ಕುಸೇಲನ್ ಕನ್ನಡಿಗರಿಗೆ ಕಲಿಸಿದ ಪಾಠ!

ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ ಕುಸೇಲನ್ ಬಿಡುಗಡೇನಾ ಬೇಡ ಅಂತನ್ನೋ ಕನ್ನಡಿಗರ ದನಿ, ದಿನ ಕಳೆದ ಹಾಗೆ ಗಟ್ಟಿಯಾಗ್ತಾ ಹೋಗ್ತಿದ್ದ ಹಾಗೇ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗೋ ಸಾಧ್ಯತೆ ಕರಗ್ತಾ ಬಂತು. ಕರ್ನಾಟಕ ರಕ್ಷಣಾ ವೇದಿಕೆಯೋರು ಒಂದೊಂದೇ ಚಿತ್ರಮಂದಿರಗಳ ಮಾಲಿಕರ ಹತ್ತಿರ ಮಾತಾಡಿ, ಅವರ ಮನವೊಲಿಸಲು ಶುರು ಮಾಡ್ತಿದ್ದ ಹಾಗೇ ಚಿತ್ರಮಂದಿರದೋರು ಚಿತ್ರ ಪ್ರದರ್ಶನ ಮಾಡಲು ಹಿಂದೇಟು ಹಾಕತೊಡಗಿದ್ರು. ಇವತ್ತು ಮಧ್ಯಾಹ್ನ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡಿಗರ ದೊಡ್ಡ ಪ್ರತಿಭಟನೆ ನಡೆದದ್ದೂ ಇದಕ್ಕೆ ಪೂರಕವಾಗಿ ನಡೆದು, ಅಂತೂ ಕಡೆಗೆ ರಜನಿಕಾಂತ್ ಕನ್ನಡಿಗರ ಕ್ಷಮೆ ಕೇಳಿ, ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಲು ವಿನಂತಿಸಿಕೊಂಡ ಸುದ್ದಿ ಮಾಧ್ಯಮಗಳಲ್ಲಿ ಬರ್ತಾ ಇದೆ ಗುರು! ಆವತ್ತು ಕರ್ನಾಟಕದಲ್ಲಿ ಸರ್ಕಾರ ಇಲ್ಲಾ ಅಂತ ಕರುಣಾನಿಧಿ ಹೊಗೆನಕಲ್ ಯೋಜನಾ ಕಾಮಗಾರಿ ಕೈಗೆತ್ತಿಕೊಂಡಾಗಲೂ ಕನ್ನಡದೋರು ಒಗ್ಗಟ್ಟಾಗಿ ನಿಂತು ಪ್ರತಿಭಟಿಸಿದಾಗ ಇಡೀ ಯೋಜನೇನ ಮುಂದೂಡಿದ್ರು. ಆವತ್ತು ಯಾವ ಕನ್ನಡದ ಒಗ್ಗಟ್ಟಿನ ಶಕ್ತಿ ತಮಿಳುನಾಡನ್ನು ಹಿಮ್ಮೆಟ್ಟಿಸಿತ್ತೋ ಅದೇ ಇವತ್ತೂ ರಜನಿ ಕ್ಷಮೆ ಕೇಳಲು ಕಾರಣವಾಗಿದೆ ಗುರು!
ಹೊಗೆನಕಲ್ ಪ್ರತಿಭಟನೆಗಳ ಸರಣಿಯಲ್ಲಿ ರಜನಿ ಕನ್ನಡಿಗರ ಕುರಿತು ಅವಹೇಳನಕಾರಿಯಾಗಿ ಮಾತಾಡಿ ಒದೀಬೇಕು ಅಂದಿದ್ದೂ, ಆಮೇಲೆ ನಾನಂದಿದ್ದು ಕೆಟ್ಟವರಿಗೆ ಅಂದಿದ್ದೂ, ಕ್ಷಮೆ ಕೇಳಲ್ಲಾ ಅಂದಿದ್ದೂ, ನನ್ನ ಚಿತ್ರ ನೋಡದಿದ್ರೆ ನಷ್ಟ ಕನ್ನಡಿಗರಿಗೇ ಅಂದಿದ್ದೂ... ಎಲ್ಲವೂ ಇದೀಗ ’ತಪ್ಪು ಮಾಡಿದ್ದೇನೆ, ಮತ್ತೊಮ್ಮೆ ಮಾಡಲ್ಲ, ಕ್ಷಮಿಸಿ’ ಅಂದ ಮಾತಿಂದ ಅಳಿಸಿಹೋಗಿದೆ ಅಂತಾ ಅನ್ಸುದ್ರೂ ಇಡೀ ಪ್ರಕರಣದಲ್ಲಿ ಕನ್ನಡದೋರು ಕಲೀಬೇಕಾದ ಒಂದು ಪಾಠ ಇದೆ ಗುರು!

ಸಹನೆ ದೌರ್ಬಲ್ಯ ಆಗಬಾರದು!

"ಕನ್ನಡಿಗರು ಸಹನಶೀಲರು, ನೀರು ಕೇಳ್ದೋರಿಗೆ ಮಜ್ಜಿಗೆ ಕೊಡ್ತಾರೆ" ಅನ್ನೋ ಹೊಗಳಿಕೆ ಮಾತಿಗೆ ಮರುಳಾಗಿ ಕೂತ್ಕೊಂಡ್ರೆ ಆಗಬಾರದ ಅಪಮಾನಗಳು ಆಗುತ್ವೆ ಅಷ್ಟೆ. ಈ ಬಾರಿ ಕನ್ನಡಿಗರು ರಜನಿಕಾಂತ್ ಆಡಿದ ಮಾತಿನಿಂದ, ಮಾಡಿದ ಅಪಮಾನದಿಂದ ನೊಂದು ಅವರ ಸಿನಿಮಾ ಬಿಡಲ್ಲ ಅಂದಿದ್ದು, ಈ ವಿಷಯಾನ ಸ್ವಾಭಿಮಾನದ ಪ್ರಶ್ನೆಯಾಗಿ ಬಗೆದದ್ದು ಇವತ್ತು ರಜನಿಕಾಂತ್ ಕ್ಷಮೆ ಯಾಚಿಸಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರ ಬಗ್ಗೆ ಯಾರು ಬೇಕಾದ್ರೂ ಹಗುರಾಗಿ ಮಾತಾಡಕ್ಕಾಗಲ್ಲ ಅನ್ನೋ ಸಂದೇಶಾನ ಇದು ಕೊಡ್ತಿದೆ. ಕನ್ನಡದೋರೂ ಕೂಡಾ ಅಪಮಾನಾನ ಸಹಿಸದೆ ಒಟ್ಟಾಗಿ ನಿಂತು ಪ್ರತಿಭಟಿಸಿದ್ರೆ ಇಂಥಾ ಘಟನೆಗಳು ಮರುಕಳಿಸಲ್ಲ ಗುರು!

ವಾಣಿಜ್ಯ ಮಂಡಳಿ ಕರ್ನಾಟಕದ್ದಾಗಿರಲಿ!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಕನ್ನಡ ಚಿತ್ರಗಳಿಗೆ ಹೊರನಾಡಿನಲ್ಲಿ ಹೇಗೆ ಮಾರುಕಟ್ಟೆ ಒದಗಿಸಿ ಕೊಡೋದು? ನಮ್ಮ ನಾಡಿನಲ್ಲೇ ಪರಭಾಷಾ ಚಿತ್ರಗಳ ಬಿಡುಗಡೆ ನಮ್ಮ ಚಿತ್ರಗಳಿಗೆ ತೊಂದರೆ ಮಾಡ್ದೆ ಇರಕ್ ಏನ್ ಮಾಡಬೇಕು? ನಮ್ಮ ಚಿತ್ರರಂಗಕ್ಕೆ ಅಗತ್ಯವಿರೋ ತಂತ್ರಜ್ಞಾನ, ಸ್ಟುಡಿಯೋ, ಲ್ಯಾಬ್ ಇತ್ಯಾದಿ ಸೌಕರ್ಯಗಳ ಬಳಕೇಲಿ ಹೇಗೆ ಸ್ವಾವಲಂಬನೆ ಸಾಧಿಸೋದು? ನಮ್ಮ ನೆಲದ ಕೊಡವ, ತುಳು ಚಿತ್ರರಂಗಾನ ಹೇಗೆ ಬೆಳೆಸೋದು? ಇತ್ಯಾದಿ ಹತ್ತಾರು ಕೆಲಸ ಮಾಡದ್ ಬಿಟ್ಟು ತಮಿಳು, ತೆಲುಗು, ಹಿಂದಿ ಚಿತ್ರಗಳ ಬಿಡುಗಡೆಗೆ ಅಡ್ಡಿಯಾಗದಂತೆ ಹೇಗೆ ನೋಡ್ಕೊಳ್ಳೋದು ಅಂತ ಕಾಳಜಿ ವಹಿಸೋದನ್ನು ನೋಡ್ತಿದ್ರೆ ಬಸವಣ್ಣನೋರು ಹೇಳಿದ "ನೆಲಹತ್ತಿ ಉರಿದೊಡೆ ನಿಲಬಹುದಯ್ಯ...ಏರಿ ನೀರುಂಬೊಡೆ, ಬೇಲಿ ಹೊಲ ಮೆಯ್ದೊಡೆ, ನಾರಿ ತನ್ನ ಮನೆಯಲೆ ಕಳುವೊಡೆ...ಆರು ಕಾವರಯ್ಯ ಕೂಡಲ ಸಂಗಮದೇವಾ!" ವಚನ ನೆನಪಾಗುತ್ತೆ ಗುರು! ಅವ್ರು ಇನ್ನಾದ್ರು ಸುಧಾರಿಸ್ಲಿ.

18 ಅನಿಸಿಕೆಗಳು:

Kishore ಅಂತಾರೆ...

ಸಕ್ಕತ್ತಾಗಿ ಬರ್ದಿದಿರಾ ಗುರು. ನಮ್ಮ ನೆಲದ ಕೊಡವ, ತುಳು ಹಾಗು ಕೊಂಕಣಿ ಚಿತ್ರರಂಗಾನ ಹೊಸ ಹೊಸ ತಂತ್ರಜ್ಞಾನ ಬಳಸಿ ಒಳ್ಳೆ ಚಲನ ಚಿತ್ರ ತೆಗಿಬೇಕು. ಕರ್ನಾಟಕದ ಚಲನ ಚಿತ್ರಕ್ಕೆ ಆಸ್ಕರ್ ಮುಂತಾದ ಪ್ರಶಸ್ತಿಗಳು ಸಿಗಬೇಕು. ಕರ್ನಾಟಕ ಚಲನ ಚಿತ್ರ ಮಂಡಳಿ ಕೆಳಗಿನ ವಿಷಯಗಳ ಕಡೆ ಗಮನ ಹರಿಸಲೇಬೇಕು. ಇಲ್ಲದಿದ್ದರೆ.. ನಾವು ಮತ್ತೆ ಈ ವಿಷಯಕ್ಕೆ ಹೋರಾಟ ಮಾಡಬೇಕಾದೀತು:

೧) ಹಾಲಿವುಡ್ ಗೆ ತಾಂತ್ರಿಕ ನೆರವು ಬೆಂಗಳೂರಿಂದ ಸಿಗುತ್ತಿದೆ ಎಂದ ಮೇಲೆ.. ತಂತ್ರಜ್ಞಾನದ ಕೊರತೆ ನಮಗಿಲ್ಲ. ಈ ನಿಟ್ಟಿನಲ್ಲಿ ತಂತ್ರಜ್ಞಾನ, ಸ್ಟುಡಿಯೋ, ಲ್ಯಾಬ್ ಇತ್ಯಾದಿ ಸೌಕರ್ಯಗಳನ್ನು ಅತ್ಯುತ್ತಮ ಗೊಳಿಸಬೇಕು.

೨) ನಮ್ಮ ಚಲನ ಚಿತ್ರಗಳನ್ನು ಭಾರತವೇ ಅಲ್ಲದೆ.. ಬೇರೆ ದೇಶಗಳಲ್ಲೂ ಮಾರಾಟ ಮಾಡಬೇಕು. ಜನರು ಆಕರ್ಶಿತರಾಗುವಂತಹ ಗ್ರಾಫಿಕ್ಸನ್ನು ಚೆನ್ನಾಗಿ ಬಳಸಿ ನಮ್ಮದೇ ಆದ ಶೈಲಿಯಲ್ಲಿ ಮಾರಾಟ ಮಾಡ ಬೇಕು. ಹೇಗೆ ಹಿಂದಿ ಚಿತ್ರ ಇಲ್ಲಿ ತೆರೆ ಕಾಣುತ್ತದೋ.. ಹಾಗೆಯೇ ಉತ್ತರ ಭಾರತದಲ್ಲೂ ಪ್ರದರ್ಶನ ಗೊಳ್ಳಬೇಕು. ಕೇಂದ್ರ ಸರ್ಕಾರ ಇದಕ್ಕೆ ಅಡ್ಡಿ ಆಗ ಬಾರದು.

೩) ಏನಿಲ್ಲ, ಮನಸ್ಸು ಕನ್ನಡಕ್ಕಾಗಿ ಮಿಡಿಯಬೇಕು.. ಆಗಲೇ ಎಲ್ಲವನ್ನು ಬದಿಗೊತ್ತಿ.. ಕರ್ನಾಟಕ ಚಲನ ಚಿತ್ರ ಮಂಡಳಿ.. ಕನ್ನಡ ಚಲನ ಚಿತ್ರ ಮಂಡಳಿ ಆಗುವುದು.

ಜೈ ಕನ್ನಡಾಂಬೆ!!
ಕಿಶೋರ್.

Anonymous ಅಂತಾರೆ...

Kanndiagara oggatige idu sanda jaya. Ka Ra Vedikege abhinandanegalu.

Illig mukhyavagi gamanisabekada amsha ide. Kannadigara janashamkye kadime iruvudarindale kannada chitra rangada marukatte hora rajayagalalli beledilla.

innnu Kodava haagu Tulu bhasheyavara samkshye bahala kadime. aa bhashegala chitragalannu karnatakadalle noduvavaru siguvudu kashta. Tulu chitra Dakshina Kannada, Udupinalli kelavaru nodabahudu. Allinavaru Tulu chitra protsahisuttarembudu ashtakashte. Ekendare allina mandi Bollywoodna gulamaragiddare.

Amarnath Shivashankar ಅಂತಾರೆ...

As usual, its karnataka rakshana vedike which came to our rescue..
They have done a splendid job in pressurising everybody who were trying to release kuselan without Rajnikanth seeking apology.
Great job guys..Keep up the momentum

Lohith ಅಂತಾರೆ...

Mast Guru Super article,
Nenne mane ge hodaga TV9 alli rajani kshame yachisiddu nodi Halkudid astu santhosha aythu Guru...Edr bagye article tumba chanage bardidera....Anthu kannadigaru mathome torsidare Sneha ku badda Samarakku sidda antha........

ಪುಟ್ಟ PUTTA ಅಂತಾರೆ...

ಈ ಬೆಳಿಗ್ಗೆ NDTV ನಲ್ಲಿ "Rajni says he has not apologized" ಅಂತ ಸುದ್ದಿ ಬರ್ತಾ ಇತು. ಇಂಥ ಊಸರವಲ್ಲಿಗಳಿಗೆ ಏನಂತ ಹೇಳೋದು. ಮಣ್ಣಿಗೆ ಬಿದ್ದರೂ ಮೀಸೆ ಮಣ್ನಾಗ್ಲಿಲ್ಲ ಅಂತಿದ್ದಾನೆ.

Anonymous ಅಂತಾರೆ...

Excellent Job..


Al kannadigas are proud of Karnataka Rakshna Vedike..

Keep up the good work!!!..

Jai Karnataka!!

Anonymous ಅಂತಾರೆ...

Rajani has not apologized anta ellu sigalilla. idashte sikiddu nanage -http://www.ndtvmovies.com/newstory.asp?section=Movies&id=ENTEN20080059619

ide thara ella vishayadallu oggattaagi irbeku. Kannadigaranna kenakuva ellarigu idondu paaTa.

article bahala chennagide!

Anonymous ಅಂತಾರೆ...

putta.. kelage bidru mise mannaglilla anta heli.
avru angene. namma jotene aata adakke bartare.

Anonymous ಅಂತಾರೆ...

Putta - Rajni is playing mind games.

Anonymous ಅಂತಾರೆ...

This is very bad. He has not asked for apology with kannadigas. He is arrogant and has forgotten that he is basically from Karnataka. He is also an opportunist. The major market cover for his films is in Karnataka. Our kannada producers, distributors, exibitors are also his chelas.

Kishore ಅಂತಾರೆ...

1) All those Kanndiga techies, who boast of developing graphix solutions for English movies from bangalore, where are they? can they be contactd and ask them to help Save Kannada movie industry. Does KFCC job need to be done by comman man?

2) Where is that rule of releasing other language movies 8 weeks after its actual release date in other states?
Have we succumbed yet?

3)What can a common man like you and me do to get Kannada movies release in Multiplexes. Do we have to go to nanda, nalanda, kamaakya, majestic, krishna, bhairava... hesare kelada chitra mandira etc.,

I couldn't take my family members for Satya Harishchandra, because it was removed in PVR within 1 week.

ಶ್ವೇತ ಅಂತಾರೆ...

ರಜನಿಕಾಂತನಿಗೆ ಇಷ್ಟು ಸುಲಭವಾಗಿ ಮುಕ್ತಿ ಕೊಡಬಾರದಿತ್ತು ಕರ್ನಾಟಕದಲ್ಲಿ. ಪ್ರತಿಭಟನೆ ಮಾಡಿ ಮಾಡಿ ಅವನ ಸಿನಿಮಾಗಳಿಗೆ ಇನ್ನು ಪ್ರಚಾರ ಕೊಡುತ್ತಿದ್ದರೆ ಕರ್ನಾಟಕದಲ್ಲಿ.

ಅಂದ ಹಾಗೆ ತುಳು ಮತ್ತು ಕೊಡವ ಭಾಶೆಯ ಸಿನಿಮಾಗಳಿಗೆ ಕರ್ನಾಟಕದ ಬೇರೆ ಕಡೆಗಳಲ್ಲು ಬಿಡುಗಡೆ ಮಾಡಿ, ಕನ್ನಡದಲ್ಲಿ ಸಬ್ ಟೈಟಲ್ ಕೊಟ್ಟರೆ ಚೆನ್ನಗಿರುತ್ತದೆ. ಅವರ ಮಾರುಕಟ್ಟೆಯನ್ನೂ ಹೆಚ್ಚಿಸಿಕೊಳ್ಳಬಹುದು ಹಾಗೆ ನಮಗು ಅವರ ಸಿನಿಮಾಗಳನ್ನು ನೋಡಲು ಅನುಕೂಲ. ತುಳು ಭಾಷೆಯ ಚಿತ್ರಗಳಿಗೆ ಅನೇಕ ಪ್ರಶಸ್ಥಿಗಳು ಬಂದಿರುವುದು ಸಹ ಕೇಳಿದ್ದೇನೆ. ಆದರೆ ಸಬ್ ಟೈಟಲ್ ಇಲ್ಲದಿದ್ದರೆ ನೋಡಲು ಕಷ್ಟ. ಕೆ.ಎಫ್.ಐ ಅವರು ಇದನ್ನು ಹೆಚ್ಚಗಿ ಪ್ರೋತ್ಸಾಹಿಸಿ ಬೆಳೆಸುವುದು ಉತ್ತಮ.

Anonymous ಅಂತಾರೆ...

This looks like a small success story. We wanted an apology and we got one. This happened because we were united and all of us banged our opinions anywhere and everywhere and supported this issue.

Success tastes sweet and we now know what unity can achieve.

Anonymous ಅಂತಾರೆ...

http://thatskannada.oneindia.in/movies/controversy/2008/08/02-i-never-apologized-to-kannadigas-rajinikanth.html#cmntTop

It seems rajanikanth is saying now that he dint apologize. Read the above link in thatskannada

-shwetha

Anonymous ಅಂತಾರೆ...

ಒಂದು ವಿಚಾರ ನಿಮ್ಮ ಗಮನಕ್ಕೆ. ರಜನಿ ಕ್ಷಮೆ ಕೇಳುವುದಕ್ಕೂ ಮುನ್ನ ಸಿಎನ್‌ಎನ್ ಐಬಿಎನ್ ಒಂದು ಎಸ್ಸೆಮ್ಮೆಸ್ ಪೋಲ್‌ಗೆ ಆಹ್ವಾನ ನೀಡಿತ್ತು. ರಜನಿಕಾಂತ್ ಕ್ಷಮೆ ಯಾಚಿಸಬೇಕೆ, ಬೇಡವೇ ಎಂಬುದು ಅವರ ಪ್ರಶ್ನೆ. ಆದರೆ ವಿಚಿತ್ರವೆಂದರೆ ರಜನಿಯ ಯಾವ ಮಾತಿಗಾಗಿ ಕ್ಷಮೆ ಕೋರುವಂತೆ ಕನ್ನಡಿಗರು ಒತ್ತಾಯಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅವರು ಕೊಡಲೇ ಇಲ್ಲ. ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿದ್ದ ರಜನಿ ಹೇಳಿಕೆಯನ್ನು ಪ್ರಸಾರ ಮಾಡಿ ಆನಂತರ ಕ್ಷಮೆ ಕೋರಬೇಕೆ, ಬೇಡವೇ ಎಂದು ಕೇಳಬಹುದಿತ್ತಲ್ಲವೆ. ಪುಣ್ಯ, ರಜನಿ ಕ್ಷಮೆ ಯಾಚಿಸಿಬಿಟ್ಟ. ಇಲ್ಲವಾದಲ್ಲಿ ಐಬಿಎನ್‌ನವರ ಫಲಿತಾಂಶ ಹೀಗಿರುತ್ತಿತ್ತು. ಕ್ಷಮೆ ಕೇಳಬೇಕು ಎನ್ನುವವರ ಸಂಖ್ಯೆ ಶೇ.೫, ಬೇಡ ಎನ್ನುವವರ ಸಂಖ್ಯೆ ಶೇ.೯೫! ಸುಮ್ಮಸುಮ್ಮನೆ ರಜನಿ ಕ್ಷಮೆ ಕೇಳಬೇಕಾ ಎಂದರೆ ಎಲ್ಲರೂ ಬೇಡ ಎಂದೇ ಹೇಳುತ್ತಾರಲ್ಲವೆ? ಹೇಗಿದೆ ಇಂಗ್ಲಿಷ್ ಚಾನೆಲ್‌ಗಳ ಆಟ? ಐಬಿಎನ್‌ನ ಬೆಂಗಳೂರು ವರದಿಗಾರ್ತಿ ದೀಪಾ ಬಾಲಕೃಷ್ಣನ್ ಸಂಜೆ ಒಂದಷ್ಟು ರಜಿನಿ ಅಭಿಮಾನಿ ಪಡೆಯನ್ನು ಗುಡ್ಡೆ ಹಾಕಿಕೊಂಡು ಬೆಂಗಳೂರಿನಿಂದ ಲೈವ್ ಮಾತನಾಡಿದಳು. ಆಕೆಯ ಸಂಭ್ರಮಕ್ಕೆ ಪಾರವೇ ಇಲ್ಲ. ದುರಂತವೆಂದರೆ ಆಕೆಯ ಸುತ್ತ ತಮಿಳು ಬಾವುಟಗಳು ಹಾರಾಡುತ್ತಿದ್ದವು. ಕನ್ನಡಿಗರು ತಮಿಳರ ವಿಷಯದಲ್ಲಿ ಯಾಕೆ ಅಷ್ಟೊಂದು ಕೆರಳುತ್ತಾರೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ-ದಿನೇಶ್

Anonymous ಅಂತಾರೆ...

We have got what we wanted. Our purpose was to make people aware that we exist. Kannadigas exist as united strength.

Now, our concentration should be to prmote Kannada Movies.

Anonymous ಅಂತಾರೆ...

sareege heLiddira gurugaLe ..

Anonymous ಅಂತಾರೆ...

watch kannada movies here ..
freeindianmovie.blogspot.com

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails