ಮೊದಲು ಮಹಾರಾಷ್ಟ್ರದ ಒಳಗೆ ಏಕೀಕರಣವಾಗಲಿ!

ಬೆಳಗಾವಿಯ ವಿಧಾನಸಭಾ ಅಧಿವೇಶನಕ್ಕೆ ಸಡ್ಡು ಹೊಡ್ದು ಮಹಾರಾಷ್ಟ್ರ ಏಕೀಕರಣ ಸಮಿತಿಯೋರು ಮಾಡಕ್ ಮುಂದಾಗಿರೋ ಮಹಾಮೇಳಾವಕ್ಕೆ ಯಾರು ಬರ್ತಿದಾರೆ ಅನ್ನೋದು ಸಖತ್ ಬಿಸಿಸುದ್ದಿ ಆಗೋಗಿದೆ ಗುರು. 12.01.2009ರ ’ದಟ್ಸ್ ಕನ್ನಡ’ ದಲ್ಲಿ ಮಹಾಮೇಳಾವಕ್ಕೆ ಛಗನ್ ಭುಜಬಲ್, ಆರ್.ಆರ್.ಪಾಟೀಲ್, ರಾಜ್ ಠಾಕ್ರೆ ಇವ್ರೆಲ್ಲಾ ಬರ್ತಾರೆ ಅನ್ನೋ ಸುದ್ದಿ ಬಂದಿದೆ.

ಮಹಾರಾಷ್ಟ್ರದಲ್ಲೇ ಸರಿಮಾಡ್ಕೊಳ್ಳೋದು ಬೇಜಾನ್ ಇದೆ.

ತಡೆಯಿಲ್ಲದ ವಲಸಿಗರ ಸಮಸ್ಯೆಯಿಂದ ಕೆಲಸದ ಅವಕಾಶ ಇಲ್ದಿರೋ ಮರಾಠಿಗಳು, ಭಯೋತ್ಪಾದನೆಯಿಂದ ತಬ್ಬಿಬ್ಬಾಗಿರೋ ಮುಂಬೈ, ಸಾಯ್ತಾ ಇರೋ ಮರಾಠಿ ಚಿತ್ರರಂಗ, ಬೇರೆಯಾಗ್ತೀವಿ ಅಂತಿರೋ ವಿದರ್ಭ, ನಾಗಪುರದಂಥಾ ನಗರದಲ್ಲಿ ಗಂಟಲು ಕಟ್ಕೊಂಡಿರೋ ಮರಾಠಿ ನುಡಿ.... ಅಣ್ಣಂದೀರಾ, ಇವೆಲ್ಲಾ ಬಿಟ್ಟು ಇದ್ಯಾಕೆ ಬೆಳಗಾವಿ ಕಡೆ ಗುಳೇ ಹೊರ್ಟಿದೀರಾ? ಅಂತ ಇವತ್ತು ಅಲ್ಲೀ ಮಂದಿ ಕೇಳಬೇಕಾಗಿದೆ ಗುರು! ಹಿಂದೆ ಇದ್ದಿದ್ರಲ್ಲಿ ರಾಜ್ ಠಾಕ್ರೆ ಈ ಬಗ್ಗೆಯೆಲ್ಲಾ ದನಿ ಎತ್ತಿ ಒಕ್ಕೂಟ ವ್ಯವಸ್ಥೆಯಲ್ಲಿ ಆಗಬೇಕಾದ ರಿಪೇರಿ ಬಗ್ಗೆ, ತಡೆಯಿಲ್ಲದ ವಲಸೆಯಿಂದ ಉದ್ಯೋಗಾವಕಾಶಗಳು ಮರಾಠಿಗರ ಕೈ ತಪ್ತಿರೋ ಬಗ್ಗೆ ಮಾತಾಡಿದ್ರು. ಇನ್ನು ಛಗನ್ ಭುಜಬಲ್, ರಾಮದಾಸ್ ಕದಂ, ಆರ್.ಆರ್.ಪಾಟೀಲ ಇವ್ರೆಲ್ಲಾ ಈಗ ಇದ್ಕಿದ್ ಹಂಗೆ ಬೆಳಗಾವಿ ವಿಷ್ಯಕ್ ಯಾಕಪ್ಪಾ ಬರ್ತಾ ಇದಾರೆ ಅಂದ್ರೆ ಅಚ್ಚರಿಯಾಗಲ್ವಾ ಗುರು? 1986ರಲ್ಲಿ ’ಗಡಿ ಲಡಾಯಿ’ ಅನ್ನೋ ಹೆಸರಲ್ಲಿ ಗಲಭೆ ಮಾಡ್ಸೇ ಶರದ್ ಪವಾರ್ ದೊಡ್ಡ ರಾಜಕಾರಣಿಯಾಗ್ ಬೆಳುದ್ರು. ನಾವೂ ಹಾಗೇ ಆಗಬಹುದು ಅಂದ್ಕೊಂಡಿದಾರೋ ಏನೋ? ನಿಜಾ ಅಂದ್ರೆ, ಮಹಾರಾಷ್ಟ್ರಾದಲ್ಲಿ ಮೊದಲು ಏಕೀಕರಣ ಮಾಡ್ಕೊಬೇಕಾಗಿದೆ ಯಾಕಂದ್ರೇ ಅಲ್ಲೇ ನೂರಾರು ಸಮಸ್ಯೆಗಳಿವೆ...

ಮರಾಠಿಗರ ನಿಜವಾದ ಏಳಿಗೆ ಯಾವುದ್ರಿಂದ?

ಸಂಸ್ಕೃತಿ, ನುಡಿ, ಆಚಾರ ವಿಚಾರ ಉಳುಸ್ಕೊಂಡು, ಜನರ ಆರ್ಥಿಕ ಬೆಳವಣಿಗೆ ಆಗೋ ಅಂಥಾ ಉದ್ದಿಮೆಗಳನ್ನು ಕಟ್ಕೊಂಡು, ಅದ್ರಲ್ಲಿ ತಮ್ಮ ಜನಕ್ಕೇ ಕೆಲಸ ಸಿಗೋ ಹಾಗೆ ಮಾಡ್ಕೊಂಡು, ಪ್ರಪಂಚದಲ್ಲೇ ಮುಂದುವರೆದ ಜನಾಂಗ, ಸಮೃದ್ಧಿ ಮತ್ತು ಸುಖದ ನಾಡು ಅನ್ನುಸ್ಕೊಂಡು, ನೆಮ್ಮದಿಯಾಗಿ ಇರೋದೇ ಯಾವುದೇ ಒಂದು ನಾಡಿನ ಏಳಿಗೆ ಅನ್ನೋದ್ರ ಅರ್ಥ. ಇದನ್ನು ಸಾಧಿಸಕ್ಕೆ ಇವತ್ತು ಇರೋ ಹತ್ತು ಹಲವು ಸಮಸ್ಯೆಗಳಲ್ಲಿ ವಲಸೆ ಅನ್ನೋದು ದೊಡ್ಡದು. ಒಂದು ನಾಡಿನಲ್ಲಿ ಅದರತನವನ್ನೇ ಮುದುರಿ ಬಿಸಾಕೋ ಈ ವಲಸೆಗೆ ತಡೆ ಹಾಕೋದು ಹ್ಯಾಗೇ? ಆಯಾ ನಾಡಿನ ಜನರ ನಿರುದ್ಯೋಗ ಸಮಸ್ಯೆನ ಇಲ್ಲವಾಗ್ಸೋದು ಹ್ಯಾಗೇ? ಆಯಾ ಪ್ರದೇಶದಲ್ಲಿ ಆಯಾ ನುಡಿ, ನಡೆ, ಸಂಸ್ಕೃತಿಗಳ ಸಾರ್ವಭೌಮತ್ವಕ್ಕೆ ಅಡ್ಡಿ ಮಾಡ್ತಿರೋ ಅಂಶಗಳ್ನ ನಿವಾರ್ಸೋದು ಹ್ಯಾಗೇ? ಅನ್ನೋದ್ರ ಕಡೆ ದುಡೀಬೇಕಾಗಿದೆ. ಈ ದಿಕ್ಕಲ್ಲಿ ಹೊರಟಿದ್ದ ರಾಜ್ ಠಾಕ್ರೆ ಕನ್ನಡದೋರ ಬೆಂಬಲಾನೂ ಗಳಿಸಿದ್ರು ಅನ್ನೋದೂ ಸುಳ್ಳಲ್ಲ. ತಮ್ಮ ನಾಡಿನಲ್ಲಿ ತಮ್ಮತನಾನ ಉಳುಸ್ಕೊಳಕ್ ಮುಂದಾಗಿರೋ ಭಾರತದ ಮೂಲೆಮೂಲೆಯಲ್ಲಿರೋ ಎಲ್ಲಾ ಭಾಷಿಕರನ್ನೂ ಒಂದು ಮಾಡಿ ಅದರ ಮೂಲಕ ಒಕ್ಕೂಟ ವ್ಯವಸ್ಥೆಗೆ ಸರಿಯಾದ ಸರ್ಜರಿ ಮಾಡೋ ಕಡೆ ಗಮನ ಕೊಡೋದ್ ಬಿಟ್ಟು ಇದೇನು ಗುರು... ಇವರ ಚೆಲ್ಲಾಟ? ಕೆಲಸವಿಲ್ಲದ ಮಹಾರಾಷ್ಟ್ರದ ರಾಜಕಾರಣಿಯೆಂಬ ಬಡಗಿ... ಬೆಳಗಾವಿಯಲ್ಲಿರೋ ಮರಾಠಿಗರೆಂಬ ತಮ್ಮ ಮಕ್ಕಳ ಇನ್ನೇನೋ ಕೆತ್ತೋಕ್ಕೆ ಮುಂದಾಗಬಾರ್ದು ಗುರು!

5 ಅನಿಸಿಕೆಗಳು:

Anonymous ಅಂತಾರೆ...

ಪಕ್ಕದ ರಾಜ್ಯದ ಸಮಸ್ಯಯನ್ನು ತಿಳಿಸಿಕೊಟ್ಟಿದ್ದಕ್ಕೆ ನನ್ನಿ.

Anonymous ಅಂತಾರೆ...

ಸರ್ಯಾಗಿ ಹೇಳಿದ್ದೀರ ಗುರು,
ನನಗ್ಯಾಕೋ ಇದು ಕಾಂಗ್ರೆಸ್ ನ ಪಿತೂರಿ ಅನ್ಸ್ತಾ ಇದೆ.. ಕರ್ನಾಟಕದಲ್ಲಿ ಬಿ.ಜೆ.ಪಿ ಸರಕಾರ ಇರೋದ್ರಿಂದ ಭಾಷೆ ರಾಜಕೀಯ ಮಾಡ್ತಾ ಇದೆ ಕಾಂಗ್ರೆಸ್... ಆದರೆ ಯಾಕೋ ಬಿ.ಜೆ.ಪಿ ಈ ವಿಷಯದಲ್ಲಿ ತುಂಬ ಮೃದು ಧೋರಣೆ ತೋರ್ಸಿದೆ...ಬಹುಷಃ ಶಿವ ಸೇನೆ, ಎಂ.ಈ.ಎಸ್ ಜೊತೆ ಇರುವ ಒಡನಾಟದಿಂದ ನಮ್ಮ ಮುಖ್ಯಮಂತ್ರಿ ಯಾಕೋ ತೀಕ್ಷ್ಣ ಉತ್ತರ ನೀಡದೆ... ಮನವಿಗಳನ್ನ ಮಾಡ್ತಾ ಇದ್ದಾರೆ.... ಈ ರಾಷ್ಟ್ರೀಯ ಪಕ್ಷಗಳಿಂದ ಇನ್ನೇನ್ ಕಿಸಯಕ್ಕಾದೀತು ?

ಕ್ಲಾನ್ಗೊರೌಸ್

Akshaya ಅಂತಾರೆ...

nija guru nija
yake ee nan maklige karnataka da mele kannu anta nange artha agtilla
aa kongaatigaligu adey roga
thu idella nodtidre ond war madbeku ansatte

Unknown ಅಂತಾರೆ...

ಗುರೂ,
ಇದೇ ಸಮಸ್ಯೆ ಇಲ್ಲು ಇರೋದು,ಇಲ್ಲಿ ಅಭಿವೃದ್ಧಿ ಹೆಸರಲ್ಲಿ ಜನರ ಹಣ ನುಂಗಿದ ಎಷ್ಟ್ ಜನ ಇಲ್ಲ?? ಜಾತಿ ರಾಜಕೀಯ ಮಾಡಿ ಪಕ್ಷ ಕಟ್ಟಿದೋರು ಕಟ್ತಾ ಇರೋರು ಎಷ್ಟ್ ಜನ ಇಲ್ಲ ಗುರೂ, ಗಡಿ ಸಮಸ್ಯೆನ ಹೆಚ್ಚು ಮಾಡೋದ್ರಲ್ಲಿ ನಮ್ಮ ಕರ್ನಾಟಕದ ಪುಡಾರಿ ಕಮ್ ರಾಜಕಾರಣಿಗಳದ್ದೆಷ್ಟು ಪಾಲು?? ಸ್ವಾಮಿ, ಈಗ ಸ್ವಲ್ಪ ಎಲ್ಲಾ ತಂಡಾ ಹೊಡೆದಿದಾರೆ, ಜನ ಸೋಲಿಸಿ ಕಳಿಸಿದ ಮೇಲೆ. ಹೋಗ್ಲಿ ಬಿಡಿ ಈ ಅಧಿವೇಶನ ನಮ್ಮ ಗಡಿನಾಡ ಸೋದರರಿಗೆ ಒಂದಿಷ್ಟು ಸಿಹಿ ಸುದ್ದಿ ತರಲಿ,ಕೆಲ ಅಭಿವೃದ್ಧಿ ಕಾರ್ಯಗಳಾದರೂ ನಿಜವಾಗಿ ನಡೆಯಲಿ. ಅಲ್ಲಿನವರಲ್ಲಿ ಆತ್ಮ ವಿಶ್ವಾಸ ತುಂಬಲಿ, ಕಾಸರಗೋಡಿನ ಕಡೆಗೂ ಸ್ವಲ್ಪ ಗಮನ ಕೊಡಲಿ!!

Anonymous ಅಂತಾರೆ...

ಅಯ್ಯೋ ಬೆಳಗಾವಿಯಲ್ಲಿ ಕ ರ ವೇ ಹೊಡೆದಾಟ ತಾ ಇದ್ದಾರೆ ... ಇಲ್ಲೇ ನಮ್ಮ ಹಲಸೂರು ಠಾಣೆ ಹತ್ತಿರ ಹಾಗು ಇಂಡಿಯನ್ ಎಕ್ಸ್ಪ್ರೆಸ್ ಸರ್ಕಲ್ ಹತ್ತಿರ ಕಾಂಗ್ರೆಸ್ಸಿನ ಶ್ರೀಯುತ ರೋಶನ್ ಬೈಗ್ನವರು ಭಾಷೆ ರಾಜಕೀಯ ಮಾಡಕ್ಕೆ ಹೊಂಟವ್ರಪ್ಪೂ... ಅವನ ಬಾಯಿಗೆ ಮಣ್ಣಾಕ... ಸಂಕ್ರಾಂತಿ ಶುಭಾಶಯವನ್ನ ಕನ್ನಡದಲ್ಲಿ ಬೇಕಾ ಬಿಟ್ಟಿ ಹಾಕಿ ಕೆಳಗಡೆ ರಾಜಾ ರೋಷವಾಗಿ ದೊಡ್ಡದಾಗಿ ಹಳದಿ ಬಣ್ಣ ಕಣ್ಣು ಕುಕ್ಕುವಂತೆ ತಮಿಳಿನಲ್ಲಿ ಹಕ್ಸೌನ್ರಪ್ಪೂ ... ಹಂಗಂದ್ರೇನು ತಮಿಳ್ನೋರು ಕನ್ನಡ ಕಲಿ ಬೇಡಿ ನಿಮ್ಮ ಭಾಷೆಯಲ್ಲೇ ಬೋರ್ಡ್ ಹಾಕುಸ್ತಿವಿ ಅಂತಾನ ...? . ಅಧಿಕಾರದ ಆಸೆಗೆ ಹೆತ್ತಮ್ಮನನ್ನೇ ಮಾರೊಕ್ಕು ಹೆಸೋಲ್ಲ ಬಡ್ಡಿ ಮಕ್ಕಳು ..... ಕ ರ ವೇ ಬೇಗ ಇದನ್ನ ಸರಿಪಡಿಸ ಬೇಕು....ಇನ್ನು ದೊಮ್ಲುರ್ ನಲ್ಲಿ ನೋಡುದ್ರೆ... ಜಯ ಕರ್ನಾಟಕ ಅನ್ನೋ ಕನ್ನಡ ಸಂಗಟನೆ ಇಂಗ್ಲಿಷ್ನಲ್ಲಿ ಹ್ಯಾಪಿ ಪೊಂಗಲ್ ಅಂತ ಹಕ್ಸವ್ರೆ ... ಯಾಕೆ ಸಂಕ್ರಾಂತಿ ಅಂದಿದ್ದರೆ ಇಂಕ್ ಖಾಲಿಯಾಗ್ತಿತ್ತೇನೋ ?... ಸಲ್ಪ ಹಂಗೇ ವಿವೇಕ್ ನಗರ್ ಕಡೆ ಬಂದ್ರೆ ಬರಿ ಅವಿವೇಕ ನೇ ಸಿಗೋದು ... ರಾಜಾ ರೋಷವಾಗಿ ಬರಿ ತಮಿಳ್ ಬೋರ್ಡುಗಳು ರಾರಾಜುಸ್ತಾವೆ ... ಇದು ನಮ್ಮ ಕನ್ನಡ ಅನುಷ್ಟಾನ ಮಾಡೋರಿಗೆ ಕಾಣ್ಸ್ತಾ ಇಲ್ವೆಲ್ಲಪೋ...

ಕ್ಲಾನ್ಗೊರೌಸ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails