ವರ್ಜಿನ್ ಮೊಬೈಲ್ ಕಂಡುಕೊಂಡ ಮಾರುಕಟ್ಟೆ ಗುಟ್ಟು!

ಕೆಲತಿಂಗಳ ಹಿಂದೆ ವರ್ಜಿನ್ ಮೊಬೈಲ್ ಎನ್ನುವ ಹೆಸರಿನ ಮೊಬೈಲ್ ಸೇವೆ ಕಂಪನಿಯೊಂದು, ಕರ್ನಾಟಕದಲ್ಲಿ ಜಿ.ಎಸ್.ಎಮ್ ಸೇವೆ ನೀಡಲು ಬಂತು.ಹೆಚ್ಚಾಗಿ ಯುವಕ ಯುವತಿಯರನ್ನೇ ಗ್ರಾಹಕರನ್ನಾಗಿಸಿಕೊಳ್ಳಲು ಮಾರುಕಟ್ಟೆಗೆ ಇಳಿದ ಇವರು ಅದಕ್ಕೆ ಮೊದಲು ಹಾದಿ ಅಂತ ಆಯ್ದುಕೊಂಡದ್ದು, ಹಿಂದಿ-ಇಂಗ್ಲಿಷ್ ಜಾಹೀರಾತುಗಳನ್ನು. ಬಹುಶಃ ಇಂತಾ ತಪ್ಪು ನಿರ್ಧಾರದ ಪರಿಣಾಮ ಈಗ ಅವರಿಗೆ ಅರಿವಾಗಿ ವರ್ಜಿನ್‍ನಲ್ಲಿ ಬದಲಾವಣೆಯ ಗಾಳಿ ಬೀಸಿದ ಹಾಗಿದೆ ಗುರು! ಕಾರಣ, ವರ್ಜಿನ್-ನವರ ಕನ್ನಡ ಜಾಹೀರಾತುಗಳು ಕಾಣಲು ಕೇಳಲು ಶುರುವಾಗಿವೆ!

ಕರ್ನಾಟಕದಲ್ಲಿ ಕನ್ನಡದ ತಲುಪು ಶಕ್ತಿ ಹೆಚ್ಚು!

ಕನ್ನಡವು ಕರ್ನಾಟಕದಲ್ಲಿ ಅತೀ ಹೆಚ್ಚು ಮಂದಿಗೆ ತಿಳಿದ ಭಾಷೆಯಾಗಿದ್ದು, ಜಾಹೀರಾತಿಗೆ ಕನ್ನಡ ಬಳಸುವುದೇ ಸರಿ ಎಂಬುದು ಕಾಮನ್‍ಸೆನ್ಸು. ಆದರೂ ಕೆಲವು ಕಂಪನಿಗಳು ಬಂದ ಹೊಸತರಲ್ಲಿ ತಪ್ಪೆಸಗಿ ನಂತರ “ಕೆಟ್ಟ ಮೇಲೆ ಬುದ್ಧಿ ಬಂತು” ಎಂಬಂತೆ ಕನ್ನಡದ ಅನಿವಾರ್ಯತೆ ಕಂಡುಕೊಳ್ಳುತ್ತಿವೆ ಅನ್ನುವ ಹಾಗಿದೆ. ವರ್ಜಿನ್ ಮೊಬೈಲ್‍ನವರಲ್ಲಾದ ಈ ಬದಲಾವಣೆಯು, “ಗ್ರಾಹಕನನ್ನು ಪರಿಣಾಮಕಾರಿಯಾಗಿ ಮುಟ್ಟಿ ಅವನ ಮನ ಒಲಿಸಲು ಆತನ ನುಡಿಗಿಂತಾ ಬೇರೊಂದು ಸಾಧನವಿಲ್ಲಾ” ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಗುರು!

ಕರ್ನಾಟಕದಲ್ಲಿ ವ್ಯಾಪಾರಕ್ಕೆ ಬರುವ ಪ್ರತಿಯೊಂದು ಕಂಪನಿಯೂ ಕನ್ನಡಿಗ ಗ್ರಾಹಕರನ್ನು ಆಕರ್ಷಿಸಲು ಕನ್ನಡವನ್ನು ಬಳಸುವುದೇ ಸರಿಯಾದ ಮತ್ತು ಸಹಜವಾದ ದಾರಿ. ಇಲ್ಲವಾದಲ್ಲಿ, ಮಾರುಕಟ್ಟೇನಾ ಗೆಲ್ಲೋದು ಕಷ್ಟ ಅನ್ನೋದು ಬೀದಿ ದಿಟ. ಇದುನ್ನ ಅರಿತಾಗ ಅವರಿಗೂ ಲಾಭ, ಇಲ್ದಿದ್ರೆ ಮುಟ್ಟೋ ಮೂರು ಮತ್ತೊಬ್ಬರನ್ನೇ ಗ್ರಾಹಕರನ್ನಾಗಿ ಪಡೆದು ಪಾಲಿಗೆ ಬಂದಿದ್ದೇ ಪಂಚಾಮೃತ ಅಂತಾ ಸಮಾಧಾನ ಪಟ್ಟುಕೋಬೇಕಾಗುತ್ತೆ, ಅಲ್ವಾ ಗುರು ?

4 ಅನಿಸಿಕೆಗಳು:

ಪುಂಡ ಅಂತಾರೆ...

ಒಳ್ಳೇ ಬೆಳವಣಿಗೆ ಆದರೆ ಇದು ಅಲ್ಲೊಂದು ಇಲ್ಲೊಂದು ಕಾಣಿಸತ್ತೆ ಅಷ್ಟೆ.
ಹಿಂದಿ ಜಾಹೀರಾತು ಕನ್ನಡಕ್ಕೆ ಅನುವಾದಿಸಿದ ಹಾಗಿಲ್ವೇ ಇದು? ಬಕ್ ಬಕ್ ಅಂತ ನನಗೆ ತಿಳಿದ ಮಟ್ಟಿಗೆ ಯಾರು ಹೇಳಲ್ಲ,ನಮ್ಮವರು ವಟ ವಟ ಅಂತ ಅಂತಾರೆ. ಏನ್ ಗುರು...?

ವಿ.ರಾ.ಹೆ. ಅಂತಾರೆ...

ಕೆಲದಿನಗಳ ಹಿಂದೆ ಕನ್ನಡ ಕಾಳಜಿಯುಳ್ಳ ಜನರು ವರ್ಜಿನ್ ಗ್ರಾಹಕ ಸೇವೆಗೆ ಸತತವಾಗಿ ಈ ಬಗ್ಗೆ ತಿಳಿಸಿಕೊಟ್ಟದ್ದಕ್ಕೇ ಅವರು ನಿಜ ಅರಿತುಕೊಂಡು ಈ ಬದಲಾವಣೆ ಮಾಡಿದ್ದು ಎಂಬುದು ಕೂಡ ಇಲ್ಲಿ ಹೇಳಲೇಬೇಕಾದ ವಿಚಾರ.

Priyank ಅಂತಾರೆ...

@ಪುಂಡ,

Room for improvement ಇದೆ.
ಆದ್ರೆ, ಮುಂಚಿನ ಜಾಹೀರಾತಿಗೆ ಹೋಲಿಸಿದ್ರೆ ಈಗ ಕಂಡು ಬರ್ತಿರೋ ಬೆಳವಣಿಗೆ ಉತ್ತಮ.
ಮುಂದೆ ಹೋಗ್ತಾ, ಇವರು "ವಟ ವಟ" ಅಂತಾನೂ ಬಳಸಬಹುದು.

Anonymous ಅಂತಾರೆ...

ಹೆಚ್ಚಿನ adಗಳ ಕನ್ನಡನುಡಿಮಾರ‍್ಪು ನಡೆಯೋದು ಮುಂಬಯ್ಯಲ್ಲಿ.

ಮುಂಬಯ್ಯಲ್ಲಿ ಕನ್ನಡ ನುಡಿಮಾರ‍್ಪುಗಾರರ ಕೆಲಸಗಳಿಗೆ ತೆರವುಗಳನ್ನು ಸುದ್ದಿಯೋಲೆಗಳಲ್ಲಿ ಓದಬಹುದು.

ಅಲ್ಲಿ ಹೆಚ್ಚಿನ ನುಡಿಮಾರ‍್ಪುಗಾರರು ಬಳಸುವ ಕನ್ನಡ ಈ ಮಟ್ಟದ್ದು...

ಇನ್ನು ಕನ್ನಡದ ಹೆಚ್ಚಿನ adಗಳು ಮಂಗಳೂರಿನವರ ಕನ್ನಡದಲ್ಲಿರುತ್ತೆ.. ಅದು ಯಾಕೋ ಗೊತ್ತಿಲ್ಲ..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails