ಅಚ್ಚಕನ್ನಡ ನಿಘಂಟು ಮತ್ತು ಕೊಳಂಬೆ ಪುಟ್ಟಣ್ಣಗೌಡರು

ಆಂಡಯ್ಯ ಅನ್ನೋ ಕವಿ ಕನ್ನಡದಲ್ಲೇ ಬರೆದು ಬಹಳ ಹೆಸರು ಮಾಡಿದ್ದವನು. ಅವನು ಹದಿಮೂರನೇ ಶತಮಾನದ ಮೊದಲ ಭಾಗದಲ್ಲಿ ಇದ್ದ ಒಬ್ಬ ಕವಿ. ಈತ ಆ ದಿನಗಳಲ್ಲೇ ಅಚ್ಚಗನ್ನಡ ಬಳಸಿ ಕಾವ್ಯ ಬರೆದಿದ್ದವನು. ಇದೀಗ ಇಪ್ಪತ್ತನೇ ಶತಮಾನದಲ್ಲಿ ಅಂದಿನ ಆಂಡಯ್ಯನಿಗಿಂತಲೂ ಒಂದು ಹೆಜ್ಜೆ ಮುಂದೆ ಸಾಗಿದ್ದ ವಿದ್ವಾನ್ ಶ್ರೀ ಕೊಳಂಬೆ ಪುಟ್ಟಣ್ಣಗೌಡರು ಆಂಡಯ್ಯನಿಗೇ ಸವಾಲಾಗಿ ಅವನನ್ನೇ ಮೀರಿಸಿರೋ ಮಹಾನುಭಾವರು ಅಂತ ಕನ್ನಡ ಸಾರಸ್ವತ ಲೋಕದ ದಿಗ್ಗಜರು ಅಭಿಪ್ರಾಯ ಪಟ್ಟಿದ್ದಾರೆ.
ಪುಟ್ಟಣ್ಣ ಗೌಡರು ಅಪಭ್ರಂಶಗಳನ್ನು ಕೂಡಾ ಬಳಸದೆ ಕೇವಲ ದೇಶೀಯ ಪದಗಳನ್ನು ಬಳಸೇ "ಕಾಲೂರ ಚೆಲುವೆ’ ಅನ್ನೋ ರೋಚಕವಾದ ಕಾವ್ಯವನ್ನು ಬರ್ದಿದಾರೆ. ಈ ಕಾವ್ಯದ ಮೂಲಕ ಇಡೀ ಕನ್ನಡ ಸಾಹಿತ್ಯ ಲೋಕವನ್ನೇ ಅಚ್ಚರಿಗೊಳಿಸಿದ್ದ ಈ ಸಾಧಕರು ’ಅಚ್ಚಕನ್ನಡ ನುಡಿಕೋಶ’ ಎನ್ನೋ ಕನ್ನಡ ಶಬ್ದಗಳ ನಿಘಂಟನ್ನು ರಚಿಸಿದ್ದಾರೆ. ಈ ಹೊತ್ತಿಗೆಯನ್ನು ಮೈಸೂರಿನ ಪುಸ್ತಕ ಪ್ರಕಾಶನದವರು ೧೯೯೩ರಲ್ಲೇ ಹೊರತಂದಿದ್ದಾರೆ. ಹಳಗನ್ನಡ ಮತ್ತು ಹೊಸಗನ್ನಡಗಳಿಗೆ ಸೇತುವೆಯಾಗಿ ದುಡಿದ ಮಹನೀಯರು ಅನೇಕ ಹೊಸ ಕನ್ನಡ ಪದಗಳನ್ನೂ ಹುಟ್ಟುಹಾಕಿದ್ದಾರೆ. ವಿಮಾನಕ್ಕೆ ಬಾನೋಡ, ಸ್ವರ್ಗಕ್ಕೆ ಮೇಲ್ನೆಲ ಎನ್ನುವ ವಿಶಿಷ್ಟ ಪದಗಳ ಜನಕರು ಇವರು. ಈ ಹೊತ್ತಿಗೆ ನಿಮ್ಮ ಹೊತ್ತಿಗೆ ಮನೆಯಲ್ಲಿರೋದು ಹೊತ್ತಿಗೆಮನೆಗೆ ಶೋಭೆ.

7 ಅನಿಸಿಕೆಗಳು:

ತಿಳಿಗಣ್ಣ ಅಂತಾರೆ...

ಕೊಳಂಬೆಯವರ ಬಗ್ಗೆ ಸಂಪದ ವೆಬ್‌-ಸಯ್ಟಲ್ಲಿ ಸಾಕಶ್ಟು ಬರಹಗಳು ಬಂದಿವೆ..

ಅವರೆ "ತಿಳಿಗನ್ನಡ ನುಡಿವಣಿ"ಗಳು ತುಂಬಾ ಚನ್ನಾಗಿವೆ.

ಮೊದಲ ನುಡಿವಣಿ( ನುಡಿಮಣಿ? )

ಆವ ಪಾಲ್ಗಡಲ ಪಾಲ್ ಮೊಲೆಗಳೆಲ್ಲವ ತುಂಬಿ
ಹೂ ಜೇನು ಹಣ್ಗಳ ಸೀಯಾಗಿ ಮುಂತೆ
ಬಗೆ ಬಗೆ ಸವಿಯಾಗಿ ಹೊನಲಾಗಿ ಕಾವುದೊ
ಪಾಲ್ಗಡಲದಕೆ ಮಣಿವೆ ಮೊದಲಂತೆ

ಎಷ್ಟು ಚನ್ನಾಗಿದೆ!

ಯಾವ ಹಾಲ ಕಡಲು, ಹಾಲ ಮೊಗೆಗಳಂತೆ ಎಲ್ಲವನ್ನು ತುಂಬಿ( ಬೆಳೆಸಿ ), ಹೂ, ಜೇನು, ಹಣ್ಣುಗಳನ್ನು ಸಿಹಿಯಾಗಿಸಿದೆ. ಮುಂದೆ ಈ ಹಾಲ್ಗಡಲ ಹಾಲೇ ಬಗೆಬಗೆಯ ಸವಿಯಾದ ಹೊನಲಾಗಿ/ಹೊಳೆ/ನದಿಯಾಗಿ ಜೀವಿಗಳನ್ನು ಕಾಯುತ್ತಿದೆ/ಪೊರೆಯುತ್ತಿದೆ. ಅಂತಹ ಹಾಲ್ಗಡಲಿಗೆ ಮೊದಲ ನಮಸ್ಕಾರ/ಕುಂಬು/ಮಣೆ/ತುೞಿಲ್ ಮಾಡುವೆನು!

ವಿಶೇಶ: ಎಲ್ಲರು ಹರಿಯ ಕುಂಬಿಂದ ಶುರುಮಾಡಿದರೇ, ಇವರು ಹರಿಗೇ ಇಂಬಾದ ಹಾಲ್ಗಡಲಿಗೆ ಮಣಿದು ಮೊದಲು ಮಾಡಿಹರು!!

Unknown ಅಂತಾರೆ...

ಗೌಡರ ಬರಹಗಳ ಒಂದು ಲಿಸ್ಟ್ ಮತ್ತು ಅವುಗಳು ಸಿಗುವ ಅಂಗಡಿಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಬೇಕಾಗಿ ವಿನಂತಿ.

-- ಕೊ. ಶಿ. ವಿನಯ್ ಗುಪ್ತ

Anonymous ಅಂತಾರೆ...

vinay gupta avare,

list gist gottilla, aadare mele heliruva pustaka bengaloorinalli 'ankita pustaka' dalli siguttade.

ಕುಕೂಊ.. ಅಂತಾರೆ...

ನಮಸ್ತೆ ಗುರು,
ನಾನು ಕುಮಾರಸ್ವಾಮಿ, ಪುಣೆಯಲ್ಲಿ ವಾಸಮಾಡುತ್ತಿದ್ದೇನೆ. ನಿಮ್ಮ ಈ ಬರಹ ನೋಡಿ ತುಂಬಾ ಖುಷಿ ಆಯಿತು. ಗೌಡರ ಪುಸ್ತಕ ನನಗೆ ಬೇಕು. ನಾನಿರುವುದು ಪುಣೆಯಲ್ಲಿ ಹೇಗೆ ತರಿಸಿಕೊಳ್ಳುವುದು ನನಗೆ ತಿಳಿಸುವಿರ? ಸಾದ್ಯವಾದರೆ ನೀವು ಕಳಿಸಿ ಕೊಡುವಿರ? ನನ್ನ ದೂರವಾಣಿ ಸಂಖ್ಯೆ: 09970015493 ಮಿಂಚೆ ವಿಳಾಸ: kadakolla@gmail.com.

ಧನ್ಯವಾದಗಳೊಂದಿಗೆ
ಸ್ವಾಮಿ

Anonymous ಅಂತಾರೆ...

ankita pustakakke kare maadi:

080-26617100

Anonymous ಅಂತಾರೆ...

ಸ್ನೇಹಿತರೆ,

ವಿದ್ವಾನ್ ಕೊಳ0ಬೆ ಪುಟ್ಟಣ್ಣಗೌಡರ ಆಚ್ಚಗನ್ನಡದಲ್ಲಿರುವ "ಕಾಲೂರ ಚೆಲುವೆ" ಮತ್ತು "ನುಡಿವಣಿಗಳು" ಇವೆರಡನ್ನೂ ಒಗ್ಗೂಡಿಸಿ ಅಚ್ಚಗನ್ನಡ ಸಮಗ್ರ ಕಾವ್ಯವೆ0ಬ
ಹೆಸರಿನ ಹೊತ್ತಗೆ ಬಿಡುಗಡೆಗೊ0ಡಿದೆ.
ಸಪ್ನಾ ಬುಕ್ಸ್ ನವರು ಪ್ರಕಟಿಸಿದ್ದಾರೆ. ಅವರ ಎಲ್ಲಾ ಮಳಿಗೆಗಳಲ್ಲಿ ಪುಸ್ತಕ ದೊರೆಯುತ್ತದೆ.

-ಬಸವರಾಜು ಡಿ. ಎಸ್.

Anonymous ಅಂತಾರೆ...

ನಮಸ್ತೆ,

ಮತ್ತೊ0ದು ಸಿಹಿ ಸುದ್ದಿ. ಇದೇ 22-03-14 ಶನಿವಾರದ0ದು ಸ0ಜೆ 5.30ಕ್ಕೆ ಶತಾವಧಾನಿ ಡಾ. ಆರ್. ಗಣೇಶ್ ಅವರು 'ಕಾಲೂರ ಚೆಲುವೆ' ಕುರಿತು ಮಾತಾಡಲಿದ್ದಾರೆ.
ಸ್ಥಳ:
ಸುಚಿತ್ರ ಫಿಲ್ಮ್ ಸೊಸೈಟಿ,
36, 9ನೇ ಮುಖ್ಯರಸ್ತೆ,
ಬನಶಂಕರಿ 2ನೇ ಹ0ತ,
ಬೆಂಗಳೂರು - 70
ದೂರವಾಣಿ:080- 26711785

ದಯಮಾಡಿ ಬನ್ನಿ!


-ಬಸವರಾಜು
-9740888227

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails