ನಮ್ ಕಾಡೊಳಿಕ್ ನುಗ್ತಿರೋ ಪುಂಡುದನಗೋಳ್ನ ತಡ್ಯೋರು ಯಾರು?

ನಮ್ಮ ಬಂಡೀಪುರದ ಕಾಡೊಳಕ್ಕೆ ಪಕ್ಕದ್ ಕೇರಳದಿಂದ ಪ್ರವಾಸಿಗಳು ಬಂದು ಕಾಡ್ನ ಎಕ್ಕುಟ್ಟುಸ್ತಾ ಔರೆ ಅನ್ನೋ ಒಂದ್ ಸುದ್ದಿ ಇತ್ತೀಚ್ಗೆ "ದಿ ಹಿಂದೂ" ಪೇಪರ‍್ನಾಗ್ ಬಂದೈತೆ ಗುರೂ! ಅಲ್ಲಾ... ನಮ್ ನಾಡಲ್ಲಿ ಈ ಮಟ್ಟಿಗೆ ಏಳೋರು ಕೇಳೋರು ಇಲ್ದಂಗ್ ಆಗೋಯ್ತಾ? ನಮ್ ಪೊಲೀಸು, ಕಾಡಾಪೀಸೋರು ಎಲ್ಲಾ ಏನ್ ಕಳ್ಳೆಪುರಿ ತಿಂತಾ ಔರಾ ಅಂತಾ ನಾಡ್ ಜನವೆಲ್ಲಾ ಉರ‍್ಕೊಂಡ್ ಎಗುರ್ ಬೀಳ್ತಾ ಔರಂತೆ ಗುರೂ!


ರಕ್ಸಿತ ಅರಣ್ಯ ಪ್ರದೇಸ!


ಈ ಬಂಡೀಪುರ ಅನ್ನೋದೇ ಒಂಥರಾ ಆನೆ, ಕಾಡ್‍ಕ್ವಾಣ, ಉಲಿ, ಜಿಂಕೆ, ಆವು ಅಂತಾ ಪಿರಾಣಿಗಳಿಗೆ ಸ್ವರ್ಗಾ ಇದ್ದಂಗೆ. ಇವೆಲ್ಲಾ ದೇಸುದ್ ಸಂಪತ್ತು ಅಂತಾ ಇವುನ್ನ ಕಾಪಾಡ್ಕೊಂಬೇಕು ಅಂತಾನೇ ಇಡೀ ಕಾಡುನ್ನ ರಕ್ಸಿತ ಪ್ರದೇಸ ಅಂತಾ ಮಾಡವ್ರೆ. ಅಲ್ಲಿ ಅರಣ್ಯ ಇಲಾಖೆಯೋರು ಇರೋ ೯೯೦ ಚ.ಕೀ ಜಾಗದಲ್ಲಿರೋ ೩೨ ಚ.ಕೀ ಅಷ್ಟ್ ಜಾಗಾನ ಪ್ರವಾಸೋದ್ಯಮಕ್ಕೆ ಅಂತಾ ಬುಟ್ಕಂಡವ್ರೆ. ಆದ್ರೆ ಗುಂಡ್ರೆ, ಬೇಗೂರ್ ಅನ್ನೋ ಕಾಡ್ ಪ್ರದೇಶಕ್ಕೆ ಕೇರಳದ್ ಕಡೆಯಿಂದ ಉಂಡಾಡಿ ದನಗೋಳಂಗೆ ಮಜಾ ಮಾಡಕ್ಕೆ ಜನುಗೋಳ್ ಬಂದ್ ಓಯ್ತಿರ್ತಾರಂತೆ. ಇಂಗ್ ಬರೋರಿಂದ ಇಲ್ಲಿ ಕಾಡು ಪ್ರಾಣಿಗಳ ನೆಮ್ಮದಿ ಎಕ್ಕುಟ್ ಓಗಿದೆಯಂತೆ. ಅದೂ ಅಲ್ದೆ ಅಂಗ್ ಬರೋರ ಪ್ರಾಣುಕ್ ಏನಾರ ಎಚ್ಚೂ ಕಮ್ಮಿ ಆಯ್ತೂಂದ್ರೆ ನಾಳೆ ಅದುಕ್ ಯಾರ್ ಒಣೆ ಅಂತಾ. ಇದ್ಯಾಕೋ ಸರೀಗಿಲ್ಲಾ ಗುರೂ! ಇಂಗ್ ಬರೋ ಬಡ್ಡೆತ್ತವುನ್ನ ಕಂಟ್ರೋಲ್ ಮಾಡಕ್ಕೆ ಕೇರಳ ಸರ್ಕಾರದೋರು ಕ್ರಮಾ ತೊಗೊಂಬೇಕು. ಇಲ್ಲಾ ಅಂದ್ರೆ ನಮ್ ಕಾಡು ಕಾಯೋ ಪೋಲೀಸ್ನೋರಾದ್ರೂ ಸರಿಯಾದ್ ಕಡೆ ಅಂದ್ರೆ ಎಲ್ಡೂ ರಾಜ್ಯಾ ಸೇರೋ ಸೇತುವೇ ತಾವ ಬಲವಾದ ಕಾವಲು ಹಾಕ್ಬೇಕು. ಮೊನ್ ಮೊನ್ನೆ ತಾನೆ ಕೇರಳುದ್ ಸರ್ಕಾರದೋರು ಕರ್ನಾಟಕದ್ ಕಾಡು, ಕಾಡುಪ್ರಾಣಿ ಎಲ್ಲಾ ಆಳಾದ್ರೂ ಪರ್ವಾಗಿಲ್ಲಾ, ರಾತ್ರಿ ಓಡಾಡಕ್ ರಸ್ತೇಲಿ ಬುಡಬೇಕು ನಮ್ ಗಾಡಿಗೋಳ್ಗೆ ಅವಕಾಸ ಕೊಡಬೇಕು ಅನ್ನೋ ಕೂಗೆಬ್ಬಿಸಿ ಲಾಬಿ ಮಾಡ್ತಾ ಇದ್ದುದ್ ಸುದ್ದಿ ಬಂದಿತ್ತು. ಈಗ್ ನೋಡುದ್ರೆ ಜನ್ರು ಕಾಟ. ಒಟ್ನಲ್ಲಿ ನಮ್ ಕರ್ನಾಟಕದಾಗಿರೋ ನೀರು, ಕಾಡು, ರೋಡು ಎಲ್ಲಾನೂ ಒಳ್ಳೇ ತ್ವಾಟದಪ್ಪನ್ ಚತ್ರುದ್ ಥರಾ ಆಗೋಗದೇ ಅಂತಾ ಜನ ಮುನುಸ್ಕೊಂಡ್ ಕುಂತವ್ರೇ ಗುರೂ!

4 ಅನಿಸಿಕೆಗಳು:

TANG ಅಂತಾರೆ...

oudu..

rackesh ಅಂತಾರೆ...

Rocks !

Ramesh Joshi ಅಂತಾರೆ...

ಮೊದಲು ನಮ್ಮ ಸರಕಾರ ಇದಕ್ಕೆಲ ತಲೆ ಕುಣಿಸ ಬಾರದು. ನಮ್ಮ ಹಾಗೆ ಎಲ್ಲಾ ಪ್ರಾಣಿಗಳಿಗೂ/ಪಕ್ಷಿಗಳಿಗೂ ಬದುಕುವ ಹಕ್ಕಿದೆ, ನಮ್ಮ ನಾಡಿನಲ್ಲಿ ಅವುಗಳಿಗೆ ವಳ್ಳೆ ಸ್ತಾನವನ್ನ ಕೊಟ್ಟಿದ್ದೇವೆ ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ .

chinnu ಅಂತಾರೆ...

mallu huLagaLu.. chandralokakk hodru bandubidtaave..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails