ಈ ದಾರಿತೋರುಗ ಕೈಮರ ಇರುವುದು ರಾಷ್ಟ್ರಕವಿ ಕುವೆಂಪು ಅವರ ಊರಾದ ಕುಪ್ಪಳಿಯ ಹತ್ತಿರದಲ್ಲಿ. ಕುವೆಂಪು ಅವರ ಮನೆ ಕವಿಶೈಲಕ್ಕೆ ಒಂದು ಕಿಲೋಮೀಟರ್ ದೂರವಿದೆ ಎನ್ನುವುದನ್ನೂ, ಯಾವ ಕಡೆ ಸಾಗಬೇಕೆನ್ನುವುದನ್ನೂ ತೋರಿಸುತ್ತಿರುವ ಇದನ್ನು ಒಮ್ಮೆ ಗಮನಿಸಿ ನೋಡಿದಾಗ "ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ"ದವರು ಕುವೆಂಪುರವರ ಮಾತುಗಳನ್ನು ಅರ್ಥ ಮಾಡಿಕೊಂಡಿಲ್ಲವೇನೋ ಎನ್ನುವ ರೀತಿಯಲ್ಲಿ ಈ ಫಲಕ ಹಾಕಿ ರಾಷ್ಟ್ರಕವಿಗಳ ನಿಲುವಿಗೇ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎನ್ನಿಸುತ್ತಿದೆ. ಏನದು ರಾಷ್ಟ್ರಕವಿಗಳ ನಿಲುವು? ಯಾವುದರ ಬಗೆಗಿನ ನಿಲುವು? ಎನ್ನುತ್ತಿದ್ದೀರಾ? ಹಾಗಾದರೆ ಕುವೆಂಪು ಅವರ ಈ ಕವನದ ಸಾಲುಗಳನ್ನೊಮ್ಮೆ ಓದಿ ನೋಡಿ:
ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ ಹೇ ತ್ರಿಣೇತ್ರ I
ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ
ನುಂಗದಿದ್ದರೆ ಹಸಿವೆ, ನುಂಗಿದರೆ ಪ್ರಾಣಶೂಲ II
ತ್ರಿಭಾಷಾ ಸೂತ್ರದ ಬಗ್ಗೆ ಕುವೆಂಪು ಅವರ ವಿಚಾರಕ್ರಾಂತಿಯ ಬರಹ:
ಭಾರತದಲ್ಲಿ ಭಾಷಾಭಿಮಾನದ ಅತೀರೇಕದಿಂದ ಉಂಟಾಗಬಹುದಾದ ಗೊಂದಲವನ್ನು ಪರಿಹರಿಸಲು ಜನರು ಮೂರು ಭಾಷೆಗಳನ್ನು ಕಲಿಯಬೇಕು ಎಂದು ‘ತ್ರಿಭಾಷಾ ಸೂತ್ರ’ವನ್ನು ಘೋಷಿಸಲಾಗಿದೆ. ಇಂಗ್ಲಿಷನ್ನು ಅಂತರ್ರಾಷ್ಟ್ರೀಯ ಮಾಧ್ಯಮಕ್ಕಾಗಿಯೂ ಹಿಂದಿಯನ್ನು ಭಾರತ ರಾಷ್ಟ್ರೀಯ ಮಾಧ್ಯಮಕ್ಕಾಗಿಯೂ ಕನ್ನಡವನ್ನು (ಇತರ ದೇಶಭಾಷೆಗಳಲ್ಲಿ ಒಂದನ್ನು) ಕರ್ನಾಟಕ ರಾಜ್ಯದ ಮಾಧ್ಯಮಕ್ಕಾಗಿಯೂ ಎಂಬರ್ಥದಲ್ಲಿ. ಮೇಲು ನೋಟಕ್ಕೆ ಇದು ಸಾಧುವಾಗಿ ತೋರುತ್ತಿದೆಯಾದರೂ ಸ್ವಲ್ಪ ವಿಚಾರಿಸಿದರೆ ಗೊತ್ತಾಗುತ್ತದೆ ಮಹಾ ಅಪಾಯಕಾರಿ ಎಂದು.
ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲಿಷುಗಳು ಬಲಾತ್ಕಾರ ಭಾಷೆಗಳಾಗುತ್ತವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದೂ ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು. ಎಲ್ಲರಿಗೂ ಎಲ್ಲ ಭಾಷೆಯೂ ಏತಕ್ಕೆ ಬೇಕು? ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ? ಭರತಖಂಡಕ್ಕೀಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾದುದು ಇಂಗ್ಲಿಷನ್ನು ಮಾತ್ರವಲ್ಲ, ವೈಜ್ಞಾನಿಕ ಆವಶ್ಯಕತೆಗಳಿಗಾಗಿ ರಷ್ಯನ್, ಜರ್ಮನ್ ಮುಂತಾದ ಭಾಷೆಗಳನ್ನು ಕೂಡ ಕಲಿಯಬೇಕು.
ತ್ರಿಭಾಷಾ ಸೂತ್ರದ ಅಪಾಯ ಇಷ್ಟಕ್ಕೇ ಸೀಮಿತವಾಗಿಲ್ಲ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಾಜಕೀಯ ಕಾರಣಗಳಿಗಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ವೈಭವವನ್ನು ಏನೂ ಅರಿಯದ ನಮ್ಮ ಹಸುಳೆಗಳ ಮುಂದೆ ವರ್ಣಿಸಿ ಅವರ ಮನಸ್ಸನ್ನು ಅವುಗಳ ಕಡೆಗೇ ಎಳೆದು ದೇಶಭಾಷೆಗಳ ಅಧ್ಯಯನವನ್ನು ಹಿಂದಕ್ಕೊತ್ತರಿಸುವ ಪ್ರಯತ್ನವನ್ನೂ ಮಾಡುತ್ತಿರುವವರು ಅನೇಕರಿದ್ದಾರೆ.
ಆದ್ದರಿಂದ ನನ್ನ ವಾದ ಇಷ್ಟು: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ: ಅಂದರೆ ‘ಬಹುಭಾಷೆಗಳಲ್ಲಿ ದ್ವಿಭಾಷೆ‘ ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು. ಭರತಖಂಡದ ಯಾವ ವಿದ್ಯಾರ್ಥಿಯ ಮೇಲೂ ಯಾವ ಭಾಷೆಯನ್ನೂ ಬಲಾತ್ಕಾರವಾಗಿ ಹೇರಬಾರದು. ತಮ್ಮ ಆವಶ್ಯಕತೆಗೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅವರೇ ನಿರ್ಧರಿಸಿಕೊಳ್ಳಲಿ. ಇದರಿಂದ ಬಲಾತ್ಕಾರದ ಅಂಶ ತೊಲಗುತ್ತದೆ; ಆರಿಸಿಕೊಳ್ಳುವ ಸ್ವಾತಂತ್ರ್ಯ ಪ್ರಜಾಸತ್ತಾತ್ಮಕವಾಗುತ್ತದೆ.
ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ ‘ಬಹುಭಾಷೆಗಳಲ್ಲಿ ದ್ವಿಭಾಷಾ’ ಸೂತ್ರ ತ್ರಿಭಾಷಾಸೂತ್ರಕ್ಕಿಂತ ಪರಿಣಾಮಕಾರಿಯಾಗಿ, ಎಲ್ಲ ಪ್ರದೇಶಗಳಿಗೂ ಸಮಾಧಾನವೊದಗಿಸಿ, ಸ್ವಭಾಷಾಭಿಮಾನ ಜನ್ಯವಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.
ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳಬಹುದು ಎನ್ನುವುದರಿಂದ ಹಿಂದಿ ಬೇಡ ಎನ್ನುವವರಿಗೆ, ಇಂಗ್ಲಿಷ್ ಬೇಡ ಎನ್ನುವವರಿಗೆ, ಅವುಗಳನ್ನು ಬಲಾತ್ಕಾರವಾಗಿ ಹೇರಿದಂತಾಗುವುದಿಲ್ಲ; ನಿಷೇಧಿಸಿದಂತೆಯೂ ಆಗುವುದಿಲ್ಲ. ಮಹಾಜನರೇ ಕಾಲಕ್ರಮೇಣ, ತಮ್ಮ ತಮ್ಮ ಅಭಿರುಚಿ ಆವಶ್ಯಕತೆಗಳಿಗೆ ತಕ್ಕಂತೆ ಹಿಂದಿ, ಇಂಗ್ಲಿಷ್, ರಷ್ಯನ್, ಸಂಸ್ಕೃತ ಮೊದಲಾದ ಭಾಷೆಗಳನ್ನು ಯಾವ ಶೇಕಡಾವಾರು ಪ್ರಮಾಣದಲ್ಲಿ ಕಲಿಯಬೇಕೆಂಬುದನ್ನು ತಮಗೆ ತಾವೇ ಗೊತ್ತುಮಾಡಿಕೊಳ್ಳುತ್ತಾರೆ.
ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ. ಶೇಕಡ ಒಂದರಷ್ಟು ಜನಕ್ಕೆ ಅರ್ಧಮರ್ಧ ಇಂಗ್ಲಿಷ್ ಕಲಿಸಿ ಬ್ರಿಟೀಷರು ಇನ್ನೂರು ವರ್ಷಕ್ಕೂ ಮೇಲೆ ಸಮರ್ಥವಾಗಿ ರಾಜ್ಯಭಾರ ನಡೆಸಲಿಲ್ಲವೆ?
ತ್ರಿಭಾಷಾ ಸೂತ್ರ ಎಂಬುದು, ನಾನು ಹಿಂದೆಯೆ ಅನೇಕ ಕಡೆ ಹೇಳಿರುವಂತೆ, ಭಾರತೀಯರಿಗೊ ತ್ರಿಶೂಲಪ್ರಾಯವಾಗುತ್ತದೆ. ಎಲ್ಲರಿಗೂ ಎಲ್ಲ ಭಾಷೆಗಳೂ ಬೇಕಾಗಿಲ್ಲ ಎಂದರೆ, ಎಲ್ಲರೂ ಇಂಗ್ಲಿಷನ್ನಾಗಲಿ ಹಿಂದಿಯನ್ನಾಗಲಿ ಕಲಿಯಬೇಕಾದದ್ದು ಏಕೆ? ಯಾರಿಗೆ ಅಗತ್ಯವಿದೆಯೋ ಅಂಥವರು ಅವರಿಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಇಂತಹ ಭಾಷೆಗಳನ್ನು ಶೀಘ್ರವಾಗಿ ಸಾಹಿತ್ಯದೃಷ್ಟಿಯಿಂದಲ್ಲದೆ ಭಾಷಾದೃಷ್ಟಿಯಿಂದ ಬೋಧಿಸುವ ಕಾರ್ಯಕ್ಕಾಗಿ ಭಾಷಾ ಸಂಸ್ಥೆಗಳ ಸ್ಥಾಪನೆಯಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಲಿದೆ, ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ?
ಆದ್ದರಿಂದ ‘ಬಹುಭಾಷೆಗಳಲ್ಲಿ ದ್ವಿಭಾಷೆ‘ ಎಂಬುದೇ ನಮಗಿಂದು ಕ್ಷೇಮಕರ ಸೂತ್ರವಾಗಿದೆ. ಒಂದುವೇಳೆ ಮೂರು ಭಾಷೆಗಳನ್ನೂ ಕಲಿಯಬೇಕು ಎಂದು ಹಠ ಹಿಡಿದರೂ ಬಹುಭಾಷೆಗಳಲ್ಲಿ ಮೂರು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ವಿದ್ಯಾರ್ಥಿಗಿರಬೇಕು. ‘ಬಹುಭಾಷೆಗಳಲ್ಲಿ ತ್ರಿಭಾಷೆ’ ಆಗಬೇಕೇ ಹೊರತೂ ಬರಿಯ ‘ತ್ರಿಭಾಷೆ’ಯಾಗಬಾರದು. ಬರಿಯ ‘ತ್ರಿಭಾಷೆ’ಯಾದರೆ ಇಂಗ್ಲಿಷ್ ಮತ್ತು ಹಿಂದಿ ಬಲಾತ್ಕಾರದ ಭಾಷೆಗಳಾಗುತ್ತವೆ. ಕನ್ನಡ ತೆಲುಗು ತಮಿಳು ಮಲೆಯಾಳ ಭಾಷೆಗಳು ತಮ್ಮ ರಾಜ್ಯಗಳಲ್ಲಿಯೆ ಐಚ್ಛಿಕ ಭಾಷೆಗಳಾಗಿ ತೃತೀಯ ಸ್ಥಾನಕ್ಕಿಳಿದು ಹಿಂದಿಯನ್ನು ‘ಓಲೈಸುವ ಅಡಿಯಾಳುಗಳಂತಾಗಿ ತೊತ್ತುಗಳಾಗುತ್ತವೆ.
(ಹೊತ್ತಗೆ: ವಿಚಾರ ಕ್ರಾಂತಿಗೆ ಆಹ್ವಾನ, ಬರಹಗಾರರು: ಕುವೆಂಪು, ಪ್ರಕಾಶನ: ಉದಯರವಿ ಪ್ರಕಾಶನ, ಮೈಸೂರು)
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದವರೋ, ಸರ್ಕಾರದವರೋ.. ಒಟ್ಟಲ್ಲಿ ಸಂಬಂಧಪಟ್ಟವರು ರಾಷ್ಟ್ರಕವಿಗಳ ಆಶಯಕ್ಕೆ ಪೂರಕವಾಗಿ ಸ್ಪಂದಿಸಿ ಈ ಕೈಮರವನ್ನು ತಿದ್ದಬಹುದಾ ಗುರೂ!
8 ಅನಿಸಿಕೆಗಳು:
OBBA HINDI GANDU HELTANE HINDI BARADAVARI JAILIGE HAKABEKANTE INNU PASSPORT KODUVUDILLANTE DESHA BITTU TOLAGA BEKANTE BADDI MAKLU MODALU NAMMA KANNADA NADI NINDA TOLAGALI *JAI KARU NADU*
MODALU A BLOODY DARI TORUGA KI MARA DALLI IRUVA HINDI AKSHARAGALANNU KITTU OGEYERE BANDUGALE *JAI KARUNADU*
ತ್ರಿಭಾಷ ಸೂತ್ರದಿಂದ ತೊಂದರೆಯೇನೂ ಇಲ್ಲವೆಂದು ನನ್ನ ಭಾವನೆ. ಮೂರನೆಯ ಭಾಷೆಯಾಗಿ ದೇಶದ ಹೆಚ್ಚಿನ ಜನ ಮಾತನಾಡುವ ಹಿಂದಿ ಭಾಷೆಯನ್ನು ಕಲಿಸುವುದು ಸಮಂಜಸವಾಗಿಯೇ ಇದೆ. (ದೇಶದ ಸುಮಾರು 40 ಕೋಟಿ ಹಿಂದಿ ಮಾತನಾಡಬಲ್ಲರು ಮತ್ತು ವಿಶ್ವಾದ್ಯಂತ 80 ಕೋಟಿ ಜನ ಹಿಂದಿ ಅರ್ಥೈಸಿ ಕೊಳ್ಳಬಲ್ಲರು). ಹಿಂದಿ ಭಾಷೆ ಆರನೆಯ ಕ್ಲಾಸಿನಲ್ಲಿ ಕಲಿಸಲು ಆರಂಭಿಸಲಾಗುತ್ತದೆ ಹೀಗಾಗಿ ಇದನ್ನು ಕಲಿಯುವುದು ಹೊರೆ ಎಂದು ನನಗೆ ಅನಿಸುವುದಿಲ್ಲ. ಹಿಂದಿ ಬಹುತೇಕ ಭಾರತೀಯ ಭಾಷೆಗಳ ಸ್ವರೂಪದ ಅಕ್ಷರಮಾಲೆ ಹಾಗೂ ವ್ಯಾಕರಣ ವಿಧಾನಗಳನ್ನು ಹೊಂದಿರುವುದರಿಂದ ಇದನ್ನು ಕಲಿಯುವುದು ಇಂಗ್ಲಿಷ್ ಕಲಿಯುವಷ್ಟು ಕಷ್ಟಕರವೂ ಅಲ್ಲ. ಹಿಂದಿಯ ಬದಲಿಗೆ ಬೇರೆ ಭಾರತೀಯ ಭಾಷೆ ಕಲಿಯುವ ಆಯ್ಕೆ ಕೊಟ್ಟರೆ ಅದನ್ನು ಕಲಿಸಲು ಶಿಕ್ಷಕರ ವ್ಯವಸ್ಥೆ ಮಾಡುವುದು ಪ್ರತಿ ಶಾಲೆಯಲ್ಲೂ ಸಾಧ್ಯವಿಲ್ಲ. ಉದಾಹರಣೆಗೆ ಒಂದು ತರಗತಿಯಲ್ಲಿ ಕೆಲವರು ಮೂರನೆಯ ಭಾಷೆಯಾಗಿ ಮಲಯಾಳಂ, ಇನ್ನು ಕೆಲವರು ತಮಿಳು, ಇನ್ನು ಕೆಲವರು ತೆಲುಗು, ಇನ್ನು ಕೆಲವರು ಮರಾಟಿ, ಬೆಂಗಾಲಿ, ಗುಜರಾತಿ ಇತ್ಯಾದಿ ಕಲಿಯುವ ಆಯ್ಕೆ ತೆಗೆದುಕೊಂಡರೆ ಅದನ್ನು ಕಲಿಸಲು ಶಿಕ್ಷಕರ ಏರ್ಪಾಡು ಮಾಡುವುದು ಸಾಧ್ಯವೇ ಇಲ್ಲ. ಹೀಗಾಗಿ ಹಿಂದಿಯನ್ನು ಕಲಿಸುವುದೇ ಸೂಕ್ತ. ಇನ್ನು ಕುವೆಂಪು ಅವರು ಹೇಳಿದ ಹಾಗೆ ಇಂದು ಬೇರೆ ವಿದೇಶಿ ಭಾಷೆಗಳನ್ನು (ಫ್ರೆಂಚ್, ರಶಿಯನ್, ಜಪಾನೀ ಇತ್ಯಾದಿ) ಕಲಿಯಬೇಕಾದ ಅವಶ್ಯಕತೆ ಅಷ್ಟಾಗಿ ಇಲ್ಲ. ಇದು ಆ ದೇಶಗಳಿಗೆ ಹೋಗಿ ಕೆಲಸ ಮಾಡುವವರಿಗೆ ಮಾತ್ರ ಅಗತ್ಯ. ಈಗೀಗ ಜಾಗತೀಕರಣದಿಂದಾಗಿ ಇಂಗ್ಲೀಷೇ ಅಂತರರಾಷ್ಟ್ರೀಯ ಭಾಷೆಯಾಗಿ ರೂಪುಗೊಂಡಿದೆ. ಹಿಂದಿ ಭಾಷಿಕ ಜನ ನಮ್ಮ ರಾಜ್ಯದಲ್ಲಿ ಬಂದು ಹಿಂದಿಯ ದೊಡ್ಡಸ್ತಿಕೆ ತೋರಿಸಿದರೆ ನಾವು ವಿರೋಧಿಸುವುದು ತಪ್ಪಲ್ಲ, ಆದರೆ ಹಿಂದಿಯನ್ನು ಕಲಿಸುವುದನ್ನು ವಿರೋಧಿಸಬೇಕಾದ ಅಗತ್ಯವಿಲ್ಲ ಎಂದು ನನ್ನ ಭಾವನೆ. -ಆನಂದ ಪ್ರಸಾದ್
ಆನಂದ ಪ್ರಸಾದರೇ,
ನೀವು ಬಹುಶಃ ಏನ್‍ಗುರು ಬರಹಗಳಿಗೆ ಹೊಸಬರೆಂದು ತೋರುತ್ತದೆ. ದಯಮಾಡಿ ಹಿಂದೀ ಹೇರಿಕೆ ಎಂಬ ವಿಷಯದ ಅಡಿಬರುವ ಎಲ್ಲಾ ಬರಹಗಳನ್ನು ನೋಡಿ. ಯಾರೇ ಹಿಂದೀಕಲಿಯುತ್ತೇನೆನ್ನುವುದಕ್ಕೆ ನಮ್ಮ ವಿರೋಧವೇನೂ ಇಲ್ಲಾ. ಆದರೆ ಕಡ್ಡಾಯ ಮಾಡುವುದಕ್ಕೆ ವಿರೋಧವಿದೆ. ಅದೂ ಕೂಡಾ ಹಿಂದೀಯನ್ನು ಒಪ್ಪುವುದು ನಮ್ಮ ಅಳಿವಿಗೆ ಕಾರಣವಾಗುತ್ತದೆ ಎನ್ನುವ ಕಾರಣದಿಂದ ಮಾತ್ರವೇ. ಈ ಬಗ್ಗೆ ನಿಮಗೆ ಸುಲಭವಾಗಿಯೂ ಮತ್ತು ಸಮಗ್ರವಾಗಿಯೂ ಮಾಹಿತಿ ಸಿಗುವ ಮಾರ್ಗವೆಂದರೆ ದಯಮಾಡಿ "ಹಿಂದೀ ಹೇರಿಕೆ: ಮೂರು ಮಂತ್ರ, ನೂರು ತಂತ್ರ" ಹೊತ್ತಗೆಯನ್ನೊಮ್ಮೆ ಓದಿನೋಡಿರಿ.
ಆನಂದ್
nodi ivre anand prasad nimge ondu vishya keltini namma kannada rastradalli hindi basheyali mahiti palaka hakuvudadare idi baratha emba okkuta(bharatha desha alla adu kali okkuta)dalli ella sarakari namapalaka galannu ella okkuta da savindanada 8th shedule nalli iruva bhashe galalli haka beku adannu hakalu kasta vagu tade ada re modalu e bloody hell okkuta vannu odeya beku innu e boli makalu bhiya galla bagge e tharlegalu bahu chalaku gulf counry galalli kuda tamma hindi yannu habbista ive adre arabi galige hedari hindi kuda kalita ive
ಆನಂದ ಪ್ರಸಾದ್ ಅವರೆ, ಸ್ವಲ್ಪ ಯೋಚನೆ ಮಾಡಿ. ನಾವು ನೀವೆಲ್ಲ ಈ ತ್ರಿಭಾಷಾ ಸೂತ್ರ ಕಲಿತು ಬಂದಿದ್ದರಿಂದ ಹೆಗಗ್ತಿದೆ ಅಂತ ನಿಮಗೆ ಗೊತ್ತಗ್ಬೇಕದ್ರೆ , ಬೆಂಗಳೊರಿನ ಕೆಲವೊಂದು ಏರಿಯಗಳಾದ ಬಿ,ಟಿ.ಎಂ.ಲೇಔಟ್, ಹೆಚ್.ಎಸ್.ಅರ್. ಲೇಔಟ್, ಸರ್ಜಾಪುರ ರೋಡ, ಮಾರತ್ಹಳ್ಳಿ, ಈ ಕಡೆ ಬನ್ನಿ. ೧೦-ಇಪ್ಪತ್ತು ವರ್ಷಗಳಿಂದ ಇಲ್ಲಿ ಮೊದಲಿಗೆ ಕನ್ನಡ ಅಥವ ತೆಲುಗು ಚಾಲನೆಯಲ್ಲಿತ್ತು. ೪-೫ ವರ್ಷಗಳಿಂದ ಪ್ರತಿದಿನ ಉತ್ತರ ಭಾರತದಿಂದ ಸಾವಿರಾರು ಜನ ಈ ಏರಿಯ ಗಳಲ್ಲಿ ಬಂದು ನೆಲಸಿದರು. ಮೊದಮೊದಲಿಗೆ ಇವರು ಕನ್ನಡಲ್ಲಿ ಮಾತಾಡಲು ಪ್ರಯತ್ನಿಸದರು. ಆದರೆ ನಮ್ಮ ಕನ್ನಡಿಗರೇ ಇವರ ಜೊತೆ ಹಿಂದಿಯಲ್ಲಿ ಉತ್ತರ ಕೊಡ್ತಾ ಇದ್ರೂ.ಹಾಗಾಗಿ ಅವರು ಕನ್ನಡ ಕಲಿಯದೆ ಇದ್ರೂ ಈ ರಜಯ್ದಲ್ಲಿ ಇರಬಹುದು ಅಂತ ಅನ್ನಿಸತೊಡಗಿತು. ತಮಗೆ ಪರಿಚಯದ ಸ್ನಿಹಿತರು., ನೆಂಟರನ್ನು ಇಲ್ಲಿಗೆ ಕರೆ ತಂದರು. ತಮ್ಮ್ಮ ಮನೆ ಕೆಲಸಕ್ಕೆ ಬೇಕಾದ ಜನರನ್ನ ಕೂಡ ಅಲ್ಲಿಂದ ಕರಿಸ್ಕೊಂದ್ರು. ಇವರೆಲ್ಲರೂ ಇಲ್ಲಿ ಹಿಂದಿ ನಡಿಯುತ್ತೆ, ಜನರ ಪ್ರತಿರೋಧ ಇಲ್ಲ ಅಂತ ತಿಳಿದೇ ಇಲ್ಲಿಗೆ ಬಂದಿದ್ದು. ಇವತ್ತು ಈ ಏರಿಯ ಗಳೆಲ್ಲ ಹಿಂದಿಮಯವಾಗಿವೇ. ಬಾಗಿಲು ಕಾಯುವ ಸೆಕ್ಯೂರಿಟಿ ಗಾರ್ಡ್ ಇಂದ ಹಿಡಿದು, ಹೌಸ್ ಕೀಪಿಂಗ್ ನವರು, ಅಪಾರ್ಟ್ಮೆಂಟ್ ಕಟ್ಟುವವರು, ಹಾರ್ಡ್ ವೇರ್ ಅಂಗಡಿಯವರು, ಸಾಫ್ಟ್ವೇರ್ ಇಂಜಿನಿಯರ್ ಗಳಅಲ್ಲಿ ಶೇಕಡಾ ೯೦ ಹಿಂದಿಯವರು.ಕೊನೆಗೆ ಬಿ.ಎಂ.ಟಿ.ಸಿ. ಬಸ್ ಕಂಡಕ್ಟರ್ ಕೂಡ ಇವರ ಜೊತೆ ಹಿಂದಿಯಲ್ಲಿ ವ್ಯವಹಿರಿಸ ಬೇಕಾಗಿದೆ. ಇದೆಲ್ಲ ಹೀಗೆ ಆಗಲು ನಮಗೆ ಅಲ್ಪ ಸಲ್ಪ ಹಿಂದಿ ಕಲಿತದ್ದೇ ಮುಳುವಾಗಿದೆ. ಇನ್ನು ಮುಂದೆ ಹೋಗಿ ಪಕ್ಕದ ತಮಿಳ್ ನಾಡಿನಲ್ಲಿ ನೋಡಿ. ಅವರು ಈ ತ್ರಿಭಾಷಾ ಸೂತ್ರ ಧಿಕ್ಕರಿಸಿದ್ದಿಂದ ಅಲ್ಲಿ ಶೇಕಡಾ ೯೦% ಉದ್ಯೋಗಿಗಳು ತಮಿಳರೇ. ಜೊತೆ ಎಲ್ಲಿ ಹೊದರು ತಮಿಳು ಬರದಿದ್ದರೆ ಉಳಿಗಾಲವಿಲ್ಲ. ಹೀಗಾಗಿ ಹೊರಗಿನವರು ಅಷ್ಟು ಸುಲುಭವಾಗಿ ಬಂದು ಕೆಲಸ ಗಿಟ್ಟಿಸಲು ಅವರು ಬಿಡಲಿಲ್ಲ. ಹಿಂದಿ ಹೇರಿಕೆಯ ಪ್ರಭಾವ ಏನೆಂದು ಅರಿಯಲು ಇವೆರಡು ರಾಜ್ಯವನ್ನ್ ಹೋಲಿಸಿದರೆ ಗೊತ್ತಾಗಿಬಿಡುತ್ತೆ.
Namaskaara..
Kannadigaralli oggattilladhiruvudhe idhakkella kaarana.
Kannadigaru hindi English maataadalu hapa hapishtaaare..
Naavu sariyaagiddhhare yaaru enu maadokaagalla..
Bhashabhimaana beleskollabeku...
naanu nanna office alli thumba janarige kannada kalisidhini..
adhara bagge hemme idhe..
ಹಿಂದಿ ಕಲಿತು ನಾವು ಏನು ಪಡೆಯಬೇಕಾಗಿದೆಯೋ ಕಾಣೆ ? ಈಗ ಇರೋದೆಲ್ಲಾ ಎಲ್ಲಾ ವಿದೇಶಿ ಆಮದಿನ ಜ್ಞಾನ ಭಂಡಾರ - ಅದನ್ನ ಇಂಗ್ಲೀಶಿನಿಂದ್ಲೇ ಕಲೀಬಹುದು. ಅದು ಬಿಟ್ರೆ ಸ್ವಂತ ಭಾಷಾ ಮನೋಧರ್ಮ ಅನ್ನೋದು ಏನಾದ್ರೂ ಹಿಂದಿಯಲ್ಲಿ ಇದ್ರೆ ಅದು ನಮ್ಮ ಕನ್ನಡಕ್ಕಿಂತ ವಿಶೇಷವಾದದ್ದೇನೂ ಅನಿಸಲ್ಲ. ಹೀಗಿರಬೇಕಾದ್ರೆ ಹಿಂದಿ ಉಪಯೋಗಿಸಬೇಕಾದುದು ನಮ್ಮ ಸಮಸ್ಯೆ ಅಲ್ಲವೇ ಅಲ್ಲ. ಅವರ ದಾರಿ ಅವರಿಗೆ ನಮ್ಮ ದಾರಿ ನಮಗೆ. ನಾವೇನಾದ್ರೂ ಕನ್ನಡ ಕಲೀಲೇಬೇಕೆಂದು ಹೇಳಿಲ್ಲವಲ್ಲ. ಹೀಗಿರಬೇಕಾದ್ರೆ ಇದು ಅವರ ಸಮಸ್ಯೆಯನ್ನ ನಮ್ಮ ಮೇಲೆ ಹೇರೋ ಬಲವಂತದ ಹುನ್ನಾರ ತಾನೆ, ಬಲವಂತ ಅಂದಮೇಲೆ ಅದಕ್ಕೆ ಕಾರಣ ಸಾಮ್ರಾಜ್ಯಶಾಹಿ ಮನೋಭಾವವೇ ಅಲ್ಲವೇ ?
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!