ಬೆಡಗಿನ ರಾಜಕಾರಣಿ ಬಂಗಾರಪ್ಪನವರಿನ್ನಿಲ್ಲ!

ಮಾಜಿ ಮುಖ್ಯಮಂತ್ರಿಗಳೂ ಹಿಂದಿನ ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್ ಪಕ್ಷದ ಸ್ಥಾಪಕರೂ ಆಗಿದ್ದ ಶ್ರೀ ಸಾರೆಕೊಪ್ಪದ ಬಂಗಾರಪ್ಪನವರು ನಿನ್ನೆ ರಾತ್ರಿ ತೀರಿಕೊಂಡಿದ್ದಾರೆ.

ಕರ್ನಾಟಕ ರಾಜಕಾರಣದ ಅತ್ಯಂತ ಬೆಡಗಿನ ರಾಜಕಾರಣಿಯಾಗಿದ್ದ ಬಂಗಾರಪ್ಪನವರು ಹಿಂದೊಮ್ಮೆ ಸ್ವಂತ ಪಕ್ಷ ಕಟ್ಟಿ ಹತ್ತು ಶಾಸಕರನ್ನು ಗೆಲ್ಲಿಸಿಕೊಂಡಿದ್ದರು.

ಕಾವೇರಿ ತೀರ್ಪಿನ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ಶ್ರೀಯುತರು ತಮ್ಮ ಗಟ್ಟಿ ನಿಲುವಿನಿಂದಾಗಿ ನಾಡಿನಲ್ಲಿ ಹೆಸರು ಗಳಿಸಿದ್ದರು. ಹೀಗೆ ಸುಗ್ರೀವಾಜ್ಞೆ ಹೊರಡಿಸಿದ ಕಾರಣಕ್ಕೆ ಅಧಿಕಾರ ಕಳೆದುಕೊಳ್ಳಲೂ ಸಿದ್ಧವಾಗಿದ್ದ ಇವರು ನಾಡಪರವಾಗಿ ಅಂದು ತೋರಿದ್ದ ಗಟ್ಟಿತನ ಇಂದಿನವರಿಗೂ ಮಾದರಿಯಾಗಿದೆ.

ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಬನವಾಸಿ ಬಳಗ ಶ್ರದ್ಧಾಂಜಲಿ ಅರ್ಪಿಸುತ್ತದೆ.

1 ಅನಿಸಿಕೆ:

Ittigecement ಅಂತಾರೆ...

ನನ್ನ ಗೆಳೆಯ ಸೀತಾರಾಮ್ ಭಟ್ ಅನ್ನುವವರಿಗೆ ನೌಕರಿಯ ಅವಶ್ಯಕತೆ ಬಹಳ ಇತ್ತು..
ಇವರು ಜಾತಿ ವಿರೋಧಿ ಅನ್ನುವ ಭಾವನೆ ನಮಗೆಲ್ಲ ಇತ್ತು..
ಹಲವಾರು ರಾಜಕೀಯ ಧುರಿಣರನ್ನು ಭೇಟಿ ಮಾಡಿ..
ನಂತರ ಬಂಗಾರಪ್ಪನವರನ್ನು ಭೇಟಿ ಮಾಡಲು ಹೋದೆವು..

ನಮಗೆ ಆದರದ ಸ್ವಾಗತ..
ಒಂದು ಲೋಟ ಹಾಲು ಕೊಟ್ಟು ಸತ್ಕರಿಸಿ..
ನನ್ನ ಗೆಳೆಯನಿಗೆ ಬ್ಯಾಂಕಿನಲ್ಲಿ ಕೆಲಸವನ್ನೂ ಕೊಡಿಸಿದರು..

ನನ್ನ ಗೆಳೆಯನ ಮನೆಯಲ್ಲಿ ದೇವರ ಫೋಟೊಕ್ಕಿಂತ ದೊಡ್ಡದಾದ ಫೋಟೊ ಹಾಕಿದ್ದಾರೆ..

ಕಡು ಬಡತನದ ಹಸಿವು ಅನುಭವಿಸಿದ ನನ್ನ ಗೆಳೆಯನಿಗೆ "ಬಂಗಾರಪ್ಪ" ದೇವರ ಸ್ಥಾನದಲ್ಲಿದ್ದಾರೆ..

ರಾಜಕೀಯವಾಗಿ ವಿರೋಧವಿದ್ದವರೂ ಬಂಗಾರಪ್ಪನವರ ಮಾನವೀಯತೆ ಗುಣಗಳನ್ನು ಮೆಚ್ಚಿಕೊಳ್ಳುತ್ತಾರೆ..
ಇಂಥಹ ಗುಣಗಳಿಂದ ಬಂಗಾರಪ್ಪ ಇಷ್ಟವಾಗುತ್ತಾರೆ...
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails