ಅಷ್ಟೇ ಅಲ್ಲ, "ರೈಲ್ವೇ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ, ಆದ್ರೆ ಅದರ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟಿಸಿದ ರೀತಿ ಸರಿಯಿಲ್ಲ, ಕನ್ನಡಿಗರಿಗೆ ರೈಲ್ವೆ ಕೆಲಸಗಳಲ್ಲಿ ಆದ್ಯತೆ ಸಿಗಬೇಕಾದರೆ ಕೇಂದ್ರದಲ್ಲಿ ಪಾಲಿಸಿ ಬದಲಾಗಬೇಕು" ಅಂತ ದೊಡ್ಡ ಮಾತು ಕೂಡ ಕುಮಾರಣ್ಣ ಆಡಿದಾರಲ್ಲ, ಔರಿಗೆ ಕೇಳಬೇಕಾದ ಕೆಲವು ಪ್ರಶ್ನೆಗಳಿವೆ.
ಕುಮಾರಣ್ಣ, ಒಸಿ ಕಿವಿ ಬುಟ್ ಕೇಳ್ಕಳಿ, ಉತ್ರ ಕೊಡಿ:
- ಅಲ್ಲ ಕುಮಾರಣ್ಣ, ನಿಮ್ಮ ಸರ್ಕಾರವೇ ಇದ್ದಾಗ ಕನ್ನಡಿಗರಿಗೆ ನ್ಯಾಯವಾಗಿ ಸೇರಬೇಕಾಗಿದ್ದ ಕಾವೇರಿ ನೀರ್ನ ಹಾಡಹಗಲಲ್ಲೇ ತಮಿಳ್ರು ಕಿತ್ಕೊಂಡ್ ಹೋದ್ರಲ್ಲ, ಆಗ ನೀವು "ಸರಿಯಾದ ರೀತಿ"ಯಲ್ಲೇ ಪ್ರತಿಭಟನೆ ಮಾಡಬಹುದಾಗಿತ್ತಲ್ಲ? ದಿಲ್ಲಿಗೆ ಹೋಗಿ ಬರೀ ಕಿತ್ತಳೇಹಣ್ಣು ಜೂಸ್ ಕುಡ್ಕೊಂಡು ಧರಣಿ ಮಾಡಬೋದಾಗಿತ್ತಲ್ಲ? ನೀರು ಕೊಡೋ ವರೆಗೂ ಕದ್ಲಕ್ಕಿಲ್ಲ ಅಂತ ಹಟ ಹಿಡೀಬೋದಿತ್ತಲ್ಲ? ಎಲ್ಲೀಗೆ ಹೋಗಿತ್ತು ನಿಮ್ಮ ಕನ್ನಡ ಪ್ರೇಮ ಆಗ?
- ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಕ್ಕೆ ಬೇಕಾದ ಎಲ್ಲಾ ಅರ್ಹತೆಗಳಿದ್ದರೂ ನಿಮ್ಮ ಆಡಳಿತದಲ್ಲೇ ನಿಮಗೆ "ಸರಿಯಾದ ರೀತಿ"ಯಲ್ಲಿ ಏನೂ ಮಾಡಕ್ಕಾಗಲಿಲ್ಲವಲ್ಲ ಕುಮಾರಣ್ಣ? ಎಲ್ಲಿಗೆ ಹೋಗಿತ್ತು ನಿಮ್ಮ ಕನ್ನಡ ಪ್ರೇಮ ಆಗ?
- "ಸರಿಯಾದ ರೀತಿ"ಯಲ್ಲೇ ಪ್ರತಿಭಟನೆ ಮಾಡೋದು ಸರಿ ಅನ್ನೋದಾದರೆ ರೈಲ್ವೇ ನೇಮಕಾತಿಯಲ್ಲಾದ ಅನ್ಯಾಯದ ವಿರುದ್ಧ ನೀವು ತುಟಿಕ್-ಪಿಟಿಕ್ ಅಂತ "ಸರಿಯಾದ ರೀತಿ"ಯಲ್ಲೂ ಅನ್ನಲಿಲ್ಲವಲ್ಲ ಯಾಕೆ? ಸರ್ಕಾರ ಬಿದ್ದ ತಕ್ಷಣ ನಿಮ್ಮ ಪಕ್ಷಕ್ಕೆ ಇದ್ದ ಕನ್ನಡ ಪ್ರೇಮವೂ ಬಿದ್ದುಹೋಯಿತೋ ಹೇಗೆ? ಅಥವಾ ಮೊದಲಿಂದಲೂ ಇರಲೇ ಇಲ್ಲವೋ ಹೇಗೆ?
7 ಅನಿಸಿಕೆಗಳು:
ಓತಿಕ್ಯಾಟಕ್ಕೆ ಬೇಲಿಗೂಟ ಸಾಕ್ಷಿ.. ಒಬ್ಬ ಕಳ್ಳನಿಗೆ ಇನ್ನೊಬ್ಬ ಸಾಕ್ಷಿ..
ಅವ್ನು ನಾನು ಹಾಗೆ ಹೇಳಿಲ್ಲ ಅಂತ .. ಇವ್ನು ಹೌದೌದು ಅಂತ ತಲೆ ಅಲ್ಲಾಡಿಸ್ಲಿಕ್ಕೆ.
Deepa aro timealli Joragi uriyattante....Uvarella Kannadigara...
nijavagyu praythna paTTidre, karnataka kke avashyavagi bekaagidda pradeshika paksha aago yella arhate JDS ge ittu.. aadre ivarige adhikara daaha bitre bere yenu beda,, ondu ideology ne ildire e nan makklinda naavu paaTa keLabeku andre bejaaru.
Nammade aada ondu pradeshika paksha baro varegu intha tikkalutanakke kone iralla..
yaakri kumaranna
kannadigarigey avamana maaduvavana jothe rajakarana maado aasey na
ಮೊದಲು ಕುಮಾರಣ್ಣ ಲಾಲು ಹೇಳಿಕೆಗೆ ವಿರೋಧಿಸಿದರೂ, ನಂತರ ಈಗ ಪಕ್ಷಪಾತ ಮಾತುಗಳನ್ನಾಡಲು ಕಾರಣ, ಲಾಲು ದ್ಯಾವೆಗೌಡರ ಬಗ್ಗೆ ಹಿತ ನುಡಿದದಕ್ಕೆ. ಇಲ್ಲಿ ನೋಡಿ http://www.saharasamay.com/samayhtml/articles.aspx?newsid=94893
kumaraNNa aaglie avarappa aagli .. ellaru duDDige/adhikarakke daasaraagi bhikshe ge nintiruvaaga .. kannadakke aagli kannadigarige aagli anyaaya agtaa irodu avarige artha aago ashtu buddi/manassu iddidre .. kaveri yaake madrasi gaLa paalu aagtittu .. laalu yaake namma ooralli nammanne ugidu hogtidda ..
ಇದು ಹುಡುಕು ನೋಡಿ
http://www.yanthram.com/kn/
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!