ಇತ್ತೀಚೆಗೆ ಬೆಂಗ್ಳೂರಿನ ಗೋಖಲೆ ಸಂಸ್ಥೇಲಿ ನಡೆದ ಹಳೆಗನ್ನಡ ಕಾವ್ಯ ಶಿಬಿರದಲ್ಲಿ ಹಳೆಗನ್ನಡ ಮತ್ತೆ ಕಲೀಬೇಕು ಅನ್ನೋ ಕರೆ ನೀಡಲಾಯ್ತು ಅಂತ 15ನೇ ಅಕ್ಟೋಬರಿನ ವಿ.ಕ ಪತ್ರಿಕೆ ವರದಿ ಮಾಡಿದೆ. ಕನ್ನಡದ ಪದಸಿರಿ ಬೆಳೀಬೇಕಾದ್ರೆ, ಕನ್ನಡಕ್ಕೆ ಸರಿಯಾದ ವ್ಯಾಕರಣ ಬರೀಬೇಕಾದ್ರೆ, ಕನ್ನಡದ ಹುಟ್ಟಿನ ನಿಜ ಏನು ತಿಳ್ಕೋಬೇಕದ್ರೆ ಹಳೆಗನ್ನಡಾನ ಆಳವಾಗಿ ಅಧ್ಯಯನ ಮಾಡದೆ ಸಾಧ್ಯವೇ ಇಲ್ಲ ಗುರು!
ಹಳೆಗನ್ನಡ ಹೊಸಗನ್ನಡಕ್ಕೆ "ಹೊಸ" ಪದಗಳ ಮೂಲ
ಇವತ್ತಿನ ದಿನ ಕನ್ನಡಕ್ಕೆ ಹೊಸ ಪದಗಳ್ನ ಸೇರ್ಸೋವಾಗ ಕನ್ನಡಿಗನ ಬಾಯಲ್ಲಿ ಹೊರಡಲಿ ಬಿಡಲಿ ಸಂಸ್ಕೃತದಿಂದ ಪದಗಳ್ನ ತಂದು ತುರುಕೋ ಗುಂಗಿಗೆ ನಾವು ಬಿದ್ದಿದೀವಿ. ಇದು ಬಿಟ್ಟು ಹಳೆಗನ್ನಡದಿಂದ ಎಷ್ಟೋ ಪದಗಳ್ನ ಮತ್ತೆ ಚಾಲ್ತಿಗೆ ತರಬೋದು ಗುರು! ಹೊಸ ಪದಗಳ್ನ ಹುಟ್ಟಿಸುವಾಗ ಬೇರೆ ಭಾಷೆಗಳಲ್ಲಿರೋ ಒಂದು ಪದಕ್ಕೆ ಕನ್ನಡದಲ್ಲೂ ಒಂದೇ ಪದ ಹುಡುಕೋರಿಗೆ ಹಳೆಗನ್ನಡದ ಅಧ್ಯಯನ ಸಕ್ಕತ್ ನೆರವಾಗತ್ತೆ.
ಕನ್ನಡದ ವ್ಯಾಕರಣದ ರಿಪೇರಿಗೆ ಹಳೆಗನ್ನಡ
ನಮ್ಮ ಇಂದಿನ ಕನ್ನಡದ ವ್ಯಾಕರಣದಲ್ಲಿ ನಮ್ಮದಲ್ಲದ ವ್ಯಾಕರಣದ ಅಂಶಗಳು ತುಂಬಿಹೋಗಿ ವ್ಯಾಕರಣ ಅನ್ನೋದು ಒಂದು ಕಬ್ಬಿಣದ ಕಡಲೆ ಆಗೋಗಿದೆ. ಕನ್ನಡಕ್ಕೆ ಒಂದು ತನ್ನದೇ ಆದ ವ್ಯಾಕರಣ ಅನ್ನೋದು ಇವತ್ತಿಗೂ ಸರಿಯಾಗಿ ಇಲ್ಲ. ಇದಕ್ಕೆ ಮೂಲ ಕಾರಣ ಕನ್ನಡದ ವ್ಯಾಕರಣವನ್ನ ಸಂಸ್ಕೃತದ ಒಂದು ಉಪವ್ಯಾಕರಣ ಅಂತ ಪರಿಗಣಿಸಿರೋದು. ಇದು ಬಿಟ್ಟು ಕನ್ನಡದ ವ್ಯಾಕರಣ ಬರಿಯೋರು ಹಳೆಗನ್ನಡದ ಅಧ್ಯಯನ ಮಾಡಬೇಕು ಗುರು! ಉದಾಹರಣೆಗೆ ಕನ್ನಡದಲ್ಲಿ ಐದನೇ ವಿಭಕ್ತಿ ಪ್ರತ್ಯಯ ಇದೆ ಅಂತ ಇವತ್ತಿಗೂ ನಮ್ಮ ಶಾಲೆಗಳಲ್ಲಿ ಹೇಳ್ಕೊಡ್ತಿರೋದು ಕನ್ನಡದ ಕೊಲೆ ಗುರು! ಕನ್ನಡಿಗನ ನಾಲಿಗೆಯಲ್ಲಿ ಇವತ್ತಿಗೂ ಮಹಾಪ್ರಾಣಗಳು ಮತ್ತು ಒಂದು ಅಕ್ಷರಕ್ಕೆ ಬೇರೆ ಒಂದು ಅಕ್ಷರ ಒತ್ತಕ್ಷರವಾಗಿ ಬರೋದು ಬಹಳ ಕಡಿಮೆ. ಹಳೆಗನ್ನಡ ಸ್ವಲ್ಪ ಕಲ್ತ್ರೆ ಇನ್ನು ಮುಂದೆ "ಔನು ಹಳ್ಳಿ ಗುಗ್ಗು, ಅವನ ಬಾಯಲ್ಲಿ ಮಹಾಪ್ರಾಣ ಹೊರಳಲ್ಲ" ಅನ್ನೋ ಮಾತು ನಮ್ಮ ಬಾಯಲ್ಲಿ ಬರಲ್ಲ ಗುರು! ನಿಜಕ್ಕೂ ತಲೆತಲಾಂತರದಿಂದ ನಮ್ಮ ಬಾಯಲ್ಲಿ ಮಹಾಪ್ರಾಣ ಹೊರಳಿಲ್ಲ! ಹಳೆಗನ್ನಡದಲ್ಲಿ ಪದಗಳ ಸ್ವರೂಪ ಅರ್ಥವಾಗೋದು ಇವತ್ತಿನ ದಿನ ಹೊಸ ಪದಗಳ್ನ ಹುಟ್ಟಿಸೋದಕ್ಕೆ ಬಹಳ ಮುಖ್ಯಾಮ್ಮಾ!
ಹಳೆಗನ್ನಡ ಕನ್ನಡ ಜನಾಂಗದ ಇತಿಹಾಸಕ್ಕೆ ಕನ್ನಡಿ
ಹಳೆಗನ್ನಡದಲ್ಲಿರೋ ಬರಹಗಳ್ನ ಸರಿಯಾಗಿ ಅಧ್ಯಯನ ಮಾಡಿದಾಗಲೇ ನಮ್ಮ ಭಾಷೆಯ ನಿಜವಾದ ಮೂಲದ ಬಗ್ಗೆ ಸರಿಯಾದ ಮಾಹಿತಿ ದೊರಕೋದು. ಸಂಸ್ಕೃತದಿಂದ ಎಲ್ಲಾ ಭಾಷೆಗಳು ಹುಟ್ಟಿವೆ, ಅದ್ರಲ್ಲಿ ಕನ್ನಡವೂ ಒಂದು ಅಂತೆಲ್ಲ ತಪ್ಪು ತಿಳುವಳಿಕೆ ಇವತ್ತು ಮಾರುಕಟ್ಟೆಯಲ್ಲಿರೋದಕ್ಕೆ ಕಾರಣವೇ ಹಳೆಗನ್ನಡದಿಂದ ಕನ್ನಡಿಗರು ದೂರ ಇರೋದು.
ಇದೇ ಕನ್ನಡ ಜನಾಂಗದ ಜನಜೀವನ ಕೆಲ ಶತಮಾನಗಳ ಹಿಂದೆ ಹೇಗಿತ್ತು ಅಂತ ತಿಳ್ಕೊಳೋಕ್ಕೆ ಬೇಕಾದ ವಸ್ತು ಹಳೆಗನ್ನಡದ ಹೊತ್ತಿಗೆಗಳಲ್ಲೇ ಇರೋದು. ಜನರ ಆರ್ಥಿಕ ಪರಿಸ್ಥಿತಿ, ಇತಿಹಾಸ ಇವೆಲ್ಲಾ ತಿಳ್ಕೊಳಕ್ಕೆ ಇಷ್ಟ ಪಡೋರಿಗೂ ಹಳೆಗನ್ನಡ ಬೇಕೇ ಬೇಕು. ನಮ್ಮ ಇತಿಹಾಸ ಸರಿಯಾಗಿ ತಿಳ್ಕೊಳೋದು ನಮಗೆ ತುಂಬ ಮುಖ್ಯ ಗುರು! ಅದನ್ನ ನಾವು ಸರಿಯಾಗಿ ತಿಳ್ಕೊಳ್ದೇ ಹೋದ್ರೆ ಇನ್ನ್ಯಾರೋ ಬಂದು ತಮ್ಗೆ ಬೇಕಾಗೋ ಹಾಗೆ ಇತಿಹಾಸನ ನಮ್ಗೇ ಹೇಳ್ಕೊಡಕ್ಕ್ ಶುರು ಹಚ್ಕೋಳ್ತಾರೆ ಗುರು! ನಮ್ಮ ನಿಜವಾದ ಇತಿಹಾಸ ತಿಳ್ಕೊಂಡ್ರೆನೇ ನಾವು ಯಾರು ಅನ್ನೋದು ಅರ್ಥ ಆಗೋದು ಗುರು!
ಇವೆಲ್ಲಾ ಯಾಕೆ? ನಮ್ಮ ಬಗ್ಗೆ, ನಮ್ಮ ಇತಿಹಾಸದ ಬಗ್ಗೆ, ನಮ್ಮ ಲಿಪಿಯ ಬಗ್ಗೆ, ನಮ್ಮ ಪದಗಳ ಬಗ್ಗೆ, ನಮ್ಮ ವಿಶೇಷತೆಯ ಬಗ್ಗೆ ಒಂಚೂರು ಕುತೂಹಲ ನಿಮಗೆ ಇದ್ಯಾ? ಇದ್ದ್ರೆ ಹಳೆಗನ್ನಡದ ಅಧ್ಯಯನಕ್ಕೆ ಕೈ ಹಾಕು ಗುರು!

6 ಅನಿಸಿಕೆಗಳು:
ಚನ್ನಾಗಿದೆ..
ನನ್ನಿ
We need to use more Halagannada words but where can we find books. Is there any book which tells me the equivalant word for a Sanskrit word. Nammada Kannada poorthi samskruta maya vaagide. Idaralli nammatana hudukakke halagannada hottigeyondu ellara bali irabeku.
ಕೆಲವು ಹಳೆಗನ್ನಡ ಪದಗಳು:
ಪೋಗು:ಹೋಗು
ಪುಲಿ: ಹುಲಿ....
ಅಯ್ಯೋ, ಅದ್ಯಾವದೂ ಬೇಡ...
ಕನ್ನಡ ಅತಿ ಪ್ರಾಚೀನ ಹಲ್ಮಿಡಿ ಶಾಸ ಹೀಗಿದೆ, ಓದಿ ನೋಡಿ ಅಥ ಮಾಡಿ ಕೊಳ್ಳಿ:
ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋg[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ zಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್ ಸ್ವಸ್ತಿ ಭಟ್ಟರ್ಗ್ಗೀಗೞ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ
ಇದರಲ್ಲಿ ಎಷ್ಟು ಪದಗಳನ್ನು ಬಲಸೋಣ ಎಂದು ನಿರ್ಧರಿಸಿ...
ಇತಿ ನಿಮ್ಮ ಸವಿನಯ
ನಾಕುಮಾರ್
ನಾಕುಮಾರ್, ಮೊದಲು ತಪ್ಪುಗಳನ್ನೂ ತಿದ್ದಿ .
ಇನ್ನು ಹಳೆಗನ್ನಡದಿಂದ ಏನು ಬಾಳಿಕೆ ಎಂದು ಬರಹ ಚೆನ್ನಾಗಿ ಬಿಡಿಸಿ ತಿಳಿಸಿದೆ.
ಇವರು ಹಳೆಗನ್ನಡದಲ್ಲಿ ಮಾತಾಡೋಣ ಎಂದು ಹೇಳುತ್ತಿಲ್ಲ. ತುಸು ಸರಿಯಾಗಿ ಅರಿತುಕೊಳ್ಳಿ ಬರಹವನ್ನು.
ನೋಡಿದಿರಾ...ಆಗಲೆ ನನ್ನನ್ನು ದೂಷಿಸುವ ಮೂಲಕ ಹಳೆಗನ್ನಡ ಬಳಕೆಯನ್ನೇ ಅಲಕ್ಷಿಸಿದಿರಿ..
ಬಳಕೆ ಅಂದರೆ ನುಡಿ ಮತ್ತು ಬರಹದಲ್ಲಿ ಮಾತ್ರ...ನಿಮ್ಮ ಪ್ರಕಾರ ನುಡಿಯಲಂತೂ ಸಾಧ್ಯವಿಲ್ಲ..ಇನ್ನು ಬರೆದರೆ ಎಷ್ಟು ಜನಕ್ಕೆ ಅರ್ಥವಾಗಬಹುದು?..ಉತ್ತರ ನಿಮ್ಮ ಊಹೆಗೇ ಬಿಟ್ಟಿದ್ದೇನೆ...
ಕನ್ನಡ ಕಾಲಕಾಲಕ್ಕೆ ಜನಮನಮಿಡಿತಕ್ಕೆ ಸ್ಪಂದಿಸಿ ಪರಿಷ್ಕರಿಸಿ ಸುಲಲಿತ ಮತ್ತು ಪ್ರಚಲಿತ ವಾಗಬೇಕೇ ಹೊರತು ಈ ಬಗ್ಗೆ ಅಂಧತ್ವ ಸಲ್ಲದು...ಈಗಿರುವ ಕನ್ನಡವನ್ನೇ ನಿರ್ಭಯವಾಗಿ ಬೆಂಗಳೂರಿನಲ್ಲಿ ಮಾತನಾಡಿ ನಮ್ಮ ಹೆಮ್ಮೆ ಮೆರೆಯೋಣ...
ಹಳೆಗನ್ನಡದ ಜಾಡು ಹಿಡಿದು ಜೀವನ ದುಸ್ತರ ಮಾಡಿಕೊಳ್ಳುವುದು ಬೇಡ...
ಅಂದಹಾಗೆ ನಾನೂ ಹಳೆಗನ್ನಡ ದಲ್ಲಿ ಪರಿಣತಿ ಇರುವವ, ಓದುವವ..
ನಲ್-ದಸರಾ...!
ನನ್ನಿ...
~ನಾಕುಮಾರ್
the last words are greetings for happy dasara and Bye/ thanks/ regards...)
ಹಳಗನ್ನಡ ಗೊತ್ತಿದೆ ಎಂದು ಸಂಸ್ಕೃತದಲ್ಲಿ ಯಾಕೆ ಬರೆದಿದ್ದೀರಿ ಕಮೆಂಟನ್ನು?
ಪಾಂಡಿತ್ಯಪ್ರದರ್ಶನ! :)
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!