ಬೆಳಗಾವಿ ಅಧಿವೇಶನ ಮತ್ತು ಮಹಾಮೇಳಾವ

ಶರಣ್ರೀ ಸಾಹೇಬ್ರಾ... ನೀವಾರ ಈ ಮಂದೀಗ ತುಸಾ ಬುದ್ದೀ ಹೇಳ್ರಲಾ... ನಮ್ ಬೆಳಗಾವಿಯಾಗ ಸರ್ಕಾರ ವಿಧಾನಸಭಾ ಅಧಿವೇಶನಾ ನಡ್ಸಾಕ್ ಮುಂದಾಗಾರಾ ಅಂದ್ ಕೂಡ್ಲಾ ತಿಗಿಣಿ ಕಡ್ದಾಂಗ್ ಆಡಾಕ್ ಹತ್ಯಾರಾ! ಕರ್ನಾಟಕದ ವಿಧಾನ ಸಭಾ ಅಧಿವೇಶನ ನಡ್ಯೂ ದಿನಾನ ನಾವು ’ಮಹಾಮೇಳಾವ’ ಮಾಡ್ತೇವ ಅಂತ ಹಟ ಹಿಡ್ಕೊಂಡ್ ಕುಂತಾರಾ ಈ ಎಂಇಎಸ್ ಮಂದಿ.
ಇದಾ ಮೊದಲಲ್ಲಾ...
ಬೆಳಗಾವೀನಾ ಮಾರಾಷ್ಟ್ರಾದೊಳಗ ಸೇರಿಸೋಣು ಅನ್ನೊ ಹಟ ಹಿಡ್ದಿರೋ ಮಹಾರಾಷ್ಟ್ರ ಏಕೀಕರಣ ಸಮಿತಿ ಮಂದಿ, ಹೀಂಗ್ ಆಡ್ತಿರೋದೂ ಇದಾ ಮೊದಲಲ್ರೀ ಸರಾ... ಹಿಂದ ಎಮ್.ಇ.ಎಸ್ ಮೋರೆಗೆ ಮಸಿ ಬಳ್ದಾಗಿಂದ ಬಾಲ ಸುಟ್ಟ ಬೆಕ್ಕಂಗಾಗಿರೋ ಎಂ.ಇ.ಎಸ್ ಮಂದಿ 2006, ಸೆಪ್ಟೆಂಬರ್ 25ಕ್ಕ ಕುಮಾರಸ್ವಾಮಿಗೋಳ ಸರ್ಕಾರ, ಮೊದಲ ಸರತಿ ಬೆಳಗಾವ್ಯಾಗ ಕರ್ನಾಟಕ ವಿಧಾನ ಮಂಡಲದ ಅಧಿವೇಶನಕ್ ಮುಂದಾದಾಗ ಈ ಮಹಾಮೇಳಾವ ನಡ್ಸಿದ್ರುರೀಪಾ. ಆಗ ಮಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ಯಾಗ್ ಕುಂತಿದ್ ಆರ್.ಆರ್.ಪಾಟೀಲ ಸಾಯೇಬ್ರು ಬೆಳಗಾವಿಗ್ ಬಂದು ಹುಳಿ ಹಿಂಡೊ ಬಾಷಣ ಮಾಡಿದ್ರುರೀ. ಹೀಂಗಾ ಕರ್ನಾಟಕದೊಳಗ ನಿಂತು ಕನ್ನಡ ನಾಡ್ ಒಡೀತೀವಿ ಅಂದ್ರೂ, ಕರ್ನಾಟಕ ಸರ್ಕಾರ ಸುಮ್ಮನ ಗಪ್ ಕೂಡ್ತೈತ್ ಅಂದ್ರ ಏನ್ ಬಡ್ಕೊಬೇಕ್ರೀಪಾ?

ಪಾಕಿಗಿಂತ ಹೊಲಸು ಕನ್ನಡನಾಡು ಅಂದ ಮಹಾಮೇಳವಾ!

ಆ ಸಭಾಗ ಭಾಳ ಮಂದೀನ ಕರ್ಕೊಂಡು ಬಂದಿದ್ರು, ಅದು ಜನರ ಅಭಿಪ್ರಾಯ ಅನ್ನೋದಾದ್ರಾ... ಹಾಂಗ ಜನಾಭಿಪ್ರಾಯ ತೋರ್ಸಕ್ಕ ಕನ್ನಡ ಮಂದಿಗೂ ಅವಕಾಶ ಕೊಡಬೇಕು, ಹೌದಲ್ಲೋ? ಹಿಂದಿನ ಸಾರ್ತಿ ಮಹಾಮೇಳವದಾಗ ಆರ್.ಆರ್.ಪಾಟೀಲ್ರು ಅಂದದ್ದಾರ ಏನ್ ಗೊತ್ತನು? "ಈ ಕರ್ನಾಟಕ ಸರ್ಕಾರ ಪಾಕಿಸ್ತಾನದ ಸೈನ್ಯಕ್ಕಿಂತ ಹೊಲಸದಾ" "ನಿಪ್ಪಾಣಿ, ಖಾನಾಪುರಾ, ಬೆಳಗಾವಿಯಾಗ ಕೇಂದ್ರ ಸರ್ಕಾರದ ಆಡಳಿತ ಹೇರಬೇಕು" ಅಂತ ನಾಲ್ಗಿ ಮ್ಯಾಗಿನ ಹಿಡ್ತ ಇಲ್ಲದೋರಂಗ ವದರಿದ್ದರೀ. ಒಂದು ರಾಜ್ಯದ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ಇರೋ ಮನಷಾ ಹೀಂಗ್ ಹುಚ್ಚರ ಗತಿ ಮಾತಾಡ್ತಾರಾ ಅಂದ್ರಾ ಅಂಥಾ ಮಾತು ನಾಡಿನ ಭಾಷಾ ಸಾಮರಸ್ಯ ಕದಡೋ ಕೆಲಸಾ ಅಲ್ಲನು? ಇಂಥಾ ಮನಶಾನ್ನ ಮತ್ ಕರ್ಸಿ ವಿಧಾನ ಸಭಾ ಅಧಿವೇಶನದ ದಿನಾ ಗಲಭಿ ಮಾಡ್ಸಿ ಸಭಾ ಮಾಡ್ತೀವಿ ಅನ್ನೋ ಮಹಾಮೇಳಾವಾಗ ಹ್ಯಾಂಗಾರಾ ಅನುಮತಿ ಕೊಡ್ತಾರಾ?
ಯಾ ಮಂದಿ, ಎಲ್ಲಾರಾ ಸಭಿ ಮಾಡಬೋದು ಅನ್ನೋದು ಖರೀ ಆದ್ರೂ ವಿಧಾನ ಸಭಾ ಅಧಿವೇಶನದ ದಿನಾನಾ ಮಾಡಕ್ ಎದುಕ್ ಅವಕಾಶ ಕೊಡಕ್ ಮುಂದಾಗ್ತಾರಾ? ಅದೂ ನಾವಾ ಜಗಾ ಕೊಟ್ಟು ನಮ್ ಮಾರೀಗಾ ಉಗೀರಿ ಅಂದಂಗಲ್ಲೇನು ಮತ್ತಾ? ಇಂಥಾ ಸಭಿಗಾ ಅನುಮತಿ ಕೊಡ್ಸಕ್ ಮುಂದಾಗಿರೋದೂ ಹಿಂದೂವಾದಿ ರಾಷ್ಟ್ರೀಯ ಪಕ್ಷದಂವಾ ಆಗಿರೂ ಒಬ್ಬ ಅಚ್ಚ ಕನ್ನಡದ ಸಂಸದ ಅನ್ನೂ ಮಾತ ಬೆಳಗಾವಿ ತುಂಬೆಲ್ಲಾ ಹೊಗಿಯಾಡ್ತೈತ್ರೀಪಾ. ಅಂವಾ ಮುಂದಾ ಲೋಕಸಭಾ ಚುನಾವಣೀಗ ಮರಾಠಿಗರ ಮತಗ್ೆಲ್ಲಕ್ ಹೀಂಗ್ ಮಾಡಾಕ್ ಹತ್ಯಾರಾ ಅಂತ ಮಂದಿ ಪಿಸುಗುಡಕ್ ಹತ್ಯಾರಾ. ನೀವಾ ಹೇಳ್ರಲಾ? ಇದು ಹೀಂಗ ಆಗೋದ್ ಸರಿ ಏನಾ? ಹಾಂಗಾಂದ್ರಾ ಆವತ್ತೇ ಕನ್ನಡ ಮಂದೀ ಜಾಗೃತಿ ಸಮಾವೇಶ ಮಾಡಾಕ್ ಬಿಡ್ತಾರೇನೂ, ಈ ಸರ್ಕಾರದೋರೂ? ಇಲ್ಲಾ ಗಲಭಿ ಆಗ್ತೈತಿ ಕೊಡಾಂಗಿಲ್ಲಾ ಅಂದ್ರ ಈಗ ಎಂಇಎಸ್ ಮಂದೀಗೂ ಕೊಡಾಕ್ ಬರಾಂಗಿಲ್ಲಾ... ಹೌದಲ್ರೀ ಗುರುಗಳಾ?

9 ಅನಿಸಿಕೆಗಳು:

Anonymous ಅಂತಾರೆ...

ಸುಮ್ಮನೆ ಇದ್ರೆ ನಮಗೇ ತೊ೦ದ್ರೆ -
೧) ಮಹಾರಾಷ್ಟ್ರದಲ್ಲಿರುವ ಕನ್ನಡದ ಗ್ರಾಮಗಳಲ್ಲಿ ರಾಷ್ಟ್ರಪತಿ ಶಾಸನವನ್ನು ಹೇರಲು ಒತ್ತಾಯ ಮಾಡಬೇಕು
೨) ಕರ್ನಾಟಕದ ಅಭ್ಯರ್ಥಿಗಳು ಅಲ್ಲಿ ಕಣಕ್ಕಿಳಿಯಬೇಕು.

Anonymous ಅಂತಾರೆ...

ರಾಷ್ಟ್ರೀಯ ಪಕ್ಷವು ಆಪರೇಷನ್ ಬೆಳಗಾವಿ ಮಾಡ್ತಿರೋ ಹಾಗಿದೆ.

Anonymous ಅಂತಾರೆ...

Regional Party avashyakathe Karnatakadalli eddu kaaNtide. ee rashTreeya pakshagaLinda namma uddaara kanDita asaadhya.

Anonymous ಅಂತಾರೆ...

Namaskaariii ellarigu...

Anonymous ಅಂತಾರೆ...

hello every one

Anonymous ಅಂತಾರೆ...

namaskaariii ellarigu.. Hangalla e adhiveshana nadsodrinda enadru prayojana ita??? ella duddu dandarii.. ella rajkiya pakshadavru nataka aadtaare ashte.. hangalla naa begaavi alle 20 varshakinta jaasti adini.. naa alli kannada marathi jananna nodini.. yaariguu edella bekagilla.. avrige avr kashta kelorbeku.. Alliro sada mandi bagge yochne maadila swalpa.. alli saavir gantle neekaar aadaru.. ellaru badavre.. badatannkka , hasivige jaati bhashe ella eruttaa hege???

Anonymous ಅಂತಾರೆ...

ಖರೆ ಬರ್ದಿದ್ದೀರ,
ತಮ್ಮ ರಾಜಧಾನಿ ಮುಂಬೈನಲ್ಲಿ ಸಂಪೂರ್ಣ ಮರಾಠಿ ಅನುಷ್ಟಾನ ತರೋದ್ರ ಬಗ್ಗೆ ಯೋಚಿಸುವ ಬದಲು, ಈ ತರಹ ತಗಾದೆ ತೆಗ್ಯೋದು ಯಾವ ನ್ಯಾಯ ?, ಇನ್ನು ಕೇಂದ್ರ ಸರ್ಕಾರ ಕರ್ನಾಟಕದ ಗಡಿ, ಜಲ ವಿಷಯಕ್ಕೆ ಬಂದಾಗ ಯಾವಾಗಲು ಮಲ ತಾಯಿ ಧೋರಣೆ ತೋರ್ತಾ ಇರೋದು ಕಳಸ ಬಂಡೂರಿ ಯೋಜನೆಯಲ್ಲಿ ಎದ್ದು ಕಾಣ್ತಾ ಇದೆ. ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ಪ್ರತಿಭಟನೆ ಹಮ್ಮಿ ಕೊಂಡಾಗ ಮೊದಲು ಬಿತ್ತರಿಸುವ ಆಂಗ್ಲ ಮಾದ್ಯಮಗಳು, ಇಂತಹ ವಿಚಾರಗಳನ್ನ ಯಾಕೆ ಮರೆಮಾಚುತ್ತಿವೆ ?...

ಕ್ಲಾನ್ಗೊರೌಸ್

Anonymous ಅಂತಾರೆ...

Belagaviginta modalu Bengalooralli Kanndavanna belasabeku.

Anonymous ಅಂತಾರೆ...

I have a colleauge from that place and he says "ivara joru ella belgavi li matra, alli sutta muttalu ella nave adivi"

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails