ವಿಶ್ವಕಪ್ ಹಾಕಿ: ಮೊದಲು ಕನ್ನಡದಲ್ಲಿ ಜಾಹೀರಾತು ಹಾಕಿ!

ಇದೇ ಫೆಬ್ರವರಿ 28 ರಿಂದಾ ದಿಲ್ಲೀಲಿ ಹಾಕಿ ವಿಶ್ವ ಕಪ್ ಶುರುವಾಗಲಿದೆ. ಇದೇ ಹೊತ್ತಲ್ಲಿ ಹಾಕಿ ವಿಶ್ವ ಕಪ್ಪಿಗೆ ಪ್ರೋತ್ಸಾಹ ಕೊಡಿ ಎಂಬರ್ಥದ ಜಾಹೀರಾತುಗಳು ಅಲ್ಲಲ್ಲಿ ಕಾಣಿಸಿಕೊಳ್ತಾ ಇವೆ. ಕ್ರಿಕೆಟ್ ಆಟಕ್ ಮಾತ್ರಾ ಯದ್ವಾತದ್ವಾ ಮಹತ್ವ, ಪ್ರೋತ್ಸಾಹ ಸಿಕ್ಕುತ್ತಾ... ಬಾಕಿ ಎಲ್ಲಾ ಆಟಗಳು, ಆಟಗಾರರು ಬೆಲೆ ಇಲ್ಲದೇ ಇರೋ ಹಾಗಿರೋ ಇವತ್ತಿನ ದಿನಗಳಲ್ಲಿ ಈ ರೀತಿ ಹಾಕಿ ಕ್ರೀಡೆಗೆ ಪ್ರೋತ್ಸಾಹ ಕೊಡಿ ಅನ್ನೋ ಜಾಹೀರಾತು ಬರುತ್ತಿರೋದೆನೋ ಒಳ್ಳೆದೇ, ಆದ್ರೆ ಇದು ಜನರ ಮನಸ್ಸನ್ನ ತಲುಪೋಕೆ ಯಶಸ್ವಿ ಆಗುತ್ತಾ ಅನ್ನೋದು ಮಾತ್ರಾ ಬಲೇ ಅನುಮಾನಾ ಗುರು. ಯಾಕಂತೀರಾ? ಈ ಜಾಹೀರಾತುಗಳು ನಮ್ಮ ಜನರ ಭಾಷೇಲಿದ್ರೆ ತಾನೇ ಜನರಿಗೆ ಅರ್ಥ ಆಗೋದು, ಜನರ ಪ್ರೋತ್ಸಾಹ ಸಿಗೋದು ?


ಹಿಂಗ್ಲೀಷ್ ಜಾಹೀರಾತು - ದುಡ್ಡು ದಂಡ !


ಬೆಂಗಳೂರಲ್ಲಿ ಅಲ್ಲಲ್ಲಿ ಇಂಗ್ಲಿಷಲ್ಲಿ (ರೋಮನ್ ಲಿಪಿಯಲ್ಲಿ) ಬರೆದಿರೋ, ಹಿಂದಿ ವಾಕ್ಯಗಳು ಇರೋ ಜಾಹೀರಾತುಗಳನ್ನು ಹಾಕಿದಾರೆ. ಜನರಿಗೆ ಅರ್ಥ ಆಗದ ಭಾಷೇಲಿ ಅದೇನ್ ಬರುದ್ರು ಏನ್ ಬಂತು ಭಾಗ್ಯ? ಕ್ರಿಕೆಟ್‍ನ ಜನಪ್ರಿಯತೆಗೆ, ಅದರಲ್ಲೂ ವಿಶೇಷವಾಗಿ ಈಗಿನ ಐ.ಪಿ.ಎಲ್‍ನ ಜನಪ್ರಿಯತೆಗೆ ಆಯಾ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೇನಾ ಬಳಸ್ಕೊಂಡು ಪ್ರಚಾರ ಮಾಡ್ತಿರೋದು ಒಂದು ಮಟ್ಟಿಗೆ ಕಾರಣ ಅನ್ನೋದು ಸಕತ್ ನಿಜ. ಈಗ ಡಿ.ಎಲ್.ಎಫ್ ಐ.ಪಿ.ಎಲ್‍ನ ಸರಣಿಯ ಬಗ್ಗೆ ರೇಡಿಯೋ, ಟಿ.ವಿಗಳಲ್ಲಿ ಬರ್ತಿರೋ ಕನ್ನಡ ಜಾಹೀರಾತನ್ನೇ ನೋಡಿ. ಜಾಹೀರಾತು ಕೇಳ್ತಿದ್ರೆನೇ, ಜನಕ್ಕೆ ಆಟ ನೋಡಬೇಕು ಅನ್ನಿಸೋ ಹಾಗಿದೆ. ಹಾಕಿಯೋರು ಮಾತ್ರ ಅದೇನೆನೋ ಹಿಂದೀಲಿ ಬರ್ಕೊಂಡು ದುಡ್ಡು ದಂಡಾ ಮಾಡ್ತಾ ಇದ್ದಾರೆ ಅನ್ಸಲ್ವಾ ಗುರು?

2 ಅನಿಸಿಕೆಗಳು:

Priyank ಅಂತಾರೆ...

ಇದೇ ಫೋಟೊ ಇರೋ ಜಾಹೀರಾತು ಇವತ್ತಿನ ವಿಜಯ ಕರ್ನಾಟಕದಲ್ಲೂ ಬಂದಿದೆ.
ಹಿಂದಿ ವಾಕ್ಯಾನ ಕನ್ನಡ ಲಿಪಿಯಲ್ಲಿ ಬರ್ದಿದಾರೆ. ಯಾರಿಗೆ ಅರ್ಥ ಆಗುತ್ತೆ ಅಂದುಕೊಂಡಿದಾರೋ ಗೊತ್ತಿಲ್ಲ. ನೀವು ಹೇಳ್ದಂಗೆ, ದುಡ್ಡು ದಂಡಾನೇ ಗುರೂ.

vijayashankar metikurke ಅಂತಾರೆ...

ವಿಜಯಶಂಕರ ಮೇಟಿಕುರ್ಕೆ

ಇದು ಹ್ಯಾಗಿದೆ ಅಂದ್ರೆ ಹಿನ್ದಿ ಬರೋರು ಇಂಗ್ಲೀಷ್ ಬರದೆ ಇದ್ರೆ ಅಲ್ಲಿ ಬರಿದಿರೋದು ಏನು ಅಂತ ಓದುಲ್ಲ. ಇಂಗ್ಲೀಷ್ ಬಂದು ಹಿಂದಿ ಬರದೆ ಇದ್ರೆ ಓದಿದರು ಅದು ಅರ್ಥ ಅಂತು ಆಗುಲ್ಲ. ಕನ್ನಡಿಗರಿಗೆ ಅದು ಬ್ರಹ್ಮ ಲಿಪಿ. ನಮ್ಮ ದೇಶಾನ ದೇವರೆ ಕಾಪಾಡ ಬೇಕು. ಈಗೀಗ ರೇಡಿಯೊಗಳಲ್ಲಿ ಇದೆ ನಡೀತಾ ಇರೋದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails