ನಮ್ಮೂರ ವ್ಯವಸ್ಥೆ ಇರಬೇಕಾದ್ದು ಯಾರಿಗಾಗಿ?

ಮೊನ್ನೆಮೊನ್ನೆಯಿಂದ ನಮ್ಮ ಎಂಕ ಕೈಯ್ಯಲ್ಲಿ ಎರಡು ಫೋಟೋ ಇಟ್ಕೊಂಡು ಎದ್ರುಗೆ ಸಿಕ್ಕವ್ರನ್ನೆಲ್ಲಾ ತಡ್ದು ತಡ್ದು ಅವರ ಮುಖಕ್ಕೆ ಈ ಎರಡನ್ನೂ ಹಿಡೀತಾ ಇದಾನೆ! ಇದ್ಯಾಕ್ರಣ್ಣ ನಮ್ಮೂರಲ್ಲಿ ಇಂಗೈತೆ? ಅಂತಾ ಕೇಳ್ತಾ ಇದಾನೆ. ನೀವಾದ್ರೂ ಎಂಕಂಗೆ ಉತ್ತರ ಹೇಳ್ತೀರಾ ಸ್ವಲ್ಪ ನೋಡಿ!

ಇದು ಮೊದಲನೇದು ಬೆಂಗಳೂರಿನಲ್ಲಿ ಪೊಲೀಸರು ಜಾರಿಗೆ ತಂದಿರೋ ಆಟೋಚಾಲಕರ ಕಡ್ಡಾಯ ಗುರುತಿನದು. ನಮ್ಮ ಈ ಫಲಕ 100% ಇಂಗ್ಲಿಷಿನಲ್ಲಿದೆ. ಹಾಗೇ ಇರಬೇಕು ಅನ್ನೋದು ನಿಯಮ. ನಮ್ಮೂರಿಗೆ ಬಂದಿರೋ ಪರಭಾಷಿಕರಿಗೆ ಮಾಹಿತಿ ಅರ್ಥ ಆಗಬೇಕು ಅನ್ನೋದು ಇದರ ಉದ್ದೇಶವಂತೆ.ಈ ಇನ್ನೊಂದು ಫೋಟೋ ಜಪಾನ್ ದೇಶದ್ದು. ಇದರಲ್ಲಿರೋ ಮಾಹಿತಿ ಪೂರ್ತಿ ಜಪಾನಿ ಭಾಷೇಲಿದೆ. ಅಂಕೆಗಳನ್ನು ಬಿಟ್ಟರೆ ಪ್ರವಾಸಿಗರಿಗೆ ಅರ್ಥವಾಗೋ ಅಂಥದ್ದು ಇದರಲ್ಲಿ ಏನೇನೂ ಇಲ್ಲ. ಅಂತರರಾಷ್ಟ್ರೀಯ ವಿಶ್ವಪರಂಪರೆಯ ತಾಣದಲ್ಲಿ ಒಂದಾದ ನಗರದಲ್ಲೇ ಇಂಥಾ ವ್ಯವಸ್ಥೆ ಇದೆ ಅಂದ್ರೆ ನಂಬಲೇ ಬೇಕು ಗುರು!ಈ ಜಪಾನಿ ಭಾಷೇಲಿರೋ ಫೋಟೋ ಜಪಾನಿನ ಕ್ಯೋತೋ ಅನ್ನೋ ಊರಿನದು. ಈ ಊರು ಜಪಾನಿನ ಸಂಸ್ಕೃತಿಯನ್ನು ಪ್ರತಿಬಿಂಬಿಸೋ ಅಲ್ಲಿನ ಇತಿಹಾಸಾನ ಸಾರೋ ಒಂದು ಪ್ರವಾಸಿ ತಾಣ. ಈ ಜಾಗಕ್ಕೆ ಜಪಾನ್ ದೇಶಕ್ಕೆ ಪ್ರವಾಸ ಬಂದೋರೆಲ್ಲಾ ಬಂದೇ ಬರ್ತಾರೆ ಗುರು. ಇಂಥಾ ಪ್ರವಾಸಿ ತಾಣದಲ್ಲಿ ಕಣ್ಣಿಗೆ ಕಾಣೋದು ಜಪಾನಿ ಸಂಸ್ಕೃತಿ, ಆಚರಣೆ, ವೇಷಭೂಷಣ ಮತ್ತು ಮುಖ್ಯವಾಗಿ ಜಪಾನಿ ನುಡಿ.

ನಮ್ಮೂರ ವ್ಯವಸ್ಥೆ ಯಾರಿಗಾಗಿ ಇರಬೇಕು?

ಈಗ ನೀವೇ ಹೇಳಿ ಗುರುಗಳೇ? ಕರ್ನಾಟಕದಲ್ಲಿ ಬರೀ ಕನ್ನಡ ಮಾತ್ರಾ ಗೊತ್ತಿದ್ದವರು ಏನು ಮಾಡಬೇಕು? ಕರ್ನಾಟಕ ಅನ್ನೋದು ಕನ್ನಡದವರ ತವರುನೆಲ ತಾನೇ? ಇಲ್ಲಿರೋ ಯಾವ ಅಂಗಡಿ, ಮುಂಗಟ್ಟೆ, ರೈಲು ನಿಲ್ದಾಣ, ಬಸ್ ನಿಲ್ದಾಣ, ಬೋರ್ಡು, ಮಾಹಿತಿ, ಸೂಚನೆಗಳೆಲ್ಲಾ ಮೊದಲಿಗೆ ಈ ನೆಲದ ಜನಗಳ ಅಗತ್ಯ ಪೂರೈಸಬೇಕು ಮತ್ತು ಅವರಿಗಾಗಿ ಇರಬೇಕು ಅನ್ನೋದು ತಪ್ಪಾ? ಹಾಗಾದ್ರೆ ಇದನ್ನೆಲ್ಲಾ ಮಾಡಬೇಕಾದ್ದು ನಮ್ಮ ಕರ್ನಾಟಕ ಸರ್ಕಾರದ ಮೊದಲನೆ ಕೆಲಸ ಅಲ್ವಾ? ವಲಸಿಗರಿಗಾಗೇ ನಮ್ಮೂರಿನ ವ್ಯವಸ್ಥೆ ಕಟ್ಟೋದು ಮೂರ್ಖತನಾ ಅಲ್ವಾ? ಈ ಮೂರ್ಖತನಾನ ನಮ್ಮ ಸರ್ಕಾರಗಳು, ಇಲಾಖೆಗಳು ಎಂದಾದ್ರೂ ಕೈಬಿಟ್ಟಾವಾ ಗುರು? ಕನ್ನಡದವರೇ ಕನ್ನಡನಾಡಲ್ಲಿ ಅನಾಥರಂತೆ ಬದುಕಬೇಕಾ? ಕನ್ನಡದವರನ್ನು ಕಡೆಗಣಿಸಿ ಕಟ್ಟೋ ವ್ಯವಸ್ಥೆ ಎಂದಾದ್ರೂ ರಿಪೇರಿ ಆಗುತ್ತಾ? ನೋಡುದ್ರಾ ಗುರುಗಳೇ? ಎಂಕ ತೋರಿಸಿದ ಎರಡು ಫೋಟೋ ಹಿಂದೆ ಎಷ್ಟೊಂದು ಪ್ರಶ್ನೆಗಳಿವೆ...

11 ಅನಿಸಿಕೆಗಳು:

Unknown ಅಂತಾರೆ...

ಹೌದು ಗುರು, ನಂಗೂ ಯಾವಾಗ್ಲೂ ಹೀಗೆ ಅನ್ಸೋದು, ಅಂಗ್ಲ ಇರ್ಲಿ (ಯಾಕಂದ್ರೆ ಹಿಂದಿ ಬೇಡವಾಗಿದೆಯಲ್ಲ), ಆದ್ರೆ ಕನ್ನಡ ಇರ್ಲೇ ಬೇಕು ಅಂತ ಮಾಡ್ಬೇಕು!!

ಆದ್ರೆ ಸ್ವಲ್ಪ ಯೋಚ್ಸುದ್ರೆ ನಮ್ ಬೆಂಗಳೂರಲ್ಲಿ ಈ "english madness" ಇಂದಾಗಿ ಕನ್ನಡ ಯಾವ್ ಮಟ್ಟದಲ್ಲಿದೆ ಅಂತ ನೋಡ್ಬೇಕಾದ್ರೆ ನಮ್ಮ ಶಾಲೆಗಳಿಗೆ ಹೋಗಿ ನೋಡಬೇಕು ಗುರು!! ಕನ್ನಡ ಮಾತಾಡುರೆ fine ಹಾಕ್ತಾರೆ ಗುರು!!!!! ಅಷ್ಟೆ ಅಲ್ಲ, ಮಕ್ಕಳ ಜೊತೆ ಮನೇಲೂ english ನಲ್ಲಿ ಮಾತಾಡಬೇಕಂತೆ, ಈ ವಿಷಯಕ್ಕೆ ನನ್ನ ಮಗಳ ಅಧ್ಯಾಪಕರ (teacher) ಜೊತೆ ಜಗಳವಾಡ್ಬೇಕಾಯ್ತು! ಹೀಗಾಗಿ ನಮ್ ಮಕ್ಳುಗೆ, ಎಷ್ಟೊ ದೊಡ್ಡವ್ರ್ಗೆ ಕನ್ನಡ ಓದಕ್ಕೇ ಬರದೇ ಇರೋ ಹಾಗೆ ಆಗ್ತಾ ಇದೆ ಗುರು, ಕನ್ನಡ ಸಂಸ್ಕೃತಿ ಇದ್ಯಾ ಗುರು ಬೆಂಗಳೂರಿನಲ್ಲಿ? ಪುಣ್ಯಕ್ಕೆ ಈ ಹುಚ್ಚು ಇನ್ನೂ ಬರೀ ಬೆಂಗಳೂರಿನಲ್ಲಿ (ಬೇರೆ citiesನಲ್ಲೂ ಕೂಡ) ಸೀಮಿತ ಅಂತ ಅನ್ಕೊಂಡ್ ಇದೀನಿ!!!!

ಆದ್ರೂ, ಜಪಾನ್ ನಾ (ಅಥ್ವಾ ಯಾವುದೇ ಬೇರೆ ದೇಷನ) ನಮ್ ದೇಷಕ್ಕೆ ಹೋಲ್ಸೋದು ಸರಿಯಲ್ಲ ಗುರು!!! ಜಪಾನ್ಗೆ ಹೋಗೊ ಪ್ರವಾಸಿಗರು ಎಂತವ್ರು ಅಂತ ನಿಮ್ಗೇ ಗೊತ್ತಿರ್ಬೇಕು - ಯಕ್ಕಾಮಕ್ಕ ದುಡ್ ಇರೊ ಜನ್ರು, ಅತ್ವಾ expatriates, ಅಥ್ವ business travellers!! translators ಇಟ್ಕೊಂಡು ಹೇಗೋ ನಿಬಾಯ್ಸ್ತಾರೆ! ಆದ್ರೆ ನಮ್ ಬೆಂಗಳೊರ್ಗೆ ಬರೋದು, ಬಂದು ಆಟೋಲಿ ಓಡಾಡೋದು ಜಾಸ್ತಿ ಪ್ರವಾಸಿಗರಲ್ಲ ಮತ್ತು ನಮ್ಮ ಜನರು, ನಮ್ಮ ದೇಷದ ಇತರ ರಾಜ್ಯದ ಜನರು!! ಬೇರೆ ಯಾವ್ದೇ ದೇಷಕ್ಕೆ ಹೋಗ್ಬೇಕಾದ್ರೆ ಒಂದು dictionary/traveller-language-guide ಸಿಗುತ್ತೆ, ಅದು ಇದ್ರೆ ಸಾಕು ಹೇಗೋ ಆಗುತ್ತೆ! ಆದ್ರೆ ಅದು ನಮ್ ದೇಷಕ್ಕೆ ಅನ್ವಯಿಸೋಲ್ಲ!! ೨೪ ಗೈಡ್ ಬೇಕಾಗುತ್ತೆ! ಅದೂ ಸಿಗಲ್ಲ! ಈಗ ಎಲ್ಲಾ change ಆಗ್ತಾ ಇದೆ, ಒಳ್ಳೆದು! ಅದಕ್ಕೆ ಇಂಗ್ಲೀಷ್ ಮಾಧ್ಯಮ ಆಗಿರೋದು ಸಹಜ!

ನಮ್ಮಲ್ಲಿರೋ ವಿವಿದತೆ, diversityಗೆ ಒಂದು commom platform ಇಂಗ್ಲಿಷ್ (as our national/common language??????) ಅಂತ ನಾವು ರುಜುವಾತು ಮಾಡಿರೋ ಹಾಗಿದೆ! ಆದ್ರಿಂದ ಆಂಗ್ಲ ಭಾಷೆಲಿ ಇರೋದು ತಪ್ಪಲ್ಲ ಅನ್ಸುತ್ತೆ, ಆದ್ರೆ ಕನ್ನಡದಲ್ಲಿ ಇಲ್ಲದೇ ಇರೋದು ತಪ್ಪು, ತಪ್ಪು, ತಪ್ಪು, ತಪ್ಪು, ತಪ್ಪು! ಇಂಗ್ಲೀಷ್ ನಲ್ಲೂ ಇರ್ಲಿ ಬೇಕಾದ್ರೆ, ಆದ್ರೆ ಕನ್ನಡದಲ್ಲಿ ಖಡ್ಡಾಯವಾಗಿ ಇರ್ಲೇ ಬೇಕು!!!!

Abhishek ಅಂತಾರೆ...

There are lots of people in Bangalore who dont know KANNADA.. if they are allowed to put only in kannada, Those cheap auto drivers will definitely cheat the people who cant read kannada.. So sad, you dont know how cheap some of the auto drivers are...
So its not good to mandate them to put only in kannada.
they shud mandate them to put both in kannada and english.. as even, the people who cant read english shud be able to complain against them as you said.!

Unknown ಅಂತಾರೆ...

Abhishek, let us not use words like "cheap"! a peek into their lives may provide a better picture rather than sitting in an air-conditioned cubicle browsing internet and checking mails whole day, "cheating" the company (i am not referring to YOU, Abhishek, but "some" "cheap" software engineers that you will have met and seen if you are a software engineers too)!!! Sophistication of cheapness and target of cheating are different thats it!

Anyway, I dont endorse cheating and do not deny that they cheat. Sorry for deviating, but use of "cheap" somehow made me uncomfortable! May be politicians, RTO officers are cheap, but not these who struggle through a hard life and help us move around at our convenience!

About having boards in Kannada and English, Yes I do endorse that idea!! only Kannada or only English are both unjust, I suppose.

But, please note that Karnataka and Kannadigas have been extremely welcoming, accommodative, loving, and understanding but have had to compromise with its (their) culture and language for quite sometime. Should we tolerate Kannada being sidelined? No one should, no state should!!

Things are changing now for better and any change will result in some misunderstanding, chaos, irritation, frustration but change should happen! And we should ensure that it does happen for the good of our WONDERFUL language - ಸಿಹಿ ಕನ್ನಡ, the sweetest of all languages I have known!

ಪ್ರೀತಿಯ,
ಕನ್ನಡಿಗ

Anonymous ಅಂತಾರೆ...

ಗೆಳೆಯರೇ,

ನೀವು ಒಂದು ಅಂಶ ಗಮನಿಸಿ ನೋಡಿ. ಜಪಾನಿನ ಈ ಫೋಟೋದಲ್ಲಿ ಒಂದು ಒಂಬತ್ತಂಕಿಯ ನಂಬರ್ ಇದೆ. ಇದೊಂದನ್ನು ಮಾತ್ರಾ ಬರೆದಿಟ್ಟುಕೊಂಡರೆ ಸಾಕು. ಇಡೀ ಡ್ರೈವರ್ರಿನ ಜಾತಕ ಇದರಲ್ಲಿ ಅಡಗಿದೆ. ಇಡೀ ಕರ್ನಾಟಕದಲ್ಲಿ ಒಟ್ಟು ಎಷ್ಟು ಆಟೊಗಳಿವೆ? ಎಷ್ಟು ಆಟೋಚಾಲಕರಿದ್ದಾರೆ? ಈ ಸಂಖ್ಯೆ ಒಂದು ಅಂದಾಜಿನಂತೆ ಬೆಂಗಳೂರಿನಲ್ಲಿ ಒಂದು ಲಕ್ಷದ ಆಸುಪಾಸಿನಲ್ಲಿದೆ. ಇಡೀ ಫಲಕ ಕನ್ನಡದಲ್ಲಿದ್ದು ಈ ಅಂಕಿಗಳು ಮಾತ್ರಾ ಅರೇಬಿಕ್ಕಲ್ಲಿ ಇದ್ದರೆ ಸಾಕನ್ನಿಸುತ್ತದೆ. ಕನ್ನಡ ಬರದೆ ಇರುವವರಿಗೆ ಫಲಕದಲ್ಲಿರೋ ಅಂಕೆಯೊಂದೇ ಸಾಕಾಗುತ್ತೆ. ಕನ್ನಡ ಬರುವವರಿಗೂ ಸಾಕಾದೀತು. ಆದರೆ ಉಳಿದದ್ದು ಹೆಚ್ಚಿನ ಮಾಹಿತಿ ನೀಡುತ್ತದೆ ಅಷ್ಟೆ. ಈ ವ್ಯವಸ್ಥೆ ಪ್ರಪಂಚದ ಎಲ್ಲಾ ಕಡೆ work ಆಗುತ್ತೆ ಅಂದಮೇಲೆ ಇಲ್ಲೂ ಯಾಕಾಗಬಾರದು? ಏನಂತೀರಾ?

ಸುಂದರ್

Anonymous ಅಂತಾರೆ...

@ Abhishek,

As Sundar has mentioned, one identification number can be in English and rest in Kannada, if it works in Japan, it will surely work anywhere...

Also who is stopping anybody not to learn Kannada... ? there are so many free classes conducted... also there are so many online portals teaching kannada... when people can join German/English/French/Japanese classes when begging for visas to go there... why do they show indifference in learning Kannada.. ? atlease people who are planning to settle for a longer time can learn right ?..

When anybody can assume that Hindi should be spoken by all Indians... why show indifference to a language of the land ?

Abhishek ಅಂತಾರೆ...

Now what is the problem if they print in both english and kannada..
no one is stopping them to learn kannada..
Even if we assume that all citizens of india in karnataka one day learn kannada.. and then one new person enters bangalore only day X , he would take some time to learn kannada.. atleast such people shud be considered..

and sorry for using "cheap" ... but i know some ppl are really cheap :P ! I repeat it! lolz ! Bcoz i have seen ppl who have faced it.. u cant generalise auto drivers as HARD WORKERS and SAACHAS.. every industry has black marks.. !

ಕುಕೂಊ.. ಅಂತಾರೆ...

ಅಭಿಶೇಕ್, ಈ ನಿಮ್ಮ ಮಾತು ನೋಡಿದರೆ....!
"There are lots of people in Bangalore who dont know KANNADA.. if they are allowed to put only in kannada, Those cheap auto drivers will definitely cheat the people who cant read kannada.. So sad, you dont know how cheap some of the auto drivers are..."

ಕನ್ನಡ ಬರದವರಿಗೆ ತೊಂದರೆ ಆಗದಿರಲಿ ಈ ಮಾತು ನಾನು ಒಪ್ಪಿಕೊಳ್ಳುವೆ. ಆದರೆ ಇಂಗ್ಲೀಶ್ ಬರದೇ ಇರೋ ಕನ್ನಡಿಗರಿಗೆ???? ಅಮೇರಿಕದಲ್ಲಿ,ಯೂರೋಪಿನಲ್ಲಿ, ಜಪಾನಿನಲ್ಲಿ, ತಮಿಳುನಾಡಿನಲ್ಲಿ, ಮಹರಾಶ್ಟ್ರದಲ್ಲಿ, ಪಂಜಾಬಿನಲ್ಲಿ ಕನ್ನಡದಲ್ಲಿ ತೋರುಮಣಿ(ಸೂಚನಾಫಲಕ)ಇರುತ್ತಾವ ಕನ್ನಡಿಗನಿಗಾಗಿ? ಬೆಂಗಳೂರು ಕನ್ನಾಡಿನ ರಾಜ್ಯದಾನಿ ಇಲ್ಲಿಗೆ ಕನ್ನಡಿಗರು ದಿನಾಲು ನೂರಾರು ಕೆಲಸಗಳಿಗೆ ಲಕ್ಶ ಲಕ್ಶ ಮಂದಿ ಬರುತ್ತಾರೆ. ಮೊದಲು ಅವರಿಗೆ ತೊಂದರೆ ಆಗದಂತೆ ಯಾವುದೇ ಕಟ್ಟಳೆ ಕಾನೂನು ಇರಬೇಕು. ಒಂದೊಂದು ಊರಲ್ಲೂ ಇದೇ ಕಟ್ಟಳೆ ಇರಬೇಕು. ತದ ನಂತರ ಬೇರೆಯವರಿಗೆ ತೊಂದರೆ ಆಗದಂತೆ ಏನು ಮಾಡಬೇಕೋ ಅದನ್ನು ಮಾಡಿದರಾಯಿತು. ಇಶ್ಟೊಂದು ಮೂರ್ಕತನ ತೋರಿಸಬೇಡಿ.
ಇಂಗ್ಲೀಶ್ ಬರದೇ ಇರೋ ಹಿಂದಿಗನಿಗೆ, ತಮಿಳನಿಗೆ, ತೆಲುಗಿನವನಿಗೆ, ಮರಾಟಿಗನಿಗೆ ಇನ್ನು ಹಲಾವಾರು ಮಂದಿಗೆ ಏನುಮಾಡ್ತೀರ??????

ಸ್ವಾಮಿ. ಕಡಾಕೊಳ್ಳ

Abhishek ಅಂತಾರೆ...

illi iroorge english/kannada yeraDralli ondu bhaashe gotthirbeku ashTe...
gotthirlilla andre yenu maaDakke aagalla..
am not telling you to print only in english.. print it both in english and kannada
dont ask next question like " what if you cant see.. what if he is blind.. what if he is from France, and he doesnt know english :D" etc!

Anonymous ಅಂತಾರೆ...

I completely agree with your blog posts. We should also stop using Sanskrit names for our children and instead, call them Kempamma, Ranganna, Gundamma...such wonderful sounding words! Maybe the intelligent people here can make the difference.

Anonymous ಅಂತಾರೆ...

@Guruprasad,

"ಒಲ್ಲದ ಗಂಡಂಗೆ ಮೊಸ್ರಲ್ಲಿ ಕಲ್ಲು".. ಕೇಳಿರ್ಬೇಕು... ನೀವು ಹೇಳಿರೋದು ಹಾಗೆ ಇದೆ. ಕನ್ನಡದ ಹೆಸ್ರುಗಳು ಅಂದ್ರೆ ನಿಂಗೆ ಮೇಲಿರೋದು ಮಾತ್ರ ಸಿಕ್ಕಿದ್ದಾ??
ಕಮಲ, ಬಸವ, ಕಣ್ಮಣಿ, ಕಾವೇರಿ, ತುಂಗೆ, ಕಪಿಲಾ ಇವೆಲ್ಲ ನಿಂಗೆ ಹೊಳಿಲಿಲ್ವೆ? ಹುಡ್ಕಿದ್ರೆ ಇನ್ನು ಸಿಕ್ಕತ್ವೆ :) ಅಷ್ಟಕ್ಕೂ "ಕೃಷ್ಣ" ಅಂದ್ರೆ ಏನು? ಕರಿಯ ತಾನೆ?

Unknown ಅಂತಾರೆ...

ರಜನಿ
ಕನ್ನಡದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ನಮ್ಮ ಮುಂಬರುವ ಮಕ್ಕಳಿಗೆ ಯಾವ ರೀತಿಯ ಶಿಷ್ಕಣವನ್ನು ನೀಡುತ್ತೀದ್ದೇವೆ? ಎಂಬುದನ್ನು ತಿಳಿಯ ಬೇಕು.ಏಕೆಂದರೆ ನಮ್ಮ ಶಾಲಾ,ಕಾಲೇಜು ಗಳಲ್ಲಿ ವಿದ್ಯಾರ್ಥಿಗಳ ಕನ್ನಡದ ಗುಣಮಟ್ಟವನ್ನು ನೋಡಿದರೆ ಕನ್ನಡಕ್ಕೆ ಇಂತಹ ಗತಿ ಬಂತೆ? ಎಂದು ಅನಿಸುತ್ತಿದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails