"ನಡೀಲಿ, ಹಿಂದಿ ಹಾಡು ನಡೀಲಿ" - ಯಡ್ಯೂರಪ್ಪ

ಈ ತಿಂಗಳ ೨೦ನೇ ತಾರೀಖು ಬೆಂಗ್ಳೂರಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ನಿಗಮದ ಹುಟ್ಟು ಹಬ್ಬ ಆಚರಿಸಲಾಯ್ತು. ಕರ್ನಾಟಕ ವಿದ್ಯುತ್ ನಿಗಮದ ಕಾರ್ಯಕ್ರಮವೇ ಆಗಿದ್ರೂ ಇದ್ರಲ್ಲಿ ತೆಲುಗು ಮತ್ತು ಹಿಂದಿ ಹಾಡುಗಳ್ನ ಹಾಡ್ತಿದ್ರಂತೆ ಗುರು!

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡ್ಯೂರಪ್ಪನೋರು ಬಂದ್ರು ಅಂತ ಹಾಡು ನಿಲ್ಲುಸ್ದ್ರಂತೆ. "ಛೆ ಛೆ ನಿಲ್ಲುಸ್ಬೇಡಿ, ಸಂಗೀತ ಮುಂದುವರೀಲಿ" ಅಂತ ಯಡ್ಯೂರಪ್ನೋರು ಹೇಳಿದ್ರಲ್ಲಿ ವಿನಯವೇನೋ ಕಾಣುತ್ತೆ, ಆದ್ರೆ "ಕನ್ನಡದ ಹಾಡು ಹಾಡಕ್ಕೆ ನಿಮಗೇನು ರೋಗ, ತೆಲುಗು ಮತ್ತೆ ಹಿಂದಿ ಹಾಡುಗಳ್ನ ಯಾಕ್ ಹಾಡ್ತಿದೀರಿ, ನಿಮಗೆ ಮೈಮೇಲೆ ಗ್ನಾನ ಇಲ್ವಾ?" ಅಂತ ಕೇಳದೆ ಹೋದದ್ದರಿಂದ ಯಡ್ಯೂರಪ್ನೋರಿಗೆ ಅವತ್ತಿನ ದಿನ ವಿವೇಕ ನಿದ್ದೆ ಹೊಡೀತಿತ್ತೇನೋ ಅಂತ್ಲೂ ಅನ್ಸುತ್ತೆ ಗುರು! ಮುಖ್ಯಮಂತ್ರಿಗಳು ತಾವು ಯಾವುದನ್ನ ಮುಂದ್ವರಿಯೋಕ್ಕೆ ಹೇಳಿದ್ದು, ಅದೂ ಎಲ್ಲಿ, ಅಂತೆಲ್ಲಾ ಒಂದ್ಸಲಿ ಯೋಚ್ನೆ ಮಾಡ್ಬಾರ್ದಿತ್ತಾ?

ಇವತ್ತಿನ ದಿನ ಕನ್ನಡಿಗರಿಗಷ್ಟೇ ಅಲ್ಲ, ಕನ್ನಡೇತರರಿಗೂ ಮೆಚ್ಚುಗೆ ಆಗಿರೋ ಸಾಕಷ್ಟು ಕನ್ನಡ ಹಾಡುಗಳು ಇರೋವಾಗ ಕರ್ನಾಟಕದಲ್ಲೇ ಕರ್ನಾಟಕದ ಮುಖ್ಯಮಂತ್ರಿಯ ಮುಂದೇನೇ ಬೇರೆ ಭಾಷೆಗಳಲ್ಲಿ ಹಾಡುಗಾರಿಕೆ ನಡೆದಿದೆ ಅಂದ್ರೆ ಇನ್ನು ಕನ್ನಡದ ಸಂಗೀತಗಾರರು ಎಲ್ಲಾ ಹೋಗಿ ನೇಣು ಹಾಕ್ಕೊಳೋದೊಂದು ಬಾಕಿ! ಇದು ಕರ್ನಾಟಕದ ಒಂದು ಸಂಸ್ಥೆಯ ಕಾರ್ಯಕ್ರಮ, ಇಲ್ಲಿ ಕನ್ನಡ ಸಂಗೀತವನ್ನೇ ಹಾಡಿ ಅಂತ ಒಂದೇ ಒಂದು ಸಾರಿ ಕೇಳಿದ್ರೂ ಆ ಮಾತೇ ಕನ್ನಡಿಗರಿಗೆಲ್ರಿಗೂ ಸಂಗೀತ ಆಗಿರ್ತಿತ್ತಲ್ಲ ಯಡ್ಯೂರಪ್ನೋರೆ?

ಕನ್ನಡವನ್ನ ಕಡೆಗಣಿಸಿ ಅಲ್ಲಿ ನಡೀತಿದ್ದಿದ್ದು ಸಂಗೀತ ಅಲ್ಲ, ಕನ್ನಡದ ಕಲಾವಿದರನ್ನ ಕನ್ನಡ ಚಲನಚಿತ್ರೋದ್ಯಮಾನ ಹೆತ್ತಿರೋ ಕನ್ನಡದ ತಾಯಿ ಸಾಯ್ತಾ ಸಾಯ್ತಾ "ಅಯ್ಯೋ ಅಮ್ಮಾ! ಕಾಪಾಡಿ, ಕಾಪಾಡಿ!" ಅಂತ ಅಳ್ತಿದ್ದಿದ್ದು ಅಂತ ಅರ್ಥವಾಗಲಿಲ್ವಾ ನಿಮಗೆ ಯಡ್ಯೂರಪ್ನೋರೆ? ಏನ್ ಪ್ರಯೋಜ್ನ ಆಯ್ತು ನೀವು ಆಡಳಿತಕ್ಕೆ ಬಂದು? ಏನ್ ಪ್ರಯೋಜ್ನ ನಿಮ್ಮ ಕೈಲಿರೋ ಅಧಿಕಾರದ್ದು? ಏನ್ ಉಪಯೋಗ ಆಯ್ತು ಕನ್ನಡಕ್ಕೆ ನಿಮ್ಮಿಂದ? ಕನ್ನಡನಾಡಿನಲ್ಲಿ ನಿಮ್ಮ ಮುಂದೇನೇ ಹಿಂದಿ ಹಾಡು ಹಾಕಿದ್ದನ್ನ ಕೇಳಿ ನಿಮ್ಮ ರಕ್ತ ಕುದೀಬೇಕಾಗಿತ್ತು. ಅದು ಬಿಟ್ಟು ನೀವು ಏನಾದರೂ ಹಿಂದಿ "ರಾಷ್ಟ್ರಭಾಷೆ" ಅಂತ ನಿಮಗೆ ಹಿಂದೆ ಹೇಳ್ಕೊಟ್ಟಿರೋ ಸುಳ್ಳನ್ನೆಲ್ಲ ನೆನಪಿಸಿಕೊಂಡು ಸುಮ್ಮನಾಗಿಬಿಟ್ಟಿರೇನು? ನಿಮಗೆ ಯಾಕೆ ಈ ಗೊಂದಲ? ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಅಂತ ಗೊತ್ತಿಲ್ವಾ ನಿಮಗೆ?

8 ಅನಿಸಿಕೆಗಳು:

Anonymous ಅಂತಾರೆ...

ಸರ್ಕಾರ ಯಾವಾಗಲೂ ತಮ್ಮ ಸುಬದ್ರತೆಯನ್ನು ಕಾಪಾಡಿಕೊಳತ್ತೆ, ಕನ್ನಡ ಹಾಡು ಹಾಡಿ, ಅಥವಾ ಪರಭಾಷೆ ಹಾಡು ಹಾಡ ಬೇಡಿ ಅಂತ ಹೇಳಕ್ಕೆ ಗಂಡೆದೆ ಇರಬೇಕು ಸಿವ.

ಕನ್ನಡಿಗರು ಮೆಜಾರಿಟಿ ಇದ್ದಾಗಲೇ ಈ ಹಿಂಗೆ...

ಕನ್ನಡಿಗರದೇ ಒಂದು ರಾಜಕೀಯ ಪಕ್ಷ ಬೇಕು ಎಂದು ಕೇಳುವುದು ತಪ್ಪೇ? ನಮ್ಮದೊಂದು ಪಕ್ಷ ಕಟ್ಟಿದರೆ ನಾವು secular ಆಗಿ ಇರಕ್ಕೆ ಆಗಲ್ವ ? ಕನ್ನಡದ ಒಂದು ಪಕ್ಷ ಮುಂದೆ ಏನಾದರು ಬಂದರೆ... ಒಂದು ಮಾತ್ರಾ ಸತ್ಯ ಸಿವ, ನಮ್ಮ ನಾಡನ್ನು, ನುಡಿಯನ್ನು ಜಗತ್ತಿನ ಮುಂದೆ ಪ್ರತಿನಿಧಿಸಲು ಆಶಕ್ತರಾದವರು ಮಂತ್ರಿಗಳು ಆದರೆ.. ಕನ್ನಡ ಪಕ್ಷ ಆಗ್ಲಿ ಇಂದಿ ಪಕ್ಸ ಆಗ್ಲಿ ಏನೂ ಎತ್ವಾಸ ಇರಕ್ಕಿಲ್ಲ ಕನನ್ನೋ!!!

We need educated class in Kannada political party, so that they can take care of interests of Kannadigas in every sphere. Then, after few years, all political parties by default will have to work in the interest of Kannada, Kannadiga, Karunaadu.

Unknown ಅಂತಾರೆ...

We strongly need a party who really wants to heed kannadiga interest. In the present government many key ministers are of non-kannada origin. Singing or playing other than kannada songs in karnataka that too in a government function is shamefull for all us. We should unite and teach all these non-kannadiga ass holes a lesson.

Anonymous ಅಂತಾರೆ...

ತುಂಬ ಬೇಜಾರ ಆಗ್ತ ಇದೆ .. ಏನ್ ಗುರು ಅವರು ಏಕವಚನ ಬಳಸದೆ ಬರ್ದಿದಾರಲ್ಲ ಅವರ ತಾಳ್ಮೆಯ್ಗೆ ಮೆಚ್ಚ ಬೇಕು .. ಛೆ ಏನಿದು ಮುಖ್ಯ ಮಂತ್ರಿ ಅವರೇ ..
ಚಂದ್ರು

Anonymous ಅಂತಾರೆ...

ಎಲ್ಲಾದಕ್ಕೂ ಯಡಿಯೂರಪ್ಪನವರನ್ನೇ ಗುರಿ ಮಾಡೋದು ಸರಿ ಅಲ್ಲ ಗುರು. ಕರ್ನಾಟಕ ರಾಜ್ಯ ವಿದ್ಯುತ್ ನಿಗಮದ ಅಧಿಕಾರಿಗಳು, ನೌಕರರು ಎಲ್ಲರೂ ಇದ್ರಲ್ವಾ ಅಲ್ಲಿ? ಅವರಿಗೇನು ನರದೌರ್ಬಲ್ಯ ಇತ್ತಾ? ಯಡ್ಯೂರಪ್ಪನೋರು ಬರೋಕಿನ್ನ ಮುಂಚೆನೇ ನಿಲ್ಲಿಸಬಹುದಿತ್ತಲ್ಲ ಅದನ್ನ. ಎಲ್ಲದಕ್ಕಿಂತ ಮುಖ್ಯವಾಗಿ ಅದನ್ನು ಹಾಡಲು ವ್ಯವಸ್ಥೆ ಮಾಡಿಸಿದೋರ್ಯಾರು? ಯಡಿಯೂರಪ್ಪನೋರಾ?!

Anonymous ಅಂತಾರೆ...

ಅಜಯ್,
ಏನ್ ಗುರುಗಳು ಯಡಿಯೂರಪ್ಪನವರಿಗೆ ಅಂದಿದ್ದು ಯಾಕೆ ಅಂದ್ರೆ, ಕೊನೆ ಪಕ್ಷ ಅವರು ಅಲ್ಲಿ ಬಂದ ಮೇಲೆ ಅಲ್ಲಿರೋರಿಗೆ ಉಗಿದು ಕನ್ನಡ ಹಾಡು ಹಾಕಿ ಅಂತ ಹೇಳಬಹುದಾಗಿತ್ತಲ್ವಾ? ಅದು ಬಿಟ್ಟು ಅವರನ್ನ ಹುರಿದುಂಬಿಸಿ ಹಾಡು ಕೇಳಿದ್ರು ಅಂತೆ,, ನಾಡು-ನುಡಿ ಯ ವಿಷಯದಲ್ಲಿ ಒಂದು ಚಿಕ್ಕ ಅವಮಾನಾನು ಸಹಿಸಲ್ಲ ಅಂತಾ ಸರಿಯಾದ ಮೇಸೆಜ್ ಕೊಡೊಕೆ ಒಂದು ಒಳ್ಳೆ ಅವಕಾಶ ಇತ್ತು ಅವರಿಗೆ,, ಆದ್ರೆ ಏನ್ ಗುರು ಹೇಳಿದ ಹಾಗೆ ಹಿಂದಿ ರಾಷ್ಟ್ರ ಭಾಷೆ ಅನ್ನೋ ಹುಚ್ಚು ಕಲ್ಪನೆ ತಲೆಲಿ ಇರಬೇಕು ಅನ್ಸುತ್ತೆ.

Rajesh ಅಂತಾರೆ...

sanna sanna vishayagalanna doddadagi madodu thumba thappu..

Anonymous ಅಂತಾರೆ...

ಸಣ್ಣ ವಿಷಯ ಅಂತ ನಾವು ಕಡೆಗಣಿಸುತ್ತ ಇದ್ದರೆ ಮುಂದೆ ಇದೆ ನಮ್ಮ weakness ಆಗುತ್ತೆ ಕಣ್ರೀ
ಯಡಿಯೂರಪ್ಪ navru idanna oppose madbekittu

It really shame !!!

Anonymous ಅಂತಾರೆ...

eno sankochakke nadeeeli andirabahudu .. avarigoskara haaDugaLanna nillisabeku anta heLiralikkilla ..

aadare adanna bereyavaru haage tiLiyuvudilla .. bere bhaashegaLige uttejana needida haage andkotaare ..

CM banda koodaLe .. kannadakke switch maadabeku ..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails