ಹಿಂದಿಯ "ಕೈಟ್" ಹಾರಾಟಕ್ಕೆ ತಕರಾರೇಕೆ?

ಮೊನ್ನೆ ಶುಕ್ರವಾರ (21.05.2010) ಹಿಂದಿ ಭಾಷೆಯ "ಕೈಟ್ಸ್" ಅನ್ನೋ ಸಿನಿಮಾ ಎಲ್ಲಾ ಕಡೆ ಬಿಡುಗಡೆ ಆಯ್ತು. ಕರ್ನಾಟಕದಲ್ಲಿ ಮಾತ್ರಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರು ವಿರೋಧಿಸಿದ್ದರಿಂದ ಅನೇಕ ಕಡೆ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿಲ್ಲ. ಈ ವಿರೋಧಕ್ಕೆ "ಕೈಟ್ಸ್" ಚಿತ್ರದ ವಿತರಕರು ಬಿಡುಗಡೆಯ ನಿಯಮ ಉಲ್ಲಂಘಿಸಿದ್ದೇ ಮುಖ್ಯಕಾರಣವಾಗಿತ್ತು. ಕಡೆಗೆ ಈ ಚಿತ್ರದ ವಿತರಕರು ವಾಣಿಜ್ಯ ಮಂಡಳಿಯ ಜೊತೆ ಮಾತುಕತೆಗೆ ಮುಂದಾಗಿ ತಮ್ಮದು ತಪ್ಪಾಯ್ತು ಅಂತಂದು ನಿಯಮದಂತೆ ಚಿತ್ರ ಬಿಡುಗಡೆಗೆ ಒಪ್ಪುದ್ರು. ಹಾಗಾಗಿ ನಿಯಮದಾಚೆಗೂ ಮೂರು ನಾಕು ಕಡೆ ಹೆಚ್ಚಿಗೆ ಬಿಡುಗಡೆಗೂ ಒಪ್ಪಿಗೆ ಪಡ್ಕೊಂಡ್ರು. ಒಟ್ನಲ್ಲಿ ಸದ್ಯಕ್ಕೆ ಒಳ್ಳೇ ಅಂತ್ಯಾನೆ ಕಂಡಿದೆ.

ಏನೀ ನಿಯಮ? ಯಾಕೀ ವಿರೋಧಾ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಕನ್ನಡ ಚಿತ್ರಗಳ ಮಾರುಕಟ್ಟೆ ಕಾಪಾಡೋ ದೃಷ್ಟಿಯಿಂದ ಪರಭಾಷಾ ಚಿತ್ರಗಳ ಬಿಡುಗಡೆಯ ಮೇಲೆ ಕಡಿವಾಣ ಹಾಕೋಕೆ ಅಂತ ಹಲವು ನಿಯಮಗಳನ್ನು ರೂಪಿಸಿದ್ದಾರೆ. ಅದರಂತೆ ಕನ್ನಡೇತರ ಚಿತ್ರಗಳು ಕರ್ನಾಟಕದಾದ್ಯಂತ ಒಟ್ಟು 17+4 ಚಿತ್ರಮಂದಿರಗಳಿಗಿಂತ ಹೆಚ್ಚು ಕಡೆ ಬಿಡುಗಡೆ ಆಗುವಂತಿಲ್ಲ. ಈ ನಿಯಮಕ್ಕೆ ವಾಣಿಜ್ಯ ಮಂಡಳಿಯ ಸದಸ್ಯರುಗಳು ಒಳಗಾಗ್ತಾರೆ. ಆದ್ರೆ ಈ ನಿಯಮ ಮೀರೋ ಕೆಲಸ ಆಗಾಗ ಆಗ್ತಾ ಇರುತ್ತೆ. ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆ ಆಗೋ ಸಂದರ್ಭದಲ್ಲೆಲ್ಲಾ ಇದು ಮತ್ತಷ್ಟು ತೀವ್ರತೆ ಪಡ್ಕೊಳುತ್ತೆ. ಹಿಂದೆ ಅನೇಕ ಚಿತ್ರಗಳ ಬಿಡುಗಡೆ ಕಾಲದಲ್ಲಿ ಹೀಗೆ "ಜಂಟಲ್‍ಮನ್ ಅಗ್ರಿಮೆಂಟ್"ನ ಧಿಕ್ಕರಿಸೋದು ನಡೆದಿದೆ. ಈ ಬಾರಿಯೂ ಹಾಗೇ ನಿಯಮವನ್ನು ಗಾಳಿಗೆ ತೂರಿ "ಕೈಟ್ಸ್" ಸಿನಿಮಾನ ಕರ್ನಾಟಕದಲ್ಲಿ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಮುಂದಾಗಿದ್ದರಿಂದ ವಿರೋಧ ಹುಟ್ಟಿತ್ತು.

ಹೀಗೆ ಮಾಡೋದು ಸರೀನಾ?

ಇಂಥಾ ಒಂದು ಪ್ರಶ್ನೆ ಹುಟ್ಟೋದು ಸಹಜ. ನಮ್ಮಲ್ಲೇ ಕೆಲಜನರಿಂದ "ಒಂದು ಸಿನಿಮಾ ತೆಗೆಯೋನು ಅವನಿಷ್ಟ ಬಂದಷ್ಟು ಕಡೆ ಬಿಡುಗಡೆ ಮಾಡ್ಲಿ, ಚೆನ್ನಾಗಿದ್ರೆ ಓಡುತ್ತೆ, ಇವರೂ ಗುಣಮಟ್ಟದ ಸಿನಿಮಾ ತೆಗೀಲಿ, ಕಲೆಗೆ ಭಾಷೆ ಇಲ್ಲಾ..." ಮುಂತಾದ ಉದಾರತೆಯ ಉಪದೇಶದ ಆಣಿಮುತ್ತುಗಳು ಉದುರೋದೂ ಸಹಜ. ಆದರೆ ಪ್ರತಿ ಪ್ರದೇಶವೂ ತನ್ನ ಅನನ್ಯತೆಯನ್ನು ಉಳಿಸಿಕೊಳ್ಳೋಕೆ ಅಗತ್ಯವಿರೋ ವ್ಯವಸ್ಥೆ ಮಾಡಿಕೊಳ್ಳದೇ ಇದ್ದರೆ ತನಗಿಂತ ಬಲಶಾಲಿಗಳಾದ ಪರಕೀಯರ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೆ. ಈಗ ನೋಡಿ, ಕರ್ನಾಟಕದಲ್ಲಿ ಇರೋದೇ ಸುಮಾರು 600 ಚಿತ್ರಮಂದಿರಗಳು. ಅದರಲ್ಲಿ 120 ಚಿತ್ರಮಂದಿರಗಳನ್ನು ಇದೊಂದೇ ಸಿನಿಮಾ ಆಕ್ರಮಿಸಿಕೊಂಡು ಬಿಟ್ರೆ ಕನ್ನಡ ಚಿತ್ರಗಳ ಗತಿ ಏನು? ಈಗಾಗಲೇ ಓಡ್ತಿರೋ ಆಪ್ತರಕ್ಷಕ, ಪೃಥ್ವಿ, ನಾನು ನನ್ನ ಕನಸುವಿನಂತಹ ಯಶಸ್ವಿ ಚಿತ್ರಗಳು ಎತ್ತಂಗಡಿ ಆಗಲ್ಲಾ ಅನ್ನೋಕೆ ಏನು ಭರವಸೆ? ಇನ್ನು ಹೊಸದಾಗಿ ಬಿಡುಗಡೆ ಆದ ಶಂಕರ್ ಐ.ಪಿ.ಎಸ್, ನೂರು ಜನ್ಮಕೂ ಥರದ ಚಿತ್ರಗಳಿಗೆ ಚಿತ್ರಮಂದಿರಗಳು ಸಿಕ್ಕಾವಾ? ಹಿಂದಿ, ತಮಿಳು, ತೆಲುಗು, ಇಂಗ್ಲೀಷ್ ಸೇರಿದಂತೆ ಪರಭಾಷಾ ಚಿತ್ರಗಳಿಗೆ ಕರ್ನಾಟಕ ಪ್ರಾಥಮಿಕ ಮಾರುಕಟ್ಟೆಯಲ್ಲ. ಆ ಕಾರಣದಿಂದಲೇ ಸಮಂಜಸವಲ್ಲದ ಮಾರುಕಟ್ಟೆಗಳ ತಂತ್ರ ಬಳಸಬಲ್ಲರು. ಆದರೆ ಕನ್ನಡ ಚಿತ್ರಗಳಿಗೆ ಕರ್ನಾಟಕವೇ ಮೂಲ ಮಾರುಕಟ್ಟೆ ಆಗಿದೆ. ಹಾಗಾಗಿ ಇಲ್ಲಿ ಕನ್ನಡ ಚಿತ್ರಗಳನ್ನು ಕಾಪಾಡೋ ಕೆಲಸಕ್ಕೆ ಕನ್ನಡಿಗರು ಸಂಪೂರ್ಣ ಬೆಂಬಲ ಕೊಡಬೇಕಾಗಿದೆ, ಅಲ್ವಾ ಗುರೂ?

6 ಅನಿಸಿಕೆಗಳು:

Ajay ಅಂತಾರೆ...

This problem will never end unless general public come out and demand for their rights.

Govardhana ಅಂತಾರೆ...

kannaDada eshTo chitragaLige ee varege mosa aagide. kabbaDDi, jugaari, innu hattu halavu cinema gaLu ee mosakke tuttagive. monne taane antaraatma kooDa intha ondu kashTakke biddittu!!
karnatakadalle kannada cinema heegadre devre gati!!

idanna chalanachitra vaaNijya manDali avru gambheera vaage tagobeku!!

maaysa ಅಂತಾರೆ...

bhalle..machuge..

srihari ಅಂತಾರೆ...

bombaat

msramz ಅಂತಾರೆ...

bere baashe gaalipata karnatakadalli harali beda annalla
aadhre namm gaalipatakke kokke haakbedi, kannadadha chitragalu karnataka dalli haralu aakasha (avakasha) beke beku.

chamber navru ee niyamana yella parabashe chitragala melu anvayisabeku

ಪುಟ್ಟ PUTTA ಅಂತಾರೆ...

ಇಂಥ ವಿಷಯಗಳಲ್ಲಿ ಕನ್ನಡಿಗರು ತಮ್ಮ ಅದಿಪತ್ಯ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ಇಲ್ಲವಾದಲ್ಲಿ ನಮಗೆ ಈ ನಾಡಲ್ಲಿ ಉಳಿಗಾಲವಿಲ್ಲ. ಮೂರ್ನಾಲ್ಕು ಹೆಚ್ಚು ಚಿತ್ರ ಮಂದಿರಗಳಲ್ಲೂ ಬಿಟ್ಟು ಕೊಡಬಾರದಿತ್ತು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails