ಚೂರು-ಪಾರಾದರೂ ಪೂಜೆಗೆ ಇಲ್ಲಿ ಕನ್ನಡವೇ ಭೂಷಣ!

ಮುಂಗಾರು ಮಳೆಯಲ್ಲಿ ಭರ್ಜರಿಯಾಗಿ ನಮ್ಮನ್ನು ನೆನೆಸಿದ್ದು ಇನ್ನೂ ಹಸಿ ಹಸಿಯಾಗಿರುವಾಗಲೇ ನಟಿ ಪೂಜಾ ಗಾಂಧಿ ಸೊಗಸಾಗಿ ಕನ್ನಡ ಕಲೀತಿದಾರೆ ಅಂತ ಎಲ್ಲೆಲ್ಲೂ ಸುದ್ದಿ ಕೇಳಿ ಸಕ್ಕತ್ ಖುಷಿಯಾಗ್ತಿದೆ ಗುರು!

powered by ODEO
ಪೂಜಾ ಗಾಂಧಿ (ಸಂಜನಾ ಗಾಂಧಿ) ಒಂದೇ ವರ್ಷದೊಳಗೆ ಕನ್ನಡ ಕಲಿತು, ಮಾಧ್ಯಮಗಳಿಗೆ ನೀಡ್ತಿರೋ ಸಂದರ್ಶನಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕನ್ನಡ ಮಾತಾಡ್ತಾ ಇದಾರೆ ಅನ್ನೋದು ನಾವು ಖುಷಿ ಪಡೋ ವಿಷಯ. ಈ ಸಂದರ್ಭದಲ್ಲಿ ಔರು ಆಡೋ ತಪ್ಪು ತಪ್ಪು ಮಾತುಗಳೂ ಕೂಡಾ ನಮಗೆ ಆಪ್ತವೆನ್ನಿಸುತ್ತವೆ. ಒಟ್ನಲ್ಲಿ ತಾನು ವಲಸೆ ಬಂದ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಬೇಕಾದ ಅಗತ್ಯವನ್ನು ಈ ಜಾಣೆ ಬೇಗ ಅರ್ಥ ಮಾಡ್ಕೊಂಡು ಉಳಿದವರಿಗೆ ಮಾದರಿಯಾಗಿದಾಳೆ ಗುರು...

ಈಕೆ ಮೊನ್ನೆ ಮೊನ್ನೆ ದೂರದರ್ಶನದ ಒಂದು ಕಾರ್ಯಕ್ರಮದಲ್ಲಿ ಮಾತಾಡ್ತಾ... ಇಲ್ಲಿನ ಭಾಷೆ, ಸಂಸ್ಕೃತಿಗಳನ್ನು ಕಲಿತರೆ ತಾನೆ ಇಲ್ಲಿನ ಜನ ಅರ್ಥ ಆಗೋದು, ಹಾಗಾದಾಗ್ಲೆ ತಾನೆ ಮನಮುಟ್ಟುವಂತೆ ಅಭಿನಯಿಸಕ್ಕೆ ಆಗೋದು ಅಂತ ಹೇಳಿದಾರೆ. ಎಷ್ಟು ನಿಜವಾದ ಮಾತು ಗುರು! ಕರ್ನಾಟಕಕ್ಕೆ ವಲಸೆ ಬಂದಿರೋರಿಗೆಲ್ಲಾ ಈ ಬುದ್ಧಿ ಇರಬೇಕಾಗಿರೋದೇ ಸಹಬಾಳ್ವೆಯ ಮೂಲಮಂತ್ರ ಅಲ್ವಾ ಗುರು?

ವಲಸಿಗರಿಗೆ ಕನ್ನಡ ಮಾತಾಡಕ್ಕೆ ಪ್ರೋತ್ಸಾಹ ಕೊಡಬೇಕು

ವಲಸಿಗರು ಹೊಸ ಭಾಷೆ ಕಲಿತು ಮಾತಾಡಕ್ ಶುರು ಮಾಡ್ದಾಗ ನಾವು ಕನ್ನಡಿಗರು (ಅದರಲ್ಲೂ ಪೇಟೆಯೋರು) ಸಾಮಾನ್ಯವಾಗಿ "ಪಾಪ, ಕಷ್ಟ ಪಟ್ಕೊಂಡು ಮಾತಾಡ್ತಾ ಇದಾರೆ" ಅಂತ್ಲೋ "ಅತಿಥಿ ದೇವೋ ಭವ" ಅಂತ್ಲೋ "ಹೊರಗಿನವರಿಗೆ ಅನುಕೂಲ ಮಾಡಿಕೊಡಬೇಕು" ಅಂತ್ಲೋ "ಬೇರೆ ಬೇರೆ ಭಾಷೆ ಜನಾ ಸೇರಿದ್ದಾಗ ಎಲ್ರುಗೂ ಅರ್ಥ ಆಗೋ ಭಾಷೇಲೆ ಮಾತಾಡ್ಬೇಕು" ಅಂತ್ಲೋ ಇಂಗ್ಲಿಷ್ನೋ ಅವರದೇ ಭಾಷೇನೋ ಕಲಿತು ಬಳಸೋ ಭರದಲ್ಲಿ ಕನ್ನಡ ಕಲಿಸೋದ್ನ ಮರ್ತೇ ಬಿಡೋದು ವಾಡಿಕೆ. ಅವರ ಎದುರಲ್ಲಿ ಕನ್ನಡದವರ ಜೊತೇನೂ ಬೇರೆ ಭಾಷೇಲಿ ಮಾತಾಡಿಬಿಡೋದು ಕನ್ನಡಿಗರ ಮನೆಗೆ-ಮಾರಿ ಪರರಿಗೆ ಅಪಕಾರಿ ಬುದ್ಧಿ ಗುರು!

ಆದರೆ ಹೇಗೆ ಪೂಜಾ ಗಾಂಧಿ ತಪ್ಪು ತಪ್ಪಾಗಿಯೇ ಕನ್ನಡ ಮಾತಾಡುದ್ರೂ ಪ್ರೀತಿಯಿಂದ ಖುಷಿ ಪಟ್ಕೊಂಡು ಮೆಚ್ಕೋತೀವೋ ಹಾಗೆ ನಮ್ಮ ನಡುವಿನ ಪರಭಾಷಿಕ ಕನ್ನಡದಲ್ಲಿ ಮಾತಾಡೋಕೆ ಪ್ರಯತ್ನ ಪಟ್ಟಾಗಲೂ ಬೆನ್ನು ತಟ್ಟಿ ಪ್ರೋತ್ಸಾಹ ಕೊಡ್ಬೇಕೇ ಹೊರತು ತಮಾಷೆ ಮಾಡಬಾರದು, ಇಲ್ಲಾ ಕನ್ನಡ ಮರೆತು ಇಂಗ್ಲೀಷಲ್ಲೋ ಅವರದೇ ಭಾಷೆಯಲ್ಲೋ ಮಾತಾಡಬಾರದು ಗುರು! ಪರಭಾಷಿಕನಿಗೆ ಇದು ಕನ್ನಡ ನಾಡು, ಇಲ್ಲಿ ಕನ್ನಡ ಕಲಿಯೋದ್ರ ಮೂಲಕವೇ ತನ್ನ ಏಳಿಗೆ ಅನ್ನೋದನ್ನು ಮನವರಿಕೆ ಮಾಡಿಕೊಡೋ ಹಾಗೆ ನಾವು ನಡ್ಕೋಬೇಕು ಗುರು! ಕನ್ನಡದಲ್ಲಿ ಮಾತಾಡೋದು ಸರಿಯಾದ ನಡವಳಿಕೆ ಅಲ್ಲಾ ಅನ್ನೋ ಭ್ರಮೇನ ಕಳಚಿ ಒಗೀಬೇಕು ಗುರು!

13 ಅನಿಸಿಕೆಗಳು:

Anonymous ಅಂತಾರೆ...

nammavare aada "Ramya" hudugaatada Rekha ella style hoDkondu english nalle maatadthare. avarige enannabEko gottagta illa. ide rekha avaru telegu chitra rangadalli hodaaga sogasaagi telegu, tamilu chitrarangadalli sogasaagi tamilu maatadthare. alli bhashe kalitilla andre uLigaala illa antha avaru kandukondiro satya.

pooja na nODi nammavaru kaliyuvadu thumba ide.

Anonymous ಅಂತಾರೆ...

we should apperciate Pooja gandhi..
Kannada bandaru aangla bhasheyalli mataduva namma natiyarige ee buddi bandare olleyadu...

Anonymous ಅಂತಾರೆ...

Yeah, she is someone whom we cant stop from admiring.
the way she picked up kannada is amazing, though she is still learning....

adannu ondu olle article madi post maDi olle kelsa maDideera.. bere janagaLu kalitara noDaNa..

Anonymous ಅಂತಾರೆ...

ನಾನು ನೋಡಿದೆ ಆವತ್ತಿನ ಆ ಇಂಟರ್ ವ್ಯೂ. ಆವತ್ತು ಯಾರೋ ಹುಡುಗಿ ಒಬ್ಬಳು ಕರೆ ಮಾಡಿ ಇಂಗ್ಲಿಷ್ ಅಲ್ಲಿ ಪೂಜಾ ಜೊತೆ ಮಾತಾಡೋಕೆ ಶುರು ಮಾಡಿದ್ಲು. ಆಗ ಪೂಜಾ,, ನಾನು ಕನ್ನಡದಲ್ಲೇ ಮಾತಾಡೋಕೆ ಇಷ್ಟ ಪಡತಿನಿ ಅಂತ ಆ ಹುಡುಗಿಗೆ ಕನ್ನಡದಲ್ಲೆ ಮಾತಾಡೋಕೆ ಹೇಳಿದ್ಲು. ಆಕೆಗಿರುವ ಕಾಮನ್ ಸೆನ್ಸ ನಮ್ಮ ಕನ್ನಡದ ನಟಿ ಮಣಿಯರಾದ ರಮ್ಯಾ, ರೇಖಾ ಅವರಿಗೆಲ್ಲ ಬಂದ್ರೆ ಒಳ್ಳೆದು.

Prashant ಅಂತಾರೆ...

ya she is really goos, i even heard her talking on U2 she is too good, hope she ll start dubbing in her own voice...it ll be more fun to see the movie

Anonymous ಅಂತಾರೆ...

Pooja Gandhiyavaru kannada kalithiruudu prshamsaneeya.

Anonymous ಅಂತಾರೆ...

ಏನ್ ಗುರೂ...
ನಾನೇ ಎಷ್ಟೋ ಸಾರಿ ನಮ್ ಕಂಪನಿಲಿರೋ ತಮಿಳ್ರು ಕನ್ನಡ ಮಾತಾಡಕ್ಕೆ ಪ್ರಯತ್ನ ಪಟ್ಟಾಗ ' ಅಪ್ಪಾ ,ಕನ್ನಡಾನ ಕೊಲ್ಲಬೇಡ' ಅಂತ ಇಂಗ್ಲಿಷ್ ಮಾತಾಡಕ್ಕೆ ಹೇಳ್ತಿದ್ದೆ. ನನ್ನ ತಪ್ಪು ಗೊತಾಗ್ತಿದೆ, ತಿದ್ಕೋತೀನಿ ಇನ್ಮೇಲೆ

ಸಮೀರ ಕುಲಕರ್ಣಿ
ಅಕ್ಸೆಂಚರ್

Anonymous ಅಂತಾರೆ...

pooja gandhiyavru bere natanatiyarige maadari aagiddaare...orva nata nati illi yeligeyanna padibekaadre mukhyavaagi illina bhaashe nade nudigala bagge arivirbeku... aadre idu namma kannadigarige arthavaagada sandarbhadalli pooja gandhiyanthavaru bandu adanna helkottirodu nijavaagiyu sojigane sari...idrindaadru nammavru yechethukondu kannadavanna sariyaagiyadru balasali.... namma thana annodanna ulisikollali...

Anonymous ಅಂತಾರೆ...

ಗುರು,
ನೀವಾಕಿರೋ ರೆಕಾರ್ಡಿಂಗ್‍ನಲ್ಲಿ ಕಿರಿಕ್ ಐತೆ. ಅವಳ ಮಾತು ಫಾಸ್ಟಾಗಿ ಬರ್ತಾಯಿದೆ. ದವವಿಟ್ಟು ಸರಿ ಮಾಡಿ - ಸ್ವಲ್ಪ ಹುಡುಗಿ voice ಕೇಳಣ. ನಕ್ಕನ್ so called ಕನ್ನಡ ನಾಯಕಿಯರ ಗಾಂಚಲಿ ಇಳ್ಸಬೇಕು.

ಬನವಾಸಿ ಬಳಗ ಅಂತಾರೆ...

ಹೈದ, ಪಾಡ್-ಕ್ಯಾಸ್ಟ್ ನಲ್ಲಿ ಏನೋ ತೊಂದರೆ ಇದೆ. ಆದ್ದರಿಂದ ಪೂಜಾ ಅವರ ಮಾತು ಹೇಗೆಹೇಗೋ ಬರುತ್ತಿದೆ. ಮತ್ತೊಮ್ಮೆ ಅಪ್ಲೋಡ್ ಮಾಡಿದರೂ ಸರಿಯಾಗಲಿಲ್ಲ. ಕ್ಷಮೆಯಿರಲಿ.

Anonymous ಅಂತಾರೆ...

neevu prothsaahiso reethi haagu adanna belakige tharo reethi nangisthaaythu kanri..thuuuuumba dhanyavaadagalu nimge..heege innu saakashtu ollolley kelsgalu nimminda aagli..yenaadru sahaaya bekdire keli pa naanu swalpa alilu seve maadona antha....

Anonymous ಅಂತಾರೆ...

houdu nanu kooda monne tv interview nodta idde...avara prayatnavannu nodiye
khushiyagutte.....tv serialnalli act mado....kelavu kalavidaru kooda tamage anna kodo bhashe bittu...englishnalli matadtare.....intavara madhye.."e gandhi " bereyagi nilluttare....

Anonymous ಅಂತಾರೆ...

pooja ravare,
Really appreciating, Our other kannada actors should learn from you, infact illi yellaru educated, namma janagalige iste helodu, istu dina anavashyavagi posu kottidu saaku, horagade jana astu ondu abhimana toristare namma bashe mele, namma janagalige yenu daadi, why are you people spoling this beautiful state, plz atleast by now mend your mentalities

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails