ಕರ್ನಾಟಕ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಮಂತ್ರಿಗಳಾದ ಶ್ರೀ ಶ್ರೀ ಶ್ರೀ ಕೃಷ್ಣಯ್ಯಶೆಟ್ಟಿಗಾರು ಮೊನ್ನೆ ಒಂದು ಭರವಸೇನಾ ತಿರುಪತಿ ತಿರುಮಲ ದೇವಸ್ಥಾನಮು ಟ್ರಸ್ಟಿಗೆ ಕೊಟ್ಟಿದಾರೆ ಅಂತಾ 2009ರ ಜನವರಿ 19ರ ದಟ್ಸ್ ಕನ್ನಡದಲ್ಲಿ ವರದಿಯಾಗಿದೆ ಗುರು!
ಮಂತ್ರಿಗಳ ಕನಸಲ್ಲಿ ಕಂಡ ತಿಮ್ಮಪ್ಪ! ಕನ್ನಡರಾಜ್ಯ ರಮಾರಮಣ ಶ್ರೀ ಕೃಷ್ಣದೇವರಾಯನ ಕುಲದೈವವಾದ ತಿರುಪತಿ ತಿಮ್ಮಪ್ಪನು ಶ್ರೀ ಶ್ರೀ ಶ್ರೀ ಕೃಷ್ಣಯ್ಯಶೆಟ್ಟಿಯವರ ಕನಸಿನಲ್ಲಿ ಕಾಣಿಸಿಕೊಂಡು "ಭಕ್ತೋತ್ತಮಾ, ಈ ಕನ್ನಡದ ಬಡ್ಡಿಮಕ್ಕಳಿಗೆಲ್ಲಾ ನನ್ನನ್ನು ಪೂಜೆ ಮಾಡಕ್ ಬರಾಕಿಲ್ಲ. ಇವ್ರುಗಳಿಗೆ ನನ್ನ ದೇವಸ್ಥಾನಾನ್ನ ಲಾಭದಾಯಕವಾಗಿ ನಡ್ಸಕ್ ಬರಾಕಿಲ್ಲ, ಇದಕ್ಕೆಲ್ಲಾ ಏನಿದ್ರೂ ತೆಲುಗ್ರೇ ಸರಿ... ಇವ್ರು ಈ ರೀತಿ ನಡ್ಸುದ್ರೆ ಕುಬೇರನ ಹತ್ರ ನಾ ತೊಗೊಂಡಿರೋ ಸಾಲಾ ತೀರ್ಸದು ಎಂಗೆ? ನಿಮ್ಮ ಸರ್ಕಾರಾನ್ನ ತೆಲುಗ್ರುಗೆ ಒತ್ತೆ ಇಟ್ಟಂಗೇ, ಕರ್ನಾಟಕದ ಗಣಿಗಳನ್ನು, ಬೆಂಗಳೂರಿನ ರಿಯಲ್ ಎಸ್ಟೇಟನ್ನೂ ಆಂಧ್ರದವರಿಗೆ ಬಿಟ್ಟುಕೊಟ್ಟಂಗೆ ಕರ್ನಾಟಕದ ದೇವಸ್ಥಾನಗಳ ಆಡಳಿತವನ್ನೂ ಬಿಟ್ಟುಕೊಡಿ" ಅಂದ ಅನ್ಸುತ್ತೆ!
ಮಂತ್ರಿಗಳ ಕನಸಲ್ಲಿ ಕಂಡ ತಿಮ್ಮಪ್ಪ!
ಮಂತ್ರಿವರ್ಯರೇ, ನಿಮ್ಮ ಕಣ್ಣಿಗೆ ಬರೀ ಮಾಲೂರಿನ ಚಿಕ್ಕತಿರುಪತಿ ಮಾತ್ರಾ ಯಾಕೆ ಬಿತ್ತು? ಬೆಂಗಳೂರಿನ ದೇವಗಿರಿ, ಅರಸೀಕೆರೆಯ ಮಾಲೆಕಲ್ಲು, ಮೈಸೂರಿನ ಒಂಟಿಕೊಪ್ಪಲ್ಲು... ಹೀಗೆ ಕರ್ನಾಟಕದ ಉದ್ದಗಲಕ್ಕೂ ಇರೋ ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳನ್ನೂ ಈ ಪಟ್ಟಿಯಲ್ಲಿ ಸೇರಿಸಿಬಿಡಿ!! ನೀವೇನಂತೀರಾ ಗುರುಗಳೇ?
5 ಅನಿಸಿಕೆಗಳು:
ತಪ್ಪೇನಿಲ್ಲ ಬಿಡಿ....
ತಿರುಪತಿ ತಿಮ್ಮಪ್ಪನೊಬ್ಬನೇ ದೇವರು. ತಿರುಪತಿಗೆ ಹೋಗುವ ಮಂದಿ ಇಲ್ಲಿಗೆ ಹೋಗ್ತಾರೆ.
ಆಡಳಿತ ಮಂದಿ ಕಸಗುಡಿಸಕ್ಕಾದರೂ ಕನ್ನಡದೋರನ್ನ ಕೆಲಸಕ್ಕೆ ತಗೊಳ್ಳೋ ದೊಡ್ಡ ಮನಸ್ಸು ಧಣಿಗಳಿಗೆ ಆ ವೆಂಕಟೇಶ ಕರುಣಿಸಲಿ.
ವೆ೦ಕಟೇಶ - ನನ್ನ ಕನಸಲ್ಲಿ ಬ೦ದಿದ್ದ - ತಿರುಪತಿ ಆಡಳಿತವನ್ನು ಇನ್ನುಮು೦ದೆ ಕನ್ನಡಿಗರೇ ನೋಡ್ಕೋಬೇಕ೦ತೆ, ತೆಲುಗರು ಬರೀ ಲಾಡು ಕಟ್ಟಬೇಕ೦ತೆ. ಇದೇ ದೈವಾಜ್ಞೆ. ಇದನ್ನು ಮೀರಿ ನಡೆದರೆ ಸುನಾಮಿ ಬರುವುದು ಖ೦ಡಿತ.
ఏడుకొ౦డలవాడ వె౦కటరమణ గోవి౦ద గోవి౦ద.
ಅಲ್ಲಾ ಗುರು, ಆಡಳಿತ ಅವರಿಗೆ ಕೊಟ್ರೆ ತಪ್ಪಿಲ್ಲ ಅನ್ಸುತ್ತೆ ನಂಗೆ! ಇಲ್ಲಿ ಆಂದ್ರ, ಕರ್ನಾಟಕ ಅಂತ ನೋಡ್ಬೇಕಾ? ಗಣಿಗಾರಿಕೆ ಮತ್ತು ರಿಯಲ್-ಎಸ್ಟೆಟ್ ಅಂತವೆಲ್ಲಾ ಬಿಡಿ ದುಡ್ ಇರೋನೇ ದೊಡ್ಡಪ್ಪ. ಇಂತಾ ದೇವಸ್ಥಾನದ ವಿಷಯ ಬಂದಾಗ ಲಾಗಿಕ್ ಸ್ವಲ್ಪ ಬೇರೆ ಇರ್ಬೇಕೇನೊ ಅನ್ಸುತ್ತೆ, ಇಲ್ಲಿ ಸ್ವಲ್ಪ ಅನುಭವ ಉಪಯೋಗ ಆಗುತ್ತೆ. ಇದನ್ನೂ ಈಗ ಬಿಜಿನೆಸ್ ತರ ನೋಡ್ತಾರೆ ಜನ. ಅವ್ರು manage ಮಾಡ್ಲಿ, ನಾವು control ಮಾಡಿದ್ರಾಯ್ತು ಅಷ್ಟೆ!!! ಆ ವೆಂಕಟೆಶ್ವರಂಗೆ ಅಂದ್ರ ಏನು, ಕರ್ನಾಟಕ ಏನು ಅವನಿಗೆ ಎಲ್ಲಾ ಲೊಳಲೊಟ್ಟೆ ಸ್ವಾಮಿ, ಎಲ್ಲಾ ಲೊಳಲೊಟ್ಟೆ :) ನಾವ್ ಸುಮ್ನೆ ಕಿತ್ತಾಡ್ತೀವಿ ಅಷ್ಟೆ, ಆದ್ರೆ ಈ ಕಿತ್ತಾಟದಲ್ಲು ಮಜ, passion, ಸಾಭಿಮಾನ, ಅಭಿಮಾನ, ವಿಶ್ವಾಸ ಇದೆ ಬಿಡಿ :) ಗೋವಿಂದಾ ಗೋವಿಂದ ....
ಪ್ರಿಯ ಕನ್ನಡಿಗ,
ಆಡಳಿತ ಅವರಿಗೆ ಕೊಡೋದು ಅಂದ್ರೆ ದೇವಸ್ಥಾನದ ಆದಾಯಾನು ಅವರಿಗೆ ತಲುಪಿಸೋದು ಅಂತ ಅರ್ಥ. ಇದು ಮೊದಲ ಆಯಾಮ. ಮುಂದೆ ಇಲ್ಲಿನ ಅರ್ಚಕರು, ಕೆಲಸ ಮಾಡೋ ಸಿಬ್ಬಂದಿ, ಬಾಗಿಲು ಕಾಯೋ ಸೆಕ್ಯುರಿಟಿ ಹೀಗೆ ಪ್ರತಿಯೊಂದು ಕೆಲಸದಲ್ಲೂ ಜನ ಅಲ್ಲಿಂದಲೇ ವಲಸೆಯಾಗೋದು ಎರಡನೇದು. ಅನುಭವ ಕನ್ನಡಿಗರಿಗೆ ಇಲ್ಲಾ ಅಂತನ್ನೋ ನಿಮ್ಮ ಮಾತು ಸರಿಯಿಲ್ಲ ಅನ್ಸುತ್ತೆ. ಇಷ್ಟಕ್ಕೂ ಧರ್ಮಸ್ಥಳದ ದೇವಸ್ಥಾನಾನ, ಉಡುಪಿ ದೇವಸ್ಥಾನಾನ, ಮಲೆಮಹದೇಶ್ವರನ ದೇವಸ್ಥಾನಾನ ನಡುಸ್ತಾ ಇರೋರು ಯಾರು? ಟಿ.ಟಿ.ಡಿಯವರು ನಡುಸ್ತಿಲ್ವಲ್ಲಾ? ಆ ಅನುಭವ ಸಾಲದು ಅಂತೀರಾ?
ಪ್ರೀತಿಯ ತಿಮ್ಮಯ್ಯ,
೧) ಅದಕ್ಕೆ ಬಿಜಿನೆಸ್ ಮಾಡಲ್ ಅಂದಿದ್ದು - "control" (ownership; set policies, practices, and procedures) ಮತ್ತು "management" (employee; oversee operations) ಅಂತ ಅದಕ್ಕೇ ಹೇಳಿದ್ದು! ಆದಾಯ ಯಾವತ್ತೂ "management"ಗೆ ಹೋಗಲ್ಲ! ಸರಿನಾ?!
೨) ಅನುಭವ ಕನ್ನಡದವರಿಗೆ ಸಕ್ಕತ್ ಇದೆ, ಗುರು!! ಉಡುಪಿ ಮಾಡಲ್ ಬಗ್ಗೆ ನಿಮ್ಗೆ ಗೊತ್ತಿರ್ಬೇಕು ಗುರು, ಅದು ಎಲ್ಲಿಗೂ fit ಆಗಲ್ಲ? ಧರ್ಮಸ್ಥಳ "ಮಂಜುನಾಥ"ನ ಕ್ರುಪೆ, ಇಲ್ಲಿ ತಿಮ್ಮಪ್ಪನ ಕ್ರುಪೆ, ಇಬ್ಬರದೂ ಬೇರೆ ರೀತಿ-ನೀತಿಗಳು :) "crowd management" policies, demands, expectations, audience, crowd ಎಲ್ಲಾ ಬೇರೆ! ಬೇಕಿದ್ರೆ ಮೇಲ್ಕೋಟೆ ಮ್ಯಾನೇಜ್-ಮೆಂಟ್ ನ ಕರ್ಕೋಂಡ್ ಬರ್ಬಹುದು ಅನ್ನಿ:) ಅಲ್ಲಾ ಗುರು, ಯಾಕೆ ಕನ್ನಡಿಗರಿಗೆ airport management ಬರ್ತಾ ಇರ್ಲಿಲ್ವಾ ಗುರು? ಬೆಂಗಳೂರು ವಿಮಾನ ನಿಲ್ದಾಣಕ್ಕೆ ಯಾರೋ ಪಿರಂಗಿ ಐದನ್ನ ಕರ್ಕೊಂಡ್ ಬರ್ಲಿಲ್ವಾ? fly-over management ಬರಲ್ವಾ ಗುರು? ಯಾವನ್ಗೋ ಯಾಕ್ ಕೊಟ್ರು ಗುರು? ಕೆಲವೊಂದರಲ್ಲಿ expertise justify ಆಗುತ್ತೆ ಅನ್ನಿಸ್ತು ಹೇಳ್ದೆ, ನಿಮ್ಗೆ ಅದು ಸರಿ ಇಲ್ಲ ಅನ್ಸುದ್ರೆ ಪರ್ವಾಗಿಲ್ಲಾ ಗುರು :)
ಕೊನೇದಾಗಿ, "ತಿರುಪತಿ"ಯ ಮಾದರಿ ಮಾಡ್ಬೇಕು ಅಂದ್ರೆ ತಿರುಪತಿಯ ಮಾದರಿ ಅನುಭವ ಇದ್ರೆ ಒಳ್ಳೆದೇನೊ ಅನ್ನೋ ಅನಿಸಿಕೆ, ತಪ್ಪಿಲ್ಲ ಅನ್ನಿಸ್ತು ಹೇಳ್ದೆ. ನಮ್ಮ ಅನಿಸಿಕೆಯಲ್ಲಿ differences ಇದ್ರೆ ತಪ್ಪಿಲ್ಲಾ ಅಲ್ವಾ? ಗುರು :)
ಪ್ರೀತಿಯ,
ಕನ್ನಡಿಗ
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!