ಇತ್ತೀಚಿಗೆ ಹೆಸರಾಂತ ಕ್ರಿಕೆಟ್ ಬಣ್ಣನೆಗಾರರಾದ ಶ್ರೀ ಹರ್ಷ ಬೋಗ್ಲೆಯವರು ಭಾರತೀಯ ಕ್ರಿಕೆಟನ್ನು ಬಲಪಡಿಸೋ ದಿಕ್ಕಿನಲ್ಲಿ ಏನೇನು ಮಾಡಬೇಕು ಅಂತಾ ಮಾತಾಡಿರೋ ಸುದ್ದಿ ಪ್ರಕಟವಾಗಿದೆ. ಬಲಶಾಲಿಯಾದ ರಾಷ್ಟ್ರೀಯ ತಂಡವೊಂದನ್ನು ಹುಟ್ಟುಹಾಕುವಲ್ಲಿ ಅನುಕೂಲವಾಗುವಂತೆ ರಣಜಿ ತಂಡಗಳನ್ನು ಮರುರೂಪಿಸಬೇಕು ಎಂದಿರುವ ಅವರ ಮಾತುಗಳು ಒಂದಿಷ್ಟು ಬೇರೆಯೇ ಆಲೋಚನೆಗೆ ಹಚ್ಚುವಂತಿವೆ! ಅವರೇನೋ ಈಗಿರುವ ೨೭ ತಂಡಗಳನ್ನು ಹನ್ನೆರಡಕ್ಕೆ ಇಳಿಸುವ ಮೂಲಕ ಗುಣಮಟ್ಟ ಹೆಚ್ಚಿಸಬಹುದು ಎಂದಿದ್ದಾರೆ. ಆದರೆ...
ಭಾರತ ತಂಡ ವಿಶ್ವ ಕ್ರಿಕೆಟ್ಟಿನಲ್ಲಿ ದೊಡ್ಡ ಹೆಸರಾಗಿರುವುದು ತನ್ನ ಸಾಧನೆಗಿಂತಲೂ ಹೆಚ್ಚಾಗಿ ತಾನು ಹೊಂದಿರುವ ದೊಡ್ಡ ಸಂಖ್ಯೆಯ ಅಭಿಮಾನಿಗಳ ಕಾರಣದಿಂದ ಎಂದರೆ ತಪ್ಪಾಗಲಾರದು. ತೀರಾ ಇತ್ತೀಚಿನವರೆಗೆ ಅಷ್ಟೇನೂ ಯಶಸ್ಸು ಕಂಡಿಲ್ಲದ ತಂಡಗಳಲ್ಲಿ ಭಾರತವೂ ಒಂದು (೪೬೨-ಟೆಸ್ಟ್, ೧೧೨-ಗೆಲುವು, ೧೪೬-ಸೋಲು). ಮೊದಲೆಲ್ಲಾ ಹೊರದೇಶಗಳಿಗೆ ಹೋದರೂ, ಅವೇ ಇಲ್ಲಿಗೆ ಬಂದರೂ ಸರಣಿ ಸೋಲು ಕಟ್ಟಿಟ್ಟ ಬುತ್ತಿಯಾಗಿದ್ದ ಭಾರತ ಕ್ರಿಕೆಟ್ನಲ್ಲಿ ನಿಧಾನವಾಗಿ ಅಲ್ಲೊಂದು ಇಲ್ಲೊಂದು ಗೆಲುವು ಶುರುವಾಗಿ, ಆಮೇಲೆ ತವರಿನಲ್ಲಿ ಸರಣಿ ಗೆಲುವು ಕಂಡು... ಅಪರೂಪಕ್ಕೆ ವಿದೇಶದಲ್ಲಿ ಗೆಲುವು ಎನ್ನುವ ಹಂತ ತಲುಪಿದ್ದೇವೆ ಎನ್ನುವ ಮಾತಿನಲ್ಲಿ ದಿಟವಿದ್ದಂತಿದೆ. ಇತ್ತೀಚಿಗೆ ಇಂಗ್ಲೇಂಡ್ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಹೀನಾಯವಾಗಿ ಸೋತಿರುವ ಸಂದರ್ಭದಲ್ಲಿ ಯಾಕೆ ಹೀಗಾಯ್ತು ಎನ್ನುವ ಪ್ರಶ್ನೆಗಳು, ಅದಕ್ಕೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನಗಳೂ ನಡೆದಿರುವುದನ್ನು ಕಾಣಬಹುದಾಗಿದೆ. ಇಂತಹುದೇ ಪ್ರಯತ್ನವನ್ನು ಶ್ರೀ ಹರ್ಷ ಬೋಗ್ಲೆಯವರ ಲೇಖನವೂ ಮಾಡಿದೆ. ಭಾರತೀಯ ಕ್ರಿಕೆಟ್ಟಿನ ಗುಣಮಟ್ಟ ಹೆಚ್ಚಿಸಲು ಈಗಿನ ರಣಜಿ ಕ್ರಿಕೆಟ್ ತಂಡಗಳ ಸಂಖ್ಯೆಯನ್ನು ಕಡಿತಗೊಳಿಸಿ ಹೆಚ್ಚೆಚ್ಚು ಸ್ಪರ್ಧಾತ್ಮಕವಾಗಿ ಆಡಿಸಬೇಕು. ತಂಡದಲ್ಲಿ ಕಡಿಮೆ ಸ್ಥಾನಗಳಿರುತ್ತವೆಯಾದ್ದರಿಂದ ಸ್ಪರ್ಧೆ ಹೆಚ್ಚಿ ಗುಣಮಟ್ಟದ ಆಟಗಾರರನ್ನು ಹುಟ್ಟುಹಾಕಲು, ಅಂತಹವರನ್ನು ತರಬೇತು ನೀಡಲು, ಅನುಭವ ದೊರಕಿಸಿಕೊಡಲು ಅನುಕೂಲವಾಗಲಿದೆ ಎಂಬ ಅನಿಸಿಕೆ ಅವರದ್ದು. ಆದರೆ ನಮ್ಮನ್ನು ಕಾಡೋ ಪ್ರಶ್ನೆಗಳು ಬೇರೇನೇ ಇವೆ. ಅದಕ್ಕೆ ಮೊದಲು ಕ್ರಿಕೆಟ್ ಆಡೋ ದೇಶಗಳ ಬಗೆಗಿನ ಸಣ್ಣ ಮಾಹಿತಿಯನ್ನು ನೋಡೋಣ.
ಕ್ರಿಕೆಟ್ ಆಡೋ ದೇಶಗಳು!
ಕ್ರಿಕೆಟ್ ಆಡುವ ಹದಿನಾರು ಪ್ರಮುಖ ದೇಶಗಳ ಜನಸಂಖ್ಯೆಯ ಪಟ್ಟಿಯನ್ನು ನೋಡಿ. ಕ್ರಿಕೆಟ್ ತಂಡವೊಂದು ಬಲಿಷ್ಟವಾಗಿರುವುದಕ್ಕೂ, ಆ ದೇಶದ ಜನಸಂಖ್ಯೆಗೂ ಯಾವ ಸಂಬಂಧವೂ ಇಲ್ಲಾ ಎನ್ನಬಹುದು. ಹದಿನಾರರಲ್ಲಿ ಹದಿಮೂರು ದೇಶಗಳ ಜನಸಂಖ್ಯೆ ಕರ್ನಾಟಕದ ಜನಸಂಖ್ಯೆಗಿಂತಲೂ (೫.೨ ಕೋಟಿಗಳಿಗಿಂತಾ) ಕಡಿಮೆ ಇದೆ. ಮೂರು ದೇಶಗಳು ಅಂದ್ರೆ ಪಾಕಿಸ್ತಾನ್, ಬಾಂಗ್ಲಾ ಮತ್ತು ಭಾರತಗಳು ಮಾತ್ರಾ ಹತ್ತುಕೋಟಿಗಿಂತಾ ಹೆಚ್ಚಿನ ಜನಸಂಖ್ಯೆ ಹೊಂದಿವೆ. ಭಾರತದ ಜನಸಂಖ್ಯೆ ನೂರಿಪ್ಪತ್ತು ಕೋಟಿಯಿದ್ದು ಉಳಿದ ಎಲ್ಲಾ ಕ್ರಿಕೆಟ್ ಆಡೋ ದೇಶಗಳ ಒಟ್ಟು ಜನಸಂಖ್ಯೆಯ ಎರಡರಷ್ಟಿದೆ. ನಕ್ಷೆಯಲ್ಲಿ ಕಾಣದಂತಿರುವ ಸ್ಕಾಟ್ಲ್ಯಾಂಡ್,ಐರ್ಲ್ಯಾಂಡ್, ನ್ಯೂಜಿಲ್ಯಾಂಡ್ಗಳಲ್ಲಿನ ಜನಸಂಖ್ಯೆ ಸುಮಾರು ಐವತ್ತು ಲಕ್ಷದ ಆಸುಪಾಸಿದೆ. ಇನ್ನು ವೆಸ್ಟ್ ಇಂಡೀಸ್ ಎನ್ನುವುದಂತೂ ಸಣ್ಣಸಣ್ಣ ದ್ವೀಪರಾಷ್ಟ್ರಗಳ ಒಕ್ಕೂಟವಾಗಿದ್ದು ಒಟ್ಟು ಜನಸಂಖ್ಯೆ ಕೇವಲ ೩೩ ಲಕ್ಷಗಳಷ್ಟಿದೆ. ಹೀಗಿರುವಾಗ ಇಂತಹವುಗಳ ನಡುವೆ ಭಾರತವೇ "ಗುಂಪಿಗೆ ಸೇರದ ಪದ"ದಂತೆ ಕಾಣುತ್ತದೆ.
ಕರ್ನಾಟಕದ್ದೂ ಅಂತರರಾಷ್ಟ್ರೀಯ ತಂಡವಿರಲಿ!
ಯಾಕೆ ಭಾರತದ್ದು ಒಂದೇ ತಂಡವಿರಬೇಕು? ಭಾರತದಿಂದ ಒಂದಕ್ಕಿಂತಾ ಹೆಚ್ಚು ತಂಡಗಳು ಅಂತರ್ ರಾಷ್ಟ್ರೀಯ ಕ್ರಿಕೆಟ್ ಆಡುವುದು ಸರಿಯೆನ್ನಿಸದೇ? ಕರ್ನಾಟಕದ ತಂಡ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ತಂಡವಾಗಿ ಪಾಲ್ಗೊಳ್ಳುವುದು ಸರಿಯಾದುದಲ್ಲವೇ? ಕ್ರಿಕೆಟ್ ಆಡುತ್ತಿರುವ ದೇಶಗಳ ಸಾಮಾನ್ಯ ಜನಸಂಖ್ಯೆಯನ್ನು ಗಮನಿಸಿದರೆ ಕರ್ನಾಟಕದಿಂದ ತಂಡ ಕಳಿಸೋದು ಸೂಕ್ತ ಎನ್ನಿಸುತ್ತದೆ. ತಂಡವೊಂದರಲ್ಲಿ ಇಂತಿಷ್ಟೇ ಜನರಿರಬೇಕೆನ್ನುವಾಗ ಇರುವ ೧೬ ಸ್ಥಾನಕ್ಕಾಗಿ ಈಗಿದೆ ಎನ್ನಲಾಗುವ ವಲಯವಾರು ಪ್ರಾತಿನಿಧ್ಯ, ಆಯ್ಕೆ ಸಮಿತಿ ಸದಸ್ಯರ ಪಕ್ಷಪಾತ ಮೊದಲಾದ ದೂರುಗಳಿಲ್ಲವಾಗುತ್ತದೆ. ಜೊತೆಯಲ್ಲಿ ತಂಡದೊಳಗಿನ ಸಾಮರಸ್ಯ ಹೆಚ್ಚುವುದೂ ಇದರಿಂದಾಗುವ ಮಹತ್ವದ ಲಾಭವಾಗಿರುತ್ತದೆ. ಯಾಕೆಂದರೆ ಇಂದಿನ ಭಾರತ ತಂಡ ಒಂದು ತಂಡವಾಗಿ ಆಡುವುದು ಯಾವುದಾದರೂ ಸರಣಿಗೆ ತಂಡ ಆಯ್ಕೆಯಾದ ಮೇಲೆ ನಡೆಸಲಾಗುವ ಶಿಬಿರಗಳು ಮತ್ತು ಅಭ್ಯಾಸ ಪಂದ್ಯಗಳಲ್ಲಿ ಮಾತ್ರಾ! ಅಂದರೆ ಸಚಿನ್ ಮತ್ತು ದ್ರಾವಿಡ್ ಒಟ್ಟಾಗಿ ತಂಡವಾಗಿ ಆಡುವುದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ಅವುಗಳ ಸಿದ್ಧತಾ ಪಂದ್ಯಗಳಲ್ಲಿ ಮತ್ತು ತರಬೇತಿ ಶಿಬಿರಗಳಲ್ಲಿ ಮಾತ್ರವೇ ಆಗಿದೆ. ಇದೇ ಮಾತು ರಾಜ್ಯ ತಂಡಕ್ಕೆ ಅನ್ವಯವಾಗುವುದಿಲ್ಲ. ಅಷ್ಟೇ ಅಲ್ಲದೆ ನಮ್ಮ ಯುವಪ್ರತಿಭೆ ಅಭಿಮನ್ಯುಗೆ ಅವಕಾಶ ಇಲ್ಲ ಅನ್ನೋ ದೂರು ಕರ್ನಾಟಕದಿಂದಾಗಲೀ, ಕರ್ನಾಟಕ ತಂಡದ ಏಳೇಳು ಆಟಗಾರರು ಆಯ್ಕೆಯಾಗಿದ್ದಾರೆ ಅನ್ನೋ ದೂರು ಉಳಿದವರಿಂದಾಗಲೀ ಇಲ್ಲವಾಗುತ್ತಲ್ವಾ ಗುರೂ!
ಇನ್ನು ಭಾರತ ಕ್ರಿಕೆಟ್ ತಂಡವೆನ್ನುವುದು ವಾಸ್ತವವಾಗಿ ಭಾರತ ರಾಷ್ಟ್ರೀಯ ತಂಡವಾಗಿರದೆ ಬಿಸಿಸಿಐ ಸಂಸ್ಥೆಯ ತಂಡವಾಗಿದೆ. ಬಿಸಿಸಿಐ ಸಂಸ್ಥೆಯು ಐಸಿಸಿ ಎನ್ನುವ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಸ್ಥೆಯಾಗುವುದಾದಲ್ಲಿ ಕೆಎಸ್ಸಿಏ ಕೂಡಾ ಆಗಬಹುದು! ಇಂತಹ ಏರ್ಪಾಟು ಈಗಾಗಲೇ ಇಂಗ್ಲೇಂಡಿನಲ್ಲಿದೆ.
ಇನ್ನು ಭಾರತ ಕ್ರಿಕೆಟ್ ತಂಡವೆನ್ನುವುದು ವಾಸ್ತವವಾಗಿ ಭಾರತ ರಾಷ್ಟ್ರೀಯ ತಂಡವಾಗಿರದೆ ಬಿಸಿಸಿಐ ಸಂಸ್ಥೆಯ ತಂಡವಾಗಿದೆ. ಬಿಸಿಸಿಐ ಸಂಸ್ಥೆಯು ಐಸಿಸಿ ಎನ್ನುವ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಸ್ಥೆಯಾಗುವುದಾದಲ್ಲಿ ಕೆಎಸ್ಸಿಏ ಕೂಡಾ ಆಗಬಹುದು! ಇಂತಹ ಏರ್ಪಾಟು ಈಗಾಗಲೇ ಇಂಗ್ಲೇಂಡಿನಲ್ಲಿದೆ.
ಕೊನೆಹನಿ: ಒಂದು ದೇಶದಿಂದ ಒಂದೇ ತಂಡ ಇರಬೇಕು, ಇಲ್ದಿದ್ರೆ ದೇಶ ಒಡ್ದೋಗುತ್ತೆ, ಒಗ್ಗಟ್ಟಿರಲ್ಲ ಅನ್ನೋ ಭಾವನೆ ಖಂಡಿತಾ ಬೇಕಿಲ್ಲ. ಯಾಕಂದ್ರೆ ಯುನೈಟಡ್ ಕಿಂಗ್ಡಮ್ ಅನ್ನೋ ರಾಜಕೀಯವಾಗಿ ಒಂದಾಗಿರೋ ದೇಶದಲ್ಲಿ ಒಕ್ಕೂಟ ವ್ಯವಸ್ಥೆಯಿದ್ದು ಅಲ್ಲಿಂದಲೇ ಇಂಗ್ಲೇಂಡು, ಸ್ಕಾಟ್ಲ್ಯಾಂಡು, ಐರ್ ಲ್ಯಾಂಡುಗಳ ತಂಡಗಳು ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಇವೆ!! ಇನ್ನು ಭಾರತದಿಂದ ಅನೇಕ ತಂಡಗಳಿರುವಾಗ ನಮ್ಮದೇ ಒಂದು ತಂಡ ಗೆಲ್ಲೋ ಸಾಧ್ಯತೆ ಹೆಚ್ಚಾಗೋದ್ರಿಂದ ಭಾರತ ಗೆಲ್ಲುವ ಸಾಧ್ಯತೆಯೂ ಅಷ್ಟೇ ಹೆಚ್ಚಾಗುತ್ತದೆಯಲ್ವಾ ಗುರೂ!
12 ಅನಿಸಿಕೆಗಳು:
ree, yOchsree:
1) International Cricket Council is already thinking of reducing the number international teams due to the poor quality of the other cricketing nations and you propose such ideas ;) Street talk ashte!
2) Population is never an indicator or an evidence of probability of success. Think of India's population and it's achievement in Olympics, compare it with Australia or Jamaica or even Great Britain. Quantity is not an indicator of quality (http://www.stubbornmule.net/2008/08/olympics-by-gdp/).
3) Karnataka sometimes struggles to perform at National level (even though it often forms a great team). Only a countable number of players from Karnataka (or any single state) have made it large at International Stage (Dravid, Vishwanath, Srinath, Kumble, Sadananda, Brijesh, Krimani, Chandrashekar, Prasanna, and some recent players...)
One should be patriotic and pride of language, state, culture etc but that should not discount one's logic to see a bigger picture.
ನಿಜ ಗುರು.
ಕರ್ನಾಟಕದ್ದೇ ಒಂದು ತಂಡ ಇಂಟರ್ ನ್ಯಾಶನಲ್ ಮಟ್ಟದಲ್ಲಿ ಆಡೋದನ್ನು ನೋಡುವ ಜನರ ಆಸೆಯನ್ನು, ಚಾಂಪಿಯನ್ಸ್ ಲೀಗ್ 20-20 ಕೊಂಚ ಮಟ್ಟಿಗೆ ಈಡೇರಿಸಿದೆ.
ಕರ್ನಾಟಕದ ರಾಯಲ್ ಚಾಲೆಂಜರ್ಸ್ ತಂಡ, ಇತರೆ ದೇಶ-ವಿದೇಶಗಳ ತಂಡಗಳ ಜೊತೆ ಇಲ್ಲಿ ಸೆಣೆಸಿತ್ತು.
Anonymous ಅವರೇ,,
ಐಸಿಸಿ ತಂಡಗಳ ಸಂಖ್ಯೆ ಕಡಿಮೆ ಮಾಡಲು ಯೋಚಿಸಿರುವುದು ಗುಣಮಟ್ಟ ಇಲ್ಲ ಎಂದು. ಆದ್ರೆ ಭಾರತದಿಂದ ೮-೧೦ ತಂಡಗಳು ಬಂದಾಗ ಗುಣಮಟ್ಟದ ಕೊರತೆ ಅನ್ನುವುದನ್ನು ಅದು ತುಂಬುತ್ತೆ.
ಜನಸಂಖ್ಯೆಯನ್ನು ಇಲ್ಲಿ ಏನ್ ಗುರು ತೋರಿಸಿದ್ದು, ಎಂತೆಂತಹ ಪುಟಗೋಸಿ ದೇಶಗಳೆಲ್ಲ ಒಂದೊಂದು ಅಂತರ್ ರಾಷ್ಟ್ರೀಯ ತಂಡ ಮಾಡ್ಕೊಂಡಿರುವಾಗ, ಬ್ರಿಟನ್ನಿನಂತಹ ಒಂದು ದೇಶದಲ್ಲಿ ಮೂರು ಇಂಟರ್ ನ್ಯಾಶನಲ್ ತಂಡಗಳಿರುವಾಗ, ಇಷ್ಟೊಂದು ಪ್ರತಿಭೆ ಇರುವ ಈ ದೇಶದಲ್ಲಿ ಯಾಕೆ ಹಲವು ತಂಡಗಳು ಬರಬಾರದು? ಆ ಮೂಲಕ ಈ ವಲಯವಾರು ಮೀಸಲು, ಆಯ್ಕೆಗಾರರಿಂದ ವಶೀಲಿ ಮುಂತಾದ ಪ್ರತಿಭೆಯನ್ನು ತುಳಿಯುವ ಕ್ರಮಕ್ಕೆ ತಡೆ ಬಿದ್ದಂತಾಗುವುದಿಲ್ಲವೇ?
ಕರ್ನಾಟಕದ ಸುಜೀತ್ ಸೋಮಸುಂದರ್, ದೊಡ್ಡ ಗಣೇಶ್,ಹೀಗೆ ಎಷ್ಟೋ ಆಟಗಾರರಿಗೆ ಸರಿಯಾದ ಚಾನ್ಸ್ ಸಿಗದೇ ಅವರು ದೊಡ್ಡ ಸಾಧನೆ ಮಾಡಲಾಗಲಿಲ್ಲ ಅನ್ನುವುದು ತಮಗೆ ಕಾಣಿಸದೇ? ನೀವೇ ಹೇಳಿ ಸೆಹ್ವಾಗ್, ಸಚಿನ್ ಇಲ್ಲ ಭಜ್ಜಿಗೆ ಕೊಟ್ಟಷ್ಟು ಅವಕಾಶ ಇವರಿಗೆ ಸಿಕ್ಕಿದೆಯೇ? ಕರ್ನಾಟಕವೊಂದೇ ಅಲ್ಲ, ಹಲವು ರಾಜ್ಯದ ಪ್ರತಿಭೆಗಳು ಸರಿಯಾದ ಅವಕಾಶಗಳಿಲ್ಲದೇ ಅವರ ಪ್ರತಿಭೆ ಕಮರಿ ಹೋಗಿದ್ದು ಗಮನಿಸಿಲ್ಲವೇ?
ಏನ್ ಗುರು ಹೇಳಿದಂತೆ ಹಲವು ತಂಡಗಳು ಬಂದು, ಅವರಲ್ಲಿ ಯಾರೂ ಗೆದ್ದರೂ ಭಾರತವೇ ಗೆದ್ದಂತಲ್ಲವೇ? ಅದನ್ನು ಒಡಕು, ತಪ್ಪು ಅಂತ್ಯಾಕೆ ಭಾವಿಸುತ್ತೀರಿ? ಅಥವಾ ಭಾಷೆಯ ಪ್ರೇಮ ಬಿಗ್ ಪಿಕ್ಚರ್ ಅನ್ನು ಮಸುಕು ಮಾಡುತ್ತೆ ಅಂತ ಯಾಕೆ ಇಲ್ಲದ್ದನ್ನು ಕಲ್ಪಿಸಿಕೊಳ್ಳುತ್ತೀರಿ?
ಪ್ರೀತಿಯ "ಪಕ್ಕದ ಮನೆ ಹುಡುಗಾ" ಅವರೆ
೧) ಈ ಮುನ್ನ ಹಲಾವಾರು ಬಾರಿ ಅಂತರರಾಷ್ಟ್ರಿಯ ತಂಡಗಳು ಬಂದಾಗ ರಾಜ್ಯ ತಂಡದವರ performance ನೋಡಿ, ಅಂತರರಾಷ್ಟ್ರಿಯ ಗುಣಮಟ್ಟದಲ್ಲಿವೆಯೋ ಇಲ್ಲವೋ ತಿಳಿಯುತ್ತದೆ
೨) ಈಗಿನ ಕರ್ನಾಟಕ ತಂಡವನ್ನೇ ನೋಡಿ, ಅಂತರರಾಷ್ಟ್ರಿಯ ಗುಣಮಟ್ಟದ ಆಟಗಾರರು ಎಷ್ಟಿದ್ದಾರೆ - ಅರವಿಂದ್, ಮಿತುನ್, ವಿನಯ್, ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ? ರಾಬಿನ್-ಗೆ ಸಾಕಶ್ಟು ಅವಕಾಶ ಸಿಕ್ತು! ಅರವಿಂದ್-ಮಿತುನ್ ಈಗ ಚೆನ್ನಾಗಿ ಶುರು ಆಗಿದಾರೆ, ಮನೀಶ್ ಕೂಡ ಪರ್ವಾಗಿಲ್ಲ, ವಿನಯ್ ಒಬ್ಬ ನಿಜ್ವಾಗ್ಲೂ ಮಿಂಚ್ತಾ ಇದಾನೆ ಅಷ್ಟೆ! ಇದರಲ್ಲಿ India-A teamಗೆ ಎಷ್ಟು ಜನ ಹೋಗಲು ಅರ್ಹರು?
೩) ನಮ್ಮ ರಾಜ್ಯ ತಂಡ ರಾಷ್ಟ್ರ ಮಾಟಾದಲ್ಲೆ ಇನ್ನೂ ಪೈಪೋಟಿಗೆ ಸತತವಾಗಿ (consistent) ಎದ್ದು ನಿಲ್ಲಕ್ಕಾಗ್ತಿಲ್ಲ ಅಂತದ್ರಲ್ಲಿ .....! ಮೇಲಿರುವ ಕೆಲವು ಆಟಗಾರರನ್ನು ಬಿಟ್ಟರೆ ನಮ್ಮ ತಂಡ ಬಾರೀ ತಂಡ (cold) ;) ಹೀಗಿರುವಾಗ.....
೪) ಜನಸಂಖ್ಯೆ does not mean anything; quantity vs quality. ನಾನು ಅದಕ್ಕೆ Olympics ಉದಾಹರಣೆ ಕೊಟ್ಟಿದ್ದು! ಜನಸಂಖ್ಯೆ ನೋಡೋ ಹಾಗಿದ್ರೆ ಎಲ್ಲಾ medals ನಮ್ಗೇ ಬರ್ಬೇಕು, ಆದ್ರೆ Jamaica ಅನ್ನೋ ಪುಟ್ಟ ದೇಶ ನಮಗಿಂತ ಮೇಲು! ಕರ್ನಾಟಕವನ್ನ Jamaincaಗೆ, ಅಥ್ವ Australiaಗೆ ಹೋಲಿಸಿ ನೋಡುದ್ರೆ ಸಾಕು!
೪) United Kingdom ಉದಾಹರಣೆ ನೋಡಿ - it is a Country of Countries!
೫) ಸುಜಿತ್ ಸೊಮಸುಂದರ್ ಅವರ ಆಟವನ್ನ ನೀವು ನೋಡಿಲ್ಲವೇನೊ ಗೊತ್ತಿಲ್ಲ, ವಿಶ್ವ ಕಪ್ಪಿನಲ್ಲಿ ಅವರಿಗಿಂತ ಕೆಟ್ಟ opening ಪ್ರದರ್ಶನ ನಾ ನೋಡಿಲ್ಲ! ದೊಡ್ಡ ಗಣೇಶ್ ರಾಷ್ಟ್ರ ಮಟ್ಟದಲ್ಲೇ ಸರಾಸರಿ 29 ಇಟ್ಟಿದ್ರು, ಸಿಕ್ಕ ನಾಲ್ಕು testಗಳಲ್ಲಿ ೫೮ ಸರಾಸರಿ ಇಟ್ಟಿದ್ರು. ಹೀಗೆ ಹಲವಾರು ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಚೆನ್ನಾಗಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಹಾಳು ಮಾಡಿಕೊಂಡರು! They never gave a "breathtaking performance" unlike most who made the mark like Kumble, Srinath, Venkatesh Prasad, Dravid etc! Vijay Bharadwaj was another talent who did fantastic to start with but did not sustain. So there is more to it than just being given a chance!
೬) ಸಚಿನ್ಗೆ ಆಗ್ಲಿ ಬಜ್ಜಿಗೆ ಆಗ್ಲಿ ಚಾನ್ಸ್ ಸಿಕ್ಕಿದ್ದು ಅವರು ಸಾದಿಸಿದಮೇಲೆ! ಸಚಿನ್ ಅಥ್ವ ಬಜ್ಜಿಗೆ apply ಆಗೊ rule ಡ್ರಾವಿಡ್ ಗೂ ಕೂಡ ಆಗ ಬಹುದಲ್ಲವೇ? ಸುನೀಲ್ ಜೋಶಿಗೂ ಕೂಡ!
೭) ನಿಮ್ಮ ಕೊನೆಯ ಮಾತು ನಿಜ, ಭಾರತ ಗೆಲ್ಲುವುದು ಮುಖ್ಯ, ಕರ್ನಾಟಕದ contribution ಜಾಸ್ತಿ ಇದ್ದಷ್ಟೂ ಅಷ್ಟೇ ಜಾಸ್ತಿ ಖುಷಿ, ಹಾಗಂತ ....
ನಮಸ್ಕಾರ ಅನಾನಿಮಸ್,
ನಿಮ್ಮ ಮೊದಲ ಪ್ರತಿಕ್ರಿಯೆಗೆ ನನ್ನ ಅನಿಸಿಕೆ ಹೀಗಿವೆ:
೧) ಐಸಿಸಿ ತಂಡಗಳ ಸಂಖ್ಯೆ ಕಮ್ಮಿ ಮಾಡುವುದಕ್ಕೂ ಭಾರತದಿಂದ ಹಲವು ತಂಡಗಳು ಆಡುವುದಕ್ಕೂ ಸಂಬಂಧ ಏರ್ಪಡಿಸುವುದು ಅಷ್ಟು ಸರಿಯಲ್ಲ. ಐಸಿಸಿ ತಂಡಗಳ ಸಂಖ್ಯೆ ಕಮ್ಮಿ ಮಾಡಲಿ, ಆ ಕಡಿಮೆಯಾಗಿರುವ ತಂಡಗಳ ಪಟ್ಟಿಯಲ್ಲೇ ಭಾರತದ ಮೂರ್ನಾಲ್ಕು ತಂಡಗಳಿರಬಹುದಲ್ಲವೇ?
೨) ನಾನೂ ಕೂಡಾ ನೀವು ಹೇಳಿರುವುದನ್ನೇ ಹೇಳಿದ್ದೇನೆ. ಇಲ್ಲಿ ಜನಸಂಖ್ಯೆಯ ಬಗ್ಗೆ ಹೇಳಿರುವುದು, ನೂರಿಪ್ಪತ್ತು ಕೋಟಿಯ ಜನರ ತಂಡಕ್ಕಿಂತಲೂ ಗುಣಮಟ್ಟದ ತಂಡವನ್ನು ಎರಡು ಕೋಟೀ ಜನರ ನಾಡಾದ ಆಸ್ಟ್ರೇಲಿಯಾ ಕಟ್ಟಿಕೊಂಡಿದೆ. ಹಾಗಾಗಿ ಐದು ಕೋಟಿ ಜನರ ಕರ್ನಾಟಕಕ್ಕೇನು ನಾವು ಬರೀ ಆರು ಕೋಟಿ ಎನ್ನುವುದು ಕೊರತೆಯಾಗಲಾರದು.
೩)ಕರ್ನಾಟಕ ತಂಡ ಇಂದು ರಾಷ್ಟ್ರೀಯ ಕ್ರಿಕೆಟ್ಟಿನ ಪ್ರಮುಖವಾದೊಂದು ತಂಡವಾಗಿದೆ. ಅಕಸ್ಮಾತ್ ಅದು ಬಲಹೀನ ತಂಡವಾಗಿದ್ದರೂ ಏನಂತೆ? ಐಸಿಸಿಯ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು ಸಫಲವಾಗಲು ಸಮಯ ತಗುಲಬಹುದು ಅಷ್ಟೇ. ಇಷ್ಟಕ್ಕೂ ನಮ್ಮ ತಂಡದ ಪ್ರತಿಭೆಗಳು ಹೊರಬರಲು ವಿದೇಶಿ ತಂಡಗಳ ಜೊತೆ ಆಡಿ ಆಡಿ ಅನುಭವ ಗಳಿಸಿದರೆ ತಾನೇ ಸಾಧ್ಯ? ನೀವೇ ನೋಡಿ, ಜಿಂಬಾಬ್ವೆ, ಬಾಂಗ್ಲಾಮ್, ಕೀನ್ಯಾ ತಂಡಗಳು ಆರಂಭದಲ್ಲಿದ್ದ ಮಟ್ಟಕ್ಕೂ ಇಂದಿಗೂ ವ್ಯತ್ಯಾಸವಾಗಿಲ್ಲವೇ?
ನಮ್ಮ ಆಟಗಾರರು ಇಡೀ ತಂದವಾಗಿ ಗುಣಮಟ್ಟ ಹೆಚ್ಚಿಸಿಕೊಳ್ಳುತ್ತಾ ಹೋಗಲು ಈಗಿರುವ ರಣಜಿ ರಾಜ್ಯ ತಂಡ ಹೆಚ್ಚು ಅನುಕೂಲವೇ ಅಥವಾ ಅಂತರರಾಷ್ಟ್ರೀಯ ಪಂದ್ಯಗಳನ್ನಾಡುವುದು ಹೆಚ್ಚು ಅನುಕೂಲವೇ ಎಂದು ಯೋಚಿಸಿದಾಗ ನನಗಂತೂ ಎರಡನೆಯದೇ ಸೂಕ್ತ ಎನ್ನಿಸಿದ್ದು!
ಆನಂದ್
ನಮಸ್ಕಾರ ಅನಾನಿಮಸ್ ಅವರೇ,
ನಿಮ್ಮ "ಪಕ್ಕದ ಮನೆಯ ಹುಡುಗ"ನಿಗೆ ಬರೆದಿರೋ ಕಮೆಂಟಿಗೆ ನನ್ನ ಅನಿಸಿಕೆ ಹೀಗಿವೆ:
ಕರ್ನಾಟಕ ತಂಡ ಇಂದು ಅದ್ಭುತವಾಗಿದೆ, ಹಾಗಾಗಿ ಅಂತರರಾಷ್ಟ್ರೀಯ ಸ್ಪರ್ಧೆಗೆ ಹೋಗಬೇಕು ಅನ್ನುವುದು ನನ್ನ ಅನಿಸಿಕೆಯಲ್ಲ. ಅಂತರರಾಷ್ಟ್ರೀಯ ತಂಡವಾಗೋ ಅವಕಾಶ ಸಿಕ್ಕರೆ ಗುಣಮಟ್ಟ ಹೆಚ್ಚುತ್ತೆ ಎಂದೇ. ಕರ್ನಾಟಕದ ಆಟಗಾರರ ಗುಣಮಟ್ಟ ಅಳೆಯೋ ಪ್ರಯತ್ನವನ್ನೇ ಮಾಡುತ್ತಿಲ್ಲ. ಪ್ರತಿಭಾವಂತರಿಗೆ ಹೆಚ್ಚೆಚ್ಚು ಅವಕಾಶ ಸಿಕ್ಕರೆ ಇನ್ನಷ್ಟು ಮಿಂಚಲು ಸಾಧ್ಯ, ಇನ್ನಷ್ಟು ಅಂತರರಾಷ್ಟ್ರೀಯ ತಾರೆಗಳು ಹುಟ್ಟಲು ಸಾಧ್ಯ ಅಂದಿದ್ದೇನೆ.
ಯು.ಕೆ ದೇಶಗಳ ದೇಶ ಎಂದು ನೀವು ಹೇಳಿದ್ದೀರಿ. ಭಾರತವೂ ಕೂಡಾ ರಾಜ್ಯಗಳ ಒಕ್ಕೂಟವೇ ಆಗಿದೆ. ಆದರೆ ಇಲ್ಲಿನ್ನೂ ಫೆಡರಲಿಸ್ಮ್ ಅಂದ್ರೆ ಒಕ್ಕೂಟ ವ್ಯವಸ್ಥೆ ಎಳವೆಯಲ್ಲಿದೆ. ಇದೂ ಕೂಡಾ "ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ" ಆಗುವುದು ಒಳೀತೆಂದು ಬಹಳಷ್ಟು ಜನ ಹಿಂದೆಯೇ ಅಭಿಪ್ರಾಯಪಟ್ಟಿದ್ದಾರೆ. ಅದರರ್ಥ ನಮ್ಮತನವನ್ನು ಬಿಟ್ಟುಕೊಡದೇನೇ ನಾವು ಭಾರತೀಯರಾಗಿರಬಹುದು ಎನ್ನುವುದಾಗಿದೆ. ನಾನಂತೂ ಭಾರತ ಒಂದು ಒಪ್ಪುಕೂಟವಾಗಬೇಕು ಎಂದು ಬಯಸುವವನು!
ಭಾರತ ಗೆಲ್ಲೋದು ಮುಖ್ಯ ಅನ್ನೋ ಮಾತು ಸರಿಯಾಗಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮೊದಲಾದವುಗಳೂ ಕೂಡಾ ಭಾರತವೇ ಆದ್ದರಿಂದ ಯಾವೊಂದು ಗೆದ್ದರೂ ನಮ್ಮ ಭಾರತ ಗೆದ್ದ ಹಾಗೇನೇ.. ಹಾಗಾಗಿ ಹೆಚ್ಚು ಗೆಲುವಿನ ಅವಕಾಶ ಒಂದು ತಂಡವನ್ನು ಇಟ್ಟುಕೊಳ್ಳುವುದರಲ್ಲಿ ಇರುವುದಕ್ಕಿಂತಲೂ ಭಾರತವು ಅನೇಕ ತಂಡಗಳನ್ನು ಹೊಂದಿರುವುದರಲ್ಲಿದೆ.
ಹೆಚ್ಚು ತಂಡಗಳಾಗುವುದರಿಂದ ಹೆಚ್ಚು ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ಆಟದ ಅನುಭವ ಹೆಚ್ಚಾಗುತ್ತದೆ ಮತ್ತು ಆ ಮೂಲಕ ಭಾರತದಲ್ಲಿ ಕ್ರಿಕೆಟ್ ಮತ್ತಷ್ಟು ಮೇಲ್ಮಟ್ಟಕ್ಕೇರುತ್ತದೆ.
ಆನಂದ್
bcci will never agree
Anand,
I like your passion and your patient response to my post. Very much appreciate it.
But, please think of this (beyond the love for Kannada and Karnataka, which I also share equally with you), India as a whole has been struggling (intermittently though) at the international level. The combined India team itself struggles to perform consistently at International level when it comes to dominating the world. India-A and India-B teams have not really been up to the mark at all (extremely mediocre at times) but have been good source of exposure, experience, practice and opportunity for youngsters and struggling players.
When we are struggling to form a strong team by pooling talent across the country you are proposing to create many many more mediocre and sub-average teams instead of building one strong (unbeatable?) Indian team.
United States of America, if it wants, can form 5-6 different but excellent international Basketball or Baseball teams. They compete within at extremely high level, great quality, in superior ways but when it comes to International level they have one strong face. We can compete intensively, strongly within India, lets make it even more highly competitive but we need to have ONE STRONG, COMPETITIVE team and produce great quality instead of creating multiple sub-par facets.
This is my take on it, even if you disagree :)
ನಮಸ್ಕಾರ ಅನಾನಿಮಸ್ ಅವರೇ,
ನಿಮ್ಮ ಅನಿಸಿಕೆ ಅರ್ಥವಾಯಿತು.ಭಾರತ ಕ್ರಿಕೆಟ್ ತಂಡವನ್ನು ದೇಶದ ಮೂಲೆಮೂಲೆಯ ಅತ್ಯುತ್ತಮ ಆಟಗಾರರನ್ನು ಹೆಕ್ಕಿ ರೂಪಿಸುತ್ತಾರೆ ಸರಿ. ಹೀಗೆ ಮಾಡಿದ ನಂತರವೂ ಅತ್ಯುತ್ತಮ ತಂಡ ಕಟ್ಟುವಲ್ಲಿ ನಾವು ಎಡುವುತ್ತಿರುವುದು ಏಕಿರಬಹುದು? ವಿಶ್ವದ ಅತ್ಯುತ್ತಮ ತಂಡಗಳಿಗೂ ನಮ್ಮ ತಂಡಕ್ಕೂ ಇರುವ ವ್ಯತ್ಯಾಸವೇನು? ಹೇಗೆ ಅವು ಹೋಮೋಜೀನಿಯಸ್ ಆಗಿವೆ ಮತ್ತು ಭಾರತ ತಂಡ ಹೆಟಿರೋಜೀನಿಯಸ್ ಆಗಿದೆ? ಎನ್ನುವುದೆಲ್ಲಾ ಗಮನಿಸಬೇಕಾದ ಅಂಶಗಳೇ. ಆ ಚರ್ಚೆಯೇ ಬೇರೆಯಾಗಿ ನಡೆಯಲಿ. ಇಲ್ಲಿ ನಾನು ಹೇಳುತ್ತಿರುವುದು ಭಾರತದಿಂದ ಒಂದಕ್ಕಿಂತಾ ಹೆಚ್ಚು ತಂಡಗಳು ಇರಲಿ ಎಂದು. ನೀವು ಹೇಳುವಂತೆ ಭಾರತದ ಬಿಸಿಸಿಐನ ತಂಡವೂ ಇರಲಿ ಬಿಡಿ.ಆದರೆ ನಾನಂದಂತೆ ಅನೇಕ ತಂಡಗಳನ್ನು ಮಾಡುವುದರಿಂದ ಆ ತಂಡಗಳ ಆಟಗಾರರಿಗೆ ಹೆಚ್ಚಿನ ಅಂತರರಾಷ್ಟ್ರೀಯ ಅನುಭವ ದೊರೆಯುತ್ತದೆ ಮತ್ತು ಇದು ಅವರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹೆಚ್ಚು ಅಂತರರಾಷ್ಟ್ರೀಯ ತಂಡಗಳು ಆಗುವುದು ಭಾರತದ ಕ್ರಿಕೆಟ್ಟಿನ ಗುಣಮಟ್ಟ ಹೆಚ್ಚಿಸುತ್ತವೆಯೇ ಹೊರತು ಕಮ್ಮಿ ಮಾಡವು. ನಿಮ್ಮ ಅನಿಸಿಕೆಯ ಬಗ್ಗೆ ಗೌರವವಿದೆ.
ವಂದನೆಗಳು
ಆನಂದ್
Thanks Anand.
neevu summarize maaDirOdu swalpa mattige sari. My key contention was: No regional team is anywhere close to International quality, it never has been and doubt it will ever be; if there is any team then it is currently Rajastan by form, even that is a far cry. Even zonal teams are poor by any international standard.
Karnataka is struggling to make a consistent mark (forget dominating) at National scene and you are talking about taking it to the next higher levels. Very passionate and nice to think about such things but ....
I don't think this is a separate debate.
What you are proposing is to have multiple teams even if they are mediocre ones. My contention is, first see if we can create atleast ONE strong Indian team, you are talking about forming multiple. For international exposure we have India-A, India-B, Presidents-XI etc teams where top talents in the country perform.
So, I find no reason why multiple international teams is needed when we are struggling to form one even after including top players from Karnataka. Again, i dont see this as a different debate. This is part of the debate. We can talk about multiple branches when we have one strong branch / tree, we are not even close.
Again, I respect your opinions but I do not agree with the idea at all.
These are possibly the 5 best sentences you'll ever read and all applicable to this experiment:
1. You cannot legislate the poor into prosperity by legislating the wealthy out of prosperity.
2. What one person receives without working for, another person must work for without receiving.
3. The government cannot give to anybody anything that the government does not first take from somebody else.
4. You cannot multiply wealth by dividing it!
5. When half of the people get the idea that they do not have to work because the other half is going to take care of them, and when the other half gets the idea that it does no good to work because somebody else is going to get what they work for, that is the beginning of the end of any nation.
International Cricket Council is already thinking of reducing the number international teams due to the poor quality of the other cricketing nations and you propose such ideas ;) Street talk ashte!Again, I respect your opinions but I do not agree with the idea at all.ಅಂತರರಾಷ್ಟ್ರೀಯ ತಂಡಗಳು ಆಗುವುದು ಭಾರತದ ಕ್ರಿಕೆಟ್ಟಿನ ಗುಣಮಟ್ಟ ಹೆಚ್ಚಿಸುತ್ತವೆಯೇ ಹೊರತು ಕಮ್ಮಿ ಮಾಡವು. ನಿಮ್ಮ ಅನಿಸಿಕೆಯ ಬಗ್ಗೆ ಗೌರವವಿದೆ. When we are struggling to form a strong team by pooling talent across the country you are proposing to create many many more mediocre and sub-average teams instead of building one strong (unbeatable?) Indian team. ಹೆಚ್ಚು ತಂಡಗಳಾಗುವುದರಿಂದ ಹೆಚ್ಚು ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ಆಟದ ಅನುಭವ ಹೆಚ್ಚಾಗುತ್ತದೆ ಮತ್ತು ಆ ಮೂಲಕ ಭಾರತದಲ್ಲಿ ಕ್ರಿಕೆಟ್ ಮತ್ತಷ್ಟು ಮೇಲ್ಮಟ್ಟಕ್ಕೇರುತ್ತದೆ.ನಮ್ಮ ಆಟಗಾರರು ಇಡೀ ತಂದವಾಗಿ ಗುಣಮಟ್ಟ ಹೆಚ್ಚಿಸಿಕೊಳ್ಳುತ್ತಾ ಹೋಗಲು ಈಗಿರುವ ರಣಜಿ ರಾಜ್ಯ ತಂಡ ಹೆಚ್ಚು ಅನುಕೂಲವೇ ಅಥವಾ ಅಂತರರಾಷ್ಟ್ರೀಯ ಪಂದ್ಯಗಳನ್ನಾಡುವುದು ಹೆಚ್ಚು ಅನುಕೂಲವೇ ಎಂದು ಯೋಚಿಸಿದಾಗ ನನಗಂತೂ ಎರಡನೆಯದೇ ಸೂಕ್ತ ಎನ್ನಿಸಿದ್ದು!ಐಸಿಸಿ ತಂಡಗಳ ಸಂಖ್ಯೆ ಕಡಿಮೆ ಮಾಡಲು ಯೋಚಿಸಿರುವುದು ಗುಣಮಟ್ಟ ಇಲ್ಲ ಎಂದು. ಆದ್ರೆ ಭಾರತದಿಂದ ೮-೧೦ ತಂಡಗಳು ಬಂದಾಗ ಗುಣಮಟ್ಟದ ಕೊರತೆ ಅನ್ನುವುದನ್ನು ಅದು ತುಂಬುತ್ತೆ.
ನಿಜ ಗುರು.
ಕರ್ನಾಟಕದ್ದೇ ಒಂದು ತಂಡ ಇಂಟರ್ ನ್ಯಾಶನಲ್ ಮಟ್ಟದಲ್ಲಿ ಆಡೋದನ್ನು ನೋಡುವ ಜನರ ಆಸೆಯನ್ನು, ಚಾಂಪಿಯನ್ಸ್ ಲೀಗ್ 20-20 ಕೊಂಚ ಮಟ್ಟಿಗೆ ಈಡೇರಿಸಿದೆ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!