ನಮ್ಮ ಮೆಟ್ರೋ ಮಾಹಿತಿ ಕೋರಿಕೆ ಅರ್ಜಿ: ಮೇಲ್ಮನವಿ ಸಲ್ಲಿಸಿದ ಅರ್ಜಿದಾರ!


ಕಳೆದ ತಿಂಗಳಲ್ಲಿ ಬೆಂಗಳೂರಿನ ನಮ್ಮ ಮೆಟ್ರೋಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದ ಗೆಳೆಯರು ಮತ್ತೊಮ್ಮೆ ಪತ್ರ ಬರೆದಿದ್ದಾರೆ. ಅವರಿಗೆ ನಮ್ಮ ಮೆಟ್ರೋ ಅಧಿಕಾರಿಗಳಿಂದ ಇದುವರೆವಿಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ. ಸರಿ... ಇವರೂ ನೋಡೋ ತನಕಾ ನೋಡಿದಾರೆ, ಕೊನೆಗೆ ಮೇಲ್ಮನವಿ ಸಲ್ಲಿಸೇ ಬಿಡೋಣ ಎಂದು ತೀರ್ಮಾನಿಸಿ ಮೆಟ್ರೋ ಕಚೇರಿಗೆ ಭೇಟಿ ಕೊಟ್ಟರಂತೆ.

"ನಮ್ಮ ಮೆಟ್ರೋ ಸಂಸ್ಥೆಯ ಅಧಿಕಾರಿಗಳು ಆರ್.ಟಿ.ಐಗೆ ಇನ್ನೂ ಉತ್ತರಿಸಿಲ್ಲ" ಎಂದು ತಿಳಿಸಿ, ನಮ್ಮ ಮೆಟ್ರೋದ ಅಪೆಲ್ಲೆಟ್ (ಮೇಳರ್ಜಿ ಸ್ವೀಕರಿಸುವ) ಅಧಿಕಾರಿಗಳಿಗೆ ಮೊದಲನೇ ಮೇಲ್ಮನವಿಯನ್ನು ಸಲ್ಲಿಸಲು ತೀರ್ಮಾನಿಸಿದ್ದಾರೆ. ಅದರಂತೆಯೇ ನಿನ್ನೆ ಅಂದರೆ ೧೪.೧೧.೨೦೧೧ರಂದು ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯ ಅನ್ವಯವಾಗಿ ಮೊದಲ ಮೇಲ್ಮನವಿಗೆ ಮೂವತ್ತು ದಿನಗಳ ಒಳಗೆ ಉತ್ತರಿಸಬೇಕಾಗಿದೆ. ಇನ್ನು ಹದಿನೈದು ದಿನಗಳ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಬಹುದಾಗಿದ್ದರೂ ಅದಕ್ಕೆ ಸೂಕ್ತ ಕಾರಣವನ್ನು ತೋರಿಸಬೇಕಾಗಿರುತ್ತದೆ. ಈ ಮೇಲ್ಮನವಿಗೂ ನಮ್ಮ ಮೆಟ್ರೋ ಸ್ಪಂದಿಸದಿದ್ದರೆ ಕೇಂದ್ರ/ ರಾಜ್ಯ ಮಾಹಿತಿ ಆಯೋಗಕ್ಕೆ ದೂರನ್ನು ಸಲ್ಲಿಸಬಹುದಾಗಿರುತ್ತದೆ.

"ನೋಡೋಣ... ಮೆಟ್ರೋ ಅಧಿಕಾರಿಗಳು ಎಲ್ಲಿಯವರೆಗೆ ಇದನ್ನು ಒಯ್ಯುತ್ತಾರೆಂದು..." ಎಂದು ಅರ್ಜಿದಾರರು ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ.

1 ಅನಿಸಿಕೆ:

ಜಗದೀಶ್ ಶೆಟ್ಟರ್ ಅಂತಾರೆ...

"ಅಸ್ಸಾಂಗಿಂತ ಬೆಂಗಳೂರು ಅತ್ಯಂತ ಸುರಕ್ಷಿತವಾಗಿದ್ದು, ಇಲ್ಲಿ ವಾಸವಿರುವ ಜನರು ಅಸ್ಸಾಂ ಮತ್ತಿತರ ರಾಜ್ಯಗಳಿಗೆ ತೆರಳಬಾರದು, ನಿಮ್ಮ ಪ್ರಾಣಕ್ಕೆ ಯಾವುದೇ ಬೆದರಿಕೆ ಇಲ್ಲ, ಯಾವುದೇ ವದಂತಿಗಳಿಗೆ ಕಿವಿಗೊಡಬಾರದು" ಎಂದು ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಸ್ಸಾಂ ಜನತೆಗೆ ಕರೆ ನೀಡಿದ್ದಾರೆ.

The reason for using the three languages. :)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails