿಲುವು ಹೊಂದಿರುವ ಆರ್.ಎಸ್.ಎಸ್ ನ ಸಿದ್ಧಾಂತದ ದ್ವಂದ್ವ ಕನ್ನಡಿಗರಾಗಿರುವ ಅದರ ಕಾರ್ಯಕರ್ತರಿಗೆ ಕಾಣಿಸದೇ?
3> ಏನ್ ಗುರುವಿನ ಅಂಕಣ ಆರ್.ಎಸ್.ಎಸ್ ನ ಕೆಲಸ ಕಾರ್ಯಗಳ ಬಗ್ಗೆ ಮಾಡಿದ ವಿಮರ್ಷೆಯಾಗಿರದೇ, ಅವರ ಸಿದ್ಧಾಂತದಲ್ಲಿ ಆಡಳಿತದ, ಸಮಾಜದ ಬಹು ಮುಖ್ಯ ವಿಷಯಗಳ ಬಗ್ಗೆ ಅವರ ಸಿದ್ಧಾಂತದಲ್ಲಿರುವ ನಿಲುವೇನು ಅನ್ನುವುದನ್ನು ತಿಳಿಸುವ ಯತ್ನ. ಅದರ ಒಳಿತು-ಕೆಡಕುಗಳ ಬಗ್ಗೆ ಹೆಚ್ಚು ಚರ್ಚೆಯಾಗಿದ್ದರೆ ಚೆನ್ನಾಗಿರುತ್ತಿತ್ತು.

ಇದನ್ನು ಮೀರಿ ಪ್ರತಿಯೊಬ್ಬರಿಗೂ ತಮಗಿಷ್ಟವಾದ ಸಂಘ, ಸಿದ್ಧಾಂತವನ್ನು ಅನುಸರಿಸುವ ಎಲ್ಲ ಅಧಿಕಾರ ನಮ್ಮ ಸಂವಿಧಾನ ನೀಡಿದೆ. ಆದರೆ ಪ್ರಶ್ನೆ ಮಾಡುವುದೇ ತಪ್ಪು, ಮಾಡಿದ ತಕ್ಷಣ ಎಡಪಂಥೀಯ, ಚೈನೀಸ್, ಹಿಂದೂ ವಿರೋಧಿ, ದೇಶ ವಿರೋಧಿ ಅಂದೆಲ್ಲ ಬರೆಯುವುದು ಹಾಗೇ ಮಾಡುವವರಿಗಿರುವ ಪ್ರಬುದ್ಧತೆ ಯಾವ ಮಟ್ಟದ್ದು ಎಂದಷ್ಟೇ ತೋರಿಸುವುದು.

ಗಣೇಶ್ ಅಂತಾರೆ...

> ಆದರೆ ಪ್ರಶ್ನೆ ಹದಿನೈದು ವರ್ಷ ಯಾಕೆ ಈ ಪ್ರಯತ್ನ ಮಾಡಲಿಲ್ಲ?
@ಅಣ್ಣಪ್ಪ ಆರೆಸ್ಸೆಸ್ಸಿನ ಮೂಲ ಕಾರ್ಯ ಕನ್ನಡ ಜಾಗೃತಿಯಲ್ಲ. ರಾಷ್ಟ್ರೀಯತೆಗಾಗಿ ಸ್ವಯಂಸೇವಕರನ್ನು ತಯಾರು ಮಾಡುವುದು. ಕನ್ನಡ ಶಿಬಿರಗಳನ್ನು ಮಾಡಬೇಕಿರುವುದು ಕನ್ನಡ ಸಂಘಟನೆಗಳು. ಏಡ್ಸ್ ವಿಮೋಚನ ಸಂಘದವರು ಯಾಕೆ ಕನ್ನಡ ತರಬೇತಿ ನೀಡಿಲ್ಲ ಎಂಬಂತಿದೆ ನಿಮ್ಮ ವಾದ. ನೀವು ಇದುವರೆಗೆ ಇಂತಹ ತರಬೇತಿ ಯಾಕೆ ಮಾಡಿಲ್ಲ ಮೊದಲು ತಿಳಿಸಿ.

Anonymous ಅಂತಾರೆ...

ಗಣೇಶ್,
ಇಲ್ಲಿ ತಿಳಿಯಬೇಕಾಗಿರುವ ಬಹು ಸರಳವಾದ ಪ್ರಶ್ನೆ ಒಂದೇ.. ಬಹು ಭಾಷಾ, ಬಹು ಜನಾಂಗೀಯ, ಬಹು ಧರ್ಮೀಯ ಭಾರತದಲ್ಲಿ " ಜಾತ್ಯಾತೀತತೆ(Secular democracy), ಒಕ್ಕೂಟ ವ್ಯವಸ್ಥೆ(Federalism), ಭಾಷಾ ನೀತಿ(Language policy), ಸಾಮಾಜಿಕ ನ್ಯಾಯ (Social Justice)"ಗಳ ಬಗ್ಗೆ ಆರ್.ಎಸ್.ಎಸ್ ನ ಸೈದ್ಧಾಂತಿಕ ನಿಲುವೇನು? ಚಿಂತನಗಂಗಾದಲ್ಲಿ ಇದೇ ನಾಲ್ಕು ವಿಷಯಗಳ ಬಗ್ಗೆ ಕಂಡು ಬಂದ ಗೋಲವಲ್ಕರ್ ಅವರ ನಿಲುವನ್ನು ಈ ಅಂಕಣ ಎತ್ತಿ ತೋರಿಸಿದೆ ಮತ್ತು ಅಲ್ಲಿ ಗೋಲವಲ್ಕರ್ ಅವರ ನಿಲುವು ನನಗಂತೂ ವೈವಿಧ್ಯತೆ (ಜಾತಿ, ಧರ್ಮ, ಭಾಷೆ, ಜನಾಂಗ ಎಲ್ಲ ರೀತಿಯ) ವಿರೋಧಿಯಾಗಿ ಕಾಣಿಸುತ್ತೆ. ಈಗ ಒಂದೋ ಅವರು ಹೇಳಿದ್ದೇ ಸರಿ ಅಥವಾ ಅದು ತಪ್ಪು ಅನ್ನುವ ಆಯ್ಕೆಯೆರಡೇ ಅಲ್ಲವೇ ನಾವು ನೋಡಬೇಕಾಗಿರುವುದು.

ಒಕ್ಕೂಟ ವ್ಯವಸ್ಥೆಯ ಬಗ್ಗೆ ಆರ್.ಎಸ್.ಎಸ್ ಗೆ ಏನು ನಿಲುವಿದೆ ಮತ್ತು ಭಾಷಾ ನೀತಿಯ ಬಗ್ಗೆ ಏನು ನಿಲುವಿದೆ ಅನ್ನುವ ವಿಚಾರ ಈ ಬ್ಲಾಗಿನಲ್ಲಿದೆ. ಆರ್.ಎಸ್.ಎಸ್ ಸ್ವಯಂಸೇವಕರು ಇಲ್ಲಿ ಕೆಲಸಕ್ಕೆ ಬಾರದ ಚರ್ಚೆ ಮಾಡುವ ಬದಲು ಗೋಳ್ವಾಲ್ಕರ್ ಅವರು ತಮ್ಮ ಪುಸ್ತಕದಲ್ಲಿ ಬರೆದಿರುವ ನಿಲುವನ್ನು ಇವತ್ತಿಗೂ ಆರ್.ಎಸ್.ಎಸ್ ಒಪ್ಪುತ್ತದಾ ಇಲ್ವಾ ಅನ್ನೋದು ಹೇಳ್ರಪ್ಪಾ..

ನೀವು ಆ ಪುಸ್ತಕವನ್ನು ಒಪ್ಪುವಿರಾದರೆ, ನಿಮಗೆ ಒಕ್ಕೂಟ ವ್ಯವಸ್ಥೆ, ದೇಶದಲ್ಲಿನ ಸಮಾನತೆಯ ಬಗ್ಗೆ ಅಸಮಾಧಾನ ಇದೆ ಅನ್ನೋದು ಖಾತ್ರಿಯಾಗತ್ತೆ.ಒಪ್ಪುವುದಿಲ್ಲ ಅಂದ್ರೆ, ಆ ಪುಸ್ತಕ ನಮ್ಮ ಬೈಬಲ್ ಅಲ್ಲ ಅಲ್ಲಾ ಭಗವದ್ಗೀತ ಅಲ್ಲ ಅನ್ನೋದು ಹೇಳ್ರಿ.

ಸುಮ್ನೆ ಅದೆ ಹಳೇ ಟೇಪ್ರೆಕಾರ್ಡರ್ ಯಾಕೆ ಹಾಕ್ತೀರಾ.?

subramanya

ಪ್ರದ್ಯುಮ್ನ ಬೆಳವಾಡಿ ಅಂತಾರೆ...

ಅಣ್ಣಪ್ಪ ಗೌಡರೇ,

೧> ಕನ್ನಡದ ಬಗ್ಗೆ, ಹಾಗೆಯೇ ಭಾರತದ ಎಲ್ಲಾ ಭಾಷೆಗಳ ಬಗ್ಗೆ, ಸಂಘಕ್ಕೆ ನಿಮ್ಮಷ್ಟೇ ಗೌರವ ಮತ್ತು ಕಾಳಜಿ ಇದೆ. ರಾಷ್ಟ್ರೀಯ ಸಂಸ್ಥೆಯಾದ ಸಂಘ ಸಂಸ್ಕೃತ ಶಿಬಿರ ನಡೆಸುವುದರಲ್ಲಿ ತಪ್ಪೇನಿಲ್ಲ. ಅದು ಸಫಲವೋ, ವಿಫಲವೋ ಅದು ನಮಗೆ ತಡೆಯಲ್ಲ. ಕೇವಲ ಕಾರ್ಯವಷ್ಟೇ ನಮ್ಮ ಕೆಲಸ. ಕನ್ನಡದ ಬಗ್ಗೆ ನಿಮಗೆ ಇರುವ ಕಾಳಜಿ ಮತ್ತು ಶ್ರದ್ಧೆ ಮೆಚ್ಚುವಂತಹುದು. ನೀವು ಹೇಳಿದ ಹಾಗೆ ಕಳೆದ ೧೫ ವರ್ಷದಲ್ಲಿ ಮಾಡದಿದ್ದ ಕಾರ್ಯವನ್ನು ಸಂಘ ಮಾಡಲು ಹೊರಟಿದೆ. ನೀವು ಅದನ್ನು ಮೆಚ್ಚಿರುವುದು ಪ್ರಶಂಸನೀಯ. ಈ ಕಾರ್ಯದಲ್ಲಿ ನಮ್ಮೊಡನೆ ಬರುವಿರಾ? ಹೇಳಿ. ಟೀಕೆ ಅಥವಾ ಮೆಚ್ಚುಗೆಯೊಂದೇ ಉತ್ತರವಲ್ಲ. ಕಾರ್ಯಕ್ಕಿಳಿದು ಸಹಾಯ ಮಾಡಿ.

೨> ಆರ್.ಎಸ್.ಎಸ್. ಕಾರ್ಯಕರ್ತರು ಮುಗ್ಧರೋ ಅಲ್ಲವೋ ಅದು ನಿಮ್ಮ ನಿಷ್ಕರ್ಷೆಗೆ ಬಿಟ್ಟಿದ್ದೇನೆ. ಆದರೆ ಅವರು ದೇಶಭಕ್ತರು ಎಂಬುದನ್ನು ಮಾತ್ರ ಅಲ್ಲಗಳೆಯಲಾಗುವುದಿಲ್ಲ. ಮನುಷ್ಯನ ಕಾರ್ಯಕ್ಷೇತ್ರಗಳ ಹಂತಗಳಲ್ಲಿ, ತಾನು, ತನ್ನ ಸಂಸಾರ, ತನ್ನ ಬಳಗ, ತನ್ನ ಊರು, ತನ್ನ ರಾಜ್ಯ, ತನ್ನ ರಾಷ್ಟ್ರ, ಇಡೀ ಭೂಮಂಡಲ ಮತ್ತು ಇಡೀ ವಿಶ್ವ; ಹೀಗೆ ಬೇರೆ ಬೇರೆಯ ಹಂತಗಳಿರುತ್ತವೆ. ಕೆಲವರು ಜೈ ನಮ್ಮ ಧರ್ಮ ಎನ್ನುತ್ತಾರೆ, ನಮ್ಮ ಜಾತಿಗೆ ಜೈ ಅಂತಾರೆ, ಜೈ ಕರ್ನಾಟಕ ಎನ್ನುತ್ತಾರೆ... ಹಾಗಂತ ತನ್ನದು ಸರಿ, ಬೇರೆಯೆಲ್ಲರದು ತಪ್ಪು ಎನ್ನುವುದಕ್ಕಾಗುವುದಿಲ್ಲ. ಒಕ್ಕೂಟದ ಸ್ವಾಯತ್ತತೆ ಬಗ್ಗೆ ನೀವು ಹೇಳಿರುವ ವಿಚಾರ ಅಗತ್ಯವಾಗಿ ಮುಖ್ಯವಾದದ್ದು. ಸ್ಥಳೀಯ ವಿಷಯಗಳು ಸ್ಥಳೀಯ ಸರಕಾರ/ಸಂಸ್ಥೆಗಳಿಗೆ ಬಿಡುವುದು ಶ್ರೇಯಸ್ಕರ ಎನ್ನುವುದು ಸಂಘವೂ ಒಪ್ಪುತ್ತದೆ.

ನೀವು ಪ್ರಸ್ತಾಪಿಸಿರುವ ಒಕ್ಕೂಟದ ವ್ಯವಸ್ಥೆ, ಭಾಷಾ ನೀತಿ ಇತ್ಯಾದಿ ವಿಷಯಗಳು ಖಂಡಿತವಾಗಿಯೂ ಮಹತ್ತರವಾದವು. ೬೫ ವರ್ಷಗಳ ಸ್ವಾತಂತ್ರ್ಯಾ ಪೂರ್ವದಲ್ಲಿ ಅನೇಕ ಹೋರಾಟಗಳ ಮೂಲಕ ಈ ಸ್ಥಿತಿಯನ್ನು ತಲುಪಿದ್ದೇವೆ. ವಲಸಿಗರಿಗೆ ಕನ್ನಡ ಕಲಿಸುವ ವಿಷಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವು ಕನ್ನಡಿಗರಲ್ಲಿ ಭಾಷಾ ಆಭಿಮಾನ ಬೆಳೆಸುವುದು. ಅದನ್ನು ಮರೆಯಲಾಗದು. ಇಂದು ಅನೇಕ ಕನ್ನಡಿಗರ (ಚಿಕ್ಕ ಊರು, ಗ್ರಾಮಗಳಲ್ಲೂ) ಮನೆಗೆ ಹೋದರೆ ಕಾಣಸಿಗುವ ಕಲುಷಿತ ಕನ್ನಡ ನಮಗೂ ನೋವು ಉಂಟು ಮಾಡುತ್ತವೆ. ಎಂದು ನಾವು ಸಂಪೂರ್ಣವಾಗಿ ಕನ್ನಡಿಗರಾಗುತ್ತೇವೆಯೋ, ಆಗ ವಲಸಿಗರೂ ನಮ್ಮ ಜೊತೆ ಬರಲೇಬೇಕಾಗುತ್ತದೆ. ಬರೀ ವಲಸಿಗರನ್ನೇ, ಸರಕಾರವನ್ನೇ ಟೀಕಿಸುವುದಕ್ಕಿಂತ ಸಮಾಜದ ಎಲ್ಲ ವರ್ಗ, ಸಂಸ್ಥೆ, ಸಂಘಟನೆಗಳೊಂದಿಗೆ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ಇಲ್ಲಿ ಸಂಸ್ಕೃತದ ಒಂದು ಶ್ಲೋಕವನ್ನು ಉದಾಹರಿಸುತ್ತೇನೆ: ಅಮಾತ್ರಂ ಅಕ್ಷರಂ ನಾಸ್ತಿ | ನಾಸ್ತಿ ಮೂಲಂ ಅನೌಷಧಮ್ | ಅಯೋಗ್ಯೋ ಪುರುಷೋ ನಾಸ್ತಿ | ಯೋಜಕಃ ತತ್ರ ದುರ್ಲಭಃ || (ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಬಹುದು, ಆದರೂ ಹೇಳಲೇಬೇಕಾಯಿತು). ಸಮಾಜದ ಯಾರೂ ಅನುಪಯೋಗಿಗಳಲ್ಲ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಕೆಲಸ ಮಾಡೋಣ. ಸಂಘದಂತಹ ಸಂಸ್ಥೆಗಳಲ್ಲಿ ಯೋಜಕರು ನಿಮಗೆ ಸಿಗುತ್ತಾರೆ. ಉಪಯೋಗಿಸಿಕೊಳ್ಳಿ. ಸಾಮ್ಯತೆಯಿರುವ ವಿಷಯಗಳಲ್ಲಿ ಒಟ್ಟಾಗಿ ಕೆಲಸ ಮಾಡೋಣ.

೩> ಸಂಘದ ಸಿದ್ಧಾಂತದ ಬಗ್ಗೆ ಸ್ವಯಂಸೇವಕರಿಗೆ ಯಾವುದೇ ಗೊಂದಲವಿಲ್ಲ. ಇಲ್ಲಿ ಅನೇಕರು, "ನಿಮ್ಮದು ತಪ್ಪು ಇದೆ, ಹಾಗಂತ ಒಪ್ಪಿಕೊಳ್ಳಿ, ಒಪ್ಪಿಕೊಳ್ಳಿ" ಅಂತ ಪದೇ ಪದೇ ಹೇಳ್ತಾ ಇದ್ದಾರೆ. ತಮಾಷೆ ಅನಿಸುತ್ತೆ. ನಾವೇನು ನಮ್ಮ ಸಿದ್ಧಾಂತವನ್ನು ಎಲ್ಲರೂ ಒಪ್ಪಿ ಸ್ವಯಂಸೇವಕರಾಗಿ ಅಂತ ಹೇಳ್ತಾ ಇಲ್ಲ. ಒಪ್ಪದಿರುವವರ ಜೊತೆಯಲ್ಲೂ ಕೆಲಸ ಮಾಡುವುದೇ ನಮ್ಮ ವಿಶೇಷ. ಅದರ ಉದಾಹರಣೆಗಳು ಇಲ್ಲಿ ಬೇಡ. ಗುರೂಜಿಯವರ ಸಮಗ್ರದಿಂದ ಕೆಲವು ವಾಕ್ಯಗಳನ್ನು ಉದಾಹರಿಸಿ ಬರೆದಿರುವ ಲೇಖನ ಖಂಡಿತವಾಗಿಯೂ ಸಂಕುಚಿತವಾಗಿದೆ. ಏಕೆಂದರೆ ಹೆಸರೇ ಹೇಳುವಂತೆ ಗುರೂಜಿಯವರ ಚಿಂತನೆಯು ೧೨ ಸಂಪುಟಗಳಲ್ಲಿ ಪ್ರಕಟವಾಗಿದೆ. ಎಲ್ಲವನ್ನೂ ಓದಿದ ನಂತರ ಓದುಗರು ತಮ್ಮ ಅಭಿಪ್ರಾಯವನ್ನು ಪಡೆದುಕೊಳ್ಳಲಿ. ಸಂಘದ ಸೈದ್ಧಾಂತಿಕ ನಿಲುವಿನಲ್ಲಿ ೮೬ ವರ್ಷಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವುದು ನನ್ನ ಸ್ವಂತ ಅಭಿಪ್ರಾಯ. ಇನ್ನು ಮಿಕ್ಕಿದ್ದು ನೀವು ಕೇಶವಕೃಪಕ್ಕೆ ಹೋಗಿ ಪ್ರಚಾರಕರಲ್ಲಿ ಕೇಳಬಹುದು.

ನಮ್ಮ ಅನುಭವದಲ್ಲಿ ಅನೇಕ ಸಂಸ್ಥೆಗಳು ಸಂಘವನ್ನು ಟೀಕಿಸುವ ದೃಷ್ಟಿಯೊಂದನ್ನೇ ಇಟ್ಟುಕೊಂಡಿವೆ. ಕೆಲವರ ಹಿಂದೆ ದೇಶ ವಿರೋಧಿ ಶಕ್ತಿಗಳು ಇರುವುದೂ ಉಂಟು. ನಾವು ಅವರ ಹತ್ತಿರ ಬಂದು ಕೆಲಸ ಮಾಡುವ ಪ್ರಸ್ತಾಪ ಮಾಡಿದ ಕೂಡಲೇ ಓಡಿ ಹೋಗುತ್ತಾರೆ.

ವಿಮರ್ಶೆಗೆ ಸದಾ ಸ್ವಾಗತ. ಆದರೆ ಅದರ ಭರದಲ್ಲಿ ಸಂಘದಂತಹ ಸಂಸ್ಥೆಯನ್ನು ಹೀಗೆಳೆಯಬೇಡಿ. ನಿಮಗೆ ಇಂಥ ಒಂದು ಶ್ರದ್ಧಾಳುಗಳ ಸಂಸ್ಥೆಯ ಜೊತೆ ಕೆಲಸ ಮಾಡುವ ಇಷ್ಟವಿದ್ದರೆ ಹೇಳಿ. ಸಮಾಜದಲ್ಲಿ ನಾವೂ, ನೀವೂ ಎಲ್ಲರೂ ಸಮನಾದ ಪಾಲುದಾರರು. ಅನ್ಯರ ವಿಚಾರಗಳನ್ನು ಕೇಳೋಣ, ಗೌರವಿಸೋಣ.

Priyank ಅಂತಾರೆ...

ಗಣೇಶ್ ಅವರು ನನ್ನ ಉತ್ತರಗಳನ್ನರಿತರು ಎಂದುಕೊಂಡಿದೀನಿ.
- ಆರೆಸ್ಸೆಸ್ಸಿನ ಮೂಲ ಕಾರ್ಯ ಕನ್ನಡ ಜಾಗ್ರುತಿಯಲ್ಲ ಎಂದು ಗಣೇಶ್ ಅವರು ಒಪ್ಪಿಕೊಂಡಿದಾರೆ.
- ಆರೆಸ್ಸೆಸ್ಸಿನ ಮೂಲ ಕೆಲಸ ರಾಷ್ಟ್ರೀಯತೆಗಾಗಿ ಸ್ವಯಂಸೇವಕರನ್ನು ತಯಾರು ಮಾಡುವುದು ಎಂಬುದನ್ನೂ ಗಣೇಶ್ ಅವರು ತಿಳಿಸಿದಾರೆ.

"ಆರೆಸ್ಸೆಸ್ಸಿನ ಮೂಲ ಕೆಲಸ ಕನ್ನಡ ಹಬ್ಬಿಸುವುದಾಗಬೇಕು" ಎಂಬುದು ಗಣೇಶ್ ಅವರಿಗೆ ಎಷ್ಟು ಬಾಲಿಶವಾಗಿ ಕಾಣುತ್ತಿದೆಯೋ, "ಆರೆಸ್ಸೆಸ್ಸಿನ ಕಡೆಯಿಂದಾ ಕನ್ನಡ ಕಲಿಸುವ ಕೆಲಸ ನಡೆಯುತ್ತಿದೆ, ಹಂಗಾಗಿ ಅದರ ಸಿದ್ಧಾಂತಗಳನ್ನು ಪ್ರಶ್ನಿಸಬೇಡಿ" ಎಂಬ ಕೆಲ ಕಾರ್ಯಕರ್ತರ ಮಾತುಗಳು ಅಷ್ಟೇ ಬಾಲಿಶವಾಗಿ ನನಗೆ ಕಾಣಿಸುತ್ತಿದೆ.

ಈ ಚರ್ಚೆ, ಆರೆಸ್ಸೆಸ್ಸು ಎಷ್ಟು ಕೆಲಸ ಮಾಡಿದೆ, ಯಾವ ದಿಕ್ಕಿನಲ್ಲಿ ಮಾಡಿದೆ ಎಂಬುದಕ್ಕಷ್ಟೇ ಸುತ್ತು ಹೊಡೆಯಲಿ ಎಂದು ಗಣೇಶ್ ಅವರು ಬಯಸಿದಂತಿದೆ. ಆದರೆ, ಚರ್ಚೆ ಆಗಬೇಕಾದ್ದು, ಆರೆಸ್ಸೆಸ್ಸಿನ ಸಿದ್ಧಾಂತಗಳು ಮತ್ತು ಅದರ ಮೂಲಕ ಆಗುತ್ತಿರುವ ಮೂಲ ಕೆಲಸಗಳು (ರಾಷ್ಟ್ರೀಯತೆಗೆ ಸ್ವಯಂಸೇವಕರನ್ನು ತಯಾರು ಮಾಡುವ) ಕನ್ನಡಿಗರಿಗೆ, ಕನ್ನಡತನಕ್ಕೆ, ಕನ್ನಡನಾಡಿಗೆ ಹೇಗೆ ಮುಳುವಾಗಲಿದೆ ಎಂಬುದರ ಬಗ್ಗೆ.
೧. ಕನ್ನಡಿಗರು ತಮ್ಮನ್ನು ತಾವು ಸಂಪೂರ್ಣವಾಗಿ ಆಳಿಕೊಳ್ಳುವಂತಾಗಬೇಕು ಎಂಬುದು ಆರೆಸ್ಸೆಸ್ಸಿಗೆ ಒಪ್ಪಿಗೆಯಾಗುವಂತೆ ಕಾಣುತ್ತಿಲ್ಲ. ಗೋಳ್ವಾಲ್ಕರ್ ಅವರ ಮಾತುಗಳಲ್ಲಿ ಇದನ್ನು ಕಾಣಬಹುದಾಗಿದೆ.
೨. ಕನ್ನಡಿಗರು ಇತರೆ ನುಡಿಗರೊಡನೆ ಹಿಂದಿಯಲ್ಲೇ (ಅತವಾ ಮುಂದೊಂದು ದಿನ ಸಂಸ್ಕ್ರುತದಲ್ಲೇ) ವ್ಯವಹಾರ ನಡೆಸಬೇಕು. ವ್ಯವಹಾರಕ್ಕೆ ಬೇಕಾದ ಬಾಶೆ ಆರಿಸಿಕೊಳ್ಳುವ ಸ್ವಾತಂತ್ರ ಕನ್ನಡಿಗರಿಗೆ ಇಲ್ಲ.
೩. ಕನ್ನಡಿಗರು ತಮಗೆ ಬೇಕಾದಂತ, ತಮಗೆ ಒಪ್ಪಿಗೆಯಾಗುವಂತ, ಕಲಿಕೆ ವ್ಯವಸ್ತೆ ಕಟ್ಟಿಕೊಳ್ಳುವಂತಿಲ್ಲ. ಅದೆಲ್ಲವೂ ಕೇಂದ್ರ ಸರ್ಕಾರದಿಂದಲೇ ಮಾಡಲ್ಪಡುತ್ತದೆ.
ಇವೆಲ್ಲಾ ಆಗುವುದು ನಮಗೆ ಒಳಿತೆಂದು ನನಗನಿಸುತ್ತಿಲ್ಲ.
ಇವೆಲ್ಲಾ ಆಗುವುದು ಒಳಿತೆಂದು ಇಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿರುವ ಕಾರ್ಯಕರ್ತರೆಲ್ಲರಿಗೂ ಅನಿಸಬಹುದು, ಅದು ಅವರ ಆಯ್ಕೆ.
ಆದರೆ, ಇದನ್ನೆಲ್ಲಾ ಆಗುಮಾಡಿಸಲು ಬಿಜೆಪಿಯ ಮೂಲಕ ಅಧಿಕಾರ ನಡೆಸುವ ಬದಲು, ಆರೆಸ್ಸೆಸ್ಸು ತಾನೇ ಎಲೆಕ್ಶನ್ನಿಗೆ ನಿಲ್ಲುವುದು ಮೇಲು. ಜನರೆಲ್ಲರಿಗೂ ಇದು ಸರಿಯೆನಿಸಿದರೆ, ಖಂಡಿತಾ ಆರೆಸ್ಸೆಸ್ಸು ಎಲೆಕ್ಶನ್ನಿನಲ್ಲಿ ಗೆಲ್ಲುತ್ತದೆ. ಇಲ್ಲದಿದ್ದರೆ ಸೋಲುತ್ತದೆ.

ರಮೇಶ್ ರಾವ್ ಅಂತಾರೆ...

@ಗಣೇಶ್

ಕನ್ನಡ ಕಲಿಸ್ತ ಇದ್ದಿವಿ ಅಂತ ಬೊಬ್ಬೆ ಹೊಡೆದದ್ದು ನಿಮ್ಮ ಗೆಳೆಯರ ಬಳಗವಾದ್ದರಿಂದ ಈ ಪ್ರಶ್ನೆ ಕೇಳಲ್ಪಟ್ಟಿತ್ತು ಅನ್ಸುತ್ತೆ.
ನಿಮ್ಮ ಗೆಳೆಯರ ಬಳಗ ಅಥವ ನೀವು ಏಡ್ಸ್ ವಿಮೋಚನೆ ಬಗ್ಗೆ ಬೊಬ್ಬೆ ಹೊಡೆದಿದ್ದರೆ ಅದರ ಬಗ್ಗೆ ಪ್ರಶ್ನೆ ಏಳುತ್ತಿತ್ತು ಅನ್ಸುತ್ತೆ.

ರಾಷ್ಟ್ರೀಯತೆಗಾಗಿ ಸ್ವಯಂಸೇವಕರನ್ನು ತಯಾರು ಮಾಡುವುದು ಆರೆಸ್ಸೆಸ್ಸಿನ ಮೂಲ ಕಾರ್ಯ ಎಂದು ಹೇಳಿರುವುದರಿಂದ ತಿಳಿದು ಬರುವುದೇನೆಂದರೇ:

ಆರೆಸ್ಸೆಸ್ ಕನ್ನಡ ಕಲಿಸುವ ಶಿಭಿರಗಳನ್ನು ನಡೆಸುತ್ತಿರುವುದು ತೋರ್ಕೆಗೆ ಮಾತ್ರ. ಅವರಿಗೆ ಕನ್ನಡದ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂದು.

maaysa ಅಂತಾರೆ...

"ಕನ್ನಡ ಶಿಬಿರಗಳನ್ನು ಮಾಡಬೇಕಿರುವುದು ಕನ್ನಡ ಸಂಘಟನೆಗಳು."

I may be the only voice with a very different opinion. None should teach Kannada for free. When people pay huge money to learn English why cannot they do it for Kannada.

We the Kannada people must create an environment for the immigrants in which they must learn Kannada to survive in our motherland. Kannada must be a 'must have' skill in the CV in any job. We must work towards depopulating our crowded cites by curbing controlled immigration and removal of unfaithful immigrants.

DON'T TEACH KANNADA FOR FREE. TEACH KANNADA AND MAKE MONEY! MARKET KANNADA.

maaysa ಅಂತಾರೆ...

"’ಗುರು ಶಬ್ದ ಸಂಸ್ಕ್ರುತದ್ದು ದಯವಿಟ್ಟು ಬದಲಾಯಿಸಿ’."

Who says Guru is a Sanskrit word only? Check Dravidian etymology dictionary. There is a Kannada word too. 'Gurutu' is derived from Kannada work 'Kuri' which means to point out. I reckon 'Guru' means 'the process of pointing out our identity'.

By the way .. Sanskrit is not pure. It is derived from Pashto, Avesta and has tons of Prakrit words, and even Kannada words. Sanskrit has a haphazard grammar with zillions of exception and confusion.

Does this person own Sanskrit to ask us so?

This is a silly argument.

..............
We(some of us) are OK with a separate Tulu State. However it is not the responsibility of Kannada people to fight for it. And if we read the history of unification of Karnataka, Tulu speaking areas were joined after 1947 because people in the region wanted to. We Kannada people have neither invaded nor immigrated to those lands. It is our home land too,

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಗಣೇಶ್ ಅವರೇ,,
ಆರ್.ಎಸ್.ಎಸ್ ಗೆ ಕರ್ನಾಟಕದಲ್ಲಿ ತನ್ನ ಸಿದ್ಧಾಂತಕ್ಕೆ ಕನ್ನಡ ಕೇಂದ್ರ ಬಿಂದುವಲ್ಲ ಅನ್ನುವುದನ್ನು ನೀವೇ ಒಪ್ಪಿದ್ದೀರಿ. ಸಂತೋಷ. ಇನ್ನು, ನಾನ್ಯಾಕೆ ತರಬೇತಿ ಮಾಡಿಲ್ಲ ಅಂದರೆ,, ನೀವು ಒಂದು ಸೇಬು ಹಣ್ಣು ಮತ್ತು ಒಂದು ಕಿತ್ತಲೆ ಹಣ್ಣನ್ನು ಹೋಲಿಸಿದಂತೆ. ನಾನೊಬ್ಬ ವ್ಯಕ್ತಿ, ಆರ್.ಎಸ್.ಎಸ್ ಒಂದು ರಾಜಕೀಯ, ಆರ್ಥಿಕ ಬಲ ಇರುವ ಸಂಸ್ಥೆ. ಕನ್ನಡಿಗರ ಸರ್ಕಾರವನ್ನು ನಿಯಂತ್ರಿಸುತ್ತಿರುವ ಸಂಸ್ಥೆ. ಇಂತಹ ಸಂಸ್ಥೆಗೆ ಇದನ್ನೆಲ್ಲ ಮಾಡಲು ಸಾಧ್ಯವಿದೆಯೇ ಹೊರತು ಒಬ್ಬ ವ್ಯಕ್ತಿಗಲ್ಲ. ಈಗ ಆರ್.ಎಸ್.ಎಸ್ ಗೆ ಕನ್ನಡ ಮುಖ್ಯವಲ್ಲ ಅಂತ ನೀವೇ ಹೇಳಿದ್ದೀರಿ, ಅದರರ್ಥ ಈಗ ಮಾಡುತ್ತಿರುವ ಕನ್ನಡ ಕಲಿಕೆ ಶಿಬಿರ ಹಾಗಿದ್ದರೆ ಸುಮ್ಮನೆ ಕಾಟಾಚಾರಕ್ಕೆ ಎಂಬಂತಾಯಿತಲ್ಲವೇ? ಆರ್.ಎಸ್.ಎಸ್ ಕನ್ನಡ ವಿರೋಧಿ ಅನ್ನುವುದನ್ನು ತಪ್ಪಿಸಲು, "ನೋಡಿ, ನಾವು ಕನ್ನಡ ಕಲಿಸುತ್ತಿದ್ದೇವೆ, ನಮ್ಮ ಶಾಖೆಗಳಲ್ಲಿ ಕನ್ನಡವನ್ನೇ ಮಾತಾಡೋದು" ಅಂದ ಹಾಗಿದೆ. ತೋರಿಕೆಯ ಈ ಹೆಜ್ಜೆಗಳಿಂದ ಏನು ಆಗಲ್ಲ. ಈ ಅಂಕಣದಲ್ಲಿ ಕೇಳಿದ ಹಲ ಸಮಾಜಿಕ ವಿಷಯಗಳ ಬಗ್ಗೆ ಆರ್.ಎಸ್.ಎಸ್ ತನ್ನ ನಿಲುವು (ಕಾಲಕ್ಕೆ ತಕ್ಕಂತೆ ಬದಲಾಗಿದ್ದರೆ) ತಿಳಿಸಲಿ.

Chetan ಅಂತಾರೆ...

ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು ಎಂದು ಹೇಳುವ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಸಂಘದ ನಿಲುವು. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಹೀಗೆ ಎಲ್ಲಾ ಒಂದೇ ಇರಬೇಕು ಎಂದು ಹೇಳುತ್ತಾ, ನಮ್ಮ ದೇಶದ ವೈವಿಧ್ಯತೆಯನ್ನು ಕೆಡವಿ ಹಾಕಲು ಹೊರಟಿದೆ. ಎನ್ ಗುರು ಅಂಕಣದಲ್ಲೂ ಸಹ ಇದೇ ವಿಷ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಮೊದಲು ದೇಶ ಆಮೇಲೆ ರಾಜ್ಯ ಅನ್ನೋ ಮಾತೇ ಅರ್ಥವಿಲ್ಲದ್ದು. ಇದಕ್ಕೆ ಆಲೂರು ವೆಂಕಟ ರಾಯರು ಸರಿಯಾದ ಉತ್ತರವನ್ನೇ ನೀಡಿದ್ದಾರೆ. """ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ. """

ಗಣೇಶ್ ಅಂತಾರೆ...

॒@subramanya ಆ ಪುಸ್ತಕ ನಮ್ಮ ಬೈಬಲ್ ಅಲ್ಲ ಅಲ್ಲಾ ಭಗವದ್ಗೀತ ಅಲ್ಲ. ಸಂಘ ಯಾವತ್ತೂ ವೈವಿಧ್ಯತೆಯನ್ನು ಒಪ್ಪಿಕೊಂಡು ಬಂದಿದೆ. ಸಂಘ ತನ್ನ ವಿಚಾರ, ಶಾಖೆಯ ಕಾರ್ಯಕ್ರಮ, ವಿಧಾನಗಳ ಬಗ್ಗೆ ಕಾಲಕ್ಕನುಗುಣವಾಗಿ ಬದಲಾವಣೆಯನ್ನು ಮಾಡುತ್ತಲೇ ಬಂದಿದೆ. ಅದು ಯಾವುದೇ ವ್ಯಕ್ತಿಯ, ಪುಸ್ತಕದ ಮೇಲೆ ಅವಲಂಬಿತವಾಗಿಲ್ಲ. ಗುರೂಜಿಯ ಬಹುತೇಕ ವಿಚಾರಗಳೂ ನಮ್ಮ ಆದರ್ಶಗಳಾಗಿವೆ. ಆದರೆ ಒಂದೆರಡು ವಿಚಾರಗಳ ಬಗ್ಗೆ ಭಿನ್ನತೆಯಿರಬಹುದು. ಗಾಂಧಿ, ಅಂಬೇಡ್ಕರ್, ವಿವೇಕಾನಂದರ ವಿಚಾರಗಳೂ, ಭಗವದ್ಗೀತೆ, ವೇದಗಳ ವಿಚಾರಗಳ ಬಗ್ಗೆಯೂ ಅದನ್ನು ವಿವೇಚನೆಗೊಳಪಡಿಸಬೇಕೆಂಬುದೇ ನಮ್ಮ ನಿಲುವಾಗಿದೆ. ಉದಾಹರಣೆಗೆ, ಸಂಘ ಮೀಸಲಾತಿಗೆ ಪರವಾಗಿದೆ. ಸಂಘದ ಯಾವುದೇ ಅಧಿಕಾರಿಗಳಲ್ಲಿ ಈ ಬಗ್ಗೆ ಕೇಳಿ, ಅದು ಸ್ಪಷ್ಟ, ಆದರೆ ಗುರೂಜಿಯವರ ಚಿಂತನೆಗೆ ಭಿನ್ನ.

ಗುರೂಜಿ ಚಿಂತನ ಗಂಗಾದ ಬಹುತೇಕ ಕಡೆಯಲ್ಲಿ ವೈವಿಧ್ಯತೆಯನ್ನು ಬೆಂಬಲಿಸಿದ್ದಾರೆ. ಆದರೆ ಪ್ರತಿಯೊಬ್ಬ ಸ್ವಯಂಸೇವಕನೂ ತನ್ನ ಸ್ವಂತಿಕೆಯನ್ನು ಹೊಂದಲು ಅವಕಾಶವಿದೆ. ಅದೆಲ್ಲವನ್ನು ಪಕ್ಕಕ್ಕಿರಿಸಿ ಸಮಾಜಕ್ಕಾಗಿ ಕೆಲಸಮಾಡುವುದೇ ಸ್ವಯಂಸೇವಕತ್ವ. ಸಂಘದ ಶಿಬಿರಗಳಲ್ಲಿ ಪ್ರತಿದಿನ ಚರ್ಚಾ ಅವಧಿಗಳಿರುತ್ತವೆ. ಅಲ್ಲಿ ವಿಚಾರಗಳ ಚರ್ಚೆಯಾಗುತ್ತವೆ.

ಇನ್ನೊಂದು ವಿಷಯ, ಚಿಂತನಗಂಗಾವನ್ನು ಗುರೂಜಿ ಬರೆದಿಲ್ಲ! ಅವರ ಭಾಷಣ, ವಿಚಾರ, ಜೀವನವನ್ನು ಆಧಾರವಾಗಿರಿಸಿ ಅವರ ಮರಣಾನಂತರ ಪ್ರಕಟಿಸಿದ ಪುಸ್ತಕ. ಪ್ರಕಾಶಕರೇ ಹೇಳುವಂತೆ:

The ideas contained herein are his, but the words are ours. As such we are keenly aware of the shortcomings of these words and expressions.

Anonymous ಅಂತಾರೆ...

Dear Ganesh,

"The ideas contained herein are his, but the words are ours. As such we are keenly aware of the shortcomings of these words and expressions."
- Do you mean to say these are not the thoughts of guruji? Guruji's thoughts are misinterpreted in the book? RSS do not accept all the thoughts of guruji?

Regards

Subramanya

Ambika ಅಂತಾರೆ...

It is funny how people try to fight over languages. Why get egos in between? for a split moment, Imagine language as an entity, a being of throbbing blood and flesh. Then, i am sure language would be sitting out there and laughing at all of us, crying and kicking to prove ours is right (bigger) pun intended!
As a student of Linguistics, a basic knowledge that everyone must have, (before commenting); no language is a give. i.e what we know of a language today, may not be here 50 yrs from now and is not what it was 50 yrs back (entirely). Language(s) are fluid and that is where the beauty of it lies. People who fight over which language is better or who to allow to live where, based on race, caste creed, religion, color Etc. must have a lot of time at their hand, as the saying goes “Science flies you to the moon. Religion flies you into buildings.”
― Richard Dawkins

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಪ್ರದ್ಯುಮ್ನ ಅವರೇ,, ಈ ಮೊದಲಿನ ನಿಮ್ಮ ಅನಿಸಿಕೆಯಲ್ಲಿ ಕೆಂಪು ಉಗ್ರರು, ಗಡಿಯಾಚೆಯಿಂದ ಹಣ ಪಡೆದು ಮಾತನಾಡುತ್ತಿರುವವರು ಎಂಬಂತೆ ಏನ್ ಗುರು ಲೇಖಕರ ವಿರುದ್ದ ಆರೋಪ ಮಾಡಿದ್ರಿ. ಅಲ್ಲಿಂದ ಈಗ ಸಾಮ್ಯತೆ ಇರುವ ಜಾಗದಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಅನ್ನುವ ರಿಕನ್ಸಿಲಿಯೇಟರಿ ಧ್ವನಿಯಲ್ಲಿನ ನಿಮ್ಮ ಅನಿಸಿಕೆ ನಿಮಗಿರುವ ಪ್ರಬುದ್ದತೆ ತೋರಿಸುತ್ತೆ. ಕೊನೆಯಲ್ಲಿ ಒಬ್ಬರನ್ನೊಬ್ಬರು ಒಪ್ಪಬಹುದು, ಬಿಡಬಹುದು, ಆದರೆ ಚರ್ಚೆಯನ್ನು ಡೆಮಾಕ್ರಟಿಕ್ ಆದ ಹಾದಿಯಲ್ಲಿ ಮಾಡೋಣ. ಈ ಮೊದಲಿನ ನನ್ನ ಅನಿಸಿಕೆಗಳಲ್ಲಿ ನಾನು ಕೊಂಚ ವೈಯಕ್ತಿಕವಾದೆನೆನೋ ಅನ್ನಿಸಿತು, ಅದನ್ನು ಮನ್ನಿಸಿ. ಇರಲಿ ಈಗ ಆರ್.ಎಸ್.ಎಸ್ ಸಿದ್ದಾಂತಗಳ ಬಗ್ಗೆ ಏನ್ ಗುರು ಲೇಖಕರು ಎತ್ತಿರುವ ಕೆಲ ಪ್ರಶ್ನೆಗಳು ಕನ್ನಡಿಗರಾಗಿ ನಾವೆಲ್ಲರೂ ಅತ್ಯಂತ ಕ್ರಿಟಿಕಲ್ ಆಗಿ ನೋಡಬೇಕಿದೆ.

೧> ಸ್ಥಳೀಯ ವಿಷಯಗಳು ಸ್ಥಳೀಯ ಸರಕಾರ/ಸಂಸ್ಥೆಗಳಿಗೆ ಬಿಡುವುದು ಶ್ರೇಯಸ್ಕರ ಎನ್ನುವುದು ಸಂಘವೂ ಒಪ್ಪುತ್ತದ ಎಂದು ನೀವು ಹೇಳಿದ್ದೀರಿ, ಆದರೆ ಗೋಲವಲ್ಕರ್ ಅವರ ಮಾತು ಇದಕ್ಕೆ ತದ್ವಿರುದ್ದವಾಗಿದೆ.
೨> ಎಂದು ನಾವು ಸಂಪೂರ್ಣವಾಗಿ ಕನ್ನಡಿಗರಾಗುತ್ತೇವೆಯೋ, ಆಗ ವಲಸಿಗರೂ ನಮ್ಮ ಜೊತೆ ಬರಲೇಬೇಕಾಗುತ್ತದೆ ಅಂದೀರಿ. ಅದು ಆಗುವುದಾದರೂ ಹೇಗೆ? ಕನ್ನಡಿಗರೆಲ್ಲರಿಗೂ ವಲಸೆ ಬರುವವನಿಗೆ ತೊಂದರೆಯಾಗದಂತಿರಲು ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳು ಹೇಳಿ ಕಲಿಸುತ್ತಿರುವಾಗ? ನೆನಪಿರಲಿ, ಗೋಲವಲ್ಕರ್ ಅವರು ಸಂಸ್ಕೃತ ಭೂಯಿಷ್ಟ ಹಿಂದಿಯೇ ನಮ್ಮ ರಾಷ್ಟ್ರಭಾಷೆಯಾಗಬೇಕು ಅಂದವರು. ಬಹು ಭಾಷೆಯ ಈ ನೆಲದಲ್ಲಿ ಎಲ್ಲ ಭಾಷೆಗೂ ಸಮಾನ ಗೌರವ, ಸ್ಥಾನಮಾನ ಕೊಡುವ ಮಾತಾದಿದ್ದರೆ ವೈವಿಧ್ಯತೆಯ ಬಗ್ಗೆ ಅವರಿಗೆ ಕಾಳಜಿಯಿದೆ ಎಂದು ಒಪ್ಪಬಹುದಿತ್ತು. ಗೋಲವಲ್ಕರ್ ಅವರ ಮಾತು ಬಿಡಿ, ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲೂ ದೇಶದ ಭಾಷಾ ವೈವಿಧ್ಯತೆ ಏಕತೆಯ ಹಾದಿಯಲ್ಲಿರುವ ಸಮಸ್ಯೆ ಅನ್ನುವಂತೆಯೇ ಮಾತನಾಡಿದ್ದಾರೆ. ಇದು ವೈವಿಧ್ಯತೆಯ ಬಗ್ಗೆಯಿರುವ ಅಸಹನೆಯಂತೆಯೇ ಕಾಣಿಸುತ್ತೆ ನನಗೆ.
೩>ಗುರೂಜಿಯವರ ಸಮಗ್ರದಿಂದ ಕೆಲವು ವಾಕ್ಯಗಳನ್ನು ಉದಾಹರಿಸಿ ಬರೆದಿರುವ ಲೇಖನ ಖಂಡಿತವಾಗಿಯೂ ಸಂಕುಚಿತವಾಗಿದೆ. ಏಕೆಂದರೆ ಹೆಸರೇ ಹೇಳುವಂತೆ ಗುರೂಜಿಯವರ ಚಿಂತನೆಯು ೧೨ ಸಂಪುಟಗಳಲ್ಲಿ ಪ್ರಕಟವಾಗಿದೆ ಎಂದು ಹೇಳಿದ್ದೀರಿ. ನನ್ನ ಪ್ರಶ್ನೆ ೧೨ ಸಂಪುಟದ ಯಾವುದಾದರು ಒಂದು ಪುಟದಲ್ಲೇ ಆಗಿರಲಿ "ಈ ನಾಡಿನಲ್ಲಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೋಭಾವವೇನು? ಅವರು ಈ ನಾಡಿನಲ್ಲಿ ಹುಟ್ಟಿದರು, ಸಂದೇಹವೇ ಇಲ್ಲ. ಆದರೆ ಈ ನೆಲದ ಉಪ್ಪಿಗೆ ನಿಷ್ಠೆಯಿಂದ ಇದ್ದಾರೆಯೇ ಅವರು!? ಅವರನ್ನು ಬೆಳೆಸಿದ ಈ ನಾಡಿಗೆ ಕೃತಜ್ಞರಾಗಿದ್ದಾರೆಯೇ? ಈ ನಾಡು ಮತ್ತು ಇಲ್ಲಿನ ಪರಂಪರೆಯ ಮಕ್ಕಳು ತಾವು ಮತ್ತು ಇದಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಮಹಾಭಾಗ್ಯ ಎಂದು ಅವರು ಭಾವಿಸಿದ್ದಾರೆಯೇ? ಖಂಡಿತಾ ಇಲ್ಲ! ಮತಾಂತರದೊಂದಿಗೇ ರಾಷ್ಟ್ರದಲ್ಲಿ ಅವರ ಪ್ರೇಮ ಮತ್ತು ನಿಷ್ಠೆಗಳು ಹೊರಟೇ ಹೋಗಿವೆ. ಇದು ಇಲ್ಲಿಗೇ ಮುಗಿಯಲಿಲ್ಲ. ಈ ನಾಡಿನ ಶತ್ರುಗಳೊಂದಿಗೆ ಅವರು ಮಾನಸಿಕವಾಗಿ ಏಕತೆಯನ್ನು ಬೆಳೆಸಿಕೊಂಡಿದ್ದಾರೆ." ಎಂಬಂತಹ ಮಾತು ಅವರು ಆಡಿದ್ದರೆ ಅದಕ್ಕೆ ಪರಧರ್ಮಗಳ ಬಗ್ಗೆಗಿನ ಅಸಹನೆಯೊಂದನ್ನು ಬಿಟ್ಟು ಇನ್ನೇನಾದರೂ ಅರ್ಥವಿರಲು ಸಾಧ್ಯವೇ? ಇಂತಹ ಹೇಳಿಕೆಗಳ ಮೂಲಕ ಮುಸ್ಲಿಂ, ಕ್ರಿಶ್ಚಿಯನ್ನರು ಎಂದಿಗೂ ಭಾರತೀಯರಾಗಲು ಸಾಧ್ಯವಿಲ್ಲ ಎಂದೇ ಸಾರಿದಂತೆಯೇ? ಹಾಗಿದ್ದರೆ ಅಬ್ದುಲ್ ಕಲಾಂ ಭಾರತೀಯರಲ್ಲವೇ? ನಿಸಾರ್ ಅಹಮದ್ ಭಾರತೀಯರಲ್ಲವೇ? ಜಾರ್ಜ್ ಫರ್ನಾಂಡಿಸ್ ಭಾರತೀಯರಲ್ಲವೇ? ಒಬ್ಬ ಪ್ರಬುದ್ಧ ವ್ಯಕ್ತಿಯಾಗಿ ಇಂತಹ ದ್ವಂದ್ವದ ನಿಲುವುಗಳನ್ನು ಎಲ್ಲದಕ್ಕೂ ಮಿಗಿಲಾಗಿ ಒಬ್ಬ ಮನುಷ್ಯನಾಗಿ ತಾವು ವಿರೋಧಿಸಿಲ್ಲ ಅನ್ನುವುದು ನನಗೆ ಅಚ್ಚರಿ ತಂದ ವಿಷಯ.

Priyank ಅಂತಾರೆ...

ಪ್ರದ್ಯುಮ್ನ ಅವರೇ,
ಆರೆಸ್ಸೆಸ್ಸಿನ ಕಡೆಯಿಂದಾ ಸಂಸ್ಕ್ರುತ ಪಾಟಶಾಲೆಗಳನ್ನ ನಡೆಸೋದು ತಪ್ಪಲ್ಲ.
ಆದರೆ, "ಎಲ್ಲಾ ಕನ್ನಡಿಗರೂ ಸಂಸ್ಕ್ರುತ ಕಲಿಯಬೇಕು" ಎಂಬ ನಿಲುವು ಹೊಂದೋದು, ಅದನ್ನು ಆಗುಮಾಡಿಸಲು ಬಿಜೆಪಿ ಸರ್ಕಾರದ ಮೂಲಕ ಯೋಜನೆಗಳನ್ನ ಸಿದ್ಧಪಡಿಸೋದು ತಪ್ಪು.
ಇದು ಎರಡು ವಿಷಯಗಳಿಂದಾಗಿ ತಪ್ಪು,
೧. ಎಲ್ಲಾ ನುಡಿಗಳಿಗೆ ಸಂಸ್ಕ್ರುತವೇ ತಾಯಿ ಎಂಬ ಸುಳ್ಳನ್ನು ಹೇಳಿಕೊಂಡು ಈ ಕೆಲಸ ಮಾಡಲಾಗುತ್ತಿದೆ. ಯಾವ ಕೆಲಸದ ಹಿಂದೆ ಸತ್ಯವಿಲ್ಲವೋ, ಅದು ಸದುದ್ದೇಶದಿಂದ ಕೂಡಿರಲಾರದು ಅನ್ನೋದು ತಮಗೂ ತಿಳಿದಿದೆ ಅನ್ಸುತ್ತೆ.
೨. ವೈವಿಧ್ಯತೆಯನ್ನ ಪ್ರಕ್ರುತಿ ಕೊಟ್ಟ ಹಾಗೆ ಒಪ್ಪಿಕೊಳ್ಳುವ ಮನಸ್ತಿತಿ ಇಲ್ಲದೇ ಮಾಡುತ್ತಿರುವ ಕೆಲಸ ಇದಾಗಿದೆ. ವೈವಿಧ್ಯತೆಯನ್ನ ಅಳಿಸಿ ಹಾಕುವ ಕೆಲಸಕ್ಕೆ ಮೊದಲ ಹೆಜ್ಜೆ ಇದಾಗಬಹುದು.

ನೀವಾದರೋ, ಭಗವದ್ಗೀತೆಯಲ್ಲಿ ಹೇಳಿದಂತೆ, "ಕೆಲಸವನ್ನು ಮಾತ್ರ ಮಾಡಿ ಕೆಲಸದ ಫಲವನ್ನು ದೇವರು ನಿರ್ಧರಿಸುತ್ತಾರೆ" ಅಂತ ಅಂದುಕೊಂಡಿದೀರ.
ಆದರೆ, ಸತ್ಯದ ಜೊತೆ ಇರುವವರು, ವೈವಿಧ್ಯತೆಯನ್ನು ಗೌರವಿಸುವವರು, ಈ ಕೆಲಸಗಳನ್ನೆಲ್ಲಾ ಒಪ್ಪಿಕೊಳ್ಳಬೇಕು ಅನ್ನೋದು ಸರಿಯೇ?

ನಿಮ್ಮ ಸಂಘದ ಕೆಲಸಗಳಲ್ಲಿ ಇರುವ ಕೆಲ ಹುಳುಕುಗಳನ್ನು ತೋರಿಸಿದಾಕ್ಷಣ, ನಮ್ಮ ಬೇರೆ ಕೆಲಸಗಳಲ್ಲಿ ಕೈ ಜೋಡಿಸಿ ಎಂದು ಕರೆಯೋದು ಯಾಕೆ? ಹುಳುಕು ತೋರಿಸಿದವರು ನಿಮ್ಮೊಡನೆ ಕೈ ಜೋಡಿಸದಿದ್ದಾಗ, "ನೋಡಿ, ಅವನು ಕಳ್ಳ. ನಮ್ಮ ಮೇಲೆ ಆಪಾದನೆ ಮಾಡ ಬಂದಿದ್ದ, ಈಗ ಹೆಂಗೆ ಓಡಿ ಹೋದ" ಅಂತ ಹೇಳಕ್ಕಾ?

ಹುಳುಕು ತೋರಿಸಿದವರನ್ನು ಗುರು ಎಂಬಂತೆ ನೋಡಬೇಕು ತಾನೆ? ಹುಳುಕುಗಳನ್ನು ಸರಿಪಡಿಸಿಕೊಳ್ಳುತ್ತಾ ಸಾಗಿದರೆ, ಎಲ್ಲರಿಗೂ ಶ್ರೇಯಸ್ಸು. ಹುಳುಕು ತೋರಿಸಿದವರನ್ನು, ಬುದ್ದಿಜೀವಿ, ಸೂಡೋ ಸೆಕ್ಯುಲರ್, ಚೈನೀಸು, ವ್ಯಾಟಿಕನ್ನು ಅಂತ ಹೀಯಾಳಿಸೋ ಹಾಗೆ ಮಾತಾಡೋದು ಸರಿಯೇ?

ಅರುಣ್ ಜಾವಗಲ್ ಅಂತಾರೆ...

ಕನ್ನಡಿಗರ ಮುಂದೆ ತಮ್ಮ ಹುಳುಕುಗಳನ್ನ ಮರೆ ಮಾಚಲು ಕನ್ನಡ ಪ್ರಚಾರ ವರ್ಗ ನಡೆಸುತ್ತಿದ್ದೀರೇ ಹೊರೆತು ಏನೊ ಕನ್ನಡಕ್ಕೆ ಉಪಕಾರ ಮಾಡ್ತಿದ್ದೀವಿ ಅಂತ ಅಂದುಕೊಂಡಿರಬೇಕು. ಹಿಂದಿ ರಾಶ್ಟ್ರಬಾಶೆಯಾಗಿ ಕನ್ನಡ ಸೇರಿದಂತೆ ಇತರೇ ಬಾಶೆಗಳು ಮನೆಯೊಳಗೆ ಮಾತಾಡೊ ಹಾಗೆ ಆಗಬೇಕು, ಕನ್ನಡಿಗರು ತಮ್ಮನ್ನ ತಾವು ಆಳಿಕೊಳ್ಳಲು ಆಗದವರು ಇತ್ಯಾದಿ ಸಿದ್ದಾಂತವನ್ನು ಹೊಂದಿರೋ ಜನ ಕನ್ನಡವನ್ನು ಯಾಕೆ ಕಲಿಸೋಕ್ಕೆ ಹೋಗ್ತಾರೆ. ಇವರು ಕನ್ನಡ ಕಲಿಸುತ್ತಿರುವುದು ಕನ್ನಡದ ಮೇಲಿನ ಕಳಕಳಿಯಿಂದಲ್ಲ. ಕನ್ನಡದ ಕಲಿಕೆಯ ಹೆಸರಲ್ಲಿ ಒಂದಿಶ್ಟು ತಮ್ಮ ಸಿದ್ದಾಂತವನ್ನ ಸಮಾಜದಲ್ಲಿ ಹರಿ ಬಿಡೋದೇ ಇವರ ಗುರಿ ಇರಬಹುದು.

ಅರುಣ್ ಜಾವಗಲ್ ಅಂತಾರೆ...

ಸುಮ್ನೆ ಅದೇ ಕನ್ನಡ ಪ್ರಚಾರ ವರ್ಗದ ಕತೆ ಬಿಟ್ಟು ತಮಗೆ ತಮ್ಮ ಸಂಗದ ಸಿದ್ದಾಂತಗಳಾದ ಹಿಂದಿ ರಾಶ್ಟ್ರಬಾಶೆಯಾಗಬೇಕು, ಸ್ವಯಮಾದಿಕಾರ ಉಳ್ಳ ರಾಜ್ಯಗಳು ಇರಬಾರದು, ಕನ್ನಡಿಗರು ತಮ್ಮನ್ನ ತಾವು ಆಳಿಕೊಂಡರೆ ಅದು ದೇಶದ ಏಕತೆಗೆ ಮಾರಕ ಅನ್ನೊ ಸಿದ್ದಾಂತಗಳು ಒಪ್ಪಿಗೆಯೋ ಇಲ್ಲವೋ ತಿಳಿಸಿ ಆ ನಂತರ ತಮ್ಮ ಸಿದ್ದಾಂತ ಹೇಗೆ ಕರ್ನಾಟಕಕ್ಕೆ ಕನ್ನಡಿಗರಿಗೆ ಕನ್ನಡಕ್ಕೆ ಉಪಯೋಗ ಅನ್ನೊದನ್ನ ವಿವರಿಸಿ ಅದನ್ನ ಬಿಟ್ಟು ಸುಮ್ನೆ ಹುಳುಕು ಮುಚ್ಚಿಕೊಳ್ಳಲು ಮಾಡ್ತಿರೋ ಕನ್ನಡ ಪ್ರಚಾರ ವರ್ಗದ ಬಗ್ಗೆ ಬೊಬ್ಬೆ ಹೊಡೆಯುವುದನ್ನ ನಿಲ್ಲಿಸಿ.

ಗಣೇಶ್ ಅಂತಾರೆ...

These might be thoughts of Guruji. But RSS is not a political organisation to decide on federal structure etc; Swayamsevaks can have their own views on these. There are swayamsevaks who support it, and there are who oppose it. Swayamsevaks can have both the views, including Guruji.
We cannot have people with 100% uniform views on all ideologies. Apart from factors defined in RSS constitution, everyone can have own thoughts.

Priyank ಅಂತಾರೆ...

@ಗಣೇಶ್,
ನೀವು ಆರೆಸ್ಸಸ್ ಕಾರ್ಯಕರ್ತರಾದ್ದರಿಂದಾ, ಈ ಬಗ್ಗೆ ನಿಮ್ಮ ನಿಲುವು ಏನು ಎನ್ನುವುದನ್ನೂ ತಿಳಿಸಿಬಿಡಿ.
ಇನ್ನೊಂದು ಪ್ರಶ್ನೆ, "ನೀವು ಹೇಳಿದ RSS constitution ಏನು?".
ಆರೆಸ್ಸೆಸ್ಸಿಗೆ ಇನ್ನೊಂದು ಸಂವಿದಾನ ಇದೆಯಾ?

maaysa ಅಂತಾರೆ...

'Richard Dawkins' is an atheist and a biologist. Hence obviously he will strongly rebuke the concept of a country based on a religion. Hence he would rebuke RSS which wishes India to become 'Hindu theocracy' just like 'Islamic Iran' or 'Islamic Pakistan'. Moreover Hinduism and India are by nature pluralistic. If one has read more about Dawkins his main criticism is towards 'monotheistic' cultures and religions.

And what Enguru is arguing is not mere "fight over which language is better or who to allow to live where". It is saying all languages are equal and deserve same status and respect in their respective lands. Why would and how could Sanskrit or Hindi be a superior language to Kannada in my 'mother land' . the Kannada land of Karnatka?

ಪ್ರದ್ಯುಮ್ನ ಬೆಳವಾಡಿ ಅಂತಾರೆ...

ವಾದಗಳಿಂದ ಇದುವರೆಗೂ ಯಾರೂ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಕನ್ನಡ ಪರಿಚಯ ವರ್ಗಕ್ಕೆ ನಿಮ್ಮ ಸಹಕಾರ ಇದ್ದರೆ ಒಳ್ಳೆಯದು. ಬನ್ನಿ. ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಬ್ಲಾಗ್‍ನಲ್ಲಿ ಈ ರೀತಿಯ ವಾದಗಳಿಂದ ಎಲ್ಲರ ಮನಸ್ಸೂ ಹುಳಿಯಾಗುವುದೇ ನಿಜ. ನೀವೇನೂ ನಮ್ಮ ಶತ್ರುಗಳಲ್ಲ. ನಮ್ಮದೇ ಸಮಾಜದ ಅಂಗ ಎಂದೇ ನಮ್ಮ ಭಾವನೆ. ನೀವೂ ಸೇರಿದಂತೆ ನಮ್ಮ ವಿರೋಧಿಗಳನ್ನೂ ನಾವು ನಮ್ಮವರೆಂದೇ ಭಾವಿಸುತ್ತೇವೆ. ನಮ್ಮನ್ನು ಶತ್ರುಗಳೆಂದು ಭಾವಿಸವ ಎಡಪಂಥೀಯರನ್ನೂ ನಾವು ನಮ್ಮವರೆಂದೇ ಭಾವಿಸುತ್ತೇವೆ. ಅವರನ್ನೂ ಅನೇಕ ಕಾರ್ಯಕ್ರಮಗಳಿಗೆ ಕರೆದಿದ್ದೇವೆ. ಬಂದಿದ್ದಾರೆ. ಆದರೆ ಸುಮ್ಮನೆ ’ಒಪ್ಪಿಕೊಳ್ಳಿ ಒಪ್ಪಿಕೊಳ್ಳಿ’ ಅಂತ ಬಡಬಡಾಯಿಸುವುದು ಸರಿಯಲ್ಲ. ವಿಚಾರ ವಿನಿಮಯಕ್ಕೆ ಒಂದು ವ್ಯವಸ್ಥಿತ ವಾತವರಣ, ಸ್ಥಳ ಬೇಕು.

ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಈ ಬ್ಲಾಗ್ ಮೂಲಕ ಉತ್ತರಿಸಲು ಸಾಧ್ಯವಿಲ್ಲ. ಆದರೆ ಆನಂದ್‍ರವರ ಈ ಲೇಖನವನ್ನೂ ವಿರೋಧಿಸಿ ನಾನು ಕೊಟ್ಟಿರುವ ಉತ್ತರಕ್ಕೆ ಈಗಲೂ ಬದ್ಧನಾಗಿದ್ದೇನೆ. ಅದರಿಂದ ನನಗೇನೂ ಆನಂದ್‍ರ ಮೇಲಾಗಲೀ ಸಂಘವನ್ನು ಹೀಯಾಳಿಸುವ ಇತರರ ಮೇಲಾಗಲೀ ನನಗೆ ದ್ವೇಷವಿಲ್ಲ. ನೀವು ಹೇಗೆ ನಮ್ಮ ರಾಷ್ಟ್ರೀಯ ದೃಷ್ಟಿಕೋಣವನ್ನು ಯಾವುದೇ ಕಾರಣಕ್ಕೆ ವಿರೋಧಿಸುತ್ತಿರುವಿರೋ ಅದೇ ರೀತಿ ಈ ಬ್ಲಾಗನ್ನು ವಿರೋಧಿಸಲೂ ಅದೇ ರೀತಿಯ ಕಾರಣಗಳಿವೆ. ಆದರೆ ನಾವು ಎಚ್ಚರದಿಂದಿರಬೇಕಾದ ಅಂಶವೆಂದರೆ, ನಮ್ಮ ಈ ಭಿನ್ನಾಭಿಪ್ರಾಯಗಳನ್ನು ದುರುಪಯೋಗಪಡಿಸಿಕೊಳ್ಳಬಹುದಾದ ಶಕ್ತಿಗಳ ಬಗ್ಗೆ. ಪ್ರೀತಿಯಿರಲಿ. ತಾಯಿ ಭಾರತಿಯ ಮತ್ತು ಭುವನೇಶ್ವರಿಯ ಆಶೀರ್ವಾದವಿರಲಿ.

ಅರುಣ್ ಜಾವಗಲ್ ಅಂತಾರೆ...

@ಗಣೇಶ್, RSS ಸಿದ್ದಾಂತಕ್ಕೂ ಗುರುಜೀರವರ ಅಬಿಪ್ರಾಯಕ್ಕೂ ಸಂಬಂದವಿಲ್ಲವೇ? ಹಿಂದಿ ರಾಶ್ಟ್ರಬಾಶೆಯಾಗಬೇಕು, ಮತ್ತು ಬಾರತ ಒಕ್ಕೂಟವಾಗಬಾರದು ಎನ್ನುವ ನಿಲುವು RSS ಗೆ ಇಲ್ಲವೇ? ಚಿಂತನಗಂಗಾ ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಪುಸ್ತಕದ ಮೊದಲಲ್ಲೇ ಬರೆಯಲಾಗಿರುವುದರಿಂದ ಇದನ್ನು ಸಂಘದ ಅಧಿಕೃತವಾದ ನಿಲುವು ಎಂದೇ ಪರಿಗಣಿಸಬೇಕಾಗುತ್ತದೆ ಅಲ್ಲವೇ? ಗುರುಜೀ ಅಬಿಪ್ರಾಯ ಕ್ಕೂ RSS ಸಿದ್ದಾಂತಕ್ಕೂ ಸಂಬಂದವಿಲ್ಲದಿದ್ದರೆ ಸಂಘದ ಸಿದ್ದಾಂತಗಳಿಗೆ ಕನ್ನಡಿ ಎನ್ನುವ ಮಾತ್ಯಾಕೆ ಇರ್ತಿತ್ತು?

ಅರುಣ್ ಜಾವಗಲ್ ಅಂತಾರೆ...

ಈ ಲೇಕನದ ಸರಿಯಿಲ್ಲ ಎನ್ನುವವರು, RSS ನ ಹಿಂದಿ ರಾಶ್ಟ್ರಬಾಶೆಯಾಗಬೇಕು, ಬಾರತ ಒಕ್ಕೂಟವಾಗಬಾರದು, ಹಿಂದುಗಳನ್ನು ಬಿಟ್ಟು ಬೇರೆ ದರ್ಮ ಪಾಲಿಸುವವರಿಗೆ ದೇಶಾಬಿಮಾನ ಇರುವುದಿಲ್ಲ, ಕೆಳವರ್ಗದ ಜನರಿಗೆ ಮೀಸಲಾತಿ ಇರಬಾರದು ಎನ್ನುವ ಸಿದ್ದಾಂತಗಳು ಹೇಗೆ ಕನ್ನಡ ಕನ್ನಡಿಗ ಮತ್ತು ಕರ್ನಾಟಕಕ್ಕೆ ಉಪಯೋಗವಾಗಬಲ್ಲದು ಎನ್ನುವುದನ್ನ ವಿವರಿಸಿ.

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಪ್ರದ್ಯುಮ್ನ ಅವರೇ, ಸುಮ್ಮನೆ ಒಪ್ಪಿಕೊಳ್ಳಿ ಎಂದು ನಾನಂತೂ ಹೇಳಿಲ್ಲ. ಆರ್.ಎಸ್.ಎಸ್ ಸಿದ್ಧಾಂತದಲ್ಲಿನ ಹುಳುಕು, ಅಸ್ಪಷ್ಟತೆಯನ್ನು ಎತ್ತಿ ತೋರಿಸಿ, ಅದರ ಬಗ್ಗೆ ಸ್ಪಷ್ಟೀಕರಣ ಕೇಳಿದ್ದೇನೆ, ಆದರೆ ಅದಕ್ಕೆ ತಕ್ಕ ಉತ್ತರ ನನಗಂತೂ ಸಿಕ್ಕಿಲ್ಲ. ನಾನೂ ಅಷ್ಟೇ, ನಿಮ್ಮ ಮೇಲೆ ಹಗೆ ಕಾರಿ ನನಗೆ ಏನು ಆಗಬೇಕಿಲ್ಲ. ನಿಮ್ಮ ಉತ್ತರದ ಪ್ರತಿ ಸಾಲಿನ ಬಗ್ಗೆ ನಾನೂ ಮರುವುತ್ತರ ನೀಡಿದ್ದೇನೆ ಮತ್ತು ಅಲ್ಲಿ ನಾನೆತ್ತಿರುವ ಪ್ರಶ್ನೆಗಳಿಗೆ ಇನ್ನಷ್ಟು ಮೊನಚಾದ ಸೈದ್ಧಾಂತಿಕ ಉತ್ತರ ನಿಮ್ಮಿಂದ ಬರುವುದು ಅಂಬ ನಿರೀಕ್ಷೆಯಲ್ಲಿದ್ದೆ. ಆದರೆ ಅದು ಬರದು ಎಂದು ಖಾತರಿಯಾಗಿದೆ. ಆ ಬಗ್ಗೆ ಬೇಸರವಿಲ್ಲ. ಆರ್.ಎಸ್.ಎಸ್ ನ ಸಿದ್ಧಾಂತದಲ್ಲಿನ ಪೊಳ್ಳುತನ ತೋರಿಸಿದಾಕ್ಷಣ ಅದನ್ನು ಹೀಯಾಳಿಸುವುದು ಅಂದುಕೊಳ್ಳಬೇಡಿ. ಪ್ರತಿ ಸಿದ್ದಾಂತವನ್ನು ಪ್ರಶ್ನಿಸಿಯೇ ಮುಂದಡಿಯಿಡಬೇಕು. ಕಮ್ಯೂನಿಸಂ ಆಗಲಿ, ಕ್ಯಾಪಟಲಿಸಂ ಅಗಲಿ, ಸಮಾಜವಾದ ಆಗಲಿ, ಹಿಂದೂಯಿಸಂ, ಇಸ್ಲಾಂ,, ಜಗತ್ತಿನಲ್ಲಿ ಯಾವುದೂ ಪರ್ಫೆಕ್ಟ್ ಅಂತಿಲ್ಲ. ಎಲ್ಲದರಲ್ಲಿನ ಒಳಿತು, ನಮ್ಮ ಸಮಾಜಕ್ಕೆ ಆಗುವ ಒಳಿತನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಬೇಕಷ್ಟೆ. ಆರ್.ಎಸ್.ಎಸ್ ನಲ್ಲಿ ಏನೆಂದರೆ ಏನು ತೊಡಕು ನಿಮಗೆ ಕಾಣಿಸದಿರುವುದು, ನೀವು ಅದನ್ನು ತೆರೆದ ಮನಸ್ಸಿನಿಂದ, ಮೂರನೆಯ ವ್ಯಕ್ತಿಯಾಗಿ ನೋಡುತ್ತಿಲ್ಲ ಅಂದಷ್ಟೇ ನನಗನಿಸಿದೆ. ಒಂದಲ್ಲ ಒಂದು ದಿನ ನಿಮಗೆ ಅದು ಗೊತ್ತಾಗುವುದು, ಆಗ ತಡವಾಗದಿಲಿ..ನಿಮ್ಮ ಹಾದಿಯಲ್ಲಿ ಒಳಿತಾಗಲಿ.

Priyank ಅಂತಾರೆ...

ಪ್ರದ್ಯುಮ್ನ ಅವರೇ,
ಆರೆಸ್ಸೆಸ್ಸಿನ ನಿಲುವುಗಳನ್ನು ಪ್ರಶ್ನಿಸಿದೋರು ಯಾರೂ, ಆರೆಸ್ಸೆಸ್ಸನ್ನು ಶತ್ರು ಎಂಬಂತೆ ನೋಡುತ್ತಿಲ್ಲ. ಆರೆಸ್ಸೆಸ್ಸಿನ ಕೆಲಸಗಳಿಗೆ ಕನ್ನಡಿಗರೆಲ್ಲರೂ ಕೈ ಜೋಡಿಸಿದರೆ, ಕನ್ನಡಿಗರಿಗೇ ತೊಂದರೆಯಿದೆ ಎಂಬುದಷ್ಟೇ ಇಲ್ಲಿಯ ನಿಲುವು.

ವಾದಗಳಿಂದ ಸಾಕಷ್ಟು ವಿಚಾರಗಳ ಕೊಡು-ಕೊಳ್ಳುವಿಕೆ ಆಯಿತು. ಇದನ್ನು ಸಾಧಿಸಲು ಬೇರೇನೂ ದಾರಿಗಳಿಲ್ಲ.

ನಿಮ್ಮ ಮಾತುಗಳಿಗೆ ಬದ್ಧವಾಗಿರೋದಾಗಿ ತಿಳಿಸಿದೀರ. ಆದರೆ, ಹಿಂದಿ ಅತವಾ ಸಂಸ್ಕ್ರುತ ಹೇರಿಕೆಯ ಬಗೆಗೆ ನಿಮ್ಮ ನಿಲುವು ಬದಲಾಯಿತೋ ಎಂಬುದು ನನಗೆ ಕೊನೆಗೂ ತಿಳಿಯದಾಯಿತು. ಈಗಲೂ, ನೀವು ಹೇರಿಕೆಯ ಪರ ಇದ್ದೀರೆಂದೇ ತಿಳಿದಿದ್ದೇನೆ - ಹಾಗಿಲ್ಲವಾದರೆ ದಯವಿಟ್ಟು ತಿಳಿಸಿ.
ಈ ವಾದಗಳ ನಂತರ, ವೈಯಕ್ತಿಕ ಮಟ್ಟದಲ್ಲಿ ಇನ್ನೊಂದು ನುಡಿಯನ್ನು ಕಲಿಯುವುದಕ್ಕೂ, ಇಡೀ ನಾಡಿನ ಮೇಲೆ ಒಂದು ನುಡಿಯನ್ನು ಹೇರುವುದಕ್ಕೂ ಇರುವ ವ್ಯತ್ಯಾಸ ತಾವು ತಿಳಿದಿದ್ದೀರ ಎಂದು ನಂಬಿದೀನಿ.

Amarnath Shivashankar ಅಂತಾರೆ...

ಆರ್.ಎಸ್.ಎಸ್ ಸಕ್ಕತ್ ದೇಶಭಕ್ತರ ಸಮೂಹ ಅಂತ ಒಪ್ಪಬೇಕಾದರೆ, ಈ ನಿಯಮಗಳನ್ನು ಅವರು ಪಾಲಿಸಬೇಕಿದೆ ಅಲ್ವಾ?

೧. ಕನ್ನಡ, ತೆಲುಗು, ತಮಿಳು, ಹಿಂದಿ ಎಲ್ಲವೂ ಸಮಾನವಾದ ಭಾಷೆಗಳೇ. ಹಿಂದಿ ಅಥ್ವಾ ಸಂಸ್ಕೃತಕ್ಕೆ ಯಾಕೆ ವಿಶೇಶ ಒತ್ತು?
೨. ಆರ್.ಎಸ್.ಎಸ್ ಸ್ವಯಂಸೇವಕರು ನಿಜವಾದ ದೇಶಭಕ್ತರೇ ಆದರೆ ದೇಶದಲ್ಲಿ ನೆಲೆಸಿರುವ ಎಲ್ಲ ಧರ್ಮದ ಜನರನ್ನು ಒಂದಾಗಿಯೇ ನೋಡಬೇಕು ಅಲ್ವಾ?
೩. ಆರ್.ಎಸ್.ಎಸ್ ಗೆ ಕನ್ನಡ, ಕನ್ನಡಿಗ, ಕರ್ನಾಟಕದ ಮೇಲೆ ಅಷ್ಟೋಂದು ಪ್ರೀತಿ ಇದ್ದರೆ, ಯಾಕೆ ಕರ್ನಾಟಕದ, ಕನ್ನಡಿಗರ ಸಮಸ್ಯೆಗೆ ಸ್ಪಂದಿಸಬಾರದು? ನಮ್ಮ ನದಿ, ಗಡೀ ವಿಚಾರಗಳ ಬಗ್ಗೆ ಅವರೇಕೆ ಕನ್ನಡಿಗರ ಜೊತೆ ಕೈಜೋಡಿಸಿ ಸಮಸ್ಯೆ ಬಗೆಹರಿಸಬಾರದು?
೪. ದೇಶದ ಒಗ್ಗಟ್ಟು, ಏಕತೆಯ ಬಗ್ಗೆ ಸುಮ್ಮನೆ ಬೊಬ್ಬೆ ಹೊಡೆದಂಗಲ್ಲ. ಕಾವೇರಿ ನದಿ ನೀರಿನ ವಿವಾದ, ಕಿಷ್ಣ ನದಿ ನೀರಿನ ವಿವಾದ, ಬೆಳಗಾವಿ, ಕಾಸರಗೋಡು ಗಡಿ ವಿವಾದಗಳ್ನ ಬಗೆಹರಿಸಬಾರದು

ಕನ್ನಡಿಗರು ಇಲ್ಲಿ ಬೇರೆ ಬೇರೆ ಕಾರಣಗಳಿಗೆ ಕಷ್ಟ ಪಡುತ್ತಿದ್ದಾರೆ. ಇವರು ಸುಮ್ಮನೆ ಪುಕಸಟ್ಟೆ ಬುದ್ದಿವಾದಗಳ್ನ ಹೇಳಿ ಎಲ್ಲರೂ ಅಣ್ಣ ತಮ್ಮಂದಿರು, ಹೊಂದಿಕೊಂಡು ಹೋಗಿ ಅದು ಇದು ಅಂತ ಕಥೆ ಹೊಡೀತಾರೆ. ನಿಜವಾಗಿಯೂ ಅಣ್ಣ ತಮ್ಮಂದಿರ ತರ ಇರಬೇಕಾದರೆ, ಸರಿಯಾಗಿ ಅವರನ್ನು ನೋಡಿಕೊಳ್ಳಬೇಕು, ನಡೆಸಿಕೊಳ್ಳಬೇಕು.

ಒಟ್ಟಾರೆಯಾಗಿ ಆರ್.ಎಸ್.ಎಸ್ ಇಂದ ಕನ್ನಡಿಗರಿಗೆ ಕಿಂಚಿತ್ತೂ ಪ್ರಯೋಜನವಿಲ್ಲ. ಹಾಗಿದ್ದ ಮೇಲೆ ಸ್ವಾಭಿಮಾನಿ ಕನ್ನಡಿಗರು(ಏನಾದರೂ ಸ್ವಾಭಿಮಾನ ಇದ್ದರೆ) ಇನ್ನೂ ಇದನ್ನ ವಹಿಸಿಕೊಂಡು ಮಾತನಾಡೋದು ತಮಾಷೆಯೇ ಸರಿ

ಪ್ರದ್ಯುಮ್ನ ಬೆಳವಾಡಿ ಅಂತಾರೆ...

ಪ್ರಿಯಾಂಕ್ ರವರೇ,

ಸಂಘದ ಕುರಿತಾದ ನಿಮ್ಮ ನಿಲುವಿಗೆ ನನ್ನ ಭಿನ್ನಾಭಿಪ್ರಾಯವಿದೆಯಾದರೂ ಗೌರವವಿದೆ. ಆದೇ ರೀತಿ ನಮ್ಮ ನಿಲುವಿನ ಬಗ್ಗೆಯೂ ಇರಲಿ. ಯಾರನ್ನೂ ದ್ವೇಷಿಸಬೇಡಿ. ನನ್ನ ಯಾವುದೇ ಅಭಿಪ್ರಾಯದಲ್ಲಿ ಬದಲಾವಣೆಗಳಿಲ್ಲ. ಬ್ಲಾಗ್ ಮೂಲಕ ನೀವು ಜನರ ಅಭಿಪ್ರಾಯಗಳನ್ನು ಬದಲಿಸಲು ಹೊರಟರೆ ನಿರಾಸೆಯಾದೀತು. ಆದರೂ ಪ್ರಯತ್ನಿಸಿ. ಅದರ ಜೊತೆ ಒಂದಿಷ್ಟು ಕೆಲಸವನ್ನೂ ಮಾಡಿ. ಕನ್ನಡಮ್ಮನ ಸೇವೆಗೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ಬರೀ ಘೋಷಣೆಯಿಂದ ಆಗದು. ವಲಸಿಗರನ್ನು ಪ್ರೀತಿಯಿಂದ ಕರೆತನ್ನಿ. ಅವರ ಸುಃಖ ದುಃಖಗಳನ್ನು ಭಾಗಿಯಾಗಿ. ಅವರಿಗೆ ನೀವು ತಮ್ಮವರು ಎನ್ನಿಸಲಿ. ಸೇವಾ ಪ್ರಕಲ್ಪಗಳನ್ನು ಪ್ರಾರಂಭಿಸೋಣ. ಕನ್ನಡ ಶಾಲೆಗಳನ್ನು ತೆರೆಯೋಣ. ನಮ್ಮ ಮಕ್ಕಳನ್ನು ಮೊದಲು ಕಳಿಸೋಣ. ಒಂದೆರೆಡು ತಲೆಮಾರುಗಳು ಕಷ್ಟಪಡಬೇಕಾಗಬಹುದು. ನಿರಂತರ ಪ್ರಯತ್ನವಿರಲಿ. ಹಿಂಸೆ, ದ್ವೇಷವಿರದ ಯಾವುದೇ ಕೆಲಸಕ್ಕೆ ನಾವೂ ಸಹ ಬರುತ್ತೇವೆ.

ಸಂಘದಂತಹ ಸಂಸ್ಥೆಗಳನ್ನು ದ್ವೇಷಿಸುತ್ತಾ, ಹೊರಗಿಡುತ್ತಾ, ಇನ್ನೊಂದು ರೀತಿಯ ಅಸ್ಪೃಶ್ಯತೆಯನ್ನು ನಿರ್ಮಾಣ ಮಾಡುವ ಬದಲು ಜೊತೆಯಾಗಿ ಕೆಲಸ ಮಾಡುವ ರೀತಿಯನ್ನು ಯೋಚಿಸೋಣ. ನಾವು ನೀವು ಕನ್ನಡ, ಹಿಂದಿ, ಸಂಸ್ಕೃತ ಎಂದು ಕೂಗಾಡುತ್ತಿರುವಾಗ ಹೊರಶಕ್ತಿಗಳು ಸುಲಭವಾಗಿ ಆಂಗ್ಲ ಭಾಷೆಯನ್ನು ಮನೆ ಮನೆಗೆ ತರುತ್ತಿವೆ. ಈ ದಿನ ಕನ್ನಡ ಮಾತನಾಡುವ ಮಧ್ಯಮ ವರ್ಗವು ಆಂಗ್ಲ ಭಾಷೆಗೆ ಅಡಿಯಾಳಾಗಿ, ಕೊನೆಗೆ ಕನ್ನಡವೂ ಇಲ್ಲ, ಹಿಂದಿಯೂ ಇಲ್ಲ, ಸಂಸ್ಕೃತ ಮೊದಲೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾದೀತು. ಇದನ್ನೇ ನಾನು ಮೆಕಾಲೆ ನೀತಿ ಎಂದು ಎಚ್ಚರಿಸಿದ್ದು. ಇದೇ ಭಾವನೆ ಅಂಭಿ ರಾಜನು ಅಲಕ್ಷೇಂದ್ರನನ್ನು ಮಣೆ ಹಾಕಿ ಕರೆತರಲು ಕಾರಣವಾದದ್ದು. ಇದೇ ಜಯಚಂದನ ಘೋರ ರಾಷ್ಟ್ರದ್ರೋಹಕ್ಕೆ ಕಾರಣವದದ್ದು.

ಬಿಡಿ, ಹೆಚ್ಚು ವಾದ ತರವಲ್ಲ. ಬೇರೆ ದಾರಿಯಿಲ್ಲ ಎಂದಿದ್ದೀರಿ. ದಾರಿಯಿದೆ. ಕಂಡುಕೊಳ್ಳಬೇಕಾಗಿದೆ ಅಷ್ಟೇ. ಶುಭವಾಗಲಿ. ತಾಯಿ ಭಾರತಿಯ ಮತ್ತು ಭುವನೇಶ್ವರಿಯ ದಯೆಯಿರಲಿ.

Chetan ಅಂತಾರೆ...

ಪ್ರದ್ಯುಮ್ನ ಅವರೇ, ನೀವೆ ಹೇಳಿದಂತೆ ಎಲ್ಲರೂ ನಮ್ಮವರೆ. ಆದರೆ ಗುರುಜಿಯವರು ಹೇಳಿರುವ ವಿಷಯಗಳಲ್ಲಿ ಸಂಸ್ಕೃತ ಹಾಗೂ ಹಿಂದಿ ಭಾಶೆಯ ಹೇರುವಿಕೆ, ಒಕ್ಕೂಟ ವಿರೋಧಿ ಧೋರಣೆ ತಪ್ಪು ಅನ್ನಿಸಿದ್ದಲ್ಲಿ ಹೇಳುವುದಕ್ಕೆ ಎಲ್ಲರಿಗೂ ಹಕ್ಕಿದೆ. ಅದನ್ನೇ ಎನ್ ಗುರು ಬ್ಲಾಗಿನಲ್ಲಿ ಮಾಡಲಾಗಿದೆ. ಇಲ್ಲಿ ಯಾರು ಯಾರನ್ನು ದ್ವೇಷಿಸುವ ಸಲುವಾಗಿ ಬರೆಯುತ್ತಿಲ್ಲ. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಬಹುಷಃ ಇಷ್ಟು ಮುಕ್ತವಾಗಿ ಒಂದು ಚರ್ಚೆ ನಡೆಯುತ್ತಿರುವುದು ಸಮಾಜದ ದೃಷ್ಠಿಯಿಂದ ಒಳ್ಳೆಯದೇ, ನಿಮ್ಮ ವಾದಗಳನ್ನ ಜನರ ಮುಂದಿಡಿ. ಅವರಿಗೆ ಸರಿ ಅನ್ನಿಸಿದ್ದನ್ನು ಅವರು ಒಪ್ಪಿಕೊಳ್ಳುತ್ತಾರೆ. ಇಲ್ಲಿ ಯಾರು ಇನ್ನೊಬ್ಬರ ಮೇಲೆ ಹೇರಿಕೆ ಮಾಡಾಬಾರದು. ಅದೇ ಈ ಬ್ಲಾಗಿನ ಉದ್ದೇಶ ಕೂಡ ಆಗಿದೆ.

Anonymous ಅಂತಾರೆ...

ಪ್ರದ್ಯುಮ್ನರವರೇ,
ನಮಸ್ಕಾರ... ಸಂಘದ ಸಿದ್ಧಾಂತದಲ್ಲಿ ಸಂಪರ್ಕ ಭಾಷೆ ಹಿಂದೀ ಇರಬೇಕು ಎಂದಿರುವುದನ್ನು ನೀವೂ ಒಪ್ಪಿದ್ದೀರಿ ಅಲ್ಲವೇ? ಹಾಗಿದ್ದ ಮೇಲೆ ನಿಮ್ಮ ಕನ್ನಡ ಕಲಿಸುವ ತರಗತಿಗಳು ಈ ನಿಲುವಿಗೆ ವಿರುದ್ಧವಾಗಿಲ್ಲವೇ? ಯೋಚಿಸಿ. ಸಂಪರ್ಕ ಭಾಷೆ ಹಿಂದೀ ಎನ್ನುವುದರ ಅರ್ಥ ಪರರಾಜ್ಯಗಳಿಂದ ಇಲ್ಲಿಗೆ ಬರುವವರೆಲ್ಲಾ/ ನಾವು ಪರರಾಜ್ಯಗಳಿಗೆ ಹೋಗುವಾಗೆಲ್ಲಾ ಹಿಂದೀಯನ್ನು ಬಳಸಬೇಕು ಎನ್ನುವುದೇ ಅಲ್ಲವೇ? ಮತ್ತೇಕೆ ನೀವು ಕನ್ನಡ ಕಲಿಸುತ್ತೀರಿ? ಕನ್ನಡಿಗರೆಲ್ಲಾ ಪರಭಾಷಿಕರಿಗೆ (ಭಾರತೀಯರೆಲ್ಲರಿಗೆ!) ಅನುಕೂಲವಾಗಲು ಹಿಂದೀ ಕಲಿಯಬೇಕು ಎನ್ನುವ ನಿಲುವು ನಿಮ್ಮದಾಗಿದ್ದರೆ ಅದು ಮಾತ್ರಾ ನಿಮ್ಮ ಸಂಘದ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಲ್ಲವೇ? ಕನ್ನಡ ಕಲಿಸುವುದರ ಹಿಂದಿನ ಉದ್ದೇಶವೇನು? ಹೇಳಿ...

Priyank ಅಂತಾರೆ...

ಪ್ರದ್ಯುಮ್ನ ಅವರೇ,
ನನಗೆ ಯಾರ ಮೇಲೂ ದ್ವೇಷವಿಲ್ಲ. ನಿಲುವುಗಳ ಬಗ್ಗೆ ವಿರೋಧವಿದೆ ಅಷ್ಟೆ.
ನಿಜಕ್ಕೂ ಸಮಾನ ಗೌರವದ ಒಂದು ಸಮಾಜ ಕಟ್ಟಿದ್ದೇ ಆದರೆ, ಅದು ಯಾವುದೇ ಹೊರಗಿನ ಶಕ್ತಿಯನ್ನು ಎದುರಿಸಿ ನಿಲ್ಲಬಲ್ಲುದು.
ನಮ್ಮಲ್ಲಿ, ಎಲ್ಲರೂ ಸಮಾನ ಆದರೆ ಹಿಂದಿ ಕೊಂಚ ಮೇಲು ಎಂಬಂತಹ ವ್ಯವಸ್ಥೆ ಇವತ್ತಿದೆ. ಇದು ಬದಲಾಗಲಿ, ಎಲ್ಲರನ್ನೂ ಸಮಾನರೆಂದು ಗೌರವದಿಂದ ನೋಡುವ ವ್ಯವಸ್ಥೆ ಬರಲಿ. ಆಗಮಾತ್ರ ನೀವು ಕನಸು ಕಾಣುತ್ತಿರೋ ಒಗ್ಗಟ್ಟಿನ ನಾಡು ಕಣ್ಣೆದುರು ನಿಲ್ಲುವುದು.
ಸಮಾನತೆಯನ್ನು ಕೇಳುವುದು ’ಹಗೆತನ’ ಎಂದು ನೀವು ಬಣ್ಣಿಸಿದಂತಿದೆ.
ಕನ್ನಡಿಗರು "ನಮ್ಮ ಮೇಲಿನ ಹಿಂದಿ ಹೇರಿಕೆ ನಿಲ್ಲಿಸಿ" ಎಂದು ಕೇಳಿದರೆ, ನಿಮಗೆ ಕನ್ನಡಿಗರ ನೋವಿನ ಕೂಗು ಕೇಳಿಸೊಲ್ಲ. ಬದಲಿಗೆ ಹಿಂದಿಯ ಮೇಲಿನ ಹಗೆತನದ ಕೂಗಾಟ ಕೇಳುತ್ತೆ. ಹಾಗಾಗಿ ನೀವು ಇದನ್ನು ದೇಶದ್ರೋಹ ಎಂದು ಬಗೆಯುತ್ತೀರ.
ಇಲ್ಲಿ ನಿಜವಾಗಿ ತಪ್ಪು ಹೇರಿಕೆ ಮಾಡುವ ಮನಸ್ತಿತಿಯದು, ಹೇರಿಕೆಗೆ ಒಳಗಾಗುತ್ತಿರುವ ಕನ್ನಡಿಗರದ್ದಲ್ಲ.

maaysa ಅಂತಾರೆ...

"೧. ಕನ್ನಡ, ತೆಲುಗು, ತಮಿಳು, ಹಿಂದಿ ಎಲ್ಲವೂ ಸಮಾನವಾದ ಭಾಷೆಗಳೇ."

Not in every context.

But in Karnataka, Kannada is supreme and the status of Kannada as the sole official language of the state cannot be given to any other language.

The state of Karnataka was established on the linguistic bases as a state for Kannada speaker. Where as India is not established as a country of Hindi/Sanskrit speakers. India is a union of states.

All the Indian languages must be treated equally by the central government since it is governing and responsible for the Indian Union as a whole.

Whereas inside Karnataka, Kannada must the sole official and authoritative language of administration and public communication. If anyone asks for any service in other than Kannada, he/she must pay an alien language fee/tax just like in France.

ಅರುಣ್ ಜಾವಗಲ್ ಅಂತಾರೆ...

ಹಿಂದಿ ರಾಶ್ಟ್ರಬಾಶೆಯಾಗಬೇಕೆನ್ನುವ ನಿಲುವು ಚಿಂತನಾಗಂಗಾದಲ್ಲಿದೆ. ಅದೇ ನಿಲುವನ್ನ ಜನಸಾಮಾನ್ಯರಲ್ಲಿ ಹೇಳಿದ್ರೆ ಜನರು ಒಪ್ಪೋಲ್ಲ. ಅದಕ್ಕಾಗಿ ಈ ಕನ್ನಡ ಪ್ರಚಾರ ವರ್ಗ ಎನ್ನುವ ಕಾರ್ಯಕ್ರಮ. ಇವರ ಸಿದ್ದಾಂತ ಮತ್ತು ಕನ್ನಡ ಪ್ರಚಾರ ವರ್ಗ ಕಾರ್ಯಕ್ರಮ ಒಂದಕ್ಕೊಂದು ತಾಳೆ ಆಗದಿದ್ರು ಕನ್ನಡ ಕಲಿಸಲು ಹೊರಟಿದ್ದಾರೆ ಅಂದ್ರೆ ಏನೋ ಬೇರೆನೇ ದೂರಾಲೋಚನೆ ಇರಬೇಕು. ನೇರವಾಗಿ ಹೇಳಲು ಆಗದ್ದನ್ನು ನಿದಾನವಾಗಿ ಜನರ ಮನಸ್ಸಿನಲ್ಲಿ ಹರಿಬಿಡಲು ಬ್ರೈನ್ ವಾಶ್ ಮಾಡಲು ಮಾಡುತ್ತಿರುವ ಕಾರ್ಯಕ್ರಮವಿರಬಹುದೇನೋ. ಇದಕ್ಕೆ ಸಾಕ್ಷಿಯೆಂಬಂತೆ, ಬಿಜೆಪಿ ಸರಕಾರವೂ ಮಾಡುತ್ತಿರುವುದು. ಬಿಜೆಪಿ ಸರಕಾರದಲ್ಲಿ ಶಿಕ್ಷಣ ಕಾತೆಗಳು ಸಂಗಪರಿವಾರದವರಿಗೆ ಮಾತ್ರ ಮೀಸಲು. ಯಾಕಂದ್ರೆ ಶಿಕ್ಷಣದಲ್ಲಿ ತಮ್ಮ ಸಿದ್ದಾಂತಕ್ಕೆ ಬೇಕಾದ ಪಾಟ ಮಾಡಿ ಜನರ ಬ್ರೈನ್ ವಾಶ್ ಮಾಡಬಹುದೆಂಬ ದೂರಾಲೋಚನೆ. ಅದರಿಂದಲೇ ಇಂದು ಕೇಂದ್ರ ಪಟ್ಯಕ್ರಮ ಅಳವಡಿಕೆ, ಬಗವತ್ಗೀತೆ ಬೋದನೆಯ ಕೂಗು ಕೇಳ್ತಿರೋದು.

Ganesh ಅಂತಾರೆ...

Serious question is why do these youngsters who come into RSS fold become so communal. They are full of hate against non-Hindus, non-believers of their ideology. Is there a problem with their organization or with their ideology? Maybe it is unintended but RSS & its umbrella organizations are ending up creating monsters out of these young men. We can see the consequence of this with Bajrang Dal & Sri Rama Sene whose cadre have no sense of purpose and direction.

Amarnath Shivashankar ಅಂತಾರೆ...

Maaysa - I wrote that Kannada, Telugu, Tamil Hindi are all equal to each other in the context that they are supreme in their respective states.

I agree to the fullest extent on all the points mentioned by you :)

maaysa ಅಂತಾರೆ...

"I wrote that Kannada, Telugu, Tamil Hindi are all equal to each other in the context that they are supreme in their respective states."

Exactly. However what about Sanskrit? How many speak it?

When our government cannot provide money to living languages such as TULU, Kodava, Badaga, Toda, Kurukh etc etc etc, why is it keen of spending millions of Rupees on Sanskrit?

If one sees the UN's report, a lot of unique languages are dwindling in India ex: Bo of Andaman.

Already Tulu is listed as an endangered language. Instead of spending money to preserve Tulu, Haalakki, Kuruba, etc etc which are native languages of Karnataka, our state wants to spend millions on Sanskrit university.

Sanskrit is not the only ancient language of India. What about Prakrit, Pali, Magadhi, Maitheli, Old-Kannada, Old-Tamil, Angi, etc etc etc...?

How many universities do we need to study Sanskrit? There are a number of universities in Karnataka itself which have large department of Sanskrit ex:Mysore university.

Unknown ಅಂತಾರೆ...

ಈ ತಾಣ ನೋಡಿ. FAQ on RSS
http://rssonnet.org/index.php?option=com_content&task=view&id=10&Itemid=27

Who can become a member of RSS?
Any Hindu male can become member of RSS

ಯಾಕೆ Hindu male ಅವರಿಗೆ ಮಾತ್ರ ಇಲ್ಲಿ ಅವಕಾಶ...female ಅವರಿಗೆ ಯಾಕೆ ಅವಕಾಶವಿಲ್ಲ... ದಿಟವಾಗಲೂ RSS ಗೆ ಮಂದಿಯಾಳ್ವಿಕೆಯಲ್ಲಿ ನಂಬಿಕೆಯಿದಿಯೆ. ದೇಶದ ಸಂವಿದಾನವೆ ಗಂಡು ಹೆಣ್ಣು ಎಂಬ ತಾರತಮ್ಯಾ ಮಾಡದೆ ಸಮನಾದ ಹಕ್ಕುಗಳನ್ನು ನೀಡಿದೆ. ಆದರೆ ಆರ್ ಎಸ್ ಎಸ್ ಇಲ್ಲೂ ಬೇದಬಾವ ಮಾಡುತ್ತಿದೆ.

Unknown ಅಂತಾರೆ...

Please see the book 'bunch of thoughts' in the following RSS website.

http://www.archivesofrss.org/index.php?option=com_gurujibook&Itemid=40

In the book, author says
"We have therefore to take Hindi in the interest of national unity and self- respect"
--- is RSS still beleives in the above statement ?

and he further says
"Any apprehensions of encroachment for dominance over other languages by Hindi are therefore pure fiction cooked up by interested politicians."

Doesn't second statement contradict the first statement? In the whole it sounds very immature argument.

We have already seen enough (still seeing) Hindi imposition daily in Bengluru and Karnataka in the name Unity, nation etc etc.

Unknown ಅಂತಾರೆ...

In the same book 'bunch of thoughts' http://www.archivesofrss.org/index.php?option=com_gurujibook&Itemid=40


The author says "the Harsha-Pulakeshin struggle is sought to be made out as an attempt by the North to dominate the South and its successful rebuttal by the South. But Pulakeshin was not a Dravidian at all, much less a Tamilian"

Pulikeshi II was a Kannada King(Chaalukya). How can he not be a Dravidian ?

The book is full of contradictions and grossly giving wrong informations. You can find several points like this in this book

Amarnath Shivashankar ಅಂತಾರೆ...

This is what Bunch of Thoughts book says:

For a Unitary State
5. We are one country, one society, and one nation, with a community of life-values and secular aspirations and interests; and hence it is natural that the affairs of the nation are governed through a single state of the unitary type. The present federal system generates and feeds separatist feelings. In a way, it negates the truth of a single nationhood and is, therefore, divisive in nature. It must be remedied and the Constitution amended and cleaned so as to establish Unitary Form of Government.

This message is so clear and evident that the RSS top brass was extremely unhappy about the federal structure.So, they were against Kannadigas ruling Kannadigas with Kannada as the administrative language?

I do not understand as what separatist feelings is being spoken about in the article. Of course, every linguistic community is different in their identity and the way of life..Practically, we are all distinct.
This ideology somehow looks like clustering linguistically different communities under one umbrella which is a major threat to the federal structure.

Why would a kannadiga with self respect be like a slave to someone who would order sitting thousands of miles away?

If some RSS swayamsevaks can answer my question with a bit of logical and rational thinking, I would appreciate it:

--How is a Kannadiga and a Punjabi related to each other. what commonalities do they have between them?
--How would a Tamilian and an Gujarati related to each other? what commonalities do they have between them?
This list goes on and on:
They wear different kind of costumes, they celebrate different festivals in different styles, they speak different languages..

Bottomline is, there is so much of diversity amongst each and every state and for the sake of political management, all these states are clubbed as a single large country.That is the reason India is called an Union of states..

The very structure of India is similar to the Europian Union..

More the diversity is respected and acknowledged, better the relationships between each other..

Anonymous ಅಂತಾರೆ...

Enguru RSS agenda ene irli we as kannadigas have to learn to protect kannada, RSS agenda in future lets make Hindi bla bla, ivagina vishya matadi in and around Bangalore may be outside also in all schools you are not suppose to talk in Kannada inside campus and if you do, you have to pay certain fine. What is this happening? Namma mundina peeligege namma bhashe mele preeti kammi agodikke ivella karana. Enguru enadru serious vishya raise madi, adu bittu like all are pointing "right-wing" these days neevu ade gumpige sertha idiralla.
I read someone saying Sanskrit is Dead Language. Sanskrit is the only scientific language in the history of man-kind. Vishya gottildale sumne eno haradbardu. And in recent time I read a article, please someone ask RSS to have this as their agenda. It stated in the article that education system to be taught in local language. Prati rajayadallu avara bhasheyelle pata madi, avra samskrutiyanni kalisidare kandita avara rajaya mele hecchu preeti, asakti ella iratte and finally as a whole deshada melu hecchu preeti - unity in diversty bimbisatte.

Finally to conclude
ಜ್ಞಾನಕ್ಕಾಗಿ ಸಂಸ್ಕೃತ ಕಲ್ತಕೋ
ರಾಷ್ಟ್ರಕ್ಕಾಗಿ ಹಿಂದಿ ಕಲ್ತಕೋ
ಪ್ರಪಂಚಕ್ಕಾಗಿ ಇಂಗ್ಲಿಷ್ ಕಲ್ತಕೋ
ಏನು ಬೇಕೊ ಎಲ್ಲಾ ಕಲ್ತಕೋ
ಬಳಸಕ್ಕೆ ಮಾತ್ರ ಕನ್ನಡ ಇಟ್ಕೋ

Avinash Bhat ಅಂತಾರೆ...

Very well points Bharath, Amar. I was a supporter of RSS for 3 years. Later I realised that it's a mind-closed entity where nothing is changed even after 80+ years of it's existence. Their views are anti federal, anti democratic, anti diversity and I moved out of it. I don't know how people who are so well educated, work for MNCs, who have seen the globe, who otherwise are very rational,logical still fall in to such trap. God save my country and state from such things.
-Avi

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಆರ್.ಎಸ್.ಎಸ್ ನ ಗೆಳೆಯರಿಗೆ ಒಂದಿಷ್ಟು ಪ್ರಶ್ನೆ. ಈ ಪ್ರಶ್ನೆಗಳನ್ನು ಮುಂದಿನ ಬಾರಿ ಶಾಖೆಗೆ ಹೋದಾಗ ಅಲ್ಲಿನ ಹಿರಿಯರ ಮುಂದೆ ಇಡಿ. ಅದಕ್ಕೆ ಅವರ ಉತ್ತರ ಏನೆಂದು ಕಾಣಿರಿ:
೧> ಕನ್ನಡ ಸೇರಿದಂತೆ ಎಲ್ಲ ಭಾಷೆಗಳು ರಾಷ್ಟ್ರ ಭಾಷೆಗಳಾಗಬೇಕು ಮತ್ತು ಪ್ರತಿ ರಾಜ್ಯದಲ್ಲೂ ಆಯಾ ಭಾಷೆಗೆ ಸಾರ್ವಭೌಮತ್ವ ಕೊಡಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮತ್ವ ಕೊಟ್ಟಲ್ಲಿ ಕನ್ನಡವೇ ಕೇಂದ್ರ ಸರ್ಕಾರಿ ಕಚೇರಿಯಲ್ಲಿನ ಸಂಪರ್ಕ ಭಾಷೆಯಾಗುತ್ತೆ, ಹಿಂದಿಯಲ್ಲ. ಒಪ್ಪುತ್ತಿರಾ?
೨> ವಲಸಿಗರು ವಲಸೆ ಬಂದ ಇಂತಿಷ್ಟು ವರ್ಷಗಳಲ್ಲಿ ಕನ್ನಡ ಕಲಿತು ಇಲ್ಲಿನ ಸ್ಥಳೀಯ ಮುಖ್ಯವಾಹಿನಿಯಲ್ಲಿ ಬೆರೆಯುವುದು ಕಡ್ಡಾಯ ಆಗಬೇಕು. ಯಾಕೆಂದರೆ ಹಾಗಾದಾಗಲೇ ಆಯಾ ರಾಜ್ಯದಲ್ಲಿ ಸ್ಥಳೀಯರು ಮತ್ತು ವಲಸಿಗರ ನಡುವಿನ ತಿಕ್ಕಾಟ ಕಡಿಮೆಯಾಗುವುದು. ಕಡ್ಡಾಯ ಮಾಡಲು ಒಪ್ಪುವಿರಾ?
೩> ಮಿತಿ ಮೀರಿದ ವಲಸೆಯಿಂದ ಕರ್ನಾಟಕದಲ್ಲೇ ಕನ್ನಡಿಗರಿಗೆ ಕೆಲಸ ಸಿಗುತ್ತಿಲ್ಲ. ವಲಸೆಯಿಂದಾಗಿ ಬೆಂಗಳೂರು, ಮೈಸೂರುಗಳಲ್ಲಿ ನೆಲದ ದರ ಗಗನಕ್ಕೇರಿದೆ. ಆರ್.ಎಸ್.ಎಸ್ ನಲ್ಲಿ ಹತ್ತಾರು ವರ್ಷದಿಂದ ಸೇವೆಗೈಯುತ್ತಿರುವ ಬಡ ಕನ್ನಡಿಗರಿಗೆಯೇ ಒಂದು ಹಿಡಿ ಭೂಮಿ ಕೊಳ್ಳಲಾಗುತ್ತಿಲ್ಲ. ಮಿತಿ ಮೀರಿದ ವಲಸೆಗೆ ಒಂದು ಹಂತದ ತಡೆಯಿರಬೇಕು ಮತ್ತು ಆ ಮೂಲಕ ಪ್ರತಿ ರಾಜ್ಯದಲ್ಲೂ ಅಲ್ಲಿನ ಸ್ಥಳೀಯರಿಗೆ ಉದ್ಯೋಗ, ಅವಕಾಶಗಳಲ್ಲಿ ಮೊದಲ ಆದ್ಯತೆ ಇರಬೇಕು. ಒಪ್ಪುತ್ತೀರಾ?
೪> ಗೋಲವಲ್ಕರ್ ಅವರು ಭಾರತ ಒಂದು ಒಕ್ಕೂಟವಾಗದೇ ಒಂದು ಯುನಿಟರಿ ದೇಶವಾಗಬೇಕು ಅಂದಿದ್ದರು. ಅದರರ್ಥ ಕರ್ನಾಟಕವನ್ನು ಯಾವಾಗ ಬೇಕಾದರೂ ಒಡೆದು ಇನ್ನೊಂದು ರಾಜ್ಯಕ್ಕೆ ಸೇರಿಸಬಹುದು, ಇಲ್ಲವೇ ತುಂಡು ತುಂಡಾಗಿಸಿ ಹಲ ರಾಜ್ಯ ಮಾಡಬಹುದು. ಹಾಗಿದ್ದರೆ ಕರ್ನಾಟಕ ಮಾತೆ ಅನ್ನುವ ಪದಕ್ಕೇನಿದೆ ಅರ್ಥ? ಭಾಷಾವಾರು ರಾಜ್ಯಗಳನ್ನೆಲ್ಲ ಅಳಿಸಿ ಬಿಡಬೇಕು. ಒಪ್ಪುತ್ತೀರಾ?
೫> ಆರ್.ಎಸ್.ಎಸ್ ನ ಹಿರಿಯ ಹುದ್ದೆಗಳಲ್ಲಿ ಮಾದಿಗ, ದಲಿತ, ಚಮ್ಮಾರ, ಕಮ್ಮಾರ, ಕುಂಬಾರ, ಭಜಂತ್ರಿ, ಬಡಿಗ, ಹೀಗೆ ಸಮಾಜದ ಕೆಳ ಜಾತಿಗಳು ಎಂದು ಕರೆಸಿಕೊಂಡಿರುವ ಜಾತಿಗಳ ಜನರಿಗೆ ಆದ್ಯತೆ ಕೊಡಬೇಕು. ಆರ್.ಎಸ್.ಎಸ್ ನ ಹಿರಿಯ ಹುದ್ದೆಗಳೆಲ್ಲ ಮೇಲ್ವರ್ಗದ ಒಂದೇ ಜಾತಿಗೆ ಸೀಮಿತವಾಗಬಾರದು. ಒಪ್ಪುತ್ತೀರಾ?
೬> ಕರ್ನಾಟಕದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿವೆ. ಆ ಮಕ್ಕಳ ಕಲಿಕೆಗೆ ಇವತ್ತಿನ ಕನ್ನಡ ಮಾಧ್ಯಮದ ವಿಜ್ಞಾನ, ಗಣಿತ ಅನ್ನುವುದು ಕಬ್ಬಿಣದ ಕಡಲೆಯಾಗಿದೆ. ಅಲ್ಲಿನ ಅರ್ಥವಾಗದ ಸಂಸ್ಕ್ರುತ ಪದಗಳನ್ನು ತೆಗೆದು ಆಡು ನುಡಿಗೆ ಹತ್ತಿರದ ಕನ್ನಡ ಪದಗಳನ್ನು ಬಳಸಿ ಮಕ್ಕಳ ಕಲಿಕೆ ಸುಲಭ ಮಾಡಬೇಕು. ಒಪ್ಪುತ್ತೀರಾ?

ಈ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಅವರು ಒಪ್ಪಿದ್ದೇ ಆದಲ್ಲಿ ಅವರು ನಿಜಕ್ಕೂ ವೈವಿಧ್ಯತೆ, ಭಾಷೆ, ಒಕ್ಕೂಟ ಎಲ್ಲವನ್ನೂ ಅರ್ಥ ಮಾಡಿಕೊಂಡವರು ಎಂದು ನಾನು ಒಪ್ಪುತ್ತೇನೆ.

Anonymous ಅಂತಾರೆ...

I have learnt the little I know about patriotism only from RSS. I think Karnataka exists because India exists. It is because India came into existence, the people who were distributed in four regions were able to come together within the power of the nation as willed by the leaders of the nation were able to get an identity and a state. To speak about Karnataka being above or more important than India is not just preposterous but also not worth a debate. RSS has never been anti Kannada and people who have been in contact with RSS know that the Bhaitaks and literature of RSS in chaste Kannada would make anyone love the language and its usage. I feel the RSS leaders have set the best examples of how to make public speeches in beautiful Kannada. This art of making wonderful speeches in Kannada is appreciated even by the opponents of RSS. The organisation has its own ideology which is its own. People, please know what the state of the Hindu psyche was before RSS gave it a dignity and self esteem. It is the Hindu who wants Kannada and Karnataka, and not a Muslim not a Christian. I am sad that RSS is being maligned for an academic reason by people who are more fundamentalist and parochial than the RSS and the only difference here is that the writers of the blog speak about something less important as a language while ignoring the importance of the human ability of expression and belief.

Bhaskara ಅಂತಾರೆ...

Annappa, why are you asking others to ask these questions. Why can't you just step into one of the RSS karyalaya and ask? Are you afraid that you will be converted to a RSS swayamsevak :)

Bhaskara ಅಂತಾರೆ...

RSS nadesuva Janaseva Vidya samsthege Channenahalliyalli ide. hogi nodi. Prathimka vidye ellavu kannadadalli. Proudha hantadalli kannada mattu angla eradallu ide. Neevella mataduva badalu high quality kannada shale tegedu nimma makkalannu kalisi.

Bhaskara ಅಂತಾರೆ...

Avinash, nimma sankuchita bhavaneye ascharyavaguttade. nimage 3 varsha RSS nalli iddoo avara dhyeya gottagalilla andre nivello visitor swayamsevak annisutte. purvagraha ittokonde hogiddire ansutte.neevu hoda muru varshadalli endadru englishnalli athava, hindiyalli athava samskritadalli bhashana keliddeera? endadru english pustakagalannu, hindi karapatravannu nodiddra?

tappu tappagi eneno helbedi.

Bhaskara ಅಂತಾರೆ...

Amarnath, neevu heliro mathu tamasheyagide. kannada abhimana durabhimanavagta ide. RSS annu tegalta neeve enu avara mele aropa madta iddeero ade agta iddeera. kannadada vishyadalli fascist agta iddeera.

ellarigu avara avara dhyeyagalu mukhy irtade. summane kugadta iddeera. hogi yavdadru pracharakrannu matadsi. illi yake kai beralu novu madkota iddera.

Bhaskara ಅಂತಾರೆ...

Bharath, nimma mattu peddo huccho gottilla. RSS irode purusharige. Rashtra sevika samiti anta innondu anga samste bari hennu makkalige ide. nimma maneya hennu makkalige ista agtade, kalisi nodi. illi bandiruva ella commentgalu purvagra peedita anta eega gottagta ide.
RSS nalli aduva ata, nadeyuva sharirika karyakrama hennu makkalige gandu makkala jote madalu sukta alla anta hiriyaru tilkondidrinda bere madiddare. sumne yakri kirichkota iddeera?

Bhaskara ಅಂತಾರೆ...

arun, neevu rss yavdo brain wash madlikko hortide anta helta iddeera. neevu madta irodu ade tane?

Bhaskara ಅಂತಾರೆ...

neeveu bala thakre thara matra agbedi. kannadigara hrudya vaishalyateyannu kapadikonde kelsa sadhisa bahudu. dveshadinda agaddu preetiyinda agtade.

pradhyumna avaru helida hage neevu yake kannada shale teri bardu? olle quality education kodi. olle kannada helkodi. hottege englishoo helkodi. hudugaru ishta patre samskruta, hindinu helkodi. tamilu, telugunu helkodi. kelsa madri. dhairya iddre shale madi, summane horata madta kutidre agalla.

avaru mado kannada parichaya varga nimge ishta aglilva, neeve madi. yaru beda andru. enu madadale, bereyavru madidre eno brainwash anta kugadteeralri.

Bhaskara ಅಂತಾರೆ...

idyakree annappa, oppteera opteera anta kirichta iddeera? illi blognalli oppibitre neevu geddanga? nimge tale sama ide tane? yakri idvargu karyakartaranno, pracharakranno matadsilla? yavdo pustakadallirodanno eraderadu line tegedu yavano haladigannavnu barda anta neevu hage adta iddeera? Sanghadavru matado hage sphuta kannadadalli matadovru eshtu jana iddeera? obba samanya karyakarta kuda nimmellariginta chennagi kanndadalli matadtane. tale haratbedri.

mohan bhagavat yedyurappage 'navu adhikaro yarige kodbeku anta gottide, summaniri' andrante. neevu hogi nodidra, kelidra? athava mohanji pakkadalle kutidro. yedyurappa nimge helidra? communistaru kuda nachuvante baredidderalla.

Chetan ಅಂತಾರೆ...

@Anonymous, I would like to negate your point "I think Karnataka exists because India exists". India exists because Karnataka and Other state exists. I would like to bring to your notice that there was no country called India earlier, we had Kingdoms such as Kadamba, Chalukya, Vijayanagara, Hoysala, Chola, Chera, Pandiya, Harshavardhana, Ashoka, Akbar etc... It was during the freedom fight, the leaders thought of the concept called Nation.

"It is the Hindu who wants Kannada and Karnataka, and not a Muslim not a Christian." It is the sad state of RSS supporters, who still believe in hating people on religion and make India a better place to live. I have many muslim and Christian friends, who are more enthusiastic than my Hindu friends who are working on Kannada, Kannadiga and Karnataka. It is the same rhetoric statements of RSS, which makes the other religion people to take the back seat.

"the writers of the blog speak about something less important as a language while ignoring the importance of the human ability of expression and belief.". I would like to bring to your notice that it is language which shapes your Identity and Personality.

The only way we could build a strong nation is through build strong states first.

Anonymous ಅಂತಾರೆ...

bhaskar,
Are you in senses? En swamy, eNNe hoDdu baMdideeraa, beLLam beLagge... yaavdO pustaka allaa adu saMghada bhagavadgeete. neevu aa niluvannE hondiddeeraa tiLsi.. nimma saMghakke ide niluvidre ghOShaNe maaDi. nimma paaDige neeviddidre idannu yaaroo kELtiralilla. namma kannaDa naaDina adhikRuta sarkaaraana himbadiyinda aaDustirOdakke kELiddu.

chandru

Chetan ಅಂತಾರೆ...

@Bhaskar, ನಿಮ್ಮ ವಾದ ಚೆನ್ನಾಗಿದೆ, ಅವಿನಾಶ್ ಸಂಘದ ಜೊತೆ ಕಳೆದಿರುವುದು ೩ ವರ್ಷಗಳು, ದಿನಗಳಲ್ಲ. ೩ ವರ್ಷ ತುಂಬ ದೊಡ್ಡ ಸಮಯವೇ, ಯಾರೇ ಆಗಲಿ Rational ಆಗಿ ಯೋಚಿಸಿದಾಗ ಸಂಘದ ಪ್ರಮುಖ ನಿಲುವುಗಳ ಬಗ್ಗೆ ಭಿನ್ನಾಬಿಪ್ರಾಯ ತಾಳುವುದು ಖಂಡಿತ. ಸಂಘದ ಸಿದ್ಧಾಂತ ಒಪ್ಪಿದರೆ ಜಾಣ ಇಲ್ಲವಾದರೆ ಪೂರ್ವಾಗ್ರಹ ಪೀಡಿತ, ದಡ್ಡ ಅನ್ನೋ ಹಣೆಪಟ್ಟಿ ಕೊಟ್ಟುಬಿಡುತ್ತೀರಿ ಅಲ್ಲವೇ? ಇನ್ನು ಅಮರ್ ನಾಥ್ ತಮ್ಮ ಕಮೆಂಟಿನಲ್ಲಿ ಮುಖ್ಯವಾಗಿ ಹೇಳಿರುವುದು ಈ ದೇಶದಲ್ಲಿರುವ ವಿವಿಧತೆಯ ಬಗ್ಗೆ ಹಾಗೂ ಸಂಘಕ್ಕೆ ಇರುವ ಒಂದೇ ದೇಶ, ಒಂದೇ ಭಾಷೆ ಅನ್ನೋ ತಪ್ಪು ಕಲ್ಪನೆಯ ಬಗ್ಗೆ. ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಇರಬೇಕಾದ ಸ್ಥಾನಮಾನದ ವಿಷಯ ಹೇಳಿದರೆ ಅದು Fascist ಹೇಗೆ ಆಗುತ್ತೆ? ಹಾಗಾದ್ರೆ ನಿಮ್ಮ ಪ್ರಕಾರ ಕನ್ನಡಕ್ಕೆ ತನ್ನ ರಾಜ್ಯವನ್ನು ಆಳುವ ಶಕ್ತಿ ಇಲ್ಲವೆಂದು ಹೇಳ್ತಿದೀರಾ?

ದಯವಿಟ್ಟು ಹೃದಯ ವೈಶಾಲ್ಯತೆ ಅಂದರೆ ಏನು ಅಂತ ತಿಳಿಸಿ. ಇದರಲ್ಲಿ ಬೇರೆ ಧರ್ಮದವರನ್ನು ದ್ವೇಷಿಸುವುದು, ಸಂಸ್ಕ್ಟುತ ಹಾಗೂ ಹಿಂದಿಗೆ ನಮ್ಮ ಭಾಷೆಗಿಂತ ಹೆಚ್ಚಿನ ಗೌರವ ನೀಡಬೇಕು ಎನ್ನುವುದು, ದೇಶದಲ್ಲಿರುವ ವಿವಿಧತೆ ಏಕತೆಗೆ ಮಾರಕ ಅನ್ನೋ ಅಂಶಗಳು ಸೇರಿವೆಯೆ ದಯವಿಟ್ಟು ತಿಳಿಸಿ.

Ramesh Rao ಅಂತಾರೆ...

ಹೃದಯ ವೈಶಾಲ್ಯತೆಯ ಹರಿಕಾರರು ಸ್ವಯಂಸೇವಕರನ್ನ ಮಾತಾಡ್ಸಿ ಮಾತಾಡ್ಸಿ ಅಂತ ದುಂಬಾಲು ಬಿದ್ದ ಹಾಗಿದೆ. ನೀವು ಅ-ಸ್ವಯಂಸೇವಕರೋ. ನಿಮಗಿಂತಲು ನಿಮ್ಮನ್ನು ಆರೆಸ್ಸೆಸ್ ಗೆ ಕರೆದುಕೊಂಡು ಹೋದ ಸ್ವಯಂಸೇವಕರೆ ಮಿಗಿಲೋ? ಅವರಿಗೆ ಗೊತ್ತಿರುವುದು ನಿಮಗೆ ಗೊತ್ತಿಲ್ಲದಿರುವುದು ಅಂತಹದು ಏನೊ? ಅವರು ನಿಮಗಿಂತಲೂ ಮಿಗಿಲಾಗಿ ಕನ್ನಡ ಸ್ಫುಟಿಸುವರೋ?

ನಿಮ್ಮಂತವರೇ ತಗಲಾಕೊಂಡ್ ಇರ್ಬೇಕಾದ್ರೆ ಬೇರೆ ಸ್ವಯಂಸೇವಕರನ್ನು ಮಾತಾಡ್ಸೋದ್ ಯಾಕೆ ಅಂತ? ಅನ್ನ ಆಗಿದ್ಯ ಇಲ್ವ ಅಂತ ತಿಳ್ಕೊಳ್ಳೊಕ್ಕೆ ನಿಮ್ಮಂತಹ ಒಂದು ಅಕ್ಕಿ ಸಾಕು ಬಿಡೀ.

- ರಮೇಶ್ ರಾವ್

Chetan ಅಂತಾರೆ...

@anonymous,
ಜ್ಞಾನಕ್ಕಾಗಿ ಸಂಸ್ಕೃತ ಕಲ್ತಕೋ
ರಾಷ್ಟ್ರಕ್ಕಾಗಿ ಹಿಂದಿ ಕಲ್ತಕೋ
ಪ್ರಪಂಚಕ್ಕಾಗಿ ಇಂಗ್ಲಿಷ್ ಕಲ್ತಕೋ
ಏನು ಬೇಕೊ ಎಲ್ಲಾ ಕಲ್ತಕೋ
ಬಳಸಕ್ಕೆ ಮಾತ್ರ ಕನ್ನಡ ಇಟ್ಕೋ

ಒಳ್ಳೆ ಕಾಮಿಡಿ ಚುಟುಕು ಬರೆದಿದ್ದೀರಿ... ಒಂದು ಬಲವಾದ ಒಕ್ಕೂಟ ವ್ಯವಸ್ಥೆಯಲ್ಲಿ ಜ್ಞಾನಕ್ಕಾಗಿ, ರಾಷ್ಟ್ರಕಾಗಿ, ಬಳಸುವುದಕ್ಕೆ ಎಲ್ಲದಕ್ಕೂ ಕನ್ನಡವೇ ಆಗಬೇಕು. ನಿಮ್ಮಂಥ ಸಂಸ್ಕ್ಟುತ ಪಂಡಿತರು ಜ್ಞಾನವನ್ನು ಕನ್ನಡಕ್ಕೆ ತಂದರೆ ನಾವು ಅದನ್ನ ಕನ್ನಡದಲ್ಲೇ ಕಲೀತಿವಿ... ಹಿಂದಿ ಕಲಿತರ ಮಾತ್ರ ರಾಷ್ಟ್ರ ಭಕ್ತ ಅನ್ನೋದಾದರೆ ನಾನು ಅದನ್ನ ವಿರೋಧಿಸುತ್ತೇನೆ. ಏನು ಬೇಕೋ ಎಲ್ಲ್ಲಾ ಕಲಿಯುವುದಕ್ಕೆ ಜ್ಞಾನ ನನ್ನ ಭಾಷೆಯಲ್ಲಿ ಸಿಗುವಂತಾಗಬೇಕು. ಬಳಸುವುದಕ್ಕೆ ಮಾತ್ರ ಕನ್ನಡ ಇಟ್ಕೋ ಅನ್ನೋದು ನಿಮ್ಮ ಹಿಂದಿ ಹಾಗೂ ಸಂಸ್ಕ್ಟುತ ಪ್ರೇಮವನ್ನ ಸಾರಿ ಹೇಳುತ್ತೆ.

Priyank ಅಂತಾರೆ...

ಭಾಸ್ಕರ್ ಅವರಿಗೆ ತುಂಬಾ ಸಿಟ್ಟು ಬಂದಂಗಿದೆ.
ವಾದಗಳಲ್ಲಿ ಆರೆಸ್ಸೆಸ್ಸಿನ ನಿಲುವುಗಳ ಬಗ್ಗೆ ಪ್ರಶ್ನೆ ಎದ್ದಿರೋದು ದಿಟ. ಇದಕ್ಕೆ ಪ್ರದ್ಯುಮ್ನ ಅವರು ಉತ್ತರ ಕೊಡಲು ಪ್ರಯತ್ನ ಆದರೂ ಪಟ್ಟಿದಾರೆ. ಭಾಸ್ಕರ್ ಅವರು ಎಲ್ಲಾರ ಮೇಲೂ ಸಿಟ್ಟಿನಿಂದಾ ರೇಗಾಡ್ತಾ ಇದಾರೆ.

ಭಾಸ್ಕರ್ ಅವರಿಗೆ ಇನ್ನೂ ಕೆಲ ಪ್ರಶ್ನೆಗಳು: ಸಿಟ್ಟನ್ನು ಬದಿಗಿಟ್ಟು ಉತ್ತರಿಸುತ್ತಾರೆ ಅಂತ ನಂಬಿದೀನಿ.
೧. ಸ್ಫುಟ ಕನ್ನಡ ಅಂದ್ರೇನು? ಇಂಗ್ಲೀಶ್ ಪದಗಳನ್ನ ಸೇರಿಸದೇ, ಸಂಸ್ಕ್ರುತ/ಹಿಂದಿ ಪದಗಳನ್ನು ಮಾತ್ರ ಹುಡುಕಿ ಸೇರಿಸಿ ಮಾತನಾಡೋದಾ? ಅತವಾ, ಕನ್ನಡದ್ದೇ ಬೇರಿನ ಪದಗಳನ್ನು ಬಳಸಿ ಮಾತನಾಡೋದಾ?
- ನಿಮ್ಮ ಮನಸಲ್ಲಿ ಸ್ಫುಟ ಕನ್ನಡಕ್ಕೆ ಏನು ಕಲ್ಪನೆ ಮಾಡ್ಕೊಂಡಿದೀರಾ ತಿಳಿಸಿ. ಆಮೇಲೆ, ನಂಗೆ ಅಂತಹ ಸ್ಫುಟ ಕನ್ನಡ ಮಾತನಾಡಕ್ಕೆ ಬರುತ್ತಾ ಇಲ್ವಾ ತಿಳಿಸ್ತೀನಿ.
೨. ಮೋಹನ್ ಭಾಗವತ್ ಅವರು ಯೆಡಿಯೂರಪ್ಪನವರಿಗೆ ಹುಬ್ಬಳ್ಳಿಯ ಸಮಾವೇಶದಲ್ಲಿ ಏನು ಹೇಳಿದರು ಅನ್ನೋದು ಸಮಾವೇಶ ಕೊನೆಗೊಂಡ ಮಾರನೇ ದಿನದ ವಿಜಯ ಕರ್ನಾಟಕ ಪತ್ರಿಕೆಯ ಮೊದಲನೇ ಪುಟದಲ್ಲಿದೆ. ಒಮ್ಮೆ ಕಣ್ಣಾಡಿಸಿ, ನಿಮಗೂ ಕಾಣುತ್ತೆ. ಅವರು ಹಾಗೆ ಹೇಳಿಲ್ಲ ಅಂತ ನಿಮಗೆ ಗೊತ್ತಿದ್ರೆ, ವಿಜಯ ಕರ್ನಾಟಕ ಪತ್ರಿಕೆಗೆ ಬರೆದು ತಿಳಿಸಿ.
- ಮೋಹನ್ ಭಾಗವತ್ ಅವರು ಹಾಗೆ ಹೇಳೇ ಇಲ್ಲ ಅಂತ ತಾವು ವಾದ ಮಾಡ್ತಿರೋದು ನೋಡಿದರೆ, ಅಂತಹ ಮಾತು ಯಾರೇ ಆಡಿದ್ದರೂ ಅದು ತಪ್ಪು ಅನ್ನೋ ಅರಿವು ತಮಗೆ ಆದಂತಿದೆ. ಅಲ್ವಾ?
೩. ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ:
- ಇವತ್ತಿನ ಕನ್ನಡ ಮಾಧ್ಯಮದಲ್ಲಿ ಅರಿಮೆಯ ವಿಷಯಗಳನ್ನು ಕಲಿಸಲು ಬಳಸುವ ಪದಗಳು ಕಲಿಕೆಯನ್ನೇ ಕಬ್ಬಿಣದ ಕಡಲೆ ಮಾಡಿವೆ. ಕೆಲ ಉದಾಹರಣೆಗಳನ್ನ ಇಲ್ಲಿ ಕೊಡ್ತೀನಿ, ’ಅನುಲೋಮಾನುಪಾತ’, ’ಮತ್ತೇಭವಿಕ್ರೀಡನ’, ’ತ್ರಿಪದೋಕ್ತಿ’, ’ಅಪರಿಮಿತ ಗಣ’. ಇಂತಹ ಪದಗಳ ಬದಲು ಕನ್ನಡದ್ದೇ ಬೇರಿನ ಪದಗಳ ಬಳಕೆ ಮಾಡೋಣ ಅಂದ್ರೆ, ಹಾಗೆ ಹೇಳಿದವರನ್ನು ’ಸಂಸ್ಕ್ರುತ ದ್ವೇಷಿ’, ’ಹಿಂದೂ ದ್ವೇಷಿ’, ’ವೇದ ಪುರಾಣಗಳ ಹಗೆಕೋರ’ ಅಂತ ಕರೀತಾರಲ್ಲ. ಯಾಕೆ?

ಅಣ್ಣಪ್ಪ ಗೌಡ, ಮದ್ದೂರು ಅಂತಾರೆ...

ಭಾಸ್ಕರ ಅವರೇ,,
ನಾನಂತೂ ಸಮಾಧಾನದಿಂದ ಪ್ರಶ್ನೆಗೆ ಉತ್ತರ, ನನ್ನ ಮನಸಿನಲ್ಲಿನ ಪ್ರಶ್ನೆ ಇಡುತ್ತ ಚರ್ಚೆಯಲ್ಲಿ ಪಾಲ್ಗೊಂಡಿರುವೆ. ಕಂಗ್ಲಿಷಿನಲ್ಲಿ ಒಮ್ಮೆಲೆ ಒಂದಿಷ್ಟು ಅನಿಸಿಕೆ ಬರೆದು ಅರಚುತ್ತಾ ಇರುವ ಹಾಗೆ ಕಾಣಿಸುತ್ತಿರುವುದು ನೀವಾಗಿದ್ದಿರ. ದಯವಿಟ್ಟು ಸಮಾಧಾನದಿಂದ ಚರ್ಚೆಯಲ್ಲಿ ಪಾಲ್ಗೊಳ್ಳಿ. ಆರ್.ಎಸ್.ಎಸ್ ಅಲ್ಲಿ ಕನ್ನಡ ಬಳಸುತ್ತಾರೋ ಇಲ್ಲವೋ, ಅವರು ಕನ್ನಡ ಹೇಳಿಕೊಡುತ್ತಾರೋ ಇಲ್ಲವೋ ಅನ್ನುವುದು ಚರ್ಚೆಯ ಮೂಲ ಉದ್ದೇಶವಲ್ಲ. ಹಾಗಂತ ಅದು ಮುಖ್ಯ ಅಲ್ಲ ಅಂತ ನಾನು ಹೇಳುವುದಿಲ್ಲ. ಆದರೆ ಮೂಲಭೂತವಾಗಿ ಚರ್ಚೆಯಿರುವುದು ನಾಲ್ಕು ಆಯಾಮಗಳ ಬಗ್ಗೆ:
೧> ಮುಸ್ಲಿಂ, ಕ್ರಿಶ್ಚಿಯನ್ನರ ಬಗ್ಗೆ ಚಿಂತನಗಂಗಾದಲ್ಲಿ ಬರೆದಿರುವ ಅನಿಸಿಕೆ ನೀವು ಒಪ್ಪುತ್ತೀರಾ?
೨> ಸಂಸ್ಕೃತ ಭರಿತ ಹಿಂದಿ ರಾಷ್ಟ್ರಭಾಷೆಯಾಗಬೇಕು ಅನ್ನುವ ನಿಲುವು ನೀವು ಒಪ್ಪುತ್ತೀರಾ?
೩> ದೇಶಕ್ಕೆ ಒಕ್ಕೂಟ ವ್ಯವಸ್ಥೆ ಬೇಡ, ಅದನ್ನು ಅಳಿಸಿ ಯುನಿಟರಿ ಆಳ್ವಿಕೆ ತರಬೇಕು ಅನ್ನುವುದನ್ನು ನೀವು ಒಪ್ಪುತ್ತೀರಾ?
೪> ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆಯೆನ್ನಲಾದ, ಇಂದಿಗೂ ಬಹುಸಂಖ್ಯಾತರನ್ನು ತಾರತಮ್ಯಕ್ಕೀಡುಮಾಡುತ್ತಿರುವ ಸಮಾಜಿಕ ಅಸಮಾನತೆಯೇ ಹಿಂದೆಂದೂ ಇರಲಿಲ್ಲ, ಸ್ವಾತಂತ್ರ್ಯದ ನಂತರವೇ ಬಂದಿದ್ದು ಅನ್ನುವಂತಹ ಅವರ ನಿಲುವು ನೀವು ಒಪ್ಪುತ್ತೀರಾ?

ನನ್ನ ನಾಲ್ಕೇ ನಾಲ್ಕು ಪ್ರಶ್ನೆಗೆ ಉತ್ತರಿಸಿ. ಒಪ್ಪುತ್ತೀರಾ ಎಂದು ಯಾಕೆ ಕೇಳಿದೆ ಅಂದರೆ ಆ ನಾಲ್ಕು ಪ್ರಶ್ನೆಗಳು ಭಾರತ ದೇಶ ಒಂದಾಗಿ, ಸಮಾನವಾಗಿ, ಗೌರವದಿಂದ ಮುನ್ನಡೆಯಲು, ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದು ಬೆಳೆಯಲು ಅತ್ಯಂತ ಪ್ರಮುಖವಾದವುಗಳು. ಈ ನಾಲ್ಕು ಪ್ರಶ್ನೆಗಳ ವಿಷಯದಲ್ಲಿ ನಮ್ಮನ್ನು ಆಳುವವರು ತೆಗೆದುಕೊಳ್ಳುವ ನಿಲುವುಗಳು ದೂರಗಾಮಿ ಪರಿಣಾಮ ಹೊಂದಿರುವಂತವು. ಆರ್.ಎಸ್.ಎಸ್ ನ ಕಟ್ಟಾ ಅನುಯಾಯಿ, ಕನ್ನಡಾಭಿಮಾನಿ (ನೀವೇ ಘೋಷಿಸಿಕೊಂಡಂತೆ) ಆಗಿರುವ ನೀವು ನಿಮ್ಮ ನಿಲುವು ತಿಳಿಸಿ. ಇದೆಲ್ಲದಕ್ಕೂ ಗೋಲವಲ್ಕರ್ ಅವರ ನಿಲುವೇ ನಿಮ್ಮ ನಿಲುವು ಅನ್ನುವುದಾದರೆ ಚರ್ಚೆ ಮಾಡಲು ಇನ್ನೇನು ಉಳಿದಿಲ್ಲ. ನೀವು ನಿಮ್ಮ ಪಾಡಿಗೆ, ನಾನು ನನ್ನ ಪಾಡಿಗೆ ಮುಂದುವರೆಯಬಹುದು. ಮದ್ದೂರು ಕಡೆ ಬಂದರೆ ರೈಲ್ವೆ ನಿಲ್ದಾಣದ ಹತ್ರ ಇರುವ ನನ್ನ ಮನೆಗೆ ಬನ್ನಿ. ತಿಂಡಿ ತಿಂದು ಹೋಗುವಿರಂತೆ.

Chetan ಅಂತಾರೆ...

@ಭಾಸ್ಕರ್ ಅವರೇ, ಮೋಹನ್ ಭಾಗವತ್ ಅವರ ಹೇಳಿರುವುದನ್ನ ಕೇಳೋಕೆ ಅವರ ಪಕ್ಕ ಕುಳಿತುಕೊಳ್ಳಬೇಕಿಲ್ಲ. ವಿಜಯ ಕರ್ನಾಟಕ ಪತ್ರಿಕೆಯ ಮುಖಪುಟದಲ್ಲಿ ಈ ವರದಿ ಬಿತ್ತರಿಸಲಾಗಿದೆ. ದಯವಿಟ್ಟು ತಾವು ಈ ಪತ್ರಿಕೆಯ ಮೇಲೂ ಕಣ್ಣಾಡಿಸಬೇಕು ಅಂತ ಕೋರಿಕೆ. ಇನ್ನು ಸ್ಪುಟವಾದ ಕನ್ನಡವೆಂದರೆ ಏನು ಅನ್ನೋದನ್ನ ತಾವು ವಿವರಿಸಬೇಕು. ನನ್ನ ಪ್ರಕಾರ ನನ್ನ ಹಳಿಯಲ್ಲಿ ಜನರು ಮಾತನಾಡುವ ಕನ್ನಡವನ್ನ ಸ್ಪುಟ ಕನ್ನಡ ಅಂತ ಕರೀತೀನಿ. ನಿಮ್ಮ ಪ್ರಕಾರ ಕನ್ನಡದಲ್ಲಿ ಸಂಸ್ಕ್ಟುತ ಪದವನ್ನು ಸೇರಿಸಿ ಮಾತನಾಡುವುದು ಸ್ಫುಟ ಕನ್ನಡವಾಗಿದ್ದರೆ ಅದಕ್ಕೆ ನನ್ನ ವಿರೋಧವಿದೆ. ಇವತ್ತು ನಮ್ಮ ಭಾಷೆಯಲ್ಲಿ ಹೆಚ್ಚೆಚ್ಚು ಸಂಸ್ಕ್ಟುತ ಪದಗಳನ್ನು ಸೇರಿಸಿ ನಮ್ಮ ಗ್ರಾಮೀಣ ಭಾಗದ ಜನರಿಗೆ ತಮ್ಮದೇ ನುಡಿಯನ್ನು ಬಳಸಲು ಕಷ್ಟ ಅನ್ನುವ ಪರಿಸ್ಥಿತಿಯನ್ನು ನಿರ್ಮಿಸಿದ್ದೇವೆ. ನಮ್ಮ ಭಾಷೆಯಲ್ಲಿ ನಮ್ಮದೇ ಪದಗಳೂ ಇದ್ದಾಗಲೂ ಸಹ Romanticism ಹುಚ್ಚಿನಿಂದ ಸಂಸ್ಕೃತದ ಪದಗಳನ್ನು ಬಳಸಿದರೆ ಚೆನ್ನಾಗಿರುತ್ತೆ ಅನ್ನುವ ಭ್ರಮೆಯಿಂದ ಜನರನ್ನ ಹೊರತರುವುದು ಹೇಗೆ?

Avinash Bhat ಅಂತಾರೆ...

Bhaskar,

I worked for three years, tried putting my perspective and failed, failed miserably in moving an inch and I quit. Anyways, quitting RSS doesn't mean I quit my religion. I am still a practicing Hindu and I don't any certificates from anybody about my hindutva.

Please learn to separate Religion and Nationalism. Spiritual Unity is important and can be achievable, but the same can't be said about political unity. Because Politically India never existed. The same Hindu rulers fought with each other for increasing their borders and it's because of British that there was political consolidation that happened in India. Please read "Integration of Indian States by V P Menon" to understand better about it. Now, the question is do we need political unity or not. The answer is yes, we do need political unity to stand as a nation and achieve success and such a unity can never be achieved unless we do away with hegemonic things like Hindi imposition, centralising governance thus killing the federal structure, treating people following non-hindu religions as traitors. So, please understand that the philosophy of RSS need to change with time and have to become inclusive it really wants to achieve political unity and not be divisive as it is now.

Anonymous ಅಂತಾರೆ...

Integration of Indian States by V P Menon" - THIS BOOK IS BY COMMUNIST. HE IS RED. HE IS ANTI NATION. ANTI HINDU...BLA BLA.. BLAA...

RSS

Anonymous ಅಂತಾರೆ...

@ Anonymous - Good. I support you. Let us first have Konkana State, Byari State, Tulu State and Kodava Sate carved out of Karnataka and after that let Kannadigas with their left over Kanrnatka can take it whereever they want to. It is a well known fact how Kannada and Kannadigas have systematically effected the weakening of these languages and the hold of those languages on the respective minds, cultures and lands. The best lesson the speakers of these languages can teach to Kannadigas is by learning Hindi or English which they are doing anyway. Bangalore Kannada has even weakened the importance and dignity of other types of Kannada including Dharwad Kannada and now they want to weaken Hindus too.

M M Rao ಅಂತಾರೆ...

Religion can not become a thing of national discourse. Religion should be as secretive as sex. Successful democratic countries in the world have a strong foundation of secular constitution, which treats every religion as equal. They also treat all linguistic diversity with same respect. India's fore fathers were sensible enough to build a secular (a word highly misused by right wing as well as left wing rhetoricians) federal and democratic constitution for our country. It still has a lot of gray areas to be rectified to make our systems of governance truely representative in nature. Doing away this national language crap, according more federal status to constituent states, investing time and energy in elevating all Indian languages as preferred carrier of knowledge are way forward to build strong states and thus a strong India. Any religious,or language hegemony will only hamper the process and instill a feeling of victim hood in people speaking minority languages or belonging to minority religions.

maaysa ಅಂತಾರೆ...

"Now, the question is do we need political unity or not. The answer is yes, we do need political unity to stand as a nation and achieve success"

Please elaborate... By the way.. India is not a nation. It is a supranational union. India is a political union like EU

A nation is body of people united by common descent, history, culture, or language, inhabiting a particular state or territory. Karnataka or Kannada land is a natural nation.

What is common thing with us Kannadigas and Kashmiris/Manipuris/Bengalis/Biharis to put us in a comman nation? British occupation?

http://oxforddictionaries.com/definition/nation?q=nation
http://en.wikipedia.org/wiki/Supranational_union

maaysa ಅಂತಾರೆ...

"Let us first have Konkana State, Byari State, Tulu State and Kodava Sate carved out of Karnataka and after that let Kannadigas with their left over Kanrnatka can take it whereever they want to"

What an ignorant statement to make! Tulu may be a slightly different language (however it is still a Dravidian language). But Byaari and Kodava are merely dialects of Kannada linguistically. Hence Byaari and Kodavas are Kannadigas.

Tulu itself have more than distinct 4 dialects.

And

"Bangalore Kannada has even weakened the importance and dignity of other types of Kannada including Dharwad Kannada and now they want to weaken Hindus too."
Well. What a pity! Now Darwad Kannada and Bangalore are different? This is just a divisive and malicious statement. Communal!

maaysa ಅಂತಾರೆ...

"Religion can not become a thing of national discourse"

Well. If the intention is to imitate Iran, Saudi arabia, Pakistan or North Korea any authoritarian and narrow ideology can be used.!

Priyank ಅಂತಾರೆ...

ಅನಾನಿಮಸ್ಸಿಗೆ ಅನಾನಿಮಸ್ಸಿನ ಸಪೋರ್ಟು.
ಅವರಿಬ್ಬರೂ ಸೇರಿ ಕರ್ನಾಟಕವನ್ನ ತುಂಡು ತುಂಡು ಮಾಡುವ ಪ್ಲಾನ್ ಹಾಕಿದಾರೆ.
ಕರ್ನಾಟಕದಲ್ಲಿರೋ ಕನ್ನಡೇತರರು, ಹಿಂದಿ ಮತ್ತು ಇಂಗ್ಲೀಶ್ ಕಲಿತು ಕನ್ನಡಿಗರಿಗೆ ತಕ್ಕ ಪಾಟ ಕಲಿಸಬೇಕಂತೆ.
ಹೆಸರು ಹೇಳಲು ನಾಚಿಕೊಂಡವರ ಎದೆಗಾರಿಕೆಯ ಮಾತುಗಳು.

Anil B. ಅಂತಾರೆ...

@Mayasa - Kodava and Byari dialects of Kannada - LMAO. I am sure in a few days you would say even Tamizh is a dialect of Kannada. Would I be forgiven if I call Kannada a dialect of Telugu?

maaysa ಅಂತಾರೆ...

"Kodava and Byari dialects of Kannada"
If not. Please prove otherwise.

"ಕರ್ನಾಟಕದಲ್ಲಿರೋ ಕನ್ನಡೇತರರು, ಹಿಂದಿ ಮತ್ತು ಇಂಗ್ಲೀಶ್ ಕಲಿತು ಕನ್ನಡಿಗರಿಗೆ ತಕ್ಕ ಪಾಟ ಕಲಿಸಬೇಕಂತೆ."
Yes. the lesson that we Kannada people need to know how the immigration cancer killing our culture, and how being 'polite', 'accommodating' and not asserting our rights will lead to annihilation of Kannada culture.

Anonymous ಅಂತಾರೆ...

ಈ ರೀತಿ ನಾಯಿಗಳ ತರ ಕಿತ್ತಾಡೊದರಿಂದ ಏನಾದರೂ ಪ್ರಯೋಜನ ಇದೆಯಾ? ನಿಮ್ಮನ್ನ ನೀವೇ ಪ್ರಶ್ನಿಸಿಕೊಳ್ಳಿ.ಇದೆಲ್ಲಾ timepass ಗಷ್ಟೇ.ಕಾಶ್ಮೀರದ ಸ್ಥಿತಿಯನ್ನಾಗಲಿ, ಬಾಂಗ್ಲಾ ವಲಸಿಗರನ್ನಾಗಲಿ ಬ್ಲಾಗ್ ಬರಹಗಳು ಬದಲಾಯಿಸಲು ಸಾಧ್ಯವಿಲ್ಲ.

maaysa ಅಂತಾರೆ...

By the way why that '‘ಚಿಂತನಗಂಗಾ’ is in English?

Or do these folk already aware of the fact that some of us 'Dravidian's will never learn Hindi or Sanskrit and one must have to provide us service in Engish when we are out of our 'State'. :D

What a conundrum!

Anonymous ಅಂತಾರೆ...

chintanaganga kannaDadallide. illi kondi haakiruvudu "bunch of thoughts". chintanagangaada soft copy net alli sikkillaa ansutte!

maaysa ಅಂತಾರೆ...

"haakiruvudu "bunch of thoughts""

But.. Why is there a English verion available at http://www.sanghparivar.org/ but not a Kannada version or a Sanskrit version :D ?

Why is English so important to this great nationalistic organisation?

Unknown ಅಂತಾರೆ...

maaysa,
I agree with you...why 'bunch of thoughts' in English?..why not in Kannada?

I know why its not in Sanskrit..if its in Sanskrit; nobody is going to read it anyway. :)

Anonymous ಅಂತಾರೆ...

Matanadoke yellarigu barutte,,
aadare vishaya tilidu matanadoke kadime janakke barutte..
avaru khandita RSS na tikisuvadilla.
Kannada Parichaya Varga e varsha RSS ninda shuru aada volleya kelasa. edara bagge helbeku andre vondu saari allige banni.
Parabhasheyavarige kannada kalistare RSS navaru.
RSS/Samaja Sevakaru Yenu Madidatre anta nodi.. Yenu madilla anta Charche Beda ?

maaysa ಅಂತಾರೆ...

"I know why its not in Sanskrit..if its in Sanskrit; nobody is going to read it anyway. :)"

This is a great tragedy to the Sanskrit language. I have learnt Sanskrit. Sanskrit literature contains not only Vedic literature. There is a great amount of Buddhist, Lokayata and other literature. Ex: the author of Srungara shataka, Neeti shataka and Vairaagya Shataka was a Buddhist.

The organisations like this and there lobby have made all the Sanskrit studies only focused on the Vedic culture. Karnataka govt. wanted initially to setup a 'Vedic University' and later changed the name to 'Sanskrit Unversity'.

As a language, Sanskrit is being branded just as a language of one ideology, philosophy and creating enemies of it.

Prasad ಅಂತಾರೆ...

Vijay K:

And by going though this discussions, I am asking you a question..How many of you have worked for improving Kannada? How many of your children think Kannada is easy language? Because, now, most of your children will be in convents and definitely they will feel Kannada as extra and tough subject!.

Being Kannada fans, what is your contribution for it? Instead of crying as Non-kannaigas are occupying Baangalore, why don't you teach them basic Kannada? Did you people ever tried in this regard?

Now, RSS IT wing has taken an initiative towards this and they are conducting Basic Kannada Course at 300 centres(apartments, where, non-kannada people are more), all over in Bangalore.

You can also join this campaign and if you know kannada, you can be a trainer. And there is no rule that, you should be an RSS voluteer.!!!!!

maaysa ಅಂತಾರೆ...

", why don't you teach them basic Kannada?"

Why should we teach them? Have we invited them to immigrate? The immigrants spend lakhs to send their children to central school etc etc.

Are these IT immigrants poor? Cannot they pay and learn Kannada?

And the nationalist organization is not teaching to contribute to Kannada, they are teaching it as a recruiting advert.

Ratheesha ಅಂತಾರೆ...

ಅಲ್ಲ ನಮ್ಮ ಜನಕ್ಕೆ ಇನ್ನು ಅರ್ಥ ಅಗಿಲ್ವಲ್ಲಾ, ಪ್ರಜಾಪ್ರಭುತ್ವ ಬಂದು ೬೦ ವರ್ಷ ಆದ್ರು ಒಕ್ಕೂಟ ವ್ಯವಸ್ಥೆನ ಬಲಪಡಿಸಿ, ಪ್ರತಿ ರಾಜ್ಯಗಳ ಉದ್ದಾರ ಮಾಡೋ ಮೂಲಕ ದೇಶ ಉದ್ದಾರ ಮಾಡೋದ್ ಬಿಟ್ಟು ಒಕ್ಕೂಟ ವ್ಯವಸ್ತೆನ ಅಳಿಸಿ ಹಾಕ್ಬೇಕು, ದೇಶಕ್ಕೆಲ್ಲ ಒಂದೇ ಹಿಂದಿ ಭಾಷೆ ಬೇಕು ಅಂತ ಪ್ರಜಾಪ್ರಭುತ್ವದ ಜೊತೆಗೆ ಭಾಷಾ ವೈವಿಧ್ಯತೆನು ಸಾಯ್ಸೋಕೆ ನೋಡ್ತಾರಲ್ಲ!!?? ಅಲ್ಲ ಸ್ವಾಮೀ, ಈಗ ಆಗ್ಲೇ ಕೇಂದ್ರ ಸರ್ಕಾರ ನಾಟಕ ಮಾಡ್ಕೊಂಡು ಹಿಂದಿನ ಆಡಳಿತ ಭಾಷೆ ಅಂತ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರ್ತ ಇದ್ಯಲ್ಲ ಇದ್ರಿಂದ ನಮ್ಮ ಕನ್ನಡಿಗರಿಗೆ ಏನ್ ಲಾಭ ಆಗಿದ್ಯಪ್ಪ? ನಮ್ಮ ಕರ್ನಾಟಕದಲ್ಲಿ ನಾಮ್ಮ ಜನರಿಗೆ ಇರೋ ಕೆಲ್ಸನ ಅವ್ರು ಬಂದು ಕಿತ್ಕೊಂಡು ತಿನ್ತವ್ರೆ. ಭಾರತೀಯರಾಗಿ, ಹೊರನಾಡಿನಿಂದ ಬರುವವರು ಭಾರತದವರೇ ಅವ್ರು ಬಂದು ನಿಮ್ಮ ಕೆಲ್ಸನ ಕಿತ್ಕೊಂಡು ತಿಂದರೆ ದೇಶಕ್ಕೆನು ನಷ್ಟ ಇಲ್ಲ ಅಂತ ನೀವ್ ಹೇಳೋದಾದ್ರೆ, ಸ್ವಾಮೀ, ನಮ್ಮ ಕನ್ನಡಿಗರು ಭಾರತೀಯರಲ್ವ? ಅವ್ರು ಹಸ್ಕೊಂಡ್ ಬಿದ್ದು ಸತ್ರು ಪರ್ವಾಗಿಲ್ವ?
ಇನ್ನೊಂದು ವಿಚಾರ ಸ್ವಾಮೀ, ಹೀಗೆ ಒಕ್ಕೂಟ ವ್ಯವಸ್ಥೆ ಒಡೆದು ಒಂದೇ ಭಾಷೆಯಿಂದ ಕಟ್ಟೋ ರಾಷ್ಟ್ರ ಏನಾಗಬಹುದು ಗೊತ್ತ? ಆರ್ಥಿಕವಾಗಿ ಹಿಂದುಳಿದ ಹಿಂದಿ ರಾಜ್ಯಗಳಿಂದ ಜನ ಮುಂದುವರೆದ ನಮ್ಮಂಥ ರಾಜ್ಯಗಳಿಗೆ ಬಂದು ನಮ್ಮವರ ಕೆಲಸ ಕಿತ್ಕೊಂಡು ಮೇರೆದಾಡ್ತಾರೆ, ಕನ್ನಡಿಗರು ದರಿದ್ರರಾಗ್ತಾರೆ, ಒಟ್ನಲ್ಲಿ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ದರಿದ್ರ ದಾಟುತ್ತೆ ಹೊರತು ದೇಶ ಅಂತು ಉದ್ದಾರ ಆಗಲ್ಲ.

ಹಾಗೆ ಯಾರೋ ಮೇಲೆ ಹೇಳಿದಾರಪ್ಪ, ಮುಸ್ಲಿಂ ರಾಜ್ಯ ಬಂದ್ರೆ ಉರ್ದುನ ಹೆರ್ತಾರೆ ಅಂತ, ಅಲ್ಲ, ಯಾವುದೇ ರಾಜ್ಯ ಸಿಗದೆ ಇವ್ರು ಸಂಸ್ಕ್ರುತನ ಮತ್ತೆ ಹಿಂದಿನ ನಮ್ಮೇಲೆ ಹೇರ್ತ ಇರ್ಬೇಕಾದ್ರೆ ಇನ್ನು ಇವರ ಕೈಗೆ ರಾಜ್ಯ ಸಿಕ್ಬಿತ್ರೆ ಕಥೆ ಏನು?
ಇನ್ನು ಬ್ರಿಟಿಷರು ಬಂಧು ಸಂಸ್ಕ್ರುತನ ನಾಶ ಮಾಡಿದ್ರು ಅಂತಾರಪ್ಪ, ಅಲ್ಲಾ, ಬ್ರಿಟಿಷರು ಬಂದಿದ್ದು ಸುಮಾರು ೪೦೦ ವರ್ಷಗಳ ಹಿಂದೆ, ಆದ್ರೆ ಇದೇ ನಮ್ಮೊರ ಹತ್ರ (ಚಿಕ್ಕಮಗಳೂರಿನ ಮುಗಳಿಪುರ) ಸುಮಾರು ೬೫೦ ವರ್ಷ ಹಳೆಯದಾದ ವಿಜಯನಗರ ಅರಸರ ಸಾಮಂತನಾದ 'ಮಂಗರಸ' ಎಂಬ ದೊರೆ ಕನ್ನಡದಲ್ಲಿ ರಚಿಸಿದ 'ಖಗೆಂದ್ರ ಮಣಿ ದರ್ಪಣ' ಅನ್ನೋ ವಿಶ್ವದ ಮೊತ್ತ ಮೊದಲ 'ವಿಷ ವೈದ್ಯ ಗ್ರಂಥ' ಸಿಕ್ಕಿತಲ್ಲ ಹಂಗಾದ್ರೆ ಆ ಟೈಮ್ನಲ್ಲಿ ಸಂಸ್ಕೃತ ನಮ್ಮ ರಾಜ್ಯದಲ್ಲಿ ಎಲ್ಲಿತ್ತಪ್ಪ? ಆ ಬ್ರಿಟಿಷರು, ಅದೆಲ್ಲಿ ನಮ್ಮ ರಾಜ್ಯದಲ್ಲಿ ಸಂಸ್ಕ್ರುತನ ಹುಡುಕಿ ನಾಶ ಮಾಡುದ್ರೋ ದೇವ್ರೇ ಬಲ್ಲ.
ಇನ್ನು ಇತಿಹಾಸದಲ್ಲಿ ಭಾಷೆ ಆಧಾರದ ಮೇಲೆ ಯಾವ ರಾಜ್ಯನು ಇರ್ಲಿಲ್ಲ ಅಂತ ಮೊಂಡು ವಾದ ಹೇಳೋರು, ನಮ್ಮ ಅಣ್ಣಾವ್ರು ಮಾಡಿರೋ "ಮಯೂರ" ಚಿತ್ರಣ ಒಂದ್ಸಲ ನೋಡುದ್ರೆ ಸಾಕು.
ಅಯ್ಯೋ ಹೋಗ್ಲಿ ಬಿಡಿ ಅತ್ಲಾಗೆ, ಇನ್ನು ಹಳೆ ಕಾಲ್ದವರಂಗೆ ಇಡೀ ರಾಷ್ಟ್ರನ ಒಂದು ಮಾಡಿ ಅಳಬೇಕು ಅಂತ ಒದ್ದಾಡ್ತ್ವರೆ ಅಷ್ಟೇ, ಹಿಂಗೆ ರಾಷ್ಟ್ರನೆಲ್ಲ ಅಳಬೇಕು ಅಂತ ಅಶೋಕ ಮಹಾರಾಜ ಒದ್ದಾಡಿ ಮುಂದೇನಾಯ್ತು ಹೇಳಿ? ಹಂಗೆ ಇದು.
ಕನ್ನಡಿಗರಿಗೆ ನಮ್ಮದೇ ಸಂಸ್ಕೃತಿ ಇದೇ ಹಾಗಾಗಿ ಸಂಸ್ಕೃತ ಬೇಡ,
ಕನ್ನಡ ಉದ್ದಾರಕ್ಕೆ ಕನ್ನಡ ಮಂದಿ ಇದ್ದಾರೆ ಹಾಗಾಗಿ ಹಿಂದಿ ಬೇಡ,
ಪರಭಾಷೆಗಳನ್ನು ನಾವು ಗೌರವಿಸುತ್ತೇವೆ, ನಮ್ಮದನ್ನು ನಾವು ಪ್ರೀತಿಸುತ್ತೇವೆ, ಬೆಳೆಸುತ್ತೇವೆ ಆ ಮೂಲಕ ರಾಜ್ಯದುದ್ದಾರ, ಹೀಗೆ ಎಲ್ಲ ರಾಜ್ಯಗಳು ಬೆಳೆದರೆ ದೇಶದುದ್ದಾರ.

Priyank ಅಂತಾರೆ...

ಅನಾನಿಮಸ್ಸು ಅವರು ಒಳ್ಳೆ ಮಾತುಗಳನ್ನೇ ಎತ್ತಿದಾರೆ.
ಅನಾನಿಮಸ್ಸು ಅವರು ಹೇಳೋದು: "ಬ್ಲಾಗ್ ಬರೆಯೋದರಿಂದ ಕಾಶ್ಮೀರದವರನ್ನಾಗಲೀ, ಬಾಂಗ್ಲಾದ ವಲಸಿಗರನ್ನಾಗಲೀ ಬದಲಾಯಿಸಲಾಗೊಲ್ಲ".
ಕಾಶ್ಮೀರದ ಪ್ರಶ್ನೆಗೆ ಬೇರೆ ರೀತಿಯ ಉತ್ತರ ಕಂಡುಕೊಳ್ಳಬೇಕಾಗಿದೆ. ಕಾಶ್ಮೀರದಲ್ಲಿ ಸಮಸ್ಯೆಯಿದೆ ಅಂತ ಕನ್ನಡಿಗನು ಹಿಂದಿ/ಸಂಸ್ಕ್ರುತ ಕಲಿತರೆ ಸಮಸ್ಯೆ ಬಗೆ ಹರಿಯುತ್ತಾ? ಇಲ್ಲಾ ತಾನೇ?
ಕಾಶ್ಮೀರದಲ್ಲಿ ಸಮಸ್ಯೆ ಇದೆ ಅಂತ, ಕನ್ನಡಿಗನು ತನ್ನನ್ನು ತಾನು ಆಳಿಕೊಳ್ಳುವ ಹಕ್ಕನ್ನು ಬಲಿಕೊಡಬೇಕಾ? ಕೊಟ್ಟರೆ ಸಮಸ್ಯೆ ಬಗೆ ಹರಿಯುತ್ತಾ? ಇಲ್ಲಾ ತಾನೇ?
ಬಾಂಗ್ಲಾದ ವಲಸಿಗರು ಹೆಚ್ಚು ಜನ ಗಡಿದಾಟಿ ಒಳನುಸುಳುತ್ತಿದಾರೆ ಅಂದರೆ, ಅದಕ್ಕೆ ಪರಿಹಾರ ಬೇರೆ ಇದೆ. ಕನ್ನಡಿಗರು ಹಿಂದಿ/ಸಂಸ್ಕ್ರುತ ಕಲೀತಾ ಕೂತರೆ, ಬಾಂಗ್ಲಾದ ಜನರು ಒಳನುಸುಳೋದು ನಿಲ್ಲಿಸ್ತಾರಾ? ಇಲ್ಲಾ ತಾನೇ?
ಮತ್ತೆ, ಸೇಬಿನಣ್ಣನ್ನೂ, ಕಿತ್ತಳೆ ಹಣ್ಣನ್ನೂ ಹೋಲಿಸಿ ನೋಡುವ ಕಶ್ಟ ಯಾಕೆ?

Priyank ಅಂತಾರೆ...

ಪ್ರಸಾದ್ ಅವರು ಒಳ್ಳೆಯ ಮಾತುಗಳನ್ನೇ ಎತ್ತಿದಾರೆ.
"ಕನ್ನಡಿಗರ ಮೇಲೆ ಹಿಂದಿ/ಸಂಸ್ಕ್ರುತ ಹೇರಿಕೆ ನಿಲ್ಲಲಿ, ಕನ್ನಡಿಗ ತನ್ನನ್ನು ತಾನು ಆಳಿಕೊಳ್ಳುವಂತಾಗಲಿ" ಎಂದರೆ, "ನೀವು ಕನ್ನಡಕ್ಕೇನು ಮಾಡಿದೀರಿ?" ಎಂಬ ಪ್ರಶ್ನೆ ಪ್ರಸಾದ್ ಅವರದು.
ಸೇಬಿನಣ್ಣನ್ನೂ ಕಿತ್ತಲೆ ಹಣ್ಣನ್ನೂ ಹೋಲಿಸೋ ಕಶ್ಟ ಪ್ರಸಾದ್ ಅವರೂ ತಗೊತಿದಾರೆ.

ಆರೆಸ್ಸೆಸ್ಸಿನ ಕಡೆಯಿಂದಾ, ಬೆಂಗಳೂರಿನ ಹಲವೆಡೆ ಕನ್ನಡ ಕಲಿಸು ಕಾರ್ಯಕ್ರಮ ನಡೀತಿದ್ರೆ ಒಳ್ಳೇದು. ಆದರೆ, ಇಲ್ಲಿ ಪ್ರಶ್ನೆ ಇರೋದು ಮೂಲ ಸಿದ್ದಾಂತದ ಬಗ್ಗೆ.
"ಮೂಲ ಸಿದ್ದಾಂತ ಏನು? ಅದರ ಹುಳುಕುಗಳೇನು?" ಎಂಬ ಪ್ರಶ್ನೆಗೆ, ಪ್ರಸಾದ್ ಅವರು "ನೀವು ಬಂದು ಕನ್ನಡ ಕಲಿಸಿ" ಅನ್ನೋ ರೀತಿಯ ಉತ್ತರವನ್ನಿತ್ತಿದಾರೆ.
ಸೇಬಿನಣ್ಣು ಹೆಂಗಿದೆ ಅನ್ನೋ ಪ್ರಶ್ನೆಗೆ, ಕಿತ್ಲೆಹಣ್ಣು ಸಿಕ್ಕಪಟ್ಟೆ ಹುಳಿ ಎಂಬ ಉತ್ತರ.

KASHYAP ಅಂತಾರೆ...

@Amarnath Shivashankar @Priyank @Anand
ನಿಮ್ಮ ಲೇಖನಕ್ಕೆ ಉತ್ತರ ಇಲ್ಲಿದೇ ನೋಡಿ....
ಏನ್ ಗುರು ರಾಜಕೀಯನಾ? = http://tinyurl.com/7h846dl

ನಿಲುಮೆಯಲ್ಲಿ (nilume.net) ’ಅಶ್ವಿನ್ ಎಸ್ ಅಮೀನ್’ ಬರೆದಿರುವ ಲೇಖನದ ಬಗ್ಗೆ ನಿಮ್ಮ ನಿಲುವು ಏನು ಅಂತ ತಿಳಿಸಿ... "HIT & RUN ಬೇಡ" ಸಾಧ್ಯವಾದಲ್ಲಿ ಅಲ್ಲೇ ತಿಳಿಸಬಹುದು...

ಅವರ ಲೇಖನಕ್ಕೆ HITS ಜಾಸ್ತಿಯಾಗುವುದು ಎಂಬ ಕಾರಣಕ್ಕೆ ಓದದೇ ಇರಬೇಡಿ...

ಧನ್ಯವಾದಗಳು

maaysa ಅಂತಾರೆ...

"ಆರೆಸ್ಸೆಸ್ಸಿನ ಕಡೆಯಿಂದಾ, ಬೆಂಗಳೂರಿನ ಹಲವೆಡೆ ಕನ್ನಡ ಕಲಿಸು ಕಾರ್ಯಕ್ರಮ ನಡೀತಿದ್ರೆ ಒಳ್ಳೇದು"

How?

1. Why are we obliged to teach freely Kannada for the immigrants whom we have not invited?
2. They will teach, Kannada is from Sanskrit. It will say Sanskritized Kannada is pure. Do we want people to be taught such a Kannada?

Vasishta Shastry ಅಂತಾರೆ...

ದೇಶದ ಅಳುವು ಉಳಿವಿನ ಪ್ರಶ್ನೆ ಬಂದಾಗ ಸಂಘದ ಅನಿವಾರ್ಯತೆಯನ್ನು ನೀವೇ ಒಪ್ಪಿಕೊಂಡಿದ್ದೀರಿ.
ನಾನು ಭಾಷೆ ಮತ್ತು 'ತಾರತಮ್ಯದ ಬಗೆಗಿನಮ್ಮ ನಿಮ್ಮ ನಿಲುವನ್ನು ಅವಲೋಕಿಸಲು ಸ್ವತಹ ಅನುಭವಿಸಿರುವ ಎರಡು ಅಂಶಗಲ್ಲನ್ನು ಬರೆಯಲು ಇಚ್ಚಿಸುತ್ತೇನೆ
1. ನಾನು ಯಾವಾಗಲಾದರೂ ಸಂಘದ ಹಿರಿಯೊರೊಡನೆ ಮಾತನಾಡುತ್ತಿರುವಾಗ ದೂರವಾಣಿ ಸಂಖ್ಯೆ ಹೇಳುವಾಗ , "ಎಂಟು ಒಂಭತ್ತು ಏಳು ..." ಎನ್ನುತ್ತೇನೆ ಹೊರತು , ಬೇರೆ ಗೆಳೆಯರಿಗೀವ ಹೇಳುವಂತೆ "eight nine seven.." ಎಂದು ಹೇಳುವುದಿಲ್ಲ,ನೆನಪಿರಲಿ ಇದು ಉದ್ದೇಶಪೂರ್ವಕ ಅಲ್ಲಾ "instantanious" ....

2.ಇನ್ನೂ ಜಾತೀಯತೆ ವಿಷಯವಾಗಿ ಸಂಘ ನನ್ನನ್ನು ಹಾಗೂ ನನ್ನೆಲ್ಲ ಸ್ವಯಂಸೇವಕ ಮಿತ್ರರನ್ನು ಹಿಂದೂ ಎಂದು ನೋಡುತ್ತದೆ ಹೊರತು , ನನ್ನನ್ನು ಬ್ರಾಹ್ಮಣ ಎಂದು ಯಾವತ್ತೂ ನೋಡಿಲ್ಲ.
ನೀವು ನನ್ನನ್ನು ಬ್ರಾಹ್ಮಣ ಎಂದು ನೋಡುತ್ತಿರುವುದರಿಂದ ನೀವು ನನ್ನ ಮಾತು ನಂಬಲಿಕ್ಕಿಲ್ಲ. ಬೇರೆಯವರನ್ನು ವಿಚಾರಿಸಿ ನಿರ್ಧರಿಸಿ..

ಕೊನೆಯದಾಗಿ ನಾನು ಹೇಳಬೇಕಾಗಿರುವುದಿಷ್ಟೆ ..
ಕನ್ನಡ , ನಮ್ಮಾಂಸ್ಕೃತಿ , ಸಮಾಜದಲ್ಲಿ ಸಾಮರಸ್ಯತೆ ಬೇಕಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅವಶ್ಯಕತೆ ತುಂಬಾ ಇದೆ...

ಆನಂದ್ ಅಂತಾರೆ...

ಶ್ರೀ ವಸಿಷ್ಟ ಶಾಸ್ತ್ರಿಗಳೇ,

ದೇಶದ ಅಳಿವು ಉಳಿವಿನ ಸಮಸ್ಯೆ ಬಗೆಹರಿಸಲು ಸಂಘದ ಅನಿವಾರ್ಯತೆಯಿದೆ ಎಂಬುದರ ಬಗ್ಗೆ ನಮಗೆ ನಿಮ್ಮೊಡನೆ ಸಹಮತವೇನಿಲ್ಲ. ಏಕೆಂದರೆ ದೇಶ ಕಟ್ಟುವುದರ ಬಗ್ಗೆ ಎರಡು ಆಯಾಮವಿದೆ. ಒಂದು ಇರುವ ತೊಡಕು ನಿವಾರಿಸಿಕೊಳ್ಳುವುದು. ಮತ್ತೊಂದು ಈ ನಾಡಿನ ರೀತಿನೀತಿ ಸ್ವರೂಪಗಳನ್ನು ರೂಪಿಸುವುದು. ಎರಡನೆಯದರ ಬಗ್ಗೆ ಸಂಘದ ನಿಲುವುಗಳನ್ನು ನಾವು ಒಪ್ಪುವುದಿಲ್ಲ ಎನ್ನುವುದು ಈ ಅನಿವಾರ್ಯತೆಯ ಪ್ರಶ್ನೆಗೆ ಉತ್ತರ ನೀಡುತ್ತದೆ. ಸಂಘವು ಒಕ್ಕೂಟ, ಭಾಷೆಗಳ ಬಗ್ಗೆ ಹೊಂದಿರುವ ನಿಲುವುಗಳ ಬಗ್ಗೆ ಆತಂಕವಿದ್ದು ಇದರಿಂದ ಆಗುತ್ತಿರುವ/ ಆಗಲಿರುವ ಹಾನಿ ಎಂಥದ್ದು ಎಂಬುದರ ಬಗ್ಗೆ ಕಾಳಜಿ ನಮ್ಮದು.

ಇನ್ನು ನಿಮ್ಮ ಮಾತುಗಳಾದ "ಕನ್ನಡದಲ್ಲೇ ಜಾಹೀರಾತು, ಸೂಚನೆ, ಪತ್ರಿಕಾ ಹೇಳಿಕೆ, ಸಹಿ, ಫೋನ್ ನಂಬರ್ ಹೇಳುವುದು ಇವೆಲ್ಲದರಲ್ಲೂ ಕನ್ನಡಪ್ರೇಮ ಇದೆ" ಎಂಬುದನ್ನು ಒಪ್ಪಿದರೂ ಕೂಡಾ... ಸಂಘದ ಸಿದ್ಧಾಂತವೇ "ಹಿಂದೀ"ಯನ್ನು ದೇಶಭಾಷೆಯಾಗಿಸುವುದರ ಪರವಾಗಿರುವಾಗ ಈ ಎಲ್ಲವೂ ಬರೀ ತೋರಿಕೆಯದ್ದಾಗಿ ಬಿಡುತ್ತದೆ.

ಸಂಘದಲ್ಲಿನ ಜಾತೀಯತೆ - ಈ ಚರ್ಚೆಯ ವ್ಯಾಪ್ತಿಯ ಹೊರಗಿನದ್ದು. ಯಾವುದೇ ಮನುಷ್ಯನ ಯೋಗ್ಯತೆಯನ್ನು ಅವನ ಹುಟ್ಟಿನಿಂದ ತೀರ್ಮಾನಿಸುವುದು ಸರಿಯಲ್ಲಾ, ಒಬ್ಬರ ದೇಶಪ್ರೇಮ ಅವನ ಹುಟ್ಟುವ ಜಾತಿಯಿಂದ ಧರ್ಮದಿಂದ ತೀರ್ಮಾನಿಸುವುದು ಅಪ್ರಬುದ್ಧತೆ ಎಂದು ನಾವು ಅರಿತಿದ್ದರೆ ಸಾಕು!

Anonymous ಅಂತಾರೆ...

RSS avarige nanna ondu prasne. Nimma agendaalli hindi link language anta mahatva kottaste, janaru valase hodaga a rajyada baashe kalitu baduku katti kollabekemba ondu maatu helalu saadhyave.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails