ಕರ್ನಾಟಕ ರಕ್ಷಣಾ ವೇದಿಕೆಯ ಉದ್ಘೋಷ : "ಕರ್ನಾಟಕದಿಂದ ಭಾರತ"

2009ರ ಜನವರಿ 17 ಮತ್ತು 18ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿತ್ತು. ಈ ಸಮಾವೇಶದಲ್ಲಿ ನಾಡಿನ ಮೂಲೆಮೂಲೆಗಳಿಂದ ಕನ್ನಡಿಗರು ಬಂದು ಭಾಗವಹಿಸಿದ್ದು ಈ ಬಾರಿ ಹೊರನಾಡುಗಳಿಂದಲೂ ಕನ್ನಡಿಗರು ಬಂದಿದ್ದುದು ವಿಶೇಷವಾಗಿತ್ತು. ಈ ಸಮಾವೇಶದಲ್ಲಿ "ಉದ್ಯೋಗ ಮತ್ತು ಉದ್ಯಮಶೀಲತೆ" ಎನ್ನುವ ಒಂದು ವಿಚಾರ ಸಂಕಿರಣವೊಂದು ನಡೆಯಿತು. ಈ ವಿಚಾರ ಸಂಕಿರಣದಲ್ಲಿ ನಾಡಿನ ಏಳಿಗೆಯಲ್ಲಿ ಉದ್ದಿಮೆಗಾರಿಕೆಯ ಮಹತ್ವದ ಬಗ್ಗೆ ವಿಷಯಮಂಡನೆಯಾಯ್ತು.

ಕರ್ನಾಟಕದಿಂದ ಭಾರತ!

ಕನ್ನಡಿಗರ ಈ ದೊಡ್ಡ ಸಮಾವೇಶದ ಘೋಷವಾಕ್ಯ "ಕರ್ನಾಟಕದಿಂದ ಭಾರತ" ಎನ್ನುವುದಾಗಿದೆ.ಈ ಸಂದರ್ಭದಲ್ಲಿ ಹೊರತಂದಿರುವ ಕೈಪಿಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕದಿಂದ ಭಾರತ ಎನ್ನುವುದನ್ನು ಹೀಗೆ ಅರ್ಥೈಸುತ್ತದೆ.
ಪ್ರತಿಯೊಂದು ಪ್ರದೇಶಕ್ಕೂ ಇರುವ ಅನನ್ಯತೆಯನ್ನು ಕಾಪಾಡಿಕೊಂಡು, ಪ್ರತಿಪ್ರದೇಶವನ್ನೂ ಒಂದೇ ತೆರನಾಗಿ ಕಾಣುವ, ಪ್ರತಿರಾಜ್ಯದ ಏಳಿಗೆಗೂ ಪೂರಕವಾಗುವ ವ್ಯವಸ್ಥೆಗಳನ್ನು ಹೊಂದಿದ ಭಾರತ ನಮ್ಮ ಕನಸು. ಇಂತಹ ಭಾರತದಲ್ಲಿಯೇ ಕರ್ನಾಟಕ ಬಲಿಷ್ಟವಾಗುವುದು. ಇಂತಹ ಬಲಿಷ್ಟ ಕರ್ನಾಟಕ, ಬಲಿಷ್ಟ ತಮಿಳುನಾಡು, ಬಲಿಷ್ಟ ಮಹಾರಾಷ್ಟ್ರ... ಹೀಗೆ ಪ್ರತಿಯೊಂದು ರಾಜ್ಯವೂ ಬಲಿಷ್ಟವಾಗುವುದರಿಂದಲೇ ಭಾರತ ಬಲಿಷ್ಟವಾಗಲು ಸಾಧ್ಯ. ಆ ಕಾರಣದಿಂದಲೇ ಈ ಸಮಾವೇಶಕ್ಕೆ "ಕರ್ನಾಟಕದಿಂದ ಭಾರತ" ಎನ್ನುವ ಘೋಷವಾಕ್ಯವನ್ನು ನೀಡಲಾಗಿದೆ.
ಕರ್ನಾಟಕ ರಾಜ್ಯವನ್ನು ಭಾರತ ಒಕ್ಕೂಟದಲ್ಲಿ ನಡೆಸಿಕೊಳ್ಳಲಾಗುತ್ತಿರುವ ಬಗೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ ಈ ಕೈಪಿಡಿಯಲ್ಲಿ ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ಏಳಿಗೆ ಸಾಧ್ಯ ಎಂಬುದನ್ನು ಪ್ರತಿಪಾದಿಸಲಾಗಿದೆ. ಹಿಂದಿ ಹೇರಿಕೆ ತಡೆ, ಅನಿಯಂತ್ರಿತ ವಲಸೆ ನಿಯಂತ್ರಣ ಕಾಯ್ದೆ, ರಾಷ್ಟ್ರೀಯ ಜಲನೀತಿ... ಮುಂತಾದವುಗಳ ಅಗತ್ಯದ ಬಗ್ಗೆ ವಿವರಿಸಲಾಗಿದೆ.

ಕರ್ನಾಟಕದ ಏಳಿಗೆಯ ಕನಸಿನೊಂದಿಗೆ ಹೀಗೆ ಸಾವಿರಾರು ಕನ್ನಡಿಗರು ಒಂದೆಡೆ ಸೇರಿ ನಾಡು ಕಟ್ಟುವ ಪಣ ತೊಡುವುದು ನಾಡಿನ ಹಿತದೃಷ್ಟಿಯಿಂದ ಬಲು ಒಳ್ಳೆಯ ಬೆಳವಣಿಗೆ ಗುರು!

4 ಅನಿಸಿಕೆಗಳು:

Anonymous ಅಂತಾರೆ...

ashToMdu kannaDigaru oMde soorinaDi nODi tumbaa khushi aaitu guru...ninneya aramane maaidaanada vaatavaraNa nODi bhaari saMtOsha aaitu...samaavEshada konege tegedukoMDa nirNayagaLu karnaaTaka/kannaDa/kannaDigara Eligege/abhivruddhige bhaari poorakavaagide..adakkaagi ka ra vEyannu abhinaMdisalE bEku...

namma raajakaaraNigaLu tamma adhikaarada hucchu biTTu ee nirNayagaLannu kaaryaroopakke taMdare adara gammattE bEre irutte alvaa guru :)

Anonymous ಅಂತಾರೆ...

ಇವತ್ತು ವಜ್ರ ಬಸ್ ನಲ್ಲಿ ಆದ ಘಟನೆ:
ನಾನು ಬಸ್ ಹತ್ತಿದಾಗ ಹಿಂದಿ ಹಾಡು ಕೇಳಿ ಬಂತು.. ನಾ ನಿರ್ವಾಹಕನನ್ನು ಕೇಳೋಣವೆಂದು ಹುಡುಕತೊಡಗಿದೆ... ಅಷ್ಟ್ರಲ್ಲೆ ಒಬ್ಬರು "ಸ್ವಲ್ಪ ಕನ್ನಡ ಹಾಡ್ ಹಾಕಿ.. ಇಲ್ಲಿ ಹಿಂದಿ ಯಾರಿಗೂ ಅರ್ಥ ಆಗಲ್ಲ"...ಆಗ ನಾನೂ ಸಹ ಹೇಳಿದೆ "ಕನ್ನಡ ಹಾಕಿ, ಹಿಂದಿ ಯಾರ್ ಕೇಳ್ತಾರೆ" ಅಂತ.. ಚಾಲಕ ನಕ್ಕು, "ಇನ್ನು ಎಲ್ಲಾ ಹೀಗೆ ಕೇಳ್ತಾರೆ" ಅಂತ್ ಅಂದ.. ಇದು ಖಂಡಿತ ಕರವೇ ಜಾಗ್ರುತಿಯ ಪ್ರಭಾವ ಅಂತ ನನ್ನ ಅನಿಸಿಕೆ... ಇದು ಸಣ್ಣ ವಿಶ್ಯ ಆದ್ರೂ ನಂಗಂತೂ ತುಂಬಾ ಸಂತಸ ಆಯ್ತು.

Anonymous ಅಂತಾರೆ...

ಒಳ್ಳೆಯ ವಿಷಯ.

ಆದರೆ ಕನ್ನಡಿಗರು ವರ್ಷಕ್ಕೆ ಎಷ್ಟು ಸರತಿ ಇಂತಹ ಕಾರ್ಯಕ್ರಮಗಳನ್ನು ನಡೆಸ್ತಾರೆ ಎಂದು ನೋಡಿದರೆ, ಕಡಮೆ ಅಂದರೂ ಒಂದು ಹತ್ತು ಸರತಿ.

ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಿಂದ ವಿಶ್ವ ಕನ್ನಡ ಸಮ್ಮೇಳನ, ಅಕ್ಕ ಸಮ್ಮೇಳನ, ನಂಬರಿನಲ್ಲಿ ಎಷ್ಟು ರಾಜ್ಯೋತ್ಸವದ ಕಾರ್ಯಕ್ರಮಗಳು...

ಅಬ್ಬ! ಕನ್ನಡ ಈ ಕಾರ್ಯಕ್ರಮಗಳಿಂದಲಾದರೂ ಜೀವಂತವಾಗಿ ರಾರಾಜಿಸುತ್ತದೆ.

ಸಮ್ಮೇಳನಗಳ ಆಯೋಜನೆ, ನಿಯೋಜನೆ ಮತ್ತು ವ್ಯವಸ್ಥೆಯಲ್ಲಿ ಪರಿಣಿತಿ ಹೊಂದಿದ ಒಂದು ಕಂಪೆನಿ ಕನ್ನಡಿಗರು ತೆಗೆದರೆ, ಅದೊಂದು ದೊಡ್ಡ ಉದ್ಯಮವೇ ಸರಿ.

ಅಷ್ಟೊಂದು ಕನ್ನಡದ ಜನ ಒಂದೆಡೆ ಸೇರಿದ್ದು ಸಂತಸದ ಸುದ್ದಿ.

ಕರವೇ ಕೆಲಸ ಶ್ಲಾಘನೀಯ.

ಅದೂ ಟ್ರಾಪಿಕ್ ಜ್ಯಾಮ್ ಮುಂತಾದ ಯಾವ ಸಮಸ್ಯೆಯೂ ಸಂಭವಿಸಿಲ್ಲ. ದೇವರ ದಯೆ.

ಕರ್ನಾಟಕದಿಂದ ಭಾರತ, ಮಹಾರಾಷ್ಟ್ರದಿಂದ ಭಾರತ, ಅಸ್ಸಾಮಿನಿಂದ ಭಾರತ, ತಮಿಳುನಾಡಿನಿಂದ ಭಾರತ, ಹೀಗೆ ಎಲ್ಲರೂ ಆಯಾ ರಾಜ್ಯವನ್ನು ಮುಖ್ಯವೆಂದು ತಿಳಿಯುವುದು ನಮ್ಮ ಭಾವೈಕ್ಯತೆಗೆ ಪ್ರಗತಿದಾಯಕ ವಿಷಯ.

ಇಲ್ಲದೇ ಹೋದರೇ ಬರೀ ಬಿಹಾರ-ಯುಪಿ-ಎಂಪಿ ಮುಂತಾದ ಹಿಂದಿ ರಾಜ್ಯಗಳಿಂದ ಮಾತ್ರ ಭಾರತ ಎಂದು ಅಂದುಕೊಂಡಿಹ ಬೇಕಾದಷ್ಟು ಮಂದಿ ಇದ್ದಾರೆ.

ಈ ಉತ್ಸಾಹದಿಂದ ಒಂದು ಗಟ್ಟಿಮುಟ್ಟಾದ ಒಡಕಿಲ್ಲದ ಸಮರ್ಥ ಪ್ರಾಂತೀಯ ಪಕ್ಷ ಉದ್ಭವಿಸಲಿ ಎಂದು ಆಶಯ.

Girish H T ಅಂತಾರೆ...

Guru,

i have been observing from last one week that TV9 channel
is telecasting lot of Telugu related news.

Tuesday night at 8.30pm, they were telecasting reviews of
some telugu movie and last week, they had telecasted film
telugu actress interview and it was completely in
telugu.

I dont know why they telecast Telugu more in Karnataka. I
think we have to ask them to stop.

let me know if you people know any one in TV9 channel. we
should stop it now otherwise they will continue promoting
telugu in karnataka.

I request you to do some thing on this ... ...........

Regards
Kannadiga

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails