ಈ "ನೋ ಪಾರ್ಕಿಂಗ್" ಬೋರ್ಡು ಮಸ್ತಾಗಿದೆ ನೋಡಿ!ಇವು ನಮ್ ಬೆಂಗಳೂರಲ್ಲೇ ಒಂದು ಬಡಾವಣೇಲಿ ಕಾಣೋ "ನೋ ಪಾರ್ಕಿಂಗ್" ಬೋರ್ಡುಗಳು ಗುರೂ! ಬೋ ಅಚ್ಚರಿ ಜೊತೇಗೆ ಖುಶಿ ಆಯ್ತು ಇವುನ್ನ ನೋಡಿ. ಯಾರಪ್ಪಾ ಈ ಕೆಲ್ಸ ಮಾಡಿರೋರು ಅಂತಾ ಇಚಾರ್ಸಮಾ ಅಂತಾ ಮನೆ ಯಜಮಾನ್ರುನ್ನ ಕೇಳುದ್ರೆ ಅವ್ರೇಳಿದ್ ಇಷ್ಟು.

ಬೆಂಗಳೂರಾಗೆ ಯಾವ ರೋಡಲ್ ನೋಡುದ್ರೂಮೆ ಎಲ್ಲಾರ್ ಮನೆ ಗೇಟಿನ್ ಮೇಲೆ ನೋ ಪಾರ್ಕಿಂಗ್ ಅನ್ನೋ ಬೋರ್ಡು ತಗುಲಾಕಿರ್ತಾರೆ. ಇಂಥಾ ಬೋರ್ಡಲ್ಲೂ ಕನ್ನಡತನದ ನೆನಪು ಮಾಡಿಕೊಡೋ ಕೆಲಸಾನಾ ಆ ಬಡಾವಣೇಲಿರೋ ಒಂದು ಸಂಸ್ಥೆಯೋರು ಮಾಡ್ತಾ ಔರಂತೆ.. ಓದ್ ವರ್ಸಾ ಆರಂಕುಸವಿಟ್ಟೊಡಂ ನೆನೆವುದೆನ್ನಮನಂ ಬನವಾಸಿ ದೇಸಮಂ, ಎಲ್ಲಾದರೂ ಇರು ಎಂತಾದರೂ ಇರು ಕನ್ನಡವಾಗಿರು ಅನ್ನೋ ಥರದ ಕವಿವಾಣಿಗಳ್ನ ಬಳ್ಸಿ ಇಂಥಾ ಬೋರ್ಡ್ ಮಾಡಿದ್ರಂತೆ. ಈ ಸಲ ಅದೇ ಬಡಾವಣೆಯಲ್ಲಿದ್ದ ಸಿ. ಅಶ್ವತ್ ಅವರನ್ನು ನೆನಪು ಮಾಡ್ಕೊಂಡು, ಜೊತೇಲಿ ವಿಷ್ಣೂನ ನೆನುಸ್ಕೊಳ್ಳೋ ಹಾಗೆ ಬೋರ್ಡ್ ಮಾಡವ್ರೆ!

ಬಸವನಗುಡಿಯಲ್ಲೊಂದು ಕನ್ನಡದ ಗುಡಿ!

ಬೆಂಗಳೂರು ದಕ್ಷಿಣದಲ್ಲಿ ಬಸವನಗುಡಿ ಇದೆ. ಇದರಲ್ಲಿ ನರಸಿಂಹರಾಜಾ ಕಾಲೋನಿ ಅನ್ನೋ ಪ್ರದೇಶಾನೂ ಇದೆ. ಇಲ್ಲಿ ಸುಮಾರು ವರ್ಷಗಳಿಂದ ಒಂದು ಗೆಳೆಯರ ಗುಂಪು ಸೇರ್ಕೊಂಡು ಸಂಗ ಮಾಡ್ಕಂಡವ್ರೆ. ಕಟ್ಟೆ ಬಳಗ ಅಂತಾ... ಈ ಕಟ್ಟೆಬಳಗದೋರು ಇಡೀ ಬಡಾವಣೆಯಲ್ಲಿ "ಗೇಟಿನ ಮುಂದೆ ಗಾಡಿ ನಿಲ್ಲುಸ್ಬೇಡಿ" ಅನ್ನೋ ಬೋರ್ಡುನ್ನ ಹಾಕವ್ರೆ, ಅದೂ ಪುಗಸಟ್ಟೆಯಾಗಿ. ಏನ್ ಪಸಂದಾಗ್ ಕಾಣ್ತೈತೆ ಗೊತ್ತಾ ಗುರೂ? ಬರ್ರಿ, ಒಂದ್ ದಪಾ ಎನ್.ಆರ್.ಕಾಲನಿ ಒಳಗಡೆ ಓಡಾಡಿ. ಇಂಥಾ ಕೆಲ್ಸಾನಾ ನಾವೂ ನಮ್ ನಮ್ ಬಡಾವಣೇಲಿ ಮಾಡಬೌದು ಅನ್ನೋ ಸಂದೇಶಾನಾ ಈ ಜನಾ ಕೊಡ್ತಾ ಅವ್ರೇ ಗುರೂ...

16 ಅನಿಸಿಕೆಗಳು:

Anonymous ಅಂತಾರೆ...

sheershikeyalli "masthaagaithe" andre saaladu. Enu masthaggaithe antha thilisabeku.

Aparna ಅಂತಾರೆ...

sakkat, chindi, super!!!

Anonymous ಅಂತಾರೆ...

Anonymous @ May 23, 2010 11:57 PM ,
yakkapa board kansalva nimaghe!! innu yenu beku.. masthagide..

Anonymous ಅಂತಾರೆ...

Na......n chindi chittranna

Govardhana ಅಂತಾರೆ...

sakkat sakkatagide :)

Madhu ಅಂತಾರೆ...

Board haakisdorigi... ondhu koti namana..

rajesh ಅಂತಾರೆ...

sakkatagaithe ...

Jayanth S ಅಂತಾರೆ...

thumba chennagide..olleya idea idu..!! :)

revathi ಅಂತಾರೆ...

chennagide chennagide....:)

Anonymous ಅಂತಾರೆ...

Narasimharaj coloneya KATTE BALAGAKKE Jai............
Super Idea guru, "An Idea can change your life" annothara
ee oopaya tumbane Suuuuper..................

sachin ಅಂತಾರೆ...

Saddillada kelasa andre edena guru :)!!!

Manu ಅಂತಾರೆ...

masthagide chennagilla. Aadare "Chennagide" chennagide

Jnaneshwara ಅಂತಾರೆ...

ಬಹಳ ಒಳ್ಳೆ ಕೆಲಸ

Hussain ಅಂತಾರೆ...

getina munde annokinta, baagila munde andre innu kannada padagalinda meradhagirutte :)

Padyana Ramachandra ಅಂತಾರೆ...

ಕನ್ನಡ ಭಾಷೆ ಮರೆಯಾಗುತಿರುವ ವಾತಾವರಣದ ನಡುವೆ ಇರುವ ಕರ್ನಾಟಕದ ರಾಜಧಾನಿ ಬೆಂಗಳೂರು ನಗರ.

ಬೆಂಗಳೂರು ನಗರದಲ್ಲಿರುವ ನರಸಿಂಹರಾಜ ಕಾಲೋನಿಯಲ್ಲಿ ಕನ್ನಡ ಭಾಷೆಯ "ನೋ ಪಾರ್ಕಿಂಗ್" ಬೋರ್ಡುಗಳನ್ನು ಅಳವಡಿಸದ ಬೆಂಗಳೂರಿನ ಕನ್ನಡ ಪ್ರೇಮಿಗಳಿಗೆ ವಂದನೆಗಳು.

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್

Padyana Ramachandra ಅಂತಾರೆ...

ಕನ್ನಡ ಭಾಷೆಯ "ನೋ ಪಾರ್ಕಿಂಗ್" ಬೋರ್ಡುಗಳನ್ನು ಅಳವಡಿಸಿದ ಬೆಂಗಳೂರಿನ ಕನ್ನಡ ಪ್ರೇಮಿಗಳಿಗೆ ವಂದನೆಗಳು.

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails