"ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ"

ನಮ್ಮ ನಾಡಿನ ಹಿರಿಯ ಸಾಹಿತಿಗಳು, ಸಂಶೋದಕರು ಮತ್ತು ಚಿಂತಕರು ಆದ ಡಾ.ಚಿದಾನಂದ ಮೂರ್ತಿಯವರು ನಮ್ಮ ಕನ್ನಡ ನಾಡಿನ ವಿಸ್ತಾರ, ಅದರ ಸಂಸ್ಕೃತಿಯ ವ್ಯಾಪ್ತಿ, ಎರಡು ಸಾವಿರ ವರ್ಷಗಳ ಇತಿಹಾಸ, ಅದರ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಗಳನ್ನು, "ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ " ಎಂಬ ಕಿರು ಗ್ರಂಥದ ಮೂಲಕ ಸಂಕ್ಷಿಪ್ತವಾಗಿ ಆದರೆ ಸಮಗ್ರವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.

ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ನಿಜವಾದ ಅರಿವು, ಸ್ವಾಭಿಮಾನವನ್ನು ಮೂಡಿಸಿ ಅವರನ್ನು ಜಾಗೃತಗೊಳಿಸುವ ಸಲುವಾಗಿ ೧೯೮೭ ರ ರಲ್ಲಿ ಮೊದಲು ಪ್ರಕಾಶಗೊಂಡ ಈ ಪುಸ್ತಕ, ಇತ್ತೀಚಿನ ಪರಿಶ್ಕೃತ ಮುದ್ರಣದೊಂದಿಗೆ ಸುಮಾರು ಐವತ್ತೈದು ಸಾವಿರ ಪುಸ್ತಕಗಳಿಗೂ ಮೀರಿದ ಮಾರಟದ ದಾಖಲೆ ಹೊಂದಿರುವುದು ಈ ಪುಸ್ತಕದ ವೈಶಿಷ್ಟ್ಯ ಗುರು. ಅಷ್ಟೇ ಅಲ್ಲದೆ ಇದು ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು ಬಾಷೆಗಳಿಗೂ ಅನುವಾದಗೊಂಡಿರುವ ಜನಪ್ರಿಯ ಕೃತಿಯಾಗಿದೆ.

ಸ್ವಾಭಿಮಾನ ಮತ್ತು ಸಮನ್ವಯಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಮೂಲಕ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಕದಂಬರಿಂದ ಉಗಮವಾದ ಕರ್ನಾಟಕ ಸಂಸ್ಕೃತಿ, ಬಾದಾಮಿ ಚಾಲುಕ್ಯರ ಆಳ್ವಿಕೆ, ಹ್ಯುಯೆನ್ ತ್ಸಾಂಗ್ ರಂತ ವಿದೇಶಿ ಪ್ರವಾಸಿಗರು ಅಂದು ಕನ್ನಡ ನಾಡಿನ ವೈಭವವನ್ನು ತಮ್ಮ ದಾಖಲೆಗಳಲ್ಲಿ ಹಿಡಿದಿಟ್ಟಿರುವ ಮಾತುಗಳು, ಇದಕ್ಕೆ ಸಾಕ್ಶ್ಯ ನುಡಿಯುವ ಸಮಕಾಲೀನ ಶಾಸನಾಧಾರಗಳು, ಕವಿಯೂ-ಕ್ಷಾತ್ರ ಪರಂಪರೆಯುಳ್ಳವನಾಗಿದ್ದ ಪಂಪ, ಸ್ವಾಭಿಮಾನದ ವಚನಕಾರರು, ನಮ್ಮ ರಾಜ ಮನೆತನದವರು ಹೇಗೆ ಸರ್ವ ಧರ್ಮೀಯರಾಗಿದ್ರು - ಅವರಿಂದ ಸಂತರು-ಕವಿ-ಕಲಾವಿದರ ಪೋಷಣೆ, ಅವರಲ್ಲಿ ಪ್ರೇರೇಪಣೆಗೊಂಡ ನಾಡು-ನುಡಿಗಳ ಬಗೆಗಿನ ಪ್ರೇಮ, ಅದರಿಂದುಂಟಾದ ಭಾಷೆ-ಸಾಹಿತ್ಯದ ಬೆಳವಣಿಗೆ, ಕರ್ನಾಟಕ ಸಂಗೀತದ ಸೊಗಡು, ನಮ್ಮ ನೃತ್ಯ, ಚಿತ್ರಕಲೆ ಮತ್ತು ವಾಸ್ತು ಶಿಲ್ಪಗಳು ಸಾರುವ ಸೊಗಸು, ಭಾರತ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವನ್ನು ಒಗ್ಗೂಡಿಸಲು ಆಲೂರು ವೆಂಕಟರಾಯರ ಏಕೀಕರಣ ಚಳವಳಿ ಹೀಗೆ ಇನ್ನೂ ಹಲವಾರು ಕುತೂಹಲಕರ-ಆಸಕ್ತಿಯುತ ವಿಷಯಗಳನ್ನು ನಮ್ಮ ಕಣ್ಣು ಮುಂದೆ ತೆರೆದಿಟ್ಟು ಹೃದಯವನ್ನು ತುಂಬಿಸುತ್ತಾರೆ.

ಕರ್ನಾಟಕದಲ್ಲಿ ಕನ್ನಡ ಸಂಸ್ಕೃತಿಯನ್ನು ಪ್ರೀತಿಸಿದರೆ ಅದು ಭಾರತ ಸಂಸ್ಕೃತಿಯನ್ನು ಕಾಪಾಡಿದಂತೆ

ಪುಸ್ತಕದಲ್ಲಿ ಮೂರ್ತಿಯವರು ಕನ್ನಡಿಗರ ಜಾಗೃತಿಯನ್ನು ಬಡಿದೆಬ್ಬಿಸುತ್ತ ಈ ಕೆಳಗಿನ ಮಾತುಗಳನ್ನು ಉಲ್ಲೇಖಿಸುತ್ತ ಭಾರತ ಸಂಸ್ಕೃತಿಯೆಂದರೇನೆಂದು ಅಮೂಲ್ಯವಾದ ಮತ್ತು ಮಹತ್ವಪೂರ್ಣವಾದ ಮಾತುಗಳನ್ನು ದಾಖಲಿಸಿದ್ದಾರೆ.
" ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ. "

ಜಾಗೃತನಾಗಬೇಕಿರುವ ಕನ್ನಡಿಗ


ಅಧುನಿಕ ಕರ್ನಾಟಕದ ಸ್ಥಿತಿಗತಿಗಳನ್ನು ವಿಷ್ಲೇಶಿಸುತ್ತ, ಅದರ ಸಮಸ್ಯೆಗಳನ್ನು ಮೆಲಕು ಹಾಕುತ್ತ, ನಮ್ಮ ನೆಲ-ಜಲ-ಗಡಿ-ಬದುಕುನ್ನು ಹಸನು ಮಾಡಿಕೊಳ್ಳದೆ, ನಮ್ಮ ಭಾಷೆ-ಸಂಸ್ಕೃತಿಯ ಗಟ್ಟಿತನವನ್ನು ಉಳಿಸಿ ಕಾಪಾಡಿಕೊಳ್ಳದೆ ಸ್ವಾಭಿಮಾನವನ್ನು ಕಳೆದುಕೊಂಡು ನಿರಭಿಮಾನಿಯಾಗಿರುವ ಕನ್ನಡಿಗನು ಇಂದು ಜಾಗೃತನಾಗಬೇಕಾಗಿರುವ ವಿಷಯವನ್ನು ಮೂರ್ತಿಯವರು ಈ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ.

ಚಿಕ್ಕ ಹುಲಿಮರಿಯೊಂದು ಕುರುಬನ ಕೈಗೆ ಸಿಕ್ಕು ಅದು ಕುರಿಗಳ ಜತೆ ಹುಲ್ಲು ತಿಂದು ಮ್ಯಾ ಮ್ಯಾ ಎಂದು ಅರಚುತ್ತ ಬೆಳೆಯುತ್ತದೆ. ಒಮ್ಮೆ ದೊಡ್ಡ ಹುಲಿಯೊಂದು ಅಟ್ಟಿಸಿಕೊಂಡು ಬಂದಾಗ ಉಳಿದ ಕುರಿಗಳಂತೆ ಅದೂ ಹೆದರಿ ಓಡುತ್ತದೆ. ಅಚ್ಚರಿಗೊಂಡ ದೊಡ್ಡ ಹುಲಿ, ಮರಿ ಹುಲಿಯನ್ನು ಹಿಡಿದು ಒಂದು ಕೊಳದಲ್ಲಿ ಅದರ ಮುಖವನ್ನು ತೋರಿಸಿ ಅದು ಸಹ ಹುಲಿ ಮರಿಯೇ ಎಂದು ಹೇಳಿ ಅದಕ್ಕೆ ಗರ್ಜಿಸುವುದನ್ನು ಪರಿಚಯಿಸುತ್ತದೆ. ಸ್ವಸ್ವರೂಪ ಜ್ಞಾನವನ್ನು ಪಡೆವ ಹುಲಿ ಮರಿ ಮುಂದೊಂದು ದಿನ ವನರಾಜನಾಗಿ ಮೆರೆಯುತ್ತದೆ ಎಂಬ ಉದಾಹರಣೆಯ ಮೂಲಕ ಹುಲಿತನವನ್ನು ಮರೆತ ಕನ್ನಡಿಗರಿಗೆ, ಈ ನಾಡು ನಿಮಗೆ ಸುಲಭವಾಗಿ ದಕ್ಕಿದ್ದಲ್ಲ, ನಿಮ್ಮ ಹಿರಿಯರ ತ್ಯಾಗ-ಬಲಿದಾನಗಳಿಂದ ಬೆಳೆದ ಈ ನಾಡಿನಲ್ಲಿ ಇಂದು ನೀವು ಇಲಿಗಳಾಗಿದ್ದೀರಿ. ನೀವು ಸಹ ವೀರರು, ನಿಜವಾದ ಹುಲಿಗಳು, ನಿಮ್ಮ ಸ್ವಸ್ವರೂಪವನ್ನು ಅರಿಯಿರಿ ನೈಜ ಹುಲಿ ಕನ್ನಡಿಗರಾಗಿ ಎಂಬ ವಿಚಾರಪೂರ್ವಕವಾದ ಕರೆ ನೀಡಿದ್ದಾರೆ.

ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತ ಓದುಗರೊಬ್ಬರು ಹೇಳುತ್ತಾರೆ: ಆಂಗ್ಲ ಮೋಹದಲ್ಲಿ , ಆತ್ಮ ವಿಸ್ಮೃತಿಯಲ್ಲಿರುವ ನಮ್ಮ ಯುವ ಜನಾಂಗಕ್ಕೆ ಇಂತಹ ಪುಸ್ತಕವೊಂದರ ಅಗತ್ಯ ತುಂಬ ಇತ್ತು. ಅಧ್ಯಾಪಕ ಮಿತ್ರರು ತಮ್ಮ ವಿದ್ಯಾರ್ಥಿಗಳಿಗೆ ಈ ಪುಸ್ತಕವನ್ನು ಓದಲು ಸೂಚಿಸಬೇಕು.

ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು -೫೬೦೦೦೨ ವತಿಯಿಂದ ಪ್ರಕಟವಾದ ಮತ್ತು ಇಲ್ಲಿ ದೊರಕುವ ಈ ಪುಸ್ತಕವನ್ನು ಕೊಂಡು ಓದಿ, ಸಮಸ್ತ ಕನ್ನಡಿಗರಿಗೂ ಪರಿಚಯಿಸಿ. ಹೊಸ ಕನ್ನಡ ನಾಡಿನ ಅಭ್ಯುದಯಕ್ಕಾಗಿ ಕಂಕಣಬದ್ಧರಾಗಿ!

7 ಅನಿಸಿಕೆಗಳು:

Anonymous ಅಂತಾರೆ...

tumba olle baraha sir,,

When we give enough breathing space for every language and culture, we become true domocratic setup.


idey disheyalli shwetha annora blog
siktu..

http://shwethahp.blogspot.com/2007/10/blog-post.html

Anonymous ಅಂತಾರೆ...

ಸಖತ್ ಗುರು. ನಮಗೆ ಎಷ್ಟೋ ಜನರಿಗೆ ಇಂತ ವಿಷ್ಯಗಳು ಗೊತ್ತೇ ಇರಲ್ಲ ಗುರು. ಇಂತ ವಿಷ್ಯ ತಿಳ್ಕೋಳೋಕೆ ಇಂತ ಪುಸ್ತಕಗಳಿವೆ, ಅದ್ರಲ್ಲಿ ಇಂತ ವಿಷ್ಯಗಳಿವೆ, ಇಂತಾ ಕಡೆ ಸಿಗ್ತವೆ ಅಂತ ನೀವು ಶಿಫಾರಸ್ಸು ಮಾಡಿದ್ರೆ ಕಣ್ಣು ಮುಚ್ಚಿ ತಗೊಂಡುಬಂದು ಕಣ್ಣು ಬಿಟ್ಟುಕೊಂಡು ಓದ್ಬೋದು. ಧನ್ಯವಾದಗಳು.

Anonymous ಅಂತಾರೆ...

tumba chennagide lekhana. naawu iligalalla huligalu emdu pratiyobba kannadiganu tilidukollabekadige. ide reeti innu olle olle pustakagala parichaya maadi koduttiri.

Anonymous ಅಂತಾರೆ...

ಈ ಪುಸ್ತಕವನ್ನು ನನ್ನ ಗೆಳೆಯನೊಬ್ಬ ನಮ್ಮ ಬೆಂಗಳೂರಿನ ಸಪ್ನ ಪುಸ್ತಕದಂಗಡಿಯಲ್ಲಿ (ಇಂದಿರಾನಗರ ಬ್ರಾಂಚ್)ಹುಡುಕಿದ. ಅಲ್ಲಿ ಗೊತ್ತಾಯಿತು, ಕೇವಲ ಮೈಸೂರಿನ ಮಳಿಗೆಯಲ್ಲಿ ೪ ಪ್ರತಿಗಳಿವೆ ಎಂದು. ಅದಕ್ಕೆ, ನನ್ನ ಗೆಳೆಯ ಇಲ್ಲಿಗೆ ೧೦ ಪ್ರತಿ ತರಿಸಲು ಹೇಳಿದ್ದಾನೆ. ಇನ್ನೆರಡು ದಿನಗಳಲ್ಲಿ, ಇಂದಿರಾನಗರದ ಸಪ್ನ ಮಳಿಗೆಯಲ್ಲಿ, ೧೦ ಪ್ರತಿಗಳು ಲಭ್ಯವಾಗಲಿವೆ. ಆಸಕ್ತರು ಇಲ್ಲಿಂದ ಕೊಳ್ಳಬಹುದು.

Anonymous ಅಂತಾರೆ...

gurugale namaskara...
nanna genaration na dodda problem andre,, kannada odoke bandru yaava pustaka tagobeku, odbeku anno bagge clarity ilde irodu,,

kalde vaara pustakotsavakke hogidde,, neevu heLidange ekikarana itihasa tagonde,, aadre bere books yaavudu tagollali anno kalpane illa,, adu yaakandre namage namma saahitya, kalena sariyaagi yaaru parichayisilla,,, ashte allade, namma appa-ammanu odo havyaasa beLesilla,, ododu andre bari English news paper, illa weekly magazines anthane nanna genaration na grahike,,
idelladara parinaama,, yuva janaralli odo havyaas kadme aagiddu,, aadre idanna sari maadbeku andre,, modalu kannada saahitya da bagge, lekhakara bagge olle ritili prachara aagbeku,, like the way these english writers do.. they get alot of limelight during the launch of their books in print and e-media. haagadaag namma yuvakarallu odo aasakti beLiyutte.. olle kelsa maadtha idira,, nanna best wishes tagolli

Unknown ಅಂತಾರೆ...

Dayavittu ella kannada horatagararu, kannada nata natiyaru,ella TV channelanavrige mattu namma rajakiya nayakru odalu kodabeku.
Dr.M chidanandamurthiyavarigu mattu tamagu tumba dhanyvadagalu.

Chetan ಅಂತಾರೆ...

ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು ಎಂದು ಹೇಳುವ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಸಂಘದ ನಿಲುವು. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಹೀಗೆ ಎಲ್ಲಾ ಒಂದೇ ಇರಬೇಕು ಎಂದು ಹೇಳುತ್ತಾ, ನಮ್ಮ ದೇಶದ ವೈವಿಧ್ಯತೆಯನ್ನು ಕೆಡವಿ ಹಾಕಲು ಹೊರಟಿದೆ. ಎನ್ ಗುರು ಅಂಕಣದಲ್ಲೂ ಸಹ ಇದೇ ವಿಷ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಮೊದಲು ದೇಶ ಆಮೇಲೆ ರಾಜ್ಯ ಅನ್ನೋ ಮಾತೇ ಅರ್ಥವಿಲ್ಲದ್ದು. ಇದಕ್ಕೆ ಆಲೂರು ವೆಂಕಟ ರಾಯರು ಸರಿಯಾದ ಉತ್ತರವನ್ನೇ ನೀಡಿದ್ದಾರೆ. """ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ. """

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails