೭೮ನೇ ಕನ್ನಡ ನುಡಿಹಬ್ಬವು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಇದೇ ತಿಂಗಳ ೯ನೇ ತಾರೀಕಿನಂದು ಶುರುವಾಗಲಿದೆ. ಈ ಬಾರಿಯೂ ಅನೇಕ ಗೋಷ್ಟಿಗಳನ್ನು ಏರ್ಪಡಿಸಿದ್ದಾರೆ. ನಾಡಿನ ಸಾಹಿತ್ಯ ರಂಗದ ದಿಗ್ಗಜರು ಸೇರಲಿದ್ದಾರೆ. ಈ ಸಂದರ್ಭದಲ್ಲೊಂದು ಹೊತ್ತಗೆ ಮೇಳವನ್ನೂ ಆಯೋಜಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಬಳಗದ ಮಳಿಗೆ
ಬನವಾಸಿ ಬಳಗವೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದು ನಮ್ಮದೊಂದು ಮಳಿಗೆಯನ್ನು ಅಲ್ಲಿ ಇಡುತ್ತಿದ್ದೇವೆ. ಬನವಾಸಿ ಬಳಗ ಪ್ರಕಾಶನದ ಹೊತ್ತಗೆಗಳ ಜೊತೆಯಲ್ಲಿ ನಾಡೋಜ ಡಾ. ಡಿ ಎನ್ ಶಂಕರಭಟ್ಟರ ಹೊತ್ತಗೆಗಳನ್ನೂ ಅಲ್ಲಿ ರಿಯಾಯಿತಿ ದರದಲ್ಲಿ ಮಾರಲಿದ್ದೇವೆ.
ಶಂಕರಭಟ್ಟರ ಹೊಸ ಹೊತ್ತಗೆ!
ಡಾ. ಡಿ ಎನ್ ಶಂಕರಭಟ್ಟರ ಹೊಸ ಹೊತ್ತಗೆ "ಮಾತು ಮತ್ತು ಬರಹದ ನಡುವಿನ ಗೊಂದಲ"ವನ್ನು ನಮ್ಮ ಮಳಿಗೆಯಲ್ಲಿ ಮಾರಾಟಕ್ಕೆ ಇಡಲಿದ್ದೇವೆ. ಈ ಹೊತ್ತಗೆಯು ಈ ಮೂಲಕ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ. ನುಡಿ ಅಧ್ಯಯನದ ಹೊಸ ಕಂಡುಕೊಳ್ಳುವಿಕೆಯ ಬಗ್ಗೆ ಇರುವ ಅನೇಕ ಗೊಂದಲಗಳಿಗೆ/ ಪ್ರಶ್ನೆಗಳಿಗೆ ಈ ಹೊತ್ತಗೆಯಲ್ಲಿ ಭಟ್ಟರು ಸಮರ್ಪಕವಾಗಿ ಉತ್ತರಿಸಿದ್ದಾರೆ.
ನೀವೂ ಬನ್ನಿ, ಸಮ್ಮೇಳನದಲ್ಲಿ ಪಾಲ್ಗೊಳ್ಳಿ...
ಮಳಿಗೆ ಸಂಖ್ಯೆ: ೩೭೬ಕ್ಕೆ ಭೇಟಿ ನೀಡಿರಿ.ಸಾಹಿತ್ಯ ಸಮ್ಮೇಳನದಲ್ಲಿ ಬಳಗದ ಮಳಿಗೆ
ಬನವಾಸಿ ಬಳಗವೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದು ನಮ್ಮದೊಂದು ಮಳಿಗೆಯನ್ನು ಅಲ್ಲಿ ಇಡುತ್ತಿದ್ದೇವೆ. ಬನವಾಸಿ ಬಳಗ ಪ್ರಕಾಶನದ ಹೊತ್ತಗೆಗಳ ಜೊತೆಯಲ್ಲಿ ನಾಡೋಜ ಡಾ. ಡಿ ಎನ್ ಶಂಕರಭಟ್ಟರ ಹೊತ್ತಗೆಗಳನ್ನೂ ಅಲ್ಲಿ ರಿಯಾಯಿತಿ ದರದಲ್ಲಿ ಮಾರಲಿದ್ದೇವೆ.
ಶಂಕರಭಟ್ಟರ ಹೊಸ ಹೊತ್ತಗೆ!
ಡಾ. ಡಿ ಎನ್ ಶಂಕರಭಟ್ಟರ ಹೊಸ ಹೊತ್ತಗೆ "ಮಾತು ಮತ್ತು ಬರಹದ ನಡುವಿನ ಗೊಂದಲ"ವನ್ನು ನಮ್ಮ ಮಳಿಗೆಯಲ್ಲಿ ಮಾರಾಟಕ್ಕೆ ಇಡಲಿದ್ದೇವೆ. ಈ ಹೊತ್ತಗೆಯು ಈ ಮೂಲಕ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ. ನುಡಿ ಅಧ್ಯಯನದ ಹೊಸ ಕಂಡುಕೊಳ್ಳುವಿಕೆಯ ಬಗ್ಗೆ ಇರುವ ಅನೇಕ ಗೊಂದಲಗಳಿಗೆ/ ಪ್ರಶ್ನೆಗಳಿಗೆ ಈ ಹೊತ್ತಗೆಯಲ್ಲಿ ಭಟ್ಟರು ಸಮರ್ಪಕವಾಗಿ ಉತ್ತರಿಸಿದ್ದಾರೆ.
ನೀವೂ ಬನ್ನಿ, ಸಮ್ಮೇಳನದಲ್ಲಿ ಪಾಲ್ಗೊಳ್ಳಿ...
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!