ಅಂತರ್ಜಾಲದಲ್ಲಿ ಗೆಳೆತನ, ನಂಟು ಬೆಸೆಯೋ ಸೋಶಿಯಲ್ ನೆಟವರ್ಕ್ ತಾಣಗಳಲ್ಲಿ ಮುಂಚೂಣಿಯಲ್ಲಿರೋ ಫೇಸ್ ಬುಕ್, ಇನ್ನೂ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ. ಈ ಪಟ್ಟಿಲಿ ಭಾರತದ 6 ಭಾಷೆಗಳಿವೆ. ಕನ್ನಡಕ್ಕಿಂತಲೂ ಕಡಿಮೆ ಜನ ಮಾತಾಡೋ ಮಲಯಾಳಂ, ಪಂಜಾಬಿಗಳಲ್ಲೂ ಈ ತಾಣ ಲಭ್ಯವಿದೆ, ಅದೆಲ್ಲ ಬಿಡಿ, ಬರೀ 3 ಲಕ್ಷ 20 ಸಾವಿರ ಜನ ಮಾತಾಡೋ ಐಸ್ ಲ್ಯಾಂಡ್ ದೇಶದ ಇಸಲೆನಸ್ಕಾ ಭಾಷೆಯಲ್ಲಿ ಫೇಸ್ ಬುಕ್ ಇದೆ, ಆದ್ರೆ 5 ಕೋಟಿ ಜನ ಮಾತಾಡೋ ಕನ್ನಡದಲ್ಲಿ ಮಾತ್ರ ಈ ಸೇವೆ ಇಲ್ಲ ಗುರು. ಬಿಡಿ, ಇದರಲ್ಲಿ ಫೇಸ್ ಬುಕ್ ದೇನು ತಪ್ಪಿಲ್ಲ, ಈ ತಾಣದಲ್ಲಿ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿ ಕೊಡೊ ಕೆಲಸದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳದೇ ಇರೋದೆ ಇದಕ್ಕೆ ಕಾರಣ. ಅಂತರ್ಜಾಲದಲ್ಲಿರೋ ಕನ್ನಡಿಗರೆಲ್ಲ ಒಂದಾಗಿ ಕೆಲಸ ಮಾಡಿದ್ರೆ ಇದನ್ನ ಚಿಟಿಕೆ, ಚಿಟಿಕೆ ಹೊಡೆಯೋದ್ರಲ್ಲಿ ಮಾಡಿ ಹಾಕಬೌದು ಗುರು.
ನಾವೇನ್ ಮಾಡೋಣ ಅಂತೀರಾ ?
ಆಫೀಸ್ ಅಲ್ಲಿ, ಮನೆಲಿ, ಕಾಲೇಜಲ್ಲಿ, ನೆಟ್ ಪಾರ್ಲರ್ ಅಲ್ಲಿ ಹೀಗೆ ಎಲ್ಲಂದ್ರಲ್ಲಿ ನಮ್ಮ ಹುಡುಗ್ರು ಫೇಸ್ ಬುಕ್ ಅಲ್ಲಿ ಗಂಟೆಗಟ್ಟಲೇ ಹರಟೆ ಹೊಡಿತಿವಿ, ಆ ಹರಟೆ ಮಧ್ಯಾನೇ ಒಂದು ಸ್ವಲ್ಪ ಸಮಯ ಇದಕ್ಕೆ ಕೊಟ್ರೆ ಸಾಕು, ಫೇಸ್ ಬುಕ್ ಕನ್ನಡದಲ್ಲಿ ಬಂದೇ ಬಿಡುತ್ತೆ.
ಅದಕ್ಕೆ ನೀವ್ ಮಾಡಬೇಕಿರೋ ಕೆಲಸ ಸಕತ್ ಸಿಂಪಲ್ ಗುರು. ನೀವು ಮಾಡಬೇಕಿರೋದು ಇಷ್ಟೇ:
ನಾವೇನ್ ಮಾಡೋಣ ಅಂತೀರಾ ?
ಆಫೀಸ್ ಅಲ್ಲಿ, ಮನೆಲಿ, ಕಾಲೇಜಲ್ಲಿ, ನೆಟ್ ಪಾರ್ಲರ್ ಅಲ್ಲಿ ಹೀಗೆ ಎಲ್ಲಂದ್ರಲ್ಲಿ ನಮ್ಮ ಹುಡುಗ್ರು ಫೇಸ್ ಬುಕ್ ಅಲ್ಲಿ ಗಂಟೆಗಟ್ಟಲೇ ಹರಟೆ ಹೊಡಿತಿವಿ, ಆ ಹರಟೆ ಮಧ್ಯಾನೇ ಒಂದು ಸ್ವಲ್ಪ ಸಮಯ ಇದಕ್ಕೆ ಕೊಟ್ರೆ ಸಾಕು, ಫೇಸ್ ಬುಕ್ ಕನ್ನಡದಲ್ಲಿ ಬಂದೇ ಬಿಡುತ್ತೆ.
ಅದಕ್ಕೆ ನೀವ್ ಮಾಡಬೇಕಿರೋ ಕೆಲಸ ಸಕತ್ ಸಿಂಪಲ್ ಗುರು. ನೀವು ಮಾಡಬೇಕಿರೋದು ಇಷ್ಟೇ:
- ನಿಮ್ಮ ಫೇಸ್ ಬುಕ್ ಖಾತೆಗೆ ಸೈನ್ ಇನ್ ಮಾಡಿ
- ಈ ಕೆಳಗಿನ ಕೊಂಡಿಗೆ ಹೋಗಿ http://www.facebook.com/translations
- ಇಲ್ಲಿ ಪುಟದ ಬಲಗಡೆ ಇರೋ Translation Links ಅನ್ನೋ ಭಾಗಕ್ಕೆ ಹೋಗಿ, ಅಲ್ಲಿ ಭಾಷೆ ಆಯ್ಕೆಯ ಅನುಕೂಲ ಬಳಸಿ "ಕನ್ನಡ" ಆಯ್ದುಕೊಳ್ಳಿ
- ಶುರು ಹಚ್ಕೋಳ್ಳಿ !
10 ಅನಿಸಿಕೆಗಳು:
ಒಳ್ಳೆ ಮಾಹಿತಿ ಗುರು.. ನಾನಂತೂ ಈಗಲೇ ಶುರು ಮಡ್ತೀನಿ. ನಿಮ್ಮ ಮಾಹಿತಿಗೆ ನನ್ನಿ.
ನಾನು ಸೇರಿದ್ದೇನೆ.
ಕನ್ನಡಕ್ಕೆ ಅನುವಾದ ಮಾಡುವುದರ ಜೊತೆಯಲ್ಲಿ ಕನ್ನಡದ ಹೊಸ ಪದಗಳನ್ನು ಕಲಿಯುತ್ತಿದ್ದೇನೆ.
ಬಹಳ ಒಳ್ಳೆ ಕೆಲಸ ಗುರು...ಈಗ ಅನುವಾದಕ್ಕೆ ಜನ ಬೇಕಾಗಿದ್ದಾರೆ..
ಹೌದು, ನಾವೆಲ್ಲ ಇದನ್ನು ಮಾಡೋಣ..
ನಿಮ್ಮ ಸಲಹೆ ಒಳ್ಳೆಯದೇ. ಆದರೆ ಈ ಹಿಂದೆ ಇದೆ ರೀತಿ ಸುಮಾರು ವೆಬ್ಸೈಟ್ ಗಳು ಟ್ರ್ಯಾನ್ಸ್ಲೇಶನ್ ಗೆ ಅಂತ ಜನರನ್ನ ಇನ್ವಾಲ್ವ್ ಮಾಡಿಕೊಂಡಿದ್ದರು. ಗೂಗಲ್ ಕೂಡ ಇದಕ್ಕೆ ಹೋರತಲ್ಲ. ಅಂತರ್ಜಾಲದಲ್ಲಿ ಈಗಾಗಲೇ ಕನ್ನಡ ಲಭ್ಯವಿದೆ ಅದನ್ನೇ ಬಳಸಿಕೊಂಡು ಫಸೇಬುಕ್ ನವರು ಮಾಡಬಹುದಲ್ಲವ? ಇದೆ ರೀತಿ ಸಾವಿರ ಸಾವಿರ ವೆಬ್ಸೈಟ್ ಗಳು ಬರುತ್ತವೆ ಮುಂದೆ, ಎಲ್ಲದಕ್ಕೂ ಪ್ರತಿ ಸಲ ಜನರನ್ನ ಇನ್ವಾಲ್ವ್ ಮಾಡುತ್ತಾ ಹೋದರೆ ಜನರಿಗೂ ಆಸಕ್ತಿ ಕಡಿಮೆ ಆಗಬಹುದು. ಆಲ್ಸೊ ಸಾಫ್ಟ್ವೇರ್ ನ ಮೊದಲ ಪಾಠ ರಿಯುಸಬೀಲಿಟಿ ಅಲ್ವಾ. ಆಗಲೇ ಟ್ರ್ಯಾನ್ಸ್ಲೇಟ್ ಆಗಿರೊದನ್ನ ರಿಯೂಸ್ ಮಾಡಿಕೊಳ್ಳೋದು ಒಳ್ಳೇದಲ್ವಾ?
ಅದಷ್ಟೇ ಅಲ್ಲ ಎವೆರೀ ಟೈಮ್ ಕನ್ನಡದ ಜನ ಇನ್ವಾಲ್ವ್ ಆಗುತ್ತಿಲ್ಲ ಅಂತ ಕಳ್ಳ ನೆಪ ಕೊಡುವುದು ಸರಿ ಅಲ್ಲ. ಡಿಮ್ಯಾಂಡ್ ನೋಡಿಕೊಂಡು ಟ್ರ್ಯಾನ್ಸ್ಲೇಟ್ ಮಾಡುವುದು ಮುಖ್ಯ ವೆಬ್ಸೈಟ್ ಗಳಿಗೆ.
ಕ್ವಿಲ್ ಪ್ಯಾಡ್ನಲಿ ಹೋಗಿ ನೋಡಿ http://www.quillpad.in/editor.html
ಯೂಸೇಜ್ ರ್ಯಾಂಕಿಂಗ್ ನಲ್ಲಿ ಕನ್ನಡ ಮಲಯಾಳಂ ಗಿಂತ ಕಮ್ಮಿ ಯೂಸೇಜ್ ನಲ್ಲಿದೆ. ಹಿಂದಿ #1. ಫಸೇಬೂಕ್ ತರದ ಟಾಪ್ ವೆಬ್ಸೈಟ್ ಗಳು ಕ್ವಿಲ್ಪ್ಯಾಡ್ ತರ ಸಾಫ್ಟ್ವೇರ್ ಗಳ ಯೂಸೇಜ್ ರ್ಯಾಂಕಿಂಗ್ ಪರ್ಸೆಂಟೇಜ್ ನೋಡಿರುತ್ತಾರೆ. ಅದರಲ್ಲಿ ಹೈಲೀ ಯೂಸ್ಡ್ ಲ್ಯಾಂಗ್ವೇಜಸ್ ಯಾವುದಿದೆಯೋ ಅದರಲ್ಲಿ ಬೇಗ ಮಾಡಿರುತ್ತಾರೆ.
Friends,
Follow these steps to Translate after logging into Facebook
1.Homepage na kela bhaagadalli Chat Icon pakkadalli Globe Icon(Translations) ide.,Click on that and select language as KANNADA.
2. Select Launch Translations application.
3. Select either VOTE or TRANSLATE from the left had menu.
4. Start Voting or Translating.
5. Also please refer to the discussion board and the style guide where you get some idea about the current status and also the translations for some words(which is useful while you are voting.)
VOTE - There are some words which are already translated by the members.A single word may have 2-3 different words in Kannada.
We have to Vote Positively for
1. Words which have closest meaning.
2. Words which are natively from KANNDA and not Sanskrit. Eg.ಬರಹ instead of ಲೇಖನ
3. Words which are used in day to day life..i,e Aadubhaashe. Eg: ಹುಡುಕು instead of ಶೋಧಿಸು
Eg: Friends may be ಗೆಳೆಯರು or ಸ್ನೇಹಿತರು or ಮಿತ್ರರು.We have come to a consensus in discussion board to use ಗೆಳೆಯರು.
TRANSLATE - Please select this and translate words and phrases to Kannada.
Hint- You may look into different translated sites like Orkut,Gmail or use some other sites where you can see translated kannada words.
ಇದು ಒಳ್ಳೆಯ ಸಲಹೆಯೇ ಸರಿ. ಆದರೆ ಇದು ಕೇವಲ ಕನ್ನಡದ ಬೆಂಬಲದ ವಿಚಾರ ಮಾತ್ರವಲ್ಲ. ಇದರಲ್ಲಿ ಬೇರೆ ಬೇರೆ ಆಂತರಿಕ ವಿಚಾರಗಳೂ ಇವೆ. ಫೇಸ್ಬುಕ್ ತನ್ನ ಬಳಕೆದಾರರಿಂದ ಬಹಳಷ್ಟು ಆದಾಯ ಪಡೆಯುತ್ತಿದೆ(ಜಾಹಿರಾತುಗಳಿಂದ). ಆದರೆ ಆ ಆದಾಯವನ್ನು ಬಳಸಿ ಯಾವ ಭಾಷೆಗೆ ಬೇಕಾದರೂ ಅನುವಾದಕರನ್ನು ನಿಯೋಜಿಸಿ ಭಾಷಾಂತರಿಸಬಹುದು ಆ ಉದ್ದೇಶ ಇದ್ದರೆ. ಆದರೆ ಫೇಸ್ಬುಕ್ನ ಉದ್ದೇಶವೇ ಬೇರೆ. ನಾನೂ ಒಬ್ಬ ಭಾಷಾಂತರಕಾರ. ಆದರೆ ಬಿಡುವಿನ ಸಮಯದಲ್ಲಿ ಮಾತ್ರವೇ ಮಾಡುತ್ತೇನೆ. ಇದರಲ್ಲೇ ಕನ್ನಡಿಗರಿಗೆ ಬೇಕಾದಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಆದರೆ ಅವರಿಗೆ ಅವೆಲ್ಲ ಬೇಡ. ಉಚಿತವಾಗಿ ಮಾಡಿಸಿಕೊಳ್ಳಬೇಕು ಎಂಬುದು ಅವರ ಉದ್ದೇಶ. ಹಾಗಾಗಿ ನಿಮ್ಮ ಸಲಹೆಗೆ ನನ್ನ ಬೆಂಬಲವಿಲ್ಲ. ಅದರ ಬದಲಿಗೆ ಫೇಸ್ಬುಕ್ನ ಕನ್ನಡ ಆವೃತ್ತಿ ಬೇಕು ಎಂದು ಕನ್ನಡಿಗ ಬಳಕೆದಾರರೆಲ್ಲರೂ ಒತ್ತಡ ಹೇರಬೇಕು. ಆಗ ಆ ಆದಾಯ ಕಳೆದುಕೊಳ್ಳಲಿಚ್ಛಿಸದ ಫೇಸ್ಬುಕ್ ಕೆಲವರಾದರೂ ಕನ್ನಡಿಗರಿಗೆ ಉದ್ಯೋಗಾವಕಾಶ ದೊರಕಿಸೀತು ಏನಂತೀರಿ ಗುರೂ.... ?
ಗುರು,
ಇದೇ ಅನುವಾದ ಕೆಲಸಕ್ಕಾಗಿ ಫೇಸ್ಬುಕ್ನಲ್ಲಿ ನಾನು ಸದಸ್ಯನಾದೆ. ಆದರೆ ಎರಡು ತಿಂಗಳಿಂದ ಕಾದದ್ದೇ ಬಂತು. ನಾನು ಯಾವಾಗ ಪ್ರಯತ್ನಿಸಿದರೂ ಈ ಕೆಳಕಂಡ ಮೆಸ್ಸೇಜು ಬರುತ್ತೆ. ಏನ್ಮಾಡೋದು?
ಪ್ರಸನ್ನ, ಚಳ್ಳಕೆರೆ
We require users to have joined Facebook for a certain amount of time before they can participate in the Translation Application. Please come back again later.
ಕೊಡೋಣ, ಆಗಬೇಕಿತ್ತು ಶೀರ್ಷಿಕೆ ತಪ್ಪಿದೆ ನಿಮ್ಮ ಲೇಖನದಲ್ಲಿ.
ಸಲಹೆ ಚೆನ್ನಾಗಿದೆ.ನಾವೂ ಕೈ ಜೋಡಿಸುತ್ತೇವೆ .
Try using KannadaSlate Facebook App to post kannada in your wall if you don't have any IME installed on your machine.
http://www.facebook.com/apps/application.php?id=117524721661835&sk=info
ನಿಮ್ಮ facebook wall ನಲ್ಲಿ ಕನ್ನಡದಲ್ಲಿ ಬರೆಯಬೇಕೆಂದಿದ್ದರೆ, ಈ ಮೇಲಿನ app ಉಪಯೋಗಿಸಿ ನೋಡಿ...
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!