ಕನ್ನಡ ಮರೆತ ಮೈಸೂರು ಸಿಲ್ಕ್ಸ್!


ಕರ್ನಾಟಕದ ಹೆಮ್ಮೆಯ ಮೈಸೂರು ರೇಶ್ಮೆ ಉದ್ಯೋಗದ ಉತ್ಪನ್ನ ಆಗಿರುವ ಮೈಸೂರು ರೇಶ್ಮೆ (ಜರತಾರಿ) ಸೀರೇನ ಮಾರಾಟ ಮಾಡಕ್ಕೆ, ದೇಶ-ವಿದೇಶಗಳಲ್ಲಿ ಮಾರುಕಟ್ಟೆ ಕಟ್ಕೊಳಕ್ಕೆ ಅಂತ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್ ( ಕೆ.ಎಸ್.ಐ.ಸಿ) ಅನ್ನೋ ಒಂದು ಸಂಸ್ಥೆ ಇದೆ. ಈ ಸಂಸ್ಥೆನ ಸರ್ಕಾರದಿಂದ ನೇಮಕವಾಗಿರೋ ಐಏಎಸ್ಸು ಅಧಿಕಾರಿಗಳು ‍ಮುನ್ನಡುಸ್ತಾ ಇದಾರೆ. ನಮ್ಮ ನಾಡಿನ ಹೆಮ್ಮೆಯ ವಿಶಿಷ್ಟವಾದ ಒಂದು ಉತ್ಪನ್ನಾನ ಎಲ್ಲೆಡೆ ಮಾರಾಟ ಮಾಡಬೇಕು ಅಂತ ಮುಂದಾಗಿರೋ ಈ ಸಂಸ್ಥೆ ತನ್ನದೇ ಆದ ಒಂದು ಅಂತರ್ಜಾಲ ತಾಣಾನ ರೂಪಿಸಿದೆ.
ಪ್ರಪಂಚದ ಮೂಲೆಮೂಲೆಗಳಿಗೆ ಮೈಸೂರು ಸಿಲ್ಕ್ಸ್ ಬ್ರಾಂಡಿನ ರೇಶ್ಮೆ ಉತ್ಪನ್ನಗಳನ್ನು ಮಾರಕ್ಕೆ ಹೊರಟಿರೋ ಈ ಸಂಸ್ಥೆಯ ಅಂತರ್ಜಾಲ ಯಾವ ಭಾಷೇಲಿದೆ ಹೇಳಿ ನೋಡಣಾ?

ಹುಡುಕುದ್ರೂ ಕಾಣದ ಮೈಸೂರು ಸೊಬಗು!

ಈ ತಾಣಾನ ಇಡಿಇಡಿಯಾಗೇ ಇಂಗ್ಲಿಷ್ನಲ್ಲಿ ಮಾಡಿದಾರೆ. ಇದ್ರಲ್ಲಿ ಇಂಗ್ಲಿಷ್ ಭಾಷೇ ಇರೋದು ಸರಿಯಾಗೇ ಇದೆ ಗುರು! ಆದ್ರೆ ನಿಜವಾಗಿ ಗ್ರಾಹಕರನ್ನು ಗೆಲ್ಲಕ್ಕೆ ಇವ್ರು ಇನ್ನೊಂದೆರಡು ಹೆಜ್ಜೆ ಮುಂದೆ ಹೋಗ್ಬೇಕು ಗುರು. ಈ ತಾಣದ ಡಿಫಾಲ್ಟ್ ಭಾಷೆ ಕನ್ನಡ ಆಗಿರಬೇಕು. ಅಂದ್ರೆ ಮೈಸೂರು ಸಿಲ್ಕು ಮೊದಲು ಕನ್ನಡದೋರಿಗೆ ನಮ್ಮದು ಅನ್ನೋ ಭಾವನೆ ಹುಟ್ಟಲು ಕಾರಣವಾಗಬೇಕು. ಆಮೇಲೆ ಒಂದು ಬದೀಲಿ ಭಾಷಾ ಅಯ್ಕೆ ಕೊಟ್ಟು ಇಂಗ್ಲಿಷು, ತಮಿಳು, ತೆಲುಗು, ಮಲಯಾಳಮ್ಮು, ಹಿಂದಿ, ಜರ್ಮನ್ನು, ಜಪಾನು, ಮಣ್ಣು, ಮಸಿ, ಸುಡುಗಾಡು ಅಂತಾ ಎಲ್ಲಾ ಭಾಷೆಗಳ ಆಯ್ಕೆ ಕೊಡಬೇಕು ಗುರು!

ಅಷ್ಟೆ ಅಲ್ಲ, ಈ ನಮ್ಮ ಮೈಸೂರು ರೇಶ್ಮೆ ಸೀರೇಯ ವಿನ್ಯಾಸದ ಬಗ್ಗೆ ಹಾಕಿರೋ ಮಾಹಿತೀನು ಅಷ್ಟೆ, ನಮ್ಮತನಾನ ತೋರಿಸಿಕೊಡಭೇಕು. ಈ ತಾಣದಲ್ಲಿ ಇಂಗ್ಲಿಷಿನಲ್ಲಿ ಇಂಗ್ಲಿಷಿನದ್ದಲ್ಲದ ಪಲ್ಲು ಅಂತ ಬರ್ದಿರೋದಿಕ್ಕೆ ಸಂಬಂಧಪಟ್ಟೋರು ಏನು ಸಮರ್ಥನೆ ಕೊಟ್ಟಾರು? ಪಲ್ಲು ಅನ್ನೋ ಪದ ಇಂಗ್ಲಿಷ್ ಭಾಷೇಲಿಲ್ಲ, ಅದು ನೌನು, ಅದ್ಕೆ ಹಾಗ್ ಬರ್ದಿದೀವಿ ಅಂತಾರೇನೋ. ಹಾಗೆ ಬರೆಯೋದಕ್ಕೆ ಇದೇ ಕಾರಣ ಆಗಿದ್ರೆ ಕನ್ನಡದೇ ಆದ ಸೆರಗು ಅಂಚು ಅಂತ ಬರೀಬೇಕಿತ್ತಲ್ವಾ ಗುರು! ಹೊರಗಿನೋರ್ನ ಸೆಳೆಯೋಕೆ ಅವರ ಭಾಷೇ ಬಳಸೋದು ನಿಜವಾಗ್ಲೂ ಒಳ್ಳೇ ಮಾರುಕಟ್ಟೆ ತಂತ್ರಾನೇ. ಆದರೆ ಈ ನೆಪದಲ್ಲಿ ನಮ್ಮತನಾನೆ ಬಿಟ್ಟುಕೊಡೋದು ಸರೀನಾ? ಇದು ಹೀಗೇ ಇದ್ರೆ ನಾಳೆ ಈ ತಾಣ ನೋಡೋ ಮೈಸೂರಿನೋರೇ ಇದು ನಮ್ಮದಲ್ಲ, ಈ ತಾಣಾ ನಮ್ಮದಲ್ಲ, ಈ ಸಂಸ್ಥೆ ನಮ್ಮದಲ್ಲ ಅನ್ನಕ್ ಶುರು ಹಚ್ಕೋತಾರೆ, ಅಷ್ಟೇ ಗುರು!

10 ಅನಿಸಿಕೆಗಳು:

Kishore ಅಂತಾರೆ...

ಇದನ್ನು ನೋಡಿದರೆ ಇದು ನಮ್ಮ ಒ೦ದು ಅ೦ತರ್ಜಾಲ ತಾಣ ಅಲ್ಲವೇ ಅಲ್ಲ ಅನಿಸುತ್ತದೆ. ಎಲ್ಲೂ ನಮ್ಮತನ ತೋರಿಸದಿರೋ ಅದೆ೦ತಾ ಐಏಎಸ್ಸು ಅಧಿಕಾರಿಗಳೋ, ಅದಿನ್ನೇನು ಮಾರುಕಟ್ಟೆ ಸೆಳೆಯೋ ಪ್ರಯತ್ನ ಮಾಡ್ತಾವ್ರೊ ಸಿವ.

NilGiri ಅಂತಾರೆ...

ಯಾರು ಮರೆಯುತ್ತಾರೋ ಬಿಡುತ್ತಾರೋ ಗೊತ್ತಿಲ್ಲ ಸಾರ್. ಆದರೆ ನಾವು ಮೈಸೂರಿನವರು ಮಾತ್ರ ಎಲ್ಲಿಗೆ ಹೋದರೂ ಮೈಸೂರ್ ಸಿಲ್ಕ್ ಸೀರೆಯ ಆಸೆ ಮಾತ್ರ ಬಿಡುವುದಿಲ್ಲ :).

ಪ್ರತಿಸಲ ಊರಿಗೆ ಹೊರಟಾಗ ನಿಮಗೇನು ತರಲಿ ಎಂದರೆ ಇಲ್ಲಿಯ ಬಿಳಿಯ ಸ್ನೇಹಿತರು ನಿಮ್ಮ ಸಿಲ್ಕಿನ ಸೀರೆಯಂತಹದ್ದೇ ತಂದುಕೊಡಿ ಅನ್ನುತ್ತಾರೆ.

Anonymous ಅಂತಾರೆ...

ಮೈಸೂರು ಸಿಲ್ಕ್ಸ್ ನವರು ಕನ್ನಡ'ನ ಹೇಗೆ ಮರೆತರು ಗುರು ... ವೆಬ್ ಸೈಟ್ ನೋಡಿದರೆ ನಮ್ಮದು ಅಂತ ಅನ್ನಿಸೋಲ್ಲ
--ಚಂದ್ರು

Anonymous ಅಂತಾರೆ...

ella konga soole makklu board of directors nalli kootirbekadre innen agutte?

http://www.ksicsilk.com/boardofdirectors.htm

seere vyaapara maadakke IAS bolimakklu yaake? ourige seere udisi meravanige maadbeku.

Shivaleela ಅಂತಾರೆ...

Nijavagi idu tumba besarada vishaya, keli manassige tumba bejaaraytu. Naavu namm bhasheyanne mareyodu tappu.

Shivaleela

Anonymous ಅಂತಾರೆ...

Guru, anonymous helida haage ellavanu kongatine irodu. AA sitenalli ondu chooru kannadada vaasane kooda sulidilla. Adrallu namma karnatakada samskruti andre mai tumba batte haakodu. Yaaro videshi mundevu togolli anta arebettale chitra haakirodu asahya taruva haagide. EE naana maklunna heege bitre kannadana muchchi haakibidtaare.

Anonymous ಅಂತಾರೆ...

ide roga mysuru sandal soap na comp
ksdl gu ide. avara website nalli bootha kannadiyallu kannada sigalla

avara mysuru sandal agarabatti tagondre hindi / english nalli doddadaagi mudrisiddu itara bashegalada telegu, tamilu jote kannada na chikkadaagi mudrisiddare - ee mysuru silk, mysuru sandal soap ge yaarige dooru kodbeku -
karuNaa

Anonymous ಅಂತಾರೆ...

I think we can easily influence them... by just writing to them.. the phone numbers are ther in website.. we can even call them.. Whoever they may be, Kannadiga, tamilian.. they will listen to us and the change will happen for sure.
their email id's
info@ksicsilk.com, sales@ksicsilk.com

Anonymous ಅಂತಾರೆ...

ಸೈಟ್ ಡಿಸೈನ್ ಕೂಡ ಖರಾಬಾಗಿದೆ..

Anonymous ಅಂತಾರೆ...

KSIC bagge ivarigu email kaLisi ..

swarna@e-syma.com

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails