ಸಿದ್ರಾಮಯ್ನೋರೇ, ನಿಮ್ ಕೈಲಿ ಇದಾಗುತ್ತಾ?

ಕರ್ನಾಟಕದಲ್ಲಿ ಕನ್ನಡದ ಸಿದ್ಧಾಂತ ಇಟ್ಕೊಂಡಿರೋ ಒಂದೊಳ್ಳೆ ರಾಜಕೀಯ ಪಕ್ಷ ಹುಟ್ಟಕ್ಕೆ ಇದು ಸರಿಯಾದ ಹೊತ್ತು! ಕೇಂದ್ರ ಸರ್ಕಾರದಿಂದ ನಾವು ಗಿಟ್ಟುಸ್ಕೋಬೇಕಾದ್ದನ್ನೆಲ್ಲಾ ನಮ್ಮನ್ನ ಆಳ್ತಿರೋರು ರಾಷ್ಟ್ರೀಯ ಪಕ್ಷಗಳೋರೂ ಅನ್ನೋ ಒಂದೇ ಕಾರಣದಿಂದ ಗಿಟ್ಟುಸ್ಕೊಳಕ್ ಆಗ್ತಿಲ್ಲದೇ ಇರೋದು ಎದ್ದು ಕಾಣ್ತಿದೆ.
ರಾಷ್ಟ್ರೀಯ ಪಕ್ಷಗಳ ಅಸಹಾಯಕತೆ!
ಶಿವಸೇನೆಯೊಂದಿಗೆ ಸಖ್ಯ ಹೊಂದಿರೋ ಬಿ.ಜೆ.ಪಿ - ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರದ ಪರ ನಿಂತರೆ ಮಹಾರಾಷ್ಟ್ರದಲ್ಲಿ 48 ಸದಸ್ಯರನ್ನು ಗೆಲ್ಲಿಸಿಕೊಳ್ಳಲು ಅವಕಾಶ ಇದೆ, ಆಗ ಕರ್ನಾಟಕದಲ್ಲಿ ಕಳೆದುಕೊಳ್ಳೋದು 28 ಸೀಟು. ಕಾವೇರಿ ವಿಷಯವಾಗಿ ತಮಿಳುನಾಡಿನ ಪರ ನಿಂತರೆ ಕಾಂಗ್ರೆಸ್ಸು ಇಲ್ಲಿ ಕಳಕೊಳ್ಳೋದು 28 ಸೀಟಾದರೆ ಗಳಿಸಿಕೊಳ್ಳೋ ಸಾಧ್ಯತೆ ಇರೋದು ತಮಿಳುನಾಡಿನ 39 ಸೀಟುಗಳ್ನ. ಈಗ ಹೇಳು ಗುರು, ಕನ್ನಡದೋರ ಪರವಾಗಿ ಬಿ.ಜೆ.ಪಿಯಾಗಲೀ, ಕಾಂಗ್ರೆಸ್ಸಾಗಲೀ ಗಟ್ಟಿ ನಿಲುವು ತೆಗೆದುಕೊಳ್ಳೋಕೆ ಸಾಧ್ಯಾನಾ ಅಂತ. ಇವರ್ಯಾರೂ ನಮ್ಮ ಪರವಾಗಿ ಪಕ್ಷಪಾತ ಮಾಡಕ್ ಆಗಲ್ಲ.. ನಿಜಾ ಅಂದ್ರೆ ಹಾಗೆ ಮಾಡ್ಬೇಕಾಗೂ ಇಲ್ಲ. ಕಡೇಪಕ್ಷ ರಾಷ್ಟ್ರೀಯ ಜಲನೀತಿ ಜಾರಿಗೆ ತರಕ್ಕೆ ಮುಂದಾಗಾದೋದ್ರೂ ಬ್ಯಾಡ್ವಾ? ಇವರುಗಳ ಪಾರ್ಟಿ ಪಕ್ಕದ ರಾಜ್ಯಗಳಲ್ಲೂ ಇರೋದ್ರಿಂದ ಆಯಾ ರಾಜ್ಯಗಳ ಜೊತೆ ಸಂಬಂಧ ಚೆನ್ನಾಗಿರುತ್ತೆ ಅನ್ನೋ ಇವರುಗಳ ಪ್ರಚಾರಕ್ಕೆ ಮರುಳಾಗೋ ಕಾಲಾನೂ ಆಗೋಗಿದೆ. ಎಲ್ಲಾ ವಿಷಯದಲ್ಲೂ ಸ್ಟೇಟಸ್ ಕೋ ಕಾಪಾಡ್ಕೊಂಡ್ರೆ ಆಯ್ತಲ್ಲಾ ಅನ್ನೋ ಮನೋಭಾವನೆ ಇರೋರು ಇವ್ರು. ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ಕಡೆ ಕಾಂಗ್ರೆಸ್ಸೇ/ ಬಿಜೆಪಿನೇ ಅಧಿಕಾರದಲ್ಲಿದ್ರೂ ಇವರು ಗಡಿ ತಕರಾರಿನ ಇತ್ಯರ್ಥಕ್ಕೆ ಕೈ ಹಾಕಲಾರರು. ಯಾಕಂದ್ರೆ ಇಬ್ಬರಲ್ಲಿ ಒಬ್ರುಗೆ ಅಸಮಾಧಾನ ಆದೀತಲ್ವೇ? ಸೌಹಾರ್ದಯುತ ಸಂಬಂಧ ಅಂದ್ರೆ ಇರೋ ಸಮಸ್ಯೆಗಳನ್ನೆಲ್ಲಾ ಇಲ್ಲಾ ಅಂತ ಅನ್ನುತ್ತಾ ಅಡೀಲಿ ಹಾಕ್ಕೊಂಡು ಕೂತ್ಕೊಂಡು, ತಮ್ಮ ಆಡಳಿತದ ಹೊತ್ತಿನಲ್ಲಿ ಚರ್ಚೆಗೆ ಬರದಂತೆ ನೋಡ್ಕೊಳ್ಳೋದಾ ಗುರು? ಹಾಗಾಗಿ ಪಾಪಾ ಅಂತರರಾಜ್ಯ ತಗಾದೆಗಳ ಬಗ್ಗೆಯೆಲ್ಲಾ ಸುಮ್ಮನಿರಲೇಬೇಕಾದ ಅನಿವಾರ್ಯತೆ, ಅಸಹಾಯಕತೆ ನಮ್ಮ ರಾಷ್ಟ್ರೀಯ ಪಕ್ಷಗಳದ್ದು.
ಕನ್ನಡಿಗರ ಪಕ್ಷ ಕಟ್ಟಕ್ಕೆ ಸಕಾಲ!
ಇಷ್ಟೆಲ್ಲಾ ಯಾಕಪ್ಪಾ ಪ್ರಸ್ತಾಪ ಮಾಡುದ್ವಿ ಅಂದ್ರೆ, ಇಪ್ಪತ್ತೈದು ವರ್ಷಗಳ ರಾಜಕೀಯ ಅನುಭವ ಇರೋ ಸಿದ್ರಾಮಯ್ಯನೋರೂ, ಹೆಚ್ಚುಕಮ್ಮಿ ಅಷ್ಟೇ ಅನುಭವ ಇರೋ ಸಿಂಧ್ಯಾ ಅವರೂ, 41 ವರ್ಷಗಳ ರಾಜಕೀಯ ಅನುಭವಾ ಇರೋ ಸಾರೆಕೊಪ್ಪದ ಬಂಗಾರಪ್ಪನೋರೂ ಇವತ್ತು ರಾಜಕೀಯವಾಗಿ ಆಕಡೆನೋ ಈಕಡೇನೋ ಅನ್ನೋ ಸ್ಥಿತೀಲಿ ಇದಾರೆ ಅನ್ನೋ ಸಮಾಚಾರಗಳು ದಿನ ಬೆಳಗ್ಗಾದ್ರೆ ಪೇಪರ್ರುಗಳಲ್ಲಿ ಬರ್ತಾ ಇವೆ. ನಾಡು ನುಡಿ ನಾಡಿಗರನ್ನು ಕೇಂದ್ರವಾಗಿಟ್ಟುಕೊಂಡು, ನಾಡು ಕಟ್ಟಬಲ್ಲ ರಾಜಕೀಯ ಪಕ್ಷವೊಂದನ್ನು ಕಟ್ಟೋ ಯೋಗ್ಯತೆ ಇವರಲ್ಲಿ ಯಾರೊಬ್ಬರಿಗೂ ಇದ್ದಂಗೆ ಕಾಣ್ತಾ ಇಲ್ವಲ್ಲಾ ಗುರು? ತಮ್ಮನ್ನು ತಾವು ಒಂದು ಸಮುದಾಯಕ್ಕೋ, ಜಾತಿಗೋ ಮಿತಿಗೊಳಿಸಿಕೊಂಡ್ರೆ. ಇಡೀ ಕನ್ನಡ ನಾಡಿಗೆ ನಾಯಕತ್ವ ಕೊಡಕ್ ಆಗಲ್ಲ ಅನ್ನೋದನ್ನು ಅರ್ಥ ಮಾಡ್ಕೊಂಡಿರೋ ಹಾಗೆ ಕಾಣ್ತಾ ಇಲ್ವಲ್ಲಾ ಗುರು? ಇವತ್ತು ಕರ್ನಾಟಕದ ಏಳಿಗೆಗಾಗಿ ದುಡೀತೀವಿ ಅನ್ನೋರಿಗೆ, ಕರ್ನಾಟಕವನ್ನು ಬಲಿಷ್ಟಗೊಳಿಸ್ತೀವಿ ಅನ್ನೋರಿಗೆ, ಬಲಿಷ್ಟ ಕರ್ನಾಟಕದಿಂದಲೇ ಬಲಿಷ್ಟ ಭಾರತ ಅನ್ನೋರಿಗೆ... ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಖಾಲಿ ಜಾಗ ಇದೆ ಅನ್ನೋದನ್ನು ಅರ್ಥ ಮಾಡ್ಕೊಂಡಿರೋ ಹಾಗೆ ಕಾಣ್ತಾ ಇಲ್ವಲ್ಲಾ ಗುರು? ಇದನ್ನು ಅರಿತಿದ್ದರೆ ಈ ಹೊತ್ತಿಗೆ ಇವರಲ್ಲಿ ಒಬ್ರಾದ್ರೂ ಕನ್ನಡ ಕೇಂದ್ರಿತ ರಾಜಕೀಯ ಮಾಡಕ್ಕೆ ಮುಂದಾಗ್ತಾ ಇದ್ರು... ಸಿದ್ರಾಮಯ್ನೋರೇ, ನಿಮ್ ಕೈಲಿ ಇಂಥಾ ಒಂದು ಪಕ್ಷ ಕಟ್ಟೊಕೆ ಆಗುತ್ತಾ? ನೀವು ಕಟ್ಟೋ ಪಕ್ಷಕ್ಕೆ ಇಂಥಾ ನಿಲುವು ಇರುತ್ತಾ?
ಕೊನೆಹನಿ : ’ದಟ್ಸ್ ಕನ್ನಡ’ ಪತ್ರಿಕೆಯಲ್ಲಿ 2009ರ ಜನವರಿ 5ನೇ ತಾರೀಕು "ನಮ್ಮ ಸಿದ್ರಾಮಣ್ಣ ಪಾರ್ಟಿ ಗೀರ್ಟಿ ಕಟ್ಟಾಕಿಲ್ಲಾ, ಪಕ್ಕದ ಆಂಧ್ರಪ್ರದೇಶದ ಹೊಸ ಪ್ರಾದೇಶಿಕ ಪಕ್ಷ ಪ್ರಜಾರಾಜ್ಯಂ ಸೇರ್ಕೊತಾರೆ" ಅಂತ ಬಂದ ಸುದ್ದಿ ರೆಕ್ಕೆಪುಕ್ಕ ಕಟ್ಕೊಂಡು ಊರೆಲ್ಲಾ ಹಾರಾಡ್ತಾ ಇದೆ ಗುರು! ಈ ಸುದ್ದಿಯಲ್ಲಿ ನಿಜವೆಷ್ಟೋ ಸುಳ್ಳೆಷ್ಟೋ ಆ ಬೀರಪ್ಪನೇ ಬಲ್ಲ! ಆದ್ರೂ ಇದು ಸುಳ್ಳಗಿರ್ಲಪ್ಪಾ, ಸಿದ್ರಾಮಯ್ಯನೋರಿಗೆ ಅಷ್ಟೊಂದು ದಡ್ದತನಾ ಕೊಡಬೇಡಮ್ಮಾ ತಾಯಿ ಅಂತ ಮನಸ್ನಲ್ಲೇ ಆ ಚಾಮುಂಡೇಶ್ವರಿ ದೇವಿನ ಬೇಡ್ಕೊಂಡ್ಬುಡೋಣ್ವಾ ಗುರು?

8 ಅನಿಸಿಕೆಗಳು:

Anonymous ಅಂತಾರೆ...

ರಾಷ್ಟ್ರೀಯ ಪಕ್ಷಗಳು ಒಳ್ಳೇದಲ್ಲ ಅ೦ತ ಕಡಿಮೆ ಅ೦ದ್ರೆ ವೋಟ್ ಮಾಡೋ ೨೦% ಜನಕ್ಕೆ ಗೊತ್ತಾಗಬೇಕಿದೆ. ಆಗ ಸ್ವಲ್ಪ ಶಬ್ದ ಮಾಡಬಹುದು.

Anonymous ಅಂತಾರೆ...

A matured thought and a timely good suggestion for Siddaramaiah kind of people who have lost their long term vision in their political stint. But, given a right detonation, these kind of people can really make diference instaed of doing the so called petti raajakaarana.

Anonymous ಅಂತಾರೆ...

kannada paravada paksha kattuvikege sariyada kaala. sidderamiahnavare addakke sariyada vyakti kooda. BI JE PI, Kaangres haagu je di yes pakshagalu yaavudu kannadigarigagi dudiyuvavaralla. devegowdarige thamma samsaaravannu bittu bere yaavudakku tale kediskolalla. Hagaagi aandhra mattu tamilarige sari satiyagi nillalu idu olle avakaasha. Siddaramaiahnavare dayavittu ondu olle kannada para paksha katti. nammellara bembala nimagide.

Anonymous ಅಂತಾರೆ...

ಏನ್ಗುರು,

ಯಾವ ಪಕ್ಷ ಜಾತಿ ರಾಜಕೀಯ ಮಾಡಿಲ್ಲ? ಎಲ್ಲರಿಗು ಕುರ್ಚಿ ಬೇಕು. ಅದಕ್ಕೋಸ್ಕರ ಏನ್ ಬೇಕಾದ್ರೂ ಮಾಡ್ತಾರೆ.

ಸಿದ್ದು ಅವರೇ ನಿಮಗೆ ಕಿಂಚಿತಾದ್ರು ಸ್ವಾಭಿಮಾನ ಇದ್ದರೆ ನಿಮ್ಮದೇ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ಮೆರಸಿ.
ಇಲ್ಲ ತಲೆ ಮೇಲೆ ಟವಲ್ ಹಾಕೊಂಡು ಸಿವ ಅನ್ಬಿಡಿ.

Anonymous ಅಂತಾರೆ...

ಕನ್ನಡ ಪರ ವಾದ ಮಾಡೋದು ಅಷ್ಟೇ ಯಾಕೆ ಕನ್ನಡ ಮಾತಾಡೋದು ಕೂಡ ರಾಷ್ಟ್ರೀಯತೆಗೆ ಮಾರಕವಾಗಿದೆ ಎ೦ದು ಜನರನ್ನು ನ೦ಬಿಸಿರುವ ಈ ಕಾಲದಲ್ಲಿ ಜನ ಪರಿಸ್ಥಿತಿಗೆ ಹೊ೦ದಿಕೊ೦ಡು ಸಾಗುವ ಕೆಲಸಮಾಡುತ್ತಿದ್ದಾರೆ. ಸಮಸ್ಯೆಯಲ್ಲಿರುವವಗೆ ಸಮಸ್ಯೆಯೇ ಪರ್ವತವ೦ತೆ!

Protect plurality of Indian culture
http://mail.google.com/mail/?ui=2&view=js&name=js&ver=Y3OWIVAAMxU&am=x_k6ocT3YCEJBf1qbfrGPQ

Anonymous ಅಂತಾರೆ...

ನಾನು ಸಮಾಜ ಸೇವಕ ಅನ್ನೋರನ್ನು ನೀವು ಯಾವ ಸಮಾಜದ ಸೇವಕರೆ೦ದು ಕೇಳಬೇಕಾಗಿದೆ.

Anonymous ಅಂತಾರೆ...

siddaramaya is Not a good poltical leader he him self highlighting as a communit leader... so if he make new Reagional party also it will not help Siddu or Karnataka. he should come out of his ego and "Jaati Rajakiya" then only we can accept as a leader

Anonymous ಅಂತಾರೆ...

This trend is very dangerous to Kannada and Karnataka. TRy to understand history of karnataka or at least read who kannada leterature..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails