ಎಫ್.ಎಂಗಳು ಅರಿತ ದಿಟ! ಕಲಿತ ಪಾಟ!!

ಕರ್ನಾಟಕದಲ್ಲಿ ರೇಡಿಯೋ ನಡ್ಸಿ ಮಾರುಕಟ್ಟೆ ಗೆಲ್ಲೋಕೆ ಇರೋ ಒಂದೇ ದಾರಿ ಕನ್ನಡ ಅನ್ನೋದನ್ನ ಅಚ್ಚುಕಟ್ಟಾಗಿ ಅರ್ಥ ಮಾಡ್ಕೊಂಡು, ಬರೀ ಕನ್ನಡ ಹಾಡು ಹಾಕಿ, ಕನ್ನಡದಲ್ಲೇ ಸಕತ್ ಆಗಿ ಕಾರ್ಯಕ್ರಮ ನಡೆಸ್ಕೊಂಡು ಬಂದ ಬಿಗ್ ಎಫ್.ಎಮ್ ಇದೀಗ ಎಫ್.ಎಮ್ ರೇಡಿಯೋ ಮಾರುಕಟ್ಟೆಯಲ್ಲಿ ನಂಬರ್ 1 ಆಗಿದೆಯಂತೆ! ಅಷ್ಟೇ ಅಲ್ಲ, ನಂಬರ್ 2, 3 ಹಾಗೂ 4ನೇ ಸ್ಥಾನದಲ್ಲಿರೋ ವಾಹಿನಿಗಳು ಕೂಡಾ ಕನ್ನಡ ಹಾಡು ಹಾಕೋ ಸ್ಟೇಶನ್ನುಗಳೇ ಆಗಿದ್ದು ಬೆಂಗಳೂರಿನಲ್ಲಿ ಕನ್ನಡಕ್ಕಿರೋ ಅಗಾಧ ಮಾರುಕಟ್ಟೆನಾ ಎತ್ತಿ ತೋರಿಸುತ್ತಾ ಇದೆ ಗುರು!
ಬೆಂಗಳೂರಲ್ಲಿ ಕನ್ನಡವಿಲ್ಲ ಅನ್ನೋ ಸುಳ್ಳು ನಂಬಿ ಕೆಟ್ಟರು!
ಕೇವಲ ಎರಡು-ಮೂರು ವರ್ಷಗಳ ಹಿಂದೆ "ಬೆಂಗಳೂರು ಕಾಸ್ಮೋಪಾಲಿಟಿನ್ನು. ಇಲ್ಲಿ ಕನ್ನಡದೋರು ಬರೀ 35%. ಇಲ್ಲಿ ಕನ್ನಡಕ್ಕೆ ಮಾರುಕಟ್ಟೆನೇ ಇಲ್ಲ, ಬೆಂಗಳೂರಲ್ಲೇನಿದ್ರೂ ಹಿಂದಿನೇ ನಡೆಯೋದು" ಅಂತ ದೊಡ್ಡ ಸುಳ್ಳನ್ನು ನಂಬ್ಕೊಂಡು ಹಿಂದಿಗೆ ಇಲ್ಲದಿರೋ ಮಹತ್ವ ಕೊಟ್ಟು, ಕನ್ನಡಕ್ಕೆ ಸಹಜವಾಗೇ ಇದ್ದ ದೊಡ್ಡ ಮಾರುಕಟ್ಟೆನಾ ಕಡೆಗಣಿಸಿ ವಹಿವಾಟು ಶುರು ಮಾಡಿದೋರಿಗೆಲ್ಲಾ ದಿಟ ನಿಧಾನವಾಗಿ ಅರ್ಥ ಆದ ಹಾಗಿದೆ. ಕನ್ನಡಕ್ಕೆ ಮಾರುಕಟ್ಟೆ ಇಲ್ಲ ಅಂತಿದ್ದೋರ ಬಾಯಿಗೆಲ್ಲ ದೊಡ್ಡ ಬೀಗ ಬಿದ್ದು ಸುಮಾರು ದಿವಸಾನೇ ಆಯ್ತು. ಇದೀಗ ಮತ್ತೊಮ್ಮೆ ಕನ್ನಡಿಗರಲ್ಲೇ ತಮ್ಮ ನುಡಿಗಿರೋ ತಾಕತ್ತಿನ ಬಗ್ಗೆ ನಂಬಿಕೆ ಹುಟ್ಸೋ ಹಾಗೆ ಬೆಂಗಳೂರಿನ ನಂಬರ್ ಒನ್, ಟೂ, ತ್ರೀ ರೇಡಿಯೋಗಳೆಲ್ಲಾ ಕನ್ನಡ ಅಪ್ಪಿಕೊಂಡಿದ್ದಕ್ಕೇ ಆ ಸ್ಥಾನ ಪಡೆದದ್ದನ್ನು ಗಮನಿಸಬೇಕಿದೆ.
ಮೊದಲು ಮೆಣಸಿನಕಾಯಿ ಚುರುಕಾಯ್ತು!

ಆವತ್ತು ಸನ್ ಅವರ SFM ಪೂರ್ತಿ ಕನ್ನಡ ಹಾಕ್ತಿದ್ದೋರು ಇದ್ದಕ್ಕಿದ್ದ ಹಾಗೆ ಹಿಂದಿ ಶುರು ಮಾಡಿದಾಗ ಕನ್ನಡ ಮನರಂಜನೆಯ ಆ ಖಾಲಿಯಾದ ಸ್ಥಾನಾನ ತುಂಬೋ ಅವಕಾಶ ತನ್ನದು ಮಾಡಿಕೊಂಡಿದ್ದು, ರೇಡಿಯೋ ಮಿರ್ಚಿ. ಮಿರ್ಚಿ 100% ಕನ್ನಡ ಅನ್ನಕ್ ಶುರು ಮಾಡ್ತಿದ್ದ ಕೆಲವೇ ದಿನಗಳಲ್ಲಿ ನಂಬರ್ ಒನ್ ಪಟ್ಟ ಅಲಂಕರಿಸಿತು.

ಒಂದರ ಹಿಂದೊಂದು ಸಾಲಾಗಿ...

ಇದಾದ ನಂತರ ಇತರೆ ವಾಹಿನಿಗಳಲ್ಲೂ ಕನ್ನಡದ ಅನಿವಾರ್ಯತೆ ಪ್ರಭಾವ ಬೀರಿತು. ಮುಂದೆ ಬೆಂಗಳೂರಿನ ಅತ್ಯಂತ ಜನಪ್ರಿಯ ರೇಡಿಯೋ ಸ್ಟೇಷನ್ ಅಂದ್ರೆ ಅಲ್ಲಿ ಕನ್ನಡವೇ ಪ್ರಧಾನ ಅನ್ನೋ ಪರಿಸ್ಥಿತಿ ಹುಟ್ತು. ಕೆಲವು ಚಾನೆಲ್ಲುಗಳು ಬೇರೆ ಬೇರೆ ಪ್ರಮಾಣದಲ್ಲಿ ಹಿಂದಿ ಕನ್ನಡ ಬೆರೆಸೋ ಪ್ರಯೋಗ ಮಾಡಿದರೂ ಅಂತಹ ಕ್ರಮ ಅವುಗಳಿಗೆ ಮಾರುಕಟ್ಟೆಯಲ್ಲಿ ಹಿನ್ನೆಡೆಯುಂಟು ಮಾಡಿತೆಂದೇ ಹೇಳಬೇಕು. ಇದಕ್ಕೆ ಸಾಕ್ಷಿ ಅಂದ್ರೆ ಹಿಂದೆಲ್ಲಾ ಬೊಂಬಾಟ್ ಕನ್ನಡ : ಬೊಂಬಾಟ್ ಹಿಂದಿ ಅನ್ನುತ್ತಿದ್ದ ಫೀವರ್ 104 ಕಳೆದೊಂದು ವಾರದಿಂದ ಬೊಂಬಾಟ್ ಕನ್ನಡ ಅಷ್ಟೆ ಅನ್ನಕ್ಕೆ ಶುರು ಮಾಡಿರೋದು.

ಕಾಮನಬಿಲ್ಲಿಗೆ ಬಣ್ಣ ಬರೋದು ಯಾವಾಗ?
ಇದು ನಿಜಕ್ಕೂ ಒಳ್ಳೇ ಬೆಳವಣಿಗೆ ಗುರು! ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನೋದೇ ಸರಿಯಾದದ್ದು. ಬೆಂಗಳೂರಿನಂತಹ ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡದಲ್ಲಿ ರೇಡಿಯೋ ನಡೆಸಿದ್ರೆ ಲಾಭ ಅಂತ ಎಫ್.ಎಂ ಗಳಿಗೆ ಮನವರಿಕೆ ಆಗಲು ಇಷ್ಟು ಕಾಲ ಬೇಕಾಯ್ತು. ಆದ್ರೂ ಕನ್ನಡ ಕಾಮನ ಬಿಲ್ಲು ಅಂತ ಗಳಿಗೆಗೊಮ್ಮೆ ವದರೋ ರೈನ್ ಬೋ ಗೆ ಮಾತ್ರಾ ಇದು ಮನವರಿಕೆ ಆದಂಗಿಲ್ಲ. ಸರ್ಕಾರಿ ಪ್ರಾಯೋಜಿತ ವಾಹಿನಿ ಆದ್ದರಿಂದ ಇದರಲ್ಲಿ ನಿರಂತರವಾಗಿ ಕನ್ನಡಿಗರ ಮೇಲಿನ ಹಿಂದಿ ಹೇರಿಕೆ ನಿರಾತಂಕವಾಗಿ ನಡೆದೇ ಇದೆ. ಬೆಂಗಳೂರಲ್ಲಿ ಜನಕ್ಕೆ ಬೇಕಿರೋದು ಕನ್ನಡದ ಮನರಂಜನೆ ಅಂತ ಅವ್ರಿಗೆ ಹೇಳೋರು ಯಾರು ಗುರು?

10 ಅನಿಸಿಕೆಗಳು:

Anonymous ಅಂತಾರೆ...

ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಗುರು. ಸಂತೋಷ ಆಯಿತು.

Anonymous ಅಂತಾರೆ...

guroo benglooralli kannada jagruthi hechh tha ide....aadare kannada maatu gaLige maatra seemitha vagide... kannada odu barahakkinnnoo tanna sthanamaana doretilla...... adu modalu aagabekaada kelasa.....

vinmi ಅಂತಾರೆ...

I am a frequent lisener of FM rainbow station. and i don't agree with the coments given. Those who lisen to FM rainbow station willnot make this type of comments. I strongly object. The whole day i will be lisening to FM rainbow and most of the songs played are kannada and in the middle ofcourse they have Hindi songs. so Please don't give wrong informations.

Pramod ಅಂತಾರೆ...

ಒಳ್ಳೇ ಸುದ್ದಿ :)
ಆದ್ರೆ SFMನವರು ಕನ್ನಡ ಕೊಲ್ತಾ ಇದ್ದಾರೆ.ಅವ್ರ ಬಾಯಿ೦ದ ಹೊರ ಉಗುಳುವ ಒ೦ದೊ೦ದು ಕನ್ನಡ ಪದವು ವಾ೦ತಿ ಬರಿಸುವ೦ತಿದೆ.

Anonymous ಅಂತಾರೆ...

Adare "RADIO ONE' Fm avru bari hindi hadu hakuttidare idu thumba besarada vishya...

clangorous ಅಂತಾರೆ...
This comment has been removed by the author.
clangorous ಅಂತಾರೆ...

ನಮಸ್ಕಾರ,
ಕನ್ನಡ ಕಾಮನಬಿಲ್ಲು ಬೆಂಗಳೂರಿಗೆ ಬಂದ ಮೊದಲ ವಾಹಿನಿ, ಆದರೂ ಕೇಂದ್ರ ಸರ್ಕಾರದ್ದಾದ್ದರಿನ್ದ ಹಿಂದಿಯ ಹೇರಿಕೆ ಇಲ್ಲದಿದ್ದರೆ ಹೆಂಗೆ ?, ಇವರು ತಮಿಳುನಾಡಿನಲ್ಲಿ ಹಿಂದಿ ಹಾಡುಗಳನ್ನ ಪ್ರಸಾರ ಮಾಡ್ತಾರ ಅನ್ನೋದು ತಿಳ್ಕೊಬೇಕು. ತಮಿಳರು ಇದರ ಹೆಸರು ಆಕಾಶವಾಣಿ ಅಂತ ಇಟ್ಟಾಗಲೇ ವಿರೋದಿಸಿದ್ರು ಅನ್ನೋದೇ ಎಲ್ಲೊ ಓದಿದ್ದ ಜ್ಞಾಪಕ. ಆಕಾಶವಾಣಿಯಲ್ಲಿ ಇರೋ ಕನ್ನಡ ಹಾಡುಗಳ ಸಂಗ್ರಹ ಬೇರಾವ ಖಾಸಗಿ ವಾಹಿನಿಗಳಲಿಲ್ಲ, ಆದರೆ ಯಾಕೋ ನಮ್ಮ ಕನ್ನಡಿಗರ ಹಿಂದಿ ವ್ಯಾಮೋಹವೂ ಕಾರಣ ಅನ್ನಬಹುದು.

ಇನ್ನು ಕನ್ನಡ ಕಲಿಕೆಗೆ ಬಂದರೆ ಕೆಲವು ಶಾಲೆಗಳಲ್ಲಿ ಕನ್ನಡನ ಇಂಗ್ಲಿಷ್ನಲ್ಲಿ ಕಲಿಸ್ತಾ ಇದ್ದಾರೆ, ಇವರ ಪ್ರಕಾರ ಮಕ್ಕಳಿಗೆ ಕ ಗುಣಿತ ತಲೆಕಟ್ಟು ದೀರ್ಗ ಸಮೇತವಾಗಿ ಹೇಳಿಕೊಟ್ಟರೆ ಅರ್ಥವಾಗೊಲ್ಲವಂತೆ, ಪೋಷಕರೇ ಇಂಗ್ಲಿಷ್ನಲ್ಲಿ ಕನ್ನಡ ಹೇಳ್ಕೊಡಿ ಅಂಥ ಕೇಳ್ತಾರೆ ಅನ್ನೋದು ಶಾಲೆಗಳ ವಾದ, ಈ ರೀತಿ ಕನ್ನಡವನ್ನ ಕಲಿತರೆ ಏನು ಪ್ರಯೋಜನ ?

Anonymous ಅಂತಾರೆ...

ನಮಗೆ ಇರೋ ಮುಖ್ಯ ತೊಂದರೆ ಅಂದ್ರೆ ಇದೇನೇ.... ಸಮಸ್ಯೆ ಏನು ಅಂತ ಗೊತ್ತು ಆದ್ರೆ ಪರಿಹಾರ ಗೊತ್ತಿಲ್ಲ... ಶಾಲೆಗಳಲ್ಲಿ ಈ ಥರ ಕಲಿಸ್ತಾರೆ ಅಂತ ಗೊತ್ತಾದ್ಮೇಲೂನೂ ಏನೂ ಮಾಡಕ್ಕೆ ಆಗ್ತಿಲ್ಲ... ಎಲ್ಲಕ್ಕೂ ಸರ್ಕಾರನೇ ಪರಿಹಾರ ಕಂಡು ಹಿಡಿಯಕ್ಕೆ ಆಗಲ್ಲ..... ಆದ್ದರಿಂದ ನಾವೇ ಏನಾದ್ರು ಮಾಡಬೇಕು..... ಅದನ್ನ ಯಾರದ್ರು ಹೇಳಿಕೂಟ್ಟರೆ ತುಂಬಾ ಉಪಕಾರ ಆಗುತ್ತೆ........

Anonymous ಅಂತಾರೆ...

SFM kelirorigella gottu, shuru inda ivagina varagu Kannada Kannada anta maatadiroru play maadiroru avarobbare, aamele Kannada kollodu Biggu, Saamanu etc. padagalanna on air heltirtare aamele mirchinalli aaakaara haakaarakke vytyasane illaa... illi comments bariyoru swalpa yella station keli bareyodu olledu, summne bereavaru keliddu helodu hmmmm... asthu sari illa...

Anonymous ಅಂತಾರೆ...

ಅನಾಮಧೇಯರೇ,
ನಿಜ SFM ನವರು ಮೊದಲು ಕನ್ನಡ ಮಾತ್ರ ಪ್ರಸಾರ ಮಾಡುತ್ತಿದ್ದರು, ಆದರೆ ಈಗ ಯಾಕೆ ಹಿಂದಿ ಪ್ರಸಾರ ಮಾಡಲು ಶುರು ಮಾಡಿದ್ದಾರೆ.. ? ಹೊಗೆನಕಲ್ ವಿವಾದ ಶುರು ಆದಮೇಲೆ ಇದ್ದಕಿದ್ದ ಹಾಗೆ ಹಿಂದಿ ಹೇರಿಕೆ ಶುರು ಮಾಡುದ್ರು.. ಅವರ ಕನ್ನಡ ಎಷ್ಟೇ ಚೆನ್ನಾಗಿರಲಿ ..ಪೂರ್ತಿ ಕನ್ನಡ ಕಾರ್ಯಕ್ರಮಗಳನ್ನ ಪ್ರಸಾರ ಮಾಡ್ದೆ ಹೋದ್ರೆ ಏನ್ ಉಪಯೋಗ ?...ಬೇರೆ ವಾಹಿನಿಗಳು ಕನ್ನಡ ಕೊಲ್ತಾ ಇರೋದು ನಿಜ, ಜಾಹಿರಾತುಗಳು ಹಿಂದಿಯಲ್ಲಿ ಪ್ರಸಾರ ಮಾಡ್ತಿರೋದು ನಿಜ.. ಆದರೆ ಕನ್ನಡ ಹಾಡುಗಳು ಪ್ರಸಾರ ಮಾಡುದ್ರೆನೆ ಗೆಲ್ಲೋಕ್ಕಾಗೋದು ಅನ್ನೋದನ್ನ ತಿಳ್ಕೊಂಡಿದ್ದಾರೆ ಆದರೆ SFM ಸರಿಯಾಗಿದ್ದೋರು ಯಾಕೋ ದಾರಿ ತಪ್ಪಿದ್ದಾರೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails