ಹಿಂದಿ ಒಪ್ಪಿದ್ದಕ್ಕೇ ಮುಂಬೈ ಮಟಾಷ್!

ಉತ್ತರ ಪ್ರದೇಶ ರಾಜ್ಯ ಸ್ಥಾಪನೆ ದಿವಸಾನ ಅಲ್ಲಿಗಿಂತ ಇಲ್ಲೇ ಜೋರಾಗ್ ಆಚರ್ಸೋ ಅಗತ್ಯ ಇಲ್ಲ ಅನ್ನೋ ಹೇಳಿಕೆಯಿಂದ ಶುರುವಾದದ್ದು, ಮುಂಬೈ ಮರಾಠಿಗಳದ್ದಲ್ಲ, ಎಲ್ರುದ್ದು ಅನ್ನೋಗಂಟ ಬಂತಲ್ಲಪ್ಪ ಶಿವಾ. ಮಹಾರಾಷ್ಟ್ರದಲ್ಲೇ ಮರಾಠಿಗನಿಗೆ ಎಂಥಾ ಕೆಟ್ಟ ಗತಿ ಬಂತಲ್ಲಪ್ಪೋ.. ಅಯ್ಯೋ ಪಾಪ ಅನ್ನುಸ್ತಿದೆ. ಹಿಂದಿ ಅನ್ನೋ ಮಹಾಮಾರೀನ ಮನೆದೇವತೆ ಮಾಡ್ಕೊಂಡು ತಲೆಮೇಲೆ ಹೊತ್ಕೊಂಡು ಮೆರೆಸಿದ್ದಕ್ಕೆ ಸಿಕ್ತಲ್ಲಪ್ಪಾ ದೊಡ್ ಬಹುಮಾನ. ಕಂಡ ಕಂಡವರನ್ನೆಲ್ಲಾ ಬಾ ಅಣ್ಣಾ, ಬಾ ತಮ್ಮಾ, ಇದು ಭಾರತ ದೇಶದ ಹೆಬ್ಬಾಗ್ಲು, ಇಲ್ಲೇ ಇರೋದು ಗೇಟ್ ವೇ ಆಫ್ ಇಂಡಿಯಾ, ಇಲ್ಲಿ ಯಾರು ಎಲ್ಲಿಂದಾನಾ ಬಂದು ಬದುಕ್ಬೋದು ಅಂತ ಬಂದೋರ್ನೆಲ್ಲಾ ಕಣ್ಮುಚ್ಕೊಂಡ್ ಕರ್ಕೊಂಡಿದ್ದಕ್ಕೆ ಸರಿಯಾಗ್ ಬಿತ್ತಲ್ಲ ಬಗುಣಿ ಗೂಟ.

ಮನೆ ಹೊಕ್ಕಿದ್ದೇ ಮನರಂಜನೆ ರೂಪದಲ್ಲಿ...

ಈ ಹಿಂದಿ ಭಾಷೆನ ಒಪ್ಕೊಳೊ ಹಾಗ್ ಮಾಡಕ್ ಇರೊ ಸುಲಭದ ಸೀ ಮೆತ್ತಿರೋ ಮಾತ್ರೆ ಅಂದ್ರೆ ಮನರಂಜನೆ. ಮುಂಬೈಯಲ್ಲಿ ಹಿಂದಿ ಸಿನಿಮಾಗಳ ಭರಾಟೆ ಏನು? ಇರೋ ನೂರರಲ್ಲಿ ತೊಂಬತ್ತೈದು ಟಾಕೀಸ್ನಲ್ಲಿ ಹಿಂದಿ ಫಿಲಂಗಳದ್ದೇ ಮೆರೆದಾಟ. ಇದ್ರು ಜೊತೆಗೆ ಇಡೀ ಹಿಂದಿ ಚಿತ್ರರಂಗಕ್ಕೇ ನೆಲೆ ಕೊಡ್ತಲ್ಲಾ ಮುಂಬೈ. ನಮ್ಗೂ ಏನಾರ ಚೂರುಪಾರು ಹೊಟ್ಟೆಪಾಡು ನಡ್ಯತ್ತೆ ಅಂತ ಮರಾಠಿಗರು ಅಂದ್ಕೊಂಡ್ರೇನೋ! ಚಿತ್ರರಂಗಾನೂ ಎಲ್ಲೋ ನಾಕು ಜನಕ್ಕೆ ಅನ್ನ ಕೊಡ್ತೇನೋ, ಆದ್ರೆ ಇಡೀ ಮುಂಬೈನ ಬಟ್ಟೆ ಅಲ್ಲ ಆತ್ಮದ ಸಮೇತ ಬದಲಾಯ್ಸಿಬಿಡ್ತು. ಬರ್ತಾ ಬರ್ತಾ ಇರೋ ಬರೋ ಕೆಲ್ಸಗಳೆಲ್ಲಾ ವಲಸಿಗರ ಪಾಲಾಯ್ತು.

ಹೊಟ್ಟೆ ಬಟ್ಟೆ ಕಿತ್ಕೊಂಡ ವಲಸೆ!

ಹಿಂಗ್ ಶುರು ಹಚ್ಕೊಂಡ್ ಕಥೆ ಕೊನೆಗ್ ಎಲ್ಲಿಗಪ್ಪಾ ಬಂತು ಅಂದ್ರೆ ಮುಂಬೈಯಲ್ಲಿ ಯಾವೊಂದು ಉದ್ದಿಮೆ ತೊಗೊಂಡ್ರೂ ಅದ್ರಲ್ಲಿ ಬೇರೆಭಾಷೆಯವ್ನೇ ಯಜಮಾನ, ಬೇರೆಭಾಷೆಯವ್ನೇ ಕೆಲಸಗಾರ. ಉದ್ದಿಮೆ, ಉದ್ಯೋಗಗಳ ಮೇಲೆ ಹಿಡ್ತ ಕಳ್ಕೊಂಡ್ ಮೇಲೆ ಇನ್ನೇನಪ್ಪಾ ಬಾಕಿ ಉಳೀತು. ಹೋಗ್ಲಿ ವಲಸೆ ಬಂದೋವ್ರಾದ್ರೂ ಮರಾಠಿ ಕಲ್ಯೋಹಾಗ್ ಮಾಡಿದ್ದಿದ್ರೆ ಇನ್ನೊಂದಿಷ್ಟು ಮರಾಠಿ ಜನಕ್ಕೆ ಬದುಕ್ನ ಕಟ್ಕೊಳಕ್ ಆಗ್ತಿತ್ತಲ್ವಾ? ಹಾಗಾಗ್ಲಿಲ್ವೇ? ಒಟ್ನಲ್ಲಿ ಎರೆಹುಳು ಆಸೆಗೆ ಗಾಳಕ್ ಬಿದ್ದ ಮೀನಂಗಾಯ್ತು ಮುಂಬೈಯಲ್ಲಿ ಮರಾಠಿಗರ ಬದುಕು. ಇವ್ರ ಹಿತ ಕಾಪಾಡೊಕ್ಕೆ ಅಂತಲೇ ಪ್ರಜಾಪ್ರಭುತ್ವಾ ಇಲ್ವಾ, ಜನಪ್ರತಿನಿಧಿಗಳಿಲ್ವಾ ಅಂತೀರಾ?

ಮ-ಮ-ಮ ಮರೆತು ದಿಕ್ಕು ತಪ್ಪಿದೋರು

ಗುರು, ದೊಡ್ದೊಡ್ಡ ರಾಷ್ಟ್ರೀಯ ಪಕ್ಷಗಳ ಹಣೆಬರಾ ಗೊತ್ತಿರೋದೆ ಬೇರೆ ಏನಾರ ಯೋಳು ಅಂತೀರೇನೋ. ಅಲ್ಲಾ ಮಾರಾಷ್ಟ್ರದಾಗೆ ಒಂದು ಶಿವಸೇನಾ , ಒಂದು ಎಂ.ಎನ್.ಎಸ್ಸು, ಒಂದು ಎನ್.ಸಿ.ಪಿ ಅನ್ನೋ ಪಕ್ಷಗಳು ಬದ್ಕವಲ್ಲಾ ಅಂತೀರೇನೋ? ಭಾಳಾ ಹಿಂದೆ ಅಂದ್ರೆ 1960ರ ದಶಕದಲ್ಲಿ ಮುಂಬೈನ ಕೇಂದ್ರಾಡಳಿತ ಪ್ರದೇಶ ಅಂತ ಮಾಡಕ್ ಹೊರ್ಟಾಗ ಎಚ್ಚೆತ್ತ ಮರಾಠಿ ಸ್ವಾಭಿಮಾನದ ಅಲೆಯಲ್ಲಿ ತೇಲ್ಕೊಂಡು ಬಂದು 1966ರಲ್ಲಿ ಹುಟ್ಕೊಂಡು ಅಮ್ಚಿ ಮುಂಬೈ ಅಂತ ಗರ್ಜನೆ ಮಾಡಕ್ ಶುರು ಹಚ್ಕೊಂಡ ಪಕ್ಷ ಶಿವಸೇನೆ. ಆದ್ರೆ ಮರಾಠಿ-ಮರಾಠಿಗ- ಮಹಾರಾಷ್ಟ್ರ ಅನ್ನೋದ್ನ ಕೇಂದ್ರವಾಗಿ ಇಟ್ಕೊಳದ್ನ ಅದ್ಯಾಕೋ ಮರ್ತೇ ಬುಟ್ಟು ಇನ್ಯಾವ್ಯಾದ್ರ ಸುತ್ತಾನೋ ಗಿರಕಿ ಹೊಡ್ಕೊಂಡು ದಿಕ್ಕು ತಪ್ಪೋಯ್ತು ಅನ್ನಂಗ್ ಆಗದೆ ಗುರು. ಬೇರೆ ಪ್ರಾದೇಶಿಕ ಪಕ್ಷಗಳ್ದೂ ಇದೇ ಕಥೆ. ಇಡೀ ಮಾರಾಷ್ಟ್ರಾನ ಮರಾಠಿ - ಮರಾಠಿಗ- ಮಹಾರಾಷ್ಟ್ರದ ಹೆಸರಲ್ಲಿ ಒಗ್ಗೂಡ್ಸೋದ್ರಲ್ಲಿ ಎಲ್ಲವೂ ಎಡುವುದ್ವು ಗುರು. ಇದ್ದ ಅವಕಾಶಗಳ್ನ ಕೈಬಿಟ್ಟು ಈಗ ಉಗ್ರವಾಗಿ ನಡ್ಕೊಂಡು ಕೈಲಾಗದವ್ನು ಮೈ ಪರಚ್ಕೊಂಡಂಗೆ ಆಡ್ತಿರೋದು ನೋಡುದ್ರೆ ತಮ್ಮ ಜನರ ಬದುಕನ್ನು ಹಸನು ಮಾಡ್ಕೊಳೋ ಒಳ್ಳೇ ಅವಕಾಶಾನ ಮರಾಠಿ ಜನ ಕಳ್ಕೊಂಡ್ರೇನೋ ಅನ್ಸುತ್ತೆ ಗುರು.

ವಲಸೆ ಬಂದೋನ್ನ ಮುಖ್ಯವಾಹಿನಿಗೆ ಸೇರುಸ್ಕೊಬೇಕು!

ಮರಾಠಿ ಜನರಾದ್ರೂ ಏನ್ ಮಾಡುದ್ರು. ಹಿಂದೀನಾ ಅದ್ಯಾಕೋ ರಾಷ್ಟ್ರಭಾಷೆ ಅಂತ ಒಪ್ಕೊಂಡೇ ಬುಡೋದಾ? ಮುಂಬೈನಲ್ಲಿ ಯಾವ ಅಂಗಡಿ ಮುಂಗಟ್ಟು, ಸಿನಿಮಾ ನಾಟಕ ಎಲ್ಗಾನಾ ಓಗಿ, ಹಿಂದಿ ಒಂದೇ ನಡ್ಯದು. ಯಾವಾನಾದ್ರೂ ಮರಾಠಿ ಬಾಯ್ಬುಟ್ರೆ ಒಳ್ಳೇ ಹಳ್ಳಿ ಗುಗ್ಗೂನ ನೋಡೋ ಅಂಗ್ ನೋಡ್ತಾರೆ. ಇದ್ಯಾಕಪ್ಪಾ ಇಂಗೆ ಅಂದ್ರೆ, ಬಂದೌರ್ಗೆಲ್ಲಾ ಅನುಕೂಲ ಆಗ್ಲಿ ಆಂತ ವಲಸಿಗರ ಭಾಷೇಲೆ ಯವಾರ ಮಾಡಕ್ ಶುರು ಅಚ್ಕಂಡಿದ್ದು. ಜೊತೆಗೆ ಮರಾಠಿ ಏನಿದ್ರೂ ಮನೆ ಒಳ್ಗೆ, ಬೀದಿಗ್ ಬಂದ್ರೆ ಹಿಂದಿ ಅಂತ ಲೆವೆಲ್ ತೋರುಸ್ಕೊಳಕ್ ಹೋಗಿದ್ದು. ತಕ್ಕಳಪ್ಪಾ, ಒಂದಪಾ ಹಿಂದಿನಾ ಒಪ್ಕಂಡ್ ಒಳಿಕ್ ಬುಟ್ಟಿದ್ದೇ ಬುಟ್ಟಿದ್ದು ವಲಸೇ ತಡ್ಯಕ್ ಆಯ್ತದಾ? ಭಾಷೆ ಒಪ್ಕೊಂಡೋರು ಆ ಭಾಷಿಕರನ್ನೂ ಒಪ್ಕಂಡಂಗೆ ಅಲ್ವಾ? ಬಂದವ್ರ ಜೊತೆ ಹಿಂದೀಲೆ ಮಾತಾಡ್ತಿದ್ರೆ ಇನ್ನು ಒಳಿಕ್ ಬಂದವ್ರಾದ್ರು ಎಂಗೆ ಮುಕ್ಯವಾಹಿನಿ ಸೇರ್ಕತಾರೆ? ಮುಂಬೈಯಲ್ಲಿ ಹಿಂದಿ ನಡೀತದೆ, ಅಲ್ಲಿಗೇ ಹೋಗಮಾ ಅಂತ ನುಗ್ಗುದ್ರು ನೋಡಿ ಜನ, ವಲಸಿಗರ ಸಂಕ್ಯೆ ಎದ್ವಾ ತದ್ವಾ ಏರ್ಬುಡ್ತು. ಇದಾಗ್ತಿದ್ ಹಂಗೇ ತಮ್ದೇ ಮುಖ್ಯವಾಹಿನಿ ಅನ್ನಕ್ ಶುರು ಹಚ್ಕಂಡ್ರು. ಮಾತಾಡುದ್ರೆ ಇದು ಭಾರತ ದೇಶ, ಇಲ್ಲಿ ಯಾರ್ ಎಲ್ಲಿಗ್ ಬೇಕಾರ್ ಹೋಗ್ ಬದುಕ್ಬೋದು ಅನ್ನಕ್ ಶುರು ಹಚ್ಕೊಂಡ್ರು. ಅಲ್ಲಾ ಗುರು, "ಯಾರು ಬೇಕಾದ್ರು ಮುಂಬೈಗೆ ಬಂದ್ ಬದುಕೋದು ಎಲ್ಲಾ ಭಾಷೆಯೋರ ಹಕ್ಕಾದರೆ, ಮುಂಬೈಗೆ ಬರೋರು ನಮ್ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಧಕ್ಕೆ ತರ್ದೆ ಬದುಕೋದು ನಿಮ್ಮ ಕರ್ತವ್ಯ ಅಲ್ವಾ?" ಅಂತ ಬುದ್ಧಿಜೀವಿ, ನಾಯಕ, ರಾಜಕಾರಣಿ ಅನ್ನುಸ್ಕೊಂಡಿರೋ ಯಾವ್ ಬಡ್ಡೀಹೈದ್ನೂ ದನಿ ಎತ್ತುತಿಲ್ವಲ್ಲಾ ಅಂತ.

ಇನ್ನಾದ್ರೂ ಕಣ್ ಬುಟ್ಟಾರಾ?

ಇಡೀ ಸಮಸ್ಯೆ ಮೂಲ ಇರೋದು ಮುಂಬೈನಲ್ಲಿ ಇವತ್ತಿರೋ ಪರಭಾಷಿಕರ ಪ್ರಾಬಲ್ಯ. ಇದುಕ್ ಕಾರಣ ವಲಸೆ, ವಲಸೆಗೆ ಪ್ರೇರಣೆ ನೀಡಿದ್ದೆ ಮುಂಬೈ ಜನ ಹಿಂದೀನ ಒಪ್ಕೊಂಡು ತಲೆಮೇಲೆ ಕೂರುಸ್ಕೊಂಡಿದ್ದು. ಇವತ್ಗೂ ಮರಾಠಿ ಜನ್ರು ಹಿಂದಿ ಅನ್ನೋದು ಏನು? ಅದ್ರ ಕಿತಾಪತಿ ಏನು? ಅನ್ನೋದ್ನ ಸರ್ಯಾಗಿ ಗುರುತ್ಸಕ್ ಆಗ್ದೆ ಎಲ್ಲೆಲ್ಲೋ ತಡಕಾಡ್ತಾ ಇದಾರೆ. ಹಿಂದೀನ ಒಳಿಗ್ ಬುಟ್ಕೊಂಡು ವಿಶೇಷವಾಗಿ ಮುಂಬೈಯಲ್ಲಿ ತಮ್ಮ ಭಾಷೆನ ಬಲಿ ಕೊಟ್ರು, ತಮ್ಮ ಸಿನಿಮಾ ಇಂಡಸ್ಟ್ರಿ ಬಲಿ ಕೊಟ್ರು, ತಮ್ಮ ಮಕ್ಳುಗಳ ಕೆಲ್ಸದ ಅವಕಾಶಾನ ಬಲಿ ಕೊಟ್ರು... ಈಗ ಸಮಾಜವಾದಿ ತರದ ಉತ್ತರಪ್ರದೇಶದ ಪಾರ್ಟಿ ಮುಂಬೈಯಲ್ಲೇ ದೊಡ್ ದೊಡ್ ಮೆರವಣಿಗೆ ಸಭೆ ಮಾಡಿ ’ಮುಂಬೈ ಯಾರಪ್ಪಂದೂ ಅಲ್ಲ. ಉತ್ತರ ಭಾರತದವ್ರಿಗೆ ಇಲ್ಲಿ ಬದುಕೋ ಹಕ್ಕಿದೆ’ ಯಾರಾನಾ ಉತ್ತರದವ್ರ್ ಸುದ್ದಿಗ್ ಬಂದ್ರೆ ಉಸಾರ್ ಅಂತ ಬೆದರಿಕೆ ಹಾಕೋ ಮಟ್ಟಕ್ ಬಂದವ್ರೆ. ಇನ್ನು ವಲಸಿಗರ ವೋಟ್ ಮೇಲೆ ಕಣ್ ಮಡ್ಗಿ ಭಾಜಪ, ಕಾಂಗ್ರೆಸ್ಸು ಕೂಡಾ ಎಗರಾಡ್ತಿವೆ. ಮರಾಠಿಗರು ತಮಗ್ ಬಂದಿರೋ ಆಪತ್ತಿನ ಮೂಲ ಹಿಂದಿ ಭಾಷೆನ ಒಪ್ಕೊಂಡಿರೋದು ಅಂತ ಎಷ್ಟು ಬೇಗ ಅರ್ಥ ಮಾಡ್ಕೊಂಡ್ರೆ ಅವ್ರಿಗೂ, ಭಾರತಕ್ಕೂ ಅಷ್ಟೋ ಇಷ್ಟೋ ಒಳ್ಳೇದು ಆಗ್ಬೋದು.

ಇನ್ನೇನಪ್ಪಾ, ನಮ್ ಕನ್ನಡದೋರ್ಗೆ ನಾವೆಂಗ್ ಇರ್ಬೇಕು ಅಂತಾ ಇನ್ನೂ ಬಾಯ್ ಬುಟ್ ಯೋಳ್ಬೇಕಾ?

17 ಅನಿಸಿಕೆಗಳು:

Anonymous ಅಂತಾರೆ...

ಮುಂಬೈನಲ್ಲಿ ಇವತ್ತು ನಡೆಯುತ್ತಿರುವುದು, ಅಸ್ಸಾಮ್ ನಲ್ಲಿ ಆವತ್ತು ನಡೆದದ್ದು ಎಲ್ಲ ಒಂದೇ ಕಾರಣಕ್ಕೆ. ಹಿಂದಿ ಎಂಬ ಪಿಡುಗನ್ನು ಒಪ್ಪಿಕೊಂಡಿರೊದಕ್ಕೆ. ಈ ರೀತಿ ಹಿಂಸಾ ಮಾರ್ಗಕ್ಕೆ ತಿರುಗುವುದಕ್ಕೆ ಅವಕಾಶ ಕೊಡದೆ ನಮ್ಮ ರಾಜಕೀಯ ಪಕ್ಶಗಳು ವಲಸೆ ತಡೆಯಲು ಏನಾದರು ಮಾಡಬೇಕು.

ನಮ್ಮ ರಾಜ್ಯದಲ್ಲಿ ಈ ಪರಿಸ್ಥಿತಿ ತಂದುಕೊಳ್ಳುವುದು ಬೇಡ. ಕೆಡುವುದಕ್ಕಿಂತ ಮುಂಚೆ ಬುದ್ದಿವಂತರಾಗೋಣ.

ಇದರ ಆಂಗ್ಲ ತರ್ಜುಮೆ ಇದ್ದರೆ KARNATIQUE ನಲ್ಲಿ ಪ್ರಕಟಿಸಿ ಗುರು, ಮರಾಠಿಗರು ಮತ್ತು ಇತರ ಕನ್ನಡೇತರರಿಗು ಅರ್ಥ ಆಗಲಿ.

-Brunda

Anonymous ಅಂತಾರೆ...

ಈ ವಿಚಾರದಲ್ಲಿ ನನ್ಕಣ್ಗೆ ಗೋಚರಿಸುವ ವಿಪರ್ಯಾಸವೆಂದ್ರೆ ಮಹಾರಾಷ್ಟ್ರಕ್ಕೆ ವಲಸೆ ಅಂತ ಬಂದಂತವರಲ್ಲಿ ಸುಮಾರು ಜನ ಬಿಹಾರಿಗರು. ಬಿಹಾರದಲ್ಲಿಯೂ ಹಿಂದಿ ಹೇರಿರುವ ಭಾಷೆಯೇ. ಅಲ್ಲಿಯ ಜನರ ನೈಜ ಭಾಷೆ ಬಿಹಾರಿ - ಇದು ಹಿಂದಿಗಿಂತಲೂ ಸುಮಾರು ರೀತಿಯಲ್ಲಿ ಭಿನ್ನ. ಅವರಲ್ಲೇ ಹಿಂದಿ ಹೇರಿಕೆ ನಡೆದಿದೆ ಅನ್ನೋದನ್ನ ಗಮನಿಸೋಬದಲು ಇನ್ನೊಂದು ನಾಡಲ್ಲಿ ನೆಲೆಸಿ, ಅಲ್ಲಿ ಹಿಂದಿ ಹರಡ್ತಾಯಿದಾರಲ್ಲ ಈ ಬಿಹಾರಿ ಮಂಗ್ಯಗಳು - ಇವ್ರಿಗೆ ಏನ್ ಹೇಳ್ಬೇಕು! ಇವ್ರಂತಾ ಮಂಕ್ ಶಿಕಾಮಣಿಗಳಿಲ್ಲ.
ಕರ್ನಾಟಕ ಆಯ್ತು, ಮಹಾರಾಷ್ಟ್ರ ಆಯ್ತು, ಅಸ್ಸಾಮ್ ಆಯ್ತು, ಇನ್ನು ಬಿಹಾರದಲ್ಲಿ ಹಿಂದಿಯ ಮೇಲೆ "ಬಿಟ್ಟು-ತೊಲಗು" ಚಳುವಳಿ ಯಾವಾಗ ಕಾಣತ್ತೋ!?

ಹೀಗೇ ಎಲ್ರಿಗೂ ತಮ್ತಮ್ಮ ಭಾಷೆಯ ಹಿರಿಮೆಯ ಅರಿವು ಮತ್ತವರ ಜೀವನಗಳಲ್ಲಿ ಅದರ ಪ್ರಾಶಸ್ತ್ಯ ಗೊತ್ತಾದಮೇಲೆ ಹಿಂದಿನೂ ಅದರಲ್ಲದ ನಾಡುಗಳಲ್ಲೆಲ್ಲಾ "ಮಟ್ಯಾಶ್" ಆಗೋದು ಕಟ್ಟಿಟ್ಟ-ಬುತ್ತಿ..

Deepak ಅಂತಾರೆ...

ನಾವು ಇದ್ರಿಂದ ಪಾಠ ಕಲಿಯೋದು ಸಾಕಷ್ಟಿದೆ ಗುರು. ಮೊದ್ಲು ಉತ್ತರ ಪ್ರಧೇಶದಿಂದ ವಲಸೆ ಬರ್ತೀರೋ ರಾಜಕೀಯ ಪಕ್ಷಗಳ್ನ ನಿಲ್ಳಿಸ್‌ಬೇಕು. ಯಾವತಿದ್ರು ಈ ಪಕ್ಷಗಳಿಂದ ತೊಂದರೆ ಕಟ್ಟಿಟ್ಟ ಬುತ್ತಿ. ಇವತ್ತು ಮುಂಬೈ ಮರಾಠಿಗರದಲ್ಲ ಅಂದೋರು ನಾಳೆ ಬೆಂಗಳೂರು ಕನ್ನಡಿಗರ್ದಲ್ಲ ಅಂತಾರೆ. ಈಗ್ಲಿಂದಾನೆ ನಾವು ಎಚ್ಚರಿಕೆ ವಹಿಸೋದು ಅಗತ್ಯ.

ಇಂತೀ
ದೀಪಕ್ ಭೈರಪ್ಪ

Anonymous ಅಂತಾರೆ...

We must look at the history before drawing conclusion about one’s ability to adjust with outsiders.

India was never a country with one culture and one language. Before independence, we were all a bunch of separate identities with a different language, culture, way of living. Now in the name of One country, one language, the center is forcibly imposing Hindi on every culture/ language.

When we talk about Unity in Diversity, we must give equal respect to the word Diversity as much we give to Unity.
The diversity of culture, language, customs, way of living must be respected and protected. What we see now is exactly the opposite. Marathis in mumbai have welcomed anyone to everyone. But, have the outsiders returned the good will in the same spirit?? Sadly, I would say no. Everybody is free to move and settle anywhere in India, but people should respect the local’s culture/language and the locals and should try to become a part of the local’s social fabric.

Why haven’t the marathis have targetted Gujjus, South Indians? coz for a simple reason that they have learnt Marathi, have become a active part of the maharashtrian culture and Biharis/UPwalas should take a lesson from them.

Lastly,
Why this mass migration from states like UP/BIhar?? It is for a simple reason that the administration there have failed miserably to look after their people by failing to provide them any kind of security for life and livelyhood.

The Laloos/Mulayams first should develop their states on par and create jobs for their people instead of creating just new train services to lucrative locations for their people to migrate.

Anonymous ಅಂತಾರೆ...

ishtella problem mumbai alli irbekaadre adannella bittu,, belgavi suddi ge bartaralla,, ivara bagge yen heLodu guru..

modalu mumbai na amchi-mumbai aage uLaskollali.

mumbai episode inda naavu kaliyodu tumba idey,,

Anonymous ಅಂತಾರೆ...

No city in independent India belongs to any regional group. The Constitution clearly says you can travel to any part of the country for your living. So if we dont respect the Constitution, we should seek cessation from the Union and manage our Country within our budget. Every City in the country has developed because of contributions of various people from the country. Everybody has derived benefiet from the taxes paid by people across the country.

I dont know what is meant by Emmigrant within the Country. That is the term applicable when you go outside the country for job. Constitution guarantees you the right to work anywhere and practice your culture across the length and breadth of this country.

This complaint of outsiders stealing local jobs is the refrain of lazy guys. If a local taxidriver is willing to ferry me where i like, i have no problem in engaging him. At the same time if another state taxi driver is hardworking to come anywhere i call at the time i call, I would like to engage him only. I built an house taking substantial loan, the entire carpentry work was done by a set of biharis. I denied this opportunity to my relative because he could not promise to complete the job within the time i required. But this guys did it in 70% of the time they promised and also a good quality work. Thats how u land up jobs by doing it in time and a quality work not based on regional considerations.

If somebody from other state does not respect the local state flag, festival, makes mockery of customs he deserves a through thrashing.

Anonymous ಅಂತಾರೆ...

Come on people this is absolutely absurd... There is no problem in being regionalist but be an indian first....Every indian if he feels he is an indian then only india is going to improved. This regionalism is creating a kind of civil war within the country this is hampering the progress and this is misused by political parties for their advantage..

Come on wake up modern India

Anonymous ಅಂತಾರೆ...

mr neurons,
if i as a kannadiga prosper,and 'x' as a marathi or tamilian prospers, "INDIA" prospers.
what do you mean by modern India? A person who loves his language , culture, way of life and tries to defend it-- is he/she not a part of modern india?
or is it that I welcome everyone into my home, forget my culture and language, and then i become a part of modern india? if yes, what are the migrants who migrate for a living do not respect local language , culture and are never a part of mainstream? are they modern india?
As long as migrants stay within their limit, learn, respect local language, culture and be a part of mainstream life, there would be no problems. else, we would see what we see today in N.East, Mumbai and soon in Bengalooru.
This is not just the case of India, it happens accross the globe.
regards,
lakki

Rohith B R ಅಂತಾರೆ...

ಈ ನ್ಯೂರಾನ್‍-ಅಂತಹ ಹುಳಗಳು ಇರೋವರೆಗೂ ಇಂತಹ ಗಲಾಟೆಗಳ ಅವಶಕತೆ ಹುಟ್ತಲೇ ಇರತ್ತೆ. ನಮ್ಮ ದೇಶ, ನಮ್ಮ ರಾಜ್ಯ ಅಂದ್ರೆ ಅದೇನೋ ಅನ್ಕೊಂಡ್‍ಬುಟ್ಟಿದಾರೆ ಈ ಗುಬಾಲ್ಗಳು!

ಭಾರತ ಅಂದ್ರೆ ಕರ್ನಾಟಕತನವನ್ನ ಬುಟ್ಬುಡೋದು, ದೊಡ್ಡತನ ತೋರ್ಸೋ ಹಾಗೆ ಅತಿ ದೂರದ ಭಾಷೆಯೊಂದನ್ನ (ಅಂದ್ರೆ ಹಿಂದಿಯನ್ನ) ಆಡೋದು ಅನ್ಕೊಂಡಿದಾವೆ ಇವು ಮುಂಡೇವು.. ಹಾಗೇ ಮುಂದುವರೆಸಲಿ, ನಾಳೆ ಮಣ್ಣು ಮುಕ್ಕಬೇಕಾದಾಗ ಗೊತ್ತಾಗತ್ತೆ. ಅವಾಗ ಬರ್ತಾವೆ ಈ ಮುಂಡೇವು ಲೈನಿಗೆ!

Anonymous ಅಂತಾರೆ...

ಈ ಮರಾಟಿಗಳಿಗೆ ಏನ್ ಕಡಿಗೆ ಗಾಂಚಾಲಿನಾ? ಇನಾಕಾರಣ ಸೊಲ್ಲಾಪುರ ನುಂಗಿದ್ರು, ಈಗ ಬೆಳಗಾವಿ ಬೇಡ್ತಿದಾರೆ. ಸಮಸ್ಸೆ ಏನೇ ಇದ್ರೂ ಈ ತರ ಬೀದಿ ಬೀದಿಲಿ ಹೊರಗಿಂದ ಬಂದವ್ರನ್ನ ಹಿಡ್ಕೊಂಡ್ ಹೊಡಿಯೋರ್‍ನಾ ಮನಸ್ಯಾ ಅಂತಾರಾ?

ಮುಂಬಾಯಿ ಹೆಸರು ಮರಾಟಿನಾ? ನನಗ್ಯಾಕೋ ಅನುಮಾನ, ಅಲ್ಲಿ ಗುಜರಾತಿಗಳು ಮರಾಟಿಗರಿಗಿಂತ ಹೆಚ್ಚಿದಾರೆ ಅದಲ್ಲದೇ ಕಾಲಾನುಕಾಲದಿಂದಲೂ ಇದಾರೆ. ಮುಂಬೈ ಮರಾಟಿಗರಿಗೆ ಎಸ್ಟ್ ಸೇರಬೇಕೋ ಅಸ್ಟೇ ಗುಜರಾತಿಗಳಿಗೂ ಸೇರಬೇಕು ಅಂತ ಮರಾಟಿಗರೂ ಒಪ್ಕೋತಾರೆ.

ಆದರೆ ಶತಮಾನಗಳ ಹಿಂದೆ ಅಲ್ಲೆಲ್ಲ ಮೆರಿತಿದ್ದುದು ಕನ್ನಡ ಭಾಷೆ ಅಂದರೆ ಆಸ್ಚರ್ಯಪಡಬೇಕಿಲ್ಲ. ಮುಂಬೈಯಲ್ಲಿ ಕನ್ನಡಿಗರ ಸಂಕೆಗೇನೂ ಕೊರತೆ ಇಲ್ಲ, ನಮ್ಮ ಕನ್ನಡಿಗರಿಗೂ ಈ ಗಾಂಚಾಲಿ ಮಕ್ಳು ಹಿಂಗೆ ಮಾಡೋಕ್ ಬಂದ್ರೆ ನಾವು ಸುಮ್ನಿರೋಕಾಗುತ್ತಾ ಗುರು?

ಆದರೆ ಬೆಂಗಳೂರ್ ವಿಸ್ಯಾ ಹೀಗಲ್ಲ, ಇದು ಅಚ್ಚ ಕನ್ನಡ ನೆಲ, ಬೆಂದ+ಕಾಳೂರು ಎಂಬ ಹೆಸರೇ ಸಾಕಲ್ಲವೇ? ಇದನ್ನು ಕಟ್ಟಿದವರು ಅಪ್ಪಟ ಕನ್ನಡಿಗ ಕೆಂಪೇಗೌಡರು, ಮುಂಬೈನಾ ಯಾವ ಮರಾಟಿ ಕಟ್ಟಿದ ಗುರು? ಹೇಳಿ.

Anonymous ಅಂತಾರೆ...

naavu maraThigarige ayyo paapa annOdu nan prakaara tappu...aa nan makLu alli up/biharis ge hoDitaare illi beLagaavi kaaravaara bEkantaare..anubhavisali...nam vishayakke bandaaga sariyaagi paaTha kalisbEku..bejaar vishya Enandre ivrooralli maraaThige dhakke bamtu amta bobbe hoDeyo ivru beLagaavili haagu sutta muttala jaagagaLalli balavantavaagi maraaThi hErta idaare..double standards...nam raajakaaraNigaLu gaTTi iddidre ivella aagtirlilla...ka.ra.ve irOdrinda uLkomDideevi...

Anonymous ಅಂತಾರೆ...

Guru, Yavudhu sari Yavudhu thappu?

Marathi maharasthra matash haghidhu thappa? Marathi jana karnatakadha Belaghavi(Belgaum) yannu maharasthra ghe serpadisuvudu sarina? This is like TIT FOR TAT.

Navu kannadigaru, yava jaghavannu khabalisuthilla. So, bhereyavaru namma jaghavannu khabalisuvudhaghali hathava matash maduvudhakke navu bedalla.

Jai Karnataka!

Anonymous ಅಂತಾರೆ...

http://www.petitiononline.com/bialblor/petition.html

Anonymous ಅಂತಾರೆ...

ಸ್ವಾತಂತ್ರ ಪೂರ್ವದಲ್ಲಿ ಮುಂಬೈನಲ್ಲಿ ಮರಾಠಿ ಆಡಳಿತ ಭಾಷೆಯಾಗಿರಲಿಲ್ಲ. ಇಲ್ಲಿನ ಪ್ರಮುಖ ಭಾಷೆಗಳು ಆಂಗ್ಲ, ಗುಜರಾತಿ,ಹಿಂದಿ, ಕನ್ನಡ, ಕೊಂಕಣಿ. ಅಂದರೆ ಇಲ್ಲಿನ ಸರ್ಕಾರಿ ಪತ್ರ ವ್ಯವಹಾರಗಳೆಲ್ಲ ಮೇಲೆ ತಿಳಿಸಿದ ಭಾಷೆಗಳಲ್ಲೇ ಇರುತ್ತಿದ್ದವು. ಅಂದರೆ ಸ್ವಾತಂತ್ರಾನಂತರ ಪ್ರಬಲರಾಗಿದ್ದ ಮರಾಠಿ ಭಾಷಿಕ ರಾಜಕಾರಣಿಗಳು, ಮುಂಬೈಯನ್ನು ಮಹರಾಷ್ಟ್ರಕ್ಕೆ ಸೇರಿಸಲು ನಡೆಸಿದ ಪ್ರಯತ್ನ ಸಫಲವಾಯಿತು.
ಅಷ್ಟಕ್ಕೂ ಮುಂಬೈ ಇತಿಹಾಸವನ್ನು ಕೆದಕಿದರೆ, ಮುಂಬೈ ನಗರವನ್ನು ಅಭಿವೃದ್ದಿಪಡಿಸಿದವರು ಇಂಗ್ಲೆಂಡಿನ ದೊರೆ ಚಾರ್ಲ್ಸ್ ಹಾಗೂ ಈಸ್ಟ್ ಇಂಡಿಯಾ ಕಂಪನಿ. ಆದರೆ ಬೆಂಗಳೂರು, ಹೈದರಾಬಾದ್ ಹಾಗೂ ಇತರ ನಗರಗಳು ಸ್ವತಂತ್ರವಾಗಿ ಬೆಳೆಯಲ್ಪಟ್ಟವುಗಳು. ಮುಂಬೈ ಇತಿಹಾಸಕ್ಕೆ ಮರಾಠಿಗರ ಕೊಡುಗೆ ಎಷ್ಟಿದೆಯೋ ಇತರ ಭಾಷಿಕರ ಕೊಡುಗೆ ಅದಕ್ಕಿಂತ ಹೆಚ್ಚು. ಆದ್ದರಿಂದ ಈಗಿನ್ ಠಾಕ್ರೆ ಕುಟುಂಬ ತಮ್ಮ ರಾಜಕೀಯ ಇತಿಹಾಸಕ್ಕೆ ಮುಂಬೈಯನ್ನು ಬಳಸಿಕೊಳ್ಳುತ್ತಿದ್ದಾರೇ ಹೊರತು ಮುಂಬೈ ಹಾಗೂ ಮರಾಠಿಗರ ಉದ್ದಾರಕ್ಕಂತೂ ಅಲ್ಲವೇ ಅಲ್ಲ್.

ಧನ್ಯವಾದಗಳೊಂದಿಗೆ
ರಾಘವೇಂದ್ರ

harish ಅಂತಾರೆ...

ಹಿ೦ದಿ ಮು೦ಬೈ ನಲ್ಲಿ ಮೆರಿತಾ ಇರೊ ಥರ ತಮಿಲು ಬೆ೦ಗಲುರಲ್ಲಿ,yochne madi guru,bere bhashe kitaklilla andre nam gati nu ade agodu

guru ಅಂತಾರೆ...

ನಮಗೆ ಈ ಗತಿ ಬರುವ ಮೊದಲೇ ಎಚ್ಚರ ವಹಿಸುವುದು ಒಳ್ಳೆಯವುದು .....

talegari (ತಾಳೆಗರಿ) ಅಂತಾರೆ...

ರಾಘವೇಂದ್ರ ಅವರೇ, ಎಶ್ಟು ಹಿಂದೆ ಹೋಗ್ತಿರಾ ... ಶಿವಾಜಿ, ಪೇಶ್ವೇಗಳ ಕಾಲದಲ್ಲಿ ಈಗಿನ ಮುಂಬೈನಲ್ಲಿ ಮರಠಿಗರು ಇರ್ಲಿಲ್ಲೇನ್ರಿ? ಇವೆಲ್ಲಾ ಹೊಸ ಟೆಕ್ನಾಲಜಿಗಳ ಪರಿಣಾಮ ... ಮೊದ್ಲು ಹಳ್ಳಿಹಳ್ಳಿಗಳಿಗೆ ವಲ್ಸೆ ಹೋಗೋರು ಈ ಸೌಕರ್ಯದಿಂದ ದೇಶವ್ಯಾಪಿ ಹೋಗ್ತಾರೆ. ಇನ್ನು ನಮ್ಮ ವಿಶಯಕ್ಕೆ ಬಂದ್ರೆ, ಕರ್ಣಾಟಕದಲ್ಲಿ, ಬೆಂಗಳೂರಲ್ಲಿ: "ಏನೇ ಆಗ್ಲಿ, ದಯವಿಟ್ಟು ಕನ್ನಡದಲ್ಲಿಯೇ ಮಾತಾಡಿ". ಈ ಗುಣ ಬಿಟ್ರೇನೇ, ನಮ್ಮ ನೆಲದಲ್ಲಿ ನಾವುಗಳು ಪರದೇಶಿಗಳಾಗೋದು ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails