ಬಾ ಗುರು! ಕಾಫಿ ಕುಡಿಯೋಣ!!

ಅಕ್ಕರೆಯ ಓದುಗ,

ಬನವಾಸಿ ಬಳಗದ ವತಿಯಿಂದ ನಿಮಗೆಲ್ಲಾ ನಮಸ್ಕಾರ. ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ಸಿದ್ಧಾಂತ ಪ್ರತಿಪಾದಿಸುತ್ತಿರುವ ಬನವಾಸಿ ಬಳಗ ತನ್ನ ನಾಡಪರವಾದ ಚಿಂತನೆಯನ್ನು ಪ್ರಚುರಪಡಿಸಲು ಸಾಧನವಾಗಿಯೂ, ತನ್ನ ಮುಖವಾಣಿಯಾಗಿಯೂ "ಏನ್ ಗುರು... ಕಾಫಿ ಆಯ್ತಾ?" ಬ್ಲಾಗನ್ನು ನಡೆಸುತ್ತಾ ಬಂದಿದೆ.

ಈ ಬ್ಲಾಗ್ ಆರಂಭವಾಗಿ ಒಂದು ವರ್ಷ ಆಯ್ತು. ಈ ಸಂದರ್ಭಾನ ಒಂದು ನೆಪ ಮಾಡ್ಕೊಂಡು ಓದುಗರಾದ ನಿಮ್ಮ ಜೊತೆ ಒಂದೆರಡು ಗಂಟೆ ಕಾಲ ಕಳೀಬೇಕು ಅನ್ನೋ ಆಸೆ ನಮಗೆ. ಹಾಗಾಗಿ ನಾವೆಲ್ಲಾ ಒಂದು ಕಡೆ ಸೇರಿ ಹರಟೆ ಹೊಡೆಯೋಣವಾ? ಎಲ್ಲಿ? ಯಾವಾಗ? ಅಂತೆಲ್ಲಾ ಪ್ರಶ್ನೇನ ನೀವು ಕೇಳಕ್ ಮೊದಲು ಉತ್ರ ಹೇಳ್ತೀವಿ ಇರಿ.

ಎಲ್ಲಿ?: ಬಿ.ಎಂ.ಶ್ರೀ ಕಲಾ ಭವನ, 3ನೇ ಮುಖ್ಯರಸ್ತೆ, ನರಸಿಂಹರಾಜ ಬಡಾವಣೆ, ಬಸವನ ಗುಡಿ, ಬೆಂಗಳೂರು 560019

ಯಾವತ್ತು? : 2008ರ ಜುಲೈ 6ನೇ ತಾರೀಕಿನ ಭಾನುವಾರದಂದು

ಯಾವಾಗ? : ಬೆಳಗ್ಗೆ 10.00ರಿಂದ 12.00ರ ವರೆಗೆ

ಹ್ಯಾಗೆ ಅಲ್ಲಿಗ್ ಬರೋದು? : ರಾಮಕೃಷ್ಣ ಆಶ್ರಮದ ಕಡೆಯಿಂದ ಬರೋರು ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜು ದಾಟಿದ ಮೇಲೆ ಗೋಖಲೆ ಸಾರ್ವಜನಿಕ ಸಂಸ್ಥೆ ಆದ ಮೇಲೆ ಎಡಕ್ಕೆ ತಿರುಗ್ಬೇಕು. ಮತ್ತೆ ಬಲಕ್ಕೆ ಎರಡನೇ ತಿರುವಲ್ಲಿ ತಿರುಗಬೇಕು. ಒಂದು ನಾಲ್ಕು ಕಟ್ಟಡಗಳಾದ ಮೇಲೆ ಬಲಕ್ಕೆ ಇರೋದೆ ಬಿ.ಎಂ.ಶ್ರೀ ಕಲಾಭವನ. ನರಸಿಂಹ ರಾಜ ಕಾಲೋನಿ ಕಡೆಯಿಂದ ಬರೋರು ಬಸ್ ನಿಲ್ದಾಣದಿಂದ ದ್ವಾರಕ ಹೋಟೆಲ್ ಕಡೆ ಬನ್ನಿ. ಅಲ್ಲಿ ರಸ್ತೆ ಕವಲಾಗಿ ಒಡ್ಯುತ್ತೆ. ಬಲಬದಿಯ ಫುಟ್ ಪಾತ್ ಮೇಲೆ ನಡ್ಕೊಂಡು ಬಂದ್ರೆ ಬಲಕ್ಕೆ ಮೂರನೇ ಮುಖ್ಯರಸ್ತೆ ಸಿಗುತ್ತೆ. ಅದರೊಳಕ್ಕೆ ಹೊಕ್ಕು ಅಲ್ಲೇ ಮುಂದೆ ಬಂದ್ರೆ ಎಡಭಾಗದಲ್ಲಿ ಬಿ.ಎಂ.ಶ್ರೀ ಕಲಾಭವನ ಸಿಗುತ್ತೆ.ಅಲ್ಲಿ ನಿಮಗೆ ಬನವಾಸಿ ಬಳಗದ ಬ್ಯಾನರ್ ಕಾಣುತ್ತೆ. ಅದಕ್ಕಿಂತ ಮುಖ್ಯವಾಗಿ ನಾವೆಲ್ಲಾ ನಿಮ್ಮನ್ನು ಬರಮಾಡಿಕೊಳ್ಳಲು ಕಾಯ್ತಿರ್ತೀವಿ. ತಪ್ಪದೇ ಬನ್ನಿ.

ಅಲ್ಲಿ ನಾವೆಲ್ಲಾ ಆಪ್ತವಾಗಿ ಹರಟೋಣ, ಏನ್ ಗುರು ಕಾರ್ಯಕ್ರಮ ಅಂದಮೇಲೆ ಅಲ್ಲಿ ಖಂಡಿತಾ ಬಿಸಿ ಬಿಸಿ ಕಾಫಿ ಗ್ಯಾರಂಟಿ. ಜೊತೆಗೆ ಏನ್ ಗುರು ತಂಡದ ಎಲ್ರೂ ಇರ್ತೀವಿ. ಒಂದೆರಡು ತಾಸು ಪುರುಸೊತ್ತು ಮಾಡ್ಕೊಂಡು ಬರ್ರೀಪ್ಪಾ!

ಹ್ಞಾಂ, ನೀವು ಬರೋದನ್ನು ಒಂದು ಮಿಂಚೆ ಹಾಕಿ ಖಚಿತ ಪಡುಸ್ತೀರಾ, ಪ್ಲೀಸ್...ಮಿಂಚಿಸಿ : engurublog@gmail.com ಗೆ.

13 ಅನಿಸಿಕೆಗಳು:

Kishore ಅಂತಾರೆ...

ನಮಸ್ಕಾರ,

ಏನ್ಗುರುನ ೨ನೆ ವರ್ಷದ ಹುಟ್ಟಿದಕ್ಕೆ ನನ್ನ ಶುಭ ಹಾರೈಕೆಗಳು. ನಾನು ೬ನೆಯ ತಾರೀಕು ಊರಲ್ಲಿ ಇರದ ಕಾರಣ ಈ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ. ಆದ್ರೆ ನನ್ನ ಮನಸೆಲ್ಲ ಬಿ.ಎಂ.ಶ್ರೀ ಕಲಾ ಭವನ ದಲ್ಲೇ ಇರತ್ತೆ.. ಎಲ್ಲರೂ ಚೆನ್ನಾಗಿ ಕಾಫಿ ಕುಡಿರಿ ಮತ್ತು ಒಳ್ಳೆ ಒಳ್ಳೆ ವಿಷ್ಯ ಚರ್ಚೆ ಅಗಲಿ ಅಂತ ಶುಭ ಹಾರೈಸುತ್ತೀನಿ.

ಕಿಶೋರ್.

Anonymous ಅಂತಾರೆ...

ಎಷ್ಟು ಬೇಗ ದಿನಗಳು ಕಳೆಯುತ್ತವಲ್ಲಾ? ೨ ವರ್ಷಗಳನ್ನು ಪೂರೈಸಿದ್ದಕ್ಕೆ ಅಭಿನಂದನೆಗಳು. ಹರಟೆಯನ್ನು, ಕಾಫಿಯನ್ನು ಖಂಡಿತ ಮಿಸ್ಸ್ ಮಾಡ್ಕೋತೀನಿ.

ಕಾರ್ಯಕ್ರಮ ಚೆನ್ನಾಗಿ ನಡೆಯಲೆಂದು ಹಾರೈಸುವೆ.

ಉಉನಾಶೆ ಅಂತಾರೆ...

ಇದನ್ನು ವೆಬ್ ಕಾನ್‍ಫರೆನ್ಸ್ ಅಥವಾ ಟೆಲಿ ಕಾನ್‍ಫರೆನ್ಸ್ ಮಾಡಲು ಸಾಧ್ಯವೇ ? ಪರವೂರಲ್ಲಿರುವವರಿಗೆ?

ಉದಾ:
sabsebolo.com (within India)
freeconferencecall.com (US+ other countries but not India. One with an VoIP phone can connect to that line, and whole western world can get in free)

Anonymous ಅಂತಾರೆ...

ನಮ್ಮ ಬ್ಲಾಗ್ 2007ರಲ್ಲಿ ಶುರುವಾಗಿದ್ದು ನಿಜ. ಆದರೆ ಎರಡು ವರ್ಷ ಕಳೆದಿಲ್ಲ, ಒಂದು ಮಾತ್ರ ಕಳೆದಿರೋದು. ಬರಹದಲ್ಲಿದ್ದ ತಪ್ಪನ್ನು ತಿದ್ದಿದ್ದೇವೆ. ಮನ್ನಿಸಬೇಕು.


- ಸಂಪಾದಕ.

Unknown ಅಂತಾರೆ...

ಪ್ರೀತಿಯ ಏನ್ಗುರೂಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು...
ಏನ್ ಗುರೂ ಗೆಳೆಯರನ್ನು ಭೇಟಿ ಮಾಡಲು, ಅವರೊಂದಿಗೆ ಮಾತಾಡಲು ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

ಪುಟ್ಟ PUTTA ಅಂತಾರೆ...

Pls upload video later if possible. Thanks.

Anonymous ಅಂತಾರೆ...

shubhashayagaLu EnGURU.. oLLeyadaagali!!

Unknown ಅಂತಾರೆ...

Enguru huttuhabbakke shubhashayagalu...., Sabhe chennagi nadeyali, naanu bere ooralli iruvadarinda, sabhey photo/video hakidare thunba santhosh.....

Amarnath Shivashankar ಅಂತಾರೆ...

ಸುಮ್ನೆ ಅಂತರ್ಜಾಲದಲ್ಲಿ ಮತಾಡಿದ್ರೆ ಸಾಲದು...ಬನವಾಸಿ ಬಳಗದವರ ತರಹ ಸಭೆಗಳನ್ನು ಏರ್ಪಡಿಸಬೇಕು..ನಾವಂತು ಖಂಡಿತ ಬರ್ತೀವಿ

Unknown ಅಂತಾರೆ...

July 6ne tharikhu khandita barutthene navella serodakke idondu susandarbha, khandita yellaroo banni....

Shrinidhi Hande ಅಂತಾರೆ...

ನನಗೆ ದೆಹಲಿಗೆ ಹೋಗಬೇಕಿರುವುದರಿ೦ದ ಬರಲಾಗುತ್ತಿಲ್ಲ. ಈ ಸಭೆಯ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ

http://www.enidhi.net/2008/07/onewebday-bloggers-meet-and-other.html#enguru

Anonymous ಅಂತಾರೆ...

ನಮಸ್ಕಾರ ಏನ್-ಗುರು
ನನ್ನು ಹಾಗು ನನ್ನ ಕರುನಾಡು ಗುಂಪು ಕಂಡಿತ ಬರ್ಥೆವೆ
ಇಂತಿ ನಿಮ್ಮ ಕರುನಾಡ ಕನ್ನಡಿಗ
www.Karunadu.tk

Phadke ಅಂತಾರೆ...

En Guru ge shubhaashayagaLu

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails