[ಗಾಂಧಿಯವರ ಮಾತುಗಳ ಕನ್ನಡಿಸುವಿಕೆ: ಬನವಾಸಿ ಬಳಗ]
ವಿದೇಶೀಯರಿಗೆ ಇಲ್ಲದಿರೋ ಕೀಳರಿಮೆ ನಮಗ್ಯಾಕೆ?
"ಇಂಗ್ಲೀಷ್ ಬಾರದ ಯಾರಿಗೂ ಒಬ್ಬ ಬೋಸ್ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ನಾವು ಅಂದುಕೊಂಡುಬಿಟ್ಟಿದ್ದೇವೆ. ಇದಕ್ಕಿಂತ ಹೆಚ್ಚಿನ ಮೂಢನಂಬಿಕೆ ಇರಲು ಸಾಧ್ಯವೆ ಎಂದು ನನಗನಿಸುತ್ತದೆ! ಈ ನಮ್ಮ ಅಸಹಾಯಕತೆಯ ಅನುಭವ ಯಾವ ಜಪಾನಿನವನಿಗೂ ಇಲ್ಲ..."
ಪ್ರತಿದಿನ ಹಿಡೀತಿರೋ ಗೆದ್ದಲಿಗಿಂತ ತಾತ್ಕಾಲಿಕ ಗೊಂದಲವೇ ವಾಸಿ
"ತಕ್ಷಣವೇ ಕಲಿಕೆ ಮಾಧ್ಯಮದ ವಿಷಯದಲ್ಲಿ ಎಚ್ಚರ ವಹಿಸಿ ಪ್ರಾದೇಶಿಕ ಭಾಷೆಗಳಿಗೆ ಕೊಡಬೇಕಾದ ಸ್ಥಾನವನ್ನು ಕೊಡಬೇಕು. ಪ್ರತಿದಿನವೂ ಅನ್ಯಾಯವಾಗಿ ಹಿಡಿಯುತ್ತಿರುವ ಗೆದ್ದಲನ್ನು ಹೋಗಲಾಡಿಸುವಲ್ಲಿ ತಾತ್ಕಾಲಿಕವಾಗಿ ಉನ್ನತಶಿಕ್ಷಣದಲ್ಲಿ ಗೊಂದಲದ ವಾತಾವರಣ ಹುಟ್ಟಿದರೂ ಅದೇ ನನಗೆ ಪ್ರಿಯವು."
ವಿದೇಶೀ ಭಾಷೆಯಲ್ಲಿ ಕಲಿಕೆ ಕೊಡೋದ್ರಿಂದ ಆಗೋ ಕೆಟ್ಟ ಪರಿಣಾಮಗಳು
"ಶಾಲೆಯೆನ್ನುವುದು ಎರಡನೆಯ ಮನೆಯಿದ್ದಂತಿರಬೇಕು. ಮಗು ಮನೆಯಲ್ಲಿ ಪಡೆಯುವ ಸಂಸ್ಕಾರಗಳಿಗೆ ಶಾಲಾ ಶಿಕ್ಷಣ ಪೂರಕವಾಗಿದ್ದರೇ ಉತ್ತಮ ಪರಿಣಾಮ ಸಾಧ್ಯ. ಕಲಿಕೆ ಬೇರೊಂದು ಭಾಷೆಯಲ್ಲಿದ್ದರೆ ಈ ಪೂರಕ ವಾತಾವರಣ ಇರುವುದಿಲ್ಲ. ಎಷ್ಟೇ ಒಳ್ಳೆಯ ಉದ್ದೇಶವಿದ್ದರೂ ಈ ಪೂರಕ ವಾತಾವರಣಕ್ಕೆ ಹುಳಿ ಹಿಂಡುವವರು ಜನರಿಗೆ ವೈರಿಗಳೇ. ಇಂತಹ ಶಿಕ್ಷಣ ವ್ಯವಸ್ಥೆಗೆ ಸ್ವೇಚ್ಛೆಯಿಂದ ತಲೆಬಾಗಿಸುವುದು ನಮ್ಮ ತಾಯಂದಿರಿಗೆ ತೋರಿಸಿದ ಅಗೌರವಕ್ಕೆ ಸಮಾನ. ಈ ಬೇರೆಭಾಷೆಯ ಕಲಿಕೆಯ ಕೆಟ್ಟ ಪರಿಣಾಮಗಳು ಇಷ್ಟೇ ಅಲ್ಲ, ಇನ್ನೂ ವ್ಯಾಪಕವಾಗಿವೆ. ಇದರಿಂದ ಜನಸಾಮಾನ್ಯರಿಗೂ ಕಲಿತವರಿಗೂ ನಡುವೆ ಒಂದು ದೊಡ್ಡ ಕಂದರವೇ ಹುಟ್ಟಿಕೊಂಡಿದೆ. ಜನರು ನಮ್ಮನ್ನು ಪರಕೀಯರೆಂದು ಭಾವಿಸುತ್ತಿದ್ದಾರೆ."
ಕೂಡಲೇ ಪರಿಹಾರ ಕೊಡಬೇಕು
"ವಿದೇಶೀ ಮಾಧ್ಯಮದಲ್ಲಿ ಕಲಿಕೆ ಎನ್ನುವುದು ನಮ್ಮ ಮಿದುಳುಗಳಿಗೆ ಆಯಾಸ ತರಿಸಿ, ನಮ್ಮ ಯುವಕರ ನರಗಳ ಮೇಲೆ ಬೇಡದ ಒತ್ತಡ ತಂದು, ಅವರನ್ನು ಕೇವಲ ಅನುಕರಣೆ ಮತ್ತು ಉರು-ಹೊಡೆಯುವಿಕೆಗಳಲ್ಲಿ ಪಳಗಿಸಿ, ನಿಜವಾದ ಚಿಂತನೆ ಮತ್ತು ಕೆಲಸಗಳಿಗೆ ಅಯೋಗ್ಯರನ್ನಾಗಿಸಿ, ತಮ್ಮ ಕಲಿಕೆಯನ್ನು ತಮ್ಮ ಮನೆಯವರ ಇಲ್ಲವೇ ಸಮಾಜದ ಉಪಯೋಗಕ್ಕಾಗಿ ಬಳಸುವ ಯೋಗ್ಯತೆಯನ್ನೇ ಕಿತ್ತುಕೊಂಡಿದೆ. ವಿದೇಶೀ ಮಾಧ್ಯಮವು ನಮ್ಮ ಯುವಕರನ್ನು ತಮ್ಮ ನಾಡಿನಲ್ಲೇ ವಿದೇಶೀಯರನ್ನಾಗಿಸಿದೆ. ಇವತ್ತಿನ ವ್ಯವಸ್ಥೆಯಲ್ಲಿರುವ ದೊಡ್ಡ ದುರಂತವಿದು. ನನ್ನ ಕೈಯಲ್ಲಿ ಅಧಿಕಾರವಿದ್ದಿದ್ದರೆ ಇವತ್ತೇ ನಮ್ಮ ಯುವಕ-ಯುವಕಿಯರ ಮೆಲೆ ಹೇರಲಾಗುತ್ತಿರುವ ವಿದೇಶೀ ಮಾಧ್ಯಮದ ಕಲಿಕೆಯನ್ನು ನಿಲ್ಲಿಸಿ ಎಲ್ಲಾ ಶಿಕ್ಷಕರು ಮತ್ತು ಪ್ರೊಫೆಸರುಗಳೂ ತಾಯ್ನುಡಿಯಲ್ಲಿ ಕಲಿಕೆಯನ್ನು ಕೊಡುವ ಹಾಗೆ ಮಾಡುತ್ತಿದ್ದೆ (ಅವರು ಕೆಲಸ ಕಳೆದುಕೊಳ್ಳುವ ಸಂದರ್ಭ ಬಂದರೂ ಸರಿ!). ಪಠ್ಯಪುಸ್ತಕಗಳಿಲ್ಲ ಎಂದು ಕೈಕಟ್ಟಿ ಕೂರುತ್ತಿರಲಿಲ್ಲ; ಅವುಗಳು ಈ ಬದಲಾವಣೆಯ ಹಿಂದೆಯೇ ಬಂದಾವು. ಈ ಅನಿಷ್ಟಕ್ಕೆ ಕೂಡಲೇ ಪರಿಹಾರವನ್ನು ಕೊಡಬೇಕಿದೆ."
ಓದಿದ್ದಾಯಿತು, ಇನ್ನು ಕಾರ್ಯರೂಪಕ್ಕೆ ತರೋ ಬಗ್ಗೆ ಯೋಚ್ನೆ ಮಾಡೋಣ ಗುರು!
4 ಅನಿಸಿಕೆಗಳು:
ನಿಜಾ ಗುರುಗಳೇ,
ಇದೇ ಗಾಂಧಿ ತಾತ, ದಕ್ಷಿಣ ಆಫ್ರಿಕಾದಲ್ಲಿ ಕೂಲಿ ಕಾರ್ಮಿಕರಗಿದ್ದ ಭಾರತೀಯರಿಗೆ ವಿದ್ಯೆ ಕಲ್ಸಕ್ಕೆ ಮುಂದಾಗಿದ್ರು,ದಿನಾ ಅವರಿಗೆ ಪಾಠಾನು ಹೇಳ್ತಿದ್ರು. ಆ ಕೂಲಿ ಜನ ತಮಿಳರು.ಅವರಿಗೆ ಕಲಿಸಕ್ಕೇ ಅಂತಲೇ ಗಾಂಧೀಜಿ ಕೂಡಾ ಚೂರ್ ಚೂರ್ ತಮಿಳು ಕಲಿತಿದ್ರು. ಇದಕ್ಕೆ ಸಾಕ್ಷಿಯಾಗಿ ಮಹಾತ್ಮ ಗಾಂಧೀಜಿ ತಮಿಳಲ್ಲಿ ಹಾಕಿರೋ ಒಂದು ಸಹಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
nija guru... kanndada bagge keelurime illa... nanoo vabba kannada medium vidyarthine, adre engineering oduvaga bahal thondare agtha ide.... company galu english
bhashe yalli master illa andre kelasa kodalla... idakke nin yen anthitya??????????????
Nidhaanavaagi Kanandadalli ella reetiya shikshana sigabeku. Adu raatro-raatri aaguvanthaddalla. Aaddarinda ivattina dina English annu kaibidalu saadhyavilla.
Idannu manassinallittu Kannadadalli sariyaada shikshana vyavasthe kattalu ditta hejjegalannu idabeku.
We should have a transition plan instead of a complete switch overnight.
ಗಾಂದಿ ಅವರಿಗೆ ಆ ಕಾಲಕ್ಕೆ ಇದ್ದ ಅನಿಸಿಕೆ ನಮ್ಮವರಿಗೆ ಈಗ್ಲೂ ಇಲ್ಲ. ನಮ್ಮವರು ಇನ್ನು ಸಹ ಚಲನ ಚಿತ್ರಗಳಲ್ಲಿ ಬಂದಿರುವ ಗಾಂಧಿಗಿರಿ, ಅವರ ಸತ್ಯತೆ ಇತ್ಯಾದಿ ವಿಚಾರಧಾರೆಗಳನ್ನು ನಂಬಿದ್ದಾರೆ ಹೊರತು ಬೇರೆ ವಿಚಾರಗಳು ಪ್ರಸಿದ್ದಿ ಪಡೆಯದೇ ಇರುವದು ವಿಷಾದಕರ .. - ಕರುಣಾ
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!